Author: AIN Author

  ಜನ್ಮ ಜಾತಕ ಅಥವಾ ಕುಂಡಲಿ ಲಗ್ನದಿಂದ ಅಂದರೆ ಕೇಂದ್ರದಿಂದ ಸಪ್ತಮ ಸ್ಥಾನ  ಶನಿ ಸ್ವಾಮಿ ಇದ್ದರೆ ಮದುವೆ ವಿಳಂಬಕ್ಕೆ ಶನಿಸ್ವಾಮಿಯೇ ಕಾರಣವಾಗುತ್ತಾನೆ. ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ತಮ್ಮ ಮದುವೆ ತಡವಾಗಿ ಅಂದರೆ ಮೂವತ್ತರ ಪ್ರಾಯದ ಮೇಲೆ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ. ಶನಿ ಸ್ವಾಮಿಯು ನಿಮಗೇನಾದರೂ ಒಲಿದರೆ ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುತ್ತಾನೆ, ಆದರೆ ಒಲಿಯದೆ ಹೋದರೆ ತಮಗೆ ದುಃಖ ನೀಡುತ್ತಾನೆ, ಕರ್ಮ ಕಾರನೂ ಆಗಿರುತ್ತಾನೆ , ಅಲ್ಪ ಆಯಸ್ಸು ಮತ್ತು ಕಂಟಕನಾಗಿರುತ್ತಾನೆ. ಶನಿ ಸ್ವಾಮಿಗೆ ತುಲಾ ರಾಶಿಯ ಉಚ್ಚ ಸ್ಥಾನವಾಗಿದ್ದು. ಮೇಷರಾಶಿ ನೀಚಸ್ಥಾನ ವಾಗಿರುತ್ತದೆ . ಇಲ್ಲಿ ಮೇಷ ರಾಶಿಗೆ ಅಧಿಪತಿ ಕುಜ. ಕುಜ ಮತ್ತು ಶನಿ ಶತ್ರು ಗ್ರಹಗಳು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಗ್ನದಿಂದ ಸಪ್ತಮ ಸ್ಥಾನ ಕಂಕಣಬಲ ಸೂಚಿಸುತ್ತದೆ. ಒಂದು ವೇಳೆ ಶನಿ ಸ್ವಾಮಿ ಸಪ್ತಮ ಸ್ಥಾನದಲ್ಲಿದ್ದರೆ ಮದುವೆ ವಿಳಂಬವಾಗುತ್ತದೆ. ಅಷ್ಟೇ ಅಲ್ಲ ಉದ್ಯೋಗದಲ್ಲಿ ಏರಿಳಿತ ಅನುಭವಿಸುವಿರಿ. ಶನಿ ಸ್ವಾಮಿಯು ನಮ್ಮ…

Read More

ಯಾದಗಿರಿ : ಐಪಿಎಲ್ ಬೆಟ್ಟಿಂಗ್ ಕುಳಗಳಿಗೆ ಯಾದಗಿರಿಯ ಶಹಾಪೂರ ಪೊಲೀಸರ ಬಿಗ್ ಶಾಕ್ ಕೊಟ್ಟಿದ್ದಾರೆ. ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 6.99 ಲಕ್ಷ ನಗದು ಹಾಗೂ ಮೂರು ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.‌ ಆರ್‌ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್ ಪಂದ್ಯದ ಬೆಟ್ಟಿಂಗ್ ನಡೆಸ್ತಿದ್ದ ಖಚಿತ ಮಾಹಿತಿ‌ ಮೆರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. https://ainkannada.com/the-district-recorded-a-pass-percentage-of-73-97-in-the-second-puc-examination/ ಸಿಪಿಐ ಎಸ್. ಎಮ್ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿ, ಮೂರು ಮೊಬೈಲ್ ಜಪ್ತಿ ಮಾಡಿದ್ದಾರೆ. ಕಕ್ಕಸಗೇರಾ ತಾಂಡಾದ ಪುಂಡಲೀಕ ಹಾಗೂ ಏವೂರು ತಾಂಡಾದ ಹರಿಪ್ರಸಾದ್ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. Cric365DAY ಆ್ಯಪ್ ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ದಂಧೆಕೋರರಿಗೆ ಪೊಲೀಸರು ಕೊಳ ತೋಡಿಸಿದ್ದಾರೆ. ಈ ಬಗ್ಗೆ ಶಹಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದಿನಿಂದ ಎರಡು ದಿನ ಸಂಚಾರ ಬಂದ್ ಮಾಡಿ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. https://ainkannada.com/parents-oppose-marriage-for-these-zodiac-signs-horoscope-for-wednesday-09-april-2025/ ಈ ಬಗ್ಗೆ ಬೆಂಗಳೂರು ಸಂಚಾರ ಪೂರ್ವ, ಉಪ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದು, ಪುಲಕೇಶಿನಗರದಲ್ಲಿ ಮುತ್ಯಾಲಮ್ಮ ದೇವಿಯವರ ರಥೋತ್ಸವ ಮತ್ತು ದೇವರ ಪಲ್ಲಕ್ಕಿಗಳ ಉತ್ಸವದ ಕಾರ್ಯಕ್ರಮ ಏರ್ಪಡಿಸಿರುವುದರಿಂದ ಸಂಚಾರದಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯಿಂದ ಗುರುವಾರ ಮಧ್ಯಾಹ್ನ 2 ಗಂಟೆಯ ವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ. ಸಂಚಾರ ನಿರ್ಬಂಧ ಇರುವ ಏರಿಯಾಗಳಿವು:- ಕೋಲ್ಡ್ ಪಾರ್ಕ್ ಜಂಕ್ಷನ್‌ನಿಂದ ಸೆಪ್ಪಿಂಗ್ ರಸ್ತೆ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. (ಎರಡೂ ದಿಕ್ಕಿನಲ್ಲೂ) ಸೆಂಟ್ ಜಾನ್ಸ್ ಚರ್ಚ್ ರಸ್ತೆ ಕಡೆಯಿಂದ ನಾರಾಯಣ ಪಿಳ್ಳೆ ಸ್ಟ್ರೀಟ್ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. (ಎರಡೂ ದಿಕ್ಕಿನಲ್ಲೂ) ವಾರ್ ಮೆಮೋರಿಯಲ್ ಜಂಕ್ಷನ್ ಕಡೆಯಿಂದ ಸೆಂಟ್ ಜಾನ್ಸ್ ಚರ್ಚ್ ರಸ್ತೆ (ಹೇನ್…

Read More

ಬೆಂಗಳೂರು:- ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ ಮಧ್ಯಮ, ಹಾಗೂ ಬಡಜನರಿಗೆ ಕೊಡಲಿ ಪೆಟ್ಟು ಕೊಟ್ಟಿದೆ. ಇನ್ನೂ ಇದನ್ನೇ ಅಸ್ತ್ರವಾಗಿಟ್ಟುಕೊಂಡಿರುವ ವಿಪಕ್ಷ ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿದೆ. https://ainkannada.com/violation-of-rules-in-bandipur-tiger-reserve-did-the-forest-minister-give-permission/ ಅದರಂತೆ ಬೆಲೆ ಏರಿಕೆಯ ವಿರುದ್ಧ ಜೆಡಿಎಸ್ ಪೋಸ್ಟರ್ ಅಭಿಯಾನ ಕೈಗೊಂಡಿದೆ. “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಎಂಬ ಬರವಣಿಗೆಯ ಪೋಸ್ಟರ್ ಅನ್ನು ಜೆಡಿಎಸ್ ಬಿಡುಗಡೆ ಮಾಡಿದೆ. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ.. ಪೋಸ್ಟರ್ ಮೂಲಕ ಹೋರಾಟ ಧುಮುಕಿದೆ. ಬೆಲೆ ಏರಿಕೆ ಖಂಡಿಸಿ ಬೆಂಗಳೂರು ನಗರದಲ್ಲಿ ಜೆಡಿಎಸ್ ಪೋಸ್ಟರ್ ಅಭಿಯಾನ ಕೈಗೊಂಡಿದ್ದು, ಸರ್ಕಾರದ ವಿರುದ್ದ ಮುಗಿಬೀಳಲು ಜೆಡಿಎಸ್ ಸಜ್ಜಾಗಿದೆ

Read More

ಚಾಮರಾಜನಗ:  2024-25ನೇ ಸಾಲಿನ ಮಾರ್ಚ್ 2025ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಚಾಮರಾಜನಗರ ಜಿಲ್ಲೆಯು ಶೇ. 73.97ರಷ್ಟು ಫಲಿತಾಂಶ ಪಡೆದಿದ್ದು ರಾಜ್ಯದಲ್ಲಿ 13ನೇ ಸ್ಥಾನ ಪಡೆದಿದೆ. ಹಿಂದಿನ ವರ್ಷದಲ್ಲಿ ಜಿಲ್ಲೆಯು ಶೇ.84.99 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 14ನೇ ಸ್ಥಾನದಲ್ಲಿತ್ತು. ಈ ಬಾರಿ  13ನೇ ಸ್ಥಾನಕ್ಕೆ ಬಂದಿದೆ.   ಒಟ್ಟು 6488 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 4799 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದವರಲ್ಲಿ ಬಾಲಕರ ಸಂಖ್ಯೆ 3064 ಇದ್ದು ಇವರಲ್ಲಿ 1876 ಬಾಲಕರು ತೇರ್ಗೆಡೆಯಾಗಿದ್ದಾರೆ. ಶೇಕಡವಾರು ಫಲಿತಾಂಶ ಶೇ. 61.23ರಷ್ಟಿದೆ. ಪರೀಕ್ಷೆಗೆ ಹಾಜರಾದವರಲ್ಲಿ ಬಾಲಕಿಯರ ಸಂಖ್ಯೆ 4028 ಇದ್ದು ಇವರಲ್ಲಿ 3059 ಬಾಲಕಿಯರು ತೇರ್ಗೆಡೆಯಾಗಿದ್ದಾರೆ. ಶೇಕಡವಾರು ಫಲಿತಾಂಶ ಶೇ.75.94 ರಷ್ಟಿದೆ.    ಕಲಾ ವಿಭಾಗದಲ್ಲಿ ಒಟ್ಟು 2122 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1122 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 62.3ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 2343 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ…

Read More

ಚಾಮರಾಜನಗರ : ದೇಶದ ಪ್ರಸಿದ್ದ ಅರಣ್ಯವಾದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಚಿತ ಅರಣ್ಗ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಿ ಸಿನಿಮಾ ಚಿತ್ರೀಕರಣ ನಡದಿತ್ತು, ಅರಣ್ಯ ನಿಯಮವನ್ನು ಉಲ್ಲಂಘಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದ್ದು, ಪರಿಸರ ಪ್ರಿಯರಿಂದ  ಭಾರೀ ಟೀಕೆಗೆ ಗ್ರಾಸವಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದ ಕಾನೂನು ಹಾಗೂ ನಿಯಮವನ್ನು ಸ್ಪಷ್ವವಾಗಿ ಅರಣ್ಯ ಇಲಾಖೆಯೇ ಉಲ್ಲಂಘನೆ ಮಾಡಿದೆ ಎಂದು ಪರಿಸರ ಪ್ರಿಯರು ಆರೋಪಿಸಿದ್ದಾರೆ.   ಕರ್ನಾಟಕದ ಊಟಿ ಎಂದೇ ಪ್ರಸಿದ್ದ ಪಡೆದಿರುವ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದ ಒಳಗೆ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ ಮಲೆಯಾಳಿ ಸಿನಿಮಾದ ಶೂಟಿಂಗ್ ನಡೆಯುವ ಮೂಲಕ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ಹಿಮವದ್ ಗೋಪಾಲಸ್ವಾಮಿಬೆಟ್ಟ ಬೇಸಿಗೆಯಲ್ಲೂ ಕೂಡ ಹಿಮದಿಂದ ಆವರಿಸಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತೆ. ಇಂತಹ ಪ್ರದೇಶದಲ್ಲಿ ಮಲೆಯಾಳಿ ಸಿನಿಮಾ ತಂಡವು ಮಂಗಳವಾರ ಶೂಟಿಂಗ್ ಮಾಡಿದೆ. …

Read More

ಬೆಳಗಾವಿ : ಕಾಲೇಜಿಗೆ ಹೋಗು ಅಂತಾ ತಂದೆ ಹೇಳಿದ್ದಕ್ಕೆ  ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. https://ainkannada.com/a-storm-caused-a-power-line-to-fall-two-people-were-injured-electronic-equipment-caught-fire/ ಮೃತ ಯುವಕನನ್ನು ಸಾಗರ್ ತುಕಾರಾಂ ಕುರಾಡೆ (20) ಎಂದು ಗುರುತಿಸಲಾಗಿದೆ. ಸಾಗರ್ ಸದಲಗಾ ಸರ್ಕಾರಿ ಪ್ರಥಮ ವರ್ಷ ಬಿಎ ವ್ಯಾಸಂಗ ಮಾಡುತ್ತಿದ್ದ. ಮೊಬೈಲ್‌ ಗೀಳು ಹೆಚ್ಚಿತ್ತು. ಯಾವಾಗಲೂ ಮನೆಯಲ್ಲಿ ಮೊಬೈಲ್ ನಲ್ಲೇ ಮುಳುಗಿಹೋಗಿದ್ದ. ಕಾಲೇಜಿಗೆ ಹೋಗು ಅಂದರೆ ಕೇಳದೇ ಮೊಬೈಲ್ ನೋಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಕಾಲೇಜಿಗೆ ಹೋಗುವಂತೆ ಪೋಷಕರು ಪದೇ ಪದೇ ಒತ್ತಡ ಹೇರುತ್ತಿದ್ದರಿಂದ ನಗ್ರಾಲ್ ಗ್ರಾಮದ ತನ್ನ ಮನೆಯ ಮುಂದಿರುವ ಹಳೆಯ ಮನೆಯಲ್ಲಿ ಸಾಗರ್ ನೇಣಿಗೆ ಕೊರಳೊಡ್ಡಿದ್ದಾನೆ. ಸಾಗರ್ ಅವರ ತಂದೆ ಚಿಕ್ಕೋಡಿಯ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ತಂದೆ ತಾಯಿ ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾರೆ

Read More

ಸೂರ್ಯೋದಯ – 6:08 ಬೆ ಸೂರ್ಯಾಸ್ತ – 6:27 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ದ್ವಾದಶಿ ನಕ್ಷತ್ರ – ಮಖೆ ಯೋಗ – ಗಂಡ ಕರಣ – ಬವ ರಾಹು ಕಾಲ – 12:00 ದಿಂದ 01:30 ವರೆಗೆ ಯಮಗಂಡ – 07:30 ದಿಂದ 09:00 ವರೆಗೆ ಗುಳಿಕ ಕಾಲ – 10:30 ದಿಂದ 12:00 ವರೆಗೆ ಬ್ರಹ್ಮ ಮುಹೂರ್ತ – 4:32 ಬೆ. ದಿಂದ 5:20 ಬೆ ವರೆಗೆ ಅಮೃತ ಕಾಲ – 7:35 ಬೆ ದಿಂದ 9:19 ಬೆ ವರೆಗೆ ಅಭಿಜಿತ್ ಮುಹುರ್ತ – ಇಲ್ಲ ಮೇಷ ರಾಶಿ ಇಂದು ನಿಮಗೆ ಸಮಸ್ಯೆಗಳ ಅಂತ್ಯ ಕಾಣಬಹುದು, ಹೊಸ ಯೋಜನೆಗಳು ಚಾಲನೆ, ನಿಮಗೆ ಹೋಟೆಲ್ ವ್ಯವಹಾರ ಸಾಲಾವಳಿ ಬಂದಿದೆ ಅಧಿಕ ಧನ ಲಾಭ, ಯಂತ್ರಗಳ ಬಿಡಿ ಭಾಗಗಳ ಉದ್ಯಮದಾರರಿಗೆ ಆರ್ಥಿಕ…

