ಬೇಸಿಗೆ ಕಾಲ ಬರುತ್ತಿದೆ. ಈ ಋತುವಿನಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿನ್ನುತ್ತಾರೆ. ಸುಮಾರು 90 ಪ್ರತಿಶತ ಕಲ್ಲಂಗಡಿ ನೀರಿನಿಂದ ತುಂಬಿರುತ್ತದೆ. ಇದು ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ಸಹಕಾರಿ. ಗರ್ಭಿಣಿಯರು ಮತ್ತು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ನಿಯಮಿತವಾಗಿ ಕಲ್ಲಂಗಡಿ ತಿನ್ನಲು ಸೂಚಿಸಲಾಗುತ್ತದೆ. https://ainkannada.com/public-outcry-against-price-hike-saffron-trumpets-rang-out-at-cms-residence/ ಬೇಸಿಗೆಯಲ್ಲಿ ನೀವು ಅಗತ್ಯಕ್ಕಿಂತ ಹೆಚ್ಚು ಕಲ್ಲಂಗಡಿ ಸೇವಿಸಿದರೆ, ಅದು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಸೇವಿಸುವುದನ್ನು ತಪ್ಪಿಸಿ. ಕಲ್ಲಂಗಡಿ ಹಣ್ಣನ್ನು ಅತಿಯಾಗಿ ತಿನ್ನುವುದರಿಂದ ಯಾವ ಸಮಸ್ಯೆಗಳು ಉಂಟಾಗಬಹುದು ಎನ್ನುವುದನ್ನು ತಿಳಿಯೋಣ. ಕಲ್ಲಂಗಡಿಯಲ್ಲಿ ಹೆಚ್ಚು ನೀರಿನಂಶ ಇರುವುದರಿಂದ ಮೂತ್ರವರ್ಧಕ ಗುಣಗಳನ್ನು ಹೊಂದಿದೆ. ಆದ್ದರಿಂದ ನೀವು ಹೆಚ್ಚು ಕಲ್ಲಂಗಡಿ ಸೇವಿಸಿದರೆ ಅದು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ದೇಹವು ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಎಲೆಕ್ಟ್ರೋಲೈಟ್‌ಗಳ ಕೊರತೆಯನ್ನು ಹೊಂದಿರಬಹುದು. ಇದರಿಂದಾಗಿ ನೀವು ದೌರ್ಬಲ್ಯ, ತಲೆತಿರುಗುವಿಕೆ ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳನ್ನು ಎದುರಿಸಬಹುದು.ಕಲ್ಲಂಗಡಿಯಲ್ಲಿ ಹೆಚ್ಚು ನೀರಿನಂಶ ಇರುವುದರಿಂದ ಮೂತ್ರವರ್ಧಕ ಗುಣಗಳನ್ನು ಹೊಂದಿದೆ. ಆದ್ದರಿಂದ ನೀವು ಹೆಚ್ಚು ಕಲ್ಲಂಗಡಿ…
Author: AIN Author
ಮೈಸೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಬೀದಿಗಿಳಿದಿದ್ದು, ಜನಾಕ್ರೋಶ ಯಾತ್ರೆ ಹೆಸರಿನಲ್ಲಿ ಬೃಹತ್ ಹೋರಾಟ ಆರಂಭಿಸಿದೆ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆ ಹೋರಾಟಕ್ಕೆ ಚಾಲನೆ ನೀಡಲಾಯಿತು. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದ್ದಾರೆ. ಇಂದಿನಿಂದ ಮೇ 3 ವರೆಗೆ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಸಾಗಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ದಲಿತರ ಹಣ ಲೂಟಿ ಖಂಡಿಸಿ ನಡೆಯುತ್ತಿರುವ ಜನಾಕ್ರೋಶ ಪ್ರತಿಭಟನಾ ಯಾತ್ರೆಯಲ್ಲಿ ಮೈಸೂರು, ಚಾಮರಾಜನಗರ ಜಿಲ್ಲಾ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. https://ainkannada.com/minister-santosh-lads-sarcasm-on-bjps-janakrosha-yatra/ ಯಾತ್ರೆ ನಂತರ ಗಾಂಧಿ ವೃತ್ತದ ಬಳಿವ ಸಾರ್ವಜನಿಕ ಸಭೆ ನಡೆಸಲಾಯಿತು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕರಾದ ಆರ್ ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಸಿ…
ಬೆಳಗಾವಿ : ಕ್ಯಾಬೇಜ್ ಬೆಳೆಗೆ ಸೂಕ್ತ ಬೆಲೆ ನೀಡಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ರೈತರ ಪ್ರತಿಭಟನೆ ನಡೆಸಿದ್ದು, ತಾವು ಬೆಳೆದ ಕ್ಯಾಬೇಜ್ ರಸ್ತೆ ಮೇಲೆ ಸುರಿದ ಆಕ್ರೋಶ ವ್ಯಕ್ತಪಡಿಸಿದರು. ಕಷ್ಟ ಪಟ್ಟು ಬೆಳೆದ ಕ್ಯಾಬೇಜ್ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಸೂಕ್ತ ಬೆಲೆ ನೀಡಬೇಕು ಎಂದು ಆಗ್ರಹಿಸಿ ಧರಣಿ ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು. ರೈತ ಅಪ್ಪಾಸಾಬ್ ಪಾಟೀಲ್ ನೇತೃತ್ವದಲ್ಲಿ ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. https://ainkannada.com/low-demand-for-red-beauties-tomato-prices-suddenly-drop-gadag-farmers-in-panic/ ಮಾರುಕಟ್ಟೆಯಲ್ಲಿ ಒಂದು ಕ್ಯಾಬಿಜ್ ಗೆ ಕೇವಲ ಎಪ್ಪತ್ತು ಪೈಸೆಯಿಂದ ಒಂದು ರೂಪಾದಂತೆ ಮಾರಾಟ ಆಗುತ್ತಿದೆ. ಇದರಿಂದಾಗಿ ರೈತರಿಗೆ ತುಂಬಾ ನಷ್ಟ ಆಗುತ್ತಿದೆ. ಹೀಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಕ್ಯಾಬೇಜ್ ಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಸಗಸಗಾ ಗ್ರಾಮದಲ್ಲಿ ಬಹುತೇಕ ರೈತರು ಕ್ಯಾಬಿಜ್ ಬೆಳೆಯುತ್ತಾರೆ ಬಹುತೇಕ ರೈತರು ಕ್ಯಾಬಿಜ್ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಒಂದು ಎಕರೆ …
ಹುಬ್ಬಳ್ಳಿ: ಶಾಸಕ ವಿನಯ ಕುಲಕರ್ಣಿಯವರ ನಿರ್ದೇಶನದ ಮೇರೆಗೆ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಬಿಜೆಪಿ ಬೆಂಬಲಿತ ಪರಶುರಾಮ ಮಾನೆ ಐದು ಮತ ಪಡೆದು ಸೋಲು ಅನುಭವಿಸಿದರು. https://ainkannada.com/ac-breaks-down-in-snr-hospital-icu-patients-struggle/ ಕಾಂಗ್ರೆಸ್‌ನ ಈರಣ್ಣ ಹಸಬಿಯವರು ಏಳು ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಹಾಗೂ ಅವರ ತಂಡ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಬ್ಲಾಕ್ ಅಧ್ಯಕ್ಷರಾದ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ಮುಖಂಡರಾದ ಮಡಿವಾಳಪ್ಪ ದಿಂಡಲ ಕೊಪ್ಪ, ನಂದೀಶ್ ನಾಯ್ಕರ, ಶಿವಾನಂದ ಮುದ್ದಿ ಸೇರಿದಂತೆ, ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರುಗಳಾದ ಬಸವಪ್ರಭು ಹುಂಬೇರಿ, ದೇವರಾಜ್ ಪಾಟೀಲ್, ಹಸನಪ್ಪ ತಳವಾರ, ಶಾಂತಕ್ಕ ಹಟ್ಟಿ, ಮಂಜುನಾಥ ಮುಗ್ಗನವರ, ಶೇಕಪ್ಪ ಕುಂಬಾರ ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.
