Author: AIN Author

ಕೋಲಾರ  : ಪ್ಲಾಸ್ಟಿಕ್ ಗೋಡೌನ್ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಕೋಲಾರ ನಗರದ ಹೊರವಲಯದ ಈಲಂ ಬಳಿ ಘಟನೆ ನಡೆದಿದೆ. ಅಸ್ಲಾಂ ಪಾಷ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,  30 ಲಕ್ಷ ರೂಪಾಯಿ ಮೌಲ್ಯದ ಅಧಿಕ ಪ್ಲಾಸ್ಟಿಕ್ ವಸ್ತುಗಳು ಹಾಗೂ ಮೆಷಿನ್‌ಗಳು ಬೆಂಕಿಗಾಹುತಿಯಾಗಿವೆ. https://ainkannada.com/youths-attack-buddi-for-telling-him-not-to-smoke-cigarettes/ ಕೋಲಾರ ಹಾಗೂ ಬಂಗಾರಪೇಟೆ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು,ಸತತ ಏಳುಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಕೋಲಾರ – ಮುಳಬಾಗಿಲು ನಗರ ಹಾಗೂ ಕೋಲಾರ ಗ್ರಾಮಾಂತರ ಸೇರಿದಂತೆ ಒಂಬತ್ತು ಕಡೆ ವಿವಿಧ ಸಂದರ್ಭಗಳಲ್ಲಿ ಕನ್ನ ಹಾಕಿ ಚಿನ್ನ ಹಾಗೂ ಬೆಳ್ಳಿ ಕದ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ ಬಳಿಯ ಇಲಿಯಾಸ್‌ ನಗರದ ನಿವಾಸಿ ಸೈಯದ್‌ ಅಫ್ಸರ್‌ (37) ಬಂಧಿತ ಆರೋಪಿ. ಬಂಧಿತನಿಂದ 557 ಗ್ರಾಂ ಚಿನ್ನ, ಎರಡೂವರೆ ಕೆ.ಜಿ ಬೆಳ್ಳಿ ಸೇರಿದಂತೆ ಸುಮಾರು ₹ 52.63 ಲಕ್ಷ ಮೌಲ್ಯದ ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. https://ainkannada.com/youths-attack-buddi-for-telling-him-not-to-smoke-cigarettes/ ಮುಳಬಾಗಿಲು ನಗರದ ಮಂಜುನಾಥ್‌ ಕಾಲೋನಿಯ ಸೋಮಶೇಖರಪ್ಪ  ಎಂಬುವರ ನಿವಾಸದಲ್ಲಿ ಏ.4ರಂದು ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಚಿನ್ನ ಕದ್ದಿರುವ ಬಗ್ಗೆ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿ ಸೈಯದ್‌ ಅಫ್ಸರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಗೊತ್ತಾಗಿದೆ. ‘ಕಳ್ಳತನ ಮಾಡಿರುವ ಬಗ್ಗೆ ಆರೋಪಿ ಅಫ್ಸರ್‌ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಮುಳಬಾಗಿಲು…

Read More

ಧಾರವಾಡ : ಸಿಗರೇಟು ಸೇದಬೇಡಿ ಎಂದು ಬುದ್ದಿ ಹೇಳಿದಕ್ಕೆ ಹಲ್ಲೆ ಮಾಡಿದ ಘಟನೆ ಧಾರವಾಡ ನಗರದ ಗಾಂಧಿ ಚೌಕ್ ಬಳಿ ನಡೆದಿದೆ. ಆರ್‌ಎಸ್‌ ಎಸ್‌ ಮುಖಂಡ ಶಿರಿಶ್ ಬಳ್ಳಾರಿ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದೆ. ಸಿಗರೇಟ್‌ ಸೇದಬೇಡಿ ಎಂದಿದ್ದಕ್ಕೆ  ಮುಸ್ಲಿಂ ಯುವಕರಿಂದ ಹಲ್ಲೆ ನಡೆದಿದೆ. ಆರ್ ಎಸ್ ಎಸ್ ಮುಖಂಡ ಶಿರಿಶ್ ಬಳ್ಳಾರಿ ಅವರ ಮನೆಯೊಳಗೆ ನುಗ್ಗಿದ  ಮುಸ್ಲಿಂ ಯುವಕರು, ಶಿರಿಶ್‌ ಬಳ್ಳಾರಿ ಮತ್ತು ಅವರ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. https://ainkannada.com/cabinet-meeting-at-malemahadeshwara-hill-chamarajanagar-district-to-get-special-package/ ಇನ್ನೂ ಆರ್ ಎಸ್ ಎಸ್ ಮುಖಂಡ ಶ್ರಿರಿಶ್ ಅವರು ಧಾರವಾಡ ಶಹರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಹಲ್ಲೆ ಮಾಡಿದ ನಾಲ್ವರು ಯುವಕರು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಶಹರ ಪೋಲಿಸ್ ಠಾಣೆಯ ಎದುರು ಸೇರಿದ ನೂರಾರು ಹಿಂದೂ ಕಾರ್ಯಕರ್ತರು, ತಪ್ಪಿತಸ್ಥರ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.

Read More

ಶಿವಮೊಗ್ಗ: ಪಹಲ್ಗಾಮ್‌ನಲಲಿ ಭಯೋತ್ಪಾದಕರ ದುಷ್ಕೃತ್ಯಕ್ಕೆ ಬಲಿಯಾದ ಉದ್ಯಮಿ ಮಂಜುನಾಥ್‌ ರಾವ್‌ ಮೃತದೇಹ ಶಿವಮೊಗ್ಗಕ್ಕೆ ತಲುಪಿದೆ. ಗುರುವಾರ ಬೆಂಗಳೂರಿಗೆ ಮಂಜುನಾಥ್‌ ರಾವ್‌ ಪಾರ್ಥೀವ ಶರೀರ ತರಲಾಯಿತು. ಬೆಂಗಳೂರು, ತುಮಕೂರು ಮತ್ತು ಚಿತ್ರದುರ್ಗ ಮಾರ್ಗವಾಗಿ ಮಂಜುನಾಥ್ ಪಾರ್ಥಿವ ಶರೀರ ಶಿವಮೊಗ್ಗಕ್ಕೆ ರವಾನಿಸಲಾಯಿತು. ಇದೇ ವೇಳೆ ತುಮಕೂರಿನ ಕ್ಯಾತಸಂದ್ರದ ಟೋಲ್ ಗೇಟ್‍ನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಶಾಸಕ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. https://ainkannada.com/militant-attack-shraddhanjali-offering-to-victims-of-firing/ ಮಂಜುನಾಥ್ ರಾವ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮನೆ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Read More

ಚಾಮರಾಜನಗರ : ಪ್ರಸಿದ್ದ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ಸಂಪುಟ ಸಭೆ ನಡೆಯಲಿದ್ದು, ಸಭೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ವಜ್ರಮಲೆ ವಸತಿ ಗೃಹ ಎದುರಿನ ಆವರಣದಲರಲ ಜರ್ಮನ್‌ ಟೆಂಟ್‌ ಅಳವಡಿಸಿದ್ದು, ಅಲ್ಲಿಯೇ ಸಭೆಯ ನಡೆಯಲಿದೆ. ಇನ್ನೂ ಸಚಿವ ಸಂಪುಟ ಸಭೆಯಲ್ಲೆಯ ಮೈಸೂರು ಭಾಗದ ಜಿಲ್ಲೆಗಳ ಅಭಿವೃದ್ದಿ ಕುರಿತು ಚರ್ಚೆಯಾಗಲಿದೆ. ಎಂಟು ಜಿಲ್ಲೆಗಳ ವಿವಿಧ ಯೋಜನೆಗಳ ಬಗ್ಗೆ ಚರ್ಚೆಯಾಗಲಿದ್ದು, ಅನುಮೋದನೆ ಸಾಧ್ಯತೆಯಿದೆ. ಜೊತೆಗೆ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಸಿಗುವ ಸಾಧ್ಯತೆ ಇದೆ. https://ainkannada.com/cabinet-meeting-at-mahadeshwara-hill-local-mlas-ignored-kollegal-mla-a-r-krishna-unhappy/ ಇಂದು ಬೆಳಗ್ಗೆ 11:30ಕ್ಕೆ ಹೆಲಿಕಾಪ್ಟರ್ ಮೂಲಕ ಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ಮಹದೇಶ್ವರರ ಇತಿಹಾಸ ಸಾರುವ ಮ್ಯೂಸಿಯಂ, 376 ಕೊಠಡಿಗಳ ವಸತಿ ಗೃಹ, 1 ಮೆಗಾ ವ್ಯಾಟ್ ಸೋಲಾರ್ ಪ್ಲಾಂಟ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದೆ. ಬಳಿಕ ಮಧ್ಯಾಹ್ನ 12:00 ಗಂಟೆಗೆ ಸಚಿವ ಸಂಪುಟ ಸಭೆ ಆರಂಭಗೊಳ್ಳಲಿದ್ದು, ಬಳಿಕ ಪತ್ರಿಕಾಗೋಷ್ಠಿ…

