ಬೆಂಗಳೂರು:- ಇಂದು ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು ಚಿಂತೆ ಬಿಟ್ಟು ಮತ್ತೊಮ್ಮೆ ಪರೀಕ್ಷೆ ಬರೆದು ಚೆನ್ನಾಗಿ ಅಂಕ ಪಡೆಯಿರಿ. ಮೊದಲ ಪರೀಕ್ಷೆಯಲ್ಲಿ ಅನುರ್ತೀಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಪರೀಕ್ಷೆ-2 ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 24ರಿಂದ ಮೇ 8ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಹಾಗಾಗಿ ವಿದ್ಯಾರ್ಥಿಗಳು ಮೊದಲ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇವೆ ಎಂದು ಕೊರಗುವ ಬದಲು 2ನೇ ಪರೀಕ್ಷೆಗೆ ಅರ್ಜಿ ಹಾಕಿ ಬರೆದು ಉತ್ತೀರ್ಣರಾಗಬಹುದು. ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ 24-4-25: ಕನ್ನಡ, ಅರೇಬಿಕ್ 25-4-25: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ 26-4-25: ಇತಿಹಾಸ, ಭೌತಶಾಸ್ತ್ರ 27-4-25: ಭಾನುವಾರ (ರಜಾ ದಿನ) 28-4-25: ಭೂಗೋಳಶಾಸ್ತ್ರ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ 29-4-25: ಇಂಗ್ಲೀಷ್ 02-05-25: ತರ್ಕಶಾಸತ್ರ, ವ್ಯವಹಾರ ಶಾಸ್ತ್ರ, ಗಣಿತ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ. 03-05-25: ಸಮಾಜಶಾಸ್ತ್ರ, ಭೂರ್ಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕಶಾಸ್ತ್ರ 04-05-25: ಭಾನುವಾರ (ರಜಾ ದಿನ) 05-05-25: ಅರ್ಥಶಾಸ್ತ್ರ 06-05-25: ಐಚ್ಛಿಕ…
Author: AIN Author
ಚಿತ್ರದುರ್ಗ : ರಾಜ್ಯದಲ್ಲಿ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಯಲ್ಲಿ ಅನುತ್ತಿರ್ಣಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕುಡಿನೀರುಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಕೃಪಾ ಎಂಬ ವಿದ್ಯಾರ್ಥಿನಿ ಮೃತ ವಿದ್ಯಾರ್ಥಿನಿಯಾಗಿದ್ದಳು. ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾಳೆ. ಚಂದ್ರಶೇಖರಪ್ಪ, ವೀಣಾ ದಂಪತಿಯ ಮಗಳಾದ ಕೃಪಾ, ದಾವಣಗೆರೆಯ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿಜ್ಞಾನ ವಿಭಾಗದಲ್ಲಿ ಎರಡು ವಿಷಗಳಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿದ್ದಾಳೆ. https://ainkannada.com/second-puc-results-chief-minister-wishes-those-who-passed-and-encourages-those-who-failed/ ಇನ್ನೂ ಮಗಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಪ್ಪದಲ್ಲಿ ನಮಗೆ ಪ್ರತಿದಿನ ಅವಶ್ಯಕವಾಗಿ ಬೇಕಾದ ಪೌಷ್ಟಿಕಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶಗಳು, ಕೊಬ್ಬಿನ ಅಂಶಗಳು, ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಇವುಗಳು ಕೆಲಸ ಮಾಡುತ್ತವೆ ಮತ್ತು ಆಯುರ್ವೇದ ಚಿಕಿತ್ಸೆಗಳಿಗೆ ಹೋಲಿಸಿದರೆ ಸಾಕಷ್ಟು ಉತ್ತಮ ಎನಿಸುತ್ತದೆ. https://ainkannada.com/srks-king-deepika-padukone-to-play-suhana-khans-mother/ ತುಪ್ಪದಲ್ಲಿ ನಮಗೆ ಪ್ರತಿದಿನ ಅವಶ್ಯಕವಾಗಿ ಬೇಕಾದ ಪೌಷ್ಟಿಕಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶಗಳು, ಕೊಬ್ಬಿನ ಅಂಶಗಳು, ವಿಟಮಿನ್ ಅಂಶಗಳು ಮತ್ತು ಖನಿ ಜಾಂಶಗಳು ಹೇರಳವಾಗಿ ಸಿಗುತ್ತವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಇವುಗಳು ಕೆಲಸ ಮಾಡುತ್ತವೆ ಮತ್ತು ಆಯುರ್ವೇದ ಚಿಕಿತ್ಸೆಗಳಿಗೆ ಹೋಲಿಸಿದರೆ ಸಾಕಷ್ಟು ಉತ್ತಮ ಎನಿಸುತ್ತದೆ. ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸು ತ್ತಾರೆ. ಸಂಶೋಧಕರು ಹೇಳುವಂತೆ ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಯಾರು ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸುತ್ತಾರೆ ಅವರಿಗೆ ಈ…
ನವದೆಹಲಿ: ಮುದ್ರಾ ಯೋಜನೆಗೆ ದಶಕ ಸಂಭ್ರಮದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಸಭೆಯಲ್ಲಿ ಸಭೆಯಲ್ಲಿ ಉದ್ಯಮಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು. ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮುದ್ರಾ ಯೋಜನೆಯು ಕಳೆದ 10 ವರ್ಷಗಳಲ್ಲಿ ಲಕ್ಷಾಂತರ ಜನರ ಕನಸುಗಳಿಗೆ ರೆಕ್ಕೆ ತಂದಿದೆ. ಇದು ಕೇವಲ ಸಾಲದ ಯೋಜನೆಯಷ್ಟೇ ಅಲ್ಲ, ಇದು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಸಾಧನವಾಗಿದೆ. ಸಣ್ಣ ಉದ್ಯಮಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಈ ಯೋಜನೆ ಸಹಾಯ ಮಾಡಿದೆ ಎಂದರು. https://ainkannada.com/second-puc-results-chief-minister-wishes-those-who-passed-and-encourages-those-who-failed/ ಇದೇ ವೇಳೆ ದೇಶದ ಆರ್ಥಿಕತೆಗೆ ಸಣ್ಣ ಉದ್ಯಮಿಗಳ ಕೊಡುಗೆಯನ್ನು ಶ್ಲಾಘಿಸಿದರು. ಭವಿಷ್ಯದಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ತಮ್ಮ ಉದ್ದೇಶವನ್ನು ಸಹ ವ್ಯಕ್ತಪಡಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಾನುಭವಿಗಳು ಭಾಗವಹಿಸಿಸಿ, ತಮ್ಮ ಯಶಸ್ಸಿನ ಕಥೆಗಳನ್ನು ಹಂಚಿಕೊಂಡರು.
