Author: AIN Author

ಬೆಂಗಳೂರು:- ಮಂಗಳವಾರ ನಡೆದ ಭೀಕರ ಉಗ್ರರ ದಾಳಿಯಲ್ಲಿ ಒಟ್ಟು 26 ಮಂದಿ ರಕ್ಕಸರ ದಾಳಿಗೆ ಉಸಿರು ಚೆಲ್ಲಿದ್ದಾರೆ. ಇದರಲ್ಲಿ ಕನ್ನಡಿಗರು ಮೂವರು ದುರ್ಮರಣ ಹೊಂದಿದ್ದಾರೆ. https://ainkannada.com/ipl-2025-big-shock-for-rcb-as-mumbai-wins-against-hyderabad-what-happened/ ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಕನ್ನಡಿಗರ ಮೃತದೇಹ ಬೆಂಗಳೂರಿಗೆ ಶಿಫ್ಟ್​ ಆಗಿವೆ. ಶಿವಮೊಗ್ಗದ ಮಂಜುನಾಥ್ ಹಾಗೂ ಹಾವೇರಿ ಮೂಲದ ಭರತ್ ಭೂಷಣ್ ಮೃತದೇಹಗಳು ತಾಯ್ನಾಡು ತಲುಪಿದ್ದು, ಬೆಂಗಳೂರು ಏರ್​​ಫೋರ್ಟ್​ಗೆ ಬಂದ ಮೃತದೇಹಗಳನ್ನು ಆ್ಯಂಬುಲೆನ್ಸ್​ ಮೂಲಕ ತವರೂರಿಗೆ ಕಳುಹಿಸಲಾಗಿದೆ. ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಪಾರ್ಥಿವ ಶರೀರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೆಹಲಿಯಿಂದ ಬೆಂಗಳೂರು ಏರ್​ಪೋರ್ಟ್ ತಲುಪಿದೆ. ವಿಮಾನ ನಿಲ್ದಾಣದಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಆ್ಯಂಬುಲೆನ್ಸ್ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಮಂಜುನಾಥ್ ಮೃತದೇಹ ಶಿವಮೊಗ್ಗದತ್ತ ಸಾಗಿದೆ. ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಕಾರ್ಗೋ ವಿಮಾನದ ಮೂಲಕ ಮೃತದೇಹವನ್ನು ಬೆಂಗಳೂರಿಗೆ ತರಲಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ…

Read More

ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದೆ. “ಬ್ಯಾಟಿಂಗ್ ದೈತ್ಯ’ ಸನ್‌ರೈಸರ್ ಹೈದರಾಬಾದ್ ತಂಡವನ್ನು ಅವರದೇ ಅಂಗಳದಲ್ಲಿ 7 ವಿಕೆಟ್‌ಗಳಿಂದ ಮಗುಚಿದ ಮುಂಬೈ ಇಂಡಿಯನ್ಸ್ ಒಮ್ಮೆಲೇ ಆರರಿಂದ ಮೂರನೇ ಸ್ಥಾನಕ್ಕೆ ನೆಗೆದಿದೆ. ಇದು 9 ಪಂದ್ಯಗಳಲ್ಲಿ ಪಾಂಡ್ಯ ಪಡೆಗೆ ಒಲಿದ 5ನೇ ಜಯವಾಗಿದೆ. ಆದರೆ ಮುಂಬೈ ಗೆಲುವಿನಿಂದ RCB ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ. ಅಂದ್ರೆ 3ನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ IPL ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ನಿಗದಿತ 20 ಓವರ್‌ಗಳ್ಲಿ 8 ವಿಕೆಟ್‌ಗಳ ಕಳೆದುಕೊಂಡು 143 ರನ್‌ಗಳನ್ನು ಕಲೆಹಾಕಿ 144 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ಕೇವಲ 15.4 ಓವರ್‌ಗಳಿಗೆ 3 ವಿಕೆಟ್‌…

Read More

ಬೆಂಗಳೂರು:- ನಗರದ ಹಳೆ ತಹಸೀಲ್ದಾರ್ ಕಚೇರಿ ಓಣಿಯಲ್ಲಿ RSS ಮುಖಂಡನ ಮನೆಗೆ ನುಗ್ಗಿ ಮುಸ್ಲಿಂ ಯುವಕರು ಹಲ್ಲೆ ಮಾಡಿರುವ ಘಟನೆ ಜರುಗಿದೆ. https://ainkannada.com/terrible-terrorist-attack-india-has-put-a-damper-on-pakistan-relations-what-happened-in-the-3-hour-high-voltage-meeting/ ಸಿರೀಶ್ ಬಳ್ಳಾರಿ ಹಲ್ಲೆಗೊಳಗಾದ ಆರ್​ಎಸ್​ಎಸ್​ ಮುಖಂಡ ಎಂದು ಗುರುತಿಸಲಾಗಿದೆ. ಯುವಕರು ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ, ಸಿರೀಶ್​ ಬಳ್ಳಾರಿಯವರು ದೂರಕ್ಕೆ ಹೋಗಿ ಸಿಗರೇಟು ಸೇದುವಂತೆ ಹೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ನಾಲ್ವರು ಮುಸ್ಲಿಂ ಯುವಕರು, ಸಿರೀಶ್​ ಬಳ್ಳಾರಿಯವರ ಮನೆಯೊಳಗೆ ಹೊಕ್ಕು ಹಲ್ಲೆ ಮಾಡಿದ್ದಾರೆ. ಇದರಿಂದ, ಸಿರೀಶ್​ ಬಳ್ಳಾರಿಯವರ ಕೈ ಹಾಗೂ ಮುಖಕ್ಕೆ ತೀವ್ರ ಗಾಯವಾಗಿದೆ. ಸಿರೀಶ್​ ಬಳ್ಳಾರಿಯವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ನವದೆಹಲಿ:- ಕಾಶ್ಮೀರದಲ್ಲಿ ಮಂಗಳವಾರ ನಡೆದ ಉಗ್ರರ ಭೀಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಕೇಂದ್ರ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ 3 ಗಂಟೆಗಳ ಕಾಲ ಕೇಂದ್ರ ಸಂಪುಟ ಸಮಿತಿ ಸಭೆ ನಡೆದಿದ್ದು, ಪಾಕ್‌ ಸಂಬಂಧಕ್ಕೆ ಎಳ್ಳುನೀರು ಬಿಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಮೋದಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಹಲವು ತೀರ್ಮಾನಕ್ಕೆ ಬರಲಾಗಿದೆ. https://ainkannada.com/double-profit-from-real-estate-dairy-poultry-and-goat-farming-thursdays-fate-on-thursday-24-april-2025/ ಹಲವು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸಂಪುಟ ಸಮಿತಿ ತೆಗೆದುಕೊಂಡಿದೆ ಅವುಗಳೆಂದರೆ… ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್‌ ಅನ್ನು ತಕ್ಷಣದಿಂದ ಮುಚ್ಚುವುದು, ಸಾರ್ಕ್ ವಿಸಾ ವಿನಾಯಿತಿ ಯೋಜನೆ ಪಾಕಿಸ್ತಾನದವರಿಗೆ ರದ್ದು, ರಾಯಭಾರ ಕಚೇರಿ ಸಿಬ್ಬಂದಿ ಹಂತಹಂತವಾಗಿ ಕಡಿತಗೊಳಿಸುವುದು ಮತ್ತು 1960ರ ಸಿಂಧು ನದಿ ಒಪ್ಪಂದವನ್ನು ರದ್ದು ಮಾಡುವುದು. ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ನಿರ್ಮಲಾ ಸೀತಾರಾಮನ್‌, ಎಸ್‌. ಜೈಶಂಕರ್‌ ಸೇರಿದಂತೆ ಹಲವು ಸಚಿವರು…

Read More

ಸೂರ್ಯೋದಯ – 5:57ಬೆ. ಸೂರ್ಯಾಸ್ತ – 6:30 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ಏಕಾದಶಿ ನಕ್ಷತ್ರ – ಶತಭಿಷೆ 10:37 ಯೋಗ – ಬ್ರಹ್ಮ ಕರಣ – ಬಾಲವ *ಮಳೆ ನಕ್ಷತ್ರ :ಅಶ್ವಿನಿ* ರಾಹು ಕಾಲ – 01:30 ದಿಂದ 03:00 ವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 4:21 ಬೆ. ದಿಂದ 5:09 ಬೆ. ವರೆಗೆ ಅಮೃತ ಕಾಲ – 1:53 ಬೆ. ದಿಂದ 3:21 ಬೆ. ವರೆಗೆ ಅಭಿಜಿತ್ ಮುಹುರ್ತ – 11:49 ಬೆ. ದಿಂದ 12:39 ಮ. ವರೆಗೆ ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ…

Read More

ಪಹಲ್ಗಾಮ್, ಏಪ್ರಿಲ್ 23: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕರ ದಾಳಿ ನಂತರ ಕರ್ನಾಟಕ ಸರ್ಕಾರದ ಪರವಾಗಿ ಸಂತ್ರಸ್ತ ಕನ್ನಡಿಗರ ನೆರವಿಗೆ ಪಹಲ್ಗಾಮ್ ಗೆ ಧಾವಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಪ್ರವಾಸಿಗರಿಗೆ ದೂರವಾಣಿ ಕರೆ ಮಾಡಿ ರಾಜ್ಯಕ್ಕೆ ವಾಪಸ್ಸಾಗಲು ಸಹಾಯ ಮಾಡುತ್ತಿದ್ದಾರೆ. https://ainkannada.com/rape-case-applications-sought-to-transfer-the-case-to-another-court/ ಪಹಲ್ಗಾಮ್ ಗೆ ಬಂದಿರುವ ಲಾಡ್ ಅವರು, ಇಂದು ಬೆಳಗ್ಗೆಯಿಂದ ಸಂತ್ರಸ್ತ ಕನ್ನಡಿಗರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಮೃತ ಕನ್ನಡಿಗರ ಕುಟುಂಬ ಸದಸ್ಯರಿಗೆ ಅಗತ್ಯ ನೆರವು ಒದಗಿಸಿದ್ದಾರೆ. ಕರ್ನಾಟಕಕ್ಕೆ ಮರಳುವ ಪ್ರವಾಸಿಗರಿಗೆ ವಿಶೇಷ ವಿಮಾನದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಪರ್ಕ ಸಂಖ್ಯೆ ಸಂಗ್ರಹಿಸಿ ಗುರುವಾರ ಹೊರಡಲಿರುವ ವಿಮಾನಕ್ಕೆ ಸಜ್ಜಾಗಿ ಎಂದು ಲಾಡ್ ಅವರೇ ತಿಳಿಸುತ್ತಿದ್ದಾರೆ. ಎಷ್ಟು ಪ್ರವಾಸಿಗರು ಇದ್ದೀರಿ? ಎಲ್ಲಿಯವರು ಎಂಬೆಲ್ಲ ವಿವರಗಳನ್ನು ಸಚಿವರು ಕಲೆ ಹಾಕಿ ರಾಜ್ಯಕ್ಕೆ ಮರಳಲು ಕೈ ಜೋಡಿಸಿದ್ದಾರೆ. ಯಾವಾಗ ವಿಮಾನದ ಟಿಕೆಟ್ ಬುಕ್ ಮಾಡಿದ್ದೀರಿ. ಯಾವುದೇ ತೊಂದರೆ ಇಲ್ಲವೇ. ಸುರಕ್ಷಿತವಾಗಿ…

Read More

ಬೆಂಗಳೂರು:- ಅತ್ಯಾಚಾರ ಕೇಸ್ ಗೆ ಸಂಬಧಪಟ್ಟಂತೆ ಬೇರೆ ಕೋರ್ಟ್​ಗೆ ಪ್ರಕರಣ ವರ್ಗಾಯಿಸಲು ಕೋರಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಲಾಗಿದೆ. https://ainkannada.com/militant-attacks-in-kashmir-massive-protests-by-pro-hindu-organizations/ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಅತ್ಯಾಚಾರ ಪ್ರಕರಣ ವರ್ಗಾವಣೆ ಅರ್ಜಿಯನ್ನು ಕೋರ್ಟ್​ ವಜಾಗೊಳಿಸಿದೆ. ಅತ್ಯಾಚಾರ ಪ್ರಕರಣವನ್ನು ಬೇರೆ ಕೋರ್ಟ್​ಗೆ ವರ್ಗಾಯಿಸುವಂತೆ ಪ್ರಜ್ವಲ್​ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಪ್ರಧಾನ ಸಿಟಿ ಸಿವಿಲ್ ಕೋರ್ಟ್, ವಿಚಾರಣೆ ವಿಳಂಬಗೊಳಿಸುವ ಪ್ರಯತ್ನಗಳಿಗೆ ಖಂಡನೆ ವ್ಯಕ್ತಪಡಿಸಿ, ವಿಚಾರಣೆ ಮುಂದುವರಿಸುವಂತೆ ಸೂಚನೆ ನೀಡಿ ಅರ್ಜಿ ವಜಾಗೊಳಿಸಿದೆ. ಇನ್ನು, ಈ ಪ್ರಕರಣದಿಂದ ನಿವೃತ್ತರಾಗಲು ಪ್ರಜ್ವಲ್ ರೇವಣ್ಣ ಪರ ವಕೀಲ ಜಿ.ಅರುಣ್​ ನಿಶ್ಚಯಿಸಿದ್ದರು. ಈ ಸಂಬಂಧ ನ್ಯಾಯಾಲಯಕ್ಕೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಕೀಲ ಜಿ.ಅರುಣ್​ ಪ್ರಕರಣದಿಂದ ನಿವೃತ್ತರಾಗಲು ಅನುಮತಿ ನೀಡಿದೆ. ಹೀಗಾಗಿ, ಬೇರೆ ವಕೀಲರನ್ನು ನಿಯೋಜಿಸಲು ಪ್ರಜ್ವಲ್ ರೇವಣ್ಣ ಸಮಯ ಕೇಳಿದ್ದಾರೆ. ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಕ್ಕೆ ಮುಂದೂಡಿದೆ.

Read More

ಮಂಡ್ಯ :- ಜಮ್ಮುವಿನ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿ ಬಜರಂಗ ದಳ, ಹಿಂದೂ ಪರ ಸಂಘಟನೆಗಳು ಮತ್ತು ಮದ್ದೂರು ತಾಲೂಕು ಭಾರತೀಯ ಜನತಾ ಮೋರ್ಚಾ ಬುಧವಾರ ಸಂಜೆ ನೂರಾರು ಕಾರ್ಯಕರ್ತರು ಮೇಣದ ಬತ್ತಿ ಹಿಡಿದು ಬೃಹತ್ ಪ್ರತಿಭಟನೆ ಮತ್ತು ಮಡಿದರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. https://ainkannada.com/inspector-celebration-in-the-countrys-mourning-road-show-in-home-ministers-hometown/ ಮದ್ದೂರು ಪಟ್ಟಣದ ಹಳೇ ಬಸ್ ನಿಲ್ದಾಣ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದ ಆವರಣದಿಂದ ಪೇಟೆ ಬೀದಿ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ( ಟಿ.ಬಿ.ಸರ್ಕಲ್ ) ವೃತ್ತದವರೆಗೆ ಮೇಣದ ಬತ್ತಿ ಮೆರವಣಿಗೆ ನಡೆಸಿ ಕೆಲ ಕಾಲ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾಜಿ ಯೋಧ ಸಿ.ಕೆ.ಸತೀಶ್ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇನ್ನು ಕೆಲ ದಿನಗಳಲ್ಲೇ ಅಮರನಾಥ ಯಾತ್ರೆಯು ಆರಂಭಗೊಳ್ಳುವುದರಲ್ಲಿ ಇತ್ತು. ಯಾತ್ರೆಗಾಗಿ ನೋಂದಣಿ…

Read More

ತುಮಕೂರು:- ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ಇಡೀ ದೇಶವೇ ಮರುಗುತ್ತಿದ್ದರೆ, ಇಲ್ಲಿನ ಇನ್ಸ್ಪೆಕ್ಟರ್ ಮಾತ್ರ ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿದ್ದಾರೆ. https://ainkannada.com/terrorist-attack-in-kashmir-state-government-announces-compensation-of-rs-10-lakh-each-for-the-families-of-deceased-kannadigas/ ಹೌದು, ಜಮ್ಮು ಕಾಶ್ಮೀರದಲ್ಲಿನ ಉಗ್ರರ ದಾಳಿಗೆ ಒಂದೆಡೆ ಇಡೀ ದೇಶವೇ ಮರುಕ ವ್ಯಕ್ತಪಡಿಸಿದೆ. ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡು ಎಷ್ಟೋ ಮೃತರ ಕುಟುಂಬಗಳು ದುಖಃದಲ್ಲಿ ಮುಳುಗಿದೆ. ಒಂದೆಡೆ ದೇಶವೇ ಶೋಕಾಚರಣೆಯಲ್ಲಿ ಮುಳುಗಿದರೆ, ಅದೆಲ್ಲ ಮರೆತ ಇನ್ಸ್ ಪೆಕ್ಟರ್ ಮಾತ್ರ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಎಸ್, ತುಮಕೂರು ಸಿಪಿಐ ಬಿ.ಎಸ್.ದಿನೇಶ್ ಕುಮಾರ್ ನಿಂದ ಸಂಭ್ರಮಾಚರಣೆ ನಡೆದಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ತುಮಕೂರಿನಿಂದ ಕುಶಾಲನಗರಕ್ಕೆ ದಿನೇಶ್ ಕುಮಾರ್ ವರ್ಗಾವಣೆ ಆಗಿದ್ದರು. ಹೀಗಾಗಿ ಅವರಿಗೆ ಕ್ರೇನ್ ನಲ್ಲಿ ಹಾರ ಹಾಕಿ ಬೀಳ್ಕೊಡುಗೆ ಕೊಡಲಾಗಿದೆ. ತೆರದ ಜೀಪ್‌ ನಲ್ಲಿ ರ್ಯಾಲಿ ಮಾಡಿ ಶೋ ಮಾಡಲಾಗಿದ್ದು, ಹಾರದ ಒಳಗೆ ಹುಲಿ ಫೋಟೊ ಹಾಕಿ ಇನ್ಸ್ ಪೆಕ್ಟರ್ ಶೋ ಕೊಟ್ಟಿದ್ದಾರೆ. ಗೃಹ ಮಂತ್ರಿ ಡಾ.ಜಿ ಪರಮೇಶ್ವರ್ ತವರಿನಲ್ಲೇ ನಡೆದ ಈ ಸಂಭ್ರಮಾಚರಣೆಯಲ್ಲಿ ಇನ್ಸ್ ಪೆಕ್ಟರ್ ರೋಡ್ ಶೋ ಮಾಡಿದ್ದು,…

Read More

ಬೆಂಗಳೂರು/ ಶ್ರೀನಗರ:- ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ. https://ainkannada.com/terrorist-attack-in-kashmir-candlelight-vigil-for-the-souls-of-the-deceased/ ದಾಳಿಯಲ್ಲಿ ಮೃತಪಟ್ಟಿರುವ ರಾಜ್ಯದ ಪ್ರತಿ ನಾಗರಿಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ದಾಳಿಯಲ್ಲಿ ಕನ್ನಡಿಗರೂ ಮೃತಪಟ್ಟಿದ್ದು, ಅವರ ಪಾರ್ಥೀವ ಶರೀರವನ್ನು ರಾಜ್ಯಕ್ಕೆ ತರಲು ಸಕಲ ಸಿದ್ಧತೆಗಳು ನಡೆದಿವೆ. ಪಾರ್ಥೀವ ಶರೀರ ರಾಜ್ಯಕ್ಕೆ ಬರುತ್ತಿದ್ದಂತೆ ಅಂತ್ಯಸಂಸ್ಕಾರಕ್ಕೆ ಸಲ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಬದುಕುಳಿದಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

Read More