ಈ ಬಾರಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಅಬ್ಬರ ಜೋರಾಗಿದೆ. ಪಾಯಿಂಟ್ ಟೇಬಲ್‌ನಲ್ಲಿ ಆರ್‌ಸಿಬಿ ನಂಬರ್ 1 ಸ್ಥಾನದಲ್ಲಿದ್ದು, ಕಪ್ ಕೂಡ ಗೆಲ್ಲುವ ಎಂಬ ಭರವಸೆ ಇದೆ. ಆರ್‌ಸಿಬಿ ಐಪಿಎಲ್ ಕಣದಲ್ಲಿ ರೋಚಕ ಆಟ ಮುಂದುವರೆಸುತ್ತಿದ್ದು, ಈ ನಡುವೆ ಇಂದು ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹಾಗೂ ಆರ್‌ಸಿಬಿ ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ತಿರುಪತಿ ತಿಮ್ಮಪ್ಪನಿ ದರ್ಶನ ಪಡೆದಿದ್ದಾರೆ. ಆರ್‌ಸಿಬಿ 10 ಪಂದ್ಯಗಳಿಂದ 7 ಗೆಲುವುಗಳ ಅದ್ಭುತ ದಾಖಲೆಯೊಂದಿಗೆ, ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 0.521 ನೆಟ್ ರನ್ ರೇಟು ಪಡೆದುಕೊಂಡಿದೆ. ಶನಿವಾರ ಚಿನ್ನಸ್ವಾಮಿಯಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ ಸೆಣೆಸಾಡಲಿದ್ದು, ಅದಕ್ಕೂ ಮುನ್ನ ನಾಯಕ ರಜತ್ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. https://twitter.com/i/status/1917505676277870766
Author: Author AIN
ಇಂದು ನವದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರರ ೮೯೪ನೇ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣನವರು ತಮ್ಮ ಇಲಾಖೆಯ ಮುಖೇನ ಆಯೋಜಸಿ, ಅತ್ಯಂತ ಯಶಸ್ವಿಯಾಗಿ ದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಬಸವ ಜಯಂತಿಯನ್ನು ಆಯೋಜಿಸುವಲ್ಲಿ ಸಫಲರಾಗಿದ್ದಾರೆ. ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರುಗಳನ್ನು, ರಾಜ್ಯದ ಸಂಸದರುಗಳನ್ನು, ಮಠಾಧೀಶರುಗಳನ್ನು ಮತ್ತು ಬಸವಾಭಿಮಾನಿಗಳನ್ನು, ದೆಹಲಿ ಕನ್ನಡಿಗರನ್ನು ವಿ.ಸೋಮಣ್ಣನವರು ಆಹ್ವಾನಿಸಿದ್ದರು. ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಕಿರಣ ರಿಜಿಜು, ರೇಲ್ವ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಮತ್ತು ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಸಚಿವ ಶ್ರೀ ಪ್ರಹ್ಹಾದ್ ಜೋಶಿ, ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ, ರೇಲ್ವೆ ರಾಜ್ಯ ಖಾತೆಯ ಸಚಿವ ಶ್ರೀ ರವನೀತ ಸಿಂಗ್, ಜಲಶಕ್ತಿ ರಾಜ್ಯ ಖಾತೆಯ ಸಚಿವ ಶ್ರೀ ರಾಜಬೂಷಣ್ ಚೌಧರಿ, https://ainkannada.com/what-is-the-reason-for-buying-gold-like-akshay-trithiya-here-is-the-information/ ಸಂಸದರಾದ ಪಿ.ಸಿ.ಗದ್ದಿಗೌಡರ, ಶ್ರೀ ತೇಜಸ್ವಿ ಸೂರ್ಯ, ಮಾಜಿ…
