ಆಧಾರ್ ಕಾರ್ಡ್ ಇಂದು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ. ನೀವು ಬ್ಯಾಂಕ್ ಖಾತೆ ತೆರೆಯಲು, ಸಿಮ್ ಕಾರ್ಡ್ ಪಡೆಯಲು ಅಥವಾ ಸರ್ಕಾರಿ ಯೋಜನೆಗಳನ್ನು ಪಡೆಯಲು ಬಯಸುತ್ತೀರಾ, ಎಲ್ಲೆಡೆ ಆಧಾರ್ ಕಾರ್ಡ್ ಅಗತ್ಯವಿದೆ. ಆದರೆ ಹೆಮ್ಮೆಯ ವಿಷಯವೆಂದರೆ ಭಾರತದ ಮೊದಲ ಆಧಾರ್ ಕಾರ್ಡ್ ಮಹಾರಾಷ್ಟ್ರದ ಮಹಿಳೆಯ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಭಾರತದ ಮೊದಲ ಆಧಾರ್ ಕಾರ್ಡ್ ಅನ್ನು ಸೆಪ್ಟೆಂಬರ್ 29, 2010 ರಂದು ನಂದೂರ್ಬಾರ್ ಜಿಲ್ಲೆಯ ತೆಂಬಾಲಿ ಎಂಬ ಸಣ್ಣ ಹಳ್ಳಿಯ ನಿವಾಸಿ ರಂಜನಾ ಸೋನಾವಾನೆ ಅವರಿಗೆ ನೀಡಲಾಯಿತು. ಈ ಐತಿಹಾಸಿಕ ಕ್ಷಣವು ಅವರಿಗೆ ಮಾತ್ರವಲ್ಲದೆ ಮಹಾರಾಷ್ಟ್ರಕ್ಕೂ ಹೆಮ್ಮೆಯ ವಿಷಯವಾಗಿದೆ. ಇಂದು, ಈ ಕಾರ್ಡ್ ಅನ್ನು ದೇಶಾದ್ಯಂತ ಲಕ್ಷಾಂತರ ಜನರು ಬಳಸುತ್ತಾರೆ. ಅದಕ್ಕಾಗಿಯೇ ಪ್ರತಿಯೊಬ್ಬ ನಾಗರಿಕನು ತಮ್ಮ ಆಧಾರ್ ಕಾರ್ಡ್ ಅನ್ನು ಕಾಲಕಾಲಕ್ಕೆ ನವೀಕರಿಸುವುದು ಅವಶ್ಯಕ. ಸೆಪ್ಟೆಂಬರ್ 29, 2010 ರಂದು ಆಧಾರ್ ಕಾರ್ಡ್ ಪಡೆದ ಮೊದಲ ವ್ಯಕ್ತಿ ರಂಜನಾ ಸೋನಾವಾನೆ. ಈ ದಿನಾಂಕದಂದು ಆಧಾರ್ ಕಾರ್ಡ್ ಪಡೆದ ಮೊದಲ ವ್ಯಕ್ತಿ ರಂಜನಾ…
Author: Author AIN
ಬಾಗಲಕೋಟೆ: ನಾವು ಕ್ವಾಲಿಟಿ ಡ್ರಿಂಕ್ಸ್ ಕೊಡಬೇಕು ಅಂತಾ ಬೆಲೆ ಹೆಚ್ಚಳ ಮಾಡಿದ್ದೇವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನೆರೆ ರಾಜ್ಯಗಳಿಗಿಂತ ನಮ್ಮಲ್ಲಿ ಬೆಲೆ ಇನ್ನೂ ಕಡಿಮೆ ಇದೆ. ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸ್ಲ್ಯಾಬ್‌ಗಿಂತ ಕಡಿಮೆ ಇದೆ. ಪ್ರೀಮಿಯಮ್ ಬ್ರ್ಯಾಂಡ್ ಏರಿಕೆ ಮಾಡಿಲ್ಲ. ಯಾವುದೇ ಸರ್ಕಾರ ಬಂದರೂ ಇದು ನಿರಂತರವಾಗಿ ನಡೆಯುತ್ತದೆ ಎಂದರು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಬೆಲೆ ಏರಿಕೆಯಿಂದ ಕುಡುಕರ ಸಂಖ್ಯೆ ಕಡಿಮೆ ಆಗಲ್ವಾ? ಎಂಬ ಪ್ರಶ್ನೆಗೆ, ಕುಡುಕರ ಸಂಖ್ಯೆ ಕಡಿಮೆ ಆದ್ರೆ ಒಳ್ಳೆಯದಲ್ವಾ?. ನಾವು ಕ್ವಾಲಿಟಿ ಡ್ರಿಂಕ್ಸ್ ಕೊಡಬೇಕು ಅಂತಾ ಬೆಲೆ ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದರು. ಮದ್ಯಪ್ರಿಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಈ ವಿಚಾರಕ್ಕೆ ಪ್ರತಿಭಟನೆ ಆಗೋದಿಲ್ಲ. ಕುಡಿಯುವವರ ಸಂಖ್ಯೆ ಕಡಿಮೆ ಆದ್ರೆ ಒಳ್ಳೆಯದಲ್ವಾ? ಎಲ್ಲ ಸರ್ಕಾರಗಳ ಅವಧಿಯಲ್ಲೂ ಮದ್ಯದ ಬೆಲೆ ಏರಿಕೆ ಮಾಡುತ್ತಲೇ ಬಂದಿದ್ದಾರೆ. ನಮ್ಮ ಸರ್ಕಾರದಲ್ಲೂ ಸ್ವಲ್ಪ ಬೆಲೆ ಏರಿಕೆ ಮಾಡಲಾಗಿದೆ ಎಂದರು.
ತುಮಕೂರು: ಭಾರತೀಯ ಸೈನ್ಯಕ್ಕೆ ಫ್ರೀ ಹ್ಯಾಂಡ್ ಕೊಟ್ಟ ಹಾಗೆ ರಾಜ್ಯದ ಪೊಲೀಸರಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಡಲಿ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಮಾತನಾಡಿದ ಅವರು, ಭಾರತೀಯ ಸೈನ್ಯಕ್ಕೆ ಫ್ರೀ ಹ್ಯಾಂಡ್ ಕೊಟ್ಟ ಹಾಗೆ ರಾಜ್ಯದ ಪೊಲೀಸರಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಡಲಿ, ದೇಶಕ್ಕೆ ಮಾರಕ ಆಗಿರುವಂತಹ ಈ ರೀತಿಯ ದುಷ್ಕರ್ಮಿಗಳಿಗೆ ಸಾಫ್ಟ್ ಕಾರ್ನರ್ ತೋರಿಸುವ ವ್ಯವಸ್ಥೆ ಆಗಬಾರದು ಎಂದು ಹೇಳಿದರು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಮುಲಾಜಿಲ್ಲದೆ ಗೃಹ ಸಚಿವರು ತಮ್ಮ ಅನುಭವವನ್ನು ಇದರಲ್ಲಿ ತೋರಿಸಬೇಕು. ಇಲ್ಲದಿದ್ದರೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ಗೊತ್ತಾಗದಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ. 10 ನಿಮಿಷದಲ್ಲಿ ಕ್ರಮ ಆಗಲಿದೆ ಎಂದು ತಿಳಿಸಿದರು. ಇಂತಹ ಅಯೋಗ್ಯರು ಹಾಗೂ ದೇಶಕ್ಕೆ ಮಾರಕವಾಗಿರುವವರ ಬಗ್ಗೆ ಮೃದು ಧೋರಣೆ ಅನುಸರಿಸಿದರೆ ಬಹಳ ಕಷ್ಟವಾಗಲಿದೆ. ಆರೋಪಿಗಳು ಎಷ್ಟೇ ದೊಡ್ಡವರಾದ್ರೂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹಾನಗಲ್: ಬೆಲೆ ಏರಿಕೆಯ ಸರದಾರ ಪ್ರಧಾನಿ ಮೋದಿ ಅವರು ಸುಳ್ಳಿನ ಸರದಾರರೂ ಆಗಿದ್ದಾರೆ. ಮೋದಿ ಅವರು ಭಾಷಣದಲ್ಲಿ ಕೊಟ್ಟ ಭರವಸೆಯಲ್ಲಿ ಒಂದೇ ಒಂದು ಜಾರಿ ಆಗಿರುವ ಉದಾಹರಣೆ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು. ಹಾವೇರಿ ಜಿಲ್ಲೆಯಲ್ಲಿ 650 ಕೋಟಿ ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಜನಾರ್ಪಣೆಗೊಳಿಸಿ, ನೂತನ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಹಾವೇರಿ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಶ್ರೇಷ್ಠತೆ ಪಡೆದಿರುವ ಜಿಲ್ಲೆ. ಈ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲತ್ತೆ ಎಂದು ಸಿ.ಎಂಚುನಾವಣೆಗಳ ಭರವಸೆ ವ್ಯಕ್ತಪಡಿಸಿದರು.ನೀವು ಕಾಂಗ್ರೆಸ್ ಪಕ್ಷಕ್ಕೆ, ಈ ಸರ್ಕಾರಕ್ಕೆ ಕೊಟ್ಟ ಮತಗಳಿಗೆ ನಾವು ಘನತೆಯಿಂದ ಗೌರವಿಸಿದ್ದೇವೆ. ಚುನಾವಣೆಗೆ ಮೊದಲು ಕೊಟ್ಟ ಮಾತಿನಂತೆ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೊಳಿಸಿ ನಿಮ್ಮ ಮತಗಳ ತೂಕ ಹೆಚ್ಚಿಸಿದ್ದೇವೆ ಎಂದರು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಗ್ಯಾರಂಟಿಗಳಿಂದ ಖಜಾನೆ ಖಾಲಿ ಆಗಿದೆ ಎಂದು ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಹಸಿ…
ಐಪಿಎಲ್ 2025 ರಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ ರೌಂಡರ್ ಆಂಡ್ರೆ ರಸೆಲ್ ತಮ್ಮ ಅಸಾಧಾರಣ ಬ್ಯಾಟಿಂಗ್ ಮೂಲಕ ಅಪರೂಪದ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದರು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ರಸೆಲ್ ಈ ಸ್ಥಳದಲ್ಲಿ 1000 ರನ್ ಗಳಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2014 ರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ರಸೆಲ್, ಈ ಪಂದ್ಯದಲ್ಲಿ ಮತ್ತೊಮ್ಮೆ ತಮ್ಮ ಪವರ್ ಹಿಟ್ಟಿಂಗ್ ಪ್ರತಿಭೆಯನ್ನು ಸಾಬೀತುಪಡಿಸಿದರು. ಅವರು ಕೇವಲ 25 ಎಸೆತಗಳಲ್ಲಿ 57 ರನ್ (4 ಬೌಂಡರಿ, 6 ಸಿಕ್ಸರ್) ಗಳಿಸಿ ಅಜೇಯರಾಗುಳಿದರು, ಕೆಕೆಆರ್ ಪರ ಬೃಹತ್ ಸ್ಕೋರ್ ಒದಗಿಸಿದರು. ಈ ಪ್ರದರ್ಶನದೊಂದಿಗೆ, ಪಂದ್ಯಾವಳಿಯಲ್ಲಿ ಅವರ ವೈಯಕ್ತಿಕ ರನ್ ಗಳಿಕೆ 2500 ತಲುಪಿತು. ಇದಕ್ಕೂ ಮೊದಲು, ಗೌತಮ್ ಗಂಭೀರ್ (1407) ಮತ್ತು ರಾಬಿನ್ ಉತ್ತಪ್ಪ (1159) ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಪರ 1000 ರನ್ ಗಳಿಸಿದ ಏಕೈಕ ಆಟಗಾರರಾಗಿದ್ದರು.…
