ಮುಂಬೈ/ವಾಷಿಂಗ್ಟನ್:- ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಿದ್ದೇ ಸಹಾ ತೆರಿಗೆ ಬರೆ ಜೋರಾಗಿ ಬಿದ್ದಿದೆ. ಟ್ರಂಪ್ ಅವರ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿದ್ದು, ಜಸ್ಟ್ ಒಂದೇ ದಿನ ಹೂಡಿಕೆದಾರರ 19 ಲಕ್ಷ ಕೋಟಿ ನಷ್ಟವಾಗಿದೆ. https://ainkannada.com/education-minister-madhubangarappa-shramdan-for-construction-of-school-compound/ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಭಾರೀ ಇಳಿಕೆ ಕಂಡಿದೆ. ಸೆನ್ಸೆಕ್ಸ್ ಆರಂಭದಲ್ಲಿ 4 ಸಾವಿರ ಅಂಕ ಪತನಗೊಂಡು ನಂತರ ಚೇತರಿಕೆ ಕಂಡಿತ್ತು. ಬೆಳಗ್ಗೆ 11 ಗಂಟೆಯ ವೇಳೆಗೆ 2,900 ಅಂಕ ಚೇತರಿಕೆಯಾಗಿ 72,423.48 ರಲ್ಲಿ ವ್ಯವಹಾರ ನಡೆಸುತ್ತಿತ್ತು. ನಿಫ್ಟಿ 900 ಅಂಕ ಇಳಿಕೆಯಾಗಿ 21,960.80 ರಲ್ಲಿ ವ್ಯವಹಾರ ನಡೆಸುತ್ತಿದೆ. ರಿಯಾಲ್ಟಿ, ಐಟಿ, ಆಟೋ ಮತ್ತು ಲೋಹ ಮುಂತಾದ ಕ್ಷೇತ್ರಗಳ ಷೇರುಗಳು ಮೌಲ್ಯ ಇಳಿಕೆಯಾಗಿದೆ. ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏಷ್ಯಾದ ಎಲ್ಲ ಮಾರುಕಟ್ಟೆಗಳಲ್ಲಿ…
Author: AIN Author
ಬೆಳಗಾವಿ : ಅಭಿವೃದ್ದಿ ವಿಚಾರದಲ್ಲಿ ರಾಜ್ಯದಲ್ಲೆ ಅತಿ ಹೆಚ್ಚು ಬಜೆಟ್ ತಂದ ಕೀರ್ತಿ ಅಥಣಿ ಶಾಸಕ ಲಕ್ಷ್ಮಣ ಸವದಿಗೆ ಸಲ್ಲುತ್ತದೆ. ಆದರೆ ಇವರ ಕ್ಷೇತ್ರದಲ್ಲಿ ವಿದ್ಯುತ್, ಹಾಗೂ ಕುಡಿಯುವ ನೀರಿಗಾಗಿ ಮಹಿಳೆ ಕಣ್ಣೀರು ಹಾಕುವಂತಾಗಿದೆ. ಇದು ಅಥಣಿ ತಾಲೂಕಿನ ಕಕಮರಿ ಅನ್ನೋ ಗ್ರಾಮ ಈ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ಕೆಲ ಪ್ರದೇಶಗಳಲ್ಲಿ ಬ್ಯಾಕ್ ಫೀಡ್ ಹೆಸರಿನಲ್ಲಿ ಹೆಸ್ಕಾಂ ಇಲಾಖೆ ತೋಟದ ವಸತಿಗಳ ವಿದ್ಯುತ್ ಕಟ್ ಮಾಡಿದ್ದೂ ಮನೆಯಲ್ಲಿ ವಿದ್ಯುತ್ ಬೆಳಕು, ಸಹ ಇಲ್ಲದೆ ಜನ ಜಾನುವಾರುಗಳ ನೀರಿಗಾಗಿ ಪರೀತಪಿಸುವಂತಾಗಿದೆ. https://ainkannada.com/education-minister-madhubangarappa-shramdan-for-construction-of-school-compound/ ಅದರಲ್ಲಿ ರಾತ್ರಿ ಬೆಳಕು ಇಲ್ಲದೆ ಟೈರ್ ಗೆ ಬೆಂಕಿ ಹಚ್ಚಿ ಅದರ ಬೆಳಕಿನಲ್ಲೇ ಊಟ ಮಾಡಿದ್ದೀವಿ, ನಮ್ಮ ದನಕರುಗಳು ನೀರಿಲ್ಲದೆ ರೋಧನೆ ಅನುಭವಿಸುತ್ತಿವೆ. ಪುರುಷರು ಎರಡು ದಿನದಿಂದ ಸ್ನಾನ ಮಾಡಿಲ್ಲ, ಹೊರಗಡೆ ದಿನ ಬಳಕೆಗೆ ಬಳಸುವ ಕೊಳಕು ನೀರು ಕುಡಿದು, ಮಗು ಆಸ್ಪತ್ರೆ ಪಾಲಾಗಿದೆ ನಮಗೆ ನ್ಯಾಯ ಸಿಕ್ತಿಲ್ಲ ಅಂತಾ ಮಹಿಳೆ ಕಣ್ಣೀರು ಹಾಕಿದ್ದಾರೆ. ಆದ್ರೂ ಕೂಡ ಮಾನವೀಯತೆ ಮರೆತು…
ಶಿವಮೊಗ್ಗ : ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಶ್ರಮದಾನ ಮಾಡಿದರು. ಸ್ವಕ್ಷೇತ್ರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಪಿಕಾಸಿ, ಗುದ್ದಲಿ ಹಿಡಿದು ಕಾಂಪೌಂಡ್ ನಿರ್ಮಾಣಕ್ಕೆ ಗುಂಡಿ ತೆಗೆದಿದ್ದು ವಿಶೇಷವಾಗಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಪೌಂಡ್ ನಿರ್ಮಾಣಕ್ಕಾಗಿ ಕೆಲಸ ನಡೆಯುತಿದ್ದು, ಈ ವೇಳೆ ಮಧು ಬಂಗಾರಪ್ಪ ಗುದ್ದಲಿಯಲ್ಲಿ ಬುಟ್ಟಿಗೆ ಮಣ್ಣು ತುಂಬಿ, ಬೇರೆಡೆ ಹೊತ್ತು ಹಾಕಿದರು. ಸಚಿವರಿಗೆ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರಿಂದಲೂ ಸಾಥ್. https://www.youtube.com/watch?v=l9YrCOgq2zM ಇದೇ ವೇಳೆಮಾತನಾಡಿದ ಸಾಂಖ್ಯಿಕ ಸಚಿವ ಡಿ.ಸುಧಾಕರ್, ಸಚಿವ ಮಧು ಬಂಗಾರಪ್ಪ ಕರೆಯ ಮೇರೆಗೆ ಸೊರಬಕ್ಕೆ ಬಂದಿದ್ದೇನೆ. ಸರ್ಕಾರಿ ಶಾಲೆಯ ಕಾಪೌಂಡ್ ಅಭಿವೃದ್ಧಿಗೆ ಶ್ರಮದಾನ ಮಾಡಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯ ನರೇಗಾ ಅಡಿ ಮಾಡಲಾಗ್ತಿದೆ. ನರೇಗಾ ಅಡಿ ಶಾಲೆ ಕೆಲಸ ಮಾಡಿ ರಾಜ್ಯಕ್ಕೆ ಶಿಕ್ಷಣ ಸಚಿವರು ಮಾದರಿಯಾಗಿದ್ದಾರೆ ಎಂದರು.
ಬೆಂಗಳೂರು:-ಮುಸ್ಲಿಮರಿಗೆ ಗುತ್ತಿಗೆಯಲ್ಲಿ 4% ಮೀಸಲಾತಿ ಕೊಟ್ಟಿರುವ ವಿಚಾರಕ್ಕೆ ಬಿಜೆಪಿ ವಿರೋಧ ಮಾಡುತ್ತಿರುವ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainkannada.com/low-demand-for-red-beauties-tomato-prices-suddenly-drop-gadag-farmers-in-panic/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪ್ರಜ್ಞಾಪೂರ್ವಕವಾಗಿ ನಮ್ಮ ಸರ್ಕಾರ ಮತ್ತು ಪಕ್ಷ ಇದನ್ನು ಮಾಡಿದೆ. ಯಾರು ಸಮುದಾಯದಲ್ಲಿ ಹಿಂದೆ ಉಳಿದಿದ್ದಾರೆ. ಅವರನ್ನು ಮೇಲೆ ತರುವಂತಹ, ಸಮಾಜದ ಮುಖ್ಯ ವಾಹಿನಿಗೆ ಬರುವ ಯೋಜನೆ ಹಾಗೂ ಕಾನೂನುಗಳನ್ನು ಸರ್ಕಾರ ಆಗಾಗ ಜಾರಿ ಮಾಡಬೇಕು. ಮೀಸಲಾತಿ ಯಾಕೆ ಬೇಕು ಎನ್ನುವುದು ದೊಡ್ಡ ಪ್ರಶ್ನೆ. SC-ST, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವಾಗಲು ಇದೇ ಪ್ರಶ್ನೆ ಬರುತ್ತದೆ. ಯಾರು ಹಿಂದೆ ಉಳಿದಿದ್ದಾರೆ, ಸಾವಿರಾರು ವರ್ಷಗಳಿಂದ ಅವಕಾಶ ಸಿಕಿಲ್ಲ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ರಾಜ್ಯದಲ್ಲಿ ಶೇ.16-18ರಷ್ಟು ಇರುವ ಅಲ್ಪಸಂಖ್ಯಾತರು ಹಿಂದೆ ಉಳಿಯಬೇಕಾ? ಕ್ರಿಶ್ಚಿಯನ್, ಜೈನ್, ಮುಸ್ಲಿಮರು ಎಲ್ಲರು ನಮ್ಮ ಜೊತೆ ಮುಖ್ಯ ವಾಹಿನಿಗೆ ಬರಬೇಕು. ಇಷ್ಟೇ ನಮ್ಮ ಉದ್ದೇಶ ಎಂದು ಸ್ಪಷ್ಟನೆ ನೀಡಿದರು ಗ್ಯಾರಂಟಿ ಯೋಜನೆ ಯುಪಿಯಲ್ಲಿ ಜಾರಿ ಮಾಡಲು ರಾಜ್ಯದಲ್ಲಿ ತಂಡದಿಂದ…
ಕೆಂಪು ಸುಂದರಿಯ ಬೇಡಿಕೆ ಕಡಿಮೆ ಆಗಿ ಏಕಾಏಕಿ ಟೊಮೆಟೊ ದರ ಕುಸಿತಗೊಂಡಿದೆ. ಹೀಗಾಗಿ ಗದಗದ ಎಪಿಎಂಸಿಯಲ್ಲಿ ಟೊಮೆಟೊ ದರ ಭಾರೀ ಕುಸಿತದಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 25 ಕೆಜಿ ಟ್ರೇ ಕೇವಲ 50 ರೂ.ಗೆ ಮಾರಾಟವಾಗುತ್ತಿದೆ. ಬೆಳೆಗೆ ಹೆಚ್ಚಿನ ವೆಚ್ಚವಾಗಿದ್ದರೂ, ಕಡಿಮೆ ದರದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬದನೆಕಾಯಿ ಮತ್ತು ನುಗ್ಗೆಕಾಯಿ ದರಗಳೂ ಕುಸಿದಿವೆ. ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ. https://ainkannada.com/ram-charans-peddi-breaks-yash-toxics-record/ ಏಕಾಏಕಿ ಟೊಮೆಟೊ ದರ ಪಾತಾಳಕ್ಕೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ದರ ಕುಸಿತಕ್ಕೆ ಗದಗ ಎಪಿಎಂಸಿಯಲ್ಲಿ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ಅಗತ್ಯ ವಸ್ತುಗಳ ದರಗಳು ಏರಿಕೆಯಾದರೂ ರೈತರು ಬೆಳೆದ ಬೆಳೆಗಳ ದರ ಏಕೆ ಏರಿಕೆಯಾಗುತ್ತಿಲ್ಲ ಅಂತ ಕಿಡಿಕಾರಿದ್ದಾರೆ. ಜಿಲ್ಲೆಯ ರೈತರು ಗದಗ APMCಯಲ್ಲಿ ಟೊಮೆಟೊ ದರ ಕುಸಿತಕ್ಕೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. 25ಕೆಜಿ ಟ್ರೇಗೆ ಕೇವಲ 50 ರೂಪಾಯಿಗೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ. ಮಾರ್ಕೆಟ್ ನಲ್ಲಿ 15 ರೂಪಾಯಿ ಕೆಜಿ ಟೊಮೆಟೊ ಮಾರಾಟ ಮಾಡಲಾಗುತ್ತಿದ್ದು, ಆದರೆ APMC ಯಲ್ಲಿ…
ಶ್ರೀನಗರ : ಜಮ್ಮುಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲವುಂಟಾಗಿತ್ತು. ಹೊಸ ವಕ್ಫ್ ಕಾಯ್ದೆಗೆ ಬಗ್ಗೆ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕರು ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಮ್ಮುಕಾಶ್ಮೀರ ವಿಧಾನಸಭೆ ಅದಿವೇಶನ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಆದರೆ ಚರ್ಚೆಗೆ ಅನುಮತಿ ನೀಡದ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ನಿಯಮ 56 ಮತ್ತು 58 (7) ಅನ್ನು ಉಲ್ಲೇಖಿಸಿ ನಿಲುವಳಿ ಸೂಚನೆಯನ್ನು ವಜಾಗೊಳಿಸಿದರು. ಇದರಿಂದ ವಿಧಾನಸಭೆಯಲ್ಲಿ ಗದ್ದಲವುಂಟಾಯಿದ್ದಿತು. ಎನ್‌ಸಿ ಶಾಸಕರಾದ ಹಿಲಾಲ್ ಲೋನ್ ಮತ್ತು ಸಲ್ಮಾನ್ ಸಾಗರ್ ವಕ್ಫ್ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕಿದರು. ಎನ್‌ಸಿ ಶಾಸಕ ಅಬ್ದುಲ್ ಮಜೀದ್ ಲಾರ್ಮಿ ಪ್ರತಿಭಟನೆಯಲ್ಲಿ ಸದನದಲ್ಲಿ ತಮ್ಮ ಜಾಕೆಟ್ ಹರಿದು ಅಸಮಾಧಾನ ವ್ಯಕ್ತಪಡಿಸಿದರು. https://www.youtube.com/watch?v=_huYBv50RFs ಇನ್ನು, ಎನ್‌ಸಿಯ ನಡೆಯನ್ನು ಖಂಡಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ, ಆಡಳಿತ ಪಕ್ಷದ ಬೇಡಿಕೆಯು “ಅತ್ಯಂತ ಅಸಾಂವಿಧಾನಿಕ” ಎಂದು ಕರೆದರು.
ಬೆಂಗಳೂರು:- ಆರ್.ಆರ್ ನಗರದಲ್ಲಿ ಹಾಲಿ ಶಾಸಕ ಮುನಿರತ್ನ v/s ಕುಸುಮ ಬಿಗ್ ಫೈಟ್ ಮುಂದುವರಿದಿದೆ. https://ainkannada.com/25th-silver-jubilee-celebrations-from-11th-april-at-sri-gayatri-tapobhoomi/ ಯುಗಾದಿ ಹಬ್ಬಕ್ಕೆ ಫ್ಲೆಕ್ಸ್ ಹಾಕಿಸೋ ವಿಚಾರಕ್ಕೆ ವಾರ್ ನಡೆದಿದ್ದು, ಮುನಿರತ್ನ ಫೋಟೋ ಬಳಸಿ ಕ್ಷೇತ್ರದ ಎಲ್ಲೆಡೆ ಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಲಗ್ಗೆರೆ ವಾರ್ಡ್‌ನಲ್ಲಿ ಮುನಿರತ್ನ ಫ್ಲೆಕ್ಸ್ ಹಾಕಿಸಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಫ್ಲೆಕ್ಸ್ ಹಾಕಿಸಿದ್ದ ವಾಲೆ ವಿಜಿ ಅನ್ನೋ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ನಾಯಕರಿಂದ ಧಮ್ಕಿ ಹಾಕಿರುವ ಆಡಿಯೋ ಕೇಳಿ ಬಂದಿದೆ. ಸಿದ್ದೇಗೌಡ ಅನ್ನೋ ಕಾಂಗ್ರೆಸ್ ಮುಖಂಡನಿಂದ ಧಮ್ಕಿ ಹಾಕಲಾಗಿದೆ. ಬಿಜೆಪಿ, ಬಿಜೆಪಿ ನಾಯಕರ ಫ್ಲೆಕ್ಸ್ ಹಾಕು ಬೇಡ ಅನ್ನಲ್ಲ. ಆದ್ರೆ ಮುನಿರತ್ನ ಫ್ಲೆಕ್ಸ್ ಹಾಕದಂತೆ ತಾಕೀತು ಮಾಡಿದ್ದಾನೆ. ಕ್ಷೇತ್ರದಲ್ಲಿ ಹಾಕಿದ್ದ ಫ್ಲೆಕ್ಸ್ ಮೇಲೆ 420 ಮುನಿರತ್ನ ಅಂತ ಬರೆದು ಆಕ್ರೋಶ ಹೊರ ಹಾಕಿದ್ದಾರೆ. ಕುಸುಮ ಕಡೆಯವರಿಂದ ಫ್ಲೆಕ್ಸ್ ಹರಿದುಹಾಕಿರೋ ಆರೋಪ ಕೇಳಿ ಬಂದಿದೆ.
