Author: AIN Author

ಬೆಂಗಳೂರು:-ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣವನ್ನು ಪರಿಷತ್ ಶಾಸಕ ಟಿಎ ಶರವಣ ಖಂಡಿಸಿದ್ದಾರೆ. https://ainkannada.com/terrorist-attack-in-kashmir-another-kannadigas-feared-dead-what-did-tejaswi-surya-say/ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ X ಮಾಡಿರುವ ಟಿಎ ಶರವಣ, ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನ ಪ್ರಾಯೋಜಿತ ಮುಸ್ಲಿಂ ಉಗ್ರರಿಂದ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಪ್ರವಾಸಿಗರ ಹೆಸರು ಕೇಳಿ ಐಡಿ ಕಾರ್ಡ್ ನೋಡಿ ಹಿಂದೂಗಳು ಎಂದು ಖಾತ್ರಿಪಡಿಸಿಕೊಂಡು ಗುಂಡು ಹಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ನಮ್ಮ ಕೇಂದ್ರ ಸರ್ಕಾರ ಉಗ್ರರ ಈ ಹೇಯಕೃತ್ಯಕ್ಕೆ ತಕ್ಕ ಉತ್ತರ ನೀಡಲಿದೆ. ಈ ದಾಳಿಯಲ್ಲಿ ಶಿವಮೊಗ್ಗದ ಪ್ರವಾಸಿಗರೊಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಇನ್ನೂ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ, ಕಳೆದ ಕೆಲವು ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

Read More

ಬೆಂಗಳೂರು/ಶ್ರೀನಗರ:- ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಪ್ರಕರಣದಲ್ಲಿ ಮತ್ತೋರ್ವ ಕನ್ನಡಿಗನ ಸಾವಿನ ಶಂಕೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. https://ainkannada.com/alas-such-a-tragedy-a-naval-officer-who-was-killed-in-a-terrorist-attack-just-a-week-ago-has-died/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮತ್ತೋರ್ವ ಕನ್ನಡಿಗನ ಸಾವಿನ ಶಂಕೆ ಇದೆ. ನಾಲ್ವರು ಕನ್ನಡಿಗರು ಗಾಯಗೊಂಡ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಖಚಿತವಾಗಬೇಕಿದೆ ಎಂದರು. ಇನ್ನೂ ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲಬಿಚ್ಚಿದ್ದು, ಹಿಂದೂಗಳ ನರಮೇಧವಾಗಿದೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ಕಣಿವೆಯಲ್ಲಿ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ 30ಕ್ಕೂ ಪ್ರವಾಸಿಗರನ್ನು ಕೊಂದು ರಕ್ತದ ಕೋಡಿ ಹರಿಸಿದ್ದಾರೆ. ಇಬ್ಬರು ವಿದೇಶಿಗರು ಸೇರಿದಂತೆ ರಾಶಿ ರಾಶಿ ಹೆಣಗಳನ್ನು ಟಾರ್ಪಲ್‍ನಲ್ಲಿ ಮುಚ್ಚಲಾಗಿದೆ.

Read More

ನವದೆಹಲಿ:- ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವಾರದ ಹಿಂದೆಯಷ್ಟೇ ಬಲಿಯಾಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. https://ainkannada.com/8-wicket-win-for-delhi-capitals-against-lucknow/ ಲೆಫ್ಟಿನೆಂಟ್ ವಿನಯ್ ನರ್ವಾಲ್ (26) ದಾಳಿಯಲ್ಲಿ ಮೃತಪಟ್ಟ ಅಧಿಕಾರಿ. ಹರಿಯಾಣ ಮೂಲದ ನರ್ವಾಲ್‌ ಇದೇ ಏಪ್ರಿಲ್‌ 16ರಂದು ಮದುವೆಯಾಗಿದ್ದರು. ಕೊಚ್ಚಿಯಲ್ಲಿ ಹೊಸದಾಗಿ ನೇಮಕಗೊಂಡಿದ್ದ ನೌಕಾಪಡೆಯ ನರ್ವಾಲ್‌ ರಜೆಯ ಮೇಲೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಲ್ಲಿರುವಾಗಲೇ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲಬಿಚ್ಚಿದ್ದು, ಹಿಂದೂಗಳ ನರಮೇಧವಾಗಿದೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ಕಣಿವೆಯಲ್ಲಿ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ 30ಕ್ಕೂ ಪ್ರವಾಸಿಗರನ್ನು ಕೊಂದು ರಕ್ತದ ಕೋಡಿ ಹರಿಸಿದ್ದಾರೆ. ಇನ್ನು ಉಗ್ರರ ಗುಂಡಿನ ದಾಳಿಗೆ ವಾರದ ಹಿಂದೆಯಷ್ಟೇ ಬಲಿಯಾಗಿದ್ದ ಭಾರತೀಯರ ನೌಕಾಪಡೆಯ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಅಲ್ಲದೇ ಉಗ್ರರ ದಾಳಿಗೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಬಿಹಾರ ಮೂಲದ ರಂಜನ್ ಅವರು ತಮ್ಮ ಪತ್ನಿ, ಮಗು ಕಣ್ಣಮುಂದೆಯೇ ಗುಂಡಿಗೆ ಬಲಿಯಾಘಿದ್ದಾರೆ. ಬಿಹಾರ ಮೂಲದ ಮನೀಶ್‌ ರಂಜನ್‌ ತೆಲಂಗಾಣ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.…

Read More

ಲಕ್ನೋ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು ಸಿಕ್ಕಿದೆ. https://ainkannada.com/militant-attack-in-jammu-and-kashmir-what-did-santosh-lad-say/ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‌ ಜೆಂಟ್ಸ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಲಕ್ನೋ ನೀಡಿದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ 17.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 161 ರನ್‌ ಗಳಿಸಿ ಗೆಲುವು ಸಾಧಿಸಿದೆ ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಪರ ಕರುಣ್‌ ನಾಯರ್‌ 9 ಎಸೆತಗಳಲ್ಲಿ 15, ಅಭಿಷೇಕ್‌ ಪೊರೆಲ್‌ 36 ಎಸೆತಗಳಲ್ಲಿ 51, ಕೆಎಲ್‌ ರಾಹುಲ್‌ ಔಟಾಗದೇ 42 ಎಸೆತಗಳಲ್ಲಿ 57 ರನ್‌, ಅಕ್ಷರ್‌ ಪಟೇಲ್‌ ಔಟಾಗದೇ 20 ಎಸೆತಗಳಲ್ಲಿ 34 ರನ್‌ಗಳಿಸಿತು. ಲಕ್ನೋ ಪರ ಏಡನ್‌ ಮಾರ್ಕ್ರಮ್‌ 2 ವಿಕೆಟ್‌ ಕಬಳಿಸಿದರು. ಲಕ್ನೋ ಸೂಪರ್‌ ಜೆಂಟ್ಸ್‌ ಪರ ಏಡನ್‌ ಮಾರ್ಕ್ರಮ್‌ 33 ಎಸೆತಗಳಲ್ಲಿ 52, ಮಿಚೆಲ್‌ ಮಾರ್ಷ್‌ 36 ಎಸೆತಗಳಲ್ಲಿ 45, ಆಯುಷ್‌ ಬಡೋನಿ 21 ಎಸೆತಗಳಲ್ಲಿ 36 ಹಾಗೂ…

Read More

ಧಾರವಾಡ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainkannada.com/many-people-killed-in-militant-attacks-in-kashmir/ ಈ ಸಂಬಂಧ ಮಾತನಾಡಿದ ಅವರು, ಜಮ್ಮು-ಕಾಶ್ಮೀರದಲ್ಲಿ 2000ಕ್ಕಿಂತ ಹೆಚ್ಚು ಇಂತಹ ಘಟನೆಗಳು ಆಗಿವೆ ಕಳೆದ ಹತ್ತು ವರ್ಷಗಳಲ್ಲಿ 800ಕ್ಕೂ ಹೆಚ್ಚು ಸಣ್ಣ ಸಣ್ಣ ಬಾಂಬ್ ಸ್ಪೋಟ್ ಆಗಿವೆ ಎಂದರು. ಕಾಶ್ಮೀರದಲ್ಲಿ‌ ಉಗ್ರರ ದಾಳಿ ವಿಚಾರವಾಗಿ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದು, ಇದರ ಬಗ್ಗೆ ವ್ಯಾಪಕವಾಗಿ ಚರ್ಚೆ ಆಗಿಲ್ಲ ಇವತ್ತು ಈ ವಿಷಯದಲ್ಲಿ ರಾಜಕೀಯ ಟೀಕೆ ಸರಿಯಲ್ಲ.ಈ ವಿಷಯದಲ್ಲಿ ನಾವು ರಾಜಕೀಯ ಮಾತನಾಡುವುದಿಲ್ಲ ಈಗ ರಾಜಕೀಯ. ಮಾತನಾಡುವುದು ಸರಿಯಲ್ಲ. ಇನ್ನೂ ಕೂಡ ಏನು ಆಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲ ಶಿವಮೊಗ್ಗದವರ ಮಾಹಿತಿ ಬಿಟ್ರೇ ಬೇರೆ ಮಾಹಿತಿ ಬಂದಿಲ್ಲಪುಲ್ವಾಮ್ ಬಳಿಕ ಜನ ಎಲ್ಲ ಮರೆತು ಬಿಟ್ಟಿದ್ರುು. ಈಗ ಅದನ್ನು ಮಾತನಾಡಿದರೆ ರಾಜಕೀಯ ಆಗುತ್ತದೆ ಆದರೆ ಸಂದರ್ಭ ಬಂದಾಗ ಮಾತನಾಡುತ್ತೇವೆ ಪುಲ್ವಾಮ್ ದಾಳಿ ಆಗಿತ್ತು. ಅದರಲ್ಲಿ ಎಷ್ಟು ಜನರನ್ನು ಹಿಡಿದಿದ್ದಾರೆ?300ಕೆಜಿ RDX ಬಂದಿತ್ತು.…

Read More

ಬೆಂಗಳೂರು/ ಜಮ್ಮು ಕಾಶ್ಮೀರ:- ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹಲವರು ಬಲಿ ಆಗಿದ್ದು, ಮಡಿದವರ ಆತ್ಮಕ್ಕೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಶಾಂತಿ ಕೋರಿದ್ದಾರೆ https://ainkannada.com/santosh-lad-went-to-kashmir-this-morning/ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ. ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ. ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ. ಉಗ್ರಕೃತ್ಯದಿಂದಾಗಿ ದೂರದ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡವನ್ನು ಸಂಜೆಯೇ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಕಾಶ್ಮೀರಕ್ಕೆ ತೆರಳಿ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು…

Read More

ಹುಬ್ಬಳ್ಳಿ:- ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಕನ್ನಡಿಗರು ಬಲಿಯಾದ ಹಿನ್ನಲೆ ಬೆಳಗಿನ ಜಾವವಿಶೇಷ ವಿಮಾನ ಮೂಲಕ ಸಚಿವ ಸಂತೋಷ ಲಾಡ್ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ https://ainkannada.com/it-is-not-easy-for-these-piles-to-change-the-stance-on-behalf-of-the-spouse-wednesdays-future-23-april-2025/ ಸಿಎಂ ಸೂಚನೆ ಹಿನ್ನಲೆ ಸಚಿವ ಸಂತೋಷ ಲಾಡ್ ಅವರು ಹುಬ್ಬಳ್ಳಿ ಯಿಂದ ವಿಶೇಷ ವಿಮಾನ ಮೂಲಕ ಕಾಶ್ಮೀರಕ್ಕೆ ಪಯಣ ಬೆಳೆಸಿದ್ದಾರೆ. ಕಾಂಗ್ರೆಸ್ ಯುವ ಮುಖಂಡ ಮಯೂರ ಮೋರೆ, ಸಚಿವ ಲಾಡ್ ಆಪ್ತ ಸಹಾಯಕಾದ ಅಲಿ ಗೊರವನಕೊಳ್ಳ, ಸಂದೀಪ ಸೇರಿ 4 ಜನರು ಪ್ರಯಾಣ ಬೆಳೆಸಿದ್ದಾರೆ. ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಿಲುಕಿದ ಕನ್ನಡಿಗರ ರಕ್ಷಣೆಗೆ ಲಾಡ್ ತೆರಳಿದರು. ಕಾಶ್ಮೀರದ ದಾಳಿಗೆ ಸಿಲುಕಿದ ಕನ್ನಡಿಗರು: ದಕ್ಷಿಣ ಕಾಶ್ಮೀರದ ಪ್ರಮುಖ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಏಕಾಏಕಿ ನಡೆಸಿರುವ ದಾಳಿಯಲ್ಲಿ ಇಬ್ಬರು ವಿದೇಶಿಗರು ಸೇರಿದಂತೆ ಸುಮಾರು 26 ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಶಿವಮೊಗ್ಗ ಹಾವೇರಿ ಮೂಲದ ಇಬ್ಬರು ಪ್ರವಾಸಿಗರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ ಕೆಲವು ಕನ್ನಡಿಗರು ಸಿಕ್ಕಿರುವ…

Read More

ಸೂರ್ಯೋದಯ – 5:58 ಬೆ ಸೂರ್ಯಾಸ್ತ – 6:30 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ದಶಮಿ ನಕ್ಷತ್ರ – ಧನಿಷ್ಥೆ ಯೋಗ – ಶುಕ್ಲ ಕರಣ – ವಿಷ್ಟಿ **ಮಳೆ ನಕ್ಷತ್ರ- ಅಶ್ವಿನಿ* * ರಾಹು ಕಾಲ – 12:00 ದಿಂದ 01:30 ವರೆಗೆ ಯಮಗಂಡ – 07:30 ದಿಂದ 09:00 ವರೆಗೆ ಗುಳಿಕ ಕಾಲ – 10:30 ದಿಂದ 12:00 ವರೆಗೆ ಬ್ರಹ್ಮ ಮುಹೂರ್ತ – 4:22 ಬೆ. ದಿಂದ 5:10 ಬೆ.ವರೆಗೆ ಅಮೃತ ಕಾಲ – 3:59 ಬೆ. ದಿಂದ 5:30 ಬೆ. ವರೆಗೆ ಅಭಿಜಿತ್ ಮುಹುರ್ತ – ಇಲ್ಲ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ…

Read More

ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಮೂಲದ ಭಯೋತ್ಪಾದಕರು ದುಷ್ಕೃತ್ಯ ಎಸಗಿದ್ದು, ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ 27ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಕಾಶ್ಮೀರದ ಸೊಬಗನ್ನು ಸವಿಯುತ್ತಿದ್ದ . ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ . ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯಅವರು ಅಧಿಕಾರಿಗಳ ಸಭೆ ನಡೆಸಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ತಕ್ಷಣ ಕಾರ್ಯಪ್ರವತ್ತರಾಗುವಂತೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅಧಿಕಾರಿಗಳ ಒಂದು ತಂಡ ಕನ್ನಡಿಗರ ನೆರವಿಗೆ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. https://ainkannada.com/terrorist-attack-in-pahalgam-is-a-heinous-act-mp-basavaraj-bommai/ ಉಗ್ರರ ಹೇಯಕೃತ್ಯಕ್ಕೆ ತೀವ್ರ ಖಂಡನೆ ಇನ್ನೂ ಉಗ್ರರ ದಾಳಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡಿಸಿದ್ದು, ಪ್ರವಾಸಿಗರ ಮೇಲಿನ ಉಗ್ರರ ಗುಂಡಿನ ದಾಳಿ ಆಘಾತ, ನೋವು ತಂದಿದೆ. ಇದು ಒಂದು ಹೇಯ ಮತ್ತು ಅಮಾನವೀಯ ಕೃತ್ಯವಾಗಿದ್ದು, ಇದನ್ನು…

Read More

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಈವರೆಗೂ ಸುಮಾರು 27ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದರಲ್ಲಿ ಕರ್ನಾಟಕ ಮೂಲದ ಇಬ್ಬರೂ ಸೇರಿದ್ದಾರೆ. ಇನ್ನೂ ಉಗ್ರ ದಾಳಿಯ ಬಳಿಕ ಪ್ರವಾಸಿಗರಿಗೆ ಸಹಾಯ ಮಾಡಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ 24/7 ತುರ್ತು ಸಹಾಯವಾಣಿ ಆರಂಭಿಸಿದೆ. “ಸಹಾಯ ಅಥವಾ ಮಾಹಿತಿ ಅಗತ್ಯವಿರುವ ಪ್ರವಾಸಿಗರಿಗಾಗಿ ಅನಂತನಾಗ್ ಜಿಲ್ಲಾಡಳಿತವು 24×7 ತುರ್ತು ಸಹಾಯ ಕೇಂದ್ರವನ್ನು ಸ್ಥಾಪಿಸಿದೆ. ಪ್ರವಾಸಿಗರು ಮಾಹಿತಿ ಅಥವಾ ಸಹಾಯಕ್ಕಾಗಿ 01932222337, 7780885759, 9697982527 ಅಥವಾ 6006365245 ಅನ್ನು ಸಂಪರ್ಕಿಸಬಹುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರದಲ್ಲಿಯೂ ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.  ಪಹಲ್ಗಾಮ್ ಭಯೋತ್ಪಾದಕ ಘಟನೆಯ ಕುರಿತು ಸಹಾಯಕ್ಕಾಗಿ ಪ್ರವಾಸಿಗರು 01942457543, 01942483651 ಅಥವಾ 7006058623 ಅನ್ನು ಸಂಪರ್ಕಿಸಬಹುದು ಎಂದು ವಕ್ತಾರರು ತಿಳಿಸಿದ್ದಾರೆ. https://ainkannada.com/two-people-from-karnataka-killed-in-terrorist-attack-in-pahalgam/ ಬೈಸರನ್ ಕಣಿವೆಯಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 27ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.

Read More