Author: Author AIN

ನಿಮ್ಮ ಜೇಬಿನಲ್ಲಿ ಎಟಿಎಂ ಕಾರ್ಡ್ ಇದ್ದರೆ, ನಿಮಗೆ ಎಲ್ಲಿ ಬೇಕಾದರೂ ಹಣವನ್ನು ಹಿಂಪಡೆಯಬಹುದು. ಆದರೆ ಮೇ 1 ರಿಂದ ನೀವು ಎಟಿಎಂನಿಂದ ಹಣ ಹಿಂಪಡೆಯಲು ಅಥವಾ ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಲು ಮೊದಲಿಗಿಂತ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ ಪ್ರಸ್ತಾವನೆಯನ್ನು ಆರ್‌ಬಿಐ ಅನುಮೋದಿಸಿದ ನಂತರ, ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ಈಗ ದುಬಾರಿಯಾಗಲಿದೆ. ಮೇ 1, 2025 ರಿಂದ, ನೀವು ಒಂದು ನಿರ್ದಿಷ್ಟ ಮಿತಿಯ ನಂತರ ಬೇರೆ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಂಡರೆ, ನಿಮಗೆ ರೂ. 17 ಪಾವತಿಸುವ ಬದಲು, ನೀವು ಈಗ ರೂ. 19 ಪಾವತಿಸಬೇಕು. ಬ್ಯಾಲೆನ್ಸ್ ಪರಿಶೀಲಿಸುವ ಶುಲ್ಕವೂ ರೂ. 7 ರಿಂದ ರೂ. 9ಕ್ಕೆ ಏರಿಕೆಯಾಗಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಮೆಟ್ರೋ ನಗರಗಳಲ್ಲಿನ ಇತರ ಎಟಿಎಂಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳ ಮಿತಿಯನ್ನು ಮತ್ತು ಮೆಟ್ರೋ ಅಲ್ಲದ ಎಟಿಎಂಗಳಲ್ಲಿ 3 ಉಚಿತ ವಹಿವಾಟುಗಳ ಮಿತಿಯನ್ನು ನೀಡುತ್ತದೆ. ಇದಲ್ಲದೆ, ನೀವು ವಹಿವಾಟಿನ ಮೇಲೆ ಈ…

Read More

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಫ್ಯಾನ್ಸ್ ಇಂದು ಬೆಳಂ ಬೆಳಗ್ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಮ್ಯಾಕ್ಸ್‌ ಬಳಿಕ ಕಿಚ್ಚನ ಭತ್ತಳಿಕೆಯಿಂದ ಬರ್ತಿರುವ ಮತ್ತೊಂದು ಸಿನಿಮಾ ಬಿಲ್ಲ ರಂಗ ಬಾಷಾ ಚಿತ್ರತಂಡ ಸ್ಪೆಷಲ್‌ ವಿಡಿಯೋವೊಂದನ್ನು ರಿಲೀಸ್‌ ಮಾಡಿದೆ. ಏಪ್ರಿಲ್‌ 16ರಿಂದ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಬೆಂಗಳೂರಿನಲ್ಲಿ ಭರದಿಂದ ಶೂಟಿಂಗ್‌ ಸಾಗುತ್ತಿದೆ. ‘ಹೊರಾಂಗಣ ಹಾಗೂ ಒಳಾಂಗಣ ಎರಡೂ ಕಡೆ ಸೆಟ್‌ ಹಾಕಿ  ಚಿತ್ರೀಕರಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 20 ದಿನಗಳ ಚಿತ್ರೀಕರಣ ನಡೆಸಲಾಗುತ್ತದೆ. ಬ್ರೇಕ್‌ ಬಳಿಕ ಎರಡನೇ ಹಂತದ ಚಿತ್ರೀಕರಣ ಚಾಲುವಾಗಲಿದೆ. ಬೆಂಗಳೂರಿನ ಕಂಠೀರವ ಸ್ಟುಡೀಯೋದಲ್ಲಿ ಶೂಟಿಂಗ್‌ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗುವ ಟೆಕ್ನಿಷಿಯನ್ಸ್‌ ಗೆ ಐಡಿ ಕಾರ್ಡ್‌ ನೀಡಲಾಗಿದೆ. ಈ ಐಡಿ ಕಾರ್ಡ್‌ ಇದ್ದರೆ ಮಾತ್ರ ಒಳಗೆ ಎಂಟ್ರಿ. ಇನ್ನೂ ಮೇಕಪ್‌ ಹಚ್ಚಿ ಕಿಚ್ಚ ಕ್ಯಾಮೆರಾ  ಮುಂದೆ ಬರುವ ಶೂಟಿಂಗ್‌ ಪ್ರೊಸೆಸ್‌ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. ಬಿಲ್ಲ ರಂಗ ಬಾಷಾ ಚಿತ್ರ ಬಹಳ ದೊಡ್ಡದಾಗಿಯೇ ತಯಾರಾಗುತ್ತಿದ್ದು,  ಇದಕ್ಕಾಗಿ ಇಡೀ ತಂಡ ಬಹಳ ಶ್ರಮ ಹಾಕುತ್ತಿದೆ. ಈ…

Read More

ಕನ್ನಡ ನಟಿ ಲಾಸ್ಯ ನಾಗರಾಜ್ ಕೌಟುಂಬಿಕ ಕಲಹವೀಗ ಬೀದಿಗೆ ಬಿದ್ದಿದೆ. ಲಾಸ್ಯ ತಾಯಿ ಡಾ.ಸುಧಾ ನಾಗರಾಜ್ ಅವರ ಮೇಲೆ ಅವರ ಸ್ವತಃ ತಂಗಿ ಮಂಗಳ ಶಶಿಧರ್ ಮತ್ತು ಅವರ ಪತಿ ಶಶಿಧರ್ ದೈಹಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಒಂದೇ ಕಟ್ಟಡದ ಎರಡು ಮಹಡಿಗಳಲ್ಲಿ ಅಕ್ಕ-ತಂಗಿಯ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊದಲ ಮಹಡಿ ಮನೆಯಲ್ಲಿ ನಟಿ ಲಾಸ್ಯ ಮತ್ತು ತಾಯಿ ವಾಸವಾಗಿದ್ದಾರೆ. ಸುಧಾ ನಾಗರಾಜ್ ಮೂಲತಃ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು ಗ್ರೌಂಡ್ ಫ್ಲೋರ್​ನ ಪಾರ್ಕಿಂಗ್ ಜಾಗದಲ್ಲಿ ಹಲವು ವರ್ಷಗಳಿಂದ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಇದೇ ವಿಚಾರಕ್ಕೆ ಪದೇ ಪದೇ ಕಿರಿಕ್ ಮಾಡುತ್ತಿದ್ದ ತಂಗಿ ಮಂಗಳ, ನಿನ್ನೆ ಪತಿಯ ಜೊತೆ ಸೇರಿ ಅಕ್ಕ ಸುಧಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಕೆನಾಡದಲ್ಲಿದ್ದ ಲಾಸ್ಯ ವಿಷಯ ತಿಳಿದು ಭಾರತಕ್ಕೆ ವಾಪಸ್‌ ಆಗುತ್ತಿದ್ದಾರೆ. ನಿನ್ನೆ ರಾತ್ರಿ ಮನೆಯ ಮುಂದಿನ ಜಾಗದ ವಿಚಾರವಾಗಿ ತಂಗಿ ಹಾಗೂ ತಂಗಿಯ ಗಂಡ…

Read More

ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ನಾವು ತಿನ್ನುವ ಆಹಾರ, ಒತ್ತಡ, ಮಾನಸಿಕ ಖಿನ್ನತೆ ಇತ್ಯಾದಿಗಳಿಂದಾಗಿ, ಮನುಷ್ಯ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಹೀಗಾಗಿ ಕೆಲವು ಆರೋಗ್ಯಕರ ನಿಯಮಗಳನ್ನು ಪಾಲಿಸಿದರೆ, ಸದಾ ನಾವು ಆರೋಗ್ಯವಂತರಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಅದರಲ್ಲೂ ಪ್ರತಿದಿನ ವಿವಿಧ ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ. https://ainkannada.com/do-you-leave-the-dishes-unwashed-after-dinner-a-story-you-must-watch/ ಅದರಲ್ಲೂ ಜ್ಯೂಸ್ ರೂಪದಲ್ಲಿ ಇವುಗಳನ್ನು ಕುಡಿಯುವುದು ಸೂಕ್ತ. ಹೆಚ್ಚಿನ ಜನರು ಬೀಟ್​ರೂಟ್​ ಅನ್ನು ಇಷ್ಟಪಡುವುದಿಲ್ಲ. ಆದರೆ ಬೀಟ್​ರೂಟ್​  ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೀಗಾಗಿ ಬೀಟ್​ರೂಟ್​ ತಿನ್ನಲು ಇಷ್ಟಪಡದವರು ಅದನ್ನು ಜ್ಯೂಸ್ ರೂಪದಲ್ಲಿ ಬೆಳಿಗ್ಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಅನೇಕ ಪ್ರಯೋಜನಗಳಿವೆ. ಪೋಷಕಾಂಶಗಳು : ಬೀಟ್​​ರೂಟ್​ನಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಮುಂತಾದ ಅನೇಕ ಅಗತ್ಯ ಪೋಷಕಾಂಶಗಳು ಹೇರಳವಾಗಿವೆ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆಯಿದೆ. ಶೇ.88ರಷ್ಟು ನೀರಿನ ಅಂಶ ಹೊಂದಿರುತ್ತದೆ. ಇದರಲ್ಲಿ ಅಜೈವಿಕ ನೈಟ್ರೇಟ್‌ಗಳಾದ ವಲ್ಗಾಕ್ಸಾಂಥಿನ್ ಬೆಟಾನಿನ್ ಮುಂತಾದ ವರ್ಣದ್ರವ್ಯಗಳಿವೆ. ರಕ್ತದೊತ್ತಡವನ್ನು…

Read More

ಕಲೆಗೆ ಯಾವುದೇ ಭಾಷೆ, ಧರ್ಮವಿಲ್ಲ. ಇಲ್ಲಿ ಅಭಿನಯವೇ ಎಲ್ಲಾ..ದಕ್ಷಿಣ ಭಾರತ ಮಾತ್ರವಲ್ಲ ಬಾಲಿವುಡ್‌ ಅಂಗಳದಲ್ಲಿಯೂ ಮಿಂಚುತ್ತಿರುವ ನಟಿ ಸಮಂತಾ. ಈ ನಟಿಗಾಗಿ ಅಭಿಮಾನಿಯೊಬ್ಬ ದೇಗುಲ ಕಟ್ಟಿಸಿದ್ದಾರೆ. ಮೊನ್ನೆಯಷ್ಟೇ ಸಮಂತಾ ಹುಟ್ಟುಹಬ್ಬದ ದಿನದಂದು ಇಲ್ಲಿ ವಿಶೇಷ ಪೂಜೆ ಮಾಡಿ ಮಕ್ಕಳಿಗೆ ಅನ್ನದಾಸೋಹ ಮಾಡಲಾಗಿದ್ದು, ಆ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಸಮಂತಾ ಅಭಿಮಾನಿಯೊಬ್ಬರು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಅಲಪಾಡು ಗ್ರಾಮದಲ್ಲಿ ಅವರಿಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಅಲ್ಲಿ ಸಮಂತಾ ಎರಡು ಮೂರ್ತಿ ಸ್ಥಾಪಿಸಿ ಪೂಜೆ ಮಾಡುತ್ತಿದ್ದಾರೆ ಸಂದೀಪ್‌ ಎಂಬ ಅಭಿಮಾನಿ. https://twitter.com/i/status/1916853228634767544 ಸಮಂತಾ ಕ್ರಿಶ್ಚಿಯನ್ ಧರ್ಮದವರು. ಆದ್ರೆ ಹಿಂದೂ ದೇಗುಲಗಳಿಗೆ ಅವರು ಹೆಚ್ಚಾಗಿ ಭೇಟಿ ಕೊಡ್ತಾರೆ. ನೆಮ್ಮದಿ ಶಾಂತಿ ಅರಸಿ ದೇವರ ಮೊರೆ ಹೋಗುತ್ತಾರೆ. ಸದ್ಯ ಸಮಂತಾ ನಟನೆ ಜೊತೆಗೆ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ‘ಶುಭಂ’ ಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಅಲ್ಲದೇ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. ಮೇ 9ರಂದು ‘ಶುಭಂ’ ಸಿನಿಮಾ ರಿಲೀಸ್ ಆಗಲಿದೆ.

