2024ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆ ಸ್ಪರ್ಧಿಸಿದ್ದಾರೆ. ಪತ್ನಿ ಗೀತಾ ಪರವಾಗಿ ನಟ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ಕುಮಾರ್ ಬಂಗಾರಪ್ಪ ವಿರುದ್ಧ ಶಿವರಾಜ್ ಮಾಸ್ ಡೈಲಾಗ್ ಹೊಡೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಗೀತಾ ಶಿವರಾಜ್‌ಕುಮಾರ್, ಶಿವಣ್ಣ ಹಾಗೂ ಮಧು ಬಂಗಾರಪ್ಪ ವಿರುದ್ಧ ಕುಮಾರ್ ಬಂಗಾರಪ್ಪ ಕಟು ಟೀಕೆಗಳನ್ನು ಮಾಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಗೀತಾ ಶಿವರಾಜ್‌ಕುಮಾರ್ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ ಎಂದು ಟೀಕಿಸಿದ್ದರು. ಅದಕ್ಕೆ ಶಿವಣ್ಣ ತಿರುಗೇಟು ನೀಡಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಪರ ಪ್ರಚಾರ ಮಾಡುವ ವೇಳೆ ಕುಮಾರ್ ಬಂಗಾರಪ್ಪ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಗೀತಾ ಶಿವರಾಜ್‌ಕುಮಾರ್, ಮಧು ಬಂಗಾರಪ್ಪ ಹಾಗೂ ದುನಿಯಾ ವಿಜಯ್ ಜೊತೆಯಲ್ಲಿದ್ದರು. ಈ ವೇಳೆ “ನೀವೇನು ಕಿಸಿಯುತ್ತೀರ ಅಂತ ಹೇಳ ಬೇಕೆ ಹೊರತು, ಇನ್ನೊಬ್ಬರು ಏನು ಕಿಸಿದರು ಅನ್ನೋದು ಬೇಕಾಗಿಲ್ಲ.” ಎಂದಿದ್ದಾರೆ. “ಕೆಲಸ ಮಾಡಬೇಕಾದರೆ ಒಳ್ಳೆಯ ಮನಸ್ಸು ಬೇಕು. ಎಲ್ಲಿ ಬೇಕಾದರೂ ಆಕ್ಟ್…
Author: Author AIN
ಸ್ಯಾಂಡಲ್‌ವುಡ್ ನಟ ದರ್ಶನ್ ಅವರಿಗೆ ನಟಿ ಸುಮಲತಾ ಪ್ರೀತಿಯಿಂದ ದುಬಾರಿ ಗಿಫ್ಟ್ ನೀಡಿದ್ದಾರೆ. ಅಂದ ಹಾಗೆ ಸುಮಲತಾ ಗೋಲ್ಡ್ ಹಾಗೂ ಡೈಮೆಂಡ್ ಇರುವ ಆಕರ್ಷಕ ವಾಚ್ ಕೊಟ್ಟಿದ್ದು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕೈಗೆ ತೊಟ್ಟು ಖುಷಿ ಪಟ್ಟಿದ್ದಾರೆ. ದರ್ಶನ್ ನಟನೆಯ ಕಾಟೇರ ಸಿನಿಮಾ 100 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ ದರ್ಶನ್ ಸುಮಲತಾ ನೀಡಿದ್ದ ಗಿಫ್ಟ್ ತೊಟ್ಟು ಬಂದಿದ್ದು ಇದು ಎಲ್ಲರ ಗಮನ ಸೆಳೆದಿದೆ. ದರ್ಶನ್ ಅವರನ್ನು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಮಲತಾ ಯಾವಾಗಲು ದೊಡ್ಡ ಮಗ ಎಂದೇ ಹೇಳುತ್ತಿರುತ್ತಾರೆ. ದರ್ಶನ್ ಕೂಡ ಸುಮಲತಾ ಅವರನ್ನ ನಮ್ಮ ಮದರ್ ಇಂಡಿಯಾ ಅಂತ ಸಾಕಷ್ಟು ಭಾರಿ ಹೇಳಿದ್ದಾರೆ.ಅದೇ ಪ್ರೀತಿಯಿಂದ ಮಗನಿಗೆ ಸುಮಲತಾ ಡೈಮೆಂಡ್ ವಾಚ್ ಕೊಟ್ಟಿದ್ದಾರೆ. ಅಂದಹಾಗೆ ಇದು ಅಂಬಿಯ ಫೇವರಿಟ್ ವಾಚ್ ಅನ್ನೋ ಸತ್ಯವೂ ರಿವೀಲ್ ಆಗಿದೆ. ದರ್ಶನ್ ಅಮ್ಮ ಕೊಟ್ಟ ಈ ಗಿಫ್ಟ್ ಅನ್ನ ಕಾಟೇರ ಸ್ಪೆಷಲ್ ಪ್ರೆಸ್ ಮೀಟ್‌ಗೂ…
ಏಪ್ರಿಲ್ ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಭಾರಿ ಮಳೆ ಸುರಿದ ಪರಿಣಾಮ್ ಜನರು ಪರದಾಡಿದರು. ಭಾರಿ ಮಳೆಯಿಂದಾಗಿ ವಿಮಾನ ಹಾರಟ ರದ್ದಾಗುವಂತಾಗಿದ್ದು. ಏಪ್ರಿಲ್ ನಲ್ಲಿ ಸುರಿದ ಮಳೆಯಿಂದ ಜನ ಎಚ್ಚೆತ್ತುಕೊಳ್ಳುವ ಮುನ್ನವೇ ಮತ್ತೊಂದು ಭಾರಿ ಮಳೆ ಅಪ್ಪಳಿಸಿದೆ. ಯುಎಇಯಲ್ಲಿ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುತ್ತಿರುವುದರಿಂದ ಗುರುವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಎಲ್ಲಾ ವಲಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಜನರಿಗೆ ಸೂಚಿಸಲಾಗಿದೆ. ಶಾಲೆಗಳು ಬಂದ್ ಆಗಿವೆ, ಜನರಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಕಂಪನಿಗಳನ್ನು ಕೇಳಲಾಗಿದೆ. ಉದ್ಯಾನವನಗಳು ಮತ್ತು ಕಡಲತೀರಗಳನ್ನು ಮುಚ್ಚಲಾಗಿದೆ. ಎಮಿರೇಟ್ನಲ್ಲಿ ಚಾಲ್ತಿಯಲ್ಲಿರುವ ಅಸ್ಥಿರ ಹವಾಮಾನ ಪರಿಸ್ಥಿತಿಗಳಿಂದಾಗಿ ದುಬೈ ಮೇ 2 ಮತ್ತು ಮೇ 3 ರಂದು ಸರ್ಕಾರಿ ನೌಕರರಿಗೆ ಮನೆಯಿಂದ ಕೆಲಸ ನೀಡುವುದಾಗಿ ಘೋಷಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಬುಧವಾರ, ಯುಎಇಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಬರುವ ಹವಾಮಾನ ಪರಿಸ್ಥಿತಿಗಳನ್ನು ನಿಭಾಯಿಸಲು ರಾಷ್ಟ್ರದ ಸನ್ನದ್ಧತೆಯನ್ನು ಪುನರುಚ್ಚರಿಸಿತು. ಕ್ರಮಗಳನ್ನು ಜಾರಿಗೆ ತರುವ ಮೂಲಕ…
ಬಾಲಿವುಡ್ ಬ್ಯೂಟಿ ನಟಿ ಕರೀನಾ ಕಪೂರ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಾರೆ ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ಕರೀನಾ ಕಪೂರ್ ಯಶ್ ಜೊತೆ ನಟಿಸೋ ಆಸೆ ವ್ಯಕ್ತ ಪಡಿಸಿದ್ದರು. ಅಂತೆಯೇ ನಟಿಗೆ ಯಶ್ ನಟನೆಯ ಟಾಕ್ಸಿಕ್ ಚಿತ್ರದಲ್ಲಿ ನಟಿಸುವ ಅವಕಾಶ ಕೂಡಾ ಸಿಕ್ಕಿತ್ತು. ಈ ಬಗ್ಗೆ ನಟಿ ಕೂಡ ತನ್ನ ಅನೇಕ ಸಂದರ್ಶನಗಳಲ್ಲಿ ಸುಳಿವು ನೀಡಿದ್ದರು. ಆದರೆ ಇದೀಗ ಬಂದಿರೋ ಮಾಹಿತಿ ಪ್ರಕಾರ ಕರೀನಾ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿಲ್ಲವಂತೆ. ‘ಟಾಕ್ಸಿಕ್’ ನಿರ್ಮಾಪಕರೊಂದಿಗೆ ಮಾತುಕತೆ ವರ್ಕೌಟ್ ಆಗಿಲ್ಲ ಎಂಬ ವರದಿಗಳು ಹರಿದಾಡುತ್ತಿದೆ. ಪಿಂಕ್ವಿಲ್ಲಾ ವರದಿಯ ಪ್ರಕಾರ ಕರೀನಾ ಮತ್ತು ಯಶ್ ಅವರ ಡೇಟ್ಸ್ ಹೊಂದಿಕೆಯಾಗಲಿಲ್ಲ ಎನ್ನಲಾಗುತ್ತಿದೆ. ನಟರ ಶೆಡ್ಯೂಲ್, ಡೇಟ್ಸ್ ಮ್ಯಾಚ್ ಆಗದೆ ಕಷ್ಟವಾಗಿದೆ. ಇದರಿಂದಾಗಿ ಕರೀನಾ ಅವರು ಪ್ಯಾನ್-ಇಂಡಿಯಾ ಸಿನಿಮಾ ಟಾಕ್ಸಿಕ್ನಿಂದ ಹೊರಬರುವಂತಾಗಿದೆ ಎನ್ನಲಾಗಿದೆ. ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರ ಸಹೋದರಿ ಪಾತ್ರದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಚಿತ್ರದ ಕಥಾಹಂದರವು ಒಡಹುಟ್ಟಿದವರ ನಡುವಿನ…
ಕೋವಿಡ್ 19 ಸಾಂಕ್ರಾಮಿಕ ರೋಗದ ನಂತರ ಸ್ಥಗಿತಗೊಂಡಿದ್ದ ಮಂಗಳೂರಿನಿಂದ ಲಕ್ಷದ್ವೀಪ ಪ್ರಯಾಣಿಕ ಹಡಗು ಪುನರಾರಂಭಗೊಂಡಿದೆ. ಇದರ ಅಂಗವಾಗಿ, ಲಕ್ಷದ್ವೀಪದಿಂದ ಮಂಗಳೂರಿನ ಹಳೆ ಬಂದರಿಗೆ ಮೊದಲ ಹೈಸ್ಪೀಡ್ ಪ್ರಯಾಣಿಕ ಹಡಗು ಎಂಎಸ್‌ವಿ ಪ್ಯಾರಾಲಿ ಮೇ 2ರಂದು ಗುರುವಾರ ಆಗಮಿಸಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣಿಕ ಹಡಗು ಸಂಚಾರ ಸ್ಥಗಿತಗೊಂಡಿತ್ತು. ಸೇವೆಯನ್ನು ಪುನರಾರಂಭಿಸುವ ಭರವಸೆ ಪ್ರವಾಸಿಗರಲ್ಲಿತ್ತು. ಲಕ್ಷದ್ವೀಪದಿಂದ ಹಳೆ ಬಂದರಿಗೆ 150 ಪ್ರಯಾಣಿಕರು, 8 ಕಾರ್ಮಿಕರು ಮತ್ತು 3 ಸಿಬ್ಬಂದಿ ಪ್ರಯಾಣಿಕ ಹಡಗಿನಲ್ಲಿ ಬಂದರು. ಮಾಜಿ ಶಾಸಕ ಜೆ.ಆರ್.ಲೋಬೊ ಬಂದರಿನಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದರು. ಈ ಹಡಗು ಶನಿವಾರ ಲಕ್ಷದ್ವೀಪಕ್ಕೆ ಮರಳಲಿದೆ. ಈ ಮೊದಲು ಲಕ್ಷದ್ವೀಪದಿಂದ ಹಳೆ ಬಂದರಿಗೆ ಹಡಗಿನ ಪ್ರಯಾಣಕ್ಕೆ 13 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು ಆದರೆ ಈಗ ಹೈ-ಸ್ಪೀಡ್ ಹಡಗು ಕೇವಲ 7 ಗಂಟೆ ತೆಗೆದುಕೊಳ್ಳುತ್ತದೆ. ಪ್ರಯಾಣದ ದರ 450 ರೂ. ಇದೆ. ಲಕ್ಷದ್ವೀಪದಿಂದ ನೇರವಾಗಿ ಮಂಗಳೂರಿಗೆ ಪ್ರಯಾಣಿಸಿದ್ದು ಸಂತಸ ನೀಡಿದೆ. ಹಡಗು ಇಲ್ಲದಿದ್ದರೆ ನಾವು ಕೊಚ್ಚಿಗೆ ಪ್ರಯಾಣಿಸಿ ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ತಲುಪಬೇಕಾಗಿತ್ತು.…
ಗಾಝಾ ಪಟ್ಟಿಯಲ್ಲಿ ಬಾಂಬ್ ದಾಳಿಯಿಂದ ನಾಶಗೊಂಡಿರುವ ಮನೆಗಳನ್ನು ಮರು ನಿರ್ಮಿಸುವ ಕಾರ್ಯ ಮುಂದಿನ ಶತಮಾನಕ್ಕೂ ವಿಸ್ತರಿಸಬಹುದು ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಿದೆ. ಗಾಝಾದಲ್ಲಿ ಈ ಹಿಂದಿನ ಘರ್ಷಣೆಗಳ ಪ್ರವೃತ್ತಿಗಳನ್ನು ಗಮನಿಸಿದರೆ, ಅಕ್ಟೋಬರ್ 7ರಿಂದ ಮುಂದುವರಿದಿರುವ ಯುದ್ಧದಲ್ಲಿ ಹಾನಿಗೊಂಡಿರುವ ಮನೆಗಳನ್ನು ಮರು ನಿರ್ಮಿಸಲು ಕನಿಷ್ಠ 80 ವರ್ಷ ಬೇಕಾಗಬಹುದು. ಗಾಝಾ ಪಟ್ಟಿಯ ಮೇಲೆ ಸುಮಾರು 7 ತಿಂಗಳಿಂದ ಮುಂದುವರಿದಿರುವ ಬಾಂಬ್ ದಾಳಿಯಿಂದಾಗಿ ಕೋಟ್ಯಂತರ ಡಾಲರ್ ನಷ್ಟ ಸಂಭವಿಸಿದ್ದು ಜನನಿಬಿಡ ಪ್ರದೇಶದ ಬಹುತೇಕ ಬಹುಮಹಡಿ ಕಟ್ಟಡಗಳು ನೆಲಸಮಗೊಂಡಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಸಶಸ್ತ್ರ ಹೋರಾಟಗಾರರು ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಪ್ರತೀಕಾರ ದಾಳಿಯಲ್ಲಿ ಸುಮಾರು 80,000 ಮನೆಗಳು ನಾಶಗೊಂಡಿರುವುದಾಗಿ ಫೆಲೆಸ್ತೀನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಪೂರ್ಣ ಹಾನಿಗೊಂಡಿರುವ ಎಲ್ಲಾ ಮನೆಗಳ ಮರುನಿರ್ಮಾಣಕ್ಕೆ ಸುಮಾರು 80 ವರ್ಷ ಬೇಕಾಗಬಹುದು. ಆದರೆ, ನಿರ್ಮಾಣ ಕಾಮಗಾರಿಗೆ ವಸ್ತುಗಳನ್ನು ಐದು ಪಟ್ಟು ಕ್ಷಿಪ್ರವಾಗಿ ಪೂರೈಸಿದರೆ 2040ರ ಒಳಗೆ…
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇತರ 20 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ದುಕ್ಕಿ ಜಿಲ್ಲೆಯಲ್ಲಿ ಕಲ್ಲಿದ್ದಲು ತುಂಬಿದ್ದ ಲಾರಿಯೊಂದು ನೆಲಬಾಂಬ್‍ಗೆ ಡಿಕ್ಕಿಯಾಗಿ ಮೊದಲ ಸ್ಫೋಟ ಸಂಭವಿಸಿದ್ದರೆ, ಸ್ಫೋಟದ ಸ್ಥಳದಲ್ಲಿ ಜನರು ಸೇರಿದಾಗ ದೂರ ನಿಯಂತ್ರಕ ಸಾಧನ ಬಳಸಿ ಎರಡನೇ ಸ್ಫೋಟ ನಡೆಸಿರುವುದಾಗಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ `ಕ್ಸಿನ್‍ಹುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ. ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಹಾಗೂ ಗಣಿ ಕೆಲಸಗಾರರು ಸಾವನ್ನಪ್ಪಿದವರಲ್ಲಿ ಮತ್ತು ಗಾಯಗೊಂಡವರಲ್ಲಿ ಸೇರಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಭದ್ರತಾ ಪಡೆಗಳು ಪ್ರದೇಶದಲ್ಲಿ ನಾಕಾಬಂದಿ ನಡೆಸಿದ್ದು ಶೋಧ ಕಾರ್ಯಾಚರಣೆ ಆರಂಭಗೊಂಡಿದೆ. ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಂದು ಕಾಲದಲ್ಲಿ ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಹಾಗೂ ಸ್ವರಾ ಭಾಸ್ಕರ್ ಒಟ್ಟೊಟ್ಟಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮೊದ ಮೊದಲು ಉತ್ತಮ ಬಾಂದವ್ಯ ಹೊಂದಿದ್ದ ನಟಿಯರು ಬರು ಬರುತ್ತಾ ಹಾವು ಮುಂಗುಸಿಗಳಂತಾದರು. ಆ ಕಿತ್ತಾಟ ಈಗಲೂ ಮುಂದುವರೆದಿದೆ. ಕಂಗನಾ ಈಗ ಲೋಕಸಭಾ ಕಣದಲ್ಲಿ ಇದ್ದಾರೆ. ಅದಕ್ಕೂ ಮುನ್ನ ಆಡಳಿತ ಪಕ್ಷದ ಪರವಾಗಿ ಸಾಕಷ್ಟು ಮಾತನಾಡಿದ್ದಾರೆ. ಈ ಕುರಿತಂತೆ ಸ್ವರಾ ಅಪಸ್ವರ ಎತ್ತಿದ್ದಾರೆ. ಸಂದರ್ಶನವೊಂದರಲ್ಲಿ ಸ್ವರಾ ಭಾಸ್ಕರ್ ತಮಗೂ ಹಾಗೂ ಕಂಗನಾಗೂ ಇರುವ ವ್ಯತ್ಯಾಸವನ್ನು ಹೇಳಿಕೊಂಡಿದ್ದಾರೆ. ಕಂಗನಾ ಎಂದಿಗೂ ಆಡಳಿತ ಸರಕಾರದ ವಿರೋಧವಾಗಿ ಮಾತನಾಡಲ್ಲ. ಅವರು ಯಾವಾಗಲೂ ಪರವಾಗಿಯೇ ಇರುತ್ತಾರೆ. ನಾನು ಹಾಗಲ್ಲ, ಜನರ ಪರವಾಗಿ ನಿಂತುಕೊಳ್ಳುತ್ತೇನೆ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ವರಾ ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡುತ್ತಲೆ ಇರುತ್ತಾರೆ. ಇತ್ತೀಚೆಗೆ ಪ್ರಜ್ವಲ್ ರೇವರಣ್ಣ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದ ನಟಿ, ಅಪರಾಧಿ ಮುಸ್ಲಿಂ ಆಗಿದ್ದರೆ ಮಾತ್ರ ಮಹಿಳಾ ರಕ್ಷಣೆ ಬಗ್ಗೆ ಜನರು ಮಾತನಾಡುತ್ತಾರೆ ಎಂದು ಹೇಳುವ ಮೂಲಕ ಪ್ರಜ್ವಲ್ ರೇವಣ್ಣ ಪ್ರಕರಣದ ವಿಶ್ಲೇಷಣೆ…
