ಚಾಮರಾಜನಗರ : ಪ್ರಸಿದ್ದ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ಸಂಪುಟ ಸಭೆ ನಡೆಯಲಿದ್ದು, ಸಭೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ವಜ್ರಮಲೆ ವಸತಿ ಗೃಹ ಎದುರಿನ ಆವರಣದಲರಲ ಜರ್ಮನ್ ಟೆಂಟ್ ಅಳವಡಿಸಿದ್ದು, ಅಲ್ಲಿಯೇ ಸಭೆಯ ನಡೆಯಲಿದೆ. ಇನ್ನೂ ಸಚಿವ ಸಂಪುಟ ಸಭೆಯಲ್ಲೆಯ ಮೈಸೂರು ಭಾಗದ ಜಿಲ್ಲೆಗಳ ಅಭಿವೃದ್ದಿ ಕುರಿತು ಚರ್ಚೆಯಾಗಲಿದೆ. ಎಂಟು ಜಿಲ್ಲೆಗಳ ವಿವಿಧ ಯೋಜನೆಗಳ ಬಗ್ಗೆ ಚರ್ಚೆಯಾಗಲಿದ್ದು, ಅನುಮೋದನೆ ಸಾಧ್ಯತೆಯಿದೆ. ಜೊತೆಗೆ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಸಿಗುವ ಸಾಧ್ಯತೆ ಇದೆ. https://ainkannada.com/cabinet-meeting-at-mahadeshwara-hill-local-mlas-ignored-kollegal-mla-a-r-krishna-unhappy/ ಇಂದು ಬೆಳಗ್ಗೆ 11:30ಕ್ಕೆ ಹೆಲಿಕಾಪ್ಟರ್ ಮೂಲಕ ಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ಮಹದೇಶ್ವರರ ಇತಿಹಾಸ ಸಾರುವ ಮ್ಯೂಸಿಯಂ, 376 ಕೊಠಡಿಗಳ ವಸತಿ ಗೃಹ, 1 ಮೆಗಾ ವ್ಯಾಟ್ ಸೋಲಾರ್ ಪ್ಲಾಂಟ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದೆ. ಬಳಿಕ ಮಧ್ಯಾಹ್ನ 12:00 ಗಂಟೆಗೆ ಸಚಿವ ಸಂಪುಟ ಸಭೆ ಆರಂಭಗೊಳ್ಳಲಿದ್ದು, ಬಳಿಕ ಪತ್ರಿಕಾಗೋಷ್ಠಿ…
Author: AIN Author
ಕಲಬುರಗಿ:- ಅಡ್ಡಲಾಗಿ ಬಂದ ನಾಯಿ ಉಳಿಸಲು ರಸ್ತೆ ಬದಿಯ ತಡೆ ಕಂಬಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಅಫಜಲಪುರ ಮುಖ್ಯರಸ್ತೆ ಗೊಬ್ಬೂರ ಬಳಿ ಜರುಗಿದೆ. https://ainkannada.com/the-center-will-teach-a-befitting-lesson-to-those-who-victimized-innocent-people-v-somanna/ ಆಯೇಷಾ (70), ಅಜ್ಮೆರಾ (30) ಮತ್ತು ಅಜ್ಮೇರಾ ಮಗಳು ಜೈನಬ್ (2) ಮೃತ ದುರ್ದೈವಿಗಳು. ಇಂದು ಬೆಳಿಗ್ಗೆ ಕಾರಿನಲ್ಲಿ ಒಂದೇ ಕುಟುಂಬದ 8 ಜನ ಸೇರಿದಂತೆ 5 ಜನ ಮಕ್ಕಳು ಸಂಬಂಧಿಕರ ಮಗುವಿನ ಜವಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಅದೇ ವೇಳೆ ಗೊಬ್ಬೂರ ಗ್ರಾಮದ ಬಳಿ ಕಾರಿಗೆ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ರಸ್ತೆ ಬದಿಯ ತಡೆ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ 6 ಕಂಬಗಳು ಹಾಗೂ ಕಾರು ಸಂಪೂರ್ಣ ನಜ್ಜು ಗುಜ್ಜಾಗಿ ಹೋಗಿದೆ. ಅಲ್ಲದೇ ಸ್ಥಳದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಮರಾಜನಗರ : ಇಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಆದರೆ ಈ ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಶಾಸಕರ ಕಡೆಗಣನೆ ಮಾಡಿರುವು ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಕಾಂಗ್ರೆಸ್ ಶಾಸಕರ ಸಭೆ ನಡೆಸದೇ ಕಡೆಗಣನೆ ಮಾಡಲಾಗುತ್ತಿದೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಕೆ.ವೆಂಕಟೇಶ್ ಕಡೆಗಣನೆ ಸ್ಥಳೀಯ ಶಾಸಕರ ಕಡೆಗಣನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. https://ainkannada.com/cabinet-meeting-at-mahadeshwara-hill-today-dk-shivakumar-pooja-at-the-temple-in-the-morning/ ಈ ಬಗ್ಗೆ ಮಾತನಾಡಿರುವ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು, ಮೈಸೂರು ಬೆಂಗಳೂರು ಮಂಡ್ಯ ಸಚಿವರು ಸ್ಥಳೀಯ ಶಾಸಕರ ಸಭೆ ನಡೆಸಿ ಜಿಲ್ಲೆಯ ಅಭಿವೃದ್ಧಿಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಾಮಕಾವಸ್ಥೆಗೂ ಸಭೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಕಾಂಗ್ರೆಸ್ ಶಾಸಕರ ಅಭಿಪ್ರಾಯ ಸಲಹೆ ಪಡೆದಿಲ್ಲ. ಚಾಮರಾಜನಗರ ಜಿಲ್ಲಾ ಅಭಿವೃದ್ದಿಗಾಗಿ ಸ್ಥಳೀಯ ಕಾಂಗ್ರೆಸ್ ಶಾಸಕರ ಸಭೆ ಕರೆದು ಆಯಾ ಕ್ಷೇತ್ರಗಳ ಅಭಿವೃದ್ಧಿಗೆ ಸಲಹೆ…
ಬೆಂಗಳೂರು:- ಇಂದು ಬೆಳಿಗ್ಗೆ ಕಾಶ್ಮೀರ ಉಗ್ರರ ದಾಳಿಗೆ ಬಲಿಯಾದ ಮೂವರು ಕನ್ನಡಿಗರ ಮೃತದೇಹವನ್ನು ಬೆಂಗಳೂರು ಏರ್ಪೋರ್ಟ್ ಗೆ ತರಲಾಯಿತು. ಕುಟುಂಬಸ್ಥರ ಜೊತೆ ಕೇಂದ್ರ ಸಚವ ವಿ ಸೋಮಣ್ಣ ಹಾಗೂ ಸಂಸದ ತೇಜಸ್ವಿ ಸೂರ್ಯ ಜೊತೆಯಾಗಿದ್ದು ಧೈರ್ಯ ತುಂಬಿದರು. https://ainkannada.com/militant-attack-shraddhanjali-offering-to-victims-of-firing/ ಬಳಿಕ ಮಾತನಾಡಿದ ವಿ ಸೋಮಣ್ಣ, ಈ ಘಟನೆಯನ್ನ ಇಡೀ ವಿಶ್ವವೇ ಖಂಡಿಸಿದೆ. ಸದ್ಯ ನಮ್ಮ ಪ್ರಧಾನಿ ಇಡಿ ವಿಶ್ವ ಮೆಚ್ಚುವಂತ ನಿರ್ಧಾರ ತೆಗೆದುಕೊಂಡಿದ್ದಾರೆ ಒಂದು. ಉಗ್ರರು ಅಮಾಯಕರನ್ನ ಬಲಿ ಪಡೆದಿದ್ದಾರೆ. ದೇಶವನ್ನ ಅಸ್ಥಿರ ಮಾಡಬೇಕು ಅನ್ನೋರಿಗೆ ಸಂದೇಶ ಕೊಟ್ಟಿದ್ದಾರೆ. ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ ಇದು. ಮುಗ್ದರ ಕೊಲೆ ಮಾಡಿರುವರನ್ನ ತಕ್ಕ ಶಿಕ್ಷೆ ಕೊಡುವಂತೆ ಕೆಲಸ ಮಾಡ್ತೀವಿ. ಕುಟುಂಬಸ್ಥರಿಗೆ ನೋವನ್ನ ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.
