Author: AIN Author

ಕಲಬುರ್ಗಿ:- ಪಾಕ್ ವಿರುದ್ಧ ಯುದ್ಧ ಬೇಡ ಅಂತ ಸಿದ್ದರಾಮಯ್ಯ ಹೇಳಿಯೇ ಇಲ್ಲ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಸಮರ್ಥನೆ ಮಾಡಿಕೊಂಡಿದ್ದಾರೆ. https://ainkannada.com/the-state-government-has-extended-the-tenure-of-director-general-of-police-alok-mohan/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ಘಟನೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಹೇಳಿಯೇ ಇಲ್ಲ. ಏನಿದ್ದರೂ ಮೊದಲು ಭದ್ರತೆ ಖಚಿತಪಡಿಸಿಕೊಂಡು ನಂತರ ಯುದ್ಧ ಮಾಡಿ ಎಂದು ಸಲಹೆ ನೀಡಿದ್ದಾರೆ ಎಂದರು. ಸಿಎಂ ಯುದ್ಧ ಬೇಡ ಎಂದಿಲ್ಲ. ದೇಶದ ಅಖಂಡತೆ ಮತ್ತು ಸಾರ್ಮಭೌಮತ್ವಕ್ಕೆ ಧಕ್ಕೆ ಬಂದಲ್ಲಿ ಹಾಗೂ ಅನಿವಾರ್ಯತೆ ಎನಿಸಿದರೆ ಯುದ್ಧ ಮಾಡಿ ಎಂದಿದ್ದಾರೆ. ಮೇಲಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದೊಂದಿಗೆ ನಿಲ್ಲುತ್ತದೆ ಎಂದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪಷ್ಪಪಡಿಸಿದ್ದಾರೆ ಎಂದರು. ಕೇಂದ್ರ ಸರ್ಕಾರ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡರೂ ತಮ್ಮ ಪಕ್ಷದ ಬೆಂಬಲ ಇರುತ್ತದೆ ಎಂದು ಹೇಳಿದ ಮೇಲೆ ಇನ್ನೇನಿದೆ. ಇಷ್ಟು ದಿನ ತೂಕಡಿಸುತ್ತಾ, ಈಗ ಅಲ್ಲಿ…

Read More

ಬೆಂಗಳೂರು :- ಪೊಲೀಸ್​ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಯೋನಿವೃತ್ತಿ ಹೊಂದಬೇಕಿದ್ದ ಡಿಜಿಪಿ ಅಲೋಕ್​ ಮೋಹನ್ ಅವರ ಸೇವಾವಧಿಯನ್ನು 22 ದಿವಸಗಳ ಮಟ್ಟಿಗೆ ರಾಜ್ಯ ಸರ್ಕಾರ ವಿಸ್ತರಿಸಿದೆ. ಅಂದರೆ ಮೇ 21ರವರೆಗೆ ವಿಸ್ತರಣೆ ಮಾಡಲಾಗಿದೆ. https://ainkannada.com/industry-active-yuva-suri-movie-tomorrow-sivanna-a-for-anand-movie-muhurta-on-may-2/ ರಾಜ್ಯ ಪೊಲೀಸ್​ ಇಲಾಖೆಗೆ ನೂತನ ಡಿಜಿಪಿ ಆಯ್ಕೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಡಿಜಿಪಿ ಅಲೋಕ್​ ಮೋಹನ್​ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿದೆ. ಡಿಜಿಪಿ ಅಲೋಕ್ ಮೋಹನ್​ ಅವರು ತಮ್ಮ ಸೇವೆಯನ್ನು ಮೂರು ತಿಂಗಳ ಕಾಲ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು ಎಂದು ವರದಿಯಾಗಿತ್ತು

