ಬೆಂಗಳೂರು:- ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು, ಹೊಸ ಕಲೆ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. https://ainkannada.com/there-is-no-police-protection-if-you-marry-against-your-parents-wishes-high-court/ ಏರ್ಪೋರ್ಟ್ ನಲ್ಲಿ ಹೊಸ ಆರ್ಟ್ ಪಾರ್ಕ್ ನಿರ್ಮಾಣ ಆಗಿದ್ದು, ಆರ್ಟ್ ಪಾರ್ಕ್ ನಲ್ಲಿ ಆರ್ಟಿಸ್ಟ್ ಗಳಿಂದ ವಿವಿಧ ಕಲೆಗಳ ಪ್ರದರ್ಶನ ತೋರಲಾಗಿದೆ. ಸುಮಾರು, 67 ಆರ್ಟಿಸ್ಟ್ ಗಳು ಸಾಂಸ್ಕೃತಿಕ ಸ್ಥಳಗಳು, ಸೇರಿದಂತೆ ವಿವಿಧ ಚಿತ್ರ ಕಲೆ ಬಿಡಿಸಿದ್ದಾರೆ. ಏರ್ಪೋರ್ಟ್ ಗೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರಿಗೆ ಪ್ರದರ್ಶನ ಆಗುತ್ತದೆ. ಹೆಸರಾಂತ ಕಲಾವಿದ ಎಸ್ ಜಿ ವಾಸುದೇವ್ ರಿಂದ ಲೈವ್ ಪೇಂಟಿಂಗ್ ಹಾಗೂ ಚಿತ್ರ ಕಲೆ ಪ್ರದರ್ಶನ ಮಾಡಲಾಗಿದೆ. ಏರ್ಪೋರ್ಟ್ ನಲ್ಲಿ ಚಿತ್ರ ಕಲೆ ಬಿಡಿಸುವ ಕಾರ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳು ಬಾಗಿಯಾಗಿರುವುದು ವಿಶೇಷ.
Author: AIN Author
ಲಕ್ನೋ:- ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹಗಳು ಜಾಸ್ತಿ ಆಗಿದೆ. ಲವರ್ ಗೋಸ್ಕರ ಅಪ್ಪ-ಅಮ್ಮನನ್ನೇ ಬಿಟ್ಟು ಪ್ರೀತಿಯ ಹಿಂದೆ ಹೋಗುತ್ತಿದ್ದಾರೆ. ಇದೀಗ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಪೊಲೀಸ್ ರಕ್ಷಣೆ ಇರುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. https://ainkannada.com/dont-the-thugs-in-bengaluru-fear-the-police-they-beat-up-and-extort-money-from-out-of-state-youths/ ರಕ್ಷಣೆ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ. ತಮ್ಮ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಸ್ವಂತ ಇಚ್ಛೆಯಿಂದ ವಿವಾಹವಾಗುವ ಜೋಡಿಗೆ ಯಾವುದೇ ಬೆದರಿಕೆ ಇದ್ದರೆ, ಪೊಲೀಸ್ ರಕ್ಷಣೆಯನ್ನು ಹಕ್ಕಿನ ವಿಷಯವಾಗಿ ಪಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಅರ್ಹ ಪ್ರಕರಣದಲ್ಲಿ ದಂಪತಿಗೆ ನ್ಯಾಯಾಲಯ ಭದ್ರತೆ ಒದಗಿಸಬಹುದು. ಆದರೆ, ಯಾವುದೇ ಗಂಭೀರ ಸ್ವರೂಪದ ಬೆದರಿಕೆ ಇಲ್ಲದಿದ್ದಾಗ, ಅಂತಹ ದಂಪತಿ ಸಮಾಜವನ್ನು ಎದುರಿಸಿ ನಿಲ್ಲುವುದನ್ನು ಕಲಿಯಬೇಕು ಎಂದು ತಿಳಿಸಿದೆ. ಪೊಲೀಸ್ ರಕ್ಷಣೆ ಮತ್ತು ಪೋಷಕರು ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶನ ಕೋರಿ ಶ್ರೇಯಾ ಕೇಸರ್ವಾನಿ ಮತ್ತು ಅವರ ಪತಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ…
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು, ಇವರಿಗೆ ಪೊಲೀಸರ ಭಯ ಇಲ್ವಾ ಎಂಬ ಪ್ರಶ್ನೆ ಮೂಡಿದೆ. ಹೌದು, ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ಹುಡುಗರಿಗೆ ಗಾಂಜಾ ನಶೆಯಲ್ಲಿದ್ದ ಪುಂಡರು, ಹಲ್ಲೆ ಮಾಡಿ ಸುಲಿಗೆ ಮಾಡಿದ್ದಾರೆ. ಹಲ್ಲೆ ಬಳಿಕ ಮೊಬೈಲ್ ಹಾಗೂ ಹಣವನ್ನು ಈ ಗ್ಯಾಂಗ್ ಸುಲಿಗೆ ಮಾಡಿದ್ದು, ಬೆಂಗಳೂರು ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. AIN ಕನ್ನಡ ನ್ಯೂಸ್ ಗೆ ಆರೋಪಿಗಳು ಹಲ್ಲೆ ಮಾಡುವ ಎಕ್ಸ್ ಕ್ಲೂಸಿವ್ ಸಿಸಿಟಿವಿ ಫುಟೇಜ್ ಲಭ್ಯವಾಗಿದೆ. ಈ ದೃಶ್ಯದಲ್ಲಿ ಆರೋಪಿಗಳು ಹಲ್ಲೆ ಮಾಡುವ ದೃಶ್ಯ, ತುಂಬಾ ಭಯಾನಕವಾಗಿದೆ. 5 ಮಂದಿಗೂ ಅಧಿಕ ಆರೋಪಿಗಳಿಂದ ಕೃತ್ಯ ನಡೆದಿದ್ದು, ಅಮಾಯಕ ಹುಡುಗರ ಮೇಲೆ ಸಿಕ್ಕ ಸಿಕ್ಕಲ್ಲಿ ಹಲ್ಲೆ ಮಾಡಿ ಗೂಂಡಾ ವರ್ತನೆ ತೋರಿದ್ದಾರೆ. ಕಳೆದ 15 ನೇ ತಾರೀಕು ರಾತ್ರಿ 10.15 ರ ಸುಮಾರಿಗೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಪಾಳ್ಯ ಬಸ್ ಸ್ಟಾಪ್ ನಲ್ಲಿರುವ ನಂದಿನಿ ಭೂತ್…
ಬೆಳಗಾವಿ:- ಕಳೆದ ಕೆಲವು ತಿಂಗಳ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತವಾಗಿತ್ತು. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದ. https://ainkannada.com/road-accident-private-bus-flour-two-serious/ ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಎಸಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಕ್ರಾರವಾಡಿ ಗ್ರಾಮದ ಮಧುಕರ ಸೋಮವಂಶಿ ಅಪಘಾತ ಎಸಗಿ ಪರಾರಿಯಾಗಿದ್ದ ಲಾರಿ ಚಾಲಕ. ಅಪಘಾತ ಎಸಗಿದ ಲಾರಿಯನ್ನೂ ಸಹ ಕಿತ್ತೂರು ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಜ.14 ರಂದು ಬೆಳಗ್ಗಿನ ಜಾವ ಹೆಬ್ಬಾಳ್ಕರ್ ಕಾರಿಗೆ ತಾಗಿಸಿ ಲಾರಿ ಚಾಲಕ ಪರಾರಿಯಾಗಿದ್ದ. ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರು ಸಮೀಪದ ಅಂಬಡಗಟ್ಟಿಯಲ್ಲಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯವೂ ಸಹ ಆಗಿತ್ತು. ಈ ಕುರಿತು ಸಚಿವೆ ಹೆಬ್ಬಾಳ್ಕರ್ ಅವರ ಕಾರು ಚಾಲಕ ಶಿವಪ್ರಸಾದ್ ಕಿತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದ ದೂರಿನ ಅನ್ವಯ ಪ್ರಕರಣದ ವಿಚಾರಣೆ ಆರಂಭಿಸಿದ್ದ ಕಿತ್ತೂರು ಠಾಣೆ ಪೊಲೀಸರು, ಇದೀಗ ಆರೋಪಿ ಚಾಲಕನನ್ನು…
ಬೆಂಗಳೂರು ಗ್ರಾಮಾಂತರ:- ಖಾಸಗಿ ಬಸ್ ಪಲ್ಟಿ ಹೊಡೆದ ಪರಿಣಾಮ, ಇಬ್ಬರಿಗೆ ಗಂಭೀರಗಾಯವಾಗಿರುವ ಘಟನೆ ದೊಡ್ಡಬಳ್ಳಾಪುರದ ಮಾಕಳಿದುರ್ಗಾ ಬಳಿ ನಡೆದಿದೆ. https://ainkannada.com/lorry-owners-strike-to-fulfill-demand-prices-of-essential-commodities-skyrocket/ ಬೆಂಗಳೂರಿನಿಂದ ಹಿಂದೂಪುರಕ್ಕೆ ಬಸ್ ಹೊರಟಿತ್ತು. RPGT ಖಾಸಗಿ ಬಸ್ ಅಪಘಾತಕ್ಕೆ ಒಳಗಾದ ಬಸ್ ಎನ್ನಸಲಾಗಿದೆ. ಘಟನೆಯಿಂದ ಇಬ್ಬರಿಗೆ ಕೈ ಕಾಲು, ತಲೆ ಭಾಗಕ್ಕೆ ಗಾಯವಾಗಿದೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ. ಮಾಡಲಾಗಿದೆ. ಮಳೆಯಿಂದಾಗಿ ರಸ್ತೆ ತಿರುವಿನಲ್ಲಿ ಬಸ್ ಪಲ್ಟಿ ಹೊಡೆದಿದೆ ಎನ್ನಸಲಾಗಿದೆ.
ಬೆಂಗಳೂರು:- ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದಿನಿಂದ ಹೋರಾಟ ತೀವ್ರಗೊಳಿಸಲು ಲಾರಿ ಮಾಲೀಕರು ಮುಂದಾಗಿದ್ದಾರೆ. ಲಾರಿಗಳು ನಿಂತಲ್ಲೇ ನಿಂತಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಆಗುತ್ತಿದೆ. ಹೀಗಾಗಿ, ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಅಭಾವದ ಬಿಸಿ ತಟ್ಟಲು ಶುರುವಾಗಿದೆ. ಮಾರುಕಟ್ಟೆಗಳಲ್ಲಿ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅನೇಕ ವಸ್ತುಗಳು ದುಬಾರಿಯಾಗಿವೆ. https://ainkannada.com/road-accident-couples-death/ ಲಾರಿ ಬಂದ್ ಆಗಿದ್ದನ್ನೇ ಮುಂದಿಟ್ಟುಕೊಂಡು ಕಾಳಸಂತೆ ದಂಧೆಕೋರರು ಇವತ್ತಿನಿಂದ ಕೃತಕ ಅಭಾವ ಸೃಷ್ಟಿಸುವ ಸಾಧ್ಯತೆಯೂ ಇದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಭೀತಿ ಕಾಡುತ್ತಿದೆ ಎಂದು ಬೆಂಗಳೂರಿನ ಕೆಲವು ಮಂದಿ ಅಂಗಡಿ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ
ಮಂಡ್ಯ:- ರಸ್ತೆ ಅಪಘಾತದಲ್ಲಿ ದಂಪತಿಗಳಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕದಬಹಳ್ಳಿ ಗ್ರಾಮದ ಬಳಿ ಜರುಗಿದೆ. https://ainkannada.com/ipl-2025-delhi-capitles-won-against-rr-in-super-over/ ಶ್ವೇತಾರನ್ನು (38) ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿದರಕ, ಗ್ರಾಮದ ನಾಗರಾಜುಗೆ (45) ಮದುವೆ ಮಾಡಿಕೊಡಲಾಗಿತ್ತು. ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಗ್ರಾಮದಲ್ಲಿ ಜಾತ್ರೆ ಇದ್ದ ಕಾರಣ ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ಕದಬಹಳ್ಳಿ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು, ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ನಾಗಮಂಗಲ ತಾಲೂಕಿನ ಬಿಂಡಿಗನ ನವಿಲೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪಂದ್ಯ ಟೈ ಆದ ಹಿನ್ನೆಲೆ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಆರ್ಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದೆ. https://ainkannada.com/three-day-heavy-rain-in-bangalore-yellow-alert-declares-in-some-parts/ ಟಾಸ್ ಗೆದ್ದ ಆರ್ಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಡಿಸಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್ ಕಲೆಹಾಕಿತ್ತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ಗೆ 189 ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ಗಳಿಸಿ ಸೂಪರ್ ಓವರ್ವರೆಗೂ ಬಂದಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 5 ಬಾಲ್ಗೆ 2 ವಿಕೆಟ್ ಕಳೆದುಕೊಂಡು 11 ರನ್ಗಳನ್ನು ಕಲೆಹಾಕುವ ಮೂಲಕ 12 ರನ್ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 4 ಬಾಲ್ಗೆ ಯಾವುದೇ ವಿಕೆಟ್ ಇಲ್ಲದೆ 13 ರನ್ ಕಲೆಹಾಕುವ ಮೂಲಕ ಗೆಲುವು ಸಾಧಿಸಿತು. ಡೆಲ್ಲಿ ಬ್ಯಾಟಿಂಗ್: ಟಾಸ್…
ಬೆಂಗಳೂರು:-:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಏರಿಯಾ ಗಳಲ್ಲಿ ಇನ್ನೂ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainkannada.com/it-is-difficult-for-the-newlyweds-of-this-pile-to-fit-in-thursdays-zodiac/ ಇನ್ನೂ ಈಗಾಗಲೇ ವೈಟ್ ಫೀಲ್ಡ್, ಜಯನಗರ, ಕೆಂಗೇರಿ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದೆ. ಮಲ್ಲೇಶ್ವರಂ, ಶಾಂತಿನಗರ, ರಾಜಾಜಿನಗರ, ಬನಶಂಕರಿ, ಜಯನಗರ ಮತ್ತು ಕೆಲವು ಭಾಗಗಳಲ್ಲಿ ಮಳೆಯಾಗಿದೆ. ವೈಟ್ ಫೀಲ್ಡ್, ವರ್ತೂರು ಭಾಗದಲ್ಲಿ ಜೋರು ಮಳೆಯಾಗಿದೆ. ಭಾರೀ ಮಳೆಯ ಪರಿಣಾಮ ವರ್ತೂರು ರಸ್ತೆ ಕೆರೆಯಂತಾಗಿದೆ. ಬೆಂಗಳೂರು ಸೇರಿದಂತೆ ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ರಾಮನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಏ.19ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸೂರ್ಯೋದಯ – 6:02ಬೆ ಸೂರ್ಯಾಸ್ತ – 6:29 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ಚೌತಿ ನಕ್ಷತ್ರ – ಜ್ಯೇಷ್ಠ ಯೋಗ – ವರಿಯಾನ್ ಕರಣ – ಬಾಲವ ಮಳೆ ನಕ್ಷತ್ರ- ಅಶ್ವಿನಿ ರಾಹು ಕಾಲ – 01:30 ದಿಂದ 03:00 ವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 4:26 ಬೆ ದಿಂದ 5:14 ಬೆ ವರೆಗೆ ಅಮೃತ ಕಾಲ – 10:38 ಬೆ. ದಿಂದ 12:23 ಮ ವರೆಗೆ ಅಭಿಜಿತ್ ಮುಹುರ್ತ – 11:50 ಬೆ ದಿಂದ 12:40 ಮ. ವರೆಗೆ ನಿಮ್ಮ ಹೆಸರು, ಜನ್ಮ ದಿನಾಂಕ, ಸಮಯ ಮತ್ತು ಜನ್ಮಸ್ಥಳ ಮಾಹಿತಿ ತಿಳಿಸಿ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ…