ಬೆಂಗಳೂರು:- ಖ್ಯಾತ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. https://ainkannada.com/i-have-been-to-chamarajanagar-20-times-and-have-been-chief-minister-twice-cm/ ಈ ಸಂಬಂಧ X ಮಾಡಿರುವ ಸಿದ್ದರಾಮಯ್ಯ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿಪತಾಕೆಯನ್ನು ಆಗಸದೆತ್ತರಕ್ಕೆ ಹಾರಿಸಿದ್ದ ಖ್ಯಾತ ಖಭೌತ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅವರ ನಿಧನದಿಂದ ಆಘಾತವಾಗಿದೆ. ಕರ್ನಾಟಕ ಮೂಲದ ಡಾ.ಕಸ್ತೂರಿರಂಗನ್ ಅವರಿಗೆ ನಮ್ಮ ರಾಜ್ಯದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಕಾಳಜಿ ಇತ್ತು. ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಗೆ ದೀರ್ಘ ಕಾಲ ಅಧ್ಯಕ್ಷರಾಗಿ ಮತ್ತು ಕೇಂದ್ರದ ಬಾಹ್ಯಾಕಾಶ ಮಂಡಳಿಯ ನಿರ್ದೇಶಕರಾಗಿ ಡಾ.ಕಸ್ತೂರಿ ರಂಗನ್ ಅವರು ಸಲ್ಲಿಸಿದ ಸೇವೆಯಿಂದಾಗಿ ಭಾರತ ಇಂದು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಡಾ.ಕಸ್ತೂರಿ ರಂಗನ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.
Author: AIN Author
ಚಾಮರಾಜನಗರ ಏ 25: ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದ ಬಡವರಿಗೆ ನೆರವಾಗುವ ರೀತಿಯಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ. ಇದರಿಂದ ಅಂಬೇಡ್ಕರ್ ಅವರ ಸಮಾನತೆಯ ಅವಕಾಶ ಈಡೇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. https://ainkannada.com/is-your-toothache-getting-worse-mix-this-with-honey-and-rub-it-on-it-will-disappear-in-an-instant/ ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕನಕ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ 2 ಕೋಟಿ ರೂಪಾಯಿಯಲ್ಲಿ 50 ಲಕ್ಷ ರೂಪಾಯಿ ಬಿಡುಗಡೆ ಆಗಿದೆ. ಹಲವರು ದೇಣಿಗೆ ಕೂಡ ಕೊಟ್ಟಿದ್ದಾರೆ. ಇವರೆಲ್ಲರಿಗೂ ಒಳ್ಳೆಯದಾಗಲಿ ಎಂದರು. ಸಮುದಾಯ ಭವನ ಕಟ್ಟಿ. ಆದರೆ, ಇದಕ್ಕಿಂತ ಹೆಚ್ಚಾಗಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆ ನಿರ್ಮಿಸಿ, ಜಿಲ್ಲೆಯ ಎಲ್ಲಾ ಹಿಂದುಳಿದ ಸಮುದಾಯಗಳ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ದೊರಕುವಂತೆ ಮಾಡಿ ಎಂದು ಕರೆ ನೀಡಿದರು. ಚಾಮರಾಜನಗರ ಜಿಲ್ಲೆ ಅತ್ಯಂತ ಹಿಂದುಳಿದಿರುವ ಜಿಲ್ಲೆ. ಇಲ್ಲಿ ಶಿಕ್ಷಣ ಹೆಚ್ಚೆಚ್ಚು ಸಿಗಬೇಕಿದೆ. ಶಿಕ್ಷಣ ಕಲಿಯಬೇಕಿದ್ದರೆ ಹಾಸ್ಟೆಲ್ ಗಳ ಅಗತ್ಯವೂ ಇದೆ. ನಮ್ಮ ಸರ್ಕಾರ ಎಲ್ಲಾ ಜಾತಿಯ…
ಹಲ್ಲುನೋವು ಎದುರಾಗಲು ಕೆಲವಾರು ಕಾರಣಗಳಿವೆ. ಸಾಮಾನ್ಯ ಕಾರಣಗಳೆಂದರೆ ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಎದುರಾಗಿರುವ ಸೋಂಕು. ಪರಿಣಾಮವಾಗಿ ಉರಿಯೂತ ಮತ್ತು ಒಸಡುಗಳಲ್ಲಿ ರಕ್ತ ಒಸರುವುದು ಕಂಡುಬರುತ್ತದೆ https://ainkannada.com/eat-these-fruits-without-fail-this-summer-these-problems-will-not-bother-you/ ಎರಡು ಹಲ್ಲುಗಳ ನಡುವಿನ ಸಂಧು ಹಾಗೂ ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಸಿಲುಕಿಕೊಂಡ ಆಹಾರಕಣಗಳನ್ನು ಬ್ಯಾಕ್ಟೀರಿ ಯಾಗಳು ಕೊಳೆಸುವ ಕಾರಣದಿಂದ ಈ ಭಾಗದಲ್ಲಿ ಸೋಂಕು ಎದುರಾಗುತ್ತದೆ.ಇದು ಹಲ್ಲುನೋವು ಮತ್ತು ಬಾಯಿಯ ದುರ್ವಾಸನೆಗೂ ಕಾರಣವಾಗುತ್ತದೆ. ಈ ಸೋಂಕು ಎದುರಾದಾಗ ನೀವಾಗಿ ಇದಕ್ಕೆ ಚಿಕಿತ್ಸೆ ನೀಡಲು ಯತ್ನಿಸದಿರಿ ಹಾಗೂ ಆದಷ್ಟೂ ಬೇಗನೇ ದಂತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಹಿಪ್ಪಲಿ ದೇಹಕ್ಕೆ ತುಂಬಾ ಆರೋಗ್ಯಕರ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಇದನ್ನು ಹೆಚ್ಚಾಗಿ ಹಲ್ಲುನೋವು ಗುಣಪಡಿಸಲು ಬಳಸಲಾಗುತ್ತದೆ. ಜೊತೆಗೆ ಮಲೆನಾಡಿನ ಅನೇಕ ಮನೆಮದ್ದುಗಳಲ್ಲಿಯೂ ಬಳಸಲಾಗುತ್ತದೆ. ಇದರ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಒಸಡುಗಳು ಮತ್ತು ಹಲ್ಲುಗಳ ಮೇಲೆ ಉಜ್ಜಿದರೇ ಹಲ್ಲು ನೋವು ಮತ್ತು ಊತ ಕಡಿಮೆಯಾಗುತ್ತದೆ. https://ainkannada.com/eat-these-fruits-without-fail-this-summer-these-problems-will-not-bother-you/ ಇದು ಮುಟ್ಟಿಗೂ ಪ್ರಯೋಜನಕಾರಿ: ಹಿಪ್ಪಲಿ ಮಹಿಳೆಯರಿಗೆ ಸಹ ಪ್ರಯೋಜನಕಾರಿಯಾಗಿದೆ.…
ಬೇಸಿಗೆಯಲ್ಲಿ ತಾಪ ಹೆಚ್ಚಾದಂತೆ ದೇಹದಲ್ಲಿ ನೀರಿನ ಅಂಶದ ಕೊರತೆ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಋತುಮಾನದಲ್ಲಿ ಹೆಚ್ಚು ಹೈಡ್ರೇಟ್ ಆಗಿರುವುದು ಅಗತ್ಯ. ಬೇಸಿಗೆಯಲ್ಲಿ ನೀರಿನಾಂಶ ಹೆಚ್ಚಿರುವ ಪೋಷಕಾಂಶ ಭರಿತ ಹಣ್ಣುಗಳ ಸೇವನೆಗೆ ಆದ್ಯತೆ ನೀಡಬೇಕು. ನೀರಿನ ಅಂಶ ಹೆಚ್ಚಿರುವ ತರಕಾರಿ ಮತ್ತು ಹಣ್ಣುಗಳು ನಿರ್ಜಲೀಕರಣ ಸಮಸ್ಯೆ ತಪ್ಪಿಸುವ ಜೊತೆಗೆ ಆರೋಗ್ಯಯುತವಾಗಿರಲು ಸಹಾಯ ಮಾಡುತ್ತದೆ. ಅಂತಹ ಹಣ್ಣುಗಳ ಪಟ್ಟಿ ಇಲ್ಲಿದೆ. https://ainkannada.com/i-will-change-the-name-of-ramanagara-dk-shivakumar/ ಬೇಸಿಗೆಯಲ್ಲಿ ಸಾಮಾನ್ಯವಾಗಿ ಊಟ ಮಾಡಲು ಕಷ್ಟವಾಗುತ್ತದೆ. ಬರೀ ನೀರು, ಜ್ಯೂಸ್ ಹಣ್ಣು ತಿಂದು ಹೊಟ್ಟೆ ತುಂಬಿಸುವಂತಾಗಿದೆ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ಸಹಕಾರಿಯಾಗಬಲ್ಲ ಈ ಹಣ್ಣನ್ನು ತಿನ್ನೋದು ಒಳ್ಳೆಯದು ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ. ಬೇಸಿಗೆಯಲ್ಲಿ ಬಿಸಿಲಿನ ಧಗೆಯಿಂದ ದೇಹವು ತುಂಬಾ ಬೆವರಲಾರಂಭಿಸುತ್ತದೆ.ಇದು ದೇಹದಲ್ಲಿ ನೀರಿನ ಕೊರತೆಗೆ ಕಾರಣವಾಗಬಹುದು. ಇದರಿಂದಾಗಿ, ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ, ಹೊಟ್ಟೆ ಉರಿ ಉಂಟಾಗಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಶಾಖದ ಹೊಡೆತದಿಂದ ಬಳಲಬಹುದು. ಹೀಟ್‌ಸ್ಟ್ರೋಕ್ ತುಂಬಾ ಅಪಾಯಕಾರಿಯಾಗಿದ್ದು, ಪ್ರಾಣ ಹೋಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ದೇಹವನ್ನು ಹೈಡ್ರೀಕರಿಸಿಡುವುದು…
ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ರಸಿಬಿ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 11 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ 14 ವರ್ಷಗಳ ಬರವನ್ನು ಕೊನೆಗೊಳಿಸಿತು. ಈ ಪಂದ್ಯದಲ್ಲಿ 205 ರನ್‌ಗಳನ್ನು ಗಳಿಸಿದ ಆರ್‌ಸಿಬಿ ತನ್ನ ಇತಿಹಾಸದಲ್ಲಿ 205 ರನ್‌ಗಳನ್ನು ಗಳಿಸಿದ ಆರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ ಎಂಬುದು ಗಮನಾರ್ಹ. https://ainkannada.com/retired-dg-igp-om-prakash-murder-case-accused-pallavi-remanded-in-ccb-custody-for-7-days-investigation-expedited/ ಇನ್ನೂ ಸತತ ಮೂರು ಪಂದ್ಯಗಳಲ್ಲಿ ರಾಜಸ್ಥಾನ್ ತಾನು ಮಾಡಿದ ತಪ್ಪುಗಳಿಂದಲೇ ಸೋತಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ರಾಜಸ್ಥಾನ್ ಅದೇ ತಪ್ಪನ್ನು ಮಾಡಿ ಸೋತಿತ್ತಾದರೂ ಇಲ್ಲಿ ಆರ್‌ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ತೋರಿದ ಚಾಣಾಕ್ಷತೆ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು. ಆರ್‌ಸಿಬಿ ನೀಡಿದ 205 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ಗೆ ನಿರೀಕ್ಷೆಗೂ ಮೀರಿದ ಆರಂಭ ನೀಡುವಲ್ಲಿ ಆರಂಭಿಕರು ಯಶಸ್ವಿಯಾದರು. ತಂಡ ಕೇವಲ 9 ಓವರ್ಗಲ್ಲಿ 3 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿತು. ಆದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯ ರಾಜಸ್ಥಾನ್ಗೆ…
ಬೆಂಗಳೂರು:- ನಿವೃತ್ತ ಡಿಜಿ,ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಆರೋಪಿತೆ ಪಲ್ಲವಿಯನ್ನು ಕಸ್ಟಡಿಗೆ ಪಡೆದು ಮಾಹಿತಿ ಕಲೆಹಾಕುತ್ತಿದ್ದಾರೆ. https://ainkannada.com/young-lawyers-body-found-suspiciously-murder-suspected-key-witness-also-hanged/ ಕೋರ್ಟ್ ಅನುಮತಿ ಪಡೆದು ಆರೋಪಿತೆ ಪಲ್ಲವಿಯನ್ನು ಏಳು ದಿನ ಕಸ್ಟಡಿಗೆ ಪಡೆದಿರುವ ಸಿಸಿಬಿ, A2 ಆರೋಪಿಯಾಗಿರುವ ಕೃತಿ ವಿಚಾರಣೆಗೂ ಸಿದ್ದತೆ ಕೈಗೊಂಡಿದೆ. ಕೃತಿ ಮಾನಸಿಕ ಸ್ಥಿತಿ ಸ್ಥಿರವಾಗಿದೆ ಎಂದು ನಿಮಾನ್ಸ್ ನಿಂದ ರಿಪೋರ್ಟ್ ಬಂದಿದೆ. ಕೃತಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ವೈದ್ಯರು ವರದಿ ಕೊಟ್ಟಿದ್ದಾರೆ. ಕಳೆದ 20 ನೇ ತಾರೀಖು ಎಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಪತ್ನಿಯೇ ಓಂ ಪ್ರಕಾಶ್ ರನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಅನುಮತಿ ಪಡೆದು ಸಿಸಿಬಿ ಪೊಲೀಸರು, ಆರೋಪಿತೆ ಪಲ್ಲವಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಮೂರು ದಿನ ಆಸ್ಪತ್ರೆಯಲ್ಲಿದ್ದ ಕೃತಿ ಡಿಶ್ಚಾರ್ಜ್ ಆಗಿದ್ದು, ಮನೆಗೆ ರಿಟರ್ನ್ ಆಗಿದ್ದಾರೆ. ಕೆಲವೇ ದಿನದಲ್ಲಿ ನೋಟೀಸ್ ಕೊಟ್ಟು ವಿಚಾರಣೆ ಮಾಡಲು ಸಿಸಿಬಿ ಸಿದ್ದತೆ ಕೈಗೊಂಡಿದೆ. ಸದ್ಯಕ್ಕೆ ಕೃತಿ ಪಾತ್ರದ…
ನೆಲಮಂಗಲ:- ನೇಣುಬಿಗಿದ ಸ್ಥಿತಿಯಲ್ಲಿ ಯುವ ವಕೀಲೆ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀನಿವಾಸಪುರ ಶೆಡ್ ನಲ್ಲಿ ಜರುಗಿದೆ. https://ainkannada.com/thrilling-win-against-rajasthan-what-did-captain-rajat-say-in-the-joy-of-victory/ ಮತ್ತೊಂದೆಡೆ ವಕೀಲೆ ಮೃತದೇಹ ಕಂಡು ಕುಟುಂಬದ ಜೊತೆಗಿದ್ದ ಯುವಕನೂ ಕೂಡ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ವಕೀಲೆ ರಮ್ಮಾ(26) ಹಾಗೂ ಮನೆಯ ಮತ್ತೊಬ್ಬ ಪುನೀತ್(25) ಸೂಸೈಡ್ ಮಾಡಿಕೊಂಡವರು. ಶ್ರೀನಿವಾಸಪುರ ಶೆಡ್ ನಲ್ಲಿ ವಕೀಲೆ ರಮ್ಯಾ ಮೃತದೇಹ ಪತ್ತೆಯಾದರೆ, ಕೆಂಪಲಿಂಗನಹಳ್ಳಿಯ ಮನೆಯಲ್ಲಿ ಪುನೀತ್ ಮೃತದೇಹ ಪತ್ತೆಯಾಗಿದೆ. ರಮ್ಯಾ ಸಾವಿಗೆ ಉದ್ಯಮಿ ದಿನೇಶ್ ಕಾರಣ ಅಂತ ರಮ್ಯಾ ಮಾವನಿಗೆ ವಾಯ್ಸ್ ಮೇಸೆಜ್ ಕಳಿಸಿ ಸಾವನ್ನಪ್ಪಿದ್ದಾರೆ. ಇದೀಗ ಅರೋಪಿ ದಿನೇಶ್ ಪತ್ತೆಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ. ಗ್ರಾನೈಟ್ ಕಲ್ಲು ವ್ಯವಹಾರ ಮಾಡ್ತಿದ್ದ ದಿನೇಶ್,ತಾಯಿ ಸಮಾಧಿ ನಿರ್ಮಾಣ ವೇಳೆ ರಮ್ಯಾಗೆ ಪರಿಚಯವಾಗಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಶೆಡ್ ಬಳಿ ಬಂದು ರಮ್ಯಾರನ್ನ ಕೊಂದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಮುಖ ಸಾಕ್ಷಿಯಾಗಿದ್ದ ಪುನೀತ್ ಕೂಡ ಸಾವನ್ನಪ್ಪಿದ್ದಾನೆ. ಇನ್ನೂ ವಕೀಲೆ ಸಾವಿನ…
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ರೋಚಕವಾಗಿತ್ತು. ಒಂದು ರೀತಿ ಪಂದ್ಯ ಸೋಲತ್ತೆ ಎಂದು ಕೊಂಡಿದ್ದ ಆರ್ ಸಿಬಿಗೆ 19ನೇ ಓವರ್ ಪಂದ್ಯದ ಚಿತ್ರಣ ಬದಲಿಸಿತು. https://ainkannada.com/india-pakistan-exchange-of-fire-on-border-in-wake-of-pahalgam-attack/ ಟಾಸ್ ಸೋತರೂ ಪಂದ್ಯದ ಫಲಿತಾಂಶವನ್ನು ಬದಲಿಸುವಲ್ಲಿ ಯಶಸ್ವಿಯಾದ ಆರ್‌ಸಿಬಿ ತನ್ನ ಸಾಂಘಿಕ ಪ್ರದರ್ಶನದಿಂದ ತವರಿನಲ್ಲಿ ಸತತ ಮೂರು ಪಂದ್ಯಗಳ ಸೋಲಿನ ಸರಣಿಗೆ ಬ್ರೇಕ್ ಹಾಕಿತು. ಈ ಪಂದ್ಯದಲ್ಲಿ ಮತ್ತೊಮ್ಮೆ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅದ್ಭುತ ಅರ್ಧಶತಕಗಳ ಆಧಾರದ ಮೇಲೆ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಇದು ಈ ತಂಡದ ವಿರುದ್ಧ ಆರ್‌ಸಿಬಿ ಗಳಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ರಾಜಸ್ಥಾನ್ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಲಷ್ಟೇ ಶಕ್ತವಾಯಿತು. ವಾಸ್ತವವಾಗಿ ರಾಜಸ್ಥಾನ್ ಇನ್ನಿಂಗ್ಸ್ನ ಮೊದಲಾರ್ಧದಲ್ಲಿ ಗೆಲುವಿನ ಫೇವರೇಟ್…
ನವದೆಹಲಿ:- ಮಂಗಳವಾರ ಅಂದ್ರೆ ಕಳೆದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವಿಹಾರಧಾಮದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 26 ಜನರು ಸಾವಿಗೀಡಾಗಿದ್ದಾರೆ. ಉಗ್ರರ ಈ ಕೃತ್ಯಕ್ಕೆ ಭಾರತ ಮಾತ್ರವಲ್ಲ ಅಮೆರಿಕ ಇನ್ನಿತರ ರಾಷ್ಟ್ರಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ತಾನು ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಗುರುವಾರ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿತ್ತು. https://ainkannada.com/india-pakistan-exchange-of-fire-on-border-in-wake-of-pahalgam-attack/ ಸಭೆಯಲ್ಲಿ ಸರ್ಕಾರದ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರೆ, ವಿಪಕ್ಷಗಳ ನಾಯಕರಲ್ಲಿ ಪ್ರಧಾನವಾಗಿ ಲೋಕಸಭೆಯ ವಿರೋಧ ಪಕ್ಷಗಳ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ, ಆಮ್ ಆದ್ಮಿ ಪಾರ್ಟಿಯ ಸಂಜಯ್ ಸಿಂಗ್, ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರವೂ ಸಹ ಭದ್ರತಾ ವೈಫಲ್ಯದಿಂದಲೇ ಪಹಲ್ಗಾಮ್ ಘಟನೆ ಆಗಿರುವುದಾಗಿ…
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬೆನ್ನಲ್ಲೇ ಗಡಿಯಲ್ಲಿ ಭಾರತ-ಪಾಕ್ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಗಡಿ ನಿಯಂತ್ರಣ ರೇಖೆಯ ಕೆಲವು ಸ್ಥಳಗಳಲ್ಲಿ ಪಾಕಿಸ್ತಾನ ತನ್ನ ನೆಲೆಯಿಂದ ತಡರಾತ್ರಿ ಭಾರತದ ಮೇಲೆ ಗುಂಡಿನ ದಾಳಿ ನಡೆಸಿದೆ. https://ainkannada.com/taking-a-selfie-with-you-strange-road-rage-case-in-bengaluru/ ಪಾಕಿಸ್ತಾನ ಸೇನೆ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದು, ಪ್ರತಿಯಾಗಿ ಭಾರತವೂ ಗುಂಡು ಹಾರಿಸಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಸೈನಿಕರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.