Read More

ನೀವು ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಬೆಂಗಳೂರಿನಲ್ಲಿ Job ಸರ್ಚ್ ಮಾಡಿ ಸಾಕಾಗಿದ್ಯಾ! ಹಾಗಿದ್ರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ.. ಟು ವೀಲರ್ ರೈಡರ್ಸ ಕಮ್ ಡಿಲೇವರಿ ಬಾಯ್ಸಗಳಿಗೆ ಕೈತುಂಬಾ ಸಂಬಳ ಸಿಗುವ JOB ಆಫರ್ ಇಲ್ಲಿದೆ ನಿಮಗಾಗಿ.. ಸೀಹಿ ಸುದ್ದಿ MPM ಇಂಟಿಗ್ರೇಟೆಡ್ ಫೆಸಿಲಿಟಿಸ್ ಮ್ಯಾನೇಜ್ಮೆಂಟ್ ಎಂಬ ಪ್ರೈವೇಟ್ ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ಡೇಲಿವರಿ ಹುದ್ದೆಗಳ ಭರ್ತಿಗೆ ಬೆಂಗಳೂರಿನಲ್ಲಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗೆ ಆಯ್ಕೆಯಾದವರಿಗೆ ಆಕರ್ಷಕ ಸಂಬಳದ ಜೊತೆಗೆ ಹಲವು ಸೌಲಭ್ಯಗಳು ಸಿಗಲಿದೆ. ಹೌದು ತಿಂಗಳಿಗೆ 20 ಸಾವಿರ ಪಿಕ್ಸೇಡ್ salary ಸಿಗಲಿದೆ ಮತ್ತು ವಿಶೇಷವಾಗಿ ಯಾವುದೇ ಟಾರ್ಗೇಟ್ಸ ಇರುವುದಿಲ್ಲ ಪಿಕ್ಸೇಡ್ salary ಸಿಗುತ್ತಿದೆ ನೀವು ಸೇರಿದ ಮೊದಲ ತಿಂಗಳು Joining Bonus ಎಂದು 1 ಸಾವಿರ ಬೋನಸ್ ಕೊಡಲಾಗುವುದು… ಕೆಲಸದ ವೇಳೆ ಬೇಳಿಗ್ಗೆ 9 ರಿಂದ ಸಂಜೆ 7 ಗಂಟೆ ವರೆಗೆ ತಿಂಗಳಿಗೆ 26 ದಿನ ಕೆಲಸ 4 ದಿನ ರಜೆ ಇರುತ್ತದೆ ಅಲ್ಲದೇ.. ತಿಂಗಳಿಗೆ ಇನ್ಸೆಂಟಿವ್…

Read More

ಬಾಗಲಕೋಟೆ:- ಅಮಾನವೀಯ ಕೃತ್ಯ ಒಂದು ಬಾಗಲಕೋಟೆಯಲ್ಲಿ ಜರುಗಿದೆ. ನಿಧಾನವಾಗಿ ಹೋಗಪ್ಪ ಎಂದು ಬುದ್ಧಿವಾದ ಹೇಳಿದಕ್ಕೆ ಎನ್​ಡಬ್ಲೂಕೆಎಸ್​ಆರ್​ಟಿಸಿ ಬಸ್​ ಚಾಲಕ ಮತ್ತು ನಿರ್ವಾಹಕನಿಗೆ ಕಟ್ಟಿಗೆಯಿಂದ ಹೊಡೆದಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ಜರುಗಿದೆ. https://ainkannada.com/singer-prithvi-bhatt-shares-a-photo-with-her-husband-fans-congratulate-the-newlyweds/ ಚಲಿಸುತ್ತಿದ್ದ NWKRTC ಬಸ್​ಗೆ ಬೈಕ್ ಸವಾರ ಅಡ್ಡ ಬಂದಿದ್ದರು. ಆಗ, ಬಸ್​ ಚಾಲಕ ನಿಧಾನವಾಗಿ ಹೋಗಪ್ಪ ಅಂತ ಬುದ್ದಿವಾದ ಹೇಳಿದ್ದಾರೆ. ಇಷ್ಟಕ್ಕೇ NWKRTC ಬಸ್ ಚಾಲಕನ ಜೊತೆ ಬೈಕ್​ ಸವಾರ ವಾಗ್ವಾದಕ್ಕೆ ಇಳಿದಿದ್ದಾನೆ. ಚಾಲಕನಿಗೆ ನಿಂದಿಸಿ, ಬಳಿಕ ತನ್ನ ತಂದೆಗೆ ಕರೆ ಮಾಡಿದ್ದಾನೆ. ಜಗದಾಳ ಬಳಿ ಬೊಲೆರೊ ವಾಹನದಲ್ಲಿ ಜನರನ್ನು ಕರೆತಂದು ಚಾಲಕ ಮತ್ತು ನಿರ್ವಾಹಕರ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ.

