ಹುಬ್ಬಳ್ಳಿ: ಕಾಯಕಕ್ಕೆ ಒತ್ತು ನೀಡಿದ ಬಸವಣ್ಣ ಹಾಗೂ ಸಮಾನತೆಗೆ ಒತ್ತು ನೀಡಿದವರು ಜಾತಿ,ಮತ, ಪಂಥ ಧರ್ಮ ಎನ್ನದೇ ಸಮಾನತೆಯ ಸಂದೇಶ ಸಾರಿದವರು ಅವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು . ನಗರದಲ್ಲಿಂದು ವಿಶ್ವ ಗುರು ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ಇಂದಿರಾ ಗಾಂಧಿ ಗಾಜಿನ ಮನೆ ಆವರಣದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು, ಬಸವಣ್ಣನವರ ತತ್ವಗಳು, ವಚನಗಳು ಸಮಾಜಕ್ಕೆ ದಾರಿದೀಪ ಆಗಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ನಮ್ಮ ಸರಕಾರ ವಿಶ್ವ ಗುರು ಬಸವೇಶ್ವರರು ನಾಡಿನ ಸಾಂಸ್ಕೃತಿಕ ರಾಯಭಾರಿ ಅಂತಾ ಘೋಷಣೆ ಮಾಡಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆತಾ ಇದ್ದೇವೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನಾಣ್ಣುಡಿಯಂತೆ ನಡೆತಾ ಇದ್ದೇವೆ ಎಂದರು. https://ainkannada.com/what-is-the-reason-for-buying-gold-like-akshay-trithiya-here-is-the-information/ ಕಾಯಕಕ್ಕೆ ದೈವತ್ವದ ಸ್ವರೂಪ ನೀಡಿದ ಬಸವಣ್ಣನವರು, ಪ್ರತಿಯೊಬ್ಬರು ಜೀನವದಲ್ಲಿ ಕಾಯಕ ಮಾಡಲೇ ಬೇಕು ಎಂದಿದ್ದಾರೆ. ಸತ್ಯಶುದ್ಧ ಕಾಯಕ ದಾಸೋಹಕ್ಕೆ ಪ್ರತಿಯೊಬ್ಬರು ಮಹತ್ವ…
Author: Author AIN
ಬೆಂಗಳೂರು: ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಕೋಶ, ಆಗ್ನೇಯ ಮಧ್ಯ ರೈಲ್ವೆ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಗ್ನೇಯ ಮಧ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಇವು ಅಪ್ರೆಂಟಿಸ್ ಹುದ್ದೆಗಳು ಆಗಿದ್ದರಿಂದ ಯಾವುದೇ ಪರೀಕ್ಷೆ ಇರುವುದಿಲ್ಲ. https://ainkannada.com/what-is-the-reason-for-buying-gold-like-akshay-trithiya-here-is-the-information/ ಕೇವಲ ಮೆರಿಟ್ ಲಿಸ್ಟ್ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಭಾರತದಲ್ಲಿ ರೈಲ್ವೆ ಇಲಾಖೆಯು ಅತ್ಯಂತ ದೊಡ್ಡ ಜಾಲ ಹೊಂದಿದೆ. ಅಭ್ಯರ್ಥಿಗಳು ಅಪ್ರೆಂಟಿಸ್ ಆಗಿ ಕೆಲಸ ಮಾಡಿದರೆ ಮುಂದೆ ನೀವು ದೇಶದಲ್ಲಿ ಎಲ್ಲಿಯೇ ಹೋದರು ರೈಲ್ವೆ ಇಲಾಖೆಯಲ್ಲಿ ಒಂದು ಅವಕಾಶ ಸುಲಭವಾಗಿ ಸಿಗಬಹುದು. ಒಟ್ಟು ಉದ್ಯೋಗಗಳು- 1007 ಅರ್ಜಿ ಶುಲ್ಕ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಅರ್ಹತೆ ಆಧಾರಿತವಾಗಿದೆ. ಹೀಗಾಗಿ ಯಾವುದೇ ವರ್ಗಕ್ಕೆ ಅರ್ಜಿ ಶುಲ್ಕ ಇರಲ್ಲ. ಶೈಕ್ಷಣಿಕ ಅರ್ಹತೆ- 10ನೇ ತರಗತಿಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕ ಇರಬೇಕು. ಜೊತೆಗೆ ITI ಪ್ರಮಾಣೀಕರಣ ಹೊಂದಿರಬೇಕು. ವಯೋಮಿತಿ- 15 ರಿಂದ 24 ವರ್ಷದ…
ಮಾಸ್ ಕಮರ್ಷಿಯಲ್ ಸಿನಿಮಾಗಳ ಮೂಲಕ ಫೇಮಸ್ ಆಗಿರುವ ಮಾಸ್ ಆಫ್ ಗಾಢ್ ಖ್ಯಾತಿಯ ನಂದಮೂರಿ ಬಾಲಕೃಷ್ಣ ರಜನಿಯ ಜೈಲರ್ 2ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಈಗ, ಬಾಲಯ್ಯ ಅಧಿಕೃತವಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ದೃಢಪಟ್ಟಿದೆ. ಶೀಘ್ರದಲ್ಲೇ ಚಿತ್ರತಂಡ ಈ ಬಗ್ಗೆ ಘೋಷಣೆ ಮಾಡಲಿದೆ. ಜೈಲರ್ ಮೊದಲ ಭಾಗದಲ್ಲಿ ಬಾಲಯ್ಯ ಅವರನ್ನು ಕರೆತರೋದಿಕ್ಕೆ ನಿರ್ದೇಶಕ ನೆಲ್ಸನ್ ತಯಾರಿ ನಡೆಸಿದ್ದರು. ಆದ್ರೆ ಅದ್ಯಾಕೋ ಬಾಲಯ್ಯಗಾಗಿ ರೂಪಿಸಿದ್ದ ಪಾತ್ರದ ಬಗ್ಗೆ ಸ್ವತಃ ನೆಲ್ಸನ್ ಅವರಿಗೆ ಇಷ್ಟವಾಗಿರಲಿಲ್ಲವಂತೆ, ಹೀಗಾಗಿ ಬಾಲಯ್ಯ ಅವರನ್ನು ಅಪ್ರೋಚ್ ಮಾಡಿರಲಿಲ್ಲವಂತೆ, ಇದೀಗ ಜೈಲರ್ 2 ಅಖಾಡಕ್ಕೆ ಬಾಲಯ್ಯ ಬಾಬು ಎಂಟ್ರಿ ಖಚಿತವಾಗಿದ್ದು, ಈ ವಿಷಯ ಫ್ಯಾನ್ಸ್ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. https://x.com/surbalutwt/status/1917488297510854752 ತೆಲುಗು ಚಿತ್ರರಂಗದಲ್ಲಿ ಬಾಲಯ್ಯಗೆ ಇರುವ ಕ್ರೇಜ್ ಬಗ್ಗೆ ಹೇಳೊದೇನು ಬೇಡ. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್2ನಲ್ಲಿ ಬಾಲಯ್ಯ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಇಬ್ಬರು ಸೂಪರ್ ಸ್ಟಾರ್ಸ್ ಜುಗಲ್ಬಂಧಿ ನೋಡೋದಿಕ್ಕೆ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.…
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ, ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್ ಬ್ಯಾನರ್‌ನಡಿ ಎಕ್ಕ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಪ್ರೊಡಕ್ಷನ್ಸ್ ನಡಿ ಹೊಸ ಸಿನಿಮಾ ಘೋಷಣೆಯಾಗಿದೆ. ಬಹಳ ದಿನಗಳಿಂದ ಕೇಳಿ ಬರ್ತಿದ್ದ ಯುವರಾಜ್‌ಕುಮಾರ್ ಹಾಗೂ ಸುಕ್ಕ ಸೂರಿ ಸಿನಿಮಾಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯದಿನವಾದ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್‌ಕುಮಾರ್ ಕ್ಲ್ಯಾಪ್ ಮಾಡಿದ್ದು, ಅಪ್ಪು ಅವರ ಮಗಳು ಧೃತಿ ಪುನೀತ್ ರಾಜ್ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ಫ್ಯಾಮಿಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ನಿರ್ದೇಶಕ ಸೂರಿ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು. ಸುಕ್ಕ ಸೂರಿ ರಾ ಸ್ಟೈಲ್ ಮೇಕಿಂಗ್‌ಗೆ ಫೇಮಸ್..ಹೀಗಾಗಿ ಯುವ ಅವರ…
ಇಸ್ಲಾಮಾಬಾದ್:ಪಹಲ್ಗಾಮ್ ದಾಳಿಯ ಬಳಿಕ ಜಮ್ಮು ಕಾಶ್ಮೀರದ ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕ್ ಸೇನೆಯನ್ನು ಗಡಿಯಲ್ಲಿ ಭಾರತದ ಯೋಧರು ಹಿಮ್ಮೆಟ್ಟಿಸುತ್ತಿದ್ದಾರೆ. ಭಾರತದ ಸೇನೆಯ ಈ ಸಮರಾಭ್ಯಾಸ ಪಾಕಿಸ್ತಾನಕ್ಕೆ ನಡುಕವನ್ನು ಉಂಟು ಮಾಡಿದೆ. ಇದರ ನಡುವೆ ಅಯೋಧ್ಯೆಯ ಹೊಸ ಬಾಬರಿ ಮಸೀದಿಗೆ ಮೊದಲ ಇಟ್ಟಿಗೆಯನ್ನು ಪಾಕಿಸ್ತಾನ ಸೇನಾ ಸೈನಿಕರು ಇಡುವ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮೊದಲ ಅಜಾನ್ ನೀಡುವ ಸಮಯ ದೂರವಿಲ್ಲ ಎಂದು ಹೇಳಿಕೆ ಮೂಲಕ ಪಾಕಿಸ್ತಾನ ಶಾಸಕಿ ಪಲ್ವಾಶಾ ಮೊಹಮ್ಮದ್ ಜೈ ಖಾನ್ ನಾಲಿಗೆ ಹರಿಬಿಟ್ಟಿದ್ದಾರೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಭಾರತದ ಯಾವುದೇ ದುಸ್ಸಾಹಸಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕು ಎಂದು ಪಾಕಿಸ್ತಾನಿ ಶಾಸಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಪಾಕಿಸ್ತಾನ ಸಂಸತ್ತಿನ ಮೇಲ್ಮನೆಯಲ್ಲಿ ಪಲ್ವಾಶಾ ಮತ್ತು ಇತರ ಸೆನೆಟರ್‌ಗಳ ಹೇಳಿಕೆಗಳು ಪರಿಸ್ಥಿತಿಯನ್ನು…
‘ಪಾರು’, ‘ವಧು’ ಮುಂತಾದ ಧಾರಾವಾಹಿ ಹಾಗೂ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸಿದ್ದ ಶ್ರೀಧರ್ ಹಾಸಿಗೆ ಹಿಡಿದಿದ್ದಾರೆ. ಗುರುತೇ ಸಿಗದಂತೆ ಬದಲಾಗಿರುವ ಶ್ರೀಧರ್ ಅವರು ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಕಮಲಿ ಖ್ಯಾತಿಯ ಅಂಕಿತಾ, ಸ್ವಪ್ನಾ ದೀಕ್ಷಿತ್ ಸೇರಿ ಹಲವಾರು ಕಿರುತೆರೆಯ ಕಲಾವಿದರು ಅವರ ಕಷ್ಟಕ್ಕೆ ಮಿಡಿದಿದ್ದಾರೆ. ಚೆನ್ನಾಗಿದ್ದ ಶ್ರೀಧರ್ ಅವರಿಗೆ ಧೀಡೀರ್ ಏನಾಯ್ತು ಅನ್ನೋದು ಗೊತ್ತಿಲ್ಲ. ತಮ್ಮ ಅನಾರೋಗ್ಯದ ಕುರಿತು ಶ್ರೀಧರ್ ಮಾತನಾಡಿರುವ ಆಡಿಯೋವೊಂದು ವೈರಲ್ ಆಗುತ್ತಿದೆ. ಶ್ರೀಧರ್ ಮಾತನಾಡಿರುವ ಆಡಿಯೋದಲ್ಲಿ “ನಾನು ಒಬ್ಬನೇ ಇರೋದು. ಅಕ್ಟೋಬರ್‌ನಲ್ಲೇ ಆರೋಗ್ಯ ಸಮಸ್ಯೆ ಶುರುವಾಯ್ತು. ನನಗೆ ವಿಟಮಿನ್, ಪ್ರೋಟಿನ್ ಎಲ್ಲಾ ಕಮ್ಮಿ ಆಗಿದೆ. ಮೊದಲು ಜ್ವರ ಬಂತು, ಆಮೇಲೆ ಕಫ ಆಗಿದೆ ಅಂತ ಡಾಕ್ಟರ್‌ಗೆ ತೋರಿಸಿದೆ, ಎಲ್ಲೂ ಸರಿ ಆಗಲಿಲ್ಲ. ಆಗ ಕಾಲೆಲ್ಲಾ ಊದಿಕೊಳ್ಳುತ್ತಿತ್ತು. ಅದರಲ್ಲೇ ನಾನು ವಧು, ಸಿಂಧೂ ಭೈರವಿ ಶೂಟಿಂಗ್‌ಗೆ ಹೋಗ್ತಿದ್ದೆ. ನಂತರ ನನಗೆ ತುಂಬಾ ಸುಸ್ತು ಆಗೋಕೆ ಶುರುವಾಯ್ತು. ನಾನೊಬ್ಬನೇ ಇರೋದ್ರಿಂದ ಯಾರೂ ಕೇರ್ ಮಾಡೋರು ಇರಲಿಲ್ಲ. ಯಾರಾದರೂ…
