ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್ ಕೇಶವ(ದೇವಸಂದ್ರ) ನಿರ್ಮಿಸಿರುವ, ನವೀನ್ ರೆಡ್ಡಿ ಬಿ ನಿರ್ದೇಶನದ ಹಾಗೂ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ಮಾದೇವ” ಚಿತ್ರ ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡಿನ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಮೇ 30 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಜೊತೆಗೆ ಈವರೆಗೂ ಮಾಡಿರದ ಪಾತ್ರ ಕೂಡ ಮಾಡಿದ್ದಾರೆ. ವಿನೋದ್ ಪ್ರಭಾಕರ್ ಅವರ ಈ ಲುಕ್ ಗೆ ಫಿದಾ ಆಗಿರುವ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. “ಮಾದೇವ” ಚಿತ್ರದಲ್ಲಿ ಅಪಾರ ತಾರಾಬಳಗವಿದೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಸೋನಾಲ್ ಮೊಂತೆರೊ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಮಾಲಾಶ್ರೀ, ಶೃತಿ, ಅಚ್ಯುತ ಕುಮಾರ್, ಕಾಕ್ರೋಜ್ ಸುಧೀ, ಮೈಕೋ ನಾಗರಾಜ್, ಬಲ ರಾಜ್ವಾಡಿ, ಮುನಿರಾಜು, ಚೈತ್ರಾ ಮುಂತಾದ ಅನುಭವಿ ಕಲಾವಿದರ ತಾರಾಬಳಗ…
Author: Author AIN
ಸಿದ್ದು ಪೂರ್ಣಚಂದ್ರರವರು ಕಥೆ ಬರೆದು ನಿರ್ದೇಶನ ಮಾಡಿರುವ ಈ ಪಾದ ಪುಣ್ಯ ಪಾದ ಚಿತ್ರವು ಒಬ್ಬ ಆನೆ ಕಾಲುರೋಗಿಯ ಕಥಾ ವಸ್ತುವನ್ನು ಒಳಗೊಂಡಿದೆ. ಮನುಷ್ಯನಿಗೆ ದೈಹಿಕವಾಗಿ ಯಾವುದೇ ಕಾಯಿಲೆಗಳು ಬಂದಾಗ ಮಾನಸಿಕ ಸ್ಥಿತಿಯ ಅರಿವು ಮತ್ತು ಆ ವ್ಯಕ್ತಿಯ ಸಂಬಂಧಗಳ ಮನಸ್ಥಿತಿ ಹೇಗಿರುತ್ತದೆ ಎಂಬ ಅತೀ ಸೂಕ್ಷ್ಮ ವಿಷಯಗಳನ್ನು ಈ ಚಿತ್ರ ಒಳಗೊಂಡಿದೆ. ಈ ಚಿತ್ರವು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲೊಂದಾದ “ದಾದಾ ಸಾಹೇಬ್ ಫಾಲ್ಕೆ” ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಜ್ಯೂರಿ ಅವಾರ್ಡ್ ಪಡೆದುಕೊಂಡಿದೆ. ತಮ್ಮ ಪ್ರತೀ ಚಿತ್ರದಲ್ಲೂ ಒಂದೊಂದು ವಿಭಿನ್ನ ವಿಷಯಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಾ ಬಂದಿದ್ದಾರೆ ಸಿದ್ದು ಪೂರ್ಣಚಂದ್ರ. ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಮತ್ತು ‘ತಾರಿಣಿ’ ಚಿತ್ರಗಳ ನಂತರ ಅವರು, ಇದೀಗ ‘ಈ ಪಾದ ಪುಣ್ಯಪಾದ’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಬಾರಿ ಅವರು ಈ ಚಿತ್ರದಲ್ಲಿ ಆನೆ ಕಾಲು ರೋಗಿಯ ಕಥೆ ಹೇಳುವುದಕ್ಕೆ ಹೊರಟಿದ್ದಾರೆ. “ಪೂರ್ಣಚಂದ್ರ…
