Author: Author AIN

ಸರ್ವ ರೋಗಕ್ಕೂ ಸಂಗೀವವೇ ಮದ್ದು ಅಂತಾರೇ. ಆದ್ರೀಗ ತಮ್ಮ ಸೊಗಸಾದ ಕಂಠದ ಮೂಲಕವೇ ಕರುನಾಡ ಮನಸ್ಸುಗಳನ್ನು ಗೆದ್ದಿದ್ದ ಸೋನು ನಿಗಮ್‌ ಎಂಬ ಗಾಯಕ ಮಾಡಿದ ಎಡವಟ್ಟಿಗೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ತಪ್ಪನ್ನು ಒಪ್ಪಿಕೊಳ್ಳದೇ, ಕಡೆ ಪಕ್ಷ ಕ್ಷಮೆಯೂ ಕೇಳದೇ ತಾನು ಮಾಡಿದ್ದೇ ಸರಿ ಎನ್ನುವಂತೆ ವರ್ತಿಸುತ್ತಿರುವ ಈ ಗಾಯಕನ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಾಹ್ನ 1 ಗಂಟೆಗೆ ಸಭೆ ಕರೆದಿದ್ದು, ಈ ಸಭೆಯಲ್ಲಿ ಸೋನು ನಿಗಮ್‌ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಚರ್ಚೆ ನಡೆಸಲಾಗುತ್ತಿದೆ. ಅದಕ್ಕಾಗಿ ಕನ್ನಡದ ಸಂಗೀತ ನಿರ್ದೇಶಕರಿಗೂ ಆಹ್ವಾನ ಕೊಡಲಾಗಿದೆ. ಕನ್ನಡ ಚಿತ್ರರಂಗದಿಂದ ಸೋನು ನಿಗಮ್‌ ಬ್ಯಾನ್‌ ಮಾಡಬೇಕು ಎಂಬ ಕೂಗು ಜೋರಾಗಿದ್ದು, ಈ ಬಗ್ಗೆ ಫಿಲ್ಮಂ ಚೇಂಬರ್‌ ಹಾಗೂ ಸಂಗೀತ ನಿರ್ದೇಶಕರು ಈ ವಿಷಯದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಅನ್ನೋದನ್ನು ಕಾದುನೋಡಬೇಕಿದೆ. ಏನಿದು ವಿವಾದ? ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ…

Read More

ಬೆಂಗಳೂರು: ಆರ್ಥಿಕ ಸುರಕ್ಷತೆಯ ವಿಷಯದಲ್ಲೂ ಚಿನ್ನದ ಎತ್ತಿದ ಕೈ ಎನ್ನಬಹುದು. ಒಬ್ಬ ವ್ಯಕ್ತಿಯಿಂದ ಹಿಡಿದು ರಾಷ್ಟ್ರದ ಆರ್ಥಿಕ ಸದೃಢತೆಯಲ್ಲೂ ಚಿನ್ನ ಮಹತ್ವದ ಪಾತ್ರವಹಿಸಿದೆ. ಆರ್ಥಿಕವಾಗಿ ತಲೆದೋರುವ ಕಷ್ಟಕಾಲದ ಆಪದ್ಬಾಂಧವನಂತೆ ಚಿನ್ನ ಕಾರ್ಯ ನಿರ್ವಹಿಸುತ್ತದೆ. ಇನ್ನು, ಚಿನ್ನದ ಬೆಲೆ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ. ಹಲವಾರು ಜಾಗತಿಕ ವಿದ್ಯಮಾನಗಳು ಹಾಗೂ ಸ್ಥಳೀಯ ಕಾರಣಗಳಿಂದಾಗಿ ನಿತ್ಯ ಅದರ ಬೆಲೆ ಪ್ರಭಾವಿಸಲ್ಪಡುತ್ತಲೇ ಇರುತ್ತದೆ. ಹಾಗಾಗಿ ನಿತ್ಯದ ಬೆಲೆಯ ಅಪ್ಡೇಟ್ ಸಾಕಷ್ಟು ಜನರಿಗೆ ಉಪಯುಕ್ತ ಎನ್ನಬಹುದು. https://ainkannada.com/eat-these-foods-to-increase-the-number-of-red-blood-cells-in-the-body/ ಚಿನ್ನದ ಬೆಲೆ ಗ್ರಾಮ್​​​ಗೆ 16 ರೂನಿಂದ 22 ರೂವರೆಗೆ ಏರಿಕೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 20 ರೂ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ 8,755 ರೂ ಇದ್ದ ಇದರ ಬೆಲೆ ಸೋಮವಾರ 8,775 ರೂಗೆ ಏರಿದೆ. ದೆಹಲಿ ಇತ್ಯಾದಿ ಕೆಲವೆಡೆ ಬೆಲೆ 8,790 ರೂಗೆ ಏರಿದೆ. ವಿದೇಶ ಮಾರುಕಟ್ಟೆಗಳಲ್ಲಿ ಮಲೇಷ್ಯಾದಂತಹ ಕೆಲ ದೇಶಗಳಲ್ಲಿ ಚಿನ್ನದ ಬೆಲೆ ಕಡಿಮೆ ಆಗಿದೆ. ಹೆಚ್ಚಿನ ಕಡೆ ಯಥಾಸ್ಥಿತಿ ಇದೆ. ದುಬೈ, ಅಮೆರಿಕದಲ್ಲಿ ಬೆಲೆ ತುಸು…

Read More

ಹುಬ್ಬಳ್ಳಿ: ತಾಲೂಕಿನ ಇಂಗಳಹಳ್ಳಿ ಗ್ರಾಮದ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಮೃತ್ಯುಂಜಯ ಪ್ರೌಢಶಾಲೆಯ ವಿದ್ಯಾರ್ಥಿಗಳು 2024-25 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ. ಅಶ್ವಿನಿ ಕಾಡದೇವರಮಠ 569 ಅಂಕ ಗಳಿಸಿ 91.04% ದೊಂದಿಗೆ ಶಾಲೆಗೆ ಪ್ರಥಮ‌ ಸ್ಥಾನ,‌ ಅಶ್ವಿನಿ ಬಾರ್ಕಿ 542 ಅಂಕ ಗಳಿಸಿ 86.72% ದೊಂದಿಗೆ ದ್ವಿತೀಯ ಸ್ಥಾನ ಹಾಗೂ ಹಾಜಿರಾ ಕಾಶೀಂಖಾನವರ 523 ಅಂಕ ಪಡೆಯೋ ಮೂಲಕ 83.68% ದೊಂದಿಗೆ ಶಾಲೆಗೆ ತೃತಿಯ ಸ್ಥಾನ ಪಡೆದುಕೊಂಡಿದ್ದಾಳೆ. https://ainkannada.com/eat-these-foods-to-increase-the-number-of-red-blood-cells-in-the-body/ ಉಳಿದಂತೆ ದಾವಲಸಾಬ ಕಾಲೇಖಾನವರ 519 ಅಂಕ ಪಡೆದು 83.04%, ಪೂಜಾ ಗಣಾಚಾರಿ 508 ಅಂಕ ಪಡೆದು 81.28%, ಈರವ್ವ ಮರೆಪ್ಪಗೌಡ್ರ 493 ಅಂಕ ಪಡೆದು 78.88%, ಸನಾ ನಾಯ್ಕರ್ 493 ಅಂಕ ಪಡೆದು 78.88%, ಶ್ವೇತಾ ಹವಳಪ್ಪನವರ 490 ಅಂಕ ಪಡೆದು 78.40%, ನೇತ್ರಾವತಿ ಮಡಿವಾಳರ 475 ಅಂಕ ಪಡೆದು 76%, ಮಕ್ತುಂಬಿ ಯಲಿಗಾರ 466 ಅಂಕ ಪಡೆದು…

