ಪ್ರತಿಷ್ಠಿತ 2024ನೇ ವರ್ಷದ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ. ಪ್ರತಿ ಬಾರಿಯೂ ಆಸ್ಕರ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತದೆ. ಈ ಬಾರಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಸದ್ದು ಮಾಡುತ್ತಿರುವುದು ಜಾನ್ ಸೀನಾ ಅವರ ಕಾರಣಕ್ಕೆ. ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ಜಾನ್ ಸೀನಾ ಸಂಪೂರ್ಣ ಬೆತ್ತಲಾಗಿ ಆಗಮಿಸಿದ್ದರು. ಗುಪ್ತಾಂಗಕ್ಕೆ ಮಾತ್ರ ಒಂದು ಪ್ಲೇಟ್ ರೀತಿಯ ವಸ್ತುವನ್ನು ಹಿಡಿದುಕೊಂಡಿದ್ದರು. ಅವರು ಈ ರೀತಿ ವೇದಿಕೆ ಏರಿದ್ದು ‘ಅತ್ಯುತ್ತಮ ಕಾಸ್ಟ್ಯೂಮ್ ಅವಾರ್ಡ್’ ಪ್ರೆಸೆಂಟ್ ಮಾಡಲು. ಆ್ಯಂಕರ್ ಜಿಮ್ಮಿ ಕಿಮ್ಮೆಲ್ ಅವರು ಈ ರೀತಿ ಮಾಡುವಂತೆ ಜಾನ್ ಸೀನಾಗೆ ಸ್ಫೂರ್ತಿ ನೀಡಿದ್ದರು ಎನ್ನಲಾಗಿದೆ. ಸದ್ಯ ಈ ಫೋಟೋ ವೈರಲ್ ಆಗಿದೆ. ‘ಪೂರ್ ಥಿಂಗ್ಸ್’ ಸಿನಿಮಾಗೆ ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಅವಾರ್ಡ್ ಸಿಕ್ಕಿದೆ. ಈ ಸಿನಿಮಾ ಜೊತೆ ‘ಆಪನ್ ಹೈಮರ್ ಕೂಡ ಹಲವು ಅವಾರ್ಡ್ ಗೆಲ್ಲುವ ನಿರೀಕ್ಷೆ ಇದೆ. ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್…
Author: Author AIN
ಪ್ರತಿಷ್ಠಿತ 2024ನೇ ವರ್ಷದ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ. ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿ ಓಪನ್ ಹೈಮರ್ ಸಿನಿಮಾಗಾಗಿ ಸಿಲಿಯನ್ ಮರ್ಫಿ ಪಾಲಾಗಿದ್ದರೆ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪೂರ್ ಥಿಂಗ್ಸ್ ಸಿನಿಮಾಗಾಗಿ ಎಮ್ಮಾ ಸ್ಟೋನ್ ಮುಡಿಗೇರಿಸಿಕೊಂಡಿದ್ದಾರೆ. ಅತ್ಯುತ್ತಮ ಚಿತ್ರ ಓಪನ್ ಹೈಮರ್, ಅತ್ಯುತ್ತಮ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಓಪನ್ ಹೈಮರ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಓಪನ್ ಹೈಮರ್ ಚಿತ್ರದ ನಟನೆಗಾಗಿ ರಾಬರ್ಟ್ ಡೌನಿ ಜ್ಯೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಂದಿದ್ದರೆ, ದಿ ಹೋಲ್ಡೋವರ್ಸ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಡೇವಿನ್ ಜಾಯ್ ರಾಂಡೋಲ್ಫ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಬಂದಿದ್ದವು. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಬಂದಿದ್ದರೆ, ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರವೂ ಆಸ್ಕರ್ ಪ್ರಶಸ್ತಿ ಪಡೆದಿತ್ತು. ಈ ಬಾರಿ ಭಾರತದ ಯಾವುದೇ ಚಿತ್ರಕ್ಕೆ ಅಥವಾ ಡಾಕ್ಯುಮೆಂಟರಿಗೆ ಪ್ರಶಸ್ತಿ…
ಕ್ರಿಕೆಟ್ ಆಟದ ವೇಳೆ ತೆಲುಗು ನಟರಾದ ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಗಲಾಟೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ವೇಳೆ ಪ್ರಭಾಸ್ ಅಭಿಮಾನಿಯೊಬ್ಬನ ಮೇಲೆ ಅಲ್ಲು ಅರ್ಜುನ್ ಫ್ಯಾನ್ಸ್ ಹಿಗ್ಗಾಮುಗ್ಗ ತಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಜೈ ಅಲ್ಲು ಅರ್ಜುನ್ ಅಂತ ಹೇಳು ಎನ್ನುವ ಮಾತುಗಳು ಪದೇ ಪದೇ ಕೇಳಿಸಿದೆ. ಪ್ರಭಾಸ್ ಅಭಿಮಾನಿ ಹೇಳದೇ ಇದ್ದಾಗ ರಕ್ತ ಬರುವಂತೆ ಹೊಡೆಯಲಾಗಿದೆ. ಆ ಹುಡುಗನ ಬಟ್ಟೆ ಹರಿದಿದೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಲು ಸೋಷಿಯಲ್ ಮೀಡಿಯಾದಲ್ಲಿ ವಿನಂತಿಸಿದ್ದಾರೆ. ಈ ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗಿದೆ. ಫ್ಯಾನ್ಸ್ ವಾರ್ ಇಂದು ನಿನ್ನೆಯದಲ್ಲ. ಸಾಕಷ್ಟು ವರ್ಷಗಳಿಂದಲೂ ಈ ರೀತಿಯ ಘಟನೆಗಳು ನಡೆಯುತ್ತಲೆ ಇದೆ.
ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಗಿ ತೆರಳಿದ್ದ ವಿದ್ಯಾರ್ಥಿನಿ ದುರಂತ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗನ್ನವರಂ ಯುವ ವೈದ್ಯೆ ಆಸ್ಟ್ರೇಲಿಯಾದಲ್ಲಿ ದುರಂತ ಸಾವಿಗೀಡಾಗಿದ್ದು ಮೃತಳನ್ನು ಉಜ್ವಲಾ ಎಂದು ಗುರುತಿಸಲಾಗಿದೆ. ಉಜ್ವಲಾ ಸಾವಿಗೀಡಾಗಿರುವುದಾಗಿ ಆಕೆಯ ಫ್ರೆಂಡ್ಸ್ ಕುಟುಂಬಕ್ಕೆ ಮಾಹಿತಿ ನೀಡಿದ್ದು, ವೈದ್ಯೆಯಾಗಿ ಉನ್ನತ ಸ್ಥಾನಕ್ಕೇರಬೇಕು ಅಂದುಕೊಂಡಿದ್ದ ಮಗಳ ಸಾವು ಹೆತ್ತವರನ್ನು ಬೆಚ್ಚಿ ಬೀಳಿಸಿದೆ. ಉಜ್ವಲಾ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನ ಬಾಂಡ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮುಗಿಸಿ, ರಾಯಲ್ ಬ್ರಿಸ್ಬೇನ್ನ ಮಹಿಳಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ದಿನಗಳ ಹಿಂದೆ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಹೋಗಿದ್ದ ಏಕಾೇಏಕಿ ನಿಧನರಾಗಿದ್ದಾರೆ. ಮೃತ ಉಜ್ವಲಾ ಅವರ ಪಾರ್ಥಿವ ಶರೀರವನ್ನು ಕೃಷ್ಣಾ ಜಿಲ್ಲೆಯ ಅವರ ಸ್ವಗ್ರಾಮಕ್ಕೆ ಸ್ಥಳಾಂತರಿಸಲಾಗಿದ್ದು, ಉಂಗುತ್ತೂರು ಮಂಡಲದ ಎರ್ಟಕಪಾಡು ಎಂಬಲ್ಲಿ ಆಕೆಯ ಅಂತಿಮ ಸಂಸ್ಕಾರ ನೆರವೇರಿದೆ. ವೈದ್ಯೆಯಾಗಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕಿದ್ದ ಮಗಳ ಹಠಾತ್ ಸಾವಿನಿಂದ ಪೋಷಕರು ಕಂಗಾಲಾಗಿದ್ದಾರೆ.
ತೆಲಂಗಾಣದ ಹೈದರಾಬಾದ್ ಮೂಲದ ಶ್ವೇತಾ ಮಧಗಾನಿ ಎಂಬ ಮಹಿಳೆಯ ಶವ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಪತ್ತೆಯಾಗಿದೆ. ಈಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದು ಆಕೆಯ ಪತಿಯ ಮೇಲೆ ಅನುಮಾನ ಮೂಡಿದೆ. ಶ್ವೇತಾ ಮಧಗಾನಿ ಶವ ಶನಿವಾರ (ಮಾರ್ಚ್ 9) ಬಕ್ಲಿಯಲ್ಲಿ ರಸ್ತೆ ಬದಿಯ ತೊಟ್ಟಿಯಲ್ಲಿ ಪತ್ತೆಯಾಗಿದೆ, ಕೊಲೆಯಲ್ಲಿ ಆಕೆಯ ಪತಿ ಅಶೋಕ್ ರಾಜ್ ಭಾಗಿಯಾಗಿರಬಹುದೆಂದು ಶಂಕಿಸಲಾಗಿದೆ. ಕೊಲೆಯ ನಂತರ ಅಶೋಕ್ ತಮ್ಮ ಮೂರು ವರ್ಷದ ಮಗನೊಂದಿಗೆ ಭಾರತಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಅಡಲ್ಟ್ ಸಿನಿಮಾಗಳ ನಟಿ ಸೋಫಿಯಾ ಲಿಯೋನಿ ಅವರ ಶವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎನ್ನುವುದು ತನಿಖೆಯಿಂದ ದೃಡಪಟ್ಟಿದೆ. 26 ವಯಸ್ಸಿನ ಸೋಫಿಯಾ ಲಿಯೋನಿ ಇತ್ತೀಚೆಗೆ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಅನುಮಾನ ಬಂದಿದೆ. ಆ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯ ಬಾಗಿಲು ತೆಗೆದು ನೋಡಿದಾಗ ಸೋಫಿಯಾ ಶವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಫಿಯಾ ಮಲತಂದೆ ಮೈಕ್ ರೋಮೆರೋ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಸೋಫಿಯಾ ತಾಯಿ ಹಾಗೂ ಕುಟುಂಬದ ಪರವಾಗಿ ಈ ವಿಚಾರವನ್ನು ತಿಳಿಸುತ್ತಿದ್ದೇನೆ. ಸೋಫಿಯಾ ಇನ್ನಿಲ್ಲ ಎನ್ನುವ ವಿಚಾರವನ್ನು ನಾನು ಹೇಳುತ್ತಿದ್ದೇನೆ. ಈ ಘಟನೆ ನಮ್ಮ ಕುಟುಂಬ ಹಾಗೂ ಗೆಳೆಯರಿಗೆ ಶಾಕ್ ನೀಡಿದೆ. ಸೋಫಿಯಾ ಅವರ ಅಂತ್ಯ ಸಂಸ್ಕಾರಕ್ಕೆ ಹಣ ಕಳುಹಿಸುವಂತೆ ಹಾಗೂ ಈ ಸಂಬಂಧ ತನಿಖೆ ನಡೆಸುವಂತೆ ಮೈಕ್ ಮನವಿ ಮಾಡಿದ್ದು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಸೋಫಿಯಾ ಅವರು ಸದಾ ಪ್ರಯಾಣ…
ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಟಿ ದೀಪಿಕಾ ದಾಸ್ ಸೀಕ್ರೇಟ್ ಆಗಿ ಗೋವಾದಲ್ಲಿ ಹಸೆಮಣೆ ಏರಿದ್ದಾರೆ. ಮದುವೆಯ ಬಳಿಕ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಹಮ್ಮಿಕೊಂಡಿದ್ದ ನಟಿ ಇದೀಗ ಮದುವೆಯಾಗಿರುವ ಹುಡುಗನ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ದೀಪಿಕಾ ಕೈ ಹಿಡಿದಿರೋ ದೀಪಕ್ ಹಿನ್ನೆಲೆ ಏನು ಗೊತ್ತಾ? ರಿಯಲ್ ಎಸ್ಟೇಟ್ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಕ್ ಜೊತೆ ನಟಿ ದೀಪಿಕಾ ದಾಸ್ ಮದುವೆ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ದೀಪಿಕಾ ದಾಸ್ ಮತ್ತು ದೀಪಕ್ ಡೇಟಿಂಗ್ ಮಾಡುತ್ತಿದ್ದು ಸಡನ್ ಆಗಿ ಗೋವಾದಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಆದರೆ ಇದು ಸೀಕ್ರೇಟ್ ಮ್ಯಾರೇಜ್ ಅಲ್ಲ, ಸಾಕಷ್ಟು ತಿಂಗಳಿನಿಂದ ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದೇವೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ. ನಾವಿಬ್ಬರು ನಾಲ್ಕು ವರ್ಷಗಳ ಹಿಂದೆ ನಾವು ಭೇಟಿ ಆದೆವು. ಕಳೆದೊಂದು ವರ್ಷದಿಂದ ಕಮಿಟೆಡ್ ರಿಲೇಷನ್ಶಿಪ್ನಲ್ಲಿ ಇದ್ದೆವು. ಮನೆಯವರಿಗೆಲ್ಲ ಗೊತ್ತಿತ್ತು. ಇದರಲ್ಲಿ ಏನೂ ಸಸ್ಪೆನ್ಸ್ ಇಲ್ಲ. ನಾನು ರಿಯಲ್ ಎಸ್ಟೇಟ್ ಡೆವೆಲಪರ್. ಇಲ್ಲಿಯೇ ಇರುವುದು.…
ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ನಟಿ ದೀಪಿಕಾ ದಾಸ್ ಏಕಾಏಕಿ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಗೋವಾದಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ನಟಿ ಇದೀಗ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ಹಮ್ಮಿಕೊಂಡಿದ್ದರು. ಮಾಧ್ಯಮಗಳ ಜೊತೆ ಮದುವೆಯ ಬಗ್ಗೆ ಮಾತನಾಡಿದ ದೀಪಿಕಾ ಇದು ಸಡನ್ ಆಗಿ ಆದ ಮದುವೆ ಅಲ್ಲ ಎಂದಿದ್ದಾರೆ. ಈ ಮದುವೆ ಗೌಪ್ಯವಾಗಿ ಇರಲಿಲ್ಲ. ಕೆಲವು ತಿಂಗಳಿಂದ ಇದಕ್ಕೆ ತಯಾರಿ ಮಾಡಿದ್ದೆವು. ಸರ್ಪ್ರೈಸಿಂಗ್ ಆಗಿರಲಿ ಅಂತ ನಾವು ಅಂದುಕೊಂಡೆವು. ಹಾಗಾಗಿ ಪ್ರಚಾರ ಮಾಡಿಲ್ಲ. ಚಿಕ್ಕ ಸಮಾರಂಭದಲ್ಲಿ ನಮ್ಮದು ಡೆಸ್ಟಿನೇಷನ್ ವೆಡ್ಡಿಂಗ್ ಆಗಿರಬೇಕು ಎಂಬ ಆಸೆ ನನಗೆ ಇತ್ತು. ಕೇವಲ ಫ್ಯಾಮಿಲಿಯವರ ಎದುರು ನಾನು ಅಂದುಕೊಂಡ ರೀತಿಯಲ್ಲಿ ಮದುವೆ ಆಗಬೇಕು ಎಂಬ ಆಸೆ ನನ್ನದಾಗಿತ್ತು’ ಎಂದಿದ್ದಾರೆ. ‘ನನ್ನ ಆಸೆಯನ್ನು ನಾನು ದೀಪಕ್ ಅವರಿಗೆ ಹೇಳಿದೆ. ಇದೆಲ್ಲ ಸಾಧ್ಯನಾ ಅಂತ ಅವರು ಕೇಳಿದರು. ಯಾಕೆಂದರೆ ಅವರದ್ದು ದೊಡ್ಡ ಫ್ಯಾಮಿಲಿ. ಹಾಗಿದ್ದರೂ ಕೂಡ ನನ್ನ ಆಸೆಗೆ ಅವರು ಸಪೋರ್ಟ್ ಮಾಡಿದರು. ಅದಕ್ಕಾಗಿ ಅವರಿಗೆ…
ಇಂಡೋನೇಷ್ಯಾದ ಬಾಂದಾ ಸಮುದ್ರದಲ್ಲಿ ಇಂದು ಬೆಳಗ್ಗೆ (ಮಾ.10) 5.0 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಭೂಕಂಪದ ಕೇಂದ್ರಬಿಂದುವನ್ನು 7.30 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 129.27 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮೇಲ್ವಿಚಾರಣೆ ಮಾಡಲಾಗಿದೆ ಎಂದು ಜಿಎಫ್ಜೆಡ್ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ಮಾಹಿತಿ ನೀಡಿದೆ. ದ್ವೀಪಸಮೂಹ ದೇಶ ಇಂಡೋನೇಷ್ಯಾ ‘ಪೆಸಿಫಿಕ್ ರಿಂಗ್ ಆಫ್ ಫೈರ್’ ಎಂದು ಕರೆಯಲ್ಪಡುವ ಸೂಕ್ಷ್ಮ ಭೂಕಂಪನ ವಲಯದಲ್ಲಿದೆ. ಈ ಘಟನೆಯಿಂದ ಯಾವುದೇ ಹಾನಿ ಉಂಟಾಗಿಲ್ಲ. ಇಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಒಳ್ಳೆಯ ವ್ಯಕ್ತಿ ಅಲ್ಲ. ಆತ ಓರ್ವ ರಾಕ್ಷಸ. ಹೀಗಾಗಿ ಅಮೆರಿಕದ ಮತದಾರರು ಮುಂಬರುವ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬಿಡೆನ್‍ಗೆ ಮತ ಚಲಾಯಿಸಬೇಕು.ಯಾವುದೇ ಕಾರಣಕ್ಕೂ ಟ್ರಂಪ್ ಗೆ ಮತ ಹಾಕಬೇಡಿ ಎಂದು ಹಾಲಿವುಡ್ ಖ್ಯಾತ ನಟ ರಾಬರ್ಟ್ ಡಿ ನಿರೋ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿರುವ ನಿರೋ, ನೀವು ಬದುಕಲು ಬಯಸುವ ಜಗತ್ತಿನಲ್ಲಿ ವಾಸಿಸಲು ಮತ್ತು ಆನಂದಿಸಲು ಬಯಸುವಿರಾ ಅಥವಾ ದುಃಸ್ವಪ್ನದಲ್ಲಿ ಬದುಕಲು ಬಯಸುವಿರಾ? ಟ್ರಂಪ್‍ಗೆ ಮತ ನೀಡಿದರೆ ನೀವು ದುಃಸ್ವಪ್ನವನ್ನು ಪಡೆಯುತ್ತೀರಿ, ಬಿಡೆನ್‍ಗೆ ಮತ ಚಲಾಯಿಸಿ ಸಹಜ ಜೀವನ ನಡೆಸಿ ಎಂದಿದ್ದಾರೆ. ಆತ ತುಂಬಾ ನೀಚ, ಅಸಹ್ಯ, ದ್ವೇಷಪೂರಿತ ವ್ಯಕ್ತಿ. ನಾನು ಎಂದಿಗೂ ಟ್ರಂಪ್ ಆಗಿ ನಟಿಸುವುದಿಲ್ಲ ಏಕೆಂದರೆ ನಾನು ಅವನಲ್ಲಿ ಯಾವುದೇ ಒಳ್ಳೆಯದನ್ನು ನೋಡುವುದಿಲ್ಲ ಎಂದಿದ್ದಾರೆ.