ಡಾಲಿ ಧನಂಜಯ್ ನಿರ್ಮಿಸಿರುವ ‘ವಿದ್ಯಾಪತಿ’ ಸಿನಿಮಾ ಏಪ್ರಿಲ್ 10ರಂದು ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಡಾಲಿ ಅವರ ಗೆಳೆಯ ನಾಗಭೂಷಣ್ ಹೀರೋ ಆಗಿ ನಟಿಸಿದ್ದರು. ಉಪಾಧ್ಯಕ್ಷ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿ ನಟಿಸಿದ್ದರು. ಡಾಲಿ ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಚಿತ್ರ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನದಲ್ಲಿ ಮೂಡಿಬಂದಿದ್ದ ವಿದ್ಯಾಪತಿ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಮನೆ ಮಂದಿ ಕುಳಿತು ಫ್ಯಾಮಿಲಿ ಎಂಟರ್ ಟೈನರ್ ವಿದ್ಯಾಪತಿ ಚಿತ್ರ ನೋಡಬಹುದು. ಧನಂಜಯ್ ಒಡೆತನದ ‘ಡಾಲಿ ಪಿಕ್ಚರ್ಸ್’ ಮೂಲಕ ನಿರ್ಮಾಣ ಮಾಡಿರುವ ನಾಲ್ಕನೇ ಚಿತ್ರ ಇದಾಗಿದೆ. ನಾಗಭೂಷಣ್-ಮಲೈಕಾ ಜೊತೆಗೆ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ‘ವಿದ್ಯಾಪತಿ’ ಚಿತ್ರಕ್ಕೆ ಕಥೆ ಬರೆದು, ಸಂಕಲನವನ್ನೂ ಇಶಾಂ ಹಾಗೂ ಹಸೀಂ ಖಾನ್ ಅವರು ಮಾಡಿದ್ದಾರೆ. ಮಾಡಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ…
ಅಪ್ರಾಪ್ತ ಬಾಲಕಿಯರನ್ನೆ ಟಾರ್ಗೆಟ್ ಮಾಡಿ ಅತ್ಯಾಚಾರ ಮಾಡುತ್ತಿದ್ದ ಕಾಮುಕ ಉದ್ಯಮಿ ಬಳ್ಳಾರಿ ಮೂಲದ ಕಿರಣ್ ಜೈನ್ ಎಂಬ ಪಾಪಿಯನ್ನ ಬೆಂಗಳೂರು ಸಿಸಿಬಿ ಪೊಲೀಸರು ಫೋಕ್ಸೋ ಕೇಸಲ್ಲಿ ಪರಪ್ಪನ ಅಗ್ರಹಾರಕ್ಕೆ ಕಳಸಿದ್ದಾರೆ. ಇತ್ತಿಚಿಗೆ ಸಿಸಿಬಿ ಪೊಲೀಸ್ರು ನಗರದಾದ್ಯಂತ ವೇಶ್ಯವಾಟಿಕೆ ನಡೆಸಿತ್ತದ್ದ ಸ್ಥಳಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ್ರು. ಈ ಕಾರ್ಯಾಚರಣೆಯಲ್ಲ ಎಂಟು ಜನ ಪಿಂಪ್ ಗಳನ್ನ ಬಂಧಿಸಿದ್ರು. ಆಗ ತನಿಖೆಯಲ್ಲಿ ಸಿಸಿಬಿ ಪೊಲೀಸರಿಗೆ ಒಂದು ಶಾಕಿಂಗ್ ವಿಚಾರ ಗೊತ್ತಾಗಿತ್ತು. ಬಳ್ಳಾರಿ ಮೂಲದ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕಿರಣ್ ಜೈನ್ ಪಿಂಪಗಳ ಮುಖಾಂತರ ಅಪ್ರಾಪ್ತ ಬಾಲಕಿಯರನ್ನ ಲಾಡ್ಜ್, ಹೊಟೆಲ್ ಗಳಿಗೆ ಕರೆಸಿಕೊಂಡು ವತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನಂತೆ. ಅನೆಕ ಬಾಲಕಿಯರಿಗೆ ಉದ್ಯೋಗ, ಹಣ, ಸಿನಿಮಾ, ಸಿರಿಯಲ್ ಗಳಲ್ಲಿ ಕೆಲಸದ ಆಸೆ ತೋರಿಸಿದ್ದಾನಂತೆ. ಬಾಲಕಿಯರು ಒಪ್ಪದೆ ಇದ್ದಾಗ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವು ಕೇಳಿ ಬರುತ್ತಿದೆ. ದುಡ್ಡು ಎಷ್ಟಾದ್ರು ಪರವಾಗಿಲ್ಲ ಸಣ್ಣ ವಯಸ್ಸಿನ ಹುಡಿಗಿರೇ ಬೇಕು ದುಡ್ಡು ಜಾಸ್ತಿ ಆದ್ರೂ ಪರವಾಗಿಲ್ಲ ಆದ್ರೆ ಸಣ್ಣ ವಯಸ್ಸನಿ ಹುಡಿಗಿಯರು…
ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ನಡುವೆ ಏನೋ ಇದೆ. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನೋದು ಎಲ್ಲರಿಗೂ ಇರುವ ಕುತೂಹಲ. ಆದರೆ ಇವರಿಬ್ಬರು ಮಾತ್ರ ನಾವು ಫ್ರೆಂಡ್ಸ್ ಅಂತಾರೇ. ಆದ್ರೆ ಒಟ್ಟೊಟ್ಟಿಗೆ ಔಟಿಂಗ್, ಡಿನ್ನರ್ ಗೆ ಹೋಗುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೆ. ಸದ್ಯ ರಶ್ಮಿಕಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತ ವಿಜಯ್ ಕೂಡ ಕಿಂಗ್ ಡಮ್ ಸಿನಿಮಾದ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ ಥೇಟ್ ಅರ್ಜುನ್ ರೆಡ್ಡಿಯಂತೆ ಕಾಣಿಸಿಕೊಂಡಿರುವ ಕಿಂಗ್ ಡಮ್ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಈ ಗೀತೆಯಲ್ಲಿ ವಿಜಯ್ ನಟಿ ಭಾಗ್ಯಶ್ರೀಯೊಟ್ಟಿಗೆ ಲಿಕ್ ಲಾಕ್ ಮಾಡಿದ್ದಾರೆ. ಗೌತಮ್ ತಿನ್ನನುರಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇದೇ ತಿಂಗಳ 30ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ವಿಜಯ್ ದೇವರಕೊಂಡ ಜೊತೆಗೆ ಮೊದಲ ಬಾರಿಗೆ ಭಾಗ್ಯಶ್ರೀ ಬೋರ್ಸೆ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆಗಿನ ಸಿನಿಮಾಗಳ ಬಳಿಕ ವಿಜಯ್ ದೇವರಕೊಂಡ ಸಿನಿಮಾ ಅಷ್ಟೊಂದು ಸಕ್ಸಸ್ ಕಂಡಿಲ್ಲ. ಆದರೀಗ ‘ಕಿಂಗ್‌ಡಮ್’ ಸಿನಿಮಾ…
ಸೆಲೆಬ್ರಿಟಿಗಳು ಏನೇ ಮಾಡಿದರು ಅದು ದೊಡ್ಡ ಸುದ್ದಿಯಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಯಾವುದಾದರೂ ಒಂದು ಫೋಟೋಗೆ ಲೈಕ್ ಕೊಟ್ರೆ ನಾನಾ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಸದ್ಯ ವಿರಾಟ್ ಕೊಹ್ಲಿ ಅದೊಂದು ಲೈಕ್ ಇಂಟರ್ ನೆಟ್ ಲೋಕದಲ್ಲಿ ಕಿಡಿ ಹಚ್ಚಿದೆ. ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 271 ಮಿಲಿಯನ್ ಫೋಲೋಯರ್ಸ್ ಇದ್ದಾರೆ. ಹೀಗಿರುವಾಗ ಕಿಂಗ್ ಕೊಹ್ಲಿ ಎಲ್ಲ ಫೋಟೋ ಲೈಕ್, ಕಮೆಂಟ್ ಮಾಡಲ್ಲ. ಆದ್ರೆ ನಟಿ ಅವನೀತ್ ಕೌರ್ ಅವರ ಪೋಸ್ಟ್ ಗೆ ಲೈಕ್ ಮಾಡಿರುವುದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ಅವನೀತ್ ಬೋಲ್ಡ್ ಫೋಟೋಗೆ ಕೊಹ್ಲಿ ಲೈಕ್ ಒತ್ತುತ್ತಿದ್ದಂತೆ ಇವರಿಬ್ಬರ ನಡುವೆ ಏನೋ ಇದೆ ಅನ್ನೋ ಸುದ್ದಿ ಹರಿದಾಡಲು ಶುರು ಮಾಡಿದೆ. ಸೋಷಿಯಲ್ ಮೀಡಿಯಾದ ತುಂಬೆಲ್ಲಾ ಕೊಹ್ಲಿ ನಟಿ ಅವನೀತ್ ಕೌರ್ ಲೈಫ್ ಮ್ಯಾಟರ್ ಭಾರೀ ಚರ್ಚೆಯಾಗುತ್ತಿದ್ದಂತೆ ಅದಕ್ಕೆ ಸ್ವತಃ ವಿರಾಟ್ ಸ್ಪಷ್ಟನೆ ಕೊಟ್ಟಿದ್ದಾರೆ. “ನಾನು ನನ್ನ ಹಳೇ ಫೀಡ್ ಗಳನ್ನು ಕ್ಲೀಯರ್ ಮಾಡಬೇಕಾದರೆ, ತಪ್ಪಾಗಿ ಏಮೋ ಘಟಿಸಿದೆ. ಅದರಲ್ಲಿ ಬೇರಾವ ಉದ್ದೇಶವೂ ಇರಲಿಲ್ಲ. ಹಾಗಾಗಿ…
ಸ್ಯಾಂಡಲ್‌ವುಡ್ ಮುದ್ದಾದ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿ ತಮ್ಮ ಮಗಳ ಫೋಟೋ ಜೊತೆಗೆ ಹೆಸರನ್ನು ಬಹಿರಂಗಪಡಿಸಿದ್ದಾರೆ. ಹರ್ಷಿಕಾ-ಭುವನ್ ತಮ್ಮ ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ ಮಾಡಿದ್ದಾರೆ. ಇಂದು ತಮ್ಮ ಊರು ಕೊಡಗಿನ ವಿರಾಜಪೇಟೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ತಮ್ಮ ಪುತ್ರಿಗೆ ನಾಮಕರಣ ಮಾಡಿದ್ದು, ಚಿತ್ರರಂಗದ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ಸಂಪ್ರದಾಯದಂತೆ ಬಟ್ಟೆಯನ್ನು ತೊಟ್ಟು ಮೂವರು ಫೋಟೋಗೆ ಪೋಸ್ ಕೊಟ್ಟಿರುವ ಫೋಟೋವನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ಅವಳ ವಿಶೇಷ ದಿನದಂದು (ನಾಮಕರಣ ಸಮಾರಂಭ) ಅವಳಿಗೆ ನಿಮ್ಮೆಲ್ಲರ ಶುಭಾಶಯಗಳು ಮತ್ತು ಆಶೀರ್ವಾದಗಳು ಬೇಕು. ಆದ್ದರಿಂದ ಅವಳು ಮಾನವೀಯತೆ ಮತ್ತು ಜಗತ್ತಿಗೆ ಸೇವೆ ಸಲ್ಲಿಸುವ ಅತ್ಯುತ್ತಮ ಮಾನವಿಯಾಗುತ್ತಾಳೆ. ಈ ಹೆಸರನ್ನು ಏಕೆ ಆರಿಸಿಕೊಂಡೆವು ಎಂದು ನೀವು ನಮ್ಮನ್ನು ಕೇಳಿದರೆ ವಿವರಣೆ ಇಲ್ಲಿದೆ. ಹಿಂದೂ ಧರ್ಮದಲ್ಲಿ, “ತ್ರಿದೇವಿ” ಎಂಬುದು ಮೂರು ಪ್ರಮುಖ ದೇವತೆಗಳನ್ನು ಸೂಚಿಸುತ್ತದೆ. ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ (ಅಥವಾ ದುರ್ಗಾ). ಅವರನ್ನು ತ್ರಿಮೂರ್ತಿಗಳ (ಬ್ರಹ್ಮ,…
ಬಾಲಿವುಡ್ ನಟ ಸೈಫ್ ಅಲಿ ಖಾನ್ ವೃತ್ತಿ ಜೀವನದ ಅತ್ಯಂತ ಕೆಟ್ಟ ಸಿನಿಮಾ ಆದಿಪುರುಷ ಎನಿಸುತ್ತದೆ. ಈ ಚಿತ್ರ ಟ್ರೋಲ್ ಆದಷ್ಟು ಯಾವ್ ಸಿನಿಮಾನೂ ಆಗಿಲ್ಲ ಅನಿಸುತ್ತದೆ. ಕಳಪೆಮಟ್ಟದ ಗ್ರಾಫಿಕ್ಸ್ ನೋಡಿ ಎಲ್ಲರು ದಂಗಾಗಿದ್ದರು. ಆದಿಪುರುಷ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಹೀನಾಯ ಸೋಲು ಕಂಡು ಟ್ರೋಲ್ ಆದ ಆದಿಪುರುಷ ಸಿನಿಮಾವನ್ನು ಸೈಫ್ ಮಗ ನೋಡಿದ್ದು, ಆತನಿಗೂ ಚಿತ್ರ ಇಷ್ಟವಾಗಿಲ್ಲ. ಜ್ಯೂವೆಲ್ ಥೀಫ್ ಸಿನಿಮಾ ಪ್ರಚಾರದ ವೇಳೆ ಸೈಫ್ ಅಲಿ ಖಾನ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಜಯದೀಪ್ ನೆಟ್ ಫ್ಲಿಕ್ಸ್‌ಗಾಗಿ ನಡೆಸಿಕೊಟ್ಟ ಸಂದರ್ಶನದಲ್ಲಿ ಸೈಫ್ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ, ಜಯದೀಪ್, ‘ನೀವು ನಟಿಸಿದ ಯಾವುದಾದರೂ ಸಿನಿಮಾವನ್ನು ನಿಮ್ಮ ಮಕ್ಕಳು ನೋಡಿದ್ದಾರಾ’ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸೈಫ್, ‘ಇತ್ತೀಚೆಗೆ ನಾನು ಅವನಿಗೆ ಆದಿಪುರುಷ್ ಸಿನಿಮಾ ತೋರಿಸಿದೆ. ಆತ ನನಗೆ ಲುಕ್ ಕೊಡಲು ಶುರು ಮಾಡಿದ. ನಾನು ಅವನಲ್ಲಿ ಕ್ಷಮೆ ಕೇಳಿದೆ. ಅವನು…
ವಿರಾಟ್ ಕೊಹ್ಲಿಯನ್ನು ಅಭಿಮಾನಿಗಳು ಕಿಂಗ್ ಕೊಹ್ಲಿ ಅಂತಾ ಸುಮ್ ಸುಮ್ಮನೇ ಕರೆಯೋದಿಲ್ಲ. ವಿರಾಟ್ ಬ್ಯಾಡ್ ಹಿಡಿದು ಫೀಲ್ಡ್‌ಗಿಳಿದ್ರೆ ರನ್ ಮಳೆಯನ್ನೇ ಹರಿಸ್ತಾರೆ. ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಬೌಲರ್ಸ್‌ಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಆರ್‌ಸಿಬಿಯ ಸ್ಟಾರ್ ಬ್ಯಾಟರ್ ಆಗಿರುವ ಕಿಂಗ್ ಕೊಹ್ಲಿ ಇತ್ತೀಚೆಗೆ ಆರ್‌ಸಿಬಿ ಚಾಟ್ ಶೋನಲ್ಲಿ ತಾವು ಪದೇ ಪದೇ ಕೇಳುವ ತಮ್ಮಿಷ್ಟದ ಹಾಡನ್ನು ರಿವೀಲ್ ಮಾಡಿದ್ದಾರೆ. ವಿರಾಟ್ ಮೈದಾನದಲ್ಲಿ ಅಭ್ಯಾಸ ಮಾಡುವಾಗ, ಏರ್ಪೋರ್ಟ್, ವಿಮಾನದಲ್ಲಿ ಪ್ರಯಾಣ ಮಾಡುವಾಗ ನೀ ಸಿಂಗಮ್ ಧಾನ ಸಾಂಗ್ ಅನ್ನು ಪದೇ ಪದೇ ಕೇಳುತ್ತಿರುತ್ತಾರೆ. ಆ ಹಾಡು ಎಂದರೆ ವಿರಾಟ್ಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಏರ್ಫೋನ್ ಹಾಕೊಂಡು ಒಂದೇ ಹಾಡನ್ನು ಪದೇ ಪದೇ ಕೇಳುತ್ತಿರುತ್ತಾರೆ. ನೀ ಸಿಂಗಮ್ ಧಾನ, ನಟ ಸಿಲಂಬರಸನ್ ಊರೂಫ್ ಸಿಂಬು ಅಭಿನಯದ ಪಾಥು ಥಾಲಾ ಚಿತ್ರದ ಹಾಡು. 2023ರಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿರುವ ಈ ಚಿತ್ರದ ನೀ ಸಿಂಗಮ್ ಧಾನ ವಿರಾಟ್ ಫೇವರೇಟ್ ಗೀತೆ. ಸಿದ್ ಶ್ರೀರಾಮ್ ಕಂಠದಲ್ಲಿ, ರೆಹಮಾನ್ ಸಂಗೀತ…
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮುಂಬೈನಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್‌ಟೈನ್‌ಮೆಂಟ್ ಶೃಂಗಸಭೆ (WAVES Summit 2025) ಯಲ್ಲಿ ಹೊಂಬಾಳೆ ಫಿಲ್ಮ್ಸ್‌ನ ಸಹ ಸಂಸ್ಥಾಪಕರಾದ ಚಲುವೇ ಗೌಡ ಅವರು ಉಪಸ್ಥಿತರಿದ್ದು ಗಮನ ಸೆಳೆದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಗುರುವಾರ ಉದ್ಘಾಟನೆಗೊಂಡ ಈ ಮಹತ್ವದ ಸಮಾವೇಶವು ಭಾರತದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಬೆಳವಣಿಗೆ, ನಾವೀನ್ಯತೆ ಮತ್ತು ಜಾಗತಿಕ ಸಾಮರ್ಥ್ಯವನ್ನು ಅನಾವರಣಗೊಳಿಸುವ ಗುರಿಯನ್ನು ಹೊಂದಿದೆ. “RRR” ಚಿತ್ರದ ಸಂಕಲನಕಾರರಾದ ಎ. ಶ್ರೀಕರ್ ಪ್ರಸಾದ್ ಹಾಗೂ ಆಸ್ಕರ್ ಸಮಿತಿಯ ಸದಸ್ಯ ಮತ್ತು ಭಾರತೀಯ ಚಲನಚಿತ್ರ ಒಕ್ಕೂಟದ ತಾಂತ್ರಿಕ ಸಲಹೆಗಾರರಾದ ಉಜ್ವಲ್ ನಿರ್ಗುಡ್ಕರ್ ಅವರನ್ನೊಳಗೊಂಡ ಆಸಕ್ತಿದಾಯಕ ಚರ್ಚೆಯಲ್ಲಿ ಪಾಲ್ಗೊಂಡ ಚಲುವೇ ಗೌಡ ಅವರು, ಹೊಂಬಾಳೆ ಫಿಲ್ಮ್ಸ್‌ನ ಅಂತರರಾಷ್ಟ್ರೀಯ ಯೋಜನೆಗಳ ಕುರಿತು ಬೆಳಕು ಚೆಲ್ಲಿದರು. ಅದರಲ್ಲೂ ವಿಶೇಷವಾಗಿ “ಕಾಂತಾರ ಭಾಗ ೧” ಚಿತ್ರವನ್ನು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ಕಾರ್ಯತಂತ್ರ ರೂಪಿಸಿ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದು, ಕನ್ನಡ ಚಿತ್ರರಂಗಕ್ಕೆ ಜಾಗತಿಕ…