Read More

ದೇಶದಲ್ಲಿ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗುತ್ತಿದೆ. ಇನ್ನು ಇದೇ ತಿಂಗಳು 30ರಂದು ಅಕ್ಷಯ ತೃತೀಯ ಇದೆ. ಈ ಬಾರಿ ಅಕ್ಷಯ ತೃತೀಯ ಚಿನ್ನ ಪ್ರಿಯರಿಗೆ ಹಾಗೂ ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಸ್ವಲ್ಪ ಸಿಹಿ ಹಾಗೂ ಸ್ವಲ್ಪ ಕಹಿ ತಂದಿದೆ ಅಂತಲೇ ಹೇಳಬಹುದು. ಆದರೆ, ಬಂಗಾರ ಪ್ರಿಯರ ಆತಂಕವನ್ನು ದೂರ ಮಾಡುವುದಕ್ಕೆ ಚಿನ್ನದ ಮಳಿಗೆಗಳು ಹಾಗೂ ಚಿನ್ನದ ಉದ್ಯಮಿಗಳು ಮುಂದಾಗಿದ್ದಾರೆ. https://ainkannada.com/do-you-also-have-the-habit-of-consuming-ragi-malt-if-so-this-problem-is-not-unique-to-you/ ಹೌದು, 2025ರ ಅಕ್ಷಯ ತೃತೀಯ ಹಬ್ಬ ಬಂದೇ ಬಿಟ್ಟಿದೆ. ನಾಳೆ ದೇಶಾದ್ಯಂತ ಅಕ್ಷಯ ತೃತೀಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಕ್ಷಯ ತೃತೀಯ ಅಂದ್ರೆ ಚಿನ್ನವನ್ನು ಕೊಳ್ಳುವ ಶುಭ ದಿನ. ನಾಳೆ ಅನೇಕರು ಚಿನ್ನದ ಅಂಗಡಿಗೆ ತೆರಳಿ ಚಿನ್ನ ಕೊಳ್ಳಲು ಮುಂದಾಗಿದ್ದಾರೆ. ಚಿನ್ನಾಭರಣ ಪ್ರಿಯರಿಗೆ ಬಂಗಾರದ ಅಂಗಡಿಗಳು ಈಗಾಗಲೇ ಭರ್ಜರಿ ಆಫರ್ ಕೊಟ್ಟು ಸ್ವಾಗತ ಕೋರುತ್ತಿವೆ. ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಆದರೆ ಒಂದು ಸಮಾಧಾನಕರ ಸುದ್ದಿ ಏನಂದ್ರೆ 1 ಲಕ್ಷದ ಗಡಿ…

Read More

ರಾಗಿ ಎಷ್ಟು ಆರೋಗ್ಯಕ ಆಹಾರ ಅನ್ನೋದನ್ನ‌ ವಿವರಿಸಿ ಹೇಳಬೇಕಿಲ್ಲ. ದೇಹಕ್ಕೆ ಎಷ್ಟೋ ಅಗತ್ಯ ಪೋಷಕಾಂಶಗಳನ್ನು ನೀಡುವ ರಾಗಿಯಿಂದ ತೂಕ ಕೂಡಾ ಇಳಿಸಿಕೊಳ್ಳಬಹುದು. ಮಧುಮೇಹಿಗಳಿಗೆ ಕೂಡಾ ಇದು ಉತ್ತಮ ಆಹಾರ. ರಾಗಿಮುದ್ದೆ, ರಾಗಿರೊಟ್ಟಿ ಹೀಗೆ ಪ್ರತಿದಿನ ನೀವು ರಾಗಿಯಿಂದ ತಯಾರಿಸಿದ ಆಹಾರ ಸೇವಿಸಿದರೆ ನಿಮ್ಮಷ್ಟು ಆರೊಗ್ಯವಂತರು ಮತ್ತಾರೂ ಇಲ್ಲ ಎನ್ನಬಹುದು. ಹಾಗೇ ನೀವು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಕಾಫಿ ಟೀ ಕುಡಿಯುವ ಬದಲಿಗೆ ರಾಗಿ ಮಾಲ್ಡ್‌ ಡ್ರಿಂಕ್‌ ಸೇವಿಸಿದರೆ ಇನ್ನೂ ಒಳ್ಳೆಯದು. https://ainkannada.com/beware-people-water-has-an-expiration-date-like-today-think-a-hundred-times-before-drinking-it/ ರಾಗಿ ಮಾಲ್ಟ್ ಅನ್ನು ದಿನಕ್ಕೆ ಒಂದು ಬಾರಿಯಾದರೂ ಸೇವನೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಇದನ್ನು ಕುಡಿಯುವುದರಿಂದ ದೇಹಕ್ಕೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ. ಆತಂಕ, ಖಿನ್ನತೆ ಕಡಿಮೆಯಾಗುತ್ತದೆ ರಾಗಿಯಲ್ಲಿ ಕಾರ್ಬೋಹೈಡ್ರೇಟ್ ಗಳು ಜೀವಸತ್ವಗಳು, ಖನಿಜಗಳು, ನಾರುಗಳು, ಕೊಬ್ಬುಗಳು, ಪ್ರೋಟೀನ್ಗಳು ಮುಂತಾದ ಎಲ್ಲಾ ಅಗತ್ಯ ಮ್ಯಾಕ್ರೋನ್ಯೂಟ್ರಿಯೆಂಟ್ಗಳನ್ನು ಒಳಗೊಂಡಿದ್ದು, ಪ್ರತಿದಿನ ರಾಗಿ ಮಾಲ್ಟ್ ಕುಡಿಯುವುದರಿಂದ ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆ…

Read More

ಹಾಸನ:- ಹಾಸನ ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ತಾಲೂಕು ಕಚೇರಿ ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ. 43 ವರ್ಷದ ಸತೀಶ್ ಮೃತ ವ್ಯಕ್ತಿ. ಹದಿನೈದು ವರ್ಷಗಳ ಹಿಂದೆ ಹಾಸನದ ವಿದ್ಯಾ ಎಂಬುವವರ ಜೊತೆ ಮದುವೆಯಾಗಿದ್ದರು. https://ainkannada.com/beware-people-water-has-an-expiration-date-like-today-think-a-hundred-times-before-drinking-it/ ಪತಿ-ಪತ್ನಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿದ್ದು ಹಲವು ಬಾರಿ ಕುಟುಂಬಸ್ಥರು ರಾಜೀ ಸಂಧಾನ ಮಾಡಿದ್ದರು. ಆದರೂ ಗಂಡ-ಹೆಂಡತಿ ನಡುವೆ ಜಗಳ, ವೈಮನಸ್ಸು ಸರಿಯಾಗಿರಲಿಲ್ಲ. ನಿನ್ನೆ ಬೆಳಗ್ಗೆ ಮನೆಯಲ್ಲೇ ಸತೀಶ್ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಪತ್ನಿ ಮತ್ತು ಅವರ ಕಡೆಯವರೇ ಸೇರಿ ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್‌ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನೂ ಪತ್ನಿ ಮತ್ತು ಅವರ ಕಡೆಯವರೇ ಸೇರಿ ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್‌ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ‌.

Read More

ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಬಹಳಷ್ಟು ಜನರು ನಿಂತುಕೊಂಡೇ ನೀರನ್ನು ಕುಡಿಯುತ್ತಾರೆ. ಹೀಗೆ ನಿಂತು ನೀರು ಕುಡಿಯೋ ಅಭ್ಯಾಸ ಒಳ್ಳೆಯದಲ್ಲ ಅಂತ ಹಿರಿಯರು ಹೇಳೋದನ್ನು ಕೇಳಿರಬಹುದು. ಹಾಗಿದ್ದರೆ ನಿಜವಾಗಿಯೂ ನಿಂತು ನೀರು ಕುಡಿಯೋದ್ರಿಂದ ಒಳ್ಳೆಯದಾ ? ಅಲ್ಲವಾ? ಅದು ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡುತ್ತದಾ? ಇದಕ್ಕೆಲ್ಲ ಇಲ್ಲಿದೆ ಉತ್ತರ. https://ainkannada.com/even-if-youre-not-you-shouldnt-cut-your-nails-on-this-day-so-which-day-is-best/ ನಿಂತು ನೀರು ಕುಡಿಯಬೇಡಿ ಎನ್ನುವುದಕ್ಕೆ ಕಾರಣ: ನಾವು ಎದ್ದುನಿಂತು ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನರಮಂಡಲವನ್ನು ಹಾಳುಮಾಡಬಹುದು. ನಿಂತು ನೀರು ಕುಡಿಯುವುದರಿಂದ ದೇಹಕ್ಕೆ ಹೋಗುವ ನೀರಿನ ವೇಗ ಹೆಚ್ಚಾಗುತ್ತದೆ. ಅದರಿಂದ ನಮ್ಮ ಆರೋಗ್ಯಕ್ಕೆ ಕೆಲವು ರೀತಿಯಲ್ಲಿ ಹಾನಿಕಾರಕವಾಗಬಹುದು ಎಂದು ಹೇಳಲಾಗುತ್ತದೆ. ನಿಮಗೆ ಗೊತ್ತಾ? ನೀರಿಗೂ ಎಕ್ಸ್‌ಪೈರ್ಡ್ ಡೇಟ್ ಇರುತ್ತದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ನೀರಿನ ಬಾಟಲಿಗಳಿಂದ ನೀರು ಕುಡಿಯುವ ಮೊದಲು ಅದು ಕುಡಿಯಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಈ ರೀತಿ ಅವಧಿ ಮೀರಿದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಅನೇಕ…