ಹುಬ್ಬಳ್ಳಿ: ಪುಣೆ-ಬೆಂಗಳೂರು ರಸ್ತೆಯಲ್ಲಿರುವ ತಡಸ್ ಗ್ರಾಮದ ಶ್ರೀ ಗಾಯತ್ರಿ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏ.11ರಿಂದ 16ರವರೆಗೆ 25ನೇ ವರ್ಷದ ಶ್ರೀ ಗಾಯತ್ರಿ ಪ್ರತಿಷ್ಠಾಪನೆಯ ರಜತ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ವಿನಾಯಕ ಆಕಳವಾಡಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಯಂತಮ್ ತ್ರಾಯತೆ ಯಸ್ಮಾತ್ ಇತಿ ಗಾಯತ್ರಿ ಎಂಬಂತೆ ಸರ್ವರ ಧೀ ಶಕ್ತಿಯನ್ನು ಪ್ರಚೋದಿಸಿ, ಉಚ್ಚಾರ ಮಾತ್ರದಿಂದ ಸಂಕಷ್ಟವನ್ನು ಹರಣ ಮಾಡುವ ಶಕ್ತಿಯೇ ಗಾಯತ್ರಿ. ಇಂತಹ ಗಾಯತ್ರಿ ಮಾತೆಯನ್ನು ಆರಾಧಿಸುವ ಕೆಲವೇ ಸ್ಥಳಗಳಲ್ಲಿ ಗಾಯತ್ರಿ ತಪೋಭೂಮಿಯೂ ಒಂದಾಗಿದೆ. ಶ್ರೀ ಕೃಷ್ಣೇಂದ್ರ ಗುರುಗಳ ಪ್ರತಿರೂಪವಾದ ವಲ್ಲಭ ಚೈತನ್ಯರು 2000 ನೇ ಇಸ್ವಿಯಿಂದ ಮಾತಾ ಗಾಯತ್ರಿ, ಶ್ರೀ ಗಣಪತಿ, ಶ್ರೀ ಸ್ಕಂದ ಹಾಗೂ ಅನ್ನಪೂರ್ಣೇಶ್ವರಿಯನ್ನು ಗಾಯತ್ರಿ ತಪೋಭೂಮಿಯಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರತಿನಿತ್ಯ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದಾರೆ ಎಂದರು. ಅದರಂತೆ 2018 ರಂದು ಶ್ರೀ ಶ್ರೀ ಶ್ರೀ ಬಾಲಕೃಷ್ಣನಂದ ಸರಸ್ವತಿ ಅವರು 24 ಕೋಟಿ ಗಾಯತ್ರಿ ಮಹಾಯಜ್ಞವನ್ನು ಸಂಪನ್ನಗೊಂಡಿತು. ಅದರಂತೆ…
ಕೊಪ್ಪಳ : ಕಾಮಗಾರಿ ಮಾಡದೇ ಇದ್ದರೆ ಅವರನ್ನು ಕಿತ್ತು ಬಿಸಾಕಿ ಎಂದು ಅಧಿಕಾರಿಗಳಿಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸೂಚನೆ ನೀಡಿದ್ದಾರೆ. ಕೊಪ್ಪಳದ ಬೇವೂರಿನಲ್ಲಿ ಮಾತಾಡಿದ ಅವರು, ಹಿಂದಿನ ಸರ್ಕಾರದಲ್ಲಿ ಜೆಜೆಎಂ ಕಾಮಗಾರಿ ಹಳ್ಳಹಿಡಿಸಿದ್ದಾರೆ. ಪೈಪ್ ಗಳು ಹಾಳಾಗಿ ಹೋಗಿವೆ. ಸರಿಯಾಗಿ ಕೆಲಸ ಮಾಡದಿದ್ದರೆ ಡಿಸಿ, ಸಿಇಓ,ಎಸಿ ಮೇಲೆ ಕ್ರಮಕೈಗೊಳ್ಳಲು ಸಿಎಂ ಗೆ ಹೇಳುತ್ತೇನೆ. ಜನರಿಗೆ ನೀರು ಕೊಡದಿದ್ದರೆ ನಾಲಾಯಕ್ ಈಗ ಕಟ್ಟುವವರು ಸರಿಯಾಗಿಲ್ಲ. ಸರ್ಕಾರಿ ಕಟ್ಟಡ ಸರಿಯಾಗಿಲ್ಲ ಅಂದರೆ ಕಿತ್ತು ಬಿಸಾಕಿ ಎಂದು ವೇದಿಕೆ ಮೇಲೆ ಅಧಿಕಾರಿಗಳಿ ಸೂಚನೆ ನೀಡಿದರು. https://ainkannada.com/swamijis-personal-struggle-is-wrong-kai-mla-rajuka-is-unhappy/ ಚುನಾವಣೆ ಭ್ರಷ್ಟಾಚಾರ ಕಡಿಮೆ ಆಗುವವರೆಗೂ ಭ್ರಷ್ಟಾಚಾರ ಕಡಿಮೆ ಆಗಲ್ಲ. ಕೋಟ್ಯಾಂತರ ರೂಪಾಯಿ ಖರ್ಚು ಮಾಡೋದು ನಾಚಿಕಗೇಡು. ಧರ್ಮ,ಜಾತಿ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ಅಭಿವೃದ್ಧಿ ಪರ ಇರುವ ವ್ಯಕ್ತಿ,ಪಕ್ಷಕ್ಕೆ ಆರಿಸಬೇಕು. ಇಲ್ಲವೆಂದರೆ ಕಗ್ಗತ್ತಲಲ್ಲಿ ಇರಬೇಕಾಗುತ್ತದೆ. ಕ್ಷೇತ್ರಕ್ಕೆ ಕೆರೆ ತುಂಬಿಸುವ ಯೋಜನೆ ತಂದಿದ್ದೇನೆ ಎಂದರು.
ಬೆಂಗಳೂರು:- ಮೇ 1 ರ ಕಾರ್ಮಿಕ ದಿನಾಚರಣೆಯಂದು ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು. ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಮಹಾ ಸಂಘದ 25 ನೇ ವಾರ್ಷಿಕೋತ್ಸವ ಮತ್ತು ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರ ವಚನದಂತೆ ಕಾಯಕವೇ ಕೈಲಾಸ ಎಂದು ಶ್ರಮಿಸುತ್ತಿದ್ದೀರಿ. ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಇತರರು ಬರುವುದು ಕಡಿಮೆ. ಹೀಗಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ, ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ ಎಂದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಲಿ, ಪೌರ ಕಾರ್ಮಿಕರಾಗಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲ ಸೇವಗಳೂ ಪವಿತ್ರವೇ. ನಿಮ್ಮನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ. ನಿಮಗೂ ವೃತ್ತಿಗೌರವ, ಘನತೆ ಸಿಗಬೇಕು. ಇದಕ್ಕಾಗಿ ಸೇವೆ ಕಾಯಂ ಮಾಡಲಾಗುವುದು ಎಂದರು. ವಾಹನ ಚಾಲಕರಿಗೂ ಕಾಯಂ ಪೌರ ಕಾರ್ಮಿಕರ ಜೊತೆಗೆ ವಾಹನ ಚಾಲಕರ ಸೇವೆಯನ್ನೂ ಗುತ್ತಿಗೆಯಿಂದ ತೆಗೆದು ಕಾಯಂಮಾಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಪೌರ…