15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಂಗಳೂರು ಚಿತ್ರೋತ್ಸವಕ್ಕೆ ಮತ್ತಷ್ಟು ಬಲ ನೀಡಿದ್ದಾರೆ. ಈ ವೇಳೆ ಶಿವಣ್ಣ ಕಾಂತಾರ ಹಾಗೂ ಕೆಜಿಎಫ್ ನಂತಹ ಸಿನಿಮಾಗಳಿಂದ ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಕಾಂತಾರ, ಕೆಜಿಎಫ್‌ನಿಂದ ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ ಅಂದರೆ ನಾವೆಲ್ಲಾ ಹೆಮ್ಮೆ ಪಡುವ ವಿಚಾರ. ಕನ್ನಡ ಭಾಷೆ ಬಂದು 90 ವರ್ಷ ಆಯ್ತು ಇಂಡಸ್ಟ್ರಿಗೆ ಬಂದು. ಇದರಲ್ಲಿ ನನ್ನದು ಕೂಡ 38 ವರ್ಷ ಸೇವೆ ಇದೆ ಅನ್ನೋದು ಖುಷಿಯಿದೆ. ಈ ಸಂಭ್ರಮದಲ್ಲಿ ನಾನು ಭಾಗಿಯಾಗಿರೋದು ಖುಷಿಯಿದೆ ಎಂದು ಶಿವಣ್ಣ ಬೆಂಗಳೂರು ಚಿತ್ರೋತ್ಸವದಲ್ಲಿ ಮಾತನಾಡಿದ್ದಾರೆ. ಫೆ.29ರಿಂದ ಮಾರ್ಚ್ 7ರವರೆಗೂ ಸಿನಿಮಾ ಹಬ್ಬ ನಡೆಯಲಿದ್ದು,ಫಿಲ್ಮ್ ಫೆಸ್ಟಿವಲ್‌ಗೆ 200 ಸಿನಿಮಾಗಳು ಬಂದಿವೆ. ಅದರಲ್ಲಿ ಕನ್ನಡ ಸಿನಿಮಾಗಳು ಕೂಡ ಇದೆ ಎಂಬುದು ಹೆಮ್ಮೆಯ ವಿಷಯವಾಗಿದೆ.
Author: Author AIN
ರಾಂಗ್ ರೂಟ್ ನಲ್ಲಿ ಕಾರು ಚಲಾಯಿಸಿದ್ದಲ್ಲದೇ, ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದ ತೆಲುಗು ನಟಿ ಸೌಮ್ಯ ಜಾನು ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ತಾನು ಮಾಡಿದ ತಪ್ಪಿನ ಅರಿವಾದ ಬಳಿಕ ಕ್ಷಮೆ ಕೇಳಿದ್ದಾರೆ. ನಟಿ ಸೌಮ್ಯ ಜಾನು ವಿರುದ್ಧ ಹೈದರಾಬಾದ್ ನ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾಯಿಗೆ ಔಷಧಿ ತರಬೇಕಾದ ತುರ್ತು ಕಾರಣದಿಂದಾಗಿ ರಾಂಗ್ ರೂಟ್ ನಲ್ಲಿ ಬಂದೆ. ಪೊಲೀಸರು ನನಗೆ ಕೆಟ್ಟದಾಗಿ ನಿಂದಿಸಿದರು ಎಂದು ನಟಿ ಹೇಳಿಕೊಂಡಿದ್ದರು. ರಾಂಗ್ ರೂಟ್ ನಲ್ಲಿ ಬಂದ ನಟಿಯ ಕಾರನ್ನು ತಡೆದ ಟ್ರಾಫಿಕ್ ಹೋಮ್ ಗಾರ್ಡ್ ದಂಡ ಕಟ್ಟುವಂತೆ ಹೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಹೋಮ್ ಗಾರ್ಡ್ ಸಮವಸ್ತ್ರ ಹರಿದಿತ್ತು. ಈ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೌಮ್ಯ ಜಾನು ಕುಡಿದು ಕಾರು ಚಲಾಯಿಸುತ್ತಿದ್ದರು ಎಂದು ಕೆಲವರು ಹೇಳಿದ್ದರು. ಆದರೆ, ಸೌಮ್ಯಗೆ ಕುಡಿಯುವ ಅಭ್ಯಾಸವಿಲ್ಲ ಎಂದು ನಟಿ ಹೇಳಿಕೊಂಡಿದ್ದರು. ಪೊಲೀಸ್…
ಮಲಯಾಳಂ ಚಿತ್ರ ರಂಗದ ಖ್ಯಾತ ನಟಿ ಲೆನಾ ಕುಮಾರ್ ಎರಡನೇ ಮದುವೆಯಾಗಿದ್ದಾರೆ. ಒಂದು ತಿಂಗಳ ಹಿಂದೆಯೇ ಮದುವೆಯಾಗಿರುವ ನಟಿ ಕಳೆದೆರಡು ದಿನಗಳ ಹಿಂದಷ್ಟೇ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಇಸ್ರೋ ನಡೆಸುತ್ತಿರುವ ಗಗನಯಾನ್ ಗೆ ಆಯ್ಕೆಯಾದ ನಾಲ್ವರ ಹೆಸರನ್ನು ಪ್ರಕಟಿಸುತ್ತಿದ್ದಂತೆಯೇ ಲೆನಾ ಕೂಡ ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಲೆನಾ ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಗನಯಾನ್ ಗೆ ಹೊರಟಿರುವ ನಾಲ್ವರ ಪೈಕಿ ಲೆನಾ ಮದುವೆ ಆಗಿರುವ ಹುಡುಗ ಕೂಡ ಒಬ್ಬರು. ಪ್ರಶಾಂತ್ ಬಾಲಕೃಷ್ಣ ನಾಯರ್ ಜೊತೆ ಜನವರಿ 17ರಂದು ಲೆನಾ ಮದುವೆ ಆಗಿದ್ದಾರೆ. ಈ ವಿಚಾರವನ್ನು ಸ್ವತಃ ನಟಿಯೇ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಹೇಳುವುದಕ್ಕಾಗಿ ನಾನು ಈ ದಿನ ಕಾಯುತ್ತಿದ್ದೆ ಎಂದು ನಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. https://www.instagram.com/p/C35aCcmyYXl/ ಪ್ರಶಾಂತ್ ಬಾಲಕೃಷ್ಣ ನಾಯರ್ ಗ್ರೂಪ್ ಕ್ಯಾಪ್ಟನ್ ಆಗಿ ಭಾರತೀಯ ವಾಯುಸೇನೆಯಲ್ಲಿ ಪೈಲಟ್ ಆಗಿ ಕೆಲಸ ಮಾಡಿದ್ದಾರೆ. ಮೂರು ಸಾವಿರಕ್ಕೂ…
ಪ್ಯಾಲೆಸ್ಟೀನ್ ರಾಜಧಾನಿ ಗಾಜಾದಲ್ಲಿ ಆಹಾರ ವಿತರಣೆ ವೇಳೆ ನೂಕು ನುಗ್ಗಲಿ ಸಂಭವಿಸಿದ್ದು ಘಟನೆಯಲ್ಲಿ ನೂರಾರು ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಟೊನಿಯೊ ಗುಟೆರಸ್ ಖಂಡನೆ ವ್ಯಕ್ತಪಡಿಸಿದ್ದಾರೆ. ಆಹಾರಕ್ಕಾಗಿ ಪರಿಹಾರ ಟ್ರಕ್‌ಗಳ ಬಳಿ ಸೇರಿದ ಜನರ ಮೇಲೆ ಇಸ್ರೇಲ್ ಪಡೆಗಳು ಗುಂಡು ಹಾರಿಸಿದ್ದರಿಂದ ಉಂಟಾದ ನೂಕು ನುಗ್ಗಲಿನಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ, ಈ ಕುರಿತಂತೆ ಇಸ್ರೇಲ್ ಮತ್ತು ಪ್ರತ್ಯಕ್ಷದರ್ಶಿಗಳು ಬೇರೆ ಬೇರೆ ಕಥೆಗಳನ್ನು ಹೇಳುತ್ತಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ. ‘ತೀವ್ರ ಹತಾಶೆಯಲ್ಲಿರುವ ಗಾಜಾ ಜನರಿಗೆ ತುರ್ತು ನೆರವಿನ ಅಗತ್ಯವಿದೆ. ಅದರಲ್ಲೂ ಉತ್ತರ ಗಾಜಾದಲ್ಲಿ ಸಿಲುಕಿರುವವರ ಸ್ಥಿತಿ ಶೋಚನೀಯವಾಗಿದ್ದು, ವಾರದಿಂದ ಇಲ್ಲಿ ವಿಶ್ವಸಂಸ್ಥೆ ನೆರವನ್ನು ಒದಗಿಸಲು ಸಾಧ್ಯವಾಗಿರಲಿಲ್ಲ’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿ ಇರಲಿಲ್ಲ ಎಂದಿರುವ ಅವರು, ಈ ಬಗ್ಗೆ ಕೂಲಂಕಷ ತನಿಖೆಗೆ ಒತ್ತಾಯಿಸಿದ್ದಾರೆ. ಗಾಜಾದಲ್ಲಿ…
