ಸಿಎಸ್ ಕೆ ವಿರುದ್ಧ ನಿನ್ನೆ ಆರ್ ಸಿಬಿ ರಣರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ ಟೇಬಲ್ ನಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಆರ್ ಸಿಬಿ ನೀಡಿದ ರನ್ ಬೆನ್ನತ್ತಿದ ಸಿಎಸ್‌ಕೆ ಎರಡು ರನ್ ಗಳಲ್ಲಿ ಸೋಲು ಕಂಡಿತು. ಥೇಟ್ ಸಿನಿಮಾ ರೀತಿಯೇ ಈ ಎರಡು ಪಂದ್ಯಗಳನ್ನು ಅಭಿಮಾನಿಗಳು ಕೂಡ ಎಂಜಾಯ್ ಮಾಡಿದ್ದಾರೆ. ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿ ಕೂಡ ಆರ್ ಸಿಬಿ, ಚೆನ್ನೈ ಪಂದ್ಯ ವೀಕ್ಷಿಸಿದ್ದಾರೆ. ಬಾಲಿವುಡ್ ಸ್ಟಾರ್ ಕಪಲ್: ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ದೇಶಮುಖ್ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಕುಳಿತು ಮ್ಯಾಚ್ ನೋಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಿತೇಶ್ ಜೆನಿಲಿಯಾ ಮುಂಬೈನಲ್ಲಿ ನೆಲೆಸಿದ್ದು, ಅವರು ಹೈವೋಲ್ಟೇಜ್ ಆರ್ ಸಿಬಿ ಹಾಗೂ ಚೆನ್ನೈ ಪಂದ್ಯ ವೀಕ್ಷಣೆಗಾಗಿ ಬೆಂಗಳೂರಿಗೆ…
Author: AIN Author
ಚಿಕ್ಕೋಡಿ:- ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಹಿಡಿದು ಜನರಿಗೆ ಭಯ ಹುಟ್ಟಿಸಿದ್ದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. https://ainkannada.com/home-minister-parameshwara-explains-the-reason-for-not-visiting-suhas-house/ ಬಂಧಿತರನ್ನು ಕಾಟಾಬಳಿ(೨೫), ನಾಗರಾಜ ದ್ಯಾಮಪ್ಪ ಕಟಾಬಳಿ(೨೧) ಎಂದು ಗುರುತಿಸಲಾಗಿದೆ. ಆರೋಪಿಗಳು, ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ಬಳಿ, ತಲ್ವಾರ್ ಕೈಯಲ್ಲಿ ಹಿಡಿದು ಓಡಾಡಿದ್ದರು. ಅಲ್ಲದೇ ಜನರನ್ನ ನಿಂದಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ವಿಷಯ ತಿಳಿದ ಯಮಕನಮರಡಿ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು:- ಇತ್ತೀಚೆಗೆ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಹೀಡಾಗಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಮನೆಗೆ ಭೇಟಿ ನೀಡದಿರುವ ಬಗ್ಗೆ ಗೃಹ ಸಚಿವರು ಇಂದು ಕಾರಣ ತಿಳಿಸಿದ್ದಾರೆ. https://ainkannada.com/lorry-catches-fire-as-if-it-was-on-fire-driver-escapes/ ಸುಹಾಸ್ ಶೆಟ್ಟಿ ಮೇಲೂ ಕೊಲೆ ಸೇರಿದಂತೆ ಐದು ಕೇಸ್‌ಗಳಿವೆ. ಹೀಗಾಗಿ, ನಾವು ಅವರ ಮನೆಗೆ ಭೇಟಿ ಕೊಟ್ಟಿಲ್ಲ ಎಂದರು. ಇದು ಒಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿ ಮೇಲೂ ಕೇಸ್‌ಗಳಿವೆ, ಐದು ಕೇಸ್‌ಗಳು ಅವರ ಮೇಲಿವೆ. ಹಾಗಾಗಿ, ನಾವು ಭೇಟಿ ಕೊಟ್ಟಿಲ್ಲ. ಆದರೆ, ಸುಹಾಸ್ ಶೆಟ್ಟಿ ಮನೆಗೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಹಿಂದೂ ಕಾರ್ಯರ್ಕನ ಕೊಲೆ ಪ್ರಕರಣದಲ್ಲಿ ಬಂಧಿತರು ನಿಜವಾದ ಆರೋಪಿಗಳಾ ಎಂಬ ಅನುಮಾನ ವ್ಯಕ್ತವಾಗ್ತಿರುವ ಕುರಿತು ಪ್ರತಿಕ್ರಿಯಿಸಿ, ಯಾರನ್ನೋ ಹೇಗೆ ಆರೋಪಿ ಅಂತ ಹೇಳಲು ಆಗುತ್ತಾ? ಕೊಲೆ ಪ್ರಕರಣದಲ್ಲಿ ಯರ‍್ಯಾರನ್ನೋ ಬಂಧಿಸಲು ಆಗಲ್ಲ ಎಂದು ತಿಳಿಸಿದರು. ನಿನ್ನೆ ಮುಸ್ಲಿಂ ಸಮುದಾಯದ ಪ್ರಮುಖರು ಅವರೇ ಬಂದು ನನ್ನ ಭೇಟಿ ಮಾಡಿದ್ರು. ಬರೋರಿಗೆ ಬೇಡ ಅನ್ನೋಕ್ಕಾಗುತ್ತಾ? ಬೇರೆ ಸಮುದಾಯದವರೂ…
