ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ‘ಮಾರ್ನಿಂಗ್ ಕನ್ಸಲ್ಟ್’ ಸರ್ವೇಕ್ಷಣಾ ಸಂಸ್ಥೆ ನಡೆಸುವ ಸರ್ವೆಯಲ್ಲಿ ಈ ಫಲಿತಾಂಶ ಲಭ್ಯವಾಗಿದ್ದು, ಮೋದಿ ಪರ ಜಾಗತಿಕವಾಗಿ ಶೇ. 78ರಷ್ಟು ‘ಅನುಮೋದನೆ ಸೂಚ್ಯಂಕ’ ಸಿಕ್ಕಿದೆ. ಜನವರಿ 30 ರಿಂದ ಫೆಬ್ರವರಿ 5ರವರೆಗೆ ವಿಶ್ವಾದ್ಯಂತ ಸರ್ವೇಕ್ಷಣಾ ಕಾರ್ಯ ನಡೆಸಿ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯು ಈ ಅಂಕಿ ಅಂಶ ಕಲೆ ಹಾಕಿದೆ. 7 ದಿನಗಳ ಕಾಲ ವಿವಿಧ ದೇಶಗಳ ವಯಸ್ಕ ಮತದಾರರ ಅಭಿಪ್ರಾಯಗಳನ್ನು ಆಲಿಸಿ ಅದರ ಸರಾಸರಿಯನ್ನು ಪ್ರಕಟ ಮಾಡಿರೋದಾಗಿ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಎರಡನೇ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಲ್ ಲೋಪಜ್ ಆರ್ಬ್ರೇಡರ್ ಇದ್ದು ಅವರಿಗೆ ಜಾಗತಿಕವಾಗಿ ಶೇ. 64ರಷ್ಟು ಮತಗಳು ಲಭ್ಯವಾಗಿವೆ. ಇನ್ನು ಸ್ವಿಟ್ಜರ್‌ಲೆಂಡ್‌ನ ಅಲೈನ್ ಬೆರ್ಸತ್ ಅವರು ಮೂರನೇ ಸ್ಥಾನದಲ್ಲಿದ್ದು ಅವರಿಗೆ ಜಾಗತಿಕವಾಗಿ ಶೇ. 57 ರಷ್ಟು ಅನುಮೋದನಾ ಸೂಚ್ಯಂಕಗಳು ಲಭ್ಯ ಆಗಿವೆ.
Author: Author AIN
ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾದಲ್ಲಿ ನಟಿಸಿದ್ದ ಸುಹಾನಿ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇದೀಗ ನಟ ಅಮೀರ್ ಖಾನ್ ಸುಹಾನಿ ಕುಟುಂಬಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ. ಸುಹಾನಿ ನಿಧನರಾಗಿ 5 ದಿನಗಳ ನಂತರ ನಟ ಆಮೀರ್ ಫರಿದಾಬಾದ್‌ನಲ್ಲಿರುವ ನಟಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಸುಹಾನಿ ನಿಧನದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ನಟ, ಕುಟುಂಬಸ್ಥರಿಗೆ ಧೈರ್ಯ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುಹಾನಿ ನಿಧನಕ್ಕೆ ಆಮೀರ್ ಸಂತಾಪ ಸೂಚಿಸಿದ್ದರು. ಈಗ ಅವರ ಕುಟುಂಬದವರನ್ನು ನಟ ಭೇಟಿಯಾಗಿರುವುದ್ದಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ‘ದಂಗಲ್’ ಸಿನಿಮಾದಲ್ಲಿ ಬಬಿತಾ ಪೋಗಟ್ ಪಾತ್ರದಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಅಪ್ರಾಪ್ತ ವಯಸ್ಸಿನಲ್ಲಿ ಸುಹಾನಿ ನಿಧನರಾಗಿರುವುದು ನಿಜಕ್ಕೂ ದುಃಖದ ಸಂಗತಿ. ಅಂದ ಹಾಗೆ ಆಪ್ತರ ಪ್ರಕಾರ, ಸುಹಾನಿ ತಮ್ಮ ಕಾಲಿನ ಮೂಳೆ ಮುರಿತದ ಸಲುವಾಗಿ ಚಿಕಿತ್ಸೆ ಪಡೆದುಕೊಂಡು, ಅದಕ್ಕೆ ಸಂಬಂಧಿಸಿದ ಔಷಧಿ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಔಷಧಿಯ ಅಡ್ಡ ಪರಿಣಾಮದಿಂದ ಸುಹಾನಿ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.
ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾ ಅವರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್‌ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಮುಖಂಡ ಎ.ವಿ.ರಾಜು ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ನಟಿ ತ್ರಿಷಾ ಪ್ರತಿಕ್ರಿಯಿಸಿದ್ದು ಎ.ವಿ.ರಾಜುಗೆ ತಕ್ಕ ಪಾಠ ಕಲಿಸೋದಾಗಿ ಹೇಳಿದ್ದರು. ಅಲ್ಲದೆ ಎ.ವಿ ರಾಜು ವಿರುದ್ಧ ಕಾನೂನು ಸಮರಕ್ಕೆ ನಟಿ ಮುಂದಾಗಿದ್ದಾರೆ. ನಟಿ ತ್ರಿಶಾ ಅವರು ಎ.ವಿ ರಾಜು ಅವರ ಕುರಿತ ನೋಟಿಸ್ ಅನ್ನು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎ.ವಿ ರಾಜು ತಮ್ಮ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ರಾಜು ಕೊಟ್ಟಿರುವ ಹೇಳಿಕೆಗಳಿಂದ ನಟಿ ತ್ರಿಶಾ ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಮಾಧ್ಯಮಗಳಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ರಾಜು ಮಾಡಿರುವ ಹೇಳಿಕೆಗಳನ್ನು ಮುದ್ರಣ ಮಾಧ್ಯಮ, ಎಲೆಕ್ಟಾçನಿಕ್ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾಗಳಿಂದ ಸಂಪೂರ್ಣ ಅಳಿಸಿ ಹಾಕಬೇಕು ಎಂದು ಹೇಳಿದ್ದಾರೆ. ಈ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ನಟಿ…
ಇಸ್ರೇಲ್ ಗಾಜಾದ ದಕ್ಷಿಣದಲ್ಲಿರುವ ರಫಾದ ಮೇಲೆ ಬಾಂಬ್ ದಾಳಿಯನ್ನು ತೀವ್ರಗೊಳಿಸಿದೆ. ವೈಮಾನಿಕ ದಾಳಿಯಲ್ಲಿ ಒಂದೇ ಕುಟುಂಬದ 12 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಯುದ್ಧದಲ್ಲಿ ಇದುವರೆಗೂ 29,313 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ಹಮಾಸ್ ಬಂಡುಕೋರರು ದಕ್ಷಿಣ ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸುತ್ತಿದೆ. ಗಾಜಾ ಸ್ಮಶಾನಭೂಮಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಹಾಗೂ ವಿವಿಧ ರಾಷ್ಟ್ರಗಳು, ಮಾನವೀಯ ಆಧಾರದಲ್ಲಿ ಗಾಜಾದಲ್ಲಿ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿವೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಸಿಂಪಲ್ ಆಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೀಗ ದರ್ಶನ್ ಸ್ನೇಹಿತರು ಸೇರಿ ಅದ್ದೂರಿಯಾಗಿ ಚಾಲೆಂಜಿಂಗ್ ಸ್ಟಾರ್ ಬರ್ತಡೇ ಸೆಲೆಬ್ರೇಟ್ ಮಾಡಿದ್ದಾರೆ. ಸ್ನೇಹಿತರು ದರ್ಶನ್ ಗೆ ನೀಡಿದ ಗಿಫ್ಟ್ ನೀಡಿ ಚಾಲೆಂಜಿಂಗ್ ಸ್ಟಾರ್ ಅಚ್ಚರಿಯಾಗಿದ್ದಾರೆ. ಡಿ ಬಾಸ್ಗೆ ಆಪ್ತರಾದ ವಿನಯ್ ಅವರು ಚಾಕೊಲೇಟ್ನಿಂದ ದರ್ಶನ್ ಅವರ ಪ್ರತಿಮೆ ಮಾಡಿಸಿದ್ದಾರೆ. ಅದನ್ನು ನೋಡಿ ದರ್ಶನ್ ಖುಷಿಪಟ್ಟಿದ್ದಾರೆ. ಈ ಪ್ರತಿಮೆ 6.2 ಅಡಿ ಎತ್ತರ ಇದೆ. ಇದರ ತೂಕ ಬರೋಬ್ಬರಿ 250 ಕೆಜಿ. ರಾಮನಗರದಲ್ಲಿ ಈ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಫೆಬ್ರವರಿ-21 ರಂದು ರಾತ್ರಿ ದರ್ಶನ್ ಹಾಗೂ ಡೈರೆಕ್ಟರ್ ತರುಣ್ ಇವೆಂಟ್ ಒಂದಕ್ಕೆ ಹೋಗಿದ್ದರು. ಈ ಇವೆಂಟ್ ರಾಮನಗರದಲ್ಲಿಯೇ ಇತ್ತು. ಈ ವೇಳೆ ದರ್ಶನ್ ಆತ್ಮೀಯ ವಿನಯ್ ಇಲ್ಲಿ ದರ್ಶನ್ ರ ಚಾಕೆಲೇಟ್ ಪ್ರತಿಮೆಯನ್ನು ಗಿಫ್ಟ್ ಆಗಿ ನೀಡಿದರು. ಹೌದು, ದಾಸ ದರ್ಶನ್ ತಮ್ಮದೇ ಒಂದು ಬೃಹತ್ ಚಾಕೋಲೆಟ್ ಪ್ರತಿಮೆ ಕಂಡು ಬೆರಗಾಗಿದ್ದಾರೆ. ದರ್ಶನ್ ಹೈಟ್ ಎಷ್ಟಿದಿಯೋ ಅಷ್ಟೇ ಹೈಟ್‌ನ…
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ನಿರ್ಮಾಪಕ ಉಮಾಪತಿಗೆ ಬಳಸಿರುವ ಪದ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಗಡೇ ಹಾಗೂ ಗುಮ್ಮಿಸ್ಕೊತ್ತೀಯಾ ಪದ ಬಳಕೆ ಹಿನ್ನೆಲೆ ಈಗಾಗಲೇ ನಟ ದರ್ಶನ್ ವಿರುದ್ಧ ದೂರು ದಾಖಲಾಇಗದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರೆ ಇದೀಗ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮಹಿಳೆಯರು ಇದೀಗ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಜಯಶ್ರೀ , ರೇಣುಕಾ ನೇತೃತ್ವದಲ್ಲಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ಮಹಿಳೆಯರು ನಟ ಮಹಿಳೆಯರ ಕುರಿತು ಮಾಡಿದ ಕಮೆಂಟ್ ಖಂಡಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ದರ್ಶನ್ 25 ನೇ ಪರ್ವದಲ್ಲಿ ದರ್ಶನ್ ಮಾತಿನ ಭರದಲ್ಲಿ ಹೇಳಿದ ಹೇಳಿಕೆ ಈಗ ವಿವಾದಕ್ಕೆ ದಾರಿ ಮಾಡಿದೆ. ಒಬ್ಬಳು ಇವತ್ತು ಬರ್ತಾಳೆ , ನಾಳೆ ಅವಳು ಹೋಗ್ತಾಳೆ .ಅವರ ಅಜ್ಜಿನ. ಬಡಿಯಾ ಪದ ಬಳಕೆ ಈಗ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕವಾಗಿ ಮಹಿಳೆಯರಿಗೆ ಅವಮಾನ ಮಾಡಿದ್ದಾಗಿ ಮಹಿಳೆಯರು ಆರೋಪಿಸಿದ್ದಾರೆ. ಜವಾಬ್ದಾರಿಯುತ ನಟ…
ದಯವಿಟ್ಟು ‘ನಮ್ಮನ್ನು ಉಳಿಸಿ, ನಮ್ಮ ಜೀವವು ಅಪಾಯದಲ್ಲಿದೆ. ನಾವು ವಂಚನೆಗೆ ಬಲಿಯಾಗಿದ್ದೇವೆ. ನಮ್ಮನ್ನು ರಷ್ಯಾದ ವ್ಯಾಗ್ನರ್ ಸೈನ್ಯಕ್ಕೆ ಸೇರಲು ಒತ್ತಾಯಿಸಲಾಗಿದೆ’ ಎಂದು ನಾಲ್ವರು ಭಾರತೀಯರು ತಮ್ಮ ಕುಟುಂಬ ಸದಸ್ಯರಿಗೆ ವಿಡಿಯೋ ಕಳುಹಿಸಿ ಮನವಿ ಮಾಡಿದ್ದಾರೆ. ರಷ್ಯಾದ ಪೌರತ್ವ ಮತ್ತು ಉತ್ತಮ ಸಂಬಳ ನೀಡುವ ಆಮಿಷವೊಡ್ಡುವ ಮೂಲಕ ಉಕ್ರೇನ್ ವಿರುದ್ಧ ಯುದ್ಧಕ್ಕೆ ಒತ್ತಾಯಿಸಲಾಗಿದೆ. ಎಲ್ಲಾ ನಾಲ್ವರು ಯುವಕರು ರಷ್ಯಾ-ಉಕ್ರೇನ್ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರಷ್ಯಾದಲ್ಲಿ ಸಿಲುಕಿರುವ ಯುವಕರಲ್ಲಿ ಒಬ್ಬರು ಮಾತ್ರ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ನಿವಾಸಿ 22 ವರ್ಷದ ಮೊಹಮ್ಮದ್ ಸೂಫಿಯಾನ್ ಆಗಿದ್ದು ಉಳಿದ ಮೂವರು ಕರ್ನಾಟಕದ ಕಲಬುರಗಿ ನಿವಾಸಿಗಳು ಎನ್ನಲಾಗಿದೆ. ಮೊಹಮ್ಮದ್ ತನ್ನೊಂದಿಗೆ ಇನ್ನೂ 3 ಮಂದಿ ಇದ್ದಾರೆ ಎಂದು ಕಳುಹಿಸಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ. 2023 ರ ಡಿಸೆಂಬರ್‌ನಲ್ಲಿ ಟ್ರಾವೆಲ್ ಏಜೆಂಟ್‌ಗಳು ಯುವಕರಿಗೆ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಕೊಡಿಸುತ್ತೇವೆ ಎಂದು ಹೇಳಿ ರಷ್ಯಾಕ್ಕೆ ಕಳುಹಿಸಿದರು. ಇದೀಗ ಮೊಹಮ್ಮದ್ ಸೂಫಿಯಾನ್ ಅವರ ಸಹೋದರ 31 ವರ್ಷದ…
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ವಿವೋ Y200e 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಇದು 6GB + 128GB ಸ್ಟೋರೇಜ್ ಗೆ 19,999ರೂ ಬೆಲೆಯಾಗಿದ್ದು, 8GB + 128GB ಸ್ಟೋರೇಜ್ 20,999ರೂ ಬೆಲೆಯಾಗಿದೆ. ಈ ಸ್ಮಾರ್ಟ್‌ಪೋನ್ ಬ್ಲ್ಯಾಕ್ ಡೈಮಂಡ್ ಮತ್ತು ಕೇಸರಿ ಕಿತ್ತಳೆ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್ ಪ್ರಸ್ತುತ ವಿವೋ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಭಾರತದಲ್ಲಿನ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ. ಇದು ಫೆಬ್ರವರಿ 27 ರಿಂದ ಖರೀದಿಗೆ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಎಲ್‌ಇಡಿ ಫ್ಲ್ಯಾಷ್ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. Vivo Y200e 5G ಸ್ಮಾರ್ಟ್‌ಫೋನ್ 6.67 ಇಂಚಿನ ಸ್ಯಾಮ್‌ಸಂಗ್ E4 AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದ್ದು, 1800 ನಿಟ್ಸ್ ಗರಿಷ್ಠ…
