ಡೇಂಜರ್, ಡೇಂಜರ್, ಡೇಂಜರ್.. ಸೇಫ್ ಅಲ್ಲ ಜನರೇ ವಾಟರ್ ಬಾಟಲ್. ಹಿಂದೆಲ್ಲಾ ಪನ್ನೀರ್, ಗೋಬಿ, ಕಬಾಬ್, ಕಲ್ಲಂಗಡಿ ಬಳಿಕ ಈಗ ಕುಡಿಯುವ ನೀರಿಗೂ ಕಂಟಕ ಶುರುವಾಗಿದೆ. ಬೇಸಿಗೆ ಶುರುವಾಯ್ತು ನೀರಿನ ಸಮಸ್ಯೆ ಸಾಮಾನ್ಯ ಬಿಡಿ ಅಂತ ಮುಂದೆ ಓದದೆ ಸುಮ್ಮನಾಗಬೇಡಿ. ನೀವು ಈ ಸುದ್ದಿ ಏದಲೇಬೇಕು. https://ainkannada.com/ipl-betting-app-promotion-allegations-sonu-srinivas-gowda-and-more-than-100-reel-star-inquiry-by-cyber-crime-police/ ಎಸ್, ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಆಘಾತಕಾರಿ ವಿಚಾರಗಳು ಬಹಿರಂಗವಾಗುತ್ತಲೇ ಇವೆ. ಈಗ ವಾಟರ್ ಬಾಟಲ್ ಸರದಿ. ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ ಕೂಡ ಇರುವುದಿಲ್ಲ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತ ಎಂದು ವರದಿ ತಿಳಿಸಿದೆ. ಜತೆಗೆ, ಕೋವಾ ಕೂಡ ಕಲಬೆರಕೆಯುಕ್ತ ಎಂದು ತಿಳಿಸಿದೆ. ನಕಲಿ ವಾಟರ್ ಬಾಟಲ್ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಆಹಾರ ಇಲಾಖೆ ಸಮರ ಮುಂದುವರಿಸಿದೆ. ವಿವಿಧೆಡೆ ದಾಳಿ ನಡೆಸಿ ವಾಟರ್ ಬಾಟಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.…
Author: AIN Author
ಬೆಂಗಳೂರು:- ಸಾಮಾನ್ಯವಾಗಿ ನಾವು ನೀವು ಎಲ್ಲರೂ ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿಸಿದ್ದೇವೆ. ಆದರೆ ಈ ಬಾಟಲಿ ನೀರು ನಮ್ಮ ಆರೋಗ್ಯಕ್ಕೆ ಎಷ್ಟು ಸೇಫ್.. ಈ ವಿಚಾರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಚ್ಚಿಟ್ಟಿದ್ದು, ಇನ್ಮುಂದೆ ಜನತೆ ಎಚ್ಚರಿಕೆ ವಹಿಸಲೇಬೇಕಾಗಿದೆ. https://ainkannada.com/second-pu-result-nirmala-secured-second-rank-with-596-marks/ ಎಸ್, ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಈ ಬಗ್ಗೆ ಮಾತನಾಡಿದ ದಿನೇಶ್ ಗುಂಡೂರಾವ್, ಈಗಾಗಲೇ 296 ಕುಡಿಯುವ ನೀರಿನ ಬಾಟಲ್ ಮಾದರಿಗಳ ಟೆಸ್ಟ್ ಮಾಡಿದ್ದು, ಇದರಲ್ಲಿ72 ಸುರಕ್ಷಿತ ಹಾಗೂ 95 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿದೆ. ಇದಲ್ಲದೇ ಹಸಿರು ಬಟಾಣಿಗೆ ಹಸಿರು ಕಲರ್ ಬರಿಸಲು ಟೆಟಾರ್ಜಿನ್ ಕೆಮಿಕಲ್ ಬಳಸಿರುವ ಆತಂಕಕಾರಿ ವಿಷಯ ಹೊರಬಿದ್ದಿದೆ. ಕುಡಿಯುವ ನೀರಿನ ಬಾಲಿ ಮಾತ್ರವಲ್ಲದೇ ಖಾರ ಮಿಕ್ಚರ್, ಪನ್ನೀರ್ ಹಾಗೂ ಐಸ್ಕ್ರೀಂ ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಯಾರಿಕಾ ಘಟಕಗಳಲ್ಲಿ ಲೋಪ ಕಂಡುಬಂದ ಹಿನ್ನೆಲೆ ನೋಟಿಸ್ ನೀಡಲಾಗಿರುವುದಾಗಿ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ವಿಜಯನಗರ : ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ವಿಜಯನಗರ ಜಿಲ್ಲೆಗೆ ದ್ವಿತೀಯ ಪಿ.ಯು.ಸಿ ಯಲ್ಲಿ ಬಂಪರ್ ರಿಜೆಲ್ಟ್ ಬಂದಿದೆ. ವಿಜಯನಗರದ ಇಬ್ಬರು ವಿದ್ಯಾರ್ಥಿನಿರು ರಾಜ್ಯಕ್ಕೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಬಂದಿದ್ದಾರೆ. https://ainkannada.com/second-pu-result-sanjanabai-first-in-arts-lorry-drivers-daughters-achievement/ ಕಲಾವಿಭಾಗದಲಲ್ಲಿ ಕೆ.ನಿರ್ಮಲ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜಯನಗರ ಜಿಲ್ಲೆಯ ಇಟಗಿಯ ಪಂಚಮಸಾಲಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನಿರ್ಮಲಾ 600ಕ್ಕೆ 596 ಅಂಕ ಪಡೆಯುವ ಮೂಲಕ, ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾಳೆ.
ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಮವಾರ ರೋಚಕವಾಗಿ ಗೆದ್ದು ಬೀಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ ಸಿಬಿ ಪಂದ್ಯಾವಳಿಯ ಮೂರನೇ ಗೆಲುವು ಸಾಧಿಸಿದೆ. https://ainkannada.com/second-pu-result-sanjanabai-first-in-arts-lorry-drivers-daughters-achievement/ ಪಂದ್ಯ ಗೆದ್ದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಗೆ ಬಿಸಿಸಿಐ ಶಾಕ್ ಕೊಟ್ಟಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಕಡಿಮೆ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಬಿಸಿಸಿಐ ರಜತ್ ಪಾಟಿದಾರ್‌ಗೆ ದಂಡ ವಿಧಿಸಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ, ಕನಿಷ್ಠ ಓವರ್ ದರದ ಅಪರಾಧಗಳಿಗೆ ಸಂಬಂಧಿಸಿದಂತೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ಪ್ರಕಾರ, ಅನುಬಂಧ 2 ರಲ್ಲಿ ಒಳಗೊಂಡಿರುವ ಕನಿಷ್ಠ ಓವರ್ ದರದ ಅವಶ್ಯಕತೆಗಳನ್ನು ಪೂರೈಸಲು ಫೀಲ್ಡಿಂಗ್ ತಂಡವು ಪಂದ್ಯದಲ್ಲಿ ಭಾಗವಹಿಸುವಲ್ಲಿ ವಿಫಲವಾದರೆ, ಸಂಬಂಧಿತ ತಂಡದ ನಾಯಕ ಮತ್ತು ಆ ಫೀಲ್ಡಿಂಗ್ ತಂಡದ ಪ್ರತಿಯೊಬ್ಬ ಆಟಗಾರರು ಈ ನೀತಿ…
ಚಾಮರಾಜನಗರ : ರೈತನ ಜಮೀನಿನಲ್ಲಿ ಅಕ್ರಮ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವನ್ನಪ್ಪಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಓಂಕಾರ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.. ಓಂಕಾರ ಅರಣ್ಯ ವಲಯ ವ್ಯಾಪ್ತಿಯ ಆಲತ್ತೂರು ಗ್ರಾಮದ ರೈತರ ರಾಜೇಶ್ ಎಂಬುವವರ ಸರ್ವೇನಂಬರ್ 155 ರಲ್ಲಿ ಘಟನೆ ನಡೆದಿದೆ. ರೈತ ರಾಜೇಶ್ ತಮ್ಮ ಜಮೀನಿನಲ್ಲಿ ಬೆಳೆ ರಕ್ಷಣೆಗಾಗಿ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಅಳವಡಿಸಿದ್ದು, ಈ ತಂತಿ ತುಳಿದು ಸುಮಾರು 40 ವರ್ಷ ವಯಸ್ಸಿನ ಕಾಡಾನೆ ಸಾವು https://ainkannada.com/jcb-roars-in-mahalingapura-town-sheds-where-30-families-lived-evacuated/ ಸ್ಥಳಕ್ಕೆ ಓಂಕಾರ ಅರಣ್ಯ ವಲಯದ ಆರ್.ಎಫ.ಓ ಸತೀಶ್ ಹಾಗೂ ಸಿಬ್ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಅಧಿಕಾರಿಗಳ ಪರಿಶೀಲನೆ ನಂತರ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.
ವಿಜಯನಗರ : ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಸಂಜನಾಬಾಯಿ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 597 ಅಂಕ ಪಡೆದಿರುವ ಸಂಜನಾಬಾಯಿ ಕಲಾ ವಿಭಾಗದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ. ಸಂಜನಾಬಾಯಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದು ಪಿಯು ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ಶಾಲಾ ಮುಖ್ಯಸ್ಥರು ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. https://ainkannada.com/second-puc-results-declared-udupi-first-yadgir-last/ ಮರಿಯಮ್ಮನಹಳ್ಳಿಯ ಗುಂಡಾ ಸ್ಟೇಷನ್ ಗ್ರಾಮದವರಾಗಿದ್ದು, ಸಂಜನಾ ಬಾಯಿ ಅವರ ತಂದೆ ಲಾರಿ ಡ್ರೈವರ್ ಆಗಿದ್ದು, ಬಡ ಕುಟುಂಬದ ಹೆಣ್ಣು ಮಗು ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು,ಅವರ ಕುಟುಂಬಕ್ಕೆ ಖುಷಿಯ ವಿಚಾರವಾಗಿದೆ.
ಸಿಂಗಾಪುರ:- ಸಿಂಗಾಪುರ ಶಾಲೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಭಾರೀ ಅನಾಹುತ ಸಂಭವಿಸಿರುವ ಘಟನೆ ಇಂದು ಜರುಗಿದೆ. https://ainkannada.com/second-puc-results-declared-udupi-first-yadgir-last/ ಟಾಲಿವುಡ್‌ನ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ ಕಿರಿಯ ಮಗನೂ ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದರು. ಘಟನೆಯಿಂದ ನಟನ ಪುತ್ರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಟನ ಪುತ್ರ ಮಾರ್ಕ್ ಶಂಕರ್ ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿ ಅವಘಡದಲ್ಲಿ ಶಂಕರ್ ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಶ್ವಾಸಕೋಶಕ್ಕೆ ಹೊಗೆ ನುಗ್ಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಪವನ್ ಕಲ್ಯಾಣ್ ಪುತ್ರನನ್ನು ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪವನ್ ಕಲ್ಯಾಣ್ ಸದ್ಯ ಸಿಂಗಪೂರ್‌ಗೆ ತೆರಳಿದ್ದಾರೆ. ಮಗ ಓದುತ್ತಿದ್ದ ಶಾಲೆಯಲ್ಲಿ ಬಂಕಿ ಅವಘಡ ಆಗಿದೆ. ಮಗ ಮಾರ್ಕ್ ಶಂಕರ್‌ಗೆ ತೀವ್ರ ಸುಟ್ಟಗಾಯಗಳೂ ಆಗಿವೆ. ಅದಕ್ಕೇನೆ ಮಗನ ಆರೈಕೆ ಮಾಡಲು ಪವನ್ ಕಲ್ಯಾಣ್ ಸಿಂಗಪೂರ್‌ಗೆ ತೆರಳಿದ್ದಾರೆ ಅನ್ನುವ ಮಾಹಿತಿ ಹೊರ ಬಿದ್ದಿದೆ.
ಬೆಂಗಳೂರು :- 2024-25ನೇ ಸಾಲಿನ ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. https://ainkannada.com/ghee-dangerous-for-health-be-careful-before-drinking-mineral-water/ ವಿದ್ಯಾರ್ಥಿಗಳು ಪಿಯುಸಿ ಫಲಿತಾಂಶವನ್ನು karresults.nic.inನಲ್ಲಿ ಮಧ್ಯಾಹ್ನ 1.30ರ ಬಳಿಕ ವೀಕ್ಷಿಸಬಹುದು. ಫಲಿತಾಂಶದ ನಂತರ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಹಾಗೂ ಪರೀಕ್ಷೆ – 3 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಮತ್ತೊಮ್ಮೆ ಪ್ರಯತ್ನ ಮಾಡಲು ಸಹಕಾರಿಯಾಗಲಿದೆ. ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು SMS ಮತ್ತು ಡಿಜಿಲಾಕರ್ ಮೂಲಕವೂ ಪಡೆಯಬಹುದು. ಫಲಿತಾಂಶ 2025 ಪರಿಶೀಲಿಸುವುದು ಹೇಗೆ? ಮಂಡಳಿಯ ಅಧಿಕೃತ ವೆಬ್ ಸೈಟ್ ಗಳಾದ kseab.karnataka.gov.in ಮತ್ತು karresults.nic.in ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಕುವ ಮೂಲಕ ವೀಕ್ಷಿಸಬಹುದು. 2025 ರ ದ್ವಿತೀಯ ಪಿಯುಸಿ ಫಲಿತಾಂಶಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ ನೋಂದಣಿ ಸಂಖ್ಯೆಯನ್ನು…
ಚಿಕ್ಕಬಳ್ಳಾಪುರ: ಕೃಷಿ ಹೊಂಡದ ಪೈಪ್ ಸರಿ ಮಾಡಲು ಹೋಗಿ ಅಕ್ಕ ತಂಗಿ ನೀರು ಪಾಲಾಗಿದ್ದಾರೆ. ಚಿಕ್ಕಬಳ್ಳಾಪುರ ಲ್ಲೆಯ ಚೇಳೂರು ತಾಲೂಕಿನ ಕುರಪ್ಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುರಪ್ಪಲಿ ಗ್ರಾಮದ 17 ವರ್ಷದ ರಾಧಾ ಮತ್ತು 14 ವರ್ಷದ ಸಾಹಿತಿ, ಮೃತ ಸಹೋದರಿಯರು. ಬೇಸಿಗೆ ರಜೆ ಇದ್ದ ಕಾರಣ ತಾಯಿಯ ಜೊತೆ ತೋಟದಲ್ಲಿ ಕೆಲಸ ಮಾಡಲು ಹೋಗಿದ್ದಾರೆ. ಈ ವೇಳೆ ಕೃಷಿ ಹೊಂಡಕ್ಕೆ ಆಳವಡಿಸಿದ್ದ ಪೈಪ್ ಸರಿ ಮಾಡಲು ಹೋಗಿ ಅಕ್ಕ ತಂಗಿ ಇಬ್ಬರು ಕಾಲು ಜಾರಿ ಬಿದ್ದಿದ್ದಾರೆ. https://ainkannada.com/police-fire-on-rowdy-sheeter-in-hubballi/ ಮೃತ ರಾಧಾ ಮತ್ತು ಸಾಹಿತೆಗೆ ತಂದೆ ಇರಲಿಲ್ಲ. ಇಬ್ಬರು ಮಕ್ಕಳೇ ಜೀವನಾಧಾರ ಅಂತ ಬದುಕು ಕಟ್ಟಿಕೊಂಡಿದ್ದ ತಾಯಿಯ ಕಣ್ಣೀರಿಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು:- ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಇಂದು ನಗರದ 57ನೇ ಸಿಸಿಹೆಚ್ ಕೋರ್ಟ್ಗೆ ಹಾಜರಾಗಬೇಕಾಗಿತ್ತು. ಆದರೆ ದರ್ಶನ್ ಮಾತ್ರ ವಿಚಾರಣೆಗೆ ಗೈರಾಗಿದ್ದರು. https://ainkannada.com/golden-news-for-gold-lovers-gold-prices-drop/ ಇಂದು ದರ್ಶನ್ ಕೋರ್ಟ್ ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆ ಸಂದರ್ಭದಲ್ಲಿ ವಕೀಲರು, ದರ್ಶನ್ ಅವರಿಗೆ ಬೆನ್ನು ನೋವಿದೆ. ಹೀಗಾಗಿ ವಿಚಾರಣೆಗೆ ಬರಲು ವಿನಾಯಿತಿ ಕೋರಿದರು. ಈ ವೇಳೆ ನ್ಯಾಯಾಧೀಶರು ವಿಚಾರಣೆಗೆ ಆರೋಪಿಗಳು ಗೈರಾಗುವುದು ಸರಿಯಲ್ಲ. ವಿಚಾರಣೆಗೆ ಇದ್ದಾಗ ಆರೋಪಿಗಳು ಹಾಜರಾಗಲೇಬೇಕು. ವಿನಾಯಿತಿಗೆ ಮನವಿ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ದರ್ಶನ್ ಮನೆಯಿಂದ ಜಪ್ತಿ ಮಾಡಿಕೊಂಡಿದ್ದ 75 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಕೋರ್ಟ್, ಆದಾಯ ತೆರಿಗೆ ಇಲಾಖೆ ವಾದ ಮಂಡಿಸಿದ ಬಳಿಕ ಆದೇಶ ನೀಡುವುದಾಗಿ ಹೇಳಿ ಮೇ 20ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು. ಈ ವೇಳೆ ತನಿಖೆ ವೇಳೆ ಜಪ್ತಿ ಮಾಡಿದ್ದ ಮೊಬೈಲ್‌ಗಳ ಹಿಂತಿರುಗಿಸಲು ಆರೋಪಿಗಳ ಪರ ವಕೀಲರು…