ಕಾರಿನ ಕಿಟಕಿಗಳ ಮೇಲೆ ಬಿರುಕುಗಳು ಉಂಟಾಗಲು ಹಲವು ಕಾರಣಗಳಿದ್ದರೂ, ಅವುಗಳನ್ನು ಗುರುತಿಸುವುದು ಮುಖ್ಯ. ನೀವು ಒಂದು ಸಣ್ಣ ಬಿರುಕನ್ನು ನಿರ್ಲಕ್ಷಿಸಿದರೆ, ಅದು ವಿಂಡ್‌ಶೀಲ್ಡ್‌ನಾದ್ಯಂತ ಜೇಡರ ಬಲೆಯಾಗಿ ಬದಲಾಗಬಹುದು ಮತ್ತು ಅದು ಸಂಪೂರ್ಣವಾಗಿ ಛಿದ್ರವಾಗಬಹುದು. ಆದ್ದರಿಂದ, ನಿಮ್ಮ ಕಾರಿನ ವಿಂಡ್‌ಶೀಲ್ಡ್‌ನಲ್ಲಿನ ಸಣ್ಣದೊಂದು ಬಿರುಕು ಕೂಡ ತಕ್ಷಣವೇ ಗುರುತಿಸಿ ದುರಸ್ತಿ ಮಾಡುವುದು ಮುಖ್ಯ. ಇಲ್ಲದಿದ್ದರೆ, ನೀವು ನಂತರ ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ವಿಂಡ್ ಷೀಲ್ಡ್ ನಲ್ಲಿ ಸಣ್ಣ ಬಿರುಕುಗಳಾಗಿ ಪ್ರಾರಂಭವಾಗುವ ಬಿರುಕುಗಳು ತಾಪಮಾನ, ಕಂಪನ ಅಥವಾ ಚಾಲನಾ ಒತ್ತಡದಲ್ಲಿನ ಬದಲಾವಣೆಗಳಿಂದಾಗಿ ಬೇಗನೆ ದೊಡ್ಡ ಬಿರುಕುಗಳಾಗಿ ಬದಲಾಗಬಹುದು. ವಿಂಡ್ ಷೀಲ್ಡ್ ಬಿರುಕುಗಳನ್ನು ಸರಿಪಡಿಸಲು ಮಾರುಕಟ್ಟೆಯಲ್ಲಿ ಕಿಟ್‌ಗಳು ಲಭ್ಯವಿದೆ. ಆದರೆ ಅದಕ್ಕೂ ಮೊದಲು, ವಿಂಡ್‌ಶೀಲ್ಡ್ ರಕ್ಷಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಏನಾಗುತ್ತದೆ ಎಂದು ನೋಡೋಣ.. ಇದನ್ನು ಮೊದಲು ಮಾಡಬೇಕು.. ವಿಂಡ್ ಷೀಲ್ಡ್ ಬಿರುಕುಗಳನ್ನು ಸರಿಪಡಿಸಲು ಮಾರುಕಟ್ಟೆಯಲ್ಲಿ ಕಿಟ್‌ಗಳು ಲಭ್ಯವಿದೆ. ಆದರೆ ಆ ಕಿಟ್ ಅನ್ನು ಆರ್ಡರ್ ಮಾಡುವ ಮೊದಲು ಅಥವಾ ದುರಸ್ತಿಗಾಗಿ ಯಾವುದೇ…
ಹುಬ್ಬಳ್ಳಿ: ಬಿಜೆಪಿಯವರು ಹಳೆಯದನ್ನು ಹೊಸದಾಗಿ, ಹೊಸದನ್ನು ಹಳೆಯದನ್ನಾಗಿ ಮಾಡ್ತಾರೆ. ಕೊಲೆಯಾದ ಸುಹಾಸ್ ಶೆಟ್ಟಿ ಪರಿಹಾರದಲ್ಲಿ ಸರ್ಕಾರದಿಂದ ತಾರತಮ್ಯ ನಡೆದಿಲ್ಲ. ಬಿಜೆಪಿಯವರು ಎಲ್ಲವನ್ನೂ ಉಲ್ಟಾ ಪಲ್ಟಿ ಮಾಡ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಆರೋಪಿ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ಕೊಟ್ಟಿಲ್ಲ. ಪ್ರಕರಣ ದಾಖಲಾಗಿದೆ, ತನಿಖೆ ಮಾಡ್ತಿದ್ದಾರೆ. ಈಗಾಗಲೇ 6 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರನ್ನು ಬಂಧಿಸಬೇಕಿದೆ ಎಂದರು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡ್ತಿಲ್ಲ ಎಂಬ ಆರೋಪಕ್ಕೆ ಕಿಡಿಕಾರಿದ ಅವರು, ಫ್ರೀ ಹ್ಯಾಂಡ್ ಕೊಟ್ಟಿದ್ದರಿಂದಲೇ ಆರೋಪಿಗಳನ್ನು ತಕ್ಷಣ ಬಂಧಿಸುವಸಂತಾಗಿದೆ. ಹಿಂದೂ ಮುಸ್ಲಿಂ ಅಂತ ಯಾರನ್ನು ಟಾರ್ಗೆಟ್ ಮಾಡಲು ಬರಲ್ಲ. ಘಟನೆ ನಡೆದಿದೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಸುಹಾಸ್ ಶೆಟ್ಟಿ ಜೊತೆಗೆ ಇತರೆ ಕೆಲವರ ಕೊಲೆಗೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಯಾರಿಗೆ ಬೆದರಿಕೆ ಇದೆಯೋ ಅವರು ಪೊಲೀಸರಿಗೆ ದೂರು ನೀಡಬೇಕು ಎಂದ…
ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವಾಗಿಇರಬೇಕು ಅಂದರೆ ದೇಹದಲ್ಲಿನ ರಕ್ತದ ಮೂರು ಕಣಗಳಾದ ಕೆಂಪು ರಕ್ತ ಕಣಗಳು ಬಿಳಿರಕ್ತ ಕಣ, ಮತ್ತು ಪ್ಲೇಟ್ಲೆಟ್‌ಗಳು ಸಾಕಷ್ಟು ಇರಲೇಬೇಕು..ಅದ್ರಲ್ಲೂ ಪ್ಲೇಟ್ಲೆಟ್ ನಮ್ಮ ರಕ್ತದ ಪ್ರಮುಖ ಅಂಶವಾಗಿದ್ದು, ದೇಹಕ್ಕೆ ಗಾಯಗಳು ಉಂಟಾದಾಗ ರಕ್ತ ಸ್ರಾವವನ್ನು ತಡೆಗಟ್ಟಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಕೆಲವೊಮ್ಮೆ ವೈರಲ್ ಜ್ವರಗಳು, ಅಸ್ಥಿಮಜ್ಜೆಯಲ್ಲಿ ರಕ್ತದ ಕಣಗಳ ಉತ್ಪಾದನೆ ಕುಂಠಿತ ಹೀಗೆ ಅನೇಕ ಕಾರಣಗಳಿಂದ ಪ್ಲೇಟ್ಲೆಟ್ಸ್ ಸಂಖ್ಯೆಯಲ್ಲಿ ಕೊರತೆ ಕಂಡು ಬರುತ್ತದೆ.ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಈ 10 ಆಹಾರವನ್ನು ಸೇವಿಸಿ. ಹಸಿರು ಸೊಪ್ಪು: ಪಾಲಕ್, ಕೇಲ್, ಸ್ವಿಸ್ ಚಾರ್ಡ್ ಮತ್ತು ಇತರ ಹಸಿರು ಸೊಪ್ಪಿನಲ್ಲಿ ಕಬ್ಬಿಣ ಮತ್ತು ಫೋಲೇಟ್ ಸಮೃದ್ಧವಾಗಿರುತ್ತದೆ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅವಶ್ಯಕವಾಗಿದೆ. ಮಾಂಸ: ಆರ್ಗನ್ ಮಾಂಸಗಳು ವಿಶೇಷವಾಗಿ ಯಕೃತ್ತು, ಕಬ್ಬಿಣ, ವಿಟಮಿನ್ ಬಿ 12 ಮತ್ತು ಕೆಂಪು ರಕ್ತ ಕಣಗಳ ರಚನೆಗೆ ಪ್ರಮುಖವಾದ ಇತರ ಪೋಷಕಾಂಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಬೀನ್ಸ್ ಮತ್ತು ಮಸೂರ: ದ್ವಿದಳ ಧಾನ್ಯಗಳು ಮತ್ತು…
ಬೆಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ಕೊಟ್ಟಿಲ್ಲ, ಅದರ ಅಗತ್ಯ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎಗೆ ವಹಿಸಲು ಬಿಜೆಪಿ ನಾಯಕರು ಹೇಳುತ್ತಿರುವುದು ಅವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಎಂಟು ಜನರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿ ಈ ಪ್ರಕರಣ ಎನ್ಐಎಗೆ ಕೊಟ್ಟಿಲ್ಲ ಅದರ ಅಗತ್ಯ ಇಲ್ಲ ಎಂದರು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಸುಹಾಸ್ ಶೆಟ್ಟಿ ಕುಟುಂಬಕ್ಕೆ ಸರ್ಕಾರದಿಂದ ಭೇಟಿ ನೀಡಿ ಯಾರೂ ಸಾಂತ್ವನ ಹೇಳದ ವಿಚಾರ ಬಗ್ಗೆ ಮಾತಾಡಿದ ಪರಮೇಶ್ವರ್, ಇದು ಒಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್‌ಗಳು ಅವರ ಮೇಲಿವೆ. ಹಾಗಾಗಿ ನಾವು ಹಾಗೂ ಭೇಟಿ ಕೊಟ್ಟಿಲ್ಲ. ಆದರೆ ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಪರಮೇಶ್ವರ್ ಭರವಸೆ ನೀಡಿದರು.
ಮನರಂಜನಾ ಜಗತ್ತು ಯಾವಾಗಲೂ ಗ್ಲಾಮರ್ ಮತ್ತು ಸಂಪತ್ತಿನೊಂದಿಗೆ ಸಂಬಂಧ ಹೊಂದಿದೆ. ಅದು ಬಾಲಿವುಡ್ ಆಗಿರಲಿ ಅಥವಾ ಹಾಲಿವುಡ್ ಆಗಿರಲಿ, ಚಿತ್ರರಂಗದಲ್ಲಿ ಯಶಸ್ವಿ ಚಿತ್ರದಿಂದ ತಾರೆಯರ ಅದೃಷ್ಟ ಹೊಳೆಯುತ್ತದೆ. ಒಂದು ಹಿಟ್ ಸಿನಿಮಾದ ನಂತರ ನಟ-ನಟಿಯರು ಕೋಟ್ಯಂತರ ರೂಪಾಯಿ ಸಂಪಾದಿಸುವುದಲ್ಲದೆ, ಐಷಾರಾಮಿ ಜೀವನಶೈಲಿಯನ್ನೂ ನಡೆಸುತ್ತಾರೆ. ಆದರೆ ಜಗತ್ತಿನ ಅತ್ಯಂತ ಶ್ರೀಮಂತ ನಟ ಯಾರು ಗೊತ್ತಾ? ಅಥವಾ ಈ ಪಟ್ಟಿಯಲ್ಲಿ ಶಾರುಖ್ ಖಾನ್ ಎಲ್ಲಿದ್ದಾರೆಂದು ನಿಮಗೆ ತಿಳಿದಿದೆಯೇ? https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ವಿಶ್ವದ ಅತ್ಯಂತ ಶ್ರೀಮಂತ ನಟ ಯಾರು? ಇತ್ತೀಚೆಗೆ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಶ್ವದ ಶ್ರೀಮಂತ ನಟರ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಸೇರಿಸಲಾದ ಕಲಾವಿದರ ಒಟ್ಟು ಸಂಪತ್ತಿನ ಅಂಕಿಅಂಶಗಳನ್ನು ಸಹ ಹಂಚಿಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಜೆರ್ರಿ ಸೀನ್‌ಫೆಲ್ಡ್ ವಿಶ್ವದ ಅತ್ಯಂತ ಶ್ರೀಮಂತ ನಟ. ಈ ಅಮೇರಿಕನ್ ಹಾಸ್ಯನಟ ಮತ್ತು ಟಿವಿ ತಾರೆ ಸುಮಾರು 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವರು…