Author: AIN Author

ಬೆಂಗಳೂರು::- ನಗರದಲ್ಲಿ ವಿಚಿತ್ರ ರೋಡ್ ರೇಜ್ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಕ್ಯಾಬ್ ಚಾವಕನೋರ್ವ ಲೇಡಿ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ನಡುರಸ್ತೆಯಲ್ಲೇ ಕಿರಿಕ್ ಮಾಡಿದ್ದಾನೆ. https://ainkannada.com/is-the-ant-infestation-increasing-in-your-home-if-so-do-this-its-not-a-fluke/ ಕಾರು ಡ್ರೈವಿಂಗ್ ಮಾಡ್ತಿದ್ದ ಲೇಡಿ ಜೊತೆ ಕಾರು ಚಲಾಯಿಸುತ್ತಿದ್ದ ಚಾಲಕ ಕಿರಿಕ್ ತೆಗೆದಿರುವ ವಿಡಿಯೋ ವೈರಲ್ ಆಗಿದೆ. ಲೆಫ್ಟ್ ಗೆ ಬರ್ತಿದ್ದಂಗೆ ಕಾರು ಚಾಲಕ ಕಿರಿಕ್ ತೆಗೆದಿದ್ದಾನೆ. ಅಶ್ಲೀಲವಾಗಿ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಗಾಡಿ ವಿಂಡೋ ಕೆಳಗಡೆ ಮಾಡಿ ಸೆಲ್ಫಿ ತಗೋತ್ತೀನಿ ಎಂದು ಕಿರಿಕ್ ತೆಗೆದಿದ್ದಾನೆ. ನಿಮ್‌ ಜೊತೆ ಸೆಲ್ಫಿ ತಗೋತ್ತೀನಿ ಎಂದು ಕಿರಿಕ್ ತೆಗೆದು ಪುಂಡನ ರೀತಿ ವರ್ತಿಸಿರುವ ಘಟನೆ ಸರ್ಜಾಪುರ‌ ಮುಖ್ಯರಸ್ತೆಯ ಹರಳೂರಿನಲ್ಲಿ ಘಟನೆ ಜರುಗಿದೆ.

Read More

ದಿನಾ ಮನೆಯನ್ನು ಗುಡಿಸಿ, ಒರೆಸಿ, ಸ್ವಚ್ಛವಾಗಿ ಇಟ್ಟುಕೊಂಡರೂ ಕೂಡ, ಜಿರಳೆ, ಸೊಳ್ಳೆ ಹಾಗೂ ಇರುವೆಗಳ ಕಾಟವನ್ನು ಮಾತ್ರ ತಡೆಯಲು ಸಾಧ್ಯವಿಲ್ಲ! ಇವು ಮೂವರೂ ಕೂಡ ಮನೆಗೆ ಕರೆಯದೇ ಬರುವ ಅತಿಥಿಗಳು! ಯಾವ ಸಮಯದಲ್ಲಿ ಹೇಗೆ ಮನೆಯೊಳಗೆ ಬಂದು ಬಿಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಇರುವೆಗಳು ಮನೆಗೆ ಬರಲು ಮೊದಲ ಕಾರಣವೆಂದರೆ ಆಹಾರ. ಯಾವುದೇ ಆಹಾರವನ್ನೇ ಆಗಲಿ ಇರುವೆಗಳು ಗುಂಪಾಗಿಯೇ ತೆಗೆದುಕೊಂಡು ಹೋಗುತ್ತವೆ. ಹೆಣ್ಣು ಇರುವೆಗಳನ್ನು ರಾಣಿ ಮತ್ತು ಗಂಡು ಇರುವೆಗಳನ್ನು ಡ್ರೋನ್ ಎಂದು ಕರೆಯಲಾಗುತ್ತದೆ. ಅಲ್ಲದೇ ಇವೆರಡೂ ಸಹ ಒಟ್ಟಾಗಿ ಕೆಲಸ ಮಾಡುತ್ತವೆ. ಇವು ನಿರಂತರವಾಗಿ ಆಹಾರ ಮತ್ತು ನೀರನ್ನು ಹುಡುಕುತ್ತಿರುತ್ತವೆ., ಇಂತಹ ವೇಳೆ ಇರುವೆ ದೊಡ್ಡ ಪ್ರಮಾಣದ ಆಹಾರ ಪದಾರ್ಥ ಅಥವಾ ಸಿಹಿ ಪದಾರ್ಥವನ್ನು ಕಂಡುಕೊಂಡಾಗ, ಅವು ವಿಶೇಷ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ, ಅದು ಇತರ ಇರುವೆಗಳಿಗೆ ಸಂಕೇತ ನೀಡುತ್ತದೆ. ಇವುಗಳನ್ನು ಅನುಸರಿಸಿ ಇತರ ಇರುವೆಗಳು ಸಹ ಅದೇ ಮಾರ್ಗವನ್ನು ಅನುಸರಿಸುತ್ತವೆ ಮತ್ತು ಆಹಾರವನ್ನು ತೆಗೆದುಕೊಂಡು ಸಾಲಾಗಿ ಬರುತ್ತವೆ. ಹೀಗೆ…

Read More

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರ್ ಆರ್ ವಿರುದ್ಧ ಗೆದ್ದು ಬೀಗಿದೆ. ಆದರೆ ಗೆಲುವಿನ ಸನಿಹದಲ್ಲಿ ಬಂದು ರಾಜಸ್ಥಾನ್ ಪಂದ್ಯ ಕೈಚೆಲ್ಲಿದೆ. https://ainkannada.com/cm-siddaramaiah-who-gave-the-bjp-to-the-bjp-said/ ಪಂದ್ಯದ ಸೋಲಿನ ನಂತರ ಪಂದ್ಯ ಪ್ರಸ್ತುತಿಯಲ್ಲಿ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು, ‘ನಾವು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆವು. ಈ ಪಿಚ್​ನಲ್ಲಿ 210 ರಿಂದ 215 ರನ್‌ ಕಲೆಹಾಕಬಹುದು ಎಂದು ನಾವು ಭಾವಿಸಿದ್ದೇವು. ಆದರೆ ನಾವು ಆರ್‌ಸಿಬಿಯನ್ನು 205 ರನ್​​ಗಳಿಗೆ ಕಟ್ಟಿಹಾಕಿದೆವು. ಈ ಗುರಿ ಬೆನ್ನಟ್ಟಿದಾಗ ಪಂದ್ಯದ ಮೊದಲಾರ್ಧದಲ್ಲಿ ನಾವು ಉತ್ತಮ ಸ್ಥಾನದಲ್ಲಿದ್ದೆವು. ಆದರೆ ಆ ನಂತರ ನಮ್ಮ ಬ್ಯಾಟಿಂಗ್‌ ಹಳಿತಪ್ಪಿತು. ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ವಿಶೇಷವಾಗಿ ಸ್ಪಿನ್ ಬೌಲರ್‌ಗಳ ವಿರುದ್ಧ, ನಾವು ಆಕ್ರಮಣಶೀಲತೆಯನ್ನು ತೋರಿಸಲಿಲ್ಲ’ ಎಂದರು. ಇನ್ನು ಮಧ್ಯಮ ಕ್ರಮಾಂಕದ ವೈಫಲ್ಯ ಮಾನಸಿಕ ಒತ್ತಡದಿಂದಾಗಿ ಸಂಭವಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಾಗ್, ‘ಹೌದು,…

Read More

ಬೆಂಗಳೂರು:- ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಸಂಪುಟ ಸಭೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು ಈ ಹಿಂದೆ ಕಲಬುರಗಿಯಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆದಿದ್ದು ಇಂದು ಚಾಮರಾಜನಗರದಲ್ಲಿ ನಡೆಸಿದ್ದೇವೆ. ಬೆಳಗಾವಿ ವಿಭಾಗದಲ್ಲಿ ವಿಜಯಪುರ, ಬೆಂಗಳೂರು ವಿಭಾಗದ ಸಂಪುಟ ಸಭೆಯನ್ನು ನಂದಿಬೆಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿ.ಎಂ ಸಿದ್ದರಾಮಯ್ಯ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ. https://ainkannada.com/more-than-20-districts-of-karnataka-today/ ಬಿಜೆಪಿ ಅವರು ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಸುಳ್ಳು ಆರೋಪ ಮಾಡ್ತಾ ಇದಾರೆ. ಸರ್ಕಾರವು ಎಲ್ಲಾ ಹಣನೂ ಗ್ಯಾರಂಟಿಗೆ ಹಾಕಿ ಅಭಿವೃದ್ದಿಗೆ ಕೆಲಸಗಳಿಗೆ ದುಡ್ಡೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಾ, ಸರ್ಕಾರದ ವಿರುದ್ಧ ದ್ವೇಷದ ಕಾರಣಕ್ಕೆ ಈ ಸುಳ್ಳು ಹೇಳಲಿದ್ದು ಸರ್ಕಾರದ ಬಳಿ ಹಣ ಇಲ್ಲದಿದ್ದರೇ 3600 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ಕೊಡಲು ಆಗುತ್ತಿತ್ತಾ ಎಂದು ಕಿಡಿಕಾರಿದರು. ನಾವೂ ಹೇಳಿದ್ದನ್ನೆ ಮಾಡೋದು ಬಿಜೆಪಿಗರಂತೆ ಜನರಿಗೆ ಸುಳ್ಳು ಹೇಳಿಕೊಂಡು ತಿರುಗೊಲ್ಲ ಎಂದು ಕುಟುಕಿದರು.