ಧಾರವಾಡ:- ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರರ ದಾಳಿಗೆ ಬಲಿಯಾದವರಿಗೆ ಧಾರವಾಡದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. https://ainkannada.com/siddaramaiah-pays-last-respects-to-bharat-bhushan-who-was-killed-by-terrorists/ ಯುತ್ ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ನಗರದ ಆಲೂರ ವೆಂಕಟರಾವ್ ವೃತ್ತದಲ್ಲಿ ಕ್ಯಾಂಡಲ್ ಮಾರ್ಚ್ ನಡೆದಿದೆ. ಕ್ಯಾಂಡಲ್ ಹಿಡಿದು ಬಲಿಯಾದ ಪ್ರವಾಸಿಗರಿಗೆ ನಮನ ಸಲ್ಲಿಸಿದ್ದಾರೆ. ಕ್ಯಾಂಡಲ್ ಹಿಡಿದು ಕಾರ್ಯಕರ್ತರು ಮೌನವಾಗಿ ನಮನ ಸಲ್ಲಿಸಿದರು. ಜುಬ್ಲಿ ವೃತ್ತದಲ್ಲಿ ಕೆಲ ಹೊತ್ತು ನಿಂತು ನಿಧನ ಹೊಂದಿರುವ ಪ್ರವಾಸಿಗರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ.
ಬೆಂಗಳೂರು:- ಪ್ರವಾಸಕ್ಕೆಂದು ಕಾಶ್ಮೀರಕ್ಕೆ ತೆರಳಿದ್ದ 28 ಪ್ರವಾಸಿಗರು ಉಗ್ರರ ಭೀಕರ ಗುಂಡಿನ ದಾಳಿಗೆ ಬಲಿ ಆಗಿದ್ದಾರೆ. ಇದೇ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹ ಬೆಂಗಳೂರಿಗೆ ಶಿಫ್ಟ್ ಆಗಿದೆ. https://ainkannada.com/cabinet-meeting-at-mahadeshwara-hill-today-dk-shivakumar-pooja-at-the-temple-in-the-morning/ ಸಿಎಂ ಸಿದ್ದರಾಮಯ್ಯ ಅವರು ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾದ ನಗರದ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದರು. ಸಿಎಂ ಭೇಟಿಯ ವೇಳೆ, ಮಗುವನ್ನು ತೋರಿಸಿ ಘಟನೆಯ ಭೀಕರತೆಯನ್ನು ಹೇಳಿ ಭರತ್ ಪತ್ನಿ ಸುಜಾತ ಅವರು ಕಣ್ಣಿರಿಟ್ಟರು. ಸಿಎಂ ಮುಂದೆ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದು, ಮಗುವಿನ ಮುಖ ನೋಡಿ ಸಿಎಂ ಸಹ ಭಾವುಕರಾದರು. ಭರತ್ ಪತ್ನಿ, ಸೋದರಮಾವ ಸೀತಾರಾಮ್ ಹಾಗೂ ಭರತ್ ತಂದೆಯವರಿಗೆ ಸಿಎಂ ಸಾಂತ್ವನ ಹೇಳಿದರು
ಚಾಮರಾಜನಗರ:- ಕೆಪಿಸಿಸಿ ಅಧ್ಯಕ ಹಾಗೂ ಉಪಮುಖ್ಯಮಂತ್ರಿಗಳಾಗಿರುವ ಡಿಕೆ ಶಿವಕುಮಾರ್ ಅವರು ಇಂದು ಚಾಮರಾಜನಗರದ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದರು. https://ainkannada.com/rcb-vs-rr-chinnaswamy-the-iron-man-rcb-to-get-a-win-at-home-today/ ಭೇಟಿ ವೇಳೆ ಮಹದೇಶ್ವರ ದೇಗುಲದಲ್ಲಿ ಇಂದು ಮುಂಜಾನೆಯೇ ಪೂಜೆ ಸಲ್ಲಿಸಿದರು. ಬಳಿಕ ಮಹದೇಶ್ವರ ಬೆಟ್ಟದಲ್ಲಿ ಹುಲಿವಾಹನ ಮಹದೇಶ್ವರ ಬೆಳ್ಳಿರಥ ಪ್ರದಕ್ಷಿಣೆಯಲ್ಲಿ ದಂಡುಕೋಲು ಸೇವೆ ಸಲ್ಲಿಸಿದರು. ಇದೆ ವೇಳೆ ಮಹದೇಶ್ವರ ಬಳಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಇನ್ನೂ ಬೆಂಗಳೂರು ಗಡಿ ಜಿಲ್ಲೆ ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ಯಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ತಲುಪಿದ್ದು, ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಬಹಳಷ್ಟು ಸಚಿವರು ಬುಧವಾರ ರಾತ್ರಿಯೇ ಮಹದೇಶ್ವರ ಬೆಟ್ಟ ತಲುಪಿದ್ದು, ಮೈಸೂರಿನಲ್ಲಿ ವಾಸ್ತವ್ಯ ಮಾಡಿರುವ ಕೆಲವು ಸಚಿವರು ಗುರುವಾರ ತೆರಳಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಳಗ್ಗೆ ಎಚ್‌ಎಲ್ ಏರ್‌ಪೋರ್ಟ್ ನಿಂದ ಹೆಲಿಕಾಪ್ಟರ್‌ನಲ್ಲಿ ಬೆಟ್ಟಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ…
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಮುಖಾಮುಖಿ ಪಂದ್ಯ ನಡೆಯಲಿದೆ. ತವರಿನಲ್ಲಿ ನಡೆಯುತ್ತಿರುವ ನಾಲ್ಕನೇ ಪಂದ್ಯವನ್ನಾಡದರೂ ಗೆಲ್ಲುವ ಮೂಲಕ ಆರ್ಸಿಬಿ ಪ್ಲೇಆಫ್‌ಗೆ ಇನ್ನಷ್ಟು ಸನಿಹವಾಗಲು ಮತ್ತು ತವರಿನಲ್ಲಿ ಸೋಲಿನ ಸರಣಿಯನ್ನು ಮುಂದುವರೆಸಲು ಯತ್ನಿಸಲಿದೆ. ಏಕೆಂದರೆ ತವರಿನಲ್ಲಿ ಆಡಿರುವ 3 ಪಂದ್ಯಗಳನ್ನು ಸೋತಿರುವ ಆರ್ಸಿಬಿಗೆ ನಾಳಿನ ಪಂದ್ಯ ಅತ್ಯಂತ ಮಹತ್ವದಾಗಿದೆ. ಇತ್ತ ರಾಜಸ್ಥಾನ್ ಕೂಡ ಕಳೆದ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಹಾಗೂ ಪ್ಲೇ ಆಫ್ ರೇಸ್ನಲ್ಲಿ ಜೀವಂತವಾಗಿರಲು ಹೋರಾಡಲಿದೆ. https://ainkannada.com/did-you-know-these-foods-are-the-best-for-removing-fat-stuck-around-the-liver/ ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ನಡೆದ 32 ಪಂದ್ಯಗಳಲ್ಲಿ, ಆರ್ಸಿಬಿ 16 ರಲ್ಲಿ ಗೆದ್ದಿದ್ದರೆ, ರಾಜಸ್ಥಾನ್ 14 ರಲ್ಲಿ ಗೆದ್ದಿದೆ. ಉಳಿದಂತೆ ಎರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಆದಾಗ್ಯೂ, ಬೆಂಗಳೂರಿನಲ್ಲಿ ನಡೆದ ಪಂದ್ಯಗಳಲ್ಲಿ ರಾಜಸ್ಥಾನ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಆರ್ಸಿಬಿ ಮೂರು ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಕಳೆದ ಬಾರಿ ಜೈಪುರದಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗ ಆರ್ಸಿಬಿ…
ಯಕೃತ್ ಅಥವಾ ಲಿವರ್ ನಮ್ಮ ದೇಹದ ಅತಿ ದೊಡ್ಡ ಅಂಗವಾಗಿದ್ದು ಹಲವಾರು ಕಾರ್ಯಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಮುಖ್ಯ ಅಂಗವಾಗಿದೆ. ಈ ಅಂಗದ ಇನ್ನೊಂದು ವೈಶಿಷ್ಟ್ಯವೆಂದರೆ ಇದರ ಒಂದು ಭಾಗವನ್ನು ಕತ್ತರಿಸಿ ಇನ್ನೊಬ್ಬರಿಗೆ ದಾನ ಮಾಡಿದರೂ ಶೀಘ್ರದಲ್ಲಿಯೇ ದಾನಿಯ ಕತ್ತರಿಸಲ್ಪಟ್ಟ ಯಕೃತ್ ಮತ್ತೆ ಬೆಳೆದು ಮೊದಲಿನ ಗಾತ್ರ ಪಡೆಯುತ್ತದೆ. ಈ ಕ್ಷಮತೆ ನಮ್ಮ ದೇಹದ ಇನ್ನಾವುದೇ ಅಂಗಕ್ಕಿಲ್ಲ. https://ainkannada.com/terrible-terrorist-attack-act-by-terrorists-who-cannot-tolerate-development-in-kashmir-ta-sharavana-slams/ ಯಕೃತ್‍ನ ಕಾರ್ಯಗಳು ಜೀರ್ಣಕ್ರಿಯೆ, ಸ್ವಚ್ಛತೆ, ಸೋಸುವಿಕೆ, ಪಿತ್ತರಸ ಸ್ರವಿಸುವಿಕೆ ಮೊದಲಾದವು ಗಳಲ್ಲೆಲ್ಲಾ ಪ್ರಮುಖ ಪಾತ್ರ ವಹಿಸುತ್ತವೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ನಾವು ಸೇವಿಸುವ ಆಹಾರದ ಬಣ್ಣ ಯಾವುದೇ ಆಗಿದ್ದರೂ ಬಹಿರ್ದೆಸೆ ಯಲ್ಲಿ ಕಾಣಬರುವ ಬಣ್ಣ ಬಹುತೇಕ ಒಂದೇ ಆಗಿರಲು ಯಕೃತ್, ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿಗಳ ಸ್ರಾವ ಕಾರಣವಾಗಿದ್ದು ಇದರಲ್ಲಿ ಸಿಂಹಪಾಲು ಯಕೃತ್ ಸ್ರವಿಸುವ ಪಿತ್ತರಸವೇ ಕಾರಣವಾಗಿದೆ. ಕೆಟ್ಟ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ, ಜನರು ಕೊಬ್ಬಿನ ಯಕೃತ್ತಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಕೃತ್ತಿನ ಸುತ್ತಲೂ ಕೊಬ್ಬು…
ಬೆಂಗಳೂರು:- ಕಾಶ್ಮೀರದ ಅಭಿವೃದ್ಧಿ ಸಹಿಸದ ಭಯೋತ್ಪಾದಕರಿಂದ ಪಹಲ್ಗಾಮ್ ನಲ್ಲಿ ಮಂಗಳವಾರ ಭೀಕರ ದಾಳಿ ನಡೆದಿದೆ ಎಂದು ಪರಿಷತ್ ಶಾಸಕ TA ಶರವಣ ಆಕ್ರೋಶ ಹೊರ ಹಾಕಿದ್ದಾರೆ. https://ainkannada.com/terrible-terrorist-attack-bodies-of-kannadigas-shifted-to-bengaluru-final-respects-paid-in-hometown/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ದಾಳಿ ಭಾರತದ ಸಾರ್ವಭೌಮತೆಗೆ ಮತ್ತು ಸಮಗ್ರತೆಗೆ ಉಂಟಾದ ಧಕ್ಕೆ. ಹೀಗಾಗಿ ಇದನ್ನು ಬಲವಾಗಿ ಖಂಡಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ನೇತೃತ್ವದ ಕೇಂದ್ರದ ಎನ್.ಡಿ. ಎ ಸರ್ಕಾರ, ಅಧಿಕಾರಕ್ಕೆ ಬಂದು ಕಾಶ್ಮೀರದಲ್ಲಿ ರಾಜಕೀಯ ಪರಿವರ್ತನೆ ಆದ ಬಳಿಕ ಶಾಂತಿಯ ಹೊಸ ಕಳೆಯೇ ಅಲ್ಲಿ ಬಂದಿತ್ತು. ಕಾಶ್ಮೀರದ ಅಭಿವೃದ್ಧಿ ಸಹಿಸದ ಭಯೋತ್ಪಾದಕರು ಈ ಭೀಕರ ದಾಳಿ ನಡೆಸಿದ್ದು, ಇದರ ಹಿಂದಿನ ಸಂಚುಕೋರರನ್ನು ಸದೆಬಡಿಯಬೇಕೆಂದು ಶರವಣ ಅವರು ಒತ್ತಾಯಿಸಿದ್ದಾರೆ. ಇದರಲ್ಲಿ ಕರ್ನಾಟಕದ ಮೂವರು ಬಲಿಯಾಗಿದ್ದು, ಅತ್ಯಂತ ನೋವಿನ ಸಂಗತಿ ಆಗಿದೆ. ಈ ಕುಟುಂಬಗಳಿಗೆ ಇಂಥ ದಾರುಣ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಶರವಣ…