ಕೊಡಗು : ವನ್ಯಜೀವಿ-ಮಾನವ ಸಂಘರ್ಷ ಶಾಶ್ವತವಾಗಿ ತಡೆಗಟ್ಟುವ ಹಿನ್ನೆಲೆಯಲ್ಲಿ ಅತ್ಯಂತ ಗಂಭೀರವಾಗಿ ಕಾರ್ಯಸೂಚಿಗಳನ್ನು ರೂಪಿಸುತ್ತಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಇಂದು ಅರಣ್ಯ ಇಲಾಖೆ ವತಿಯಿಂದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು. ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದ, ತೆರಾಲು ಭಾಗದಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯು ಪ್ರಗತಿಯಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಸೆರೆ ಕಾರ್ಯಚರಣೆಯ ನೇತೃತ್ವವಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಬಳಸಿ ಅತ್ಯಂತ ಶೀಘ್ರದಲ್ಲಿ ಈ ಕಾರ್ಯಾಚರಣೆಗೆ ಅಂತ್ಯ ಹಾಡಬೇಕು ಎಂದು ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. https://ainkannada.com/today-is-world-earth-day-know-the-history-and-significance-of-this-day/ ಈ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಶ್ರೀ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾದ…
Author: AIN Author
ಮಂಡ್ಯ : ಕನ್ನಡದ ಹುಡುಗ ವಿಕಾಸ್ ಮೇಲೆ ವಿಂಗ್ ಕಮಾಂಡರ್ ಹಲ್ಲೆ ಪ್ರಕರಣದಲ್ಲಿ ತಪ್ಪು ಯಾರೇ ಮಾಡಿದ್ದರೂ ತಪ್ಪೇ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಮಂಡ್ಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕನ್ನಡದ ಹುಡುಗ ವಿಕಾಸ್ ಮೇಲೆ ಹಲ್ಲೆ ಮಾಡಿರುವ ಡಿಅರ್ಡಿಒ ಉದ್ಯೋಗಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಎರಡೂ ಕಡೆಯವರು ದೂರು ಸಲ್ಲಿಸಿದ್ದಾರ. ಹಲ್ಲೆ ಮಾಡಿದವ ವಿಂಗ್ ಕಮಾಂಡರ್ ಆಗಿರಲಿ, ಮತ್ತೇನಾದರೂ ಅಗಿರಲಿ, ಕಾನೂನಿನ್ವಯ ಕ್ರಮ ಜರುಗಿಸಲು ಹೇಳಿದ್ದೇನೆ ಎಂದರು. https://ainkannada.com/wing-commanders-true-colors-revealed-attempted-murder-case-registered-against-shiladitya-bose/ ಇದೇ ವೇಳೆ ರಾಜ್ಯದಲ್ಲಿ ಹಿಂದಿ ಹೇರಿಕೆಗೆ ನಾವು ಬಿಡಲ್ಲ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಒಪ್ಪಲ್ಲ, ನಮ್ಮ ವಿರೋಧವಿದೆ. ರಾಜ್ಯದಲ್ಲಿ ದ್ವಿಭಾಷ ನೀತಿ ಜಾರಿಯಲ್ಲಿದೆ. ರಾಜ್ಯದಲ್ಲಿ ಮಾತೃಭಾಷೆ ಕನ್ನಡ ಮತ್ತು ಇಂಗ್ಲಿಷ್ ಕಲಿಯುವ ಅವಕಾಶ ಇದೆ. ನಮ್ಮಲ್ಲಿ ತ್ರಿಭಾಷ ಸೂತ್ರವಿಲ್ಲ. ಕನ್ನಡ, ಇಂಗ್ಲಿಷ್ ಮಾತ್ರ ಕಲಿಸುತ್ತೇವೆ ಎಂದರು.
ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೀನ್ ಪೊಲಿಟಿಷಿಯನ್ ಅಲ್ಲ ಕರೆಪ್ಟ್ ಪೊಲಿಟಿಷಿಯನ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದರು. ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕ್ಲೀನ್ ಪೊಲಿಟೀಶಿಯನ್ ಅಲ್ಲ ಕರೆಪ್ಟ್ ಪೊಲಿಟೀಶಿಯನ್ ಅಂತಾ ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ. ಜಾತಿ ಜನಗಣತಿ ಬಗ್ಗೆ ತೀರ್ಮಾನ ಮಾಡಿ ಬಿಡ್ತಾರೆ ಅಂತಾ ವಿಶೇಷ ಕ್ಯಾಬಿನೆಟ್ ಕರೆದರೂ ಅಲ್ಲೂ ತೀರ್ಮಾನ ಆಗಿಲ್ಲ. ಸಿದ್ದರಾಮಯ್ಯ ಜಾತಿ ಜನಗಣತಿ ಹಿಡಿದುಕೊಂಡು ಆಡಳಿತ ಪಕ್ಷದಲ್ಲಿ ಇರೋ ಸಿಎಂ ಆಕಾಂಕ್ಷಿ ಇದ್ದಾರೆ ಅವರಿಗೆ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷದವರಿಗೂ ಕೂಡಾ ಬೆದರಿಸೋ ತಂತ್ರ ಮಾಡ್ತಿದ್ದಾರೆ. ಈ ತಂತ್ರದ ಹಿಂದೆ ಕುತಂತ್ರ ಇದೆ ಎಂದರು. https://ainkannada.com/senior-lawyer-sada-shivareddy-condemns-the-attack-and-protests-by-wearing-a-red-armband/ ಇನ್ನೂ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿ, ಪರೀಕ್ಷಾರ್ಥಿಗಳ ಜನಿವಾರ ತೆಗೆದಿರೋದು ಮಕ್ಕಳ ಮೇಲಲ್ಲ, ಹಿಂದೂ ಸಮಾಜದ ಮೇಲೆ ಬಲಾತ್ಕಾರ ಮಾಡ್ತಿದ್ದಾರೆ. ಹಿಂದೂಗಳಿಗೆ ಅಪಮಾನ ಮಾಡೋದು ಅಂದ್ರೆ ಸಿದ್ದರಾಮಯ್ಯನವರಿಗೆ ಪರಮಾನಂದ. ಹಿಂದೂಗಳಿಗೆ ಅಪಮಾನ ಮಾಡೋದು ಬಹಳ…
ಚಿಕ್ಕೋಡಿ:- KSRTC ಬಸ್ ಸ್ಟೆರಿಂಗ್ ರಾಡ್ ಕಟ್ ಆಗಿ ಬಸ್ ಒಂದು ಕಂದಕಕ್ಕೆ ಉರುಳಿರುವ ಘಟನೆ ಬೆಳಗಾವಿ ಜಿಲ್ಲೆಯ ಸತ್ತಿ ಗ್ರಾಮದ ಹೊರವಲಯದಲ್ಲಿ ಜರುಗಿದೆ. https://ainkannada.com/do-you-have-low-blood-pressure-if-so-eat-these-foods-to-increase-it/ ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ. ಈ ಬಸ್, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಡಿಪೋಗೆ ಸೇರಿದೆ. ಸತ್ತಿ ಗ್ರಾಮದಿಂದ ಅಥಣಿ ಕಡೆಗೆ ಬರುತ್ತಿದ್ದಂತೆ ಏಕಾಏಕಿ ಸ್ಟೇರಿಂಗ್ ರಾಡ್ ಕಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕೆ ಬಸ್ ಉರುಳಿದೆ. ಚಾಲಕನ ಸಮಯಪ್ರಜ್ಞೆಗೆ ಪ್ರಯಾಣಿಕರು ಸೇಫ್ ಆಗಿದ್ದು, ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಕ್ತ ಇರುವುದು ಬಹಳ ಮುಖ್ಯ. ರಕ್ತದ ಕೊರತೆಯ ಬಗ್ಗೆ ನೀವು ಈಗಾಗಲೇ ತಿಳಿದಿರುವಿರಿ. ರಕ್ತದ ಕೊರತೆಯು ಯಾವುದೇ ವ್ಯಕ್ತಿಗೆ ತಲೆತಿರುಗುವಿಕೆ, ತೀವ್ರ ತಲೆನೋವು ಮತ್ತು ದೇಹದಲ್ಲಿನ ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ. https://ainkannada.com/shootout-case-against-ricky-rai-muthappa-rais-2nd-wife-escapes-to-america/ ಆ ಜನರಲ್ಲಿ ರಕ್ತದ ಕೊರತೆ ಹೆಚ್ಚು. ಅವರು ಸರಿಯಾದ ಪೋಷಣೆ ಪಡೆಯುವುದಿಲ್ಲ ಅಥವಾ ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಕ್ತ ಉತ್ಪತ್ತಿಯಾಗುವುದಿಲ್ಲ. ಹೇಗಾದರೂ, ನೀವು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವಂತಹ ಕೆಲವು ಆಹಾರಗಳನ್ನು ತಿನ್ನುವುದರ ಮೂಲಕ ನೀವು ಕಡಿಮೆ ಅವಧಿಯಲ್ಲಿ ಸಾಕಷ್ಟು ರಕ್ತವನ್ನು ಹೊಂದಬಹುದು. ರಕ್ತಹೀನತೆಯಿಂದ ದೇಹವು ತುಂಬಾ ದುರ್ಬಲವಾಗುತ್ತದೆ. ಯಾವಾಗಲೂ ಆಯಾಸ. ಆಗಾಗ್ಗೆ ತಲೆನೋವು. ದೇಹದಲ್ಲಿ ರಕ್ತ ಕಡಿಮೆಯಾದಾಗ ಕೆಲವು ರೀತಿಯ ಆಹಾರ ಸೇವಿಸುವುದರಿಂದ ರಕ್ತ ಚೆನ್ನಾಗಿ ಹೆಚ್ಚುತ್ತದೆ. ಆ ಸೂಪರ್ ಫುಡ್‌ಗಳು ಯಾವುವು ಎಂಬುದು ಇಲ್ಲಿದೆ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ 5 ಲೀಟರ್ ರಕ್ತ ಇರಬೇಕು ಎಂದು ನಾವು ಪುಸ್ತಕಗಳಲ್ಲಿ ಓದಿದ್ದೇವೆ. ಆದರೆ ನಮ್ಮ ದೇಹದಲ್ಲಿ ಹಿಂದಿನ ಕಬ್ಬಿಣಾಂಶ ಇಲ್ಲದೇ ಹೋದರೆ, ನಾನಾ…
ರಾಯಚೂರು:- ನಗರದಲ್ಲಿ ಕಳ್ಳತನ , ದರೋಡೆ ಹಲವು ಪ್ರಕರಣ ಹೆಚ್ಚಾದ ಹಿನ್ನೆಲೆ, ಇದರ ಕಡಿವಾಣಕ್ಕೆ ಸಿಸಿಟಿವಿ ಅಳವಡಿಕೆ ಮಾಡುವಂತೆ ಸಾರ್ವಜನಿಕರು ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕರು ಸಿಸಿಟಿವಿ ಅಳವಡಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. https://ainkannada.com/not-shah-rukh-khan-salman-khan-or-allu-arjun-but-this-filmmaker-earns-rs-200-crore-fee-for-each-film/ ಸದಾರ್ ಬಜಾರ್ ಪೊಲೀಸ್ ಠಾಣೆಯಿಂದ ಹೀಗಾಗಿ ರಾಯಚೂರು ನಗರದ ಮುಖ್ಯ ವೃತ್ತಗಳಲ್ಲಿ ಅಶೋಕ ಡಿಪೋ ಸರ್ಕಲ್ ಹಾಗೂ ಉಸ್ಮಾನಿಯ ಮಸೀದಿ ಹತ್ತಿರ ಸೇರಿ 8 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ರಾಯಚೂರು ಎಸ್ ಪಿ ಪುಟ್ಟಮಾದಯ್ಯ ಅವರು ಸಿಸಿ ಕ್ಯಾಮರಾ ಉದ್ಘಾಟಸಿದರು. ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಕಳೆದು ಕೊಂಡ 13 ಮೊಬೈಲ್ಗಳನ್ನ ಹುಡುಕಿ ಇದೇ ವೇಳೆ ಪೊಲೀಸರು, ಮಾಲೀಕರಿಗೆ ಒಪ್ಪಿಸಿದರು. ಸದಾರ್ ಬಜಾರ್ ಸಿಪಿಐ ಉಮೇಶ್ ಕಾಂಬ್ಳೇ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯನಗರ:- ಮದುವೆಯಾಗಲು ನಿರಾಕರಿಸಿದ ಹಿನ್ನೆಲೆ ಯುವಕನೋರ್ವ ಯುವತಿಗೆ ಚಾಕು ಇರಿದಿರುವ ಘಟನೆ ಜಿಲ್ಲೆಯ ಹೊಸಪೇಟೆಯ ನಗರಸಭೆ ಕಾರ್ಯಾಲಯ ಎದುರುಗಡೆ ನಡೆದಿದೆ. https://ainkannada.com/they-attacked-us-and-set-a-trap-for-us-mother-of-the-young-man-who-was-attacked-is-upset/ 26 ವರ್ಷದ ಭಾರತಿ ಶಾವಿ ಹಲ್ಲೆಗೊಳಗಾದ ಮಹಿಳೆ. ವಿಜಯಭಾಸ್ಕರ್(26) ಹಲ್ಲೆ ಮಾಡಿದ ಪ್ರೇಮಿ. ಯುವತಿಯು ಮದುವೆಗೆ ನಿರಾಕರಿಸಿದಕ್ಕೆ ಆಂಧ್ರಪ್ರದೇಶದ ನಂದ್ಯಾಲ ಗ್ರಾಮದಿಂದ ಹೊಸಪೇಟೆ ನಗರಕ್ಕೆ ಆಗಮಿಸಿದ ಯುವಕ ಆಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಚಿಕ್ಕೋಡಿ:- ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂದಿರಾನಗರದಲ್ಲಿ ಜರುಗಿದೆ. https://ainkannada.com/google-to-issue-gate-passes-to-hundreds-of-employees-again-bangalore-in-danger-zone/ ಅನಿಲ ರಾಮು ಜಾದವ್(34) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಯುವಕ, ಐಪಿಎಲ್‌ನಲ್ಲಿ ಬೆಟ್ಟಿಂಗ್ ಆಡುತ್ತಿದ್ದ. ಐಪಿಎಲ್ ಬೆಟ್ಟಿಂಗ್‌ನಲ್ಲಿ ಬಾರಿ ನಷ್ಟವಾದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಯುವಕ ಸಾವು ಹಿನ್ನೆಲೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.
ಪಾಟ್ನಾ:- AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಜನ ಬಾರದೇ ಇರುವ ಹಿನ್ನೆಲೆ ಪಕ್ಷದಿಂದಲೇ ಜಿಲ್ಲಾಧ್ಯಕ್ಷನನ್ನು ಅಮಾನತು ಮಾಡಲಾಗಿದೆ. https://ainkannada.com/psl-pakistani-pacer-shaheen-afridi-gifted-a-gold-iphone/ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಿಹಾರ ಕಾರ್ಯಕ್ರಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಕ್ಕೆ ಬಕ್ಸಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಪಕ್ಷದಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ. ಈ ಬಗ್ಗೆ ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ಕೋಶದ ಅಧ್ಯಕ್ಷ ರಾಜೇಶ್ ರಾಥೋಡ್ ಮಾಹಿತಿ ನೀಡಿದ್ದಾರೆ. ಮೊನ್ನೆ ಅಂದ್ರೆ ಭಾನುವಾರ ಬಕ್ಸಾರ್‌ನ ದಲ್ಸಾಗರ್ ಕ್ರೀಡಾಂಗಣದಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬರುವ ವಿಚಾರ ತಿಳಿದಿದ್ದರೂ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು. ಬಕ್ಸಾರ್‌ನ ಕಾಂಗ್ರೆಸ್ ಶಾಸಕ ಸಂಜಯ್ ಕುಮಾರ್ ತಿವಾರಿ ಮುಂದೆ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಜನರಲ್ಲಿ ಕೇಳಿಕೊಳ್ಳುತ್ತಿದ್ದರು. ಖಾಲಿ ಕುರ್ಚಿಗಳು ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದಾವಣಗೆರೆ :- ನಾಪತ್ತೆಯಾಗಿದ್ದ ಪಿಯು ಪ್ರೇಮಿಗಳಿಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಟ್ಟಣದ ಹೊರವಲಯದ ಅನಂತನಹಳ್ಳಿ ಸರ್ಕಾರಿ ಐಟಿಐ ಎದುರಿಗಿರುವ ಅರಣ್ಯದಲ್ಲಿ ಜರುಗಿದೆ. https://ainkannada.com/modi-to-visit-saudi-arabia-for-2-days-from-today-talks-on-trade-investment-technology/ 18 ವರ್ಷದ ಮದ್ದನಸ್ವಾಮಿ, 18 ವರ್ಷದ ದೀಪಿಕಾ ನೇಣಿಗೆ ಶರಣಾದ ಪ್ರೇಮಿಗಳು. ಮದ್ದನಸ್ವಾಮಿ ಹಾಗೂ ದೀಪಿಕಾ ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಇವರಿಬ್ಬರು ಏ.15 ಪಿಯುಸಿ ಫಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದರು. ಇದೀಗ ಅವರು ಶವವಾಗಿ ಪತ್ತೆ ಆಗಿದ್ದಾರೆ. ಘಟನಾ ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ, ಪರಶೀಲನೆ ನಡೆಸಿದರು. ಪ್ರೇಮಿಗಳಿಬ್ಬರು ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.