ಮಂಡ್ಯ:- ಕುಮಾರಸ್ವಾಮಿ ಸಿಎಂ ಆಗಲು ನಾನು ಕಾರಣ, ಬೇಕಿದ್ರೆ ಧರ್ಮಸ್ಥಳದಲ್ಲಿ ಆಣೆ ಮಾಡ್ತೀನಿ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ HDK ತಿರುಗೇಟು ಕೊಟ್ಟಿದ್ದಾರೆ. https://ainkannada.com/second-puc-results-chief-minister-wishes-those-who-passed-and-encourages-those-who-failed/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಾನು ಆಣೆ ಮಾಡಲು ತಯಾರಿದ್ದೇನೆ. ನಾನು ಸಿಎಂ ಆಗುವಾಗ ಚಲುವರಾಯಸ್ವಾಮಿ ನೋಡಿ ಎಂಎಲ್‌ಎಗಳು ಬಂದ್ರಾ ಏನು ಅಂತ. ಇದು ಸುಳ್ಳು ಚಲುವರಾಯಸ್ವಾಮಿಯನ್ನ ಮಂತ್ರಿ ಮಾಡಲು ಶ್ರಮ ಹಾಕಿದ್ದೇನೆ ಎಂದು ತಿಳಿಸಿದ್ದಾರೆ. ತಾನು ಮಂತ್ರಿ ಆಗಲು ಚಲುವರಾಯಸ್ವಾಮಿ ಮಧ್ಯರಾತ್ರಿ ಮೂರು ಗಂಟೆವರೆಗೆ ನನ್ನನ್ನ ಬಿಟ್ಟಿಲ್ಲ. ಅವರನ್ನ ಮಂತ್ರಿ ಮಾಡಲು 50 ಜನ ಶಾಸಕರನ್ನು ಸೇರಿಸಿದ್ದೆ. ನಾನು ಪಟ್ಟಿರುವ ಶ್ರಮವನ್ನು ಚಲುವರಾಯಸ್ವಾಮಿ ಮರೆಯಬಾರದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇನ್ನೂ ಚಲುವರಾಯಸ್ವಾಮಿಗೆ ಇರುವ ಚಟಗಳು ನನಗೆ ಇಲ್ಲ, ಮಂಡ್ಯದಲ್ಲಿ ಕೇಳಿದ್ರೆ ಚಲುವರಾಯಸ್ವಾಮಿ ಚಟಗಳ ಬಗ್ಗೆ ಹೇಳುತ್ತಾರೆ. ಚಲುವರಾಯಸ್ವಾಮಿ ಎಷ್ಟು ಮನೆ ಹಾಳು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದಕ್ಕೂ ಮುನ್ನ ಮಂಡ್ಯದಲ್ಲಿ ಮಾತನಾಡಿದ್ದ ಸಚಿವ ಚಲುವರಾಯಸ್ವಾಮಿ, ಕುಮಾರಸ್ವಾಮಿ…
ಬೆಂಗಳೂರು:- ಇಂದು ಕರ್ನಾಟಕದಲ್ಲಿ 2024-25 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ https://ainkannada.com/dhruva-sarjas-first-look-in-arjun-sarjas-seetha-payanam-revealed/ ಈ ಸಂಬಂಧ X ಮಾಡಿರುವ ಸಿಎಂ ಸಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಪರಿಶ್ರಮ ಮತ್ತು ನಿರಂತರ ಅಭ್ಯಾಸ ನಿಮ್ಮನ್ನು ಯಶಸ್ಸಿನ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸುತ್ತೇನೆ ಎಂದರು. ಇನ್ನೂ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳು ನಿರಾಶೆ, ಆತಂಕಕ್ಕೆ ಒಳಗಾಗಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಬದುಕು ದೊಡ್ಡದು, ಮತ್ತೆ ಪರೀಕ್ಷೆ ಎದುರಿಸಿ ಹೆಚ್ಚಿನ ಅಂಕದ ಜೊತೆಗೆ ಪಾಸಾಗುವ ಅವಕಾಶ ಖಂಡಿತಾ ಸಿಗಲಿದೆ. ಹತಾಶೆಯ ಕೈಗೆ ಬುದ್ದಿ ಕೊಡದೆ ಸಂಯಮದಿಂದ ವರ್ತಿಸಿ ಎಂದು ಟ್ವೀಟ್ ಮೂಲಕ ಸ್ಥೈರ್ಯ ತುಂಬಿದ್ದಾರೆ. ವಿವಿಧ ವಿಭಾಗಗಳಲ್ಲಿ ರ‍್ಯಾಂಕ್ ಪಡೆದಿರುವ ಎಲ್.ಆರ್.ಸಂಜನಾ ಬಾಯಿ, ಅಮೂಲ್ಯ ಕಾಮತ್, ದೀಕ್ಷಾ.ಆರ್ ಹಾಗೂ ದೀಪಶ್ರೀ ಈ ನಾಲ್ವರು ಹೆಣ್ಣುಮಕ್ಕಳಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಇತರರಿಗೆ ಸ್ಫೂರ್ತಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನವದೆಹಲಿ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರಾಷ್ಟ್ರಪತಿಗಳ ಪರಿಗಣನೆಗೆ 10 ಮಸೂದೆಗಳನ್ನು ಕಾಯ್ದಿರಿಸುವುದು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನು ಒಳಗೊಂಡ ಪೀಠವು, ಸಂವಿಧಾನದ 200ನೇ ವಿಧಿಯಡಿಯಲ್ಲಿ ರಾಜ್ಯಪಾಲರು ಯಾವುದೇ ಅವಕಾಶವನ್ನು ಹೊಂದಿಲ್ಲ, ಜೊತೆಗೆ ಮಂತ್ರಿ ಮಂಡಲದ ನೆರವು ಮತ್ತು ಸಲಹೆಯ ಮೇರೆಗೆ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಹೇಳಿದೆ. ಇದೇ ವೇಳೆ ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿಯಲು ಮತ್ತು ಸಂಪೂರ್ಣ ವೀಟೋ ಅಥವಾ ಪಾಕೆಟ್ ವೀಟೋ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಎಚ್ಚರಿಕೆ ನೀಡಿದೆ. https://ainkannada.com/the-responsibility-to-develop-the-congress-party-into-a-party-of-workers-lies-with-all-of-us-dk-shivakumar/ ರಾಜ್ಯಪಾಲರು ಒಂದು ಕ್ರಮವನ್ನು ಅಳವಡಿಸಿಕೊಳ್ಳಲು ಬದ್ಧರಾಗಿದ್ದಾರೆ – ಮಸೂದೆಗಳಿಗೆ ಒಪ್ಪಿಗೆ ನೀಡುವುದು, ಒಪ್ಪಿಗೆಯನ್ನು ತಡೆಹಿಡಿಯುವುದು ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವುದು. ರಾಜ್ಯಪಾಲರು ಎರಡನೇ ಬಾರಿಗೆ ರಾಷ್ಟ್ರಪತಿಗಳಿಗೆ ಮಂಡಿಸಿದ ನಂತರ ಅದನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಲು ಆಯ್ಕೆ ಮುಕ್ತವಾಗಿಲ್ಲ ಎಂದು ಪೀಠ ಹೇಳಿದೆ.
ಬೆಂಗಳೂರು:- ನೀವು ಕೂಡ ವಿಧಾನಸೌಧ ನೋಡ್ಬೇಕು ಅನ್ಕೊಂಡಿದ್ದೀರಾ.. ಇನ್ಮುಂದೆ ಫ್ರೀ ಇಲ್ಲ, ದುಡ್ಡು ಕಟ್ಟಿ ಪ್ರವೇಶ ಪಡೆಯಬೇಕು. ಎಸ್, ವಿಧಾನಸೌಧಕ್ಕೆ ಹೋಗಲು ಬಯಸುವ ಸಾರ್ವಜನಿಕರ ಪ್ರವೇಶಕ್ಕೆ ಶುಲ್ಕ ನಿಗದಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರವಾಸೋದ್ಯಮ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. https://ainkannada.com/vidhana-soudha-is-the-government-trying-to-collect-money-in-the-name-of-tourism/ ವಿಧಾನಸೌಧ ವೀಕ್ಷಣೆಗೆ ಗೈಡೆಡ್ ಟೂರ್ ವ್ಯವಸ್ಥೆ ಜಾರಿಗೆ ಚಿಂತಿಸಿರುವ ರಾಜ್ಯ ಸರ್ಕಾರವು, ವಿಧಾನಸೌಧವನ್ನ ಪ್ರವಾಸಿ ತಾಣವಾಗಿ ಮಾಡಲು ಹೊರಟಿದೆ. ಪ್ರವಾಸೋಧ್ಯಮ ಇಲಾಖೆ ಇಂದ ಗೈಡ್ ಟೂರ್ ಮಾಡಲು ಅವಕಾಶ ಕೋರಲಾಗಿದ್ದು, ಇದಕ್ಕೆ ಷರತ್ತು ಬದ್ಧವಾಗಿ ಸರ್ಕಾರ ಅನುಮತಿ ನೀಡಿ ಆದೇಶಿಸಿದೆ. ಅದರಂತೆ ಪ್ರವೇಶ ಶುಲ್ಕ ನೀಡಿ ಒಳಗೆ ಬರಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ವಿಧಾನಸೌಧ ನೋಡಲು ಷರತ್ತು:- * ಸಾರ್ವತ್ರಿಕ ರಜೆ ದಿನದಂದು ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ಅವಕಾಶ. * 30ಜನರ ತಂಡದೊಂದಿಗೆ ವೀಕ್ಷಣೆಗೆ ಅವಕಾಶ.. * ಆನ್ ಲೈನ್ ಮುಖಾಂತರ ಟಿಕೆಟ್ ಬುಕ್ ಮಾಡಿಕೊಳ್ಳಬೇಕು. *…
ಚಾಮರಾಜನಗರ : ನಾಲ್ವರು ಕಳ್ಳಬೇಟೆಗಾರರ ಬಂಧಿಸಿರುವ ಪೊಲೀಸರು, ಬಂಧಿತರಿಂಧ ನಾಲ್ಕು ಅಕ್ರಮ ನಾಡ ಬಂದೂಕು ವಶ ಪಡೆಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. https://ainkannada.com/wild-elephant-dies-after-stepping-on-electric-wire-in-farm/ ಕರಡಿಗುಡ್ಡ ಸಮೀಪ ಮಂಗಳವಾರ ಮುಂಜಾನೆ 4 ಗಂಟೆಯಲ್ಲಿ ಘಟನೆಯಲ್ಲಿ ಅಕ್ರಮ ನಾಡ ಬಂದೂಕು ಹೊಂದಿದ್ದ ನಾಲ್ವರನ್ನು ಬಂಧಿಸಲಾಗಿದೆ. ಪ್ರದೀಪ, ರಾಮು , ಕೃಷ್ಣ ದೇವರಾಜು ಬಂಧಿತ ಆರೋಪಿಗಳಾಗದ್ದು, ಎಸ್ಪಿ ಕವಿತಾ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸದ್ಯ ಈ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು/ಅಹಮದಾಬಾದ್:- ಕಾಂಗ್ರೆಸ್ ಪಕ್ಷ ‘ಕಾರ್ಯಕರ್ತರ ಪಕ್ಷವಾಗಿ’ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು DK ಶಿವಕುಮಾರ್ ಹೇಳಿದ್ದಾರೆ. https://ainkannada.com/2nd-airport-in-bidadi-home-minister-says-he-doesnt-know-whose-pressure-this-is/ ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸಲು ಗುಜರಾತ್‌ನ ಅಹಮದಬಾದ್‌ಗೆ ತೆರಳಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದರು. ಕಳೆದ ಬೆಳಗಾವಿ ಅಧಿವೇಶನದ ವೇಳೆ ಈ ವರ್ಷವನ್ನು ಸಂಘಟನೆಯ ವರ್ಷ ಎಂದು ಸೂಚನೆ ನೀಡಲಾಗಿತ್ತು. ಬ್ಲಾಕ್, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಅಹಮದಾಬಾದ್ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದರು. ಪಕ್ಷ ಸಂಘಟನೆಯ ವಿಚಾರದಲ್ಲಿ ಒಂದೊಂದೇ ಬದಲಾವಣೆಗಳನ್ನು ತರಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಪಕ್ಷವಾಗಿ ಇನ್ನೂ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವೆಲ್ಲರು ಚರ್ಚೆ ನಡೆಸಿ ಒಟ್ಟಿಗೆ ಕೆಲಸ ಮಾಡುವುದಕ್ಕೆ ಈ ಸಮಾವೇಶ ಮುನ್ನುಡಿ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಲವಾರು ವಿಚಾರಗಳು ಸೇರಿದಂತೆ ಪಕ್ಷದ ಎಲ್ಲಾ ಘಟಕಗಳ ಬಲವರ್ಧನೆ ಬಗ್ಗೆ ಚರ್ಚೆ ಮಾಡಲಾಗುವುದು. ಕಳೆದ ವಾರ ದೆಹಲಿಯಲ್ಲಿ ಜಿಲ್ಲಾ…