Author: AIN Author

ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗರೆ ಸಮೀಪ ಗುಂಡಾಲ್ ಜಲಾಶಯದಲ್ಲಿ ಯುವಕನೋರ್ವ ನೀರಿನಲ್ಲಿ ಈಜಲು ಹೋಗಿ ಮುಳುಗಿ ಸಾವನಪ್ಪಿರುವ ಘಟನೆ ಜರುಗಿದೆ. ಹನೂರು ತಾಲೂಕಿನ ಬಿ. ಗುಂಡಾಪುರ ಗ್ರಾಮದ ಶಿವಯ್ಯ ಎಂಬುವರ ಪುತ್ರ ಮಲ್ಲೇಶ್ (19) ಗುಂಡಾಲ್ ಜಲಾಶಯದಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಜಲಾಶಯದಲ್ಲಿ ಯುವಕನೋರ್ವ ಮುಳುಗಿರುವ ಬಗ್ಗೆ ಗಮನಿಸಿದ ಸ್ಥಳೀಯರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ದಡದಲ್ಲಿದ್ದ ಬಟ್ಟೆ ಫೋನ್ ಮುಖಾಂತರ ಆತನ ವಿಳಾಸ ಪತ್ತೆ ಮಾಡಿ  ಆತನ ಪೋಷಕರು  ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. https://ainkannada.com/fatal-attack-on-sheep-herders-who-refused-to-give-sheep-to-party/ ಈ ಸಂಬಂಧ ಅಗ್ನಿಶಾಮಕದಳದವರು ಶುಕ್ರವಾರ ಸಂಜೆ ತನಕವೂ ಹುಡುಕಾಟ ನಡೆಸಿದರು ಶವ ಪತ್ತೆಯಾಗಿರಲಿಲ್ಲ. ಶನಿವಾರ ಬೆಳ್ಳಗ್ಗೆ 7ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.

Read More

ಚಿತ್ರದುರ್ಗ : ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರವನ್ನು ತೆಗೆಸಿ ಹಾಕಿದ ಘಟನೆ ಖಂಡಿಸಿ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ‌ ಶನಿವಾರ ಬೆಳಗ್ಗೆ 11.30 ಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ವತಿಯಿಂದ ಮನವಿ ಸಲ್ಲಿಸಲಾಗಿದೆ. https://ainkannada.com/brahmin-students-january-cut-off-issue-complaint-against-cet-examination-officer/ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರವನ್ನು ತೆಗೆದು ಪರೀಕ್ಷೆ ನಡೆಸಿರುವುದು ಸರಿಯಲ್ಲ. ಇದನ್ನು ಚಿತ್ರದುರ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಖಂಡಿಸಿದ್ದು ಬೀದರ್ ನಲ್ಲಿ ಒಬ್ಬ ವಿದ್ಯಾರ್ಥಿಗೆ ಜನಿವಾರ ಹಾಕಿರೋ ಪ್ರಯುಕ್ತ ಪರೀಕ್ಷೆಗೆ ಅವಕಾಶವನ್ನು ನೀಡದೆ ಇರುವುದು ಆ ವಿದ್ಯಾರ್ಥಿಯ ಜೀವನಕ್ಕೆ ತೊಂದರೆಯಾಗಿರುತ್ತದೆ. ಇದನ್ನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಚಿತ್ರದುರ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಗಂಭೀರವಾಗಿ ಪರಿಗಣಿಸಿದ್ದು ಈ ಕೃತ್ಯವು ಬ್ರಾಹ್ಮಣ ಸಮುದಾಯದ ಮೇಲೆ ಪ್ರಹಾರ ಹಾಗು ನಮ್ಮ ಧರ್ಮಾಚರಣೆ ಮೇಲೆ ನಿರ್ಬಂಧ ಹೇರಿದಂತೆ ಇದನ್ನು ನಾವು ಸರ್ವತ್ರ ಸಹಿಸುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ತಪ್ಪಿತಸ್ಥರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

Read More

ಶಿವಮೊಗ್ಗ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಪ್ರವೇಶ ನೀಡದ ಪ್ರಕರಣ ಸಂಬಂಧ ಇದೀಗ ದೂರು ದಾಖಲಾಗಿದೆ.  ಸಿಇಟಿ ಪರೀಕ್ಷೆಯ ಅಧಿಕಾರಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಏಪ್ರಿಲ್ 16 ರಂದು ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸಿದ್ದಾರೆ. ಆದರೆ ಪರೀಕ್ಷಾ ವಿಚಾರದಲ್ಲಿ ಜನಿವಾರ ಕತ್ತರಿಸಬೇಕೆಂಬ ನಿಯಮವಿಲ್ಲ. ಕಾಲೇಜಿನ ಭದ್ರತಾ ಸಿಬ್ಬಂದಿ ಜನಿವಾರ ಕತ್ತರಿಸಿ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಪೊಲೀಸರಿಗೆ ದೂರು ನೀಡಿದ್ದಾರೆ. https://ainkannada.com/it-was-wrong-to-refuse-to-take-the-exam-for-wearing-a-janivar-union-minister-pralhad-joshi/ ಜನಿವಾರ ತೆಗೆಸಿದ್ದರಿಂದ ಬ್ರಾಹ್ಮಣ ಸಮುದಾಯಕ್ಕೆ ಅಪಮಾನವಾಗಿದೆ. ಇದರಿಂದ ಸಿಇಟಿ ಪರೀಕ್ಷೆಯ ಭದ್ರತೆ ನೋಡಿಕೊಳ್ಳುತ್ತಿರುವ ಅಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಕಳೆದ ರಾತ್ರಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಹುಬ್ಬಳ್ಳಿ : ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ್ದು, ಮೈ ಮೇಲೆ ಹಾಕಿದ್ದ ಜನಿವಾರವನ್ನು ಕಟ್ ಮಾಡಿದ್ದು ತಪ್ಪು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರತಿಕ್ರಿಯಿಸಿದರು. https://ainkannada.com/case-filed-on-january-11-kea-takes-action-dc-instructed-to-submit-a-report/ ಸಿಇಟಿ ಪರೀಕ್ಷೆ ವೇಳೆ ಜನಿವಾರ ಹಾಕಿದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಅಲ್ಲಿಯ ಹೋಮ್ ಗಾರ್ಡ್  ಮಾಡಿದ ವರ್ತನೆ ಸರಿಯಲ್ಲ. ಕೇವಲ ಬ್ರಾಹ್ಮಣರು ಅಷ್ಟೇ ಅಲ್ಲಾ ಬಹುತೇಕ ಜನರು ಜನಿವಾರ ಹಾಕುತ್ತಾರೆ. ಅನೇಕ ಓಬಿಸಿ ವರ್ಗದವರು ಸಹ ಹಾಕುತ್ತಾರೆ. ಆ ವಿದ್ಯಾರ್ಥಿಗೆ ನ್ಯಾಯ ಕೊಡಬೇಕು. ನ್ಯಾಯ ಅಂದರೆ ಕೇವಲ ಹಣ ಅಲ್ಲ, ವಿದ್ಯಾರ್ಥಿ ಭವಿಷ್ಯಕ್ಕೆ ಅನುಕೂಲ ಆಗಬೇಕು ಎಂದು ಆಗ್ರಹಿಸಿದರು.

Read More

ದಕ್ಷಿಣ ಕನ್ನಡ : ಮುಲ್ಕಿ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ದೇವಳದ ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ರಥೋತ್ಸವದ ವೇಳೆ ಅವಘಡ ಭವಿಸಿದೆ ತೇರು ಮುರಿದು ಬಿದ್ದಿದೆ. ಜಾತ್ರಾ ಸಂಭ್ರಮದ ವೇಳೆ ರಥೋತ್ಸವದಲ್ಲಿ ತೇರು ಮುರಿದು ಬಿದಿದ್ದು, ಭಕ್ತರು ಅಪಶಕುನವೆಂದು ಗಾಬರಿಯಾಗಿದ್ದಾರೆ. ಕಳೆದ ಶುಕ್ರವಾರ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಳದ ರಥೋತ್ಸವ ಅದ್ಧೂರಿಯಾಗಿ ಸಾಗಿತ್ತು. ರಥ ಬೀದಿಗಳಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ. ತೇರಿನ ಮೇಲ್ಬಾಗ ಕುಸಿದ ವೇಳೆ ಅರ್ಚಕರು ತೇರಿನಲ್ಲೇ ಇದ್ದರು. ಅದೃಷ್ಟವಶಾತ್  ಅಪಾಯದಿಂದ ಪಾರಾಗಿದ್ದಾರೆ. https://ainkannada.com/thieves-break-into-house-when-no-one-is-home-gold-worth-lakhs-stolen/ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಅವಘಡ ನಡೆದಿದೆ ಎನ್ನಲಾಗ್ತಿದೆ. ರಾತ್ರಿ ವೇಳೆಯೂ ಕೂಡ ರಥತೋತ್ಸವ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಈ ಅವಘಡದಿಂದ, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

Read More

ಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದ ನೋಡಿದ ಖದೀಮರು ಮನೆ ಬಾಗಿಲಿನ ಲಾಕ್‌ ಮುರಿದು ಮನೆಯಲ್ಲಿದ್ದ 12 ತೊಲೆ ಬಂಗಾರ, ಬೆಳ್ಳಿ ಹಣವನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಗುಡಿಹಾಳ ರೋಡ್ ವಾಣಿಪ್ಲಾಟ್‌ದಲ್ಲಿ  ರಾತ್ರಿ ನಡೆದಿದೆ. ಅಲ್ಲಾವುದ್ದೀನ್ ಎಂ. ಲೊಂಡೆವಾಲೆ ಎಂಬುವವರ ಮನೆ ಕಳ್ಳತನವಾಗಿದೆ. ಮನೆಯವರು ರಾತ್ರಿ ಆಸ್ಪತ್ರೆಗೆಂದು ಹೋಗಿದ್ದಾರೆ. ಮರಳಿ ಬರುವಷ್ಟರಲ್ಲಿ ಕಳ್ಳರು  ಇಡೀ ಮನೆಯನ್ನೇ ದೋಚಿಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ಬೀರುವಿನ ಲಾಕರ್‌ಗಳನ್ನು ಮುರಿದು ಸುಮಾರು 12  ತೊಲೆ ಬಂಗಾರ, 60 ಗ್ರಾಮ ಬೆಳ್ಳಿ, ಒಂದು ಲಕ್ಷ ರೂ. ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.  ಹಳೇ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಳ್ಳತನವಾದ 12 ತೊಲೆಯಲ್ಲಿ ಕೆಲವೊಂದಿಷ್ಟು ಬಂಗಾರದ ಆಭರಣಗಳನ್ನು ಮನೆಯ ಸುತ್ತಮುತ್ತ ಸಿಕ್ಕಿವೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://ainkannada.com/youth-dies-in-swimming-pool-complaint-filed-against-owner/ ಇನ್ನು ಕೆಲವೇ ದಿನಗಳಲ್ಲಿ ಮದುವೆ ಇರೋದಕ್ಕೆ ಇಷ್ಟೊಂದು ಬಂಗಾರ ತಂದಿಟ್ಟಿದ್ದರು. ಈಗ ಕಳ್ಳತನವಾಗಿದ್ದರಿಂದ ಮನೆಯವರು ಚಿಂತೆಗೀಡಾಗಿದ್ದಾರೆ.

Read More

ರಾಮನಗರ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣ ಸಂಬಂಧ ರಾಮನಗರ ತಾಲೂಕಿನ ಬಿಡದಿ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಮಧ್ಯರಾತ್ರಿ ಬಿಡದಿಯ ಅವರ ಮನೆ ಬಳಿಯೇ ಫೈರಿಂಗ್  ನಡೆದಿದ್ದು, ಕೂದಳೆಲೆ ಅಂತರದಲ್ಲಿ ರಿಯಲ್ ಎಸ್ಟೇಟ್​ ಬ್ಯುಸಿನೆಸ್​ ಮ್ಯಾನ್ ರಿಕ್ಕಿ ರೈ ಬಚಾವ್ ಆಗಿದ್ದರು. ಇನ್ನೂ ಘಟನೆ ವೇಳೆ ಬಸವರಾಜ್​​ ಕಾರು ಚಾಲನೆ ಮಾಡುತ್ತಿದ್ದರು. ಬಸವರಾಜ್ ದೂರು ಆಧರಿಸಿ A1 ರಾಕೇಶ್ ಮಲ್ಲಿ, A2 ಅನುರಾಧಾ, A3 ನಿತೇಶ್ ಶೆಟ್ಟಿ ಹಾಗೂ A4 ವೈದ್ಯನಾಥನ್ ವಿರುದ್ಧ ಬಿಎನ್​ಎಸ್ 109,3(5) ಹಾಗೂ ಆರ್ಮ್ಸ್ ಆ್ಯಕ್ಟ್ ಅಡಿ ಕೇಸ್​ ದಾಖಲಾಗಿದೆ. ರಿಯಲ್ ಎಸ್ಟೇಟ್ ವಿಚಾರವಾಗಿ ಈ ಹಿಂದೆಯೂ ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಸವರಾಜುವನ್ನು ವಿಚಾರಣೆ ಮಾಡಿದ ಪೊಲೀಸ್​, ಒಂದು ಬಾರಿ ದೊಡ್ಡ ಸದ್ದು ಕೇಳಿ ಬಂತ್ತು ಎಂದಿದ್ದಾರೆ. ಹಾಗಾಗಿ ಕಾರಿಗೆ ತಗುಲಿರುವ ಗುಂಡಿನ ಬಗ್ಗೆ ಪೊಲೀಸರಿಗೆ…

Read More

ಬೀದರ್: ಸ್ವಿಮ್ಮಿಂಗ್‌ ಮಾಡುವಾಗ  ಪಲ್ಟಿ ಹೊಡೆಯುವ ವೇಳೆ ಯುವಕನ ತಲೆಗೆ ಪೆಟ್ಟಾಗಿ ಸಾವನ್ನಪ್ಪಿರುವ ಘಟನೆ ಬೀದರ್‌ನ  ನರಸಿಂಹ ಝರಣಿ ದೇವಸ್ಥಾನದ ಹತ್ತಿರವಿರುವ ಖಾಸಗಿ ಈಜುಕೊಳದಲ್ಲಿ ನಡೆದಿದೆ. ಫೈಜ್‌ದರ್ಗಾ ಕಾಲೋನಿಯ ನಿವಾಸಿ ಸೈಯದ್ ಅಫಾನ್ (19) ಮೃತ ಯುವಕನಾಗಿದ್ದು, ಸೈಯದ್‌ ತನ್ನ ಸ್ನೇಹಿತರೊಂದಿಗೆ ಈಜುಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಈಜುಕೊಳದಲ್ಲಿ ಪಲ್ಟಿ ಹೊಡೆಯುವ ವೇಳೆ ತಲೆಗೆ ಪೆಟ್ಟಾಗಿದ್ದು, ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. https://ainkannada.com/ksrtc-driver-attempted-suicide-by-writing-a-death-note-what-was-written-in-the-death-note/ ಇನ್ನೂ ಈಜುಕೊಳ ಮಾಲೀಕರ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ಮೃತ ಯುವಕನ ಕುಟುಂಬಸ್ಥರು ನಿರ್ಲಕ್ಷ್ಯ ಆರೋಪಿಸಿದ್ದು, ಈಜುಕೊಳದ ಮಾಲೀಕ ಡಾ.ವೈಜಿನಾಥ ಮದನಾ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಬೀದರ್‌ನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೀದರ್:- ಈಜುಕೊಳದಲ್ಲಿ ಸ್ವಿಮ್ಮಿಂಗ್ ವೇಳೆ ತಲೆಗೆ ಗಂಭೀರ ಪೆಟ್ಟಾಗಿ 19 ವರ್ಷದ ಯುವಕ ಪ್ರಾಣಬಿಟ್ಟ ಘಟನೆ ಬೀದರ್‌ನ ನರಸಿಂಹ ಝರಣಿ ದೇವಸ್ಥಾನದ ಹತ್ತಿರವಿರುವ ಖಾಸಗಿ ಈಜುಕೊಳದಲ್ಲಿ ನಡೆದಿದೆ. https://ainkannada.com/just-follow-these-tips-to-complete-your-household-chores-in-less-time/ ಸೈಯದ್ ಅಫಾನ್ (19) ಮೃತ ಯುವಕ. ಸ್ನೇಹಿತರೊಂದಿಗೆ ಈಜುಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ. ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾಗಿ ಯುವಕ ಪೂಲ್‌ನಲ್ಲೇ ಮುಳುಗಿ ಮೃತಪಟ್ಟಿದ್ದಾನೆ. ಈಜು ಕೊಳದಲ್ಲಿ ಪಲ್ಟಿ ಹೊಡೆಯುವ ವೇಳೆ ತಲೆಗೆ ಗಂಭೀರ ಪೆಟ್ಟಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಈಜುಕೊಳ ಮಾಲೀಕರ ವಿರುದ್ಧ ಮೃತ ಯುವಕನ ಕುಟುಂಬಸ್ಥರು ನಿರ್ಲಕ್ಷ್ಯ ಆರೋಪ ಹೊರಿಸಿದ್ದಾರೆ. ನಿಷ್ಕಾಳಜಿ ವಹಿಸಿದ ಈಜುಕೊಳದ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಬೀದರ್‌ನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:- ಸೈಕ್ಲೋನ್ ಎಫೆಕ್ಟ್​ ಹಿನ್ನೆಲೆ, ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. https://ainkannada.com/ksrtc-driver-attempted-suicide-by-writing-a-death-note-what-was-written-in-the-death-note/ ಕಳೆದ ಎರಡು ದಿನಗಳಿಂದ ರಾತ್ರಿ ಸಮಯದಲ್ಲಿ ಮಳೆಯ ಅಬ್ಬರ ಹೆಚ್ಚಾಗಿ ಕಂಡುಬಂದಿದ್ದು, ನಿನ್ನೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಸುರಿಯಿತು. ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಹಿನ್ನೆಲೆ ತೆಲಂಗಾಣ, ತಮಿಳುನಾಡು, ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಬೆಂಗಳೂರು ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾವೇರಿ, ಚಿಕ್ಕಮಗಳೂರು, ಕೊಡಗು, ಕೋಲಾರ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ರಾಯಚೂರು. ಕೊಪ್ಪಳ, ಕಲಬುರಗಿ, ಯಾದಗಿರಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ

Read More