ಬೆಂಗಳೂರು: ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಗ್ಸಾಮಿನೇಷನ್ (CISCE) ಐಸಿಎಸ್‌ಇ ಮತ್ತು 10ನೇ ಮತ್ತು ಐಎಸ್ಸಿ 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳನ್ನು ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಇಂದು ಪ್ರಕಟಿಸಿದೆ. ಸದ್ಯ ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಟಾಪರ್‌ಗಳ ಹೆಸರನ್ನು ಪ್ರಕಟಿಸಲಿದೆ. https://ainkannada.com/what-is-the-reason-for-buying-gold-like-akshay-trithiya-here-is-the-information/ 12ನೇ ತರಗತಿಯ ಐಎಸ್‌ಸಿ ಪರೀಕ್ಷೆಗಳು ಫೆಬ್ರವರಿ 13 ರಿಂದ ಏಪ್ರಿಲ್ 5 ರವರೆಗೆ ನಡೆದರೆ, 10ನೇ ತರಗತಿಯ ಐಸಿಎಸ್‌ಇ ಪರೀಕ್ಷೆಗಳು ಫೆಬ್ರವರಿ 18 ರಿಂದ ಮಾರ್ಚ್ 27 ರವರೆಗೆ ನಡೆದಿದ್ದವು. ಈ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶ ನೋಡುವುದು ಹೇಗೆ? ಮೊದಲಿಗೆ ಅಧಿಕೃತ ವೆಬ್ಸೈಟ್ಗಳಾದ cisce.org ಅಥವಾ results.cisce.org ಗೆ ಭೇಟಿ ನೀಡಬೇಕು. ಐಸಿಎಸ್‌ಇ 10ನೇ ಫಲಿತಾಂಶ 2025 ಅಥವಾ ಐಎಸ್ಸಿ 12ನೇ ಫಲಿತಾಂಶ 2025 ಮೇಲೆ ಕ್ಲಿಕ್ ಮಾಡಬೇಕು. ಶಾಲೆ ವತಿಯಿಂದ ನೀಡಿರು ವಿಶಿಷ್ಟ ಐ.ಡಿ, ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಬೇಕು. ಬಳಿಕ ನಿಮ್ಮ ಫಲಿತಾಂಶ ಪರದೆಯ…
ಬೆಂಗಳೂರು: ಅಕ್ಷಯ ತೃತೀಯ ಹಿನ್ನಲೆ ಜ್ಯುವೆಲ್ಲರಿ ಶಾಪ್ ತೆರೆಯಲು ತೆರಳುತಿದ್ದ ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಶ್ರೀರಾಮ್ ಪುರದಿಂದ ನ್ಯೂಬಿಎಲ್ ಕಡೆಗೆ ತೆರಳುತ್ತಿದ್ದಾಗ ನಡೆದಿದೆ. ಹರ್ಷ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಧೈವಿಯಾಗಿದ್ದು, ಸಚಿನ್ ಗೆ ಗಾಯಗಳಾಗಿದೆ. ಮೃತ ಹಾಗೂ ಗಾಯಾಳು ಇಬ್ಬರು ಶ್ರೀರಾಮ ಪುರದ ನಿವಾಸಿಗಳಾಗಿದ್ದು, ಅಕ್ಷಯ ತೃತೀಯ ಹಿನ್ನಲೆ ನಿಗದಿತ ಸಮಯಕ್ಕಿಂತ ಬೇಗ ಶಾಪ್ ತೆರೆಯಲು ತೆರಳುವಾಗ ಅಪಘಾತ ಸಂಭವಿಸಿದೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಸ್ಥಳಕ್ಕೆ ಸದಾಶಿವನಗರ ಸಂಚಾರ ಪೋಲಿಸರು ಭೇಟಿ ಮಾಡಿದ್ದು, ಮರಣೋತ್ತರ ಪರೀಕ್ಷೆಗೆಂದು ಹರ್ಷ ಮೃತದೇಹ ಎಮ್ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಚಿನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.
ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಲಾಯರ್ ಜಗದೀಶ್ ಕೊನೆಗೂ ಬಿಡುಗಡೆ ಸಿಕ್ಕಿದೆ. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ದೇವಿಯ ಉತ್ಸವದ ವಿಚಾರವಾಗಿ ಲಾಯರ್ ಜಗದೀಶ್ ಹಾಗೂ ಸ್ಥಳೀಯರ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಕಾನೂನು ಬಾಹಿರವಾಗಿ ಫೈರ್ ಮಾಡಿದ ಆರೋಪದ ಮೇಲೆ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದರು. ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಆ ಗನ್ ಲೈಸೆನ್ಸ್ ಪಡೆದಿದ್ದರು. ಆದರೆ ಗಲಾಟೆ ವೇಳೆ ಗನ್ ಬಳಸಿದ್ದು, ಕಾನೂನು ಬಾಹಿರವಾಗಿ ಗುಂಡು ಹಾರಿಸಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಡಿಗೇಹಳ್ಳಿ ಪೊಲೀಸರು ಲಾಯರ್ ಜಗದೀಶ್, ಜಗದೀಶ್ ಪುತ್ರ, ಗನ್‌ಮ್ಯಾನ್ ಮತ್ತು ಕಾರ್ ಡ್ರೈವರ್ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. 93 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಲಾಯರ್ ಜಗದೀಶ್‌ಗೆ ಏಪ್ರಿಲ್ 29 ರಂದು ಜಾಮೀನು ಲಭಿಸಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಲಾಯರ್ ಜಗದೀಶ್, ʼನಮಸ್ತೆ ಕರ್ನಾಟಕ, ನಾನು ಕೆ.ಎನ್.ಜಗದೀಶ್ ಕುಮಾರ್, ಹಲವು ವರ್ಷಗಳಿಂದ ಭ್ರಷ್ಟಾಚಾರದ…
ಬೆಂಗಳೂರು: ಪಾಕಿಸ್ತಾನದ ಪರ ಯಾರೇ ಘೋಷಣೆ ಕೂಗಿದರೂ ಅದು ತಪ್ಪು ಮತ್ತು ದೇಶದ್ರೋಹ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಸವ ಜಯಂತಿ ಪ್ರಯುಕ್ತ ನಗರದಲ್ಲಿಂದು ಬಸವಣ್ಣನ ಪ್ರತಿಮೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆ ಅದು ತಪ್ಪು ಮತ್ತು ದೇಶದ್ರೋಹ, ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ ಎಂಬ ಆರೋಪದಲ್ಲಿ ಒಬ್ಬನನ್ನು ಕೊಲ್ಲಲಾಗಿದೆ, https://ainkannada.com/what-is-the-reason-for-buying-gold-like-akshay-trithiya-here-is-the-information/ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ವರದಿ ಬಂದ ಬಳಿಕ ನಿಜಾಂಶ ಗೊತ್ತಾಗುತ್ತದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಗಲಾಟೆ ಸಂಭವಿಸಿ, ಗುಂಪೊಂದು ಯುವಕನ ಮೇಲೆ ಹಲ್ಲೆಗೈದ ಪರಿಣಾಮ ಆತ ಸಾವನ್ನಪ್ಪಿದ (Mob lynching) ಘಟನೆ ಸಂಭವಿಸಿದೆ. ಪ್ರಕರಣ ಸಂಬಂಧ ಈವರೆಗೆ 20 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.