Author: AIN Author

ರಾಯಚೂರು:- ನಗರದಲ್ಲಿ ಕಳ್ಳತನ , ದರೋಡೆ ಹಲವು ಪ್ರಕರಣ ಹೆಚ್ಚಾದ ಹಿನ್ನೆಲೆ, ಇದರ ಕಡಿವಾಣಕ್ಕೆ ಸಿಸಿಟಿವಿ ಅಳವಡಿಕೆ ಮಾಡುವಂತೆ ಸಾರ್ವಜನಿಕರು ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕರು ಸಿಸಿಟಿವಿ ಅಳವಡಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. https://ainkannada.com/not-shah-rukh-khan-salman-khan-or-allu-arjun-but-this-filmmaker-earns-rs-200-crore-fee-for-each-film/ ಸದಾರ್ ಬಜಾರ್ ಪೊಲೀಸ್ ಠಾಣೆಯಿಂದ ಹೀಗಾಗಿ ರಾಯಚೂರು ನಗರದ ಮುಖ್ಯ ವೃತ್ತಗಳಲ್ಲಿ ಅಶೋಕ ಡಿಪೋ ಸರ್ಕಲ್ ಹಾಗೂ ಉಸ್ಮಾನಿಯ ಮಸೀದಿ ಹತ್ತಿರ ಸೇರಿ 8 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ರಾಯಚೂರು ಎಸ್ ಪಿ ಪುಟ್ಟಮಾದಯ್ಯ ಅವರು ಸಿಸಿ ಕ್ಯಾಮರಾ ಉದ್ಘಾಟಸಿದರು. ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಕಳೆದು ಕೊಂಡ 13 ಮೊಬೈಲ್ಗಳನ್ನ ಹುಡುಕಿ ಇದೇ ವೇಳೆ ಪೊಲೀಸರು, ಮಾಲೀಕರಿಗೆ ಒಪ್ಪಿಸಿದರು. ಸದಾರ್ ಬಜಾರ್ ಸಿಪಿಐ ಉಮೇಶ್ ಕಾಂಬ್ಳೇ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More

ವಿಜಯನಗರ:- ಮದುವೆಯಾಗಲು ನಿರಾಕರಿಸಿದ ಹಿನ್ನೆಲೆ ಯುವಕನೋರ್ವ ಯುವತಿಗೆ ಚಾಕು ಇರಿದಿರುವ ಘಟನೆ ಜಿಲ್ಲೆಯ ಹೊಸಪೇಟೆಯ ನಗರಸಭೆ ಕಾರ್ಯಾಲಯ ಎದುರುಗಡೆ ನಡೆದಿದೆ. https://ainkannada.com/they-attacked-us-and-set-a-trap-for-us-mother-of-the-young-man-who-was-attacked-is-upset/ 26 ವರ್ಷದ ಭಾರತಿ ಶಾವಿ ಹಲ್ಲೆಗೊಳಗಾದ ಮಹಿಳೆ. ವಿಜಯಭಾಸ್ಕರ್(26) ಹಲ್ಲೆ ಮಾಡಿದ ಪ್ರೇಮಿ. ಯುವತಿಯು ಮದುವೆಗೆ ನಿರಾಕರಿಸಿದಕ್ಕೆ ಆಂಧ್ರಪ್ರದೇಶದ ನಂದ್ಯಾಲ ಗ್ರಾಮದಿಂದ ಹೊಸಪೇಟೆ ನಗರಕ್ಕೆ ಆಗಮಿಸಿದ ಯುವಕ ಆಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

Read More

ಚಿಕ್ಕೋಡಿ:- ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂದಿರಾನಗರದಲ್ಲಿ ಜರುಗಿದೆ. https://ainkannada.com/google-to-issue-gate-passes-to-hundreds-of-employees-again-bangalore-in-danger-zone/ ಅನಿಲ ರಾಮು ಜಾದವ್(34) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಯುವಕ, ಐಪಿಎಲ್‌ನಲ್ಲಿ ಬೆಟ್ಟಿಂಗ್ ಆಡುತ್ತಿದ್ದ. ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಬಾರಿ ನಷ್ಟವಾದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಯುವಕ ಸಾವು ಹಿನ್ನೆಲೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.