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 6 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 44 ಮಂದಿ ಮೃತಪಟ್ಟು ಹಲವರಿಗೆ ಗಾಯವಾಗಿರುವ ಘಟನೆ ಸಂಭವಿಸಿದೆ. ಢಾಕಾದ ಬೈಲಿ ರಸ್ತೆಯಲ್ಲಿರುವ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯ ಕೆನ್ನಾಲಿಗೆ ಇತರ ಮಹಡಿಗಳಿಗೂ ವ್ಯಾಪಿಸಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 42 ಮಂದಿ ಸೇರಿದಂತೆ 75 ಮಂದಿಯನ್ನು 7 ಅಂತಸ್ತಿನ ಕಟ್ಟಡದಿಂದ ಹೊರ ತೆಗೆಯಲಾಗಿದ್ದು, ಕೆಲವ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವು ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ರೆಸ್ಟೋರೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಅವಘಟ ಸಂಭವಿಸಿದೆ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. ಮೆಟ್ಟಿಲುಗಳ ಮೇಲೆ ಹೊಗೆ ಬರುತ್ತಿತ್ತು. ಸಾಕಷ್ಟು ಜನರು ಮೇಲೆ ಓಡಿ ಹೋಗಿದ್ದಾರೆ, ಕೆಲವರು ಕಟ್ಟಡಿಂದ ಇಳಿಯಲು ನೀರಿನ ಪೈಪ್ ಗಳನ್ನು ಬಳಸಿದರೆ, ಮತ್ತಷ್ಟು ಜನ…
ನಟ, ನಟಿಯರು ಅಂದ್ರೆ ಪ್ರತಿಯೊಬ್ಬರಿಗೂ ಅವರ ಬಗ್ಗೆ ಸಾಕಷ್ಟು ಕುತೂಹಲ ಇದ್ದೆ ಇರುತ್ತೆ. ಅವರು ಕುಡಿಯೋ ನೀರಿನಿಂದ ಹಿಡಿದು ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿದುಕೊಳ್ಳುವ ಕ್ಯೂರಿಯಾಸಿಟಿ ಸಾಕಷ್ಟು ಮಂದಿಯದ್ದು. ಜೊತೆಗೆ ಅವರನ್ನು ಫಾಲೋ ಮಾಡುವವರ ಸಂಖ್ಯೆ ಕೂಡ ಸಾಕಷ್ಟು ಇರುತ್ತೆ. ಇದೇ ಕಾರಣಕ್ಕೆ ನಟಿಯರು ಆಗಾಗ ಸುಳ್ಳು ಹೇಳಿ ಸಿಕ್ಕಿ ಬಿಳೋದು ಇದೆ. ಇದೀಗ ಬಾಲಿವುಡ್ ಬ್ಯೂಟಿ ನಟಿ ಮಲೈಕಾ ಅರೋರಾ ಸುಳ್ಳು ಹೇಳಿ ಸರಿಯಾಗಿಯೇ ನೆಟ್ಟಿಗರ ಕೈಗೆ ತಗಲಾಕಿಕೊಂಡಿದ್ದಾರೆ. ಸಾಕಷ್ಟು ನಟಿಯರು ತಾವು ಪ್ರಾಣಿಗಳಿಗೆ ಹಿಂಸೆ ನೀಡಬಾರದು ಎಂಬ ಕಾರಣಕ್ಕೆ ಮಾಂಸಹಾರ ತ್ಯಜಿಸಿ ಸಸ್ಯಹಾರಿಗಳಾಗಿದ್ದಾರೆ. ಹಲವು ಸಿನಿಮಾ ನಟ ನಟಿಯರು ತಾವು ಈಗ ವೆಜಿಟೇರಿಯನ್ ಆಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ, ಪ್ರಾಣಿಗಳಿಗೆ ಹಿಂಸೆ ಕೊಡುವುದು ತಪ್ಪು ಅನ್ನೋ ಕಾರಣಕ್ಕಾಗಿ ನಾವು ಶಾಖಾಹಾರಿಯಾಗಿದ್ದೇವೆ ಎಂದಿದ್ದಾರೆ. ಕೆಲವರು ನಿಜವಾಗಿಯೂ ವೆಜಿಟೇರಿಯನ್ ಆಗಿದ್ದಾರೆ. ಆದರೆ ನಟಿ ಮಲೈಕಾ ಅರೋರಾ ತಾವು ವೆಜಿಟೇರಿಯನ್ ಎಂದು ವೀಡಿಯೋ ಮುಂದೆ ಹೇಳಿಕೊಂಡು, ಸೆಟ್ನಲ್ಲಿ ನಾನ್‌ವೆಜ್ ಊಟ…
ನಟಿ ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿಯಾಗಿದ್ದಾರೆ. ಈಕೆ ನಿರ್ದೇಶಕರ ಪಾಲಿನ ಅದೃಷ್ಟದ ದೇವತೆಯೇ ಹೌದು. ಈಕೆ ನಟಿಸಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗ್ತಿದೆ. ಅದಕ್ಕಾಗಿಯೇ ನಿರ್ಮಾಪಕರು ಆಕೆಯ ಮನೆ ಬಾಗಿಲಿಗೆ ಅಲೆದಾಡ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ರಶ್ಮಿಕಾ ಇದೀಗ ತಮಿಳಿನ ಸ್ಟಾರ್ ನಟನೆಗೆ ಜೋಡಿಯಾಗುವ ಮೂಲಕ ಮತ್ತೊಮ್ಮೆ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಧನುಷ್ ನಟನೆಯ 51ನೇ ಸಿನಿಮಾಗೆ ನಟಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಶೂಟಿಂಗ್‌ನಲ್ಲಿ ರಶ್ಮಿಕಾ ಭಾಗಿಯಾಗಿರುವ ವಿಡಿಯೋ ಲೀಕ್ ಆಗಿದೆ. ಧನುಷ್ ಕೈ ಹಿಡಿದು ರಶ್ಮಿಕಾ ಕರೆದೊಯ್ಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋನಲ್ಲಿ ರಶ್ಮಿಕಾ ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದಾರೆ. ಈ ಚಿತ್ರವು ರಾಜಕೀಯ ವಸ್ತುವುಳ್ಳ ಕತೆಯಾಗಿದ್ದು, ರಾಜಕೀಯ ಕುತಂತ್ರಗಳನ್ನು ಸಾಮಾನ್ಯ ವ್ಯಕ್ತಿಯೊಬ್ಬ ಹೇಗೆ ಎದುರಿಸುತ್ತಾನೆ, ರಾಜಕೀಯದ ದೌರ್ಜನ್ಯಕ್ಕೆ ಹೇಗೆ ತುತ್ತಾಗುತ್ತಾನೆ ಅದರಿಂದ ಹೊರಗೆ ಹೇಗೆ ಬರುತ್ತಾನೆ ಎಂಬುದು ಚಿತ್ರದ ಕಥೆಯಾಗಿದೆ. ರಶ್ಮಿಕಾ, ಧನುಷ್ ನಟನೆಯ ಚಿತ್ರವನ್ನು ‘ಲವ್‌ಸ್ಟೋರಿ’…
ನಟಿ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ಮಾರ್ಚ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಲು ಮೀರಾ ಚೋಪ್ರಾ ರೆಡಿಯಾಗಿದ್ದಾರೆ. ಮೀರಾಗೆ ಚೋಪ್ರಾ ಮದುವೆ ಇದೇ ಮಾರ್ಚ್ 11 ಮತ್ತು 12ರಂದು ನಡೆಯಲಿದೆ. ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಮೀರಾ ಮದುವೆ ಆಗುತ್ತಿರುವ ವರನ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಉದ್ಯಮಿಯ ಜೊತೆ ಮೀರಾ ಮದುವೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂದ ಹಾಗೆ ಮೀರಾ ದರ್ಶನ್ ನಟನೆಯ ಅರ್ಜುನ್ ಸಿನಿಮಾದಲ್ಲಿ ನಟಿಸುವ ಮೂಲಕ ಗಾಂಧಿನಗರದಲ್ಲೂ ಸದ್ದು ಮಾಡಿದ್ದರು.