Read More

ಕಲಬುರಗಿ:- ಅಡ್ಡಲಾಗಿ ಬಂದ ನಾಯಿ ಉಳಿಸಲು ರಸ್ತೆ ಬದಿಯ ತಡೆ ಕಂಬಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಅಫಜಲಪುರ ಮುಖ್ಯರಸ್ತೆ ಗೊಬ್ಬೂರ ಬಳಿ ಜರುಗಿದೆ. https://ainkannada.com/the-center-will-teach-a-befitting-lesson-to-those-who-victimized-innocent-people-v-somanna/ ಆಯೇಷಾ (70), ಅಜ್ಮೆರಾ (30) ಮತ್ತು ಅಜ್ಮೇರಾ ಮಗಳು ಜೈನಬ್ (2) ಮೃತ ದುರ್ದೈವಿಗಳು. ಇಂದು ಬೆಳಿಗ್ಗೆ ಕಾರಿನಲ್ಲಿ ಒಂದೇ ಕುಟುಂಬದ 8 ಜನ ಸೇರಿದಂತೆ 5 ಜನ ಮಕ್ಕಳು ಸಂಬಂಧಿಕರ ಮಗುವಿನ ಜವಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಅದೇ ವೇಳೆ ಗೊಬ್ಬೂರ ಗ್ರಾಮದ ಬಳಿ ಕಾರಿಗೆ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ರಸ್ತೆ ಬದಿಯ ತಡೆ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ 6 ಕಂಬಗಳು ಹಾಗೂ ಕಾರು ಸಂಪೂರ್ಣ ನಜ್ಜು ಗುಜ್ಜಾಗಿ ಹೋಗಿದೆ. ಅಲ್ಲದೇ ಸ್ಥಳದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Read More

ಚಾಮರಾಜನಗರ : ಇಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಆದರೆ ಈ ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಶಾಸಕರ ಕಡೆಗಣನೆ ಮಾಡಿರುವು ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಕಾಂಗ್ರೆಸ್ ಶಾಸಕರ ಸಭೆ ನಡೆಸದೇ ಕಡೆಗಣನೆ ಮಾಡಲಾಗುತ್ತಿದೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ದದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಕೆ.ವೆಂಕಟೇಶ್ ಕಡೆಗಣನೆ ಸ್ಥಳೀಯ ಶಾಸಕರ ಕಡೆಗಣನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. https://ainkannada.com/cabinet-meeting-at-mahadeshwara-hill-today-dk-shivakumar-pooja-at-the-temple-in-the-morning/ ಈ ಬಗ್ಗೆ ಮಾತನಾಡಿರುವ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು, ಮೈಸೂರು ಬೆಂಗಳೂರು ಮಂಡ್ಯ ಸಚಿವರು ಸ್ಥಳೀಯ ಶಾಸಕರ ಸಭೆ ನಡೆಸಿ ಜಿಲ್ಲೆಯ ಅಭಿವೃದ್ಧಿಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಾಮಕಾವಸ್ಥೆಗೂ ಸಭೆ ನಡೆಸಲಾಗಿದೆ.  ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಕಾಂಗ್ರೆಸ್ ಶಾಸಕರ ಅಭಿಪ್ರಾಯ ಸಲಹೆ ಪಡೆದಿಲ್ಲ. ಚಾಮರಾಜನಗರ ಜಿಲ್ಲಾ ಅಭಿವೃದ್ದಿಗಾಗಿ ಸ್ಥಳೀಯ ಕಾಂಗ್ರೆಸ್ ಶಾಸಕರ ಸಭೆ ಕರೆದು ಆಯಾ ಕ್ಷೇತ್ರಗಳ ಅಭಿವೃದ್ಧಿಗೆ ಸಲಹೆ…