Read More

ಬೆಂಗಳೂರು:- ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainkannada.com/rcb-vs-rr-rcb-has-finally-laughed-at-home/ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಕೂಡ ಮಳೆಯಾಗಲಿದೆ ಎಚ್​ಎಎಲ್​ನಲ್ಲಿ 33.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, 33.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 34.8 ಡಿಗ್ರಿ ಸೆಲ್ಸಿಯಸ್ ಗರೊಷ್ಠ ಉಷ್ಣಾಂಶ, 21.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Read More

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಆರ್ ಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಮೂಲಕ ತವರಿನ ಸೋಲಿನ ಹಸಿವನ್ನು ನೀಗಿಸಿಕೊಂಡಿತು. https://ainkannada.com/these-piles-earn-a-huge-amount-of-money-from-a-source-fridays-fate-25-april-2025/ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕಗಳ ನೆರವಿನಿಂದ 205 ರನ್ ಗಳಿಸಿತು. ಇದಾದ ನಂತರ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಅವರ ಬಲವಾದ ಇನ್ನಿಂಗ್ಸ್ ರಾಜಸ್ಥಾನಕ್ಕೆ ಗೆಲುವಿನ ಭರವಸೆ ನೀಡಿತು. ಆದರೆ ಜೋಶ್ ಹ್ಯಾಜಲ್‌ವುಡ್ ಮತ್ತು ಕೃನಾಲ್ ಪಾಂಡ್ಯ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಪಂದ್ಯವನ್ನು ತಿರುಗಿಸಿ ಬೆಂಗಳೂರಿಗೆ ಗೆಲುವು ತಂದುಕೊಟ್ಟರು ಬೆಂಗಳೂರು ತಂಡವು ರಾಜಸ್ಥಾನವನ್ನು 11 ರನ್‌ಗಳಿಂದ ಸೋಲಿಸಿ ತವರಿನಲ್ಲಿ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಈ ಆರನೇ ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ವಿರಾಟ್ ಕೊಹ್ಲಿ 70 ರನ್ ಗಳಿಸಿದರೆ, ಪಡಿಕ್ಕಲ್ 50 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಹ್ಯಾಜಲ್‌ವುಡ್ 4 ವಿಕೆಟ್‌ಗಳನ್ನು ಪಡೆಯುವ…

Read More

! ಸೂರ್ಯೋದಯ – 5:57 ಬೆ. ಸೂರ್ಯಾಸ್ತ – 6:31 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ದ್ವಾದಶಿ ನಕ್ಷತ್ರ – ಪೂರ್ವಾಭಾದ್ರೆ ಯೋಗ – ಐಂದ್ರ ಕರಣ – ತೈತಲೇ ರಾಹು ಕಾಲ – 10:30 ದಿಂದ 12:00 ವರೆಗೆ ಯಮಗಂಡ – 03:00 ದಿಂದ 04:30 ವರೆಗೆ ಗುಳಿಕ ಕಾಲ – 07:30 ದಿಂದ 09:00 ವರೆಗೆ ಬ್ರಹ್ಮ ಮುಹೂರ್ತ – 4:21 ಬೆ. ದಿಂದ 5:09 ಬೆ. ವರೆಗೆ ಅಮೃತ ಕಾಲ – 2:07 ಬೆ. ದಿಂದ 3:33 ಬೆ. ವರೆಗೆ ಅಭಿಜಿತ್ ಮುಹುರ್ತ – 11:49 ಬೆ. ದಿಂದ 12:39 ಮ. ವರೆಗೆ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ,…