ಚಾಲೆಂಜಿಂಗ್ ಸ್ಟಾರ್ ಧನಂಜಯ್ ಸಿನಿಮಾದ ಜೊತೆಗೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಡಾಲಿ ರಾಜಕಾರಣಕ್ಕೆ ಎಂಟ್ರಿಕೊಡಲಿ ಅನ್ನೋದು ಸಾಕಷ್ಟು ಮಂದಿಯ ಆಸೆಯು ಹೌದು. ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಡಾಲಿ ಧನಂಜಯ ಸ್ಪರ್ಧಿಸುತ್ತಾರೆ ಎಂಬ ಗಾಳಿಸುದ್ದಿ ಹರಡಿದೆ. ಈ ಬಗ್ಗೆ ಡಾಲಿ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ. ‘ಫೋಟೋ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ರಾಜಕೀಯ ಎಂಟ್ರಿ ಕುರಿತು ಮಾತನಾಡಿದ ಧನಂಜಯ್, ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ‘ಕಲಾವಿದರಾದ ನಾವು ಎಮೋಷನಲ್ ಆಗಿರುತ್ತೇವೆ. ಹಾಗಾಗಿ ಕೆಲವು ಬೆಳವಣಿಗೆಗಳಿಗೆ ರಿಯಾಕ್ಟ್ ಮಾಡಿರುತ್ತೇವೆ. ರಾಜಕಾರಣ ಬೇರೆ, ನಾಯಕನಾಗಿರುವುದು ಬೇರೆ. ಅದಕ್ಕೆ ಅದರದ್ದೇ ಆದಂತಹ ಗುಣಗಳು ಇರುತ್ತವೆ. ಅದನ್ನೆಲ್ಲ ನಿಭಾಯಿಸುವ ಶಕ್ತಿ ಇರಬೇಕು. ಅದಕ್ಕೆಲ್ಲ ಸದ್ಯಕ್ಕೆ ನಾನು ಸಿದ್ಧನಿಲ್ಲ’ ಎಂದು ಡಾಲಿ ಹೇಳಿದ್ದಾರೆ. ಒಂದು ವೇಳೆ ಆಫರ್ ಬಂದರೆ ರಾಜಕೀಯಕ್ಕೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ‘ಖಂಡಿತಾ ಇಲ್ಲ’ ಎಂದು ಹೇಳಿದ್ದಾರೆ. ‘ನೀವು ಗಮನಿಸಿರಬಹುದು. ಬೇರೆ ಅಭ್ಯರ್ಥಿಗಳ ಪರವಾಗಿ ನಾನು…
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ‘ಕಾಟೇರ’ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ವೇಳೆ ‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಗ್ಗೆ ಆಡಿದ ಮಾತುಗಳಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ದರ್ಶನ್ ಅವರು ‘ತಗಡು’ ಎಂಬ ಪದ ಬಳಕೆ ಮಾಡಿದ್ದಕ್ಕೆ ಆಕ್ಷೇಪ ಎದುರಾಗಿದ್ದು ಉಮಾಪತಿ ಶ್ರೀನಿವಾಸ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲು ರಾಜ್ಯ ಒಕ್ಕಲಿಗರ ಸಂಘ ಮುಂದಾಗಿದೆ. ಇಂದು ಬೆಳಿಗ್ಗೆ 11.30ಕ್ಕೆ ರಾಜ್ಯ ಒಕ್ಕಲಿಗರ ಸಂಘದ ಕೆಂಪೇಗೌಡ ಭವನದ 2ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಕರೆಯಲಾಗಿದ್ದು, ದರ್ಶನ್ ಅವರ ಹೇಳಿಕೆ ಬಗ್ಗೆ ಒಕ್ಕಲಿಗರ ಸಂಘದ ಪ್ರಮುಖರು ಮಾತನಾಡಲಿದ್ದಾರೆ. ‘ಒಕ್ಕಲಿಗರ ಸಂಘದ ನಿರ್ದೇಶಕರು ಮತ್ತು ಸಿನಿಮಾ ನಿರ್ಮಾಪಕರೂ ಆಗಿರುವ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಖ್ಯಾತ ನಟರಾದ ದರ್ಶನ್ ಅವರು ಮಾತನಾಡಿದ ರೀತಿ ಸರಿಯಿಲ್ಲ. ಸುಮಾರು ಚಿತ್ರಗಳಿಗೆ ಬಂಡವಾಳ ಹೂಡಿ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಉಮಾಪತಿ ಅವರಿಗೆ ತಗಡು ಎಂದು ಅವಹೇಳನಕಾರಿ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿದ್ದು ಸರಿಯಲ್ಲ’…