Author: Author AIN

ಬೆಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ಕೊಟ್ಟಿಲ್ಲ, ಅದರ ಅಗತ್ಯ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎಗೆ ವಹಿಸಲು ಬಿಜೆಪಿ ನಾಯಕರು ಹೇಳುತ್ತಿರುವುದು ಅವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಎಂಟು ಜನರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿ ಈ ಪ್ರಕರಣ ಎನ್ಐಎಗೆ ಕೊಟ್ಟಿಲ್ಲ ಅದರ ಅಗತ್ಯ ಇಲ್ಲ ಎಂದರು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಸುಹಾಸ್ ಶೆಟ್ಟಿ ಕುಟುಂಬಕ್ಕೆ ಸರ್ಕಾರದಿಂದ ಭೇಟಿ ನೀಡಿ ಯಾರೂ ಸಾಂತ್ವನ ಹೇಳದ ವಿಚಾರ ಬಗ್ಗೆ ಮಾತಾಡಿದ ಪರಮೇಶ್ವರ್, ಇದು ಒಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್‌ಗಳು ಅವರ ಮೇಲಿವೆ. ಹಾಗಾಗಿ ನಾವು ಹಾಗೂ ಭೇಟಿ ಕೊಟ್ಟಿಲ್ಲ. ಆದರೆ ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಪರಮೇಶ್ವರ್ ಭರವಸೆ ನೀಡಿದರು.

Read More

ಮನರಂಜನಾ ಜಗತ್ತು ಯಾವಾಗಲೂ ಗ್ಲಾಮರ್ ಮತ್ತು ಸಂಪತ್ತಿನೊಂದಿಗೆ ಸಂಬಂಧ ಹೊಂದಿದೆ. ಅದು ಬಾಲಿವುಡ್ ಆಗಿರಲಿ ಅಥವಾ ಹಾಲಿವುಡ್ ಆಗಿರಲಿ, ಚಿತ್ರರಂಗದಲ್ಲಿ ಯಶಸ್ವಿ ಚಿತ್ರದಿಂದ ತಾರೆಯರ ಅದೃಷ್ಟ ಹೊಳೆಯುತ್ತದೆ. ಒಂದು ಹಿಟ್ ಸಿನಿಮಾದ ನಂತರ ನಟ-ನಟಿಯರು ಕೋಟ್ಯಂತರ ರೂಪಾಯಿ ಸಂಪಾದಿಸುವುದಲ್ಲದೆ, ಐಷಾರಾಮಿ ಜೀವನಶೈಲಿಯನ್ನೂ ನಡೆಸುತ್ತಾರೆ. ಆದರೆ ಜಗತ್ತಿನ ಅತ್ಯಂತ ಶ್ರೀಮಂತ ನಟ ಯಾರು ಗೊತ್ತಾ? ಅಥವಾ ಈ ಪಟ್ಟಿಯಲ್ಲಿ ಶಾರುಖ್ ಖಾನ್ ಎಲ್ಲಿದ್ದಾರೆಂದು ನಿಮಗೆ ತಿಳಿದಿದೆಯೇ? https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ವಿಶ್ವದ ಅತ್ಯಂತ ಶ್ರೀಮಂತ ನಟ ಯಾರು? ಇತ್ತೀಚೆಗೆ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಶ್ವದ ಶ್ರೀಮಂತ ನಟರ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಸೇರಿಸಲಾದ ಕಲಾವಿದರ ಒಟ್ಟು ಸಂಪತ್ತಿನ ಅಂಕಿಅಂಶಗಳನ್ನು ಸಹ ಹಂಚಿಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಜೆರ್ರಿ ಸೀನ್‌ಫೆಲ್ಡ್ ವಿಶ್ವದ ಅತ್ಯಂತ ಶ್ರೀಮಂತ ನಟ. ಈ ಅಮೇರಿಕನ್ ಹಾಸ್ಯನಟ ಮತ್ತು ಟಿವಿ ತಾರೆ ಸುಮಾರು 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವರು…

Read More

ಮಂಗಳೂರು: ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಶನಿವಾರ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ತೆಕ್ಕಾರು ನಿವಾಸಿ ಇಬ್ರಾಹಿಂ.ಎಸ್.ಬಿ ದೂರು ದಾಖಲಿಸಿದ್ದಾರೆ. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಧರ್ಮ, ಧರ್ಮಗಳ ನಡುವೆ ದ್ವೇಷ ಬಿತ್ತುವ ಭಾಷಣ ಮಾಡಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ 196, 352(2) ಪ್ರಕರಣ ದಾಖಲಾಗಿದೆ.

Read More

ನಿಮ್ಮ ಮನೆ ಅಥವಾ ಕಚೇರಿಗೆ ಹೊಸ ವೈ-ಫೈ ಸಂಪರ್ಕ ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗೊಂದು ಒಳ್ಳೆಯ ಸುದ್ದಿ ಇದೆ. ಭಾರತದ ಪ್ರಸಿದ್ಧ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನು ನೀಡಿದೆ. ಈಗ ನೀವು ಏರ್‌ಟೆಲ್‌ನ ಹೊಸ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ತೆಗೆದುಕೊಂಡರೆ ನೀವು ರೂ.ಗಳನ್ನು ಉಳಿಸಬಹುದು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ನೀವು 700 ವರೆಗೆ ರಿಯಾಯಿತಿ ಪಡೆಯಬಹುದು. ಈ ಕೊಡುಗೆ ಏರ್‌ಟೆಲ್‌ನ ಕ್ರಿಕೆಟ್ ಪ್ರಚಾರ ಅಭಿಯಾನದ ಭಾಗವಾಗಿದೆ. ಐಪಿಎಲ್ 2025 ಕ್ರೇಜ್ ಹೆಚ್ಚಾದಂತೆ, ಏರ್‌ಟೆಲ್ ತನ್ನ ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಮತ್ತು ಬ್ರಾಡ್‌ಬ್ಯಾಂಡ್ ಬಳಕೆದಾರರಿಗಾಗಿ ವಿಶೇಷ ಕೊಡುಗೆಗಳನ್ನು ಪ್ರಾರಂಭಿಸಿದೆ. ಈ ವಿಶೇಷ ಕೊಡುಗೆಯ ಬಗ್ಗೆ ತಿಳಿದುಕೊಳ್ಳೋಣ. ಏರ್‌ಟೆಲ್‌ನ ಹೊಸ ಆಫರ್ ಏನು? ಈ ರಿಯಾಯಿತಿ ಹೊಸ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಮಾತ್ರ ಎಂದು ಏರ್‌ಟೆಲ್ ತಿಳಿಸಿದೆ. ನೀವು ಮೊದಲ ಬಾರಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಸಂಪರ್ಕವನ್ನು ತೆಗೆದುಕೊಂಡು ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ, ನೀವು ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ಅದರ ಮೇಲೆ 700…

Read More

ಹಾವೇರಿ: ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ಕೊಟ್ಟಂತಹ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಅಕ್ಕಿ ಆಲೂರಿನಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ಕೊಟ್ಟಂತಹ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ನಿಮಗೆ ನಾವು ಆಸರೆಯಾಗಿ ನಿಂತು ಆಧಾರವಾಗಿದ್ದೇವೆ. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಹೋದ ತೆರಿಗೆಯಲ್ಲಿ ಕೇವಲ ಶೇ 13 ರಷ್ಟನ್ನು ಮಾತ್ರ ವಾಪಸ್ ಕೊಡುತ್ತಿದೆ. ಆದರೂ ನಾವು 4 ಲಕ್ಷ ಕೋಟಿಗೂ ಅಧಿಕವಾದ ಬಜೆಟ್ ಅನ್ನು ರಾಜ್ಯದ ಅಭಿವೃದ್ಧಿಗಾಗಿ ಮಂಡನೆ ಮಾಡಿದ್ದೇವೆ” ಎಂದರು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಗ್ಯಾರಂಟಿ ವಿರೋಧ ಮಾಡುತ್ತಿದ್ದ ಬಿಜೆಪಿಯವರು ನಂತರ ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ದೆಹಲಿ ಚುನಾವಣೆಯಲ್ಲಿ ಅವರೂ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ದೇಶದ ಪ್ರಧಾನಿ ಕರ್ನಾಟಕ ಬರಿದಾಗಿ ಹೋಯಿತು ಎಂದರು‌. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಕೊಟ್ಟು ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಗ್ಯಾರಂಟಿಗಳಿಂದ…