Read More

ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ತಮ್ಮ ದೇಶದ ಸಿನಿಮಾ ಉಳಿವಿಗಾಗಿ ಹೊಸ ನೀತಿ ಜಾರಿಗೆ ತಂದಿದ್ದಾರೆ. ವಿದೇಶಿ ಸಿನಿಮಾಗಳ ಮೇಲೆ ಶೇಖಡ್‌ 100ರಷ್ಟು ಸುಂಕ ಘೋಷಿಸಿದ್ದಾರೆ. ಹಾಲಿವುಡ್‌ ಚಿತ್ರರಂಗವನ್ನು ರಕ್ಷಿಸಲು ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಗೆ ಉತ್ತೇಜ ನೀಡಲು ಅಮೆರಿಕಾದ ಹೊರಗಡೆ ತಯಾರಾಗುವ ಚಿತ್ರಗಳ ಮೇಲೆ ಶೇಖಡ 100ರಷ್ಟು ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತಾದ ಪೋಸ್ಟ್ ಅನ್ನು ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ವೇದಿಕೆ ಟ್ರೂತ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಟ್ರಂಪ್, ‘ಅಮೆರಿಕದಲ್ಲಿ ಚಲನಚಿತ್ರೋದ್ಯಮವು ಬಹಳ ವೇಗವಾಗಿ ಸಾಯುತ್ತಿದೆ. ಇತರ ದೇಶಗಳು ನಮ್ಮ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ಅಮೆರಿಕದಿಂದ ದೂರ ಸೆಳೆಯಲು ವಿವಿಧ ಪ್ರೋತ್ಸಾಹಕ ಯೋಜನೆಗಳನ್ನು ನೀಡುತ್ತಿವೆ. ಹಾಲಿವುಡ್ ಮತ್ತು ಅಮೆರಿಕದ ಇತರ ಹಲವು ಪ್ರದೇಶಗಳು ನಾಶವಾಗುತ್ತಿವೆ. ಇದು ಇತರ ದೇಶಗಳ ಯೋಜಿತ ಪ್ರಯತ್ನವಾಗಿದೆ ಮತ್ತು ಆದ್ದರಿಂದ ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ. ಟ್ರಂಪ್‌ ಈ ಘೋಷಣೆ ಸಿನಿಮಾ ಉದ್ಯಮದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.…

Read More

ಬೆಂಗಳೂರು: ಸಿಸಿಬಿ ಪೊಲೀಸರ ಹೆಸರಿನಲ್ಲಿ ಲಕ್ಷ ಲಕ್ಷ ವಸೂಲಿ ಮಾಡುತ್ತಿದ್ದ ಇಬ್ಬರು ನಗರ ಪೊಲೀಸ್ ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮೆಹಬೂಬ್ ಮತ್ತು ಯುವರಾಜ್ ಬಂಧಿತ ಆರ್ ಟಿನಗರ ಪೇದೆಗಳಾಗಿದ್ದು, ದಾವಣಗೆರೆಗೆ ಹೋಗಿ ಸೇಟು ಓರ್ವನನ್ನು ಬೆದರಿಸಿ ಲಕ್ಷ ಲಕ್ಷ ವಸೂಲಿ ಮಾಡಿದ್ದಾರೆ. ಅದಲ್ಲದೆ ದಾವಣಗೆರೆ ಜಿಲ್ಲೆಯ ಓರ್ವ ಪೊಲೀಸ್ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ. https://ainkannada.com/eat-these-foods-to-increase-the-number-of-red-blood-cells-in-the-body/ ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ಬಂದಿದ್ದು, ದೂರು ದಾಖಲಿಸಲು ಬಿ ದಯಾನಂದ ಸಿಸಿಬಿಗೆ ಸೂಚಿಸಿದ್ದರು. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಎಫ್ ಐ ಆರ್ ದಾಖಲು ಮಾಡಿ ಇಬ್ಬರು ಪೇದೆಗಳನ್ನು ಬಂಧಿಸಿದ್ದಾರೆ.