ಬೆಂಗಳೂರು: ಅತಿ ಹೆಚ್ಚು ಜನದಟ್ಟಣೆ ಇರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಿ ಜೀವನ ಮಾಡೋದು ಕಷ್ಟ ಮರ್ರೆ. ಬರುವ ಸಂಬಳದಲ್ಲಿ ಅರ್ಧ ಬಾಡಿಗೆಗೆ ಹೋದ್ರೆ ಜೀವನ ಮಾಡೋದು ಹೇಗೆ ಎಂದು ಸಾಕಷ್ಟು ಮಂದಿ ಲೀಸ್ ಗೆ ಹೋಗ್ತಾರೆ. ಆದರೆ ಲೀಸ್ ಗೆ ನೀವ್ ಬ್ರೋಕರ್ ಗಳನ್ನು ನಂಬಿ ಹೋಗ್ತಿದ್ದೀರಾ!? ಹಾಗಿದ್ರೆ ಎಚ್ಚರ ವಹಿಸಿ ಜನರೇ. ಎಸ್, ಯಾರದ್ದೋ ಮನೆ ತೋರಿಸಿ ನಾನೇ ಓನರ್ ಎಂದು ಈ ಬ್ರೋಕರ್ ಗಳು ಯಾಮಾರಿಸ್ತಾರೆ. ಇದೀಗ ಅಂತದ್ದೇ ಪ್ರಕರಣ ಒಂದು ನಗರದಲ್ಲಿ ಬೆಳಕಿಗೆ ಬಂದಿದೆ. ಕೊಡಿಗೆ ಹಳ್ಳಿ ಸಮೀಪವಿರುವ ಶ್ರೀ ಸಾಯಿ ಬಾಲಾಜಿ ಮಿಡೋಸ್ ಅಪಾರ್ಟ್ಮೆಂಟ್ ನಲ್ಲಿ ಪದ್ಮಪ್ರಭಾಕರ್ , 2023 ರಲ್ಲಿ ರಘು ಎನ್ನುವವರಿಂದ ಪ್ಲಾಟ್ ನಂ 305 & 405 ನ್ನು 25 ಲಕ್ಷಕ್ಕೆ ಲೀಸ್ ಗೆ ಪಡೆದುಕೊಂಡಿದ್ರಂತೆ, 2024 ರ ಜನವರಿ ತಿಂಗಳಲ್ಲಿ ಸಾಯಿ ಪ್ರಶಾಂತ್ ಅನ್ನೋ ವ್ಯಕ್ತಿ ಬಂದು ಈ ಪ್ಲಾಟ್ ಓನರ್ ನಾನು ಮನೆಯನ್ನು ಖಾಲಿ ಮಾಡಿ ಎಂದು…
ಕಲಬುರಗಿ: ಕಾಂಗ್ರೆಸ್ ಮುಖಂಡ ಹೆಚ್ ಕೆ ಇ ಸೊಸೈಟಿ ಮಾಜಿ ಅಧ್ಯಕ್ಷನ ಮನೆ ಮೇಲೆ ಇಡಿ ದಾಳಿ ಮಾಡಲಾಗಿದೆ. ಕಲಬುರಗಿಯ ರಿಂಗ್ ರೋಡ್ ಬಳಿಯಿರೋ ಭೀಮಾಶಂಕರ್ ಬಿಲಗುಂದಿ ಕಾಂಗ್ರೆಸ್ ಮುಖಂಡ ಹೆಚ್ ಕೆ ಇ ಸೊಸೈಟಿ ಮಾಜಿ ಅಧ್ಯಕ್ಷನ ಮನೆ ಮೇಲೆ ನಾಲ್ವರು ಅಧಿಕಾರಿಗಳ ತಂಡದಿಂದ ಏಕ ಕಾಲಕ್ಕೆ ದಾಳಿ ಮಾಡಲಾಗಿದೆ. ಎಂಆರ್‌ಎಂಸಿ ಮೆಡಿಕಲ್ ಕಾಲೇಜ್ ಶಿಷ್ಯವೇತನ ಹಗರಣ ವಿಚಾರವಾಗಿ ಈ ದಾಳಿ ನಡೆದಿದೆ. 2018 ರಿಂದ 2024ರ ವರೆಗೆ ಎರಡು ಅವಧಿಗೆ ಭೀಮಾಶಂಕರ್ ಅಧ್ಯಕ್ಷರಾಗಿದ್ದರು. https://ainkannada.com/what-is-the-reason-for-buying-gold-like-akshay-trithiya-here-is-the-information/ 700 ಜನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಣ ಕೊಡದೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಸುಮಾರು 80 ಕೋಟಿ ರೂ.ಗೂ ಅಧಿಕ ಹಣ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಭೀಮಾಶಂಕರ್ ಮನೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಕೂಡಲ ಸಂಗಮ : ಮನ್ ಕಿ ಬಾತ್ ನಲ್ಲಿ ಚರ್ಚೆ ಇಲ್ಲ. ಏಕಮುಖವಾಗಿ ಹೇಳಿದ್ದನ್ನು ಕೇಳಬೇಕು ಎನ್ನುವ ಧೋರಣೆ ಇದೆ. ಇದು ಸರ್ವಾಧಿಕಾರಿ ಲಕ್ಷಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ “ಶರಣರ ವೈಭವ-2025” ನ್ನು ಉದ್ಘಾಟಿಸಿ, ಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಚರ್ಚೆ ಇರುತ್ತದೆ. ಸರ್ವಾಧಿಕಾರದಲ್ಲಿ ಚರ್ಚೆಗೆ ಅವಕಾಶ ಇಲ್ಲ. ಏಕಮುಖವಾಗಿ “ನಾನು ಹೇಳಿದ್ದನ್ನು ನೀವು ಕೇಳಿ” ಎನ್ನುವುದಷ್ಟೆ. “ಮನ್ ಕಿ ಬಾತ್” ರೀತಿ ನಾನು ಹೇಳ್ತೀನಿ, ನೀವು ಕೇಳಿ ಅನ್ನೋದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದರು. ವಚನ ಎಂದರೆ ಮಾತು. ಶರಣರ ವಚನ ಜನರ ಭಾಷೆಯಲ್ಲಿವೆ. ಆದ್ದರಿಂದ ವಚನ ಸಾಹಿತ್ಯ, ಜನರ ಸಾಹಿತ್ಯ ಆಗಿದೆ. ಹಿಂದೆ ಸಂಸ್ಕೃತ ಕಲಿತರೆ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸ ಉಯ್ಯುವ ಶಿಕ್ಷೆ ಇತ್ತು. ಇದರಿಂದಲೇ ಭಾರತೀಯ ಶೂದ್ರ ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಶಿಕ್ಷ ಣ…
ದಾವಣಗೆರೆ: ಇತ್ತೀಚಿಗಂತೂ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರರವರೆಗೂ ಪ್ರತಿಯೊಬ್ಬರೂ ಕೂಡಾ ಮೊಬೈಲ್ ಎನ್ನುವ ಮಾಯಾಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಹೌದು ಮೊಬೈಲ್ ಇಲ್ಲದೆ ಇಂದಿನ ಕಾಲದಲ್ಲಿ ಬದುಕುವುದು ಕಷ್ಟ ಎನ್ನುವಂತಾಗಿದೆ. ಇದೀಗ ಮೊಬೈಲ್ನಲ್ಲಿ ಮಾತನಾಡುತ್ತಾ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹರಿಹರ ರೈಲು ನಿಲ್ದಾಣದಲ್ಲಿ ನಡೆದಿದೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ವಿದ್ಯಾರ್ಥಿನಿ ಶ್ರಾವಣಿ (23) ಮೃತ ದುರ್ದೈವಿ. ಬಳ್ಳಾರಿ ಮೂಲದ ಶ್ರಾವಣಿ ಮೈಸೂರಿನಲ್ಲಿ ಎಂಬಿಎ ಓದುತ್ತಿದ್ದರು. ಶುಭ ಕಾರ್ಯಕ್ಕೆಂದು ಶ್ರಾವಣಿ ಹರಿಹರದಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ಮಂಗಳವಾರ ರಾತ್ರಿ ಮೊಬೈಲ್ನಲ್ಲಿ ಮಾತನಾಡುತ್ತ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿದೆ. ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ವಿಭಾಗದ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ಮದ್ಯದ ದರ ಏರಿಕೆ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ಇದೀಗ ಮತ್ತೊಮ್ಮೆ ಎಣ್ಣೆ ಪ್ರಿಯರಿಗೆ ಶಾಕ್ ಕೊಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಬಿಯರ್ ಮೇಲಿನ ತೆರಿಗೆ ಉತ್ಪಾದನಾ ವೆಚ್ಚದ ಶೇ 195 ರಷ್ಟಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 205 ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯದ ಹೊಸ ಕರಡು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಪ್ರೀಮಿಯಂ ಅಥವಾ ಇತರ ಬಿಯರ್ ಬ್ರಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲ್ಗೆ ಸುಮಾರು 10 ರೂಪಾಯಿಗಳಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಒಟ್ಟಾರೆಯಾಗಿ ತೆರಿಗೆ ಹೆಚ್ಚಳದ ನಂತರ ಬಿಯರ್ ದರ 10 ರೂ.ನಷ್ಟು ಹೆಚ್ಚಳವಾಗಬಹುದು. ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬಿಯರ್‌ಗಳಿಗೆ ಪ್ರತಿ ಬಾಟಲ್ಗೆ 5 ರೂಪಾಯಿ ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯು ಬ್ರ್ಯಾಂಡ್‌ನಿಂದ ಬ್ರ್ಯಾಂಡ್‌ಗೆ ವ್ಯತ್ಯಸ್ತವಾಗಿರಲಿದೆ. ಹಿಂದೆ, ಕರ್ನಾಟಕದಲ್ಲಿ ಬಿಯರ್ಗೆ ಎರಡು ಹಂತದ ತೆರಿಗೆ ವ್ಯವಸ್ಥೆ ಇತ್ತು. ಕೆಳ ಹಂತದ ಬ್ರಾಂಡ್‌ಗಳಿಗೆ ಲೀಟರ್‌ಗೆ 130 ರೂ.…
ಐಪಿಎಲ್ 2025 ರ ಪಂದ್ಯಗಳು ತೀವ್ರ ಪೈಪೋಟಿಯಲ್ಲಿ ನಡೆಯುತ್ತಿವೆ. ಒಟ್ಟು 8 ತಂಡಗಳು ಇನ್ನೂ ನಾಲ್ಕು ಪ್ಲೇಆಫ್ ಸ್ಥಾನಗಳಿಗಾಗಿ ಪೈಪೋಟಿ ನಡೆಸುತ್ತಿವೆ. ಪಂದ್ಯಾವಳಿ ಬಹುತೇಕ ಶೇ. 70 ರಷ್ಟು ಪೂರ್ಣಗೊಂಡಿದೆ. ಆದರೆ, ಒಂದೇ ಒಂದು ತಂಡವೂ ಇನ್ನೂ ಅಧಿಕೃತವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದಿಲ್ಲ ಎಂಬುದು ಸ್ಪರ್ಧೆಯ ಮಟ್ಟಕ್ಕೆ ಸಾಕ್ಷಿಯಾಗಿದೆ. ಆದರೆ, ಈ ಋತುವಿನ ಆರಂಭದಲ್ಲಿ ಸತತ ಸೋಲುಗಳಿಂದ ಬಳಲುತ್ತಿದ್ದ ಮುಂಬೈ ಇಂಡಿಯನ್ಸ್, ಸತತ ಗೆಲುವುಗಳೊಂದಿಗೆ ಮತ್ತೆ ಪುಟಿದೆದ್ದಿದ್ದು, ಪ್ರಸ್ತುತ 10 ಪಂದ್ಯಗಳಲ್ಲಿ 6 ಗೆಲುವು ಮತ್ತು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, ಇತರ ಎಲ್ಲಾ ತಂಡಗಳಿಗಿಂತ ಉತ್ತಮ ರನ್ ದರದೊಂದಿಗೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಈ ಸಂದರ್ಭದಲ್ಲಿ, ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ತಂಡದ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವು ಬೌಲರ್ ಅನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಮತ್ತು ಬಿಟ್ಟುಕೊಟ್ಟಿದೆ ಎಂದು ರಾಯುಡು ಹೇಳಿದರು, ಮತ್ತು ತಂಡದ ಸಭೆಯಲ್ಲಿ ಅವರ ಬಗ್ಗೆ ಚರ್ಚಿಸಿದಾಗಲೆಲ್ಲಾ, ಅವರನ್ನು…
