ಕೊಪ್ಪಳ : ತುಂಗಾಭದ್ರಾ ನದಿ ದಡದಲ್ಲಿರುವ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ದೀಕರಣ ಮಾಡಿದ್ದ ಪ್ರಕರಣ ಭಾರೀ ಸದ್ದು ಮಾಡುವುದರ ಜೊತೆಗೆ ವ್ಯಾಪಕ ಆಕ್ರೋಶಕ್ಕೂ ಕಾರಣಕ್ಕೂ ಕಾರಣವಾಗಿತ್ತು. ಇದೀಗ ಇದೇ ಪ್ರಕರಣ ಸಂಬಂಧ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹೌದು, ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ ಮಾಡಿದ್ದ ಆನೆಗುಂದಿ ಗ್ರಾಮದ) ಹನುಮಂತ, ಫಕೀರಪ್ಪ, ಹುಲಗಪ್ಪ ಎಂಬುವರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. https://ainkannada.com/selling-meat-on-the-tomb-of-krishna-devaraya-what-did-yatnal-say/ ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ ಮಾಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪ್ರವಾಸೋದ್ಯಮ ಸಚಿವ ಹೆಚ್ಕೆ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ರಾಜಕೀಯ ಬೆರೆಸುವುದಿಲ್ಲ, ಅವರೂ ಬೆರೆಸಬಾರದು. ಅಪಮಾನ ಆಗಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು. ಇನ್ನೂ ಕೃಷ್ಣದೇವರಾಯರ ಸಮಾಧಿಯ ಮೇಲೆ ಮಾಂಸ ಶುದ್ಧೀಕರಣದ ಕುರಿತು ವಿಜಯಪುರ ಶಾಸಕ ಯತ್ನಾಳ್ ಕೂಡ ಕಿಡಿಕಾರಿದ್ದರು.
Author: AIN Author
ಮಂಡ್ಯ : ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರು ನೀಡಿದ ವರದಿ ಸರಿಯಿಲ್ಲವೆಂದು ಹೇಳಲು ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಂಡ್ಯ ಜಿಲ್ಲೆಯ ನಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ವರದಿ ಬಗ್ಗೆ ಪಕ್ಷದ ನಾಯಕರಿಂದ ಅಪಸ್ವರ ಎದ್ದಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ವರದಿಯಲ್ಲಿ ಯಾವುದೇ ನ್ಯೂನ್ಯತೆಗಳಿದ್ದರೆ ಸರಿಪಡಿಸಲಾಗುವುದು. ವರದಿ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಸಚಿವರಿಗೆ ತಿಳಿಸಲಾಗಿದ್ದು, ಅವುಗಳನ್ನು ಪರಿಶೀಲಿಸಿ ನಂತರ ಸೂಕ್ತ ತೀರ್ಮಾನವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದರು. https://ainkannada.com/excessive-behavior-of-youths-at-chamundi-hills-police-give-them-a-lesson/ 1984 ರಲ್ಲಿ ನಡೆದ ಸಮೀಕ್ಷೆಯಲ್ಲಿದ್ದ ಮುಸ್ಲಿಮರ ಸಂಖ್ಯೆ ಈಗ ವರದಿಯಲ್ಲಿ ಶೇ.90 ರಷ್ಟು ಹೆಚ್ಚಾಗಿದ್ದು, ಲಿಂಗಾಯತರ ಸಂಖ್ಯೆ ಕೇವಲ ಶೇ.8 ರಷ್ಟು ಜಾಸ್ತಿಯಾಗಿರುವುದಾಗಿ ಬಿಜೆಪಿಯವರು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಕಾಂತರಾಜು ಆಯೋಗದ ಅಂಕಿಅಂಶಗಳ ಆಧಾರದ ಮೇಲೆ ಜಯಪ್ರಕಾಶ್ ಹೆಗಡೆಯವರು ಶಿಫಾರಸ್ಸು ಮಾಡಿದ್ದಾರೆ ಎಂದರು. ರಾಜ್ಯದಲ್ಲಿ ಹಿಂದಿ…
ಮೈಸೂರು: ಪ್ರಸಿದ್ದ ಕ್ಷೇತ್ರ ಚಾಮುಂಡಿ ಬೆಟ್ಟದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಹೊರ ರಾಜ್ಯದ ಯುಕವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್ ಘಟನೆ ಸಂಬಂಧ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಹೊರ ರಾಜ್ಯದ ಕೆಲ ಯುವಕರು ಸಾರ್ವಜನಿಕ ಸ್ಥಳದಲ್ಲಿಯೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಬೇಸತ್ತ ಜನರು, ಅವರ ಫೋಟೋಗಳನ್ನು ತೆಗೆದು, ಫೋಟೋಗಳ ಸಮೇತ ಪೊಲೀಸರಿಗೆ ದೂರು ನಿಡಿದ್ದಾರೆ. ಬಳಿಕ ಚಾಮುಂಡಿ ಬೆಟ್ಟ ಠಾಣೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. https://ainkannada.com/a-man-who-took-his-daughters-friend-home-and-sexually-assaulted-her/ ವಿಚಾರಣೆ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸದಂತೆ ಯುವಕರಿಗೆ ತಿಳುವಳಿಕೆ ಹೇಳಿದ್ದು, ಅವರಿಂಧ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಳಿಕ ಬಿಟ್ಟಿದ್ದಾರೆ.
ಮಡಿಕೇರಿ ; ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಧು ಎಂಬಾತನೇ ಈ ಕೃತ್ಯ ಎಸಗಿದ್ದು, ಸೋಮವಾರ ಸಂಜೆ ತನ್ನ ಮಗಳ ಸ್ನೇಹಿತೆಯನ್ನು ಫೋನ್ ಮಾಡಿಸಿ ಕರೆಸಿಕೊಂಡಿದ್ದಾನೆ. ಆಕೆ ಮನೆಗೆ ಹೋದ ವೇಳೆ ಚಾಕೋಲೇಟ್ ನೀಡಿ, ತನ್ನ ಮಗಳನ್ನು ಮತ್ತೆ ಚಾಕೋಲೇಟ್ ತರುವಂತೆ ನಪ ಹೇಳಿ ಕಳುಹಿಸಿದ್ದಾನೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಪೋಷಕರು ಮಗಳನ್ನು ಕಳುಹಿಸುವಂತೆ ಫೋನ್ ಮಾಡಿದರು ಸಹ ಸರಿಯಾಗಿ ಮಾತಾಡದೇ ಕಟ್ ಮಾಡಿದ್ದಾನೆ. https://ainkannada.com/refusal-to-get-married-crazy-lover-stabs-young-woman-with-knife/ ಅನುಮಾನಗೊಂಡ ಬಾಲಕಿಯ ಪೋಷಕರು ಮಗಳ ಸ್ನೇಹಿತೆಯ ಮನೆಗೆ ಹೋಗಿ ವಿಚಾರ ಮಾಡುವಾಗ ತನ್ನ ಮೇಲೆ ನಡೆದಿರುವ ಘಟನೆ ಬಗ್ಗೆ ಪೋಷಕರ ಬಳಿ ಬಾಲಕಿ ಹೇಳಿಕೊಂಡಿದ್ದಾಳೆ. ಸದ್ಯ ಬಾಲಕಿಯ ಪೋಷಕರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕೊಡಗು : ವನ್ಯಜೀವಿ-ಮಾನವ ಸಂಘರ್ಷ ಶಾಶ್ವತವಾಗಿ ತಡೆಗಟ್ಟುವ ಹಿನ್ನೆಲೆಯಲ್ಲಿ ಅತ್ಯಂತ ಗಂಭೀರವಾಗಿ ಕಾರ್ಯಸೂಚಿಗಳನ್ನು ರೂಪಿಸುತ್ತಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಇಂದು ಅರಣ್ಯ ಇಲಾಖೆ ವತಿಯಿಂದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು. ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದ, ತೆರಾಲು ಭಾಗದಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯು ಪ್ರಗತಿಯಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಸೆರೆ ಕಾರ್ಯಚರಣೆಯ ನೇತೃತ್ವವಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಬಳಸಿ ಅತ್ಯಂತ ಶೀಘ್ರದಲ್ಲಿ ಈ ಕಾರ್ಯಾಚರಣೆಗೆ ಅಂತ್ಯ ಹಾಡಬೇಕು ಎಂದು ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. https://ainkannada.com/today-is-world-earth-day-know-the-history-and-significance-of-this-day/ ಈ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಶ್ರೀ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾದ…
ಮಂಡ್ಯ : ಕನ್ನಡದ ಹುಡುಗ ವಿಕಾಸ್ ಮೇಲೆ ವಿಂಗ್ ಕಮಾಂಡರ್ ಹಲ್ಲೆ ಪ್ರಕರಣದಲ್ಲಿ ತಪ್ಪು ಯಾರೇ ಮಾಡಿದ್ದರೂ ತಪ್ಪೇ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಮಂಡ್ಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕನ್ನಡದ ಹುಡುಗ ವಿಕಾಸ್ ಮೇಲೆ ಹಲ್ಲೆ ಮಾಡಿರುವ ಡಿಅರ್ಡಿಒ ಉದ್ಯೋಗಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಎರಡೂ ಕಡೆಯವರು ದೂರು ಸಲ್ಲಿಸಿದ್ದಾರ. ಹಲ್ಲೆ ಮಾಡಿದವ ವಿಂಗ್ ಕಮಾಂಡರ್ ಆಗಿರಲಿ, ಮತ್ತೇನಾದರೂ ಅಗಿರಲಿ, ಕಾನೂನಿನ್ವಯ ಕ್ರಮ ಜರುಗಿಸಲು ಹೇಳಿದ್ದೇನೆ ಎಂದರು. https://ainkannada.com/wing-commanders-true-colors-revealed-attempted-murder-case-registered-against-shiladitya-bose/ ಇದೇ ವೇಳೆ ರಾಜ್ಯದಲ್ಲಿ ಹಿಂದಿ ಹೇರಿಕೆಗೆ ನಾವು ಬಿಡಲ್ಲ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಒಪ್ಪಲ್ಲ, ನಮ್ಮ ವಿರೋಧವಿದೆ. ರಾಜ್ಯದಲ್ಲಿ ದ್ವಿಭಾಷ ನೀತಿ ಜಾರಿಯಲ್ಲಿದೆ. ರಾಜ್ಯದಲ್ಲಿ ಮಾತೃಭಾಷೆ ಕನ್ನಡ ಮತ್ತು ಇಂಗ್ಲಿಷ್ ಕಲಿಯುವ ಅವಕಾಶ ಇದೆ. ನಮ್ಮಲ್ಲಿ ತ್ರಿಭಾಷ ಸೂತ್ರವಿಲ್ಲ. ಕನ್ನಡ, ಇಂಗ್ಲಿಷ್ ಮಾತ್ರ ಕಲಿಸುತ್ತೇವೆ ಎಂದರು.
ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೀನ್ ಪೊಲಿಟಿಷಿಯನ್ ಅಲ್ಲ ಕರೆಪ್ಟ್ ಪೊಲಿಟಿಷಿಯನ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದರು. ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕ್ಲೀನ್ ಪೊಲಿಟೀಶಿಯನ್ ಅಲ್ಲ ಕರೆಪ್ಟ್ ಪೊಲಿಟೀಶಿಯನ್ ಅಂತಾ ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ. ಜಾತಿ ಜನಗಣತಿ ಬಗ್ಗೆ ತೀರ್ಮಾನ ಮಾಡಿ ಬಿಡ್ತಾರೆ ಅಂತಾ ವಿಶೇಷ ಕ್ಯಾಬಿನೆಟ್ ಕರೆದರೂ ಅಲ್ಲೂ ತೀರ್ಮಾನ ಆಗಿಲ್ಲ. ಸಿದ್ದರಾಮಯ್ಯ ಜಾತಿ ಜನಗಣತಿ ಹಿಡಿದುಕೊಂಡು ಆಡಳಿತ ಪಕ್ಷದಲ್ಲಿ ಇರೋ ಸಿಎಂ ಆಕಾಂಕ್ಷಿ ಇದ್ದಾರೆ ಅವರಿಗೆ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷದವರಿಗೂ ಕೂಡಾ ಬೆದರಿಸೋ ತಂತ್ರ ಮಾಡ್ತಿದ್ದಾರೆ. ಈ ತಂತ್ರದ ಹಿಂದೆ ಕುತಂತ್ರ ಇದೆ ಎಂದರು. https://ainkannada.com/senior-lawyer-sada-shivareddy-condemns-the-attack-and-protests-by-wearing-a-red-armband/ ಇನ್ನೂ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿ, ಪರೀಕ್ಷಾರ್ಥಿಗಳ ಜನಿವಾರ ತೆಗೆದಿರೋದು ಮಕ್ಕಳ ಮೇಲಲ್ಲ, ಹಿಂದೂ ಸಮಾಜದ ಮೇಲೆ ಬಲಾತ್ಕಾರ ಮಾಡ್ತಿದ್ದಾರೆ. ಹಿಂದೂಗಳಿಗೆ ಅಪಮಾನ ಮಾಡೋದು ಅಂದ್ರೆ ಸಿದ್ದರಾಮಯ್ಯನವರಿಗೆ ಪರಮಾನಂದ. ಹಿಂದೂಗಳಿಗೆ ಅಪಮಾನ ಮಾಡೋದು ಬಹಳ…
ಚಿಕ್ಕೋಡಿ:- KSRTC ಬಸ್ ಸ್ಟೆರಿಂಗ್ ರಾಡ್ ಕಟ್ ಆಗಿ ಬಸ್ ಒಂದು ಕಂದಕಕ್ಕೆ ಉರುಳಿರುವ ಘಟನೆ ಬೆಳಗಾವಿ ಜಿಲ್ಲೆಯ ಸತ್ತಿ ಗ್ರಾಮದ ಹೊರವಲಯದಲ್ಲಿ ಜರುಗಿದೆ. https://ainkannada.com/do-you-have-low-blood-pressure-if-so-eat-these-foods-to-increase-it/ ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ. ಈ ಬಸ್, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಡಿಪೋಗೆ ಸೇರಿದೆ. ಸತ್ತಿ ಗ್ರಾಮದಿಂದ ಅಥಣಿ ಕಡೆಗೆ ಬರುತ್ತಿದ್ದಂತೆ ಏಕಾಏಕಿ ಸ್ಟೇರಿಂಗ್ ರಾಡ್ ಕಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕೆ ಬಸ್ ಉರುಳಿದೆ. ಚಾಲಕನ ಸಮಯಪ್ರಜ್ಞೆಗೆ ಪ್ರಯಾಣಿಕರು ಸೇಫ್ ಆಗಿದ್ದು, ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಕ್ತ ಇರುವುದು ಬಹಳ ಮುಖ್ಯ. ರಕ್ತದ ಕೊರತೆಯ ಬಗ್ಗೆ ನೀವು ಈಗಾಗಲೇ ತಿಳಿದಿರುವಿರಿ. ರಕ್ತದ ಕೊರತೆಯು ಯಾವುದೇ ವ್ಯಕ್ತಿಗೆ ತಲೆತಿರುಗುವಿಕೆ, ತೀವ್ರ ತಲೆನೋವು ಮತ್ತು ದೇಹದಲ್ಲಿನ ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ. https://ainkannada.com/shootout-case-against-ricky-rai-muthappa-rais-2nd-wife-escapes-to-america/ ಆ ಜನರಲ್ಲಿ ರಕ್ತದ ಕೊರತೆ ಹೆಚ್ಚು. ಅವರು ಸರಿಯಾದ ಪೋಷಣೆ ಪಡೆಯುವುದಿಲ್ಲ ಅಥವಾ ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಕ್ತ ಉತ್ಪತ್ತಿಯಾಗುವುದಿಲ್ಲ. ಹೇಗಾದರೂ, ನೀವು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವಂತಹ ಕೆಲವು ಆಹಾರಗಳನ್ನು ತಿನ್ನುವುದರ ಮೂಲಕ ನೀವು ಕಡಿಮೆ ಅವಧಿಯಲ್ಲಿ ಸಾಕಷ್ಟು ರಕ್ತವನ್ನು ಹೊಂದಬಹುದು. ರಕ್ತಹೀನತೆಯಿಂದ ದೇಹವು ತುಂಬಾ ದುರ್ಬಲವಾಗುತ್ತದೆ. ಯಾವಾಗಲೂ ಆಯಾಸ. ಆಗಾಗ್ಗೆ ತಲೆನೋವು. ದೇಹದಲ್ಲಿ ರಕ್ತ ಕಡಿಮೆಯಾದಾಗ ಕೆಲವು ರೀತಿಯ ಆಹಾರ ಸೇವಿಸುವುದರಿಂದ ರಕ್ತ ಚೆನ್ನಾಗಿ ಹೆಚ್ಚುತ್ತದೆ. ಆ ಸೂಪರ್ ಫುಡ್‌ಗಳು ಯಾವುವು ಎಂಬುದು ಇಲ್ಲಿದೆ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ 5 ಲೀಟರ್ ರಕ್ತ ಇರಬೇಕು ಎಂದು ನಾವು ಪುಸ್ತಕಗಳಲ್ಲಿ ಓದಿದ್ದೇವೆ. ಆದರೆ ನಮ್ಮ ದೇಹದಲ್ಲಿ ಹಿಂದಿನ ಕಬ್ಬಿಣಾಂಶ ಇಲ್ಲದೇ ಹೋದರೆ, ನಾನಾ…
ರಾಯಚೂರು:- ನಗರದಲ್ಲಿ ಕಳ್ಳತನ , ದರೋಡೆ ಹಲವು ಪ್ರಕರಣ ಹೆಚ್ಚಾದ ಹಿನ್ನೆಲೆ, ಇದರ ಕಡಿವಾಣಕ್ಕೆ ಸಿಸಿಟಿವಿ ಅಳವಡಿಕೆ ಮಾಡುವಂತೆ ಸಾರ್ವಜನಿಕರು ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕರು ಸಿಸಿಟಿವಿ ಅಳವಡಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. https://ainkannada.com/not-shah-rukh-khan-salman-khan-or-allu-arjun-but-this-filmmaker-earns-rs-200-crore-fee-for-each-film/ ಸದಾರ್ ಬಜಾರ್ ಪೊಲೀಸ್ ಠಾಣೆಯಿಂದ ಹೀಗಾಗಿ ರಾಯಚೂರು ನಗರದ ಮುಖ್ಯ ವೃತ್ತಗಳಲ್ಲಿ ಅಶೋಕ ಡಿಪೋ ಸರ್ಕಲ್ ಹಾಗೂ ಉಸ್ಮಾನಿಯ ಮಸೀದಿ ಹತ್ತಿರ ಸೇರಿ 8 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ರಾಯಚೂರು ಎಸ್ ಪಿ ಪುಟ್ಟಮಾದಯ್ಯ ಅವರು ಸಿಸಿ ಕ್ಯಾಮರಾ ಉದ್ಘಾಟಸಿದರು. ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಕಳೆದು ಕೊಂಡ 13 ಮೊಬೈಲ್ಗಳನ್ನ ಹುಡುಕಿ ಇದೇ ವೇಳೆ ಪೊಲೀಸರು, ಮಾಲೀಕರಿಗೆ ಒಪ್ಪಿಸಿದರು. ಸದಾರ್ ಬಜಾರ್ ಸಿಪಿಐ ಉಮೇಶ್ ಕಾಂಬ್ಳೇ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.