Read More

ಯಾದಗಿರಿ: ಯಾದಗಿರಿಯಲ್ಲಿ ಬಿರುಗಾಳಿ ಮಳೆಯ ಆರ್ಭಟಕ್ಕೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬಿರುಗಾಳಿಯಿಂದಾಗಿ ಮುಖ್ಯ ವಿದ್ಯುತ್ ಲೈನ್‌ಗಳಲ್ಲಿ ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಗಳವಾರ ಸಂಜೆ ವೇಳೆ ಏಕಾಏಕಿ ಉಂಟಾದ ಭಾರೀ ಪ್ರಮಾಣದ ಗಾಳಿ ಬೀಸಿದ್ದು, ಗಾಳಿಗೆ ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವ ಮುಖ್ಯ ತಂತಿಗಳಲ್ಲಿ ಘರ್ಷಣೆಯುಂಟಾಗಿದ್ದು, ಈಡೀ ಗ್ರಾಮದಲ್ಲಿ ಸಂಪರ್ಕಿಸುವ ವಿದ್ಯುತ್ ತಂತಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇನ್ನೂ ಮನೆ ಮೇಲೆ ವಿದ್ಯುತ್ ತಂತಿ ಬೀಳುತ್ತಾ ಇದ್ದಂತೆ ಜನರು ಎದ್ನೋ ಬಿದ್ನೋ ಎನ್ನುವ ಹಾಗೆ ಮನೆಯಿಂದ ಓಡಿ ಬಂದಿದ್ದಾರೆ. ಇದರಿಂದಾಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. https://ainkannada.com/failed-in-second-puc-exam-student-hangs-herself/ ಹಳೆ ಟಿಸಿ ವಿದ್ಯುತ್ ತಂತಿಗೆ ತಗುಲಿದ‌ ಕರೆಂಟ್ ಶಾಕ್ ತಗುಲಿದ್ದು, ಜಾಲಿಬೆಂಚಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಬಳಿಯ ಶಾರ್ಟ್ ಸರ್ಕ್ಯೂಟ್ ಕಂಬ ಅಳವಡಿಸಲಾಗಿತ್ತು. ಭಾರಿ ಬಿರುಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಕತ್ತರಿಸಿ ಬಿದ್ದಿದೆ. ನೂರಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ, ಪ್ರಿಡ್ಜ್, ಫ್ಯಾನ್…

Read More

ಹೈದರಾಬಾದ್‌: ವಿಶಾಖಪಟ್ಟಣಂ ಮಾರ್ಗವಾಗಿ ಪಶ್ಚಿಮ ಬಂಗಾಳದ ಶಾಲಿಮಾರ್‌ಗೆ ಪ್ರಯಾಣಿಸುತ್ತಿದ್ದ ಫಲಕ್‌ನುಮಾ ಎಕ್ಸ್‌ಪ್ರೆಸ್‌ ರೈಲು ಇದ್ದಕ್ಕಿದ್ದಂತೆ ಎರಡು ತುಂಡಾಗಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಬಳಿ ಬೆಚ್ಚಿ ಬೀಳಿಸುವ ಈ ಘಟನೆ ನಡೆದಿದೆ. ಇನ್ನೂ ಬಗ್ಗೆ ರೈಲ್ವೇ ಅಧಿಕಾರಿಗಳು ಮಾತನಾಡಿದ ಅವರು, ರೈಲಿನಲ್ಲಿ ಯಾವುದೇ ಅಲರ್ಟ್‌  ಬಂದಿಲ್ಲ. ಏಕಾಏಕಿ ಎರಡು ಎಸಿ ಬೋಗಿಗಳು ಬೇರ್ಪಟ್ಟಿವೆ. ಕೂಡಲೇ ಎಚ್ಚೆತ್ತ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ, ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ ಎಂದಿದ್ದಾರೆ. https://ainkannada.com/supreme-court-slams-tamil-nadu-governor/ ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ರೈಲ್ವೇ ಸಿಬ್ಬಂದಿ ಘಟನಾ ಸ್ಥಳಕ್ಕೆ ತ್ವರಿತವಾಗಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ರಿಪೇರಿ ಮಾಡಿ ಬೇರ್ಪಟ್ಟ ಬೋಗಿಗಳನ್ನು ಮತ್ತೆ ಜೋಡಿಸಿದ್ದಾರೆ. ಸುರಕ್ಷತೆಯ ಎಲ್ಲಾ ಪ್ರೋಟೋಕಾಲ್‌ (ಶಿಷ್ಟಾಚಾರ) ಪಾಲಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿದೆ. ಫಲಕ್‌ನುಮಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ರೈಲು ಬೇರ್ಪಟ್ಟ ಕಾರಣದಿಂದಾಗಿ ಬ್ರಹ್ಮಪುರ ಮತ್ತು ವಿಶಾಖಪಟ್ಟಣಂ ನಡುವಿನ…

Read More