ಬೆಂಗಳೂರು:- ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್, ಇಬ್ಬರು ಕಾನ್ಸ್‌ಟೇಬಲ್ ಸೇರಿ 7 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. https://ainkannada.com/ac-breaks-down-in-snr-hospital-icu-patients-struggle/ ಬೆಂಗಳೂರಿನಲ್ಲಿ ಪ್ರತಿಷ್ಠಿತ ಏರಿಯಾದಲ್ಲಿ ಇದ್ದ 4 ಕೋಟಿ ರೂ. ಮೌಲ್ಯದ ಮನೆಯನ್ನು ಕೇವಲ 60 ಲಕ್ಷ ರೂ.ಗೆ ಕಬಳಿಸಲು ಮುಂದಾಗಿದ್ದ ಸಿಎಂ ಚಿನ್ನದ ಪದಕ ಪಡೆಯಲು ಆಯ್ಕೆಯಾಗಿದ್ದ ಇನ್ಸ್‌ಪೆಕ್ಟರ್ ಎ.ವಿ. ಕುಮಾರ್ ಸೇರಿದಂತೆ ಅನ್ನ ಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಹಾಗೂ ಇತರೆ ನಾಲ್ವರು ಖಾಸಗಿ ವ್ಯಕ್ತಿಗಳು ಸೇರಿದಂತೆ 7 ಜನರ ವಿರುದ್ಧ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ಸ್‌ಪೆಕ್ಟರ್ ಎ ವಿ ಕುಮಾರ್ ಎ1 ಆರೋಪಿ, ಎಸ್ ಬಿ ಕಾನ್ಸ್‌ಟೇಬಲ್ ಉಮೇಶ್ ಹಾಗೂ ಮತ್ತೊಬ್ಬ ಕಾನ್ಸ್‌ಟೇಬಲ್ ಅನಂತ್ ಮೇಲೆ ಎಫ್ಐಆರ್ ದಾಖಲಾಗಿದೆ. ಮೂವರು ಸರ್ಕಾರಿ ನೌಕರರು, ಹಾಗು ನಾಲ್ವರು ಖಾಸಗಿ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಚೆನ್ನೇಗೌಡ ನೀಡಿದ ದೂರಿನ ಮೇಲೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.…
ಕೋಲಾರ : ಕೋಲಾರ ಜಿಲ್ಲಾಸ್ಪತ್ರೆಯಲ್ಲಿರುವ ಐಸಿಯುನಲ್ಲಿ ಎಸಿ ಕೆಟ್ಟು ಹೋಗಿದ್ದ ಪರಿಣಾಮ ರೋಗಿಗಳು ಪರದಾಡಿದ್ದಾರೆ. ಎಸಿ ಇಲ್ಲದಿರುವ ಪರಿಣಾಮ ವಿಪರೀತ ಸೆಕೆಯಿಂದ ರೋಗಿಗಳು ಪರದಾಟ ಅನುಭವಿಸಿದ್ದಾರೆ. ಕಳೆದ ಒಂದು ವಾರದಿಂದ ಐಸಿಯು ಘಟಕದಲ್ಲಿ ಎಸಿ ಕೆಟ್ಟಿದೆಯಂತೆ. ಹೀಗಾಗಿ ಸಮಪರ್ಕವಾದ ಗಾಳಿಯಿಲ್ಲದೆ ಕೆಲ ರೋಗಿಗಳು ಸಾವನ್ನಪ್ಪಿರುವುದಾಗಿ ಇತರ ರೋಗಿಗಳ ಸಂಬಂಧಿಕರು ತಿಳಿಸಿದ್ದಾರೆ. ಇನ್ನು ಈ ಕುರಿತು ಗಮನಕ್ಕೆ ಬರುತ್ತಿದ್ದಂತೆಯೇ, ಸಿಬ್ಬಂದಿ ರೋಗಿಗಳನ್ನು ಜಿಲ್ಲಾಸ್ಪತ್ರೆಯ ಮತ್ತೊಂದು ಐಸಿಯು ವಾರ್ಡ್ಗೆ ಶಿಫ್ಟ್ ಮಾಡಿದ್ದಾರೆ. ಸದ್ಯ ರೋಗಿಗಳು ಹಾಗೂ ಅವರ ಸಂಬಂಧಿಕರು ನಿಟ್ಟುಸಿರು ಬಿಟ್ಟಿದ್ದಾರೆ. https://ainkannada.com/minister-santosh-lads-sarcasm-on-bjps-janakrosha-yatra/ ಐಸಿಯುನಲ್ಲಿರುವ ರೋಗಿಗಳು: ಬ್ಲಡ್ನಲ್ಲಿ ಬಿಳಿ ರಕ್ತಕಣದ ಕೊರತೆಯಿಂದ ನ್ಯುಮೋನಿಯಾ ರೋಗದಿಂದ ಬಳಲುತ್ತಿರುವ ವೃದ್ಧೆಯೊಬ್ಬರು, ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿರುವ ಆಸ್ಪತ್ರೆಗೆ ದಾಖಲಾಗಿರುವ ಲೋಕೇಶ್, ಬ್ರೈನ್ ಸ್ಟ್ರೋಕ್ ನಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೆಂಕಟೇಶ್ ಹಾಗೂ ಶ್ವಾಸಕೋಶದ ಸಮಸ್ಯೆ ಉಸಿರಾಟದ ತೊಂದರೆಯಿಂದ ಅನ್ವರ್ ಐಸಿಯುವಿನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು/ನವದೆಹಲಿ:- ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ. ನಾಳೆಯಿಂದಲೇ ದೇಶಾದ್ಯಂತ ಪರಿಷ್ಕೃತ ದರ ಜಾರಿಗೆ ಬರುತ್ತಿದೆ. https://ainkannada.com/minister-santosh-lads-sarcasm-on-bjps-janakrosha-yatra/ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದಿಪ್ ಸಿಂಗ್ ಪೂರಿ ಅವರು ನಡೆಸಿದ ಸುದ್ದಿಗೋಷ್ಟಿಯಲ್ಲಿ ಸಿಲಿಂಡರ್ ಬೆಲೆ ಏರಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಳೆಯಿಂದ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 803 ರಿಂದ 853 ಕ್ಕೆ ಏರಿಕೆ ಆಗಲಿದೆ. ಅಲ್ಲದೇ ಉಜ್ವಲ ಯೋಜನೆಯ ಪ್ರತಿ ಸಿಲಿಂಡರ್‌ಗೆ 500 ರೂಪಾಯಿ ಇಂದ 550ಕ್ಕೆ ಏರಿಕೆ ಆಗಿದೆ ಎನ್ನಲಾಗಿದೆ. ನಾಳೆಯಿಂದ ಗೃಹಿಣಿಯರಿಗೆ ಸಿಲಿಂಡರ್ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ದರ 50 ರೂಪಾಯಿ ಏರಿಕೆ ಮಾಡಲಾಗಿದೆ
ಧಾರವಾಡ: ಬಿಜೆಪಿಯ ಜನಾಕ್ರೋಶ ಯಾತ್ರೆ ಕುರಿತು ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ಜನಾಕ್ರೋಶ ಯಾತ್ರೆ ಕಾಂಗ್ರೆಸ್ ವಿರುದ್ಧವಲ್ಲ, ಮೋದಿ ವಿರುದ್ಧ ಎಂದು ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಮಾಧ್ಯಮಪ್ರತಿನಿಧಿಗಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇನ್ನೂ ಗೊಂದಲದಲ್ಲೇ ಇದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಬೆಲೆ ಏರಿಕೆಗೆ ಮೋದಿಯವರೇ ಕಾರಣ. ಆದರೆ, ಬಿಜೆಪಿಯವರಿಗೆ ಅವರ ಹೆಸರು ಹೇಳಲು ಬರುತ್ತಿಲ್ಲ. ಅದಕ್ಕೇ ಕಾಂಗ್ರೆಸ್ ಹೆಸರು ಹೇಳಿ ಕರ್ನಾಟಕದಲ್ಲಿ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. https://ainkannada.com/we-will-confront-the-people-with-the-congress-governments-price-hikes-and-riots-by-vijayendra/ ಬಿಜೆಪಿ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಇವರು ಶೇಕಡಾವಾರು ಮಾತನಾಡಲಿ. ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಗದಗ : ಗದಗ ಜಿಲ್ಲೆಯ ಹಲವಡೆ ಗಾಳಿ ಸಮೇತ ಮಳೆಯಾಗುತ್ತಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಬೇರು ಸಮೇತ ವಿದ್ಯುತ್ ತಂತಿಯ ಮೇಲೆ ಮರ ಉರುಳಿ ಬಿದ್ದಿದೆ. ಗದಗನ ಬೆಟಗೇರಿಯ ಶಿವಾಜಿ ನಗರದಲ್ಲಿ ಘಟನೆ ನಡೆದಿದೆ. ಮರ ವಿದ್ಯತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತೊಂಡಿದೆ. ಗಂಟೆಗಳೇ ಕಳೆದರೂ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು, ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಾರದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. https://ainkannada.com/education-minister-madhubangarappa-shramdan-for-construction-of-school-compound/ ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ಅವಘಡ ಸಂಭವಿಸೋ ಸ್ಥಿತಿ ಇದೆ ಎಂದು ನಗರಸಭೆ ಹಾಗೂ ಹೆಸ್ಕಾಂ ಸಿಬ್ಬಂದಿಗಳ ವಿರುದ್ಧ ಅಸಮಾಧಾನವ್ಯಕ್ತಪಡಿಸಿದ್ದಾರೆ.
ನವದೆಹಲಿ/ಲಂಡನ್:- ಬೆಲೆ ಏರಿಕೆಯ ಬಿಸಿಯಲ್ಲಿರುವ ಮಧ್ಯಮ ವರ್ಗದವರಿಗೆ ಗಾಯದ ಮೇಲೆ ಬರೆ ಬೀಳುತ್ತಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಎರಡು ರೂಗಳಷ್ಟು ಹೆಚ್ಚಿಸಿದೆ. ಕರ್ನಾಟಕದ ಜನರಿಗೆ ಡಬಲ್ ಶಾಕ್ ಸಿಕ್ಕಂತಾಗಿದೆ. https://ainkannada.com/medicover-hospital-organizes-badminton-competition-free-health-checkup-for-chaitanya-layout-residents/ ಇನ್ನೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಇಳಿಕೆ ಆಗಿದೆ. ಟ್ರಂಪ್ ಸರ್ಕಾರ ತೆರಿಗೆ ಸಮರ ಘೋಷಿಸಿದ ಒಂದು ವಾರದಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರೆಲ್ (159 ಲೀಟರ್) ಬೆಲೆ ಸುಮಾರು 10 ಡಾಲರ್(ಅಂದಾಜು 850 ರೂ.) ಇಳಿಕೆಯಾಗಿದೆ. ಬ್ಯಾರೆಲ್‌ಗೆ 72.94 ಡಾಲರ್‌ನಲ್ಲಿ (ಅಂದಾಜು 6,250) ವಹಿವಾಟು ನಡೆಸುತ್ತಿದ್ದ ಬ್ರೆಂಟ್ ಕಚ್ಚಾ ತೈಲವು ದರ ಈಗ 62.91 ಡಾಲರ್‌ಗೆ (ಅಂದಾಜು 5,390 ರೂ.) ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು ಬ್ಯಾರೆಲ್ ದರ 7% ಇಳಿಕೆಯಾಗಿ 59.34 ಡಾಲರ್ (ಅಂದಾಜು 5,090ರೂ.)ತಲುಪಿದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC+) ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಘೋಷಿಸಿದೆ. ಮೇ ತಿಂಗಳಲ್ಲಿ…