ಐ ಪಿ ಎಲ್ ಪಂದ್ಯದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ ನಟ ಕಿಚ್ಚ ಸುದೀಪ್ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದೆ. ಆ ಉಡುಗೊರೆ ನೀಡಿ ಖುಷಿಪಟ್ಟ ಕಿಚ್ಚ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಕಡುನೀಲಿ ಮತ್ತು ತಿಳಿಗೆಂಪು ಮಿಶ್ರಿತ ಬಣ್ಣದ ಜೆರ್ಸಿಯನ್ನು ರಾಯಸ್ಥಾನ್ ರಾಯಲ್ಸ್ ತಂಡ ಸುದೀಪ್ ಅವರಿಗೆ ನೀಡಿದೆ. ಜೆರ್ಸಿ ಹಿಂಭಾಗದಲ್ಲಿ ಸುದೀಪ್ ಎಂದು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಈ ಜೆರ್ಸಿ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ತುಂಬು ಹೃದಯದ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಮೊದಲಿನಿಂದಲೂ ಸುದೀಪ್ ಅವಿನಾಭಾವ ಸಂಬಂಧ ಹೊಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಈ ಹಿಂದೆಯೂ ಕಿಚ್ಚ ಸುದೀಪ್ ಅವರ 50ನೇ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿತ್ತು. ಸುದೀಪ್ ಅವರಿಗೆ ವಿಶೇಷ ಜೆರ್ಸಿಯೊಂದಿಗೆ ವಿಶ್ ಕಾರ್ಡ್ ಮಾಡಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು.ಕ್ರಿಕೆಟ್ ಎಂದರೆ ಸುದೀಪ್‌ಗೆ ತುಂಬಾ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಹಿಟ್ ಆಗುತ್ತಿದ್ದಂತೆ ಸೀಕ್ವೆಲ್ ಬರುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್, ನಾನು ಆ ರೀತಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಥಿಯೇಟರ್ ನಲ್ಲಿ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದ್ದು, ಓಟಿಟಿಯಲ್ಲೂ ಕಮಾಲ್ ಮಾಡ್ತಿದೆ. ಶತದಿನೋತ್ಸವ ಕೂಡ ಆಚರಿಸಿಕೊಂಡಿದೆ. ಹಾಗಾಗಿ ಕಾಟೇರ 2 ಸಿನಿಮಾ ಬರತ್ತಾ ಎನ್ನುವ ಕೆಟ್ಟ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಅದಕ್ಕೆ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ನಾನು ಗೆದ್ದಿತ್ತಿನ ಬಾಲ ಹಿಡಿಯೋದಿಲ್ಲ. ಹಾಗಾಗಿ ಕಾಟೇರ 2 ಬರಲ್ಲ ಎಂದಿದ್ದಾರೆ. ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಕಾಟೇರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿಕೊಟ್ಟ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಗೂ ದೊಡ್ಡ ಹೆಸರು ನೀಡಿತ್ತು. ಕಥೆ ಬರೆದ…