Read More

ಬೆಂಗಳೂರು:- ಇಂದು ಬೆಳಿಗ್ಗೆ ಕಾಶ್ಮೀರ ಉಗ್ರರ ದಾಳಿಗೆ ಬಲಿಯಾದ ಮೂವರು ಕನ್ನಡಿಗರ ಮೃತದೇಹವನ್ನು ಬೆಂಗಳೂರು ಏರ್ಪೋರ್ಟ್ ಗೆ ತರಲಾಯಿತು. ಕುಟುಂಬಸ್ಥರ ಜೊತೆ ಕೇಂದ್ರ ಸಚವ ವಿ ಸೋಮಣ್ಣ ಹಾಗೂ ಸಂಸದ ತೇಜಸ್ವಿ ಸೂರ್ಯ ಜೊತೆಯಾಗಿದ್ದು ಧೈರ್ಯ ತುಂಬಿದರು. https://ainkannada.com/militant-attack-shraddhanjali-offering-to-victims-of-firing/ ಬಳಿಕ ಮಾತನಾಡಿದ ವಿ ಸೋಮಣ್ಣ, ಈ ಘಟನೆಯನ್ನ ಇಡೀ ವಿಶ್ವವೇ ಖಂಡಿಸಿದೆ. ಸದ್ಯ ನಮ್ಮ ಪ್ರಧಾನಿ ಇಡಿ ವಿಶ್ವ ಮೆಚ್ಚುವಂತ ನಿರ್ಧಾರ ತೆಗೆದುಕೊಂಡಿದ್ದಾರೆ ಒಂದು. ಉಗ್ರರು ಅಮಾಯಕರನ್ನ ಬಲಿ ಪಡೆದಿದ್ದಾರೆ. ದೇಶವನ್ನ ಅಸ್ಥಿರ ಮಾಡಬೇಕು ಅನ್ನೋರಿಗೆ ಸಂದೇಶ ಕೊಟ್ಟಿದ್ದಾರೆ. ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ ಇದು. ಮುಗ್ದರ ಕೊಲೆ ಮಾಡಿರುವರನ್ನ ತಕ್ಕ ಶಿಕ್ಷೆ ಕೊಡುವಂತೆ ಕೆಲಸ ಮಾಡ್ತೀವಿ. ಕುಟುಂಬಸ್ಥರಿಗೆ ನೋವನ್ನ ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.

Read More

ಧಾರವಾಡ:- ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರರ ದಾಳಿಗೆ ಬಲಿಯಾದವರಿಗೆ ಧಾರವಾಡದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. https://ainkannada.com/siddaramaiah-pays-last-respects-to-bharat-bhushan-who-was-killed-by-terrorists/ ಯುತ್ ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ನಗರದ ಆಲೂರ ವೆಂಕಟರಾವ್ ವೃತ್ತದಲ್ಲಿ ಕ್ಯಾಂಡಲ್ ಮಾರ್ಚ್ ನಡೆದಿದೆ. ಕ್ಯಾಂಡಲ್ ಹಿಡಿದು ಬಲಿಯಾದ ಪ್ರವಾಸಿಗರಿಗೆ ನಮನ ಸಲ್ಲಿಸಿದ್ದಾರೆ. ಕ್ಯಾಂಡಲ್ ಹಿಡಿದು ಕಾರ್ಯಕರ್ತರು ಮೌನವಾಗಿ ನಮನ ಸಲ್ಲಿಸಿದರು. ಜುಬ್ಲಿ ವೃತ್ತದಲ್ಲಿ ಕೆಲ‌ ಹೊತ್ತು ನಿಂತು ನಿಧನ ಹೊಂದಿರುವ ಪ್ರವಾಸಿಗರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ.

Read More

ಬೆಂಗಳೂರು:- ಪ್ರವಾಸಕ್ಕೆಂದು ಕಾಶ್ಮೀರಕ್ಕೆ ತೆರಳಿದ್ದ 28 ಪ್ರವಾಸಿಗರು ಉಗ್ರರ ಭೀಕರ ಗುಂಡಿನ ದಾಳಿಗೆ ಬಲಿ ಆಗಿದ್ದಾರೆ. ಇದೇ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹ ಬೆಂಗಳೂರಿಗೆ ಶಿಫ್ಟ್ ಆಗಿದೆ. https://ainkannada.com/cabinet-meeting-at-mahadeshwara-hill-today-dk-shivakumar-pooja-at-the-temple-in-the-morning/ ಸಿಎಂ ಸಿದ್ದರಾಮಯ್ಯ ಅವರು ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾದ ನಗರದ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದರು. ಸಿಎಂ ಭೇಟಿಯ ವೇಳೆ, ಮಗುವನ್ನು ತೋರಿಸಿ ಘಟನೆಯ ಭೀಕರತೆಯನ್ನು ಹೇಳಿ ಭರತ್‌ ಪತ್ನಿ ಸುಜಾತ ಅವರು ಕಣ್ಣಿರಿಟ್ಟರು. ಸಿಎಂ ಮುಂದೆ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದು, ಮಗುವಿನ ಮುಖ ನೋಡಿ ಸಿಎಂ ಸಹ ಭಾವುಕರಾದರು. ಭರತ್ ಪತ್ನಿ, ಸೋದರಮಾವ ಸೀತಾರಾಮ್ ಹಾಗೂ ಭರತ್ ತಂದೆಯವರಿಗೆ ಸಿಎಂ ಸಾಂತ್ವನ ಹೇಳಿದರು

Read More