Read More

ಧರ್ಮಗ್ರಂಥಗಳಲ್ಲಿ, ವಾರದ ಕೆಲವು ವಿಶೇಷ ದಿನಗಳು ಉಗುರು ಕತ್ತರಿಸುವುದು, ಕ್ಷೌರ ಮತ್ತು ಶೇವಿಂಗ್ ಮಾಡಲು ಉತ್ತಮವೆಂದು ವಿವರಿಸಲಾಗಿದೆ. ಇದರೊಂದಿಗೆ, ನಮ್ಮ ಧರ್ಮಗ್ರಂಥಗಳಲ್ಲಿ ಉಗುರು, ಗಡ್ಡ ಮತ್ತು ಕೂದಲನ್ನು ಕತ್ತರಿಸುವುದನ್ನು ಮಂಗಳಕರವೆಂದು ಪರಿಗಣಿಸದ ಕೆಲವು ದಿನಗಳಿವೆ. ಈ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಅಥವಾ ಗಡ್ಡವನ್ನು ಕತ್ತರಿಸುವುದರಿಂದ ಗ್ರಹಗಳ ದುಷ್ಪರಿಣಾಮಗಳು ನಿಮ್ಮ ಮೇಲೆ ಬೀಳುತ್ತವೆ ಮತ್ತು ಆರ್ಥಿಕ ಬಿಕ್ಕಟ್ಟು ನಿಮ್ಮ ಜೀವನವನ್ನು ಪ್ರವೇಶಿಸುತ್ತವೆ ಎಂಬ ನಂಬಿಕೆ ಇದೆ. https://ainkannada.com/rainfall-in-bidar-huge-tree-fallen/ ನಮ್ಮಲ್ಲಿ ಒಂದಿಷ್ಟು ಕಾರ್ಯಗಳಿಗೆ ಹಲವು ನಿಯಮಗಳಿವೆ. ಹೀಗೆ ಅನೇಕ ಕೆಲಸಗಳನ್ನು ಇಂತಹದ್ದೇ ಸಮಯದಲ್ಲಿ ಮಾಡಬೇಕು ಎನ್ನುವ ಮಾತು ಕೂಡ ಇದೆ. ಇದಕ್ಕೆ ಸಂಬಂಧಿಸಿ ಹಿರಿಯರು ದಿನನಿತ್ಯದ ಅಭ್ಯಾಸಗಳಿಗೆ ಒಂದಿಷ್ಟು ನಿಯಮಗಳನ್ನು ಹೇಳುತ್ತಲೇ ಇರುತ್ತಾರೆ. ಇಂತಹ ದಿನಗಳಂದು ಕೂದಲಿಗೆ ಕತ್ತರಿ ಹಾಕಬಾರದು. ಉಗುರುಗಳನ್ನು ನಿರ್ದಿಷ್ಟ ದಿನದಂದು ಕತ್ತರಿಸಿಕೊಳ್ಳಬಾರದು. ಸಂಜೆ ಹೊತ್ತು ಉಗುರು ತೆಗೆಯಬಾರದು ಮುಂತಾದ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಸೋಮವಾರ: ಶಾಸ್ತ್ರಗಳ ಪ್ರಕಾರ, ಸೋಮವಾರ ಉಗುರುಗಳನ್ನು ಕತ್ತರಿಸುವುದು ಶುಭ. ಸೋಮವಾರ ಶಿವ, ಚಂದ್ರ ಮತ್ತು…

Read More

ಬೀದರ್:- ಬೀದರ್ ನಲ್ಲಿ ಮಳೆ ಆರ್ಭಟ ಜೋರಾಗಿದ್ದು, ಬೃಹತ್ ಮರ ನೆಲಕ್ಕುರುಳಿದೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಬೃಹತ್ ಮರವೊಂದು ಧರೆಗುರುಳಿ ರಸ್ತೆ ಸಂಚಾರಕ್ಕೆ ಅಡಚಡೆಯಾಗಿರುವ ಘಟನೆ ಔರಾದ್ ತಾಲೂಕಿನ ಜೋಜನಾ ಗ್ರಾಮದ ಬಳಿ ನಡೆದಿದೆ. https://ainkannada.com/semi-magic-guarantee-murray-bring-these-plants-home-first/ ಅಕಾಲಿಕ ಮಳೆಗೆ ಹಲವು ಮರಗಳು ರಸ್ತೆಗುರುಳಿದ ಪರಿಣಾಮ ಸಂತಪೂರ್‌ದಿಂದ ಜೋಜನಾ ಗ್ರಾಮದ ನಡುವೆ ರಸ್ತೆ ಸಂಚಾರ ಕೆಲವು ಹೊತ್ತು ಬಂದ್ ಆಗಿತ್ತು. ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಜನರಿಗೆ ವರುಣ ತಂಪೆರೆದಿದ್ದು, ಔರಾದ್, ಬೀದರ್, ಬಸವಕಲ್ಯಾಣ, ಭಾಲ್ಕಿ, ಕಮಲನಗರ ಸೇರಿದಂತೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ.

Read More