ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainkannada.com/teachers-who-wrote-the-exam-outside-the-classroom-for-touching-a-dalit-student/ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ. ಬೆಂಗಳೂರಿನ ಎಚ್ಎಎಲ್ನಲ್ಲಿ 33.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 34.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 34.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 33.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಹೊನ್ನಾವರದಲ್ಲಿ 34.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್…
Author: AIN Author
ಚೆನ್ನೈ:- ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಿನಾಥುಕಡವು ಬಳಿಯ ಖಾಸಗಿ ಶಾಲೆಯಲ್ಲಿ ಪಿರಿಯಡ್ಸ್ ಆಗಿದ್ದಕ್ಕೆ 8ನೇ ತರಗತಿಯ ದಲಿತ ವಿದ್ಯಾರ್ಥಿನಿಯನ್ನು ಕ್ಲಾಸ್ ರೂಂ ಹೊರಗೆ ಪರೀಕ್ಷೆಗೆ ಕೂರಿಸಿರುವ ಅಮಾನವೀಯ ಘಟನೆ ಜರುಗಿದೆ. https://ainkannada.com/siddaramaiah-watched-rcb-vs-dc-match-on-thursday-at-chinnaswamy-stadium/ ಇಲ್ಲಿನ ಸೆಂಗುಟ್ಟೈಪಾಳ್ಯಂ ಗ್ರಾಮದಲ್ಲಿರುವ ಸ್ವಾಮಿ ಚಿದ್ಭವಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿ 8ನೇ ತರಗತಿ ಓದುತ್ತಿದ್ದಳು. ಏ.5 ರಂದು ವಿದ್ಯಾರ್ಥಿನಿಗೆ ಪಿರಿಯಡ್ಸ್ ಆಗಿತ್ತು. ಹೀಗಾಗಿ ಪಿರಿಯಡ್ಸ್ ನಂತರ, ಶಾಲಾ ಆಡಳಿತ ಮಂಡಳಿಯು ಏ.7 ರಂದು ವಿಜ್ಞಾನ ಪರೀಕ್ಷೆ ಮತ್ತು ಏ.9 ರಂದು ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಏ.7 ರಂದು ವಿಜ್ಞಾನ ಪರೀಕ್ಷೆಯಲ್ಲಿ ತರಗತಿಯ ಹೊರಗೆ ಕೂರಿಸಿರುವುದಾಗಿ ವಿದ್ಯಾರ್ಥಿನಿ ತನ್ನ ತಾಯಿಗೆ ತಿಳಿಸಿದ್ದಳು. ಮುಂದಿನ ಪರೀಕ್ಷೆಗೆ ವಿದ್ಯಾರ್ಥಿನಿಯ ತಾಯಿ ಶಾಲೆಗೆ ತೆರಳಿದ್ದು, ತರಗತಿಯ ಹೊರಗೆ ಕೂರಿಸಿರುವುದನ್ನು ಗಮನಿಸಿದರು. ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ IPL ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಿದ್ದವು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಬಿಡುವಿನ ಸಮಯದಲ್ಲಿ ಮ್ಯಾಚ್ ವೀಕ್ಷಣೆ ಮಾಡಿದ್ದಾರೆ. https://ainkannada.com/depression-from-wifes-death-i-love-you-wrote-hema-and-killed-two-children-and-suicide/ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಬೈರತಿ ಸುರೇಶ್ ಜೊತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯವನ್ನು ಸಿಎಂ ವೀಕ್ಷಸಿ ಎಂಜಾಯ್ ಮಾಡಿದರು. ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 163 ರನ್ ಗಳಿಸಿತು. ತಂಡದ ಪರ ಟಿಮ್ ಡೇವಿಡ್ ಅಜೇಯ 37 ರನ್ ಗಳಿಸಿದರೆ, ಫಿಲ್ ಸಾಲ್ಟ್ 37 ರನ್, ರಜತ್ ಪತಿದಾರ್ 25 ಮತ್ತು ಕೊಹ್ಲಿ 22 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ವಿಪ್ರಾಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5…
ದಾವಣಗೆರೆ:- ಪತ್ನಿ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಪತಿ ಓರ್ವ ತನ್ನಿಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಎಸ್ಪಿಎಸ್ ನಗರದಲ್ಲಿ ಜರುಗಿದೆ. https://ainkannada.com/kundaghola-bhagavan-mahaveer-jayanti-celebration/ 35 ವರ್ಷದ ಉದಯ್ ಎಂಬಾತ, ಮಕ್ಕಳಾದ ಸಿಂಧುಶ್ರೀ, ಶ್ರೀಜಯ್ ನನ್ನು ಕೊಲೆಗೈದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಉದಯ್ ಪತ್ನಿ ಮೃತಪಟ್ಟಿದ್ದರು. ಪತ್ನಿ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ದ ಪತಿ ಉದಯ್ , ಇಂದು ಮಕ್ಕಳನ್ನು ಸಾಯಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ನೇಣಿಗೆ ಶರಣಾಗುವ ಮೊದಲು ರಕ್ತದಲ್ಲಿ ಐಲವ್ ಯು ಹೇಮಾ ಎಂದು ಪತ್ನಿಯ ಹೆಸರು ಗೋಡೆ ಮೇಲೆ ಬರೆದಿದ್ದಾರೆ. ಹೇಮಾ ಹಾಗೂ ಉದಯ್ ಪರಸ್ಪರ ಪ್ರೀತಿಸಿ ಮದ್ವೆ ಆಗಿದ್ದರು. ಆದ್ರೆ, ಕಳೆದ ಎಂಟು ತಿಂಗಳ ಹಿಂದೆ ಪತ್ನಿ ಹೇಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಪ್ರೀತಿಸಿ ಕೈಹಿಡಿದಾಕೆ ಶಾಶ್ವತವಾಗಿ ಬಿಟ್ಟು ಹೋಗಿದ್ದರಿಂದ ಉದಯ್ ನೋವಿನಲ್ಲಿದ್ದ. ಕೊನೆಗೆ ನೋವು ತಡೆದುಕೊಳ್ಳಲಾಗದೇ ಸಾವಿನ ತೀರ್ಮಾನ ಕೈಗೊಂಡಿದ್ದಾರೆ.…
ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ 1೦೦೮ ಶಾಂತಿನಾಥ್ ದಿಗಂಬರ್ ಜೈನ ಮಂದಿರದಲ್ಲಿ ಭಗವಾನ್ ಮಹಾವೀರ್ ಜಯಂತಿಯ ನಿಮಿತ್ಯವಾಗಿ ಬೆಳಗ್ಗೆ ಮಹಾವೀರ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು ನಂತರ ಮಹಿಳೆಯರಿಂದ ಭಗವಾನ್ ಮಹಾವೀರ್ ತೀರ್ಥಂಕರರನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು https://ainkannada.com/rcb-vs-dc-rcb-loses-home-to-kl-rahul/ ನಂತರ ಧರ್ಮ ಸಭೆಯಲ್ಲಿ ಶಾಸಕರಾದ ಎಂ ಆರ್ ಪಾಟೀಲ್ ಮಾತನಾಡಿ ಜೈನ ಧರ್ಮದ ತತ್ವ ಅದರ ಸಿದ್ದಾಂತಗಳನ್ನು ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸುಖ ಶಾಂತಿ ಸಮೃದ್ಧಿ ಸಿಗಲು ಸಾಧ್ಯವಿದೆ ಭಗವಾನ್ ಮಹಾವೀರರು ಅಹಿಂಸ ತತ್ವವನ್ನು ಜಗತ್ತಿಗೆ ಸಾರಿರುವಂತ ಮಹಾನ್ ಪುರುಷರು ಇಂತಹ ಧರ್ಮದ ಕಾರ್ಯಕ್ಕೆ ನಾನು ಬಂದಿದ್ದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ ಎಂದರು ಇದೇ ಸಂದರ್ಭದಲ್ಲಿ ಭಗವಾನ್ ಮಹಾವೀರ ತೀರ್ಥಂಕರರ ಭಾವಚಿತ್ರವನ್ನು ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ಬಂದಂತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಲತೇಶ್ ಶಾಘೋಟಿ…
ಬೆಂಗಳೂರು:- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ IPL ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. https://ainkannada.com/people-of-this-zodiac-sign-will-get-whatever-they-want-be-it-luck-or-virtue-horoscope-for-friday-april-11-2025/ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 163 ರನ್ ಗಳಿಸಿತು. ತಂಡದ ಪರ ಟಿಮ್ ಡೇವಿಡ್ ಅಜೇಯ 37 ರನ್ ಗಳಿಸಿದರೆ, ಫಿಲ್ ಸಾಲ್ಟ್ 37 ರನ್, ರಜತ್ ಪತಿದಾರ್ 25 ಮತ್ತು ಕೊಹ್ಲಿ 22 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ವಿಪ್ರಾಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಡೆಲ್ಲಿ ಪರ ಕೆಎಲ್ ರಾಹುಲ್ ಅಜೇಯ 93 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ ಅಜೇಯ 38 ರನ್…
ಸೂರ್ಯೋದಯ – 6:06 ಬೆ ಸೂರ್ಯಾಸ್ತ – 6:27 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ಚತುರ್ದಶಿ ನಕ್ಷತ್ರ – ಉತ್ತರೆ ಯೋಗ – ಧ್ರುವ ಕರಣ – ಗರಜೆ ರಾಹು ಕಾಲ -10:30 ದಿಂದ 12:00 ವರೆಗೆ ಯಮಗಂಡ – 03:00 ದಿಂದ 04:30 ವರೆಗೆ ಗುಳಿಕ ಕಾಲ – 07:30 ದಿಂದ 09:00ವರೆಗೆ ಬ್ರಹ್ಮ ಮುಹೂರ್ತ – 4:30 ಬೆ. ದಿಂದ 5:18 ಬೆ.ವರೆಗೆ ಅಮೃತ ಕಾಲ – 7:07 ಬೆ ದಿಂದ 8:54 ಬೆ ವರೆಗೆ ಅಭಿಜಿತ್ ಮುಹುರ್ತ – 11:52 ಬೆ ದಿಂದ 12:42 ಮ. ವರೆಗೆ ಮೇಷ: ವಕೀಲರಿಗೆ ಉತ್ತಮ ಸಮಯ, ವಾಣಿಜ್ಯ ಸಂಸ್ಥೆ ನಡೆಸುವವರು ಮತ್ತು ಲೆಕ್ಕ ಪರಿಶೋಧಕರು ಆದಾಯ ಹೆಚ್ಚಿಸಿಕೊಳ್ಳುತ್ತಾರೆ, ಮಕ್ಕಳಿಗೆ ಸರ್ಕಾರಿ ಉದ್ಯೋಗ ದೊರೆಯುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರಗಳಲ್ಲಿ ವಿಚಾರ ಬೇಡ,…
ಬೆಂಗಳೂರು:- ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ರಾಜ್ಯ ಬಿಜೆಪಿ ಕೈಗೊಂಡಿರುವ ಜನಾಕ್ರೋಶ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. https://ainkannada.com/dont-ignore-if-you-buy-and-drink-bottled-water-wherever-you-go-watch-this-story/ ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಜನ ಆಕ್ರೋಶ ಮಾಡ್ತಿದ್ದಾರೆ. ಬಿಜೆಪಿ ಮಾಡ್ತಾ ಇರೋದು ಕೇಂದ್ರದ ವಿರುದ್ದ ಮಾಡ್ತಾ ಇರೋ ಜನಾಕ್ರೋಶ ಯಾತ್ರೆ. ಬಿಜೆಪಿ ನಮ್ಮ ವಿರುದ್ದ ಯಾತ್ರೆ ಮಾಡುವಂಥದ್ದು ಏನೂ ಇಲ್ಲ. ಬಿಜೆಪಿ ಆಂತರಿಕ ಕಚ್ಚಾಟ, ಕೇಂದ್ರದ ನೀತಿಗಳು ಎಲ್ಲ ವರ್ಗದ ಜನರಿಗೂ ಸಮಸ್ಯೆ ಆಗ್ತಿದೆ. ಪೆಟ್ರೋಲ್ ಡಿಸೆಲ್ ಬೆಲೆ ಮಾತ್ರ ಮಾತಾಡ್ತಾ ಇಲ್ಲ. ಇದರ ಬೆಲೆ ಏರಿಕೆ ಮೂಲಕ ಕೇಂದ್ರ ಇವರ ಯಾತ್ರೆಗೆ ಉದ್ಘಾಟನೆಗೆ ಕೊಟ್ಟ ಕೊಡುಗೆ. ನಿಮ್ಮ ಬಿಜೆಪಿ ಯಾತ್ರೆಗೆ ನಮ್ಮ ಕೊಡುಗೆ ಅಂತ ಕೇಂದ್ರ ಕೊಟ್ಟಿರುವ ಕೊಡುಗೆ ಇದು ಎಂದರು. ಮೊದಲು, ಬಿಜೆಪಿ ಅವರು, ಕೇಂದ್ರದ ವಿರುದ್ದ ಯಾತ್ರೆ ಅಂತ ಬೋರ್ಡ್ ಹಾಕಿಕೊಳ್ಳಲಿ. ಬೂಸಾ ಬೆಲೆ ಯಾಕೆ ಕಡಿಮೆ ಮಾಡಿಸೋಕಾಗ್ಲಿಲ್ಲ, ಹಿಂಡಿ ಬೆಲೆ…
ಉತ್ತರಪ್ರದೇಶ: ಬಾಟಲ್ನಲ್ಲಿ ಪೆಟ್ರೋಲ್ ಹಾಕಲು ನಿರಾಕರಿಸಿದ್ದಕ್ಕೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಉತ್ತರ ಪ್ರದೇಶದ ಸಿಕಂದರಾಬಾದ್ ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಬೈಕ್ಗೆ ಪೆಟ್ರೋಲ್ ತುಂಬಿಸಿದ ನಂತರ ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಹಾಕುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಸಿಬ್ಬಂದಿ ನಿರಾಕರಿಸಿದ್ದಾರೆ. ಇದೇ ವಿಚಾರವಾಗಿ ಮ್ಯಾನೇಜರ್ ರಾಜು ಶರ್ಮಾ ಜೊತೆಗೆ ವಾಗ್ವಾದ ನಡೆದಿದ್ದು, ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. https://ainkannada.com/26-11-accused-tahawwur-rana-nia-brings-back-to-india-delhi-on-full-high-alert/ ಇನ್ನೂ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶರ್ಮಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎನ್ನಲಾಗಿದೆ.
ಮನುಷ್ಯನಿಗೆ ಅವಶ್ಯಕವಾದ ಪಂಚಭೂತಗಳಲ್ಲಿ ನೀರು ಸಹ ಒಂದು. ಜಗತ್ತು ಮುಕ್ಕಾಲು ಪಾಲು ನೀರಿನಿಂದಲೇ ನಿರ್ಮಿತವಾಗಿದೆ. ಅದೇ ರೀತಿ ಮನುಷ್ಯನ ದೇಹ ಕೂಡ. ಮನುಷ್ಯನ ದೇಹದ ಅಂಗಗಳು ಕೆಲಸ ಮಾಡಲು ನೀರಿನ ಅವಶ್ಯಕತೆ ಇದ್ದೇ ಇದೆ. ನಿರ್ಜಲೀಕರಣ ಸಮಸ್ಯೆ ಉಂಟಾಗಬಾರದು ಎಂದು ಆಗಾಗ ನೀರು ಕುಡಿಯುತ್ತಿರಬೇಕು. https://ainkannada.com/do-you-sleep-on-the-floor-do-you-know-how-good-it-is-for-your-health/ ಸಾಮಾನ್ಯವಾಗಿ ನಮ್ಮನ್ನು ಸೇರಿ ನೀವು ಎಲ್ಲಾದರೂ ಹೊರಗಡೆ ಹೋದಾಗ ಅಂಗಡಿಗಳಲ್ಲಿ ಬಾಟಲ್ ಖರೀದಿಸಿ ನೀರು ಕುಡಿಯುತ್ತೇವೆ. ಆದ್ರೆ ಇದು ನಮ್ಮ ಆರೋಗ್ಯಕ್ಕೆ ಎಷ್ಟು ಸೇಫ್.. ಇದನ್ನು ತಿಳಿದಿದ್ದೀರಾ? ಎಸ್, ಆಹಾರ ಸುರಕ್ಷತೆ ಇಲಾಖೆ ನಡೆಸಿದ ನೀರಿನ ಬಾಟಲಿಗಳ ಗುಣಮಟ್ಟ ಪರೀಕ್ಷೆಯಲ್ಲಿ 183 ಬ್ರ್ಯಾಂಡ್ಗಳು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶಾಕಿಂಗ್ ಮಾಹಿತಿ ನೀಡಿದ್ದಾರೆ. ಆದ್ದರಿಂದ ಹೊರಗಡೆ ಹೋದಲ್ಲಿ ಬಂದಲ್ಲಿ ನೀರು ಖರೀದಿಸಿ ಕುಡಿಯುವವರು ಎಚ್ಚರ ವಹಿಸುವುದು ಅಗತ್ಯ. TDS ಎಂದರೆ ಒಟ್ಟು ಕರಗಿದ ಘನವಸ್ತುಗಳು, ಮತ್ತು ನೀರಿನಲ್ಲಿ ಕರಗಿದ ವಸ್ತುಗಳ ಒಟ್ಟು…