Read More

ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಬಹುತೇಕ ಸ್ಥಗಿತಗೊಂಡಿವೆ. ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿದೆ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭಾರತ ಈಗಾಗಲೇ ಪ್ರತಿಜ್ಞೆ ಮಾಡಿದೆ. ಇದರ ಭಾಗವಾಗಿ, ಅದು ಪಾಕಿಸ್ತಾನದ ವಿರುದ್ಧ ಹಲವಾರು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿತು. ಮತ್ತೊಂದೆಡೆ, ಭಾರತ ದಾಳಿ ಮಾಡುತ್ತದೆ ಎಂಬ ಭಯ ಪಾಕಿಸ್ತಾನದಲ್ಲಿ ಹೆಚ್ಚುತ್ತಿದೆ. ಮೇಕೆಯು ಮೇಲ್ನೋಟಕ್ಕೆ ಸೊಬಗನ್ನು ಪ್ರದರ್ಶಿಸುತ್ತದೆ. ಯುದ್ಧ ನಡೆದರೆ ದೇಶ ಬಿಟ್ಟು ಪಲಾಯನ ಮಾಡುತ್ತೇವೆ ಎಂದು ಪಾಕಿಸ್ತಾನಿ ರಾಜಕಾರಣಿಗಳು ಬಹಿರಂಗವಾಗಿ ಹೇಳುತ್ತಿದ್ದಾರೆ. ಸ್ಥಳೀಯ ವರದಿಗಾರರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವಾಗ ಇಸ್ಲಾಮಾಬಾದ್ ನಾಯಕ ಶೇರ್ ಅಫ್ಜಲ್ ಖಾನ್ ಮರ್ವಾತ್ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. https://ainkannada.com/eat-these-foods-to-increase-the-number-of-red-blood-cells-in-the-body/ “ಭಾರತದ ಜೊತೆ ಯುದ್ಧ ನಡೆದರೆ, ನೀವು ಬಂದೂಕಿನಿಂದ ಗಡಿಗೆ ಹೋಗುತ್ತೀರಾ?” ಎಂದು ವರದಿಗಾರರೊಬ್ಬರು ಕೇಳಿದಾಗ, ಪಾಕಿಸ್ತಾನಿ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಶೇರ್ ಅಫ್ಜಲ್ ಖಾನ್…

Read More

ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ, ಸುರಂಗ ರಸ್ತೆ, ರಸ್ತೆ ಸಾರಿಗೆ ಮತ್ತಿತರ ಸಾರ್ವಜನಿಕ ಉಪಯೋಗಿ ಯೋಜನೆಗಳ ವಿಸ್ತರಣೆ ಸಂಬಂಧ ಉಪ‌ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳ ಜತೆ ವಿಧಾನಸೌಧದಲ್ಲಿ ಸಮಾಲೋಚನೆ ನಡೆಸಿದರು. https://ainkannada.com/eat-these-foods-to-increase-the-number-of-red-blood-cells-in-the-body/ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಧಿಕಾರಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತರು ಮಹೇಶ್ವರ ರಾವ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ  ಜಯರಾಮ್, ಉಪ ಮುಖ್ಯಮಂತ್ರಿ ಕಾರ್ಯದರ್ಶಿ ರಾಜೇಂದ್ರ ಚೋಳನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Read More

ಕೋಲಾರ: ಬೈಕ್ ಗೆ ಪೊಲೀಸ್ ಬುಲೇರೋ ವಾಹನ ಡಿಕ್ಕಿಯಾಗಿ ಗಾಯಗೊ‌ಡಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆಜಿಎಫ್ ತಾಲ್ಲೂಕಿನ ಬಡಮಾಕನಹಳ್ಳಿಯ ನಾರಾಯಣಸ್ವಾಮಿ ಸಾವನ್ನಪ್ಪಿದ ದುರ್ಧೈವಿಯಾಗಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಾಂತರಾಜ್ ಸರ್ಕಲ್‌ನಲ್ಲಿ ಕೋಲಾರ ಮಹಿಳಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಿಪಿಐ ಶಂಕರಾಚಾರಿ ಇದ್ದ ವಾಹನ ಬೈಕ್ ಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. https://ainkannada.com/eat-these-foods-to-increase-the-number-of-red-blood-cells-in-the-body/ ಗಂಭೀರವಾಗಿ ಗಾಯಗೊಂಡಿದ್ದ ನಾರಾಯಣಸ್ವಾಮಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ: ಬಿಹಾರದ ಪಾಟ್ನಾದಲ್ಲಿ ನಡೆದ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಶ್ಲಾಘಿಸಿದರು. “ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಡೀ ದೇಶದ ಗಮನ ಸೆಳೆದಿದ್ದಾರೆ.” “ನೀವು ಹೆಚ್ಚು ಆಡಿದಷ್ಟೂ, ನೀವು ಹೆಚ್ಚು ಹೊಳೆಯುತ್ತೀರಿ” ಎಂದು ಮೋದಿ ಹೇಳಿದರು. https://ainkannada.com/eat-these-foods-to-increase-the-number-of-red-blood-cells-in-the-body/ ಐಪಿಎಲ್‌ನಲ್ಲಿ ಬಿಹಾರದ ವೈಭವ್ ಸೂರ್ಯವಂಶಿ ಅವರ ಪ್ರದರ್ಶನವು ಪಟ್ಟಣದಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಎಂದು ತಿಳಿದಿದೆ. ವೈಭವ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ದೊಡ್ಡ ದಾಖಲೆಯನ್ನು ಸೃಷ್ಟಿಸಿದ್ದು ತಿಳಿದಿದೆ. ಈ ಯಶಸ್ಸಿನ ಹಿಂದೆ ಸಾಕಷ್ಟು ಶ್ರಮವಿದೆ. ವಿವಿಧ ಹಂತಗಳಲ್ಲಿ ಕ್ರಿಕೆಟ್ ಆಡುವುದು ಸಹ ಅವರಿಗೆ ಸಹಾಯ ಮಾಡಿತು. ಇದರರ್ಥ ಒಬ್ಬರು ಹೆಚ್ಚು ಆಡಿದಷ್ಟೂ ಅವರು ಹೆಚ್ಚು ಯಶಸ್ಸನ್ನು ಸಾಧಿಸುತ್ತಾರೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು. ವೈಭವ್ 35 ಎಸೆತಗಳಲ್ಲಿ ಶತಕ.. ಏಪ್ರಿಲ್ 28 ರಂದು,…

Read More

ಬೆಂಗಳೂರು: ಬೆಂಗಳೂರಿನಲ್ಲಿ ತೀವ್ರ ಗಾಯಗಳೊಂದಿಗೆ ವಕೀಲ ಜಗದೀಶ್ ಎನ್ನುವವರ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಸಂಬಂಧ ಗಲಾಟೆ ಏನಾದರೂ ಆಗಿತ್ತಾ? ಅಥವಾ ಉದ್ದೇಶಪೂರ್ವಕವಾಗಿ ಹತ್ಯೆಗೈಯ್ಯಲಾಗಿದೆಯಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದೆ. ಹೌದು ವಕೀಲ ಜಗದೀಶ್ ಅವರ ದೇಹ ರಕ್ತಸಿಕ್ತವಾಗಿ ನೈಸ್ ರಸ್ತೆಯಲ್ಲಿ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಘಟನೆ ಸಂಬಂಧ ಮೃತ ಜಗದೀಶ್ ಸೋದರ ಸಂಬಂಧಿಯೊಬ್ಬರು ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. https://ainkannada.com/eat-these-foods-to-increase-the-number-of-red-blood-cells-in-the-body/ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಸಾವಿಗೆ ರಹಸ್ಯವನ್ನು ಬಯಲಿಗೆಳೆದಿದ್ದಾರೆ ಪ್ರಾಥಮಿಕ ತನಿಖೆ ಮಾಹಿತಿ ಪ್ರಕಾರ, ವಕೀಲ ಜಗದೀಶ್ ಸಾವಿಗೆ ರೋಡ್ ರೇಜ್ ಕಾರಣವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೇಲ್ನೋಟಕ್ಕೆ ಜಗದೀಶ್ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಕೀಲ್ ಜಗದೀಶ್ ನೈಸ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಅವರ ಕಾರಿಗೆ ಲಾರಿಯೊಂದು ಟಚ್ ಆಗಿದೆ.…

Read More