ʻಈರುಳ್ಳಿ ಅಡುಗೆ ಮನೆಯ ರಾಜ ಎಂದೇ ಕರೆಯಲಾಗುತ್ತದೆ. ಈರುಳ್ಳಿ ಇಲ್ಲದೇ ಅಡುಗೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನಕ್ಕೆ, ಅಡುಗೆಗೆ ಒಗ್ಗಿಕೊಂಡು ಬಿಟ್ಟಿದೆ. ಯಾವುದೇ ಅಡುಗೆ ಇರಲಿ, ಸಲಾಡ್ ಇರಲಿ ಈರುಳ್ಳಿ ಒಂದಿರಬೇಕು. ಇದು ತರಕಾರಿಯೂ ಹೌದು, ಸಾಂಬಾರ್ ಪದಾರ್ಥವೂ ಹೌದು, ಔಷಧಿಯ ಮೂಲವೂ ಹೌದು, ಆರೋಗ್ಯ ವರ್ಧಕವೂ ಹೌದು. ಈರುಳ್ಳಿಯು ಹಲವು ಪೋಷಕಾಂಶಗಳ ಗಣಿಯಾಗಿದೆ. https://ainkannada.com/husbands-illicit-affair-wife-hangs-herself-in-shame/ ಭಾರತದ ಈ ಏಕೈಕ ಪ್ರದೇಶದಲ್ಲಿ ಈರುಳ್ಳಿಯನ್ನು ಜನರು ಸೇವಿಸುವುದಿಲ್ಲ. ಅದು ಮಾತ್ರವಲ್ಲ ಇಲ್ಲಿ ಯಾವುದೇ ಅಂಗಡಿಗಳಲ್ಲಿ ಈರುಳ್ಳಿ ಮಾರಾಟ ಬ್ಯಾನ್ ಮಾಡಲಾಗಿದೆ. ಈ ಒಂದು ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ಈರುಳ್ಳಿಯನ್ನು ಸೇವಿಸುವುದಿಲ್ಲ. ಇಲ್ಲಿಗೆ ಬರುವವರಿಗೆ ಈರುಳ್ಳಿ ಹಾಕಿದ ಪದಾರ್ಥವನ್ನು ನೀಡುವುದೂ ಇಲ್ಲ. ಈ ಪ್ರದೇಶದ ಹೆಸರು ಜಮ್ಮುವಿನ ಕಟ್ರಾ ನಗರ. ಇಲ್ಲಿ ಸರ್ಕಾರ ಈರುಳ್ಳಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕಟ್ರಾ ಎಂಬುದು ಭಾರತದ ಒಂದು ಪವಿತ್ರ ಕ್ಷೇತ್ರದ ತೀರ್ಥಯಾತ್ರೆಯ ಆರಂಭಗೊಳ್ಳುವ ಸ್ಥಳವಾಗಿದೆ. ಮಾತಾ ವೈಷ್ಣೋದೇವಿಯ ದರ್ಶನದ ಯಾತ್ರೆಗೆ ಹೊರಡುವ ಜನರು ಇಲ್ಲಿಂದಲೇ ಯಾತ್ರೆಯನ್ನು ಕೈಗೊಳ್ಳುತ್ತಾರೆ.…
Author: AIN Author
ಬೆಂಗಳೂರು:-ಗಂಡನ ಅಕ್ರಮ ಸಂಬಂಧದಿಂದ ಮನನೊಂದು ಪತ್ನಿ ನೇಣಿಗೆ ಶರಣಾದ ಘಟನೆ ಹೆಬ್ಬಾಳದ ಕನಕನಗರದಲ್ಲಿ ಜರುಗಿದೆ. https://ainkannada.com/jcb-roars-in-mahalingapura-town-sheds-where-30-families-lived-evacuated/ ಮೃತ ಮಹಿಳೆಯನ್ನು 29 ವರ್ಷದ ಬಾಹರ್ ಅಸ್ಮಾ ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಬಶೀರ್ ವುಲ್ಲಾ ಎಂಬಾತನನ್ನು ಮದುವೆ ಆಗಿದ್ದರು. ಆತನಿಗೆ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧವಿದೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆ ಕುಟುಂಬಸ್ಥರು ಅಸ್ಮಾಳನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಆರೋಪಿಸಿದೆ.
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಬೆಳ್ಳಂಬೆಳಗ್ಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸರಿಂದ ರೌಡಿಶೀಟರ್ ಮಲಿಕ್ ತಾಜುದ್ದೀನ್ ಆದೋನಿ ಮೇಲೆ ಫೈರಿಂಗ್ ನಡೆದಿದೆ. ಮಲ್ಲಿಕ್ ತಾಜುವುದ್ದಿನ್ ಆದೋನಿ ಅಟೋ ಚಾಲಕನಾಗಿದ್ದ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಗಳ ನಡುವೆ ಗಲಾಟೆ ನಡೆದಿತ್ತು. ಇದೇ ಪ್ರಕರಣ ಸಂಬಂಧ ಆರೋಪಿಗಳ ಬಂಧಿಸಲು ತೆರಳಲು ಹೋಗಿದ್ದ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ರೌಡಿಶೀಟರ್ ಮೇಲ ಫೈರಿಂಗ್ ನಡೆಸಿದ್ದಾರೆ. https://ainkannada.com/jcb-roars-in-mahalingapura-town-sheds-where-30-families-lived-evacuated/ ಇನ್ನೂ ಹಳೆ ಹುಬ್ಬಳ್ಳಿ ಪಿಎಸ್ ಐ ವಿಶ್ವನಾಥ ಆಲದಮಟ್ಟಿ ,ಸಿಪಿಸಿ ಶರೀಫ ನದಾಫ್ ಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರು, ಏ.08: “ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸ್ನೇಹಿತರು ಜನಾಕ್ರೋಶ ಯಾತ್ರೆ ಮಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. https://ainkannada.com/ipl-2025-rajat-kohli-jitesh-bombat-batting-bangalore-ahead-of-mumbai/ ಎಲ್ ಪಿಜಿ ಹಾಗೂ ಇಂಧನ ತೈಲಗಳ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯದಲ್ಲಿ ಬಿಜೆಪಿ ಸ್ನೇಹಿತರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದು, ಇವರಿಗೆ ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಕಪಾಳಮೋಕ್ಷ ಮಾಡಿದೆ. ಬಿಜೆಪಿ ನಾಯಕರು ತಮ್ಮ ಆಕ್ರೋಶವನ್ನು ಕೇಂದ್ರ ಸರ್ಕಾರದ ವಿರುದ್ಧ ಮುಂದುವರಿಸಲಿ ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.
ಮಂಡ್ಯ : ಜೆಡಿಎಸ್‌ನ್ನು ಬಿಜೆಪಿ ಜೋಕರ್ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಬಿಜೆಪಿಗರ ಜನಾಕ್ರೋಶ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಗರ ವಿರುದ್ದ ಹರಿಹಾಯ್ದಿದಿದ್ದಾರೆ. ಇಂದು ಮಂಡ್ಯ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನೆಲದಲ್ಲಿ ಜೆಡಿಎಸ್ ಬಿಟ್ಟು ಜನಾಕ್ರೋಶ ಯಾತ್ರೆ ಮಾಡ್ತಿದ್ದಾರೆ. ಕುಮಾರಸ್ವಾಮಿ ನೆಲದಲ್ಲೆ ಅವರನ್ನ ಬಿಟ್ಟಿದ್ದಾರೆ. ಬರಿ ಬಿಜೆಪಿಯವರು ಬರ್ತಿರೋದರಿಂದ ಗೊತ್ತಾಗಿದೆ ಮನೆ ಒಡೆದಿದೆ ಅಂತ ಕುಮಾರಸ್ವಾಮಿಯವ್ರಿಗೆ ಪಾಪಾ ಈ ಪರಿಸ್ಥಿತಿ ಬರಬಾರ್ದಿತ್ತು. ಕುಮಾರಸ್ವಾಮಿ ಎಲ್ಲಿಗೋದ್ರು ಈತರ ಬೆನ್ನಿಗೆ ಚಾಕು ಹಾಕಿಸಿಕೊಳ್ಳುತ್ತಾರೆ. ಗುಜರಾತ್ ರೀತಿ ಕರ್ನಾಟಕದಲ್ಲೂ ನಿಮ್ ಜನತಾದಳ ಮುಗಿಸ್ತಾರೆ ಹುಷಾರ್ ಕುಮಾರಣ್ಣ. ಕುಮಾರಣ್ಣನಿಗೆ ಇದು ಎಚ್ಚರಿಕೆ ಗಂಟೆ ಎಂದು ತಿರುಗೇಟು ನೀಡಿದರು. https://ainkannada.com/public-outcry-against-price-hike-saffron-trumpets-rang-out-at-cms-residence/ ಮೋದಿ ಬೆಲೆ ಏರಿಕೆ ಮಾಡಿದ್ದಾರೆ. ಅವರ ವಿರುದ್ದ ಇಂದು ಮಂಡ್ಯದಲ್ಲಿ ಪ್ರತಿಭಟನೆ ಮಾಡ್ತಿದ್ದಾರಾ?. ಮಹಿಳೆಯರ ಬಾಯಿಗೆ ಮೋದಿಯವ್ರು ಮಣ್ಣಾಕಿದ್ದಾರೆ. ಮಹಿಳೆಯರ ಬಾಯಿಗೆ ಮೋದಿ ಮಣ್ಣಾಕಿದಕ್ಕೆ ಪ್ರತಿಭಟನೆ ಮಾಡ್ತಿದ್ದಾರಾ?. ಮೋದಿ…
ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಬೆಳಂಬೆಳಗ್ಗೆ ಜೆಸಿಬಿ ಘರ್ಜನೆ ಘರ್ಜಿಸಿದ್ದು, ಆಶ್ರಯ ಕಾಲೋನಿಯಲ್ಲಿನ ಶೆಡ್ ಗಳ ತೆರವು ಕಾರ್ಯಾಚರಣೆ ನಡೆದಿದೆ. ವಾರ್ಡ್ ನಂಬರ್ 13ರ ಕೆಂಗೇರಿ ಮಡ್ಡಿಯಲ್ಲಿರುವ ಆಶ್ರಯ ಕಾಲೋನಿಯಲ್ಲಿ ಹಲವು ವರ್ಷಗಳಿಂದ ವಾಸವಿದ್ದ 30 ಕುಟುಂಬಗಳ ಶೆಡ್ ತೆರವು ಮಾಡಲಾಗಿದೆ. ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆದಿದ್ದು, 30 ಕುಟುಂಬಗಳು ಇದೀಗ ಆತಂಕದಲ್ಲಿವೆ. https://ainkannada.com/rabakavi-mahishwadagi-bridge-work-delayed-minister-satish-jarkiholi-warns-officials/ ಚುನಾವಣೆ ವೇಳೆ ಶಾಸಕರು ಇಲ್ಲೇ ನಿವೇಶನ ಕಲ್ಪಿಸುವ ಭರವಸೆ ನೀಡಿದ್ದರು. ಸ್ಥಳೀಯ ಪುರಸಭೆ ಸದಸ್ಯರ ರಾಜಕೀಯ ತಿಕ್ಕಾಟದಿಂದ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಸ್ಥಳೀರು ಆರೀಪಿಸಿದ್ದಾರೆ. ಸದ್ಯ ತೆರವು ಕಾರ್ಯಾಚರಣೆ ವೇಳೆ ಯಾರೂ ನೆರವಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಚಕವಾಗಿ ಗೆದ್ದು ಬೀಗಿದೆ. https://ainkannada.com/rabakavi-mahishwadagi-bridge-work-delayed-minister-satish-jarkiholi-warns-officials/ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 222 ರನ್ ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ209 ರನ್ ಗಳನ್ನು ಗಳಿಸಿತು. ಹೀಗಾಗಿ ಪ್ರೇಕ್ಷಕರವನ್ನು ಕೊನೆಯ ಓವರ್ ವರೆಗೂ ತುದಿಗಾಲಲ್ಲಿ ನಿಲ್ಲಿಸಿದ ರೋಚಕ ಪಂದ್ಯದಲ್ಲಿ ಆರ್ ಸಿಬಿ ತಂಡ 12 ರನ್ ಗಳಿಂದ ಜಯಭೇರಿ ಭಾರಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 221 ರನ್ ಬಾರಿಸಿತ್ತು. 222 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್‌ನಲ್ಲಿ ಮುಂಬೈ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿದ್ದರೆ, ಮಿಚೆಲ್ ಸ್ಯಾಂಟ್ನರ್ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತದಲ್ಲೇ ಸ್ಯಾಂಟ್ನರ್ ಸಿಕ್ಸರ್ ಸಿಡಿಸಲು ಪ್ರಯತ್ನಿಸಿ ಬೌಂಡರಿ ಲೈನ್…
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ನಿವಾಸದಲ್ಲಿ ತ್ವರಿತವಾಗಿ ರಬಕವಿ ಮಹಿಷವಾಡಗಿ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂದು ರಬಕವಿ ದೈವ ಮಂಡಳಿ ಹಿರಿಯರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ಅದಕ್ಕೆ ಸ್ಪಂದಿಸಿ ಮಾತನಾಡಿದ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಸುದ್ದಿಗಾರರೊಂದಿಗೆ ಮಾತನಾಡಿ 2018 ರಲ್ಲಿ ಪ್ರಾರಂಭಗೊಂಡ ರಬಕವಿ ಮಹಿಷವಾಡಗಿ ಬ್ರಿಡ್ಜ್ ಇನ್ನೂ ಕಾಮಗಾರಿ ಮುಗಿಸಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ರಬಕವಿ ಮಹಿಷವಾಡಗಿ ಬ್ರಿಡ್ಜ್ ೨೦೨೫ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಇಲ್ಲ ಅಂದ್ರೆ ನಿಮ್ಮ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಖಡಕ ವಾರ್ನಿಂಗ್ ನೀಡಿದರು, https://ainkannada.com/rabakavi-mahishwadagi-bridge-construction-work-stalled-halfway/ ನಾನು ಈಗಾಗಲೇ ಸಂಬಂಧಪಟ್ಟ ಇಂಜಿನಿಯರಗಳ ಜೊತೆ ಮೂರ್ನಾಲ್ಕು ಮೀಟಿಂಗ್ ಮಾಡಿದ್ದೇನೆ ನಮ್ಮ ಅಧಿಕಾರಿಗಳ ಬೇಜವಾಬ್ದಾರಿತನ ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿ ವಿಳಂಬವಾಗಿದೆ 2025 ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಸುತ್ತೇನೆ ಎಂದು ಭರವಸೆ ನೀಡಿದರು. …
ಮಂಡ್ಯ : ವಿಶ್ವವಿಖ್ಯಾತ, ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ವಿಶ್ವಾವಸು ಸಂವತ್ಸರದ ಚೈತ್ರ ಮಾಸದ ಪುಷ್ಯ ನಕ್ಷತ್ರದ ಶುಭ ದಿನದಂದು ವಜ್ರಖಚಿತ ವೈರಮುಡಿ ಧರಿಸಿದ್ದ ಚೆಲುವನಾರಾಯಣಸ್ವಾಮಿಯು ದೇವಾಲಯದಿಂದ ಹೊರ ಬರುತ್ತಿದ್ದಂತೆ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು ಗೋವಿಂದ, ಗೋವಿಂದಾ ಎಂಬ ಜಯಘೋಷಗಳನ್ನು ಮೊಳಗಿಸಿದರು. ಗಂಡ-ಭೇರುಂಡ ಸ್ವರೂಪಿ ಚಂದ್ರಪ್ರಭೆ ಪ್ರಭಾವಳಿಯ ಮಧ್ಯದಲ್ಲಿ ಅಲಂಕಾರ ಸ್ವರೂಪಿಯಾಗಿದ್ದ ಸ್ವಾಮಿಯ ಉತ್ಸವವನ್ನು ನೋಡಿ ಭಕ್ತರು ದರ್ಶನ ಪಡೆದು ಸಂಭ್ರಮಿಸಿದರು. https://www.youtube.com/watch?v=tddlCTBLoZ0 ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿದ ನಂತರ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವ ಸಾಗುವ ರಾಜಬೀದಿಯನ್ನು ತಳಿರು-ತೋರಣ, ವಿಶೇಷ ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಬೀದಿಯ ಎರಡೂ ಬದಿಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದಿಂದಲೂ ಸಹಸ್ರಾರು ಭಕ್ತಾದಿಗಳು ಆಗಮಿಸಿದ್ದರು. ಮೇಲುಕೋಟೆಯ ವಸತಿ ಗೃಹಗಳು, ಛತ್ರಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ಸೋಮವಾರ ಬೆಳಗ್ಗೆ ಜಿಲ್ಲಾ ಖಜಾನೆ ಕಚೇರಿಯಲ್ಲಿದ್ದ ವೈರಮುಡಿ…
ಸೂರ್ಯೋದಯ – 6:08 ಬೆ ಸೂರ್ಯಾಸ್ತ – 6:27 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ಏಕಾದಶಿ ನಕ್ಷತ್ರ – ಆಶ್ಲೇಷ ಯೋಗ – ಶೂಲ ಕರಣ – ವಣಿಜ ರಾಹು ಕಾಲ – 03:00 ದಿಂದ 04:30 ವರೆಗೆ ಯಮಗಂಡ – 09:00 ದಿಂದ 10:30 ವರೆಗೆ ಗುಳಿಕ ಕಾಲ – 12:00 ದಿಂದ 01:30 ವರೆಗೆ ಬ್ರಹ್ಮ ಮುಹೂರ್ತ – 4:32 ಬೆ ದಿಂದ 5:20 ಬೆ ವರೆಗೆ ಅಮೃತ ಕಾಲ – 5:29 ಬೆ. ದಿಂದ 7:11 ಬೆ. ವರೆಗೆ ಅಭಿಜಿತ್ ಮುಹುರ್ತ – 11:53 ಬೆ ದಿಂದ 12:42 ಮ. ವರೆಗೆ ಮೇಷ ರಾಶಿ: ವ್ಯಾಪಾರದಲ್ಲಿ ದ್ವಿಗುಣ ಲಾಭ, ವಿದೇಶ ಪ್ರವಾಸ ಯೋಗವಿದೆ, ನೌಕರನಿಗೆ ಮಹತ್ವದ ಕೆಲಸಕ್ಕೆ ವರ್ಗಾವಣೆ, ಸರ್ಕಾರದ ಸೌಲತ್ತು ದೊರೆಯುವುದು, ಹೊಸ ಜಾಗ ಖರೀದಿಸಿ…