ತುಮಕೂರು:-ತುಮಕೂರಿನ ಕ್ಯಾತಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಯೊಂದು ನಡುರೋಡಲ್ಲಿ ಹೊತ್ತಿ ಉರಿದಿದ್ದು, ಚಾಲಕ ಗ್ರೇಟ್ ಎಸ್ಕೇಪ್ ಆಗಿರುವ ಘಟನೆ ಜರುಗಿದೆ. https://ainkannada.com/two-arrested-for-passing-information-about-the-indian-army-to-pakistan/ ಡಾಬಸ್ ಪೇಟೆಯಿಂದ ವಸಂತ ನರಸಾಪುರ ಕಡೆಗೆ ಕಾರಿಯು ತೆರಳುತ್ತಿತ್ತು. ಈ ವೇಳೆ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಲಾರಿಯನ್ನು ಬಿಟ್ಟು ಚಾಲಕ ಕೆಳಗೆ ಇಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಕಿ ಕೆನ್ನಾಲಿಗೆಗೆ ಲಾರಿ ಸುಟ್ಟು ಭಸ್ಮವಾಗಿದೆ.
ನವದೆಹಲಿ/ ಇಸ್ಲಾಮಾಬಾದ್:- ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಭಾರತ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಬಿಗುವಾಗಿದೆ. ಈ ನಡುವೆ ಪಾಕ್‌ನ ನಾಯಕರಲ್ಲಿ ಆತಂಕಕ್ಕೆ ಹೆಚ್ಚಾಗುತ್ತಿದೆ. https://ainkannada.com/demand-for-bribe-waqf-official-falls-into-loka-trap/ ಈ ಮಧ್ಯೆಯೇ ,ಪಾಕ್ ಗುಪ್ತಚರ ಸಂಸ್ಥೆಪರ ಕೆಲಸ ಮಾಡುತ್ತಿದ್ದ ಇಬ್ಬರನ್ನು ಪಂಜಾಬ್ ನ ಅಮೃತಸರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಅಮೃತಸರದಲ್ಲಿರುವ ಸೇನಾ ಅಂಟಾನ್ಮೆಂಟ್ ಪ್ರದೇಶ, ವಾಯುನೆಲೆಗಳ ಸೂಕ್ಷ್ಮ ಮಿಲಿಟರಿ ಮಾಹಿತಿ ಮತ್ತು ಫೋಟೋಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಕಳುಹಿಸಿದ್ದರು. ಶನಿವಾರ ಶೇರ್ ಮಾಸಿಹ್ ಮತ್ತು ಸೂರಜ್ ಮಾಸಿಹ್ ಬಂಧನ ಮಾಡಲಾಗಿದ್ದು ಸದ್ಯ ಇವರನ್ನು ಅಮೃತಸರ ಕೇಂದ್ರ ಜೈಲಿಗೆ ಕಳುಹಿಸಲಾಗಿದೆ. ಪಂಜಾಬ್ ಡಿಜಿಪಿ ಗೌರವ್ ಯಾದವ್ ಪ್ರತಿಕ್ರಿಯಿಸಿ, ಪ್ರಾಥಮಿಕ ತನಿಖೆಯ ವೇಳೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಜೊತೆ ಇವರು ಸಂಪರ್ಕ ಹೊಂದಿದ್ದರು. ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ…
ಗದಗ:- ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಕ್ಫ್ ಅಧಿಕಾರಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಗದಗದಲ್ಲಿ ಜರುಗಿದೆ. ರೆಹಮತ್ತುಲ್ಲಾ ಪೆಂಡಾರಿ ಲೋಕಾ ಬಲೆಗೆ ಬಿದ್ದ ಅಧಿಕಾರಿ. https://ainkannada.com/crime-news-brutal-murder-of-a-young-man-chopped-to-death-with-deadly-weapons/ ಮುಳಗುಂದ ಮಸೀದಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಪತ್ರ ರವಾನಿಸಲು ಅಧಿಕಾರಿ ರೆಹಮತ್ತುಲ್ಲಾ ಅವರು ಎಸ್ ಎ ಮಕಾನದಾರ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ಎಸ್ ಎ ಮಕಾನದಾರ್ ದೂರು ಕೊಟ್ಟಿದ್ದರು. ದೂರಿನ ಅನ್ವಯ ದಾಳಿ ನಡೆಸಿದ ಲೋಕಾ ಆ್ಯಂಡ್ ಟೀಮ್, ವಕ್ಫ್ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.