Read More

ಹಾನಗಲ್: “ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಮಾಡಿ ಇದರಿಂದ ಹಗಲು ಹೊತ್ತಿನಲ್ಲಿಯೇ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಲು ಸರ್ಕಾರ ತೀರ್ಮಾನ ಮಾಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಅಕ್ಕಿ ಆಲೂರಿನಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಮಾಜಿ ಸಿಎಂ ಬಂಗಾರಪ್ಪ ಅವರ ಅವಧಿಯಲ್ಲಿ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಲಾಯಿತು. 2013 ರ ಕಾಂಗ್ರೆಸ್ ಸರ್ಕಾರದ ವೇಳೆ ನಾನು ಇಂಧನ ಸಚಿವನಾಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ನೀಡುವ ತ್ರೀ‌ ಫೇಸ್ ವಿದ್ಯುತ್ ಪೂರೈಕೆಯನ್ನು 6 ಗಂಟೆಯಿಂದ 7 ಗಂಟೆಗೆ ಹೆಚ್ಚಳ ಮಾಡಲಾಯಿತು” ಎಂದು ಹೇಳಿದರು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ “665.75 ಕೋಟಿ ಹಣವನ್ನು ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿದ್ದೇವೆ. 418 ಕೋಟಿ ವೆಚ್ಚದಲ್ಲಿ ಬಾಳಂಬೀಡು ಹಾಗೂ ಇತರೇ 72 ಗ್ರಾಮಗಳ 162…

Read More

ಕಲಬುರಗಿ: ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆಗೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಶಿವಮೊಗ್ಗ, ಬೀದರ್ ಮತ್ತು ಧಾರವಾಡ ಪರೀಕ್ಷಾ ಕೇಂದ್ರಗಳಲ್ಲಿ ತೆಗೆಸಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಜನಿವಾರ ಹಾಕಿದ್ದಾರೆಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಕಷ್ಟ ತಂದಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಇದೀಗ ನೀಟ್ ಪರೀಕ್ಷೆಯಲ್ಲೂ ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದಾರೆ. ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್​ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್‌ ಅವರ ಜನಿವಾರವನ್ನು ಅಧಿಕಾರಿಗಳು ತೆಗೆಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಶ್ರೀಪಾದ್ ಪಾಟೀಲ್​ ಅವರಿಗೆ ಜನಿವಾರ ತೆಗೆಯುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸೂಚನೆಯಂತೆ ಶ್ರೀಪಾದ್ ಪಾಟೀಲ್‌ ಅವರು ಜನಿವಾರ ತೆಗೆದು ಪರೀಕ್ಷಾ ಕೇಂದ್ರಕ್ಕೆ ತೆರಳಿ, ಪರೀಕ್ಷೆ ಬರೆದಿದ್ದಾರೆ. ಈ ಘಟನೆಯನ್ನು ಖಂಡಿಸಿ ಪರೀಕ್ಷಾ ಕೇಂದ್ರದ ‌ಮುಂದೆ ಬ್ರಾಹ್ಮಣ ಸಮಾಜ ಪ್ರತಿಭಟನೆ ನಡೆಸಿತು.…

Read More

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದ್ದು, ಮುಂದಿನ ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಧ್ವನಿ ಮೊಳಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮುಂದಿನ ಕೆಪಿಸಿಸಿ ಅಧ್ಯಕ್ಷ ಸತೀಶ ಜಾರಕಿಹೊಳಿಯವರಿಗೆ ಎಂದು ಸಚಿವ ಸತೀಶ ಜಾರಕಿಹೊಳಿ ಬೆಂಬಲಿಗರು, ಕಾರ್ಯಕರ್ತರು ಘೋಷಣೆ ಕೂಗಿದರು. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಇನ್ನೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಇಂತಹದೊಂದು ಕೂಗು ಬಂದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Read More