Read More

ಪಾಟ್ನಾ:- AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಜನ ಬಾರದೇ ಇರುವ ಹಿನ್ನೆಲೆ ಪಕ್ಷದಿಂದಲೇ ಜಿಲ್ಲಾಧ್ಯಕ್ಷನನ್ನು ಅಮಾನತು ಮಾಡಲಾಗಿದೆ. https://ainkannada.com/psl-pakistani-pacer-shaheen-afridi-gifted-a-gold-iphone/ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಿಹಾರ ಕಾರ್ಯಕ್ರಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಕ್ಕೆ ಬಕ್ಸಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಪಕ್ಷದಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ. ಈ ಬಗ್ಗೆ ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ಕೋಶದ ಅಧ್ಯಕ್ಷ ರಾಜೇಶ್ ರಾಥೋಡ್ ಮಾಹಿತಿ ನೀಡಿದ್ದಾರೆ. ಮೊನ್ನೆ ಅಂದ್ರೆ ಭಾನುವಾರ ಬಕ್ಸಾರ್‌ನ ದಲ್ಸಾಗರ್ ಕ್ರೀಡಾಂಗಣದಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬರುವ ವಿಚಾರ ತಿಳಿದಿದ್ದರೂ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು. ಬಕ್ಸಾರ್‌ನ ಕಾಂಗ್ರೆಸ್ ಶಾಸಕ ಸಂಜಯ್ ಕುಮಾರ್ ತಿವಾರಿ ಮುಂದೆ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಜನರಲ್ಲಿ ಕೇಳಿಕೊಳ್ಳುತ್ತಿದ್ದರು. ಖಾಲಿ ಕುರ್ಚಿಗಳು ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

Read More

ದಾವಣಗೆರೆ :- ನಾಪತ್ತೆಯಾಗಿದ್ದ ಪಿಯು ಪ್ರೇಮಿಗಳಿಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಟ್ಟಣದ ಹೊರವಲಯದ ಅನಂತನಹಳ್ಳಿ ಸರ್ಕಾರಿ ಐಟಿಐ ಎದುರಿಗಿರುವ ಅರಣ್ಯದಲ್ಲಿ ಜರುಗಿದೆ. https://ainkannada.com/modi-to-visit-saudi-arabia-for-2-days-from-today-talks-on-trade-investment-technology/ 18 ವರ್ಷದ ಮದ್ದನಸ್ವಾಮಿ, 18 ವರ್ಷದ ದೀಪಿಕಾ ನೇಣಿಗೆ ಶರಣಾದ ಪ್ರೇಮಿಗಳು. ಮದ್ದನಸ್ವಾಮಿ ಹಾಗೂ ದೀಪಿಕಾ ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಇವರಿಬ್ಬರು ಏ.15 ಪಿಯುಸಿ ಫಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದರು. ಇದೀಗ ಅವರು ಶವವಾಗಿ ಪತ್ತೆ ಆಗಿದ್ದಾರೆ. ಘಟನಾ ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ, ಪರಶೀಲನೆ ನಡೆಸಿದರು. ಪ್ರೇಮಿಗಳಿಬ್ಬರು ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಹೈದರಾಬಾದ್:- ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ಏ.28ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. https://ainkannada.com/modi-to-visit-saudi-arabia-for-2-days-from-today-talks-on-trade-investment-technology/ ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಮೇಲೆ ಹಣ ಅಕ್ರಮ ವಹಿವಾಟು ತಡೆ ಕಾಯ್ದೆ ಅಡಿ ಇಡಿ ಪ್ರಕರಣ ದಾಖಲಿಸಿ ದಾಳಿ ನಡೆಸಿತ್ತು. ಈ ಕಂಪನಿಗಳ ಜಾಹೀರಾತಿನಲ್ಲಿ ಮಹೇಶ್‌ ಬಾಬು ನಟಿಸಿದ್ದರು. ನಟಿಸಿದ್ದಕ್ಕೆ ಮಹೇಶ್‌ ಬಾಬು ಅವರಿಗೆ 5.9 ಕೋಟಿ ರೂ. ಸಂಭಾವನೆ ಸಿಕ್ಕಿತ್ತು. ಈ ಪೈಕಿ 3.4 ಕೋಟಿ ರೂ. ಚೆಕ್ ಮೂಲಕ ಮತ್ತು 2.5 ಕೋಟಿ ರೂ. ನಗದು ಮೂಲಕ ಪಾವತಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ನಗದು ವಹಿವಾಟಿನ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಮಹೇಶ್‌ ಬಾಬು ಅವರಿಗೆ ಇಡಿ ಸಮನ್ಸ್‌ ಜಾರಿ ಮಾಡಿದೆ.

Read More

ಕಲಬುರಗಿ:- ಮದ್ವೆ ಮಾಡ್ಕೊ ಅಂತ ಪೀಡಿಸಿದ್ದಕ್ಕೆ ಮಹಿಳೆ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. https://ainkannada.com/saregamapa-singer-prithwi-bhat-reacts-to-her-marriage-controversy/ ಕಲಬುರಗಿಯ ಕಿಣ್ಣಿ ಸಡಕ್ ಗ್ರಾಮದ ಬಳಿ ಏಪ್ರಿಲ್ 6 ರಂದು ನಡೆದಿದ್ದ ಈ ಕೊಲೆ ಪ್ರಕರಣದ ಆರೋಪಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಹೆಬ್ಬಾಳ ನಿವಾಸಿ ಆರತಿ ಕೊಲೆಗೈದಿದ್ದ ಪ್ರಿಯಕರ ಶಿವಾನಂದ ಬಂದಿತ ಆರೋಪಿ. ಈತ ವಿವಾಹಿತೆ ಆರತಿ ಜೊತೆ ಅಕ್ರಮ ಸಂಭಂಧ ಹೊಂದಿದ್ದ. ಅಲ್ಲದೇ ಮದ್ವೆಗೆ ಒತ್ತಾಯಿಸಿದ ಹಿನ್ನಲೆ ಕೊಲೆ ಮಾಡಿದ್ದಾಗಿ ಪೊಲೀಸರ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಕೊಲೆಗೂ ಮುನ್ನ ಆರೋಪಿಯು ಗಾಣಗಾಪುರ ದರ್ಶನ ಮಾಡಿಸಿದ್ದ ಎಂದು ತಿಳಿದು ಬಂದಿದೆ ಕಮಲಾಪುರ ಪೋಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿತ್ತು . ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಕಾಲುಂಗರ ಸುಳಿವು ಕೊಟ್ಟಿತ್ತು. ಅದರಂತೆ ಆರೋಪಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ.

Read More

ಹುಬ್ಬಳ್ಳಿ:- ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಐದು ವರ್ಷದ ಬಾಲಕಿ ರೇಪ್ ಆಂಡ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಎನ್ಕೌಂಟರ್ ಮಾಡಲಾಗಿದೆ. https://ainkannada.com/good-news-for-farmers-subsidy-will-be-available-under-this-scheme-for-drilling-borewells/ ಹೀಗಾಗಿ ಎನಕೌಂಟರ್ ಘಟನೆ ನಡೆದ ಸ್ಥಳಕ್ಕೆ ಸಿಐಡಿ ಎಡಿಜಿಪಿ ಬಿ.ಕೆ ಸಿಂಗ್ ಭೇಟಿ ನೀಡಿ ಪರಿಶೀಲಿಸಿದರು. ಹುಬ್ಬಳ್ಳಿ ನಗರದ ಪ್ರತಿಷ್ಟಿತ ಬಡಾವಣೆ ಯಲ್ಲಿ ಈ ಘಟನೆ ನಡೆದಿತ್ತು. ಸಿಐಡಿ ಎಸ್ಪಿ ವೆಂಕಟೇಶ ಮತ್ತು ಎಸಿಪಿ ಶಿವಪ್ರಕಾಶ್ ನಾಯಕ್ ರಿಂದ ಮಾಹಿತಿ ಪಡೆಯಲಾಗಿದೆ. ರೇಪ್ ಆಂಡ್ ಮರ್ಡರ್ ಆಗಿದ್ದ ಸ್ಥಳ ಪರಿಶೀಲನೆ ಮಾಡಿದ್ದಾರೆ. ಎಪ್ರಿಲ್ ‌ 13 ರಂದು ಈ ಘಟನೆ ನಡೆದಿತ್ತು. ಹೀಗಾಗಿ ಈ ಘಟನೆಯ ಇಂಚಿಂಚೂ ಮಾಹಿತಿ ಪಡೆಯುತ್ತಿದ್ದಾರೆ.

Read More

ಲೈಂಗಿಕತೆ ಅನ್ನೋದು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಯಾವುದೇ ವ್ಯಕ್ತಿ ಪ್ರೌಢಾವಸ್ಥೆಗೆ ಕಾಲಿಟ್ಟಾಗ, ಅವರಿಗೆ ಸೆಕ್ಸ್​ನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಯಸ್ಸಾದಂತೆ ಜವಾಬ್ದಾರಿಗಳೂ ಹೆಚ್ಚಾಗಲಿದ್ದು, ಲೈಂಗಿಕತೆಯಿಂದ ವಂಚಿತರೂ ಆಗಬಹುದು. ದೀರ್ಘ ಕಾಲದವರೆಗೆ ಸೆಕ್ಸ್​ ಮಾಡದಿದ್ದರೆ, ಅವರು ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ. https://ainkannada.com/stop-taking-paracetamol-whenever-you-have-a-fever-or-headache-this-is-harmful-to-the-heart/ ಅನೇಕ ಭಾರತೀಯರು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಮುಜುಗರ ಪಡುತ್ತಾರೆ. ಆದರೆ ಈ ಬಗ್ಗೆ ಮಾತನಾಡುವುದು ನಮ್ಮ ಲೈಂಗಿಕ ಜ್ಞಾನವನ್ನು ಬೆಳೆಸುವುದರ ಜೊತೆಗೆ ನಾನಾ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಜನರು ಲೈಂಗಿಕ ಶಿಕ್ಷಣದ ಬಗ್ಗೆ ಶಾಲಾ ದಿನಗಳಲ್ಲಿಯೇ ಸ್ವಲ್ಪಮಟ್ಟಿಗೆ ಕಲಿಸಲು ಶಿಫಾರಸು ಮಾಡುತ್ತಾರೆ. ಪ್ರೀತಿ, ಕಾಮ, ಬಯಕೆ, ಸ್ಪರ್ಶ ಇತ್ಯಾದಿ ಅನೇಕ ಭಾವನೆಗಳನ್ನು ವ್ಯಕ್ತಪಡಿಸಲು ಲೈಂಗಿಕತೆಯನ್ನು ಬಳಸಲಾಗುತ್ತದೆ. ಲೈಂಗಿಕತೆಯು ಪ್ರೇಮಿಗಳು ಅಥವಾ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೆಕ್ಸ್ನ ಪ್ರಯೋಜನಗಳು: ಲೈಂಗಿಕ ಕ್ರಿಯೆಯು ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ತರುವುದಲ್ಲದೇ ಪ್ರಯೋಜನಗಳನ್ನು ಸಹ ನೀಡುತ್ತದೆ. ರಕ್ತದೊತ್ತಡ ಕಡಿಮೆ ಮತ್ತು ಒತ್ತಡ ನಿವಾರಣೆ…

Read More

ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನದ ಬೆಲೆ ಸಾರ್ವತ್ರಿಕ ದಾಖಲೆ ಬರೆದಿದೆ. ನಿನ್ನೆ ಗ್ರಾಮ್​​ಗೆ 70 ರೂ ಹೆಚ್ಚಿದ್ದ ಅದರ ಬೆಲೆ ಇವತ್ತು ಬರೋಬ್ಬರಿ 275 ರೂನಷ್ಟು ಏರಿಕೆ ಕಂಡಿದೆ. ಅಪರಂಜಿ ಚಿನ್ನವಂತೂ ಗ್ರಾಮ್​​ಗೆ 300 ರೂನಷ್ಟು ಹೆಚ್ಚಳವಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 10,000 ರೂ ಗಡಿ ದಾಟಿದೆ. https://ainkannada.com/beware-people-another-big-scam-by-a-kerala-based-society-in-bengaluru/ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,01,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,100 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 22ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,900 ರೂ 24 ಕ್ಯಾರಟ್​ನ 10…

Read More