ಬೆಳಗಾವಿ:- ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಜರುಗಿದೆ. ಪರಶುರಾಮ ಗೊಂದಳಿ(25) ಕೊಲೆಯಾದ ವ್ಯಕ್ತಿ. https://ainkannada.com/ipl-2025-captain-rajat-says-kohli-bethal-are-the-reason-for-rcbs-victory/ ಗೋಕಾಕ್ ನಗರದಲ್ಲಿರುವ ಸತೀಶ್ ಜಾರಕಿಹೊಳಿ ನಿವಾಸದ ರಸ್ತೆಯಲ್ಲಿ ಘಟನೆ ಜರುಗಿದೆ. ಮಾತನಾಡೋದಿದೆ ಬಾ ಎಂದು ಯುವಕನನ್ನು ಕರೆದು ಕೊಲೆ ಮಾಡಿ ಗ್ಯಾಂಗ್ ಪರಾರಿ ಆಗಿದೆ. ಸ್ಥಳಕ್ಕೆ ಗೋಕಾಕ್ ನಗರ CPI, PSI ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗೋಕಾಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಎರಡೇ 2 ರನ್ಗಳಿಂದ ರೋಚಕ ಗೆಲುವು ಪಡೆದಿದೆ. https://ainkannada.com/crime-news-preet-sodus-mistake-murder-of-a-young-man-who-was-in-love-with-a-woman-2-years-older-than-him/ ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಅವರು, ಇದೊಂದು ತುಂಬಾ ಕಷ್ಟವಾದ, ರೋಮಾಂಚನವಾದ ಪಂದ್ಯವಾಗಿತ್ತು. ಬಲಿಷ್ಠ ಬ್ಯಾಟಿಂಗ್ ಮೂಡಿ ಬಂದಿದ್ದರಿಂದ ಧೈರ್ಯದಿಂದ ಬೌಲಿಂಗ್ ಮಾಡಿದ ಡೆತ್ ಓವರ್ ಸ್ಪೆಷಲಿಸ್ಟ್ಗೆ ಈ ಅಮೂಲ್ಯವಾದ ಕ್ರೆಡಿಟ್ ಸಲ್ಲಬೇಕು. ಆರ್ಸಿಬಿಯ ಮುಖ್ಯವಾದ ಬೌಲರ್ ಆಗಿರುವ ಡೆತ್ ಓವರ್ ಸ್ಪೆಷಲಿಸ್ಟ್ ಕೊನೆ ಓವರ್ನಲ್ಲಿ ನಮ್ಮ ಪರ ಕ್ಲಿಯರ್ ಕಟ್ ಫಲಿತಾಂಶ ಬರುವಂತೆ ಮಾಡಿದರು. ಹೀಗಾಗಿ ಈ ಎಲ್ಲ ಕ್ರೆಡಿಟ್ ಯಶ್ ದಯಾಳ್ಗೆ ಸಲ್ಲಬೇಕು ಎಂದು ರಜತ್ ಹೇಳಿದ್ದಾರೆ. ಕಳೆದ ವರ್ಷವೂ ಯಶ್ ದಯಾಳ್ ಇದೇ ತಂಡದ ವಿರುದ್ಧ ರೋಚಕವಾಗಿ ಬೌಲಿಂಗ್ ಮಾಡಿ ಆರ್ಸಿಬಿಗೆ ನೆರವಾಗಿದ್ದರು. ಅದರಂತೆ ಈ ಬಾರಿಯು ನಮಗೆ ದೊಡ್ಡ ಗೆಲುವು ತಂದುಕೊಟ್ಟಿದ್ದಾರೆ. ಕೊನೆಯಲ್ಲಿ ಬೌಲಿಂಗ್ ಕೊಡುವಾಗ ಸುಯಾಶ್ ಮೇಲೂ ನಮಗೆ ವಿಶ್ವಾಸವಿತ್ತು. ಪಂದ್ಯ ಯಾರು ಗೆಲ್ಲುತ್ತಾರೆ ಹೇಳುವುದು ಕಷ್ಟವಾಗಿತ್ತು.…
