Author: AIN Author

ಬೆಂಗಳೂರು:- ಮುಸ್ಲಿಂ ಯುವತಿ ತನ್ನ ಗೆಳೆಯನ ಜೊತೆ ಬೈಕ್‌ ಮೇಲೆ ಕುಳಿತಿದ್ದಕ್ಕೆ ಪುಂಡರ ಗ್ಯಾಂಗ್‌ವೊಂದು ಕಿರಿಕ್‌ ಮಾಡಿ, ಯುವಕನ ಮೇಲೂ ಹಲ್ಲೆ ನಡೆಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. https://ainkannada.com/pink-eye-cases-increase-in-bengaluru-what-are-the-symptoms-here-are-the-complete-details/ ಇದೇ ಘಟನೆಗೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಂದೂ ಯುವಕ ಮುಸ್ಲಿಂ ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ ಮೆರೆದ ಐವರು ಪುಂಡರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ತನ್ನ ಸ್ನೇಹಿತನ ಜೊತೆ ಬುರ್ಖಾ ಧರಿಸಿ ಬೈಕ್ ನಲ್ಲಿ ಯುವತಿ ಕೂತಿದ್ದಳು. ಈ ವೇಳೆ ಬಂದ ಐವರು ಮುಸ್ಲಿಂ ಯುವಕರ ಗುಂಪು, ಬುರ್ಖಾ ಧರಿಸಿ ಹಿಂದೂ ಯುವಕನ ಜೊತೆ ಬೈಕ್ ನಲ್ಲಿ ಯಾಕ್ ಕೂತಿದ್ಯಾ.!? ನಿನಗೆ ಮಾನ ಮರ್ಯಾದೆ ಇಲ್ವಾ..? ನಿಮ್ಮ ಮನೆಯವರ ಮೊಬೈಲ್ ನಂಬರ್ ಕೊಡು ಎಂದು ಕ್ಯಾತೆ ತೆಗೆದಿದೆ. ಈ ವೇಳೆ ನನ್ನ ಕ್ಲಾಸ್ ಮೇಟ್ ಜೊತೆ ನಾನ್ ಮಾತಾಡ್ತಿದ್ದೀನಿ. ನಮ್ಮ ಮನೆಯವರ ನಂಬರ್ ನಿಮಗ್ಯಾಕೆ ಕೊಡಬೇಕು ಎಂದು ಮುಸ್ಲಿಂ ಯುವತಿ ಹೇಳಿದ್ದಾಳೆ.…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಮಂದಿಗೆ ಪಿಂಕ್ ಐ ಸಮಸ್ಯೆ ಶುರುವಾಗಿದೆ. ಇದಕ್ಕೆ ಮಕ್ಕಳೇ ಹೆಚ್ಚು ಗುರಿಯಾಗುತ್ತಿರುವ ಕಾರಣ ಪೋಷಕರಲ್ಲಿ‌ ಆತಂಕ ಶುರುವಾಗಿದೆ. https://ainkannada.com/congress-counters-bjps-public-anger-to-protest-against-the-centres-price-hike-on-april-17/ ಕಣ್ಣಿನ ಸೋಂಕನ್ನು ಪಿಂಕ್ ಐ ಅಥವಾ ವೈದ್ಯಕೀಯ ಭಾಷೆಯಲ್ಲಿ ಕಾಂಜಂಕ್ಟಿವಿಟಿಸ್ ಎಂದು ಕರೆಯುತ್ತಾರೆ. ಇದು ಮಳೆಗಾಲದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ಪ್ರಕರಣಗಳಲ್ಲಿ ಕಣ್ಣಿನ ಬಿಳಿ ಭಾಗದಲ್ಲಿ ಸೋಂಕು ಸಂಭವಿಸುತ್ತದೆ. ಕಣ್ಣಿನ ಸೋಂಕಿನ ಹೆಚ್ಚಿನ ಪ್ರಕರಣಗಳು ಶೀತ ಕೆಮ್ಮಿನಂತಹ ವೈರಸ್ ನಿಂದ ಉಂಟಾಗುತ್ತದೆ. ಮಳೆಗಾಲದಲ್ಲಿ ಶಿಲೀಂಧ್ರಗಳ ಸೋಂಕಿನೊಂದಿಗೆ ವಾಯು ಮಾಲಿನ್ಯ, ಪರಿಸರದಲ್ಲಿನ ತೇವಾಂಶಯುಕ್ತ ವಾತಾರಣದಿಂದ ಕೂಡಾ ಈ ಸೋಂಕು ಹರಡುತ್ತದೆ. ಇದರಿಂದಾಗಿ ಹೆಚ್ಚಿನ ಜನರು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ. ಕಣ್ರೆಪ್ಪೆ ಹಾಗೂ ಕಣ್ಣುಗುಡ್ಡೆಯನ್ನು ಸುತ್ತುವರೆದಿರುವ ಪಾರದರ್ಶಕ ಪೊರೆಯಾದ ಕಾಂಜಂಕ್ಟಿವಾ ಊದಿಕೊಂಡು ಸೋಂಕಿನಿಂದ ಕಣ್ಣುಗಳು ಕೆಂಪಾಗುತ್ತಿವೆ. ಸೋಂಕಿತ ರಕ್ತನಾಳಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕಣ್ಣಿನ ಒಳಭಾಗದ ಬಿಳಿಭಾಗವು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ಕೂಡಾ ವೈರಲ್ ಸೋಂಕಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುತ್ತದೆ. ಇದೀಗ ಸೋಂಕು…

Read More

ಬೆಂಗಳೂರು: “ಬಿಜೆಪಿಯ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಇದೇ ಏ.17 ರಂದು ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. https://ainkannada.com/rain-alert-rainfall-in-these-districts-of-karnataka-today/ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿಯ ಇಬ್ಬಗೆ ನೀತಿಯ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು. “ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ. ಅವರ ಜನಾಕ್ರೋಶ ಯಾತ್ರೆಯ ವಿರುದ್ಧ ನಾವು ಏನಾದರೂ ಮಾಡಬೇಕಲ್ಲವೇ?” ಎಂದು ಹೇಳಿದರು. ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರ್ಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆಯೇ? ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಬಿಜೆಪಿ ಸರ್ಕಾರದ…

Read More

ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainkannada.com/teachers-who-wrote-the-exam-outside-the-classroom-for-touching-a-dalit-student/ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ. ಬೆಂಗಳೂರಿನ ಎಚ್​ಎಎಲ್​ನಲ್ಲಿ 33.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 34.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 34.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 33.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಹೊನ್ನಾವರದಲ್ಲಿ 34.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್…

Read More

ಚೆನ್ನೈ:- ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಿನಾಥುಕಡವು ಬಳಿಯ ಖಾಸಗಿ ಶಾಲೆಯಲ್ಲಿ ಪಿರಿಯಡ್ಸ್ ಆಗಿದ್ದಕ್ಕೆ 8ನೇ ತರಗತಿಯ ದಲಿತ ವಿದ್ಯಾರ್ಥಿನಿಯನ್ನು ಕ್ಲಾಸ್ ರೂಂ ಹೊರಗೆ ಪರೀಕ್ಷೆಗೆ ಕೂರಿಸಿರುವ ಅಮಾನವೀಯ ಘಟನೆ ಜರುಗಿದೆ. https://ainkannada.com/siddaramaiah-watched-rcb-vs-dc-match-on-thursday-at-chinnaswamy-stadium/ ಇಲ್ಲಿನ ಸೆಂಗುಟ್ಟೈಪಾಳ್ಯಂ ಗ್ರಾಮದಲ್ಲಿರುವ ಸ್ವಾಮಿ ಚಿದ್ಭವಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿ 8ನೇ ತರಗತಿ ಓದುತ್ತಿದ್ದಳು. ಏ.5 ರಂದು ವಿದ್ಯಾರ್ಥಿನಿಗೆ ಪಿರಿಯಡ್ಸ್ ಆಗಿತ್ತು. ಹೀಗಾಗಿ ಪಿರಿಯಡ್ಸ್ ನಂತರ, ಶಾಲಾ ಆಡಳಿತ ಮಂಡಳಿಯು ಏ.7 ರಂದು ವಿಜ್ಞಾನ ಪರೀಕ್ಷೆ ಮತ್ತು ಏ.9 ರಂದು ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಏ.7 ರಂದು ವಿಜ್ಞಾನ ಪರೀಕ್ಷೆಯಲ್ಲಿ ತರಗತಿಯ ಹೊರಗೆ ಕೂರಿಸಿರುವುದಾಗಿ ವಿದ್ಯಾರ್ಥಿನಿ ತನ್ನ ತಾಯಿಗೆ ತಿಳಿಸಿದ್ದಳು. ಮುಂದಿನ ಪರೀಕ್ಷೆಗೆ ವಿದ್ಯಾರ್ಥಿನಿಯ ತಾಯಿ ಶಾಲೆಗೆ ತೆರಳಿದ್ದು, ತರಗತಿಯ ಹೊರಗೆ ಕೂರಿಸಿರುವುದನ್ನು ಗಮನಿಸಿದರು. ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Read More

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ IPL ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಿದ್ದವು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಬಿಡುವಿನ ಸಮಯದಲ್ಲಿ ಮ್ಯಾಚ್ ವೀಕ್ಷಣೆ ಮಾಡಿದ್ದಾರೆ. https://ainkannada.com/depression-from-wifes-death-i-love-you-wrote-hema-and-killed-two-children-and-suicide/ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಬೈರತಿ ಸುರೇಶ್ ಜೊತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯವನ್ನು ಸಿಎಂ ವೀಕ್ಷಸಿ ಎಂಜಾಯ್‌ ಮಾಡಿದರು. ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 163 ರನ್ ಗಳಿಸಿತು. ತಂಡದ ಪರ ಟಿಮ್ ಡೇವಿಡ್ ಅಜೇಯ 37 ರನ್ ಗಳಿಸಿದರೆ, ಫಿಲ್ ಸಾಲ್ಟ್ 37 ರನ್, ರಜತ್ ಪತಿದಾರ್ 25 ಮತ್ತು ಕೊಹ್ಲಿ 22 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ವಿಪ್ರಾಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5…

Read More

ದಾವಣಗೆರೆ:- ಪತ್ನಿ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಪತಿ ಓರ್ವ ತನ್ನಿಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಎಸ್‌ಪಿಎಸ್‌ ನಗರದಲ್ಲಿ ಜರುಗಿದೆ. https://ainkannada.com/kundaghola-bhagavan-mahaveer-jayanti-celebration/ 35 ವರ್ಷದ ಉದಯ್‌ ಎಂಬಾತ, ಮಕ್ಕಳಾದ ಸಿಂಧುಶ್ರೀ, ಶ್ರೀಜಯ್‌ ನನ್ನು ಕೊಲೆಗೈದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಉದಯ್‌ ಪತ್ನಿ ಮೃತಪಟ್ಟಿದ್ದರು. ಪತ್ನಿ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ದ ಪತಿ ಉದಯ್‌ , ಇಂದು ಮಕ್ಕಳನ್ನು ಸಾಯಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ನೇಣಿಗೆ ಶರಣಾಗುವ ಮೊದಲು ರಕ್ತದಲ್ಲಿ ಐಲವ್​ ಯು ಹೇಮಾ ಎಂದು ಪತ್ನಿಯ ಹೆಸರು ಗೋಡೆ ಮೇಲೆ ಬರೆದಿದ್ದಾರೆ. ಹೇಮಾ ಹಾಗೂ ಉದಯ್ ಪರಸ್ಪರ ಪ್ರೀತಿಸಿ ಮದ್ವೆ ಆಗಿದ್ದರು. ಆದ್ರೆ, ಕಳೆದ ಎಂಟು ತಿಂಗಳ ಹಿಂದೆ ಪತ್ನಿ ಹೇಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಪ್ರೀತಿಸಿ ಕೈಹಿಡಿದಾಕೆ ಶಾಶ್ವತವಾಗಿ ಬಿಟ್ಟು ಹೋಗಿದ್ದರಿಂದ ಉದಯ್​ ನೋವಿನಲ್ಲಿದ್ದ. ಕೊನೆಗೆ ನೋವು ತಡೆದುಕೊಳ್ಳಲಾಗದೇ ಸಾವಿನ ತೀರ್ಮಾನ ಕೈಗೊಂಡಿದ್ದಾರೆ.…

Read More

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ 1೦೦೮ ಶಾಂತಿನಾಥ್ ದಿಗಂಬರ್ ಜೈನ ಮಂದಿರದಲ್ಲಿ ಭಗವಾನ್ ಮಹಾವೀರ್ ಜಯಂತಿಯ ನಿಮಿತ್ಯವಾಗಿ ಬೆಳಗ್ಗೆ ಮಹಾವೀರ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು ನಂತರ ಮಹಿಳೆಯರಿಂದ ಭಗವಾನ್ ಮಹಾವೀರ್ ತೀರ್ಥಂಕರರನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು https://ainkannada.com/rcb-vs-dc-rcb-loses-home-to-kl-rahul/ ನಂತರ ಧರ್ಮ ಸಭೆಯಲ್ಲಿ ಶಾಸಕರಾದ ಎಂ ಆರ್ ಪಾಟೀಲ್ ಮಾತನಾಡಿ ಜೈನ ಧರ್ಮದ ತತ್ವ ಅದರ ಸಿದ್ದಾಂತಗಳನ್ನು ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸುಖ ಶಾಂತಿ ಸಮೃದ್ಧಿ ಸಿಗಲು ಸಾಧ್ಯವಿದೆ ಭಗವಾನ್ ಮಹಾವೀರರು ಅಹಿಂಸ ತತ್ವವನ್ನು ಜಗತ್ತಿಗೆ ಸಾರಿರುವಂತ ಮಹಾನ್ ಪುರುಷರು ಇಂತಹ ಧರ್ಮದ ಕಾರ್ಯಕ್ಕೆ ನಾನು ಬಂದಿದ್ದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ ಎಂದರು ಇದೇ ಸಂದರ್ಭದಲ್ಲಿ ಭಗವಾನ್ ಮಹಾವೀರ ತೀರ್ಥಂಕರರ ಭಾವಚಿತ್ರವನ್ನು ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ಬಂದಂತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಲತೇಶ್ ಶಾಘೋಟಿ…

Read More

ಬೆಂಗಳೂರು:- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ IPL ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. https://ainkannada.com/people-of-this-zodiac-sign-will-get-whatever-they-want-be-it-luck-or-virtue-horoscope-for-friday-april-11-2025/ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 163 ರನ್ ಗಳಿಸಿತು. ತಂಡದ ಪರ ಟಿಮ್ ಡೇವಿಡ್ ಅಜೇಯ 37 ರನ್ ಗಳಿಸಿದರೆ, ಫಿಲ್ ಸಾಲ್ಟ್ 37 ರನ್, ರಜತ್ ಪತಿದಾರ್ 25 ಮತ್ತು ಕೊಹ್ಲಿ 22 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ವಿಪ್ರಾಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಡೆಲ್ಲಿ ಪರ ಕೆಎಲ್ ರಾಹುಲ್ ಅಜೇಯ 93 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ ಅಜೇಯ 38 ರನ್…

Read More

ಸೂರ್ಯೋದಯ – 6:06 ಬೆ ಸೂರ್ಯಾಸ್ತ – 6:27 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ಚತುರ್ದಶಿ ನಕ್ಷತ್ರ – ಉತ್ತರೆ ಯೋಗ – ಧ್ರುವ ಕರಣ – ಗರಜೆ ರಾಹು ಕಾಲ -10:30 ದಿಂದ 12:00 ವರೆಗೆ ಯಮಗಂಡ – 03:00 ದಿಂದ 04:30 ವರೆಗೆ ಗುಳಿಕ ಕಾಲ – 07:30 ದಿಂದ 09:00ವರೆಗೆ ಬ್ರಹ್ಮ ಮುಹೂರ್ತ – 4:30 ಬೆ. ದಿಂದ 5:18 ಬೆ.ವರೆಗೆ ಅಮೃತ ಕಾಲ – 7:07 ಬೆ ದಿಂದ 8:54 ಬೆ ವರೆಗೆ ಅಭಿಜಿತ್ ಮುಹುರ್ತ – 11:52 ಬೆ ದಿಂದ 12:42 ಮ. ವರೆಗೆ ಮೇಷ: ವಕೀಲರಿಗೆ ಉತ್ತಮ ಸಮಯ, ವಾಣಿಜ್ಯ ಸಂಸ್ಥೆ ನಡೆಸುವವರು ಮತ್ತು ಲೆಕ್ಕ ಪರಿಶೋಧಕರು ಆದಾಯ ಹೆಚ್ಚಿಸಿಕೊಳ್ಳುತ್ತಾರೆ, ಮಕ್ಕಳಿಗೆ ಸರ್ಕಾರಿ ಉದ್ಯೋಗ ದೊರೆಯುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರಗಳಲ್ಲಿ ವಿಚಾರ ಬೇಡ,…

Read More