ಕಾರವಾರ: ಪಹಲ್ಗಾಮ್ ದಾಳಿಯ ಬಳಿಕ ಜಮ್ಮು ಕಾಶ್ಮೀರದ ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕ್ ಸೇನೆಯನ್ನು ಗಡಿಯಲ್ಲಿ ಭಾರತದ ಯೋಧರು ಹಿಮ್ಮೆಟ್ಟಿಸುತ್ತಿದ್ದಾರೆ. ಭಾರತದ ಸೇನೆಯ ಈ ಸಮರಾಭ್ಯಾಸ ಪಾಕಿಸ್ತಾನಕ್ಕೆ ನಡುಕವನ್ನು ಉಂಟು ಮಾಡಿದೆ. ಇದರ ನಡುವೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಗೋಕರ್ಣ, ಮುರುಡೇಶ್ವರದಲ್ಲಿ ಪೊಲೀಸ್ ಹೈಅಲರ್ಟ್ ಆಗಿದ್ದಾರೆ. ಹೋಮ್ ಸ್ಟೇ ,ರೆಸಾರ್ಟ್‌ಗಳಲ್ಲಿ ಪ್ರವಾಸಿಗರ ಮಾಹಿತಿ ಕಲೆಹಾಕುತ್ತಿದ್ದಾರೆ. ಎಲ್ಲೆಡೆ ಪ್ರವಾಸಿ ತಾಣಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಜಿಲ್ಲೆಯ ಹೋಟೆಲ್, ಲಾಡ್ಜ್, ಹೋಮ್ ಸ್ಟೇಗಳಲ್ಲಿ ಕಡ್ಡಾಯ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸೂಚನೆ ನೀಡಿದ್ದಾರೆ. ಹೊರ ರಾಜ್ಯ, ವಿದೇಶಿ ಪ್ರವಾಸಿಗರ ಮಾಹಿತಿಯನ್ನೂ ಪೊಲೀಸರು ಕಲೆಹಾಕಿದ್ದಾರೆ. ಕರಾವಳಿ ಸಮುದ್ರ ಭಾಗದಲ್ಲಿ ಕರಾವಳಿ ಕಾವಲುಪಡೆ, ಭಾರತೀಯ ಕೋಸ್ಟ್ ಗಾರ್ಡ್‌ನಿಂದ ಕೂಮಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಮುದ್ರ ಮಾರ್ಗದ ಮೂಲಕ ಶತ್ರುಗಳು ಒಳ ನುಗ್ಗದಂತೆ ತಡೆಯಲು ಸಮುದ್ರ ಮಾರ್ಗದಲ್ಲಿ ಬೋಟುಗಳ ದಾಖಲೆ ತಪಾಸಣೆ ಮಾಡುತ್ತಿದ್ದಾರೆ.
ಹುಬ್ಬಳ್ಳಿ: ಧರ್ಮಾಧಾರಿತ ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ. ಜಗತ್ತಿನಲ್ಲಿ ಸಾವಿರಾರು ಧರ್ಮಗಳಿದ್ದು ಎಲ್ಲಾ ಧರ್ಮಗಳು ಕೂಡ ಪರಸ್ಪರ ಒಂದು ಧರ್ಮ ಮತ್ತೊಂದು ಧರ್ವಮವನ್ನು ಗೌರವಿಸಬೇಕು. ಆಚರಿಸಬೇಕು ಅಂತೇನಿಲ್ಲ. ಒಂದು ಧರ್ಮ ಮತ್ತೊಂದು ಧರ್ಮದ ಮೇಲೆ ದಾಳಿ ಮಾಡುವದು ಅತ್ಯಂತ ಅಮಾನುಷವಾದದ್ದು ಎಂದು ಮೂರುಸಾವಿರ ಮಠದ ಗುರುಸಿದ್ದರಾಜಯೋಗೇಂದ್ರ ಶ್ರೀಗಳು ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ದಾಳಿ ಮಾಡುವದು ಉಗ್ರವಾದವಾಗುತ್ತದೆ. ಉಗ್ರವಾದ ಇರುವಲ್ಲಿ ಅಲ್ಲಿ ಧರ್ಮಕ್ಕೆ ಅವಕಾಶವಿರುವದಿಲ್ಲ. ಆದ್ರೆ ದ್ವೇಷದಿಂದ ಕೆಲಸ ಮಾಡುವುದನ್ನು ಇಡೀ ಜಗತ್ತು ಖಂಡಿಸುತ್ತದೆ ಎಂದರು. https://ainkannada.com/what-is-the-reason-for-buying-gold-like-akshay-trithiya-here-is-the-information/ ಈಗಗಾಲೇ ಸಾಕಷ್ಟು ಸಹನೆ ಭಾರತ ತೋರಿದೆ. ಈಗ ಮತ್ತೆ ಧರ್ಮದ ಮೇಲೆ ದಾಳಿಮಾಡಿದ್ದು, ಯುದ್ದವನ್ನು ನಾವು ಬಯಸುವುದಿಲ್ಲ. ಯುದ್ದ ಆಗಲಿಕ್ಕೆ ಪ್ರಚೋದನೆ ಕೊಡುವ ಇಂತ ಸಂದರ್ಭಗಳು ಬರಬಾರದು ಎಂದರು. ಜಾತಿಗಣತಿ ಸರಿಯಾಗಿಲ್ಲ ಎಂಬ ಭಾವನೆ ಇದೆ. ಬಹು ಸಂಖ್ಯಾತರ ಅಸಧಾನ ಇದೆ. ಕರಾರುವಕ್ಕಾಗಿ ಜಾತಿಗಣತಿ ನಡೆಯಬೇಕು. ಇಲ್ಲದಿದ್ರೆ ಒಳ್ಳೆಯದಲ್ಲ ಎಂದರು.