ತಮಿಳು ಚಿತ್ರ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಾ ತಮ್ಮ ಸಿನಿಮಾದ ನಟಿಯೊಬ್ಬರ ಮೇಲೆ ಕೈ ಮಾಡಿದ್ದಾರಂತೆ. ಈ ವಿಷಯವನ್ನು ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತನ್ನ ಮೇಲೆ ಕೈ ಮಾಡಿದ ಕಾರಣಕ್ಕಾಗಿ ಆ ಸಿನಿಮಾದಿಂದ ತಾನು ಹೊರ ಬಂದಿದ್ದಾಗಿ ನಟಿ ಹೇಳಿಕೊಂಡಿದ್ದಾರೆ. ಬಾಲಾ ನಿರ್ದೇಶನದ ವಾನಂಗನ್ ಸಿನಿಮಾದಲ್ಲಿ ಮಲಯಾಳಂ ಮೂಲದ ನಟಿ ಮಮತಾ ಬಿಜು ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ವಿಲ್ಲಡಿಚ್ಚಾಂಪಾಟನ್ ಕಲಾವಿದೆಯಂತೆ ವಾದ್ಯ ನುಡಿಸುತ್ತಾ ಡಾನ್ಸ್ ಮಾಡಬೇಕಿತ್ತಂತೆ. ನುರಿತ ಕಲಾವಿದರ ಜೊತೆ ಸಡನ್ನಾಗಿ ಬೆರೆಯೋದು ಕಷ್ಟವಾಯಿತು. ಹಾಗಾಗಿ ಮೂರು ಟೇಕ್ ತೆಗೆದುಕೊಂಡೆ. ಈ ಕಾರಣಕ್ಕಾಗಿ ನಿರ್ದೇಶಕರು ನನ್ನ ಮೇಲೆ ಹೊಡದೇ ಬಿಟ್ಟರು ಎಂದು ಮಮಿತಾ ಆರೋಪಿಸಿದ್ದಾರೆ. ಸೆಟ್ ನಲ್ಲಿ ನಾನು ಕೋಪಿಷ್ಠ. ಬೈದರೆ ಮನಸ್ಸಿಗೆ ತಗೋಬೇಡಿ ಎಂದು ಬಾಲಾ ಅವರು ಮೊದಲೇ ಹೇಳಿದ್ದರೂ, ಅವರು ಬೈದಾಗೊಮ್ಮೆ ಕಿರಿಕಿರಿ ಅನಿಸೋದು. ಆದರೆ, ಅವರು ನನಗೆ ಹೊಡೆದ ಮೇಲೆ ಕೆಲಸ ಮಾಡಲು ಮನಸ್ಸಾಗಲಿಲ್ಲ. ಹಾಗಾಗಿ ಸಿನಿಮಾದಿಂದ ಹೊರ ನಡೆದೆ ಎಂದಿದ್ದಾರೆ.…
ಅಕ್ಟೋಬರ್‌ನಲ್ಲಿ ಆರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಯುದ್ಧದಿಂದ ಇದುವರೆಗೂ 30 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನ್ ಜನರ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯತಿಳಿಸಿದೆ. ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆಯು ಆರಂಭಿಸಿದ ದಾಳಿಯ ಮೊದಲ ಗುರಿ ಆಗಿದ್ದು ಗಾಜಾ ನಗರ ಹಾಗೂ ಗಾಜಾ ಪಟ್ಟಿಯ ಉತ್ತರ ಭಾಗ. ಈ ಪ್ರದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ, ಇದು ಗಾಜಾ ಪಟ್ಟಿಯ ಇತರ ಪ್ರದೇಶಗಳ ಜೊತೆಗಿನ ಸಂಪರ್ಕವನ್ನು ಬಹುತೇಕ ಕಡಿದುಕೊಂಡಿದೆ. ಅಪೌಷ್ಟಿಕತೆ, ನಿರ್ಜಲೀಕರಣ ಹಾಗೂ ಆಹಾರ ಕೊರತೆಯ ಕಾರಣದಿಂದಾಗಿ ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯಲ್ಲಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇಂತಹ ಸಾವುಗಳು ಇನ್ನಷ್ಟು ಆಗುವುದನ್ನು ತಡೆಯಲು ಅಂತರರಾಷ್ಟ್ರೀಯ ಸಂಘಟನೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ಮನವಿ ಮಾಡಿದ್ದಾರೆ. ಗಾಜಾ ಪಟ್ಟಿಯಲ್ಲಿ ಬುಧವಾರ ರಾತ್ರಿ ನಡೆದ ದಾಳಿಗಳಲ್ಲಿ ಕನಿಷ್ಠ 79…