ಬೆಂಗಳೂರು ಗ್ರಾಮಾಂತರ:- ಹುಡುಗಿಯನ್ನ ಪ್ರೀತಿ ಮಾಡಿದಕ್ಕೆ ಯುವಕನನ್ನು ಹಲ್ಲೆಗೈದು ಕೊಲೆ ಮಾಡಿದ ಘಟನೆ ದೇವನಹಳ್ಳಿ ಹೊರವಲಯದ ನೀರುಗುಂಟೆಪಾಳ್ಯದಲ್ಲಿ ಜರುಗಿದೆ. ನೀರುಗುಂಟೆಪಾಳ್ಯದ ಪ್ರೀತಂ ( 19 ) ಕೊಲೆಯಾದ ಯುವಕ. https://ainkannada.com/gold-rate-attention-to-gold-lovers-how-much-is-the-gold-rate-today/ ತನಗಿಂತ 2 ವರ್ಷ ದೊಡ್ಡವಳಾದ ಯುವತಿಯನ್ನ ಯುವಕ ಪ್ರೀತಿ ಮಾಡುತ್ತಿದ್ದ. ಎಂಬಿಬಿಎಸ್ ವ್ಯಾಸಾಂಗ ಮಾಡ್ತಿದ್ದ ಯುವತಿ ಜೊತೆ ಯುವಕ ಪ್ರೀತಿಯಲ್ಲಿದ್ದ. ಪ್ರೀತಿ ವಿಚಾರ ತಿಳಿದು ಎರಡು ಮೂರು ಬಾರಿ ಯುವಕನಿಗೆ ಯುವತಿ ಕುಟುಂಬದವರು ವಾರ್ನಿಂಗ್ ಕೊಟ್ಟಿದ್ದರು. ವಾರ್ನಿಂಗ್ ಮಾಡಿದ್ರು ಪ್ರೀತಿ ಮುಂದುವರೆಸಿದ್ದ ಹಿನ್ನೆಲೆ ಶುಕ್ರವಾರ ರಾತ್ರಿ ಯುವಕನನ್ನು ಕಿಡ್ನಾಪ್ ಮಾಡಿ ಹಲ್ಲೆಗೈದು ಕೊಲೆಗೈದಿದ್ದಾರೆ. ಬಳಿಕ ಮೃತದೇಹವನ್ನು ಗ್ರಾಮದಲ್ಲಿ ಬಾಡಿ ಬಿಸಾಕಿ ಹೋಗಿದ್ದಾರೆ. ಮೃತ ಯುವಕ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಯುವತಿಯ ಚಿಕ್ಕಮ್ಮನ ಮಗ ಶ್ರೀಕಾಂತ್ ಮತ್ತು ಸಹಚರರಿಂದ ಈ ಕೃತ್ಯ ನಡೆದಿರುವ ಆರೋಪ ಕೇಳಿ ಬಂದಿದೆ. ಬೆಳೆದು ನಿಂತಿದ್ದ ಮಗನನ್ನ ಕಳೆದುಕೊಂಡ ಯುವಕನ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟಮುಟ್ಟಿದೆ. ಯುವಕನ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯ…
ಗೋಲ್ಡ್ ಪ್ರಿಯರು ಇತ್ತೀಚಿನ ದಿನಗಳಲ್ಲಿ ಕಂಗಾಲಾಗಿ ಹೋಗಿದ್ದಾರೆ. ಕಾರಣ ಚಿನ್ನದ ದರದ ಏರಿಕೆ. ಮೂರು ದಿನಗಳಿಂದ 250 ರೂನಷ್ಟು ಕಡಿಮೆ ಆಗಿದ್ದ ಸ್ವರ್ಣ ಬೆಲೆ ಶನಿವಾರ ಮತ್ತು ಭಾನುವಾರ ಯಾವ ಬದಲಾವಣೆಯನ್ನೂ ಕಂಡಿಲ್ಲ. 22 ಕ್ಯಾರಟ್ ಚಿನ್ನದ ಬೆಲೆ 8,755 ರೂನಲ್ಲಿ ಮುಂದುವರಿದಿದೆ. ವಿದೇಶಗಳಲ್ಲಿ ಕೆಲ ಮಾರುಕಟ್ಟೆಗಳಲ್ಲಿ ಬೆಲೆ ತುಸು ಇಳಿಕೆ ಆಗಿದೆ. https://ainkannada.com/heavy-rain-forecast-in-capital-bangalore-for-next-week/ ಬೆಂಗಳೂರಿನಲ್ಲಿ 98 ರೂ ಬೆಲೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,510 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,800 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 4ಕ್ಕೆ) 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,550 ರೂ…