ಉಕ್ರೇನ್ ನ ಮತ್ತೆ ರಷ್ಯಾದ ಮೇಲೆ ದಾಳಿ ನಡೆಸಿದರೆ. ರಷ್ಯಾದ 8 ಪ್ರದೇಶಗಳಲ್ಲಿ ಡ್ರೋನ್ ದಾಳಿ ನಡೆಸಿದ್ದು, ಇದರಿಂದ ಮೂರು ವಿದ್ಯುತ್ ಕೇಂದ್ರಗಳು ಮತ್ತು ಇಂಧನ ಡಿಪೋಗಳು ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ಮೇಲೆ ಡ್ರೋನ್ ದಾಳಿ ನಡೆಸಿದ್ದು . ಉಕ್ರೇನ್ ತನ್ನ ವಿದ್ಯುತ್ ಸ್ಥಾವರ ಮತ್ತು ಇಂಧನ ಡಿಪೋವನ್ನು ನಾಶಪಡಿಸಲು 50 ಡ್ರೋನ್ಗಳನ್ನು ಕಳುಹಿಸಿದೆ ಎಂದು ರಷ್ಯಾದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ, ಆದರೆ ರಷ್ಯಾದ ರಕ್ಷಣಾ ಪಡೆಗಳು ಪಶ್ಚಿಮ ಬೆಲ್ಗೊರೊಡ್ ಪ್ರದೇಶದಲ್ಲಿ ಅವುಗಳನ್ನು ನಿರ್ಮೂಲನೆ ಮಾಡಿವೆ ಎನ್ನಲಾಗಿದೆ. ಶನಿವಾರ ನಡೆದ ಡ್ರೋನ್ ದಾಳಿಯಲ್ಲಿ ರಷ್ಯಾದ ಇಬ್ಬರು ಸಹ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬೆಲ್ಗೊರೊಡ್ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಮಾಹಿತಿ ನೀಡಿದ್ದಾರೆ. ಉಕ್ರೇನ್ ಡ್ರೋನ್ ದಾಳಿಯಲ್ಲಿ ಗರ್ಭಿಣಿ ಮಹಿಳೆ ಮತ್ತು ಆಕೆಯ ಮಗು ಸಾವನ್ನಪ್ಪಿದ್ದಾರೆ ಎಂದು ಅವರು ದೃಢಪಡಿಸಿದರು. ಶನಿವಾರ ನಡೆದ ಡ್ರೋನ್ ದಾಳಿಯ ಸಮಯದಲ್ಲಿ, ಈ ಡ್ರೋನ್ಗಳು ರಷ್ಯಾದ ಪಶ್ಚಿಮ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಹಾರುತ್ತಿದ್ದವು. ಇವುಗಳಲ್ಲಿ ಬ್ರಿಯಾನ್ಸ್ಕ್,…
Author: Author AIN
ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ತಂದೆ ಕೆಲವು ತಿಂಗಳ ಹಿಂದೆ ನಿಧನರಾಗಿದ್ದಾರೆ. ತಂದೆಯ ನಿಧನದ ನೋವಿನಿಂದ ಹೊರ ಬರುವ ಮೊದಲೇ ಪಂಕಜ್ ಕುಟುಂಬದಲ್ಲಿ ಮತ್ತೊಂದು ಅಘಾತ ಸಂಭವಿಸಿದೆ. ಭೀಕರ ಕಾರು ಅಪಘಾತದಲ್ಲಿ ಪಂಕಜ್ ತ್ರಿಪಾಠಿ ಅವರ ಭಾವ ಕೊನೆಯುಸಿರು ಎಳೆದಿದ್ದು, ಸಹೋದರಿ ಸ್ಥಿತಿ ಗಂಭೀರವಾಗಿದೆ. ಶನಿವಾರ (ಏಪ್ರಿಲ್ 20) ಸಂಜೆ ನಾಲ್ಕು ಗಂಟೆಗೆ ಜಾರ್ಖಂಡ್ ನಲ್ಲಿ ಪಂಕಜ್ ತ್ರಿಪಾಠಿ ಅವರ ಸಹೋದರಿ ಸರಿತಾ ತಿವಾರಿ ಹಾಗೂ ಅವರ ಪತಿ ರಾಜೇಶ್ ತಿವಾರಿ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಅತಿ ವೇಗವಾಗಿ ಚಲಾಯಿಸುತ್ತಿದ್ದರಿಂದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಅಪಘಾತದ ತೀವ್ರತೆಗೆ ರಾಜೇಶ್ ತಿವಾರಿ ನಿಧನರಾಗಿದ್ದಾರೆ. ಕಾರಿನ ಒಳಗಿದ್ದ ಸರಿತಾ ಅವರನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹೊರತೆಗೆದಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ಬಳಿಕ ಧನ್ಬಾದ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ರಾಜೇಶ್ ತಿವಾರಿ ಹಾಗೂ ಸರಿತಾ ತಿವಾರಿ ಅವರನ್ನು ದಾಖಲಿಸಲಾಯಿತು. ಅಷ್ಟು ಹೊತ್ತಿಗಾಗಲೇ ರಾಜೇಶ್ ತಿವಾರಿ…
ಲೋಕಸಭೆ ಚುನವಣೆಗೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಈ ಮಧ್ಯೆ ಸ್ಟಾರ್ ನಟ, ನಟಿಯರು ತಮ್ಮ ನೆಚ್ಚಿನ ಅಭ್ಯರ್ಥಿ ಪರ ಪ್ರಚಾರ ಮಾಡಲು ರಸ್ತೆಗೆ ಇಳಿದಿದ್ದಾರೆ. ಇದೀಗ ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಡಾ. ಮಂಜುನಾಥ್ ಪರ ಪ್ರಚಾರ ನಡೆಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಾ. ಮಂಜುನಾಥ್ ಪರ ಪವನ್ ಕಲ್ಯಾಣ್ ಪ್ರಚಾರಕ್ಕೆ ಸಾಥ್ ನೀಡುತ್ತಿದ್ದಾರೆ. ಬೀದರಗುಪ್ಪೆಯಿಂದ ಹೆಬ್ಬಗೋಡಿ ತನಕ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ಬೃಹತ್ ಬೈಕ್ ರ‍್ಯಾಲಿ ಉದ್ದೇಶಿಸಿ ಹೆಬ್ಬಗೋಡಿಯಲ್ಲಿ ಪವನ್ ಕಲ್ಯಾಣ್ ಮಾತನಾಡಲಿದ್ದಾರೆ. ಈ ವೇಳೆ, ನೂರಾರು ಸಂಖ್ಯೆಯಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಸದ್ಯ ಸಿನಿಮಾಗಳಿಗೆ ಬ್ರೇಕ್ ಹಾಕಿ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಲೋಕಸಭೆ ಎಲೆಕ್ಷನ್ ಬಳಿಕ ಪವನ್ ಕಲ್ಯಾಣ್ ಮತ್ತೆ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಬಾಲಿವುಡ್ ನ ಖ್ಯಾತ ದಂಪತಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ತಮ್ಮ 17ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಜೋಡಿ ಹಕ್ಕಿಗಳು ಏಪ್ರಿಲ್ 20ರಂದು ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು ಸಂಭ್ರಮದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಷೇಕ್ ಹಾಗೂ ಐಶ್ವರ್ಯಾ ದಂಪತಿಗೆ ಮಗಳು ಆರಾಧ್ಯ ಸಾಥ್ ನೀಡಿದ್ದಾರೆ. ಈ ಫೋಟೋ ನೋಡಿದ ಬಳಿಕ ಡಿವೋರ್ಸ್ ವದಂತಿಗೆ ಬ್ರೇಕ್ ಬಿದ್ದಿದೆ. ಕೆಲ ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸಿದ್ದರು. ಆದರೆ ನಂತರದ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಜೊತೆಯಾಗಿ ಕೆಲವು ಕಾರ್ಯಕ್ರಮಗಳಿಗೆ ಹಾಜರಾದಾಗ ಗಾಸಿಪ್ಗಳಿಗೆ ಪೂರ್ಣವಿರಾಮ ಬಿತ್ತು. ಬಾಲಿವುಡ್ನಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸಖತ್ ಬೇಡಿಕೆ ಇದೆ. ತಮ್ಮದೇ ರೀತಿಯಲ್ಲಿ ಇಬ್ಬರೂ ಗುರುತಿಸಿಕೊಂಡಿದ್ದಾರೆ. ಅತ್ತ ಅಮಿತಾಭ್ ಬಚ್ಚನ್ ಕೂಡ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ…
ನೇಹಾ ಹತ್ಯೆ ಪ್ರಕರಣ ಸಂಬಂಧಿಸಿ ಈಗಾಗಲೇ ಸೋಷಿಯಲ್ ಮೀಡಿಯಾಗಳ ಮೂಲಕ ಸ್ಟಾಂಡಲ್ ವುಡ್ ಸ್ಟಾರ್ ಧ್ವನಿ ಎತ್ತಿದ್ದಾರೆ. ಘಟನೆಯ ಕುರಿತು ಬಿಗ್ಬಾಸ್ ಖ್ಯಾತಿಯ ನಟ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ. ಈಗ ನಟ ಪ್ರಥಮ್ ಇಂದು ನೇಹಾ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಕಣ್ಣು ಮುಚ್ಚಿದರೂ ನಿಮ್ಮ ಸಾವು ಕಾಡುತ್ತಿದೆ.ಹುಬ್ಬಳ್ಳಿಯ #ನೇಹಾಹಿರೇಮಠ್ ರವರ ಕೊಂದ ಭಯೋತ್ಪಾದಕನಿಗೆ ಗಲ್ಲು ಶಿಕ್ಷೆಯಾಗಬೇಕು.ನಾಳೆ ಹುಬ್ಬಳ್ಳಿಯ ನೇಹಾ ರವರ ಮನೆಗೆ ಭೇಟಿ ನೀಡಲಿದ್ದೇನೆ. justicefornehahiremat ಎಂದು ಫೇಸ್ಬುಕ್ನಲ್ಲಿ ಪ್ರಥಮ್ ಬರೆದುಕೊಂಡಿದ್ದಾರೆ. ಹಲವು ಗಣ್ಯರು ಹತ್ತು ಗಂಟೆಗೆ ಬಿಡ್ನಾಳದಲ್ಲಿರುವ ನೇಹಾ ಮನೆಗೆ ಆಗಮಿಸಲಿದ್ದಾರೆ. ಒಳ್ಳೆಯ ಹುಡುಗ ಪ್ರಥಮ್ ಬರಲಿದ್ದು, 11:30 ಕ್ಕೆ ಹುಬ್ಬಳ್ಳಿ-ಧಾರವಾಡ ಅಂಜುಮನ್ ಸಂಸ್ಥೆ ಮುಖ್ಯಸ್ಥರು ಭೇಟಿ ನೀಡಿ ನೇಹಾ ತಂದೆ ನಿರಂಜನ ಹಿರೇಮಠಗೆ ಸಾಂತ್ವನ ಹೇಳಲಿದ್ದಾರೆ. ರಾಜ್ಯಾದ್ಯಂತ ನೇಹಾ ಹಿರೇಮಠ ಸಾವಿಗೆ ನ್ಯಾಯ ಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕೂಡಾ ನೇಹಾ ಪರ ಧ್ವನಿ ಎತ್ತಿದ್ದು ಸಂತ್ರಸ್ತೆ ಕುಟುಂಬಕ್ಕೆ ಆದಷ್ಟು ಬೇಗ ನ್ಯಾಯ…
ತಮಿಳುನಾಡಿನ ಲೋಕಸಭೆ ಚುನಾವಣಾ ಕಣ ರಂಗೇರಿದೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಸಾಧಿಸಿದ್ದಾರೆ. ಈ ಮಧ್ಯೆ ವೋಟ್ ಮಾಡಲು ಬಂದ ತಮಿಳು ವೆಟ್ರಿ ಕಳಗಂ ನಾಯಕ ಮತ್ತು ನಟ ದಳಪತಿ ವಿಜಯ್ ವಿರುದ್ಧ ದೂರು ದಾಖಲಾಗಿದೆ. ಸುಮಾರು 200 ಜನರೊಂದಿಗೆ ವಿಜಯ್ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಚುನಾವಣಾ ನಿಯಮಗಳನ್ನು ಉಲ್ಲಂಘಿಸಿ ಜನರನ್ನು ಮತಗಟ್ಟೆಗೆ ಕರೆತರಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸಿನಿಮಾದ ಶೂಟಿಂಗ್ ಕಾರಣದಿಂದ ರಷ್ಯಾದಲ್ಲಿ ಬೀಡು ಬಿಟ್ಟಿದ್ದ ವಿಜಯ್ ಮತದಾನಕ್ಕಾಗಿ ತಮಿಳುನಾಡಿಗೆ ಆಗಿಸಿದ್ದಾರೆ. ವೋಟ್ ಮಾಡಲು ವಿಜಯ್ ಬರುತ್ತಾರೆ ಎಂದು ಅಭಿಮಾನಿಗಳು ಬೆಳಗ್ಗೆಯಿಂದಲೇ ವಿಜಯಾ ನಿವಾಸದ ಎದುರು ಜಮಾಯಿಸಿದ್ದರು. ವಿಜಯ್ ಮಧ್ಯಾಹ್ನ ಮತ ಚಲಾಯಿಸಲು ಬಂದಿದ್ದರು. ತಮ್ಮ ಮನೆಯಿಂದ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಮತಗಟ್ಟೆಗೆ ಆಗಮಿಸಿದರು. ಜನ ಕಿಕ್ಕಿರಿದು ತುಂಬಿದ್ದ ಕಾರಣ ವಿಜಯ್ ತಡವಾಗಿ ಮತಗಟ್ಟೆ ತಲುಪಿದ್ರು. ತಳ್ಳಾಟ ನೂಕಾಟದಿಂದ ವಿಜಯಾ ಅವರ…
ಬಿಗ್ ಬಾಸ್ ಶೋನಲ್ಲಿ ಗೆದ್ದ ಹಣದಲ್ಲಿ ಅರ್ಧವೂ ಕೈ ಸೇರಿಲ್ಲ ಎಂದು ಈ ಹಿಂದೆ ಪರಾಠಿ ಭಾಷೆಯ ಬಿಗ್ ಬಾಸ್ ವಿನ್ನರ್ ಗಳು ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ಕಾರ್ತಿಕ್ ಮಹೇಶ್ ಗೆ ಎಷ್ಟು ಹಣ ಬಂದಿದೆ ಎಂಬ ಚರ್ಚೆ ಶುರುವಾಗಿದೆ. ಇದೀಗ ತಮ್ಮಗೆ ಬಂದ ಹಣದ ಬಗ್ಗೆ ಕಾರ್ತಿಕ್ ಮಹೇಶ್ ಪ್ರತಿಕ್ರಿಯೆ ನೀಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ಗೆ 50 ಲಕ್ಷ ರೂಪಾಯಿ ಜೊತೆಗೆ ಒಂದು ಎಲೆಕ್ಟ್ರಿಕ್ ಬೈಕ್, ಕಾರು ಕೊಡುವುದಾಗಿ ಬಿಗ್ ಬಾಸ್ ಕಡೆಯಿಂದ ಘೋಷಣೆ ಆಗಿತ್ತು. ಈಗಾಗಲೇ ಬೈಕ್ ಅವರ ಮನೆ ಸೇರಿದೆ. ಮಾರುತಿ ಸುಜುಕಿ ಬ್ರೇಜಾ ಕಾರು ಅವರಿಗೆ ಸಿಗಬೇಕಿತ್ತು. ಜೊತೆಗೆ ಎಷ್ಟು ಹಣ ಸಿಕ್ಕಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಕಾರ್ತಿಕ್ ಮಹೇಶ್ ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಗೆಲುವು ಸಾಧಿಸಿದ್ದಾರೆ. ಬಿಗ್ ಬಾಸ್ ಗೆದ್ದ ಬಳಿಕ ಮಹೇಶ್ ಲಕ್ ಬದಲಾಗಿದೆ. ಸಾಕಷ್ಟು ಸಿನಿಮಾಗಳಿಂದ ಆಫರ್ ಗಳು…
ಕಳೆದ ಕೆಲ ದಿನಗಳಿಂದ ಯುಎಇನಲ್ಲಿ ಭೀಕರ ಮಳೆಯಾಗುತ್ತಿದೆ. ಇದರಿಂದ ಜನ ಕಂಗಲಾಗಿದ್ದು ಶಾರ್ಜಾ ಮತ್ತು ದುಬೈನ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ಜನರಿಗೆ ಊಟ, ನೀರು ಔಷಧಿಯ ಸಮಸ್ಯೆ ಎದುರಾಗಿರಾಗಿದೆ. ಇದರನ್ನು ಮನಗಂಡು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ನೆರವಿನ ಕಾರ್ಯಾಚರಣೆ ಕೈಗೊಂಡಿದೆ. ದುಬೈ ಇಂಡಿಯನ್ ಕಾನ್ಸುಲೇಟ್ ಅನುಮತಿ ಮತ್ತು ಸಹಯೋಗದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ಕಳೆದ ಮೂರ ದಿನಗಳಿಂದ ರಕ್ಷಣಾ ಬೋಟ್ ನಲ್ಲಿ ಊಟ, ನೀರು, ರೇಷನ್ ಗಳನ್ನು ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಮಾತ್ರವಲ್ಲದೆ ನೂರಾರು ವಿದೇಶಿಯರಿಗೂ ಭೇದವಿಲ್ಲದೇ ನೆರವಿನ ಹಸ್ತನೀಡಿದೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಮುನ್ಸಿಪಾಲಿಟಿ ವಾಹನ ಚಾಲಕರಿಗೂ ಸ್ಥಳದಲ್ಲೇ ಊಟದ ವ್ಯವಸ್ಥೆ ಕಲ್ಪಿಸಿದೆ. ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನ ಹಿದಾಯತ್ ಅಡ್ಡೂರು, ಕೆಎನ್ಆರೈ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಒಕ್ಕಲಿಗರ ಸಂಘ ದುಬೈ ಅಧ್ಯಕ್ಷ ಕಿರಣ್ ಗೌಡ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್, ದುಬೈ…
ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಈ ಬೆನ್ನಲ್ಲೇ ಕನ್ನಡ ಚಿತ್ರರಂಗ ಕೂಡ ವಿದ್ಯಾರ್ಥಿನಿ ಸಾವಿಗೆ ಮರುಗಿದ್ದಾರೆ. ಈಗಾಗ್ಲೆ ಸಾಕಷ್ಟು ನಟಿ, ನಟಿಯರು ಘಟನೆ ಕುರಿತು ಪ್ರತಿಕ್ರಿಯಿಸಿದ್ದು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಯಾಕ್ಟ್ ಮಾಡಿದ್ದಾರೆ. ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ 23 ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಸಾಮಾಜಿಕ ಜಾಲಾ ತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ನಟ ಶಿವರಾಜ್ ಕುಮಾರ್ ಎಕ್ಸ್ ಖಾತೆಯಲ್ಲಿ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದು, ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ-ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ…
ಮಾರುಕಟ್ಟೆಗೆ ದಿನಕ್ಕೊಂದು ಹೊಸ ರೀತಿಯ, ಹೊಸ ಮಾಡೆಲ್ ನ ಮೊಬೈಲ್ ಫೋನ್ ಗಳು ಆಗಮಿಸುತ್ತಿರುತ್ತವೆ. ಇದರಿಂದ ಗ್ರಾಹಕರು ಯಾವ ಫೋನ್ ಕೊಳ್ಳೋದು ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಅದೇ ಕಾರಣಕ್ಕೆ ಮೊಬೈಲ್ ಕಂಪೆನಿಗಳು ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಅಂತೆಯೇ ಇದೀಗ ಫ್ಲಿಪ್‌ಕಾರ್ಟ್ ತಾಣವು ಒಪ್ಪೋ ಸಂಸ್ಥೆಯ ಜನಪ್ರಿಯ ಫೋನ್‌ಗಳಲ್ಲಿ ಒಂದಾದ ಒಪ್ಪೋ A78 ಫೋನಿಗೆ ಸಖತ್ ರಿಯಾಯಿತಿ ನೀಡಿದೆ. ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್ ನಲ್ಲಿ ಒಪ್ಪೋ A78 ಫೋನ್ ಶೇ. 32% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಫೋನಿನ 8 GB RAM + 128 GB ಸ್ಟೋರೇಜ್ ವೇರಿಯಂಟ್ 15,499ರೂ. ಗಳ ಕೊಡುಗೆಯ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಇತರೆ ಆಫರ್‌ಗಳನ್ನು ಪಡೆದುಕೊಂಡರೆ, ಈ ಫೋನ್ ಇನ್ನಷ್ಟು ಗ್ರಾಹಕಸ್ನೇಹಿ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಫೋನ್ ಸ್ಯಾಮ್ ಡ್ರಾಗನ್ 680 ಪ್ರೊಸೆಸರ್ ಅನ್ನು ಪಡೆದಿದ್ದು, 5,000 mAh ಸಾಮರ್ಥ್ಯದ…