ಹಾಸನ: ಈ ದೇಶ ಉಳಿಯಬೇಕಾದರೆ ಪ್ರಧಾನಿ ಮೋದಿಯವರು ಇರಲೇಬೇಕು ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನವರು ಹಾಸನ – ಮೈಸೂರು ರೈಲ್ವೆ ಯೋಜನೆ ಸ್ಥಗಿತ ಮಾಡಿದ್ದರು. ಆದರೆ ದೇವೇಗೌಡರು ಪ್ರಧಾನಿಯಾಗಿ ಹತ್ತೆ ತಿಂಗಳಿಗೆ ಆ ಯೋಜನೆ ಮಾಡಿದ್ರು. ಕಾಂಗ್ರೆಸ್‍ನವರು ಈ ಜಿಲ್ಲೆಯಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಜಿಲ್ಲೆ ಲೂಟಿಕೋರರ ಕೈ ಸೇರಿದೆ. ನಾನೂ ಇಲ್ಲೇ ಇರ್ತಿನೆ, ಇದೆಲ್ಲಾ ಎಷ್ಟು ದಿನ ಇರುತ್ತದೆ ನೋಡೋಣ. ಈ ದೇಶ ಉಳಿಯಬೇಕಾದರೆ ಮೋದಿಯವರು ಇರಲೇಬೇಕು. ಅವರಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. https://ainkannada.com/has-hair-fall-increased-after-having-a-baby-if-so-be-sure-to-include-this-ingredient-in-your-diet/ ಕೆಲವು ಅಧಿಕಾರಿಗಳು ರೇವಣ್ಣ ಹಾಗೂ ದೇವೇಗೌಡರದು ಮುಗೀತು ಎಂದು ತಿಳಿದುಕೊಂಡಿದ್ದಾರೆ. ಹಿಂದೆ ಕೂಡ ಜಿಲ್ಲೆಯಲ್ಲಿ ಎಲ್ಲಾ ಸ್ಥಾನ ಸೋತಿದ್ದೆವು. ಬಳಿಕ ಐದೇ ವರ್ಷಕ್ಕೆ ದೇವೇಗೌಡರು ಅಧಿಕಾರಕ್ಕೆ ಬಂದಿದ್ದರು. ಹಾಸನಕ್ಕೆ ದೇವೇಗೌಡರ ಕೊಡುಗೆ ಏನು ಅಂತಾರೆ. ರೈಲ್ವೆ ಯೋಜನೆ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ನಸಿರ್ಂಗ್ ಕಾಲೇಜು ಮಾಡಿದ್ದು ಯಾರು? ಹಾಸನ…

Read More

ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಈ ಸ್ಟಾರ್ ಕಿಡ್ ಕೆಲವೊಮ್ಮೆ ತನ್ನ ಬಾಲಿವುಡ್ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದನ್ನು ಕಾಣಬಹುದು. ಸಾರಾ ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳೂ ಇವೆ. ಆದರೆ ಕೆಲವು ದಿನಗಳ ಹಿಂದೆ ಅವರು ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿಗಳೂ ಇದ್ದವು. ಆದಾಗ್ಯೂ, ಈ ವದಂತಿಗಳ ಬಗ್ಗೆ ಸಾರಾ ಅಥವಾ ಗಿಲ್ ಅಧಿಕೃತ ಹೇಳಿಕೆ ನೀಡಲಿಲ್ಲ. ಈಗ ಸಾರಾ ತೆಂಡೂಲ್ಕರ್ ಜೀವನದಲ್ಲಿ ಹೊಸ ಪುರುಷನೊಬ್ಬ ಬಂದಿದ್ದಾನೆ ಎಂಬ ಮಾತು ಬಾಲಿವುಡ್ ನಲ್ಲಿ ಕೇಳಿಬರುತ್ತಿದೆ. https://www.instagram.com/p/DHf5gfttm3k/?utm_source=ig_embed&ig_rid=5010b7fe-1bee-40b7-b722-065db40e5a5d&img_index=2 ಸಾರಾ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ‘ಗಲ್ಲಿ ಬಾಯ್’ ಖ್ಯಾತಿಯ ನಟ ಸಿದ್ಧಾಂತ್ ಚತುರ್ವೇದಿ. ಹಿಂದಿ ಚಲನಚಿತ್ರೋದ್ಯಮದಲ್ಲಿ ಸಾರಾ ಮತ್ತು ಸಿದ್ಧಾಂತ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಪ್ರಸ್ತುತ ಸಾಕಷ್ಟು ಕೇಳಿಬರುತ್ತಿದೆ. ಆದರೆ,…

Read More