Read More

ಎಸ್ ರಮೇಶ್ ನಿರ್ಮಾಣದ, ಶಂಕರ್ ಕೋನಮಾನಹಳ್ಳಿ ನಿರ್ದೇಶನದ ಹಾಗೂ ರಾಗಿಣಿ ದ್ವಿವೇದಿ & ಧರ್ಮ ಕೀರ್ತಿರಾಜ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “ಸಿಂಧೂರಿ” ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರು ನಗರದ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ಅಕ್ಷಯ ತೃತೀಯದ ಶುಭದಿನದಂದು ಅದ್ದೂರಿಯಾಗಿ ನೆರವೇರಿತು. ಚಿತ್ರತಂಡದ ಸದಸ್ಯರು ಹಾಗೂ ಸಾಕಷ್ಟು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದರು. ನಿರ್ದೇಶಕನಾಗಿ ಇದು ನನಗೆ ನಾಲ್ಕನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಶಂಕರ್ ಕೋನಮಾನಹಳ್ಳಿ, ಮೇ 10 ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಸಕಲೇಶಪುರ ಮುಂತಾದ ಕಡೆ 45 ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಶೀರ್ಷಿಕೆ ಕೇಳಿದರೆ, ರೋಹಿಣಿ ಸಿಂಧೂರಿ ಮತ್ತು ಡಿ.ಕೆ. ರವಿ ಅವರ ಕಥೆಯಾ? ಎಂದು ಹಲವರು ಕೇಳಿದ್ದಾರೆ. ಆದರೆ ರೋಹಿಣಿ ಸಿಂಧೂರಿ ಅವರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಕಥೆ. ಇದೊಂದು ಮರ್ಡರ್ ಮಿಸ್ಟ್ರಿ. ಇಲ್ಲಿ ರಾಗಿಣಿ ಮತ್ತು ಧರ್ಮ ಕೀರ್ತಿರಾಜ್ ಜೋಡಿಯಾಗಿ…

Read More

ಬೆಂಗಳೂರು: ನಾಡಿನೆಲ್ಲೆಡೆ ಅಕ್ಷಯ ತೃತೀಯ ಸಂಭ್ರಮ ಮನೆಮಾಡಿದ್ದು, ನಗರದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಿ ಅಕ್ಷಯ ತೃತೀಯವನ್ನ ಬರಮಾಡಿಕೊಳ್ಳಲಾಯಿತು. ಅಕ್ಷಯ ತೃತೀಯ ಅಂಗವಾಗಿ ಇಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕ ಹಾಗೂ ವಿಧಾನ ಪರಿಷತ್ ಶಾಸಕರಾದ ಟಿ ಎ ಶರವಣ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಟಿ ಅನುಷಾ ರೈ ಅವರು ಭಾಗಿಯಾಗಿದ್ದರು. ಸದ್ಯ ಬಸವನಗುಡಿಯಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಹಬ್ಬದ ವಾತಾವರಣವೇ ಕಳೆಗಟ್ಟಿದೆ. ಹಲವು ಆಫರ್ಗಳನ್ನು ಇಲ್ಲಿ ನೀಡಲಾಗುತ್ತಿದೆ. ಅದರಂತೆ ಸಾಕಷ್ಟು ಗ್ರಾಹಕರು ಅಕ್ಷಯ ತೃತೀಯ ಅಂಗವಾಗಿ ಚಿನ್ನವನ್ನು ಖರೀದಿಸಿದ್ದಾರೆ.

Read More

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2025 ರ 48 ನೇ ಪಂದ್ಯದಲ್ಲಿ, ಎರಡೂ ತಂಡಗಳ ನಾಯಕರು ಗಾಯಗೊಂಡರು. ದೆಹಲಿ ತಂಡದ ನಾಯಕ ಅಕ್ಷರ್ ಪಟೇಲ್ ಮತ್ತು ಕೋಲ್ಕತ್ತಾ ತಂಡದ ನಾಯಕ ಅಜಿಂಕ್ಯ ರಹಾನೆ ಇಬ್ಬರೂ ಕೈಗಳಿಗೆ ಗಾಯಗಳಾಗಿವೆ. ಪಂದ್ಯದ ನಂತರ, ಇಬ್ಬರೂ ತಾರೆಯರು ತಮ್ಮ ಗಾಯಗಳ ಕುರಿತು ಪ್ರಮುಖ ಮಾಹಿತಿಯನ್ನು ನೀಡಿದರು. ದೆಹಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ತಂಡವು 14 ರನ್‌ಗಳಿಂದ ಸೋಲನ್ನು ಅನುಭವಿಸಬೇಕಾಯಿತು. ಫೀಲ್ಡಿಂಗ್ ಮಾಡುವಾಗ ಅಕ್ಷರ್ ಬೆರಳಿಗೆ ಗಾಯವಾಯಿತು. ಇನ್ನಿಂಗ್ಸ್‌ನ 18 ನೇ ಓವರ್‌ನಲ್ಲಿ, ರೋವ್‌ಮನ್ ಪೊವೆಲ್ ಚೆಂಡನ್ನು ಮಿಡ್-ವಿಕೆಟ್ ಕಡೆಗೆ ಬಲವಾಗಿ ಹೊಡೆದರು. ದೆಹಲಿ ನಾಯಕ ಚೆಂಡನ್ನು ಹಿಡಿಯಲು ಡೈವ್ ಮಾಡಿದರು. ಈ ಪ್ರಕ್ರಿಯೆಯಲ್ಲಿ ಅಕ್ಷರ್ ಅವರ ಬೆರಳಿಗೆ ಗಾಯವಾಯಿತು. ನಂತರ ಅವರಿಗೆ ಮೈದಾನದಲ್ಲಿಯೇ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಯಿತು. ಪಂದ್ಯದ ನಂತರ, ಅಕ್ಷರ್ ತಮ್ಮ ಗಾಯದ ಬಗ್ಗೆ ಮಾತನಾಡುತ್ತಾ, ಬ್ಯಾಟಿಂಗ್ ಮಾಡುವಾಗ ನೋವುಂಟಾಗಿತ್ತು ಮತ್ತು ಮುಂದಿನ ಪಂದ್ಯದ ವೇಳೆಗೆ…

Read More

ಆನೇಕಲ್ ತಾಲೂಕಿನ ಶ್ರೀರಾಮ ಕುಟೀರದಲ್ಲಿ ಐದು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ದ್ವಿಚಕ್ರ ವಾಹನಗಳ ಮೇಳ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಇನ್ನು ಬಸವಣ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ವೆಂಕಟೇಶ್ವರ ಮೋಟರ್ಸ್ ಮಾಲೀಕರಾದ ನಂಜುಂಡಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇನ್ನು ಡ್ರೈವ್ ಎಕ್ಸ್ ಮತ್ತು ವೆಂಕಟೇಶ್ವರ ಮೋಟರ್ಸ್ ಮಾಲೀಕರಾದ ನಂಜುಂಡಪ್ಪ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಇನ್ನು ಐದು ದಿನಗಳ ಹಿಂದೆ ನೆತ್ರಾ ತಪಾಸನ ಮಾಡಲಾಗಿತ್ತು, ಅ ವೇಳೆ ಯಾರಿಗೆಲ್ಲ ಕನ್ನಡಕದ ಅವಶ್ಯಕತೆ ಇತ್ತು ಅಂತವರಿಗೆ 300ಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕ ನೀಡಲಾಯಿತು.. ಇನ್ನು ಐದು ದಿನಗಳಿಂದ ಸಾವಿರಾರು ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿದ್ದು , ದ್ವಿಚಕ್ರ ವಾಹನಗಳ ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಈ ವೇಳೆ ಮಾತನಾಡಿದ ವೆಂಕಟೇಶ್ವರ ಮೋಟರ್ಸ್ ಮಾಲೀಕರ ನಂಜುಂಡಪ್ಪ ಮಾತನಾಡಿ ಐದು ದಿನಗಳಿಂದ ಉಚಿತ ಆರೋಗ್ಯ ಶಿಬಿರ ಮತ್ತು ದ್ವಿಚಕ್ರ…

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಲವೆಡೆ ದಿಢೀರ್​ ಮಳೆಯಾಗಿದೆ. ಬೇಸಿಗೆ ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣನ ಸಿಂಚನವಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪನೆಯ ವಾತಾವರಣ ಸಿಕ್ಕಂತಾಗಿದೆ. ಕಾರ್ಪೋರೇಷನ್, ಶಾಂತಿನಗರ, ಕೆ.ಆರ್.ಮಾರ್ಕೆಟ್, ಸಂಪಂಗಿರಾಮನಗರ, ಅವೆನ್ಯೂ ರೋಡ್ ಸೇರಿದಂತೆ ಕೆಲವೆಢ ಮಳೆ ಸುರಿಯುತ್ತಿದೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಮುಂದಿನ ಮೂರು ಗಂಟೆಗಳ ರಾಜ್ಯಾಧ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಈಗಾಗಲೇ ಅನೇಕ ಕಡೆಗಳಲ್ಲಿ ಮಳೆ ಆರಂಭಗೊಂಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ಕೊಡಗು ಜಿಲ್ಲೆಯಲ್ಲಿ ಮಳೆ ಸಾಧ್ಯತೆ. ಗುಡುಗು, ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ಚಿಕ್ಕಮಗಳೂರು, ತುಮಕೂರು, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ‌ಚಾಮರಾಜನಗರ, ಕೋಲಾರ, ರಾಮನಗರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

Read More