Read More

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದೆ. https://ainkannada.com/rcb-vs-rr-bombat-batting-rajasthan-206-target-bangalore/ ಮೊದಲಿಗೆ RCB ಪರ ಬ್ಯಾಟಿಂಗ್ ಶುರುಮಾಡಿದ ವಿರಾಟ್ ಕೊಹ್ಲಿ ಬೊಂಬಾಟ್ ಆಟ ಅಡಿ ತವರಲ್ಲಿ ರನ್ ಗಳ ಬರ ನೀಗಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ 2025 ರ 42 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸುವ ಮೂಲಕ ತಮ್ಮ ತವರಿನಲ್ಲಿ ರನ್‌ಗಳ ಬರವನ್ನು ಕೊನೆಗೊಳಿಸಿದರು. ಈ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟಿದಲ್ಲದೆ ಕ್ರಿಸ್ ಗೇಲ್ ದಾಖಲೆಯನ್ನು ಮುರಿದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಸೀಸನ್​ನ ಕೊನೆಯ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಕಳೆದ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ 30 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ ಅದ್ಭುತ ಪುನರಾಗಮನ ಮಾಡಿ ಅರ್ಧಶತಕ ಗಳಿಸುವ ಮೂಲಕ ತವರಿನ ಪ್ರೇಕ್ಷಕರ ಮುಖದಲ್ಲಿ…

Read More

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಮೊದಲಿಗೆ ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ದುಕೊಂಡು ಆರ್ ಸಿಬಿಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. https://ainkannada.com/terrorist-attack-in-pahalgam-hc-balakrishna-says-the-centre-is-responsible-for-this/ ಅದರಂತೆ RCB ಪರ ಓಪನರ್ ಗಳಾದ ವಿರಾಟ್ ಕೊಹ್ಲಿ ಹಾಗೂ ಸಾಲ್ಟ್ ಉತ್ತಮ ಆರಂಭ ಒದಗಿಸಿದರು. ಸಾಲ್ಟ್ ಔಟ್ ಆದ ಬಳಿಕ ಕ್ರೀಸ್ ಗೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಕೊಹ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಆ ಬಳಿಕ ದೇವದತ್ತ್ ಪಡಿಕ್ಕಲ್ ಔಟ್ ಆದ ಬಳಿಕ ಬಂದ ಕ್ಯಾಪ್ಟನ್ ರಜತ್ ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು. ನಂತರ ಜಿತೇಶ್ ಹಾಗೂ ಟಿಮ್ ಡೇವಿಡ್ ಅವರಿಂದ ಬೊಂಬಾಟ್ ಜೊತೆಯಾಟ ಮೂಡಿ ಬಂದಿತು. ಈ ಮೂಲಕ ಆರ್‌ಸಿಬಿ 205 ರನ್ ಗಳಿಸಿತು. ತಂಡದ ಪರ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 70 ರನ್ ಮತ್ತು ದೇವದತ್ ಪಡಿಕಲ್ 27 ಎಸೆತಗಳಲ್ಲಿ 50 ರನ್…

Read More

ರಾಮನಗರ:- ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಕೇಂದ್ರವೇ ಹೊಣೆ ಹೊರಬೇಕು ಎಂದು ಹೆಚ್ ಸಿ ಬಾಲಕೃಷ್ಣ ಹೇಳಿದ್ದಾರೆ. https://ainkannada.com/rs-92-crore-grant-for-cauvery-aarti-mla-dinesh-gooli-gowda-congratulates-cm-dcm-and-in-charge-minister/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಯಾವ ಸರ್ಕಾರ ಅಧಿಕಾರದಲ್ಲಿ ಇರುತ್ತೋ ಅದೇ ಸರ್ಕಾರ ಹೊಣೆ ಹೊರಬೇಕು. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಫೆಲ್ಯೂರ್ ಆಗಿದೆ. ಹಾಗಾಗಿ ಅಮಾಯಕರು ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ ಕಾಶ್ಮೀರದಲ್ಲಿ ಪ್ರವಾಸಿಗರಿಗೆ ರಕ್ಷಣೆ ನೀಡಬೇಕಿತ್ತು. ಕೆಂದ್ರದಲ್ಲಿ ಅಧಿಕಾರ ನಡೆಸುವವರೇ ಇದಕ್ಕೆ ಜವಾಬ್ದಾರಿ. ಮೃತರ ಕುಟುಂಬಕ್ಕೆ ಇಡೀ ರಾಜ್ಯ ಸರ್ಕಾರ ಸಾಂತ್ವನ ಹೇಳಿದೆ. ಸಿಎಂ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಸಂತೋಷ್ ಲಾಡ್ ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರನ್ನ ರಕ್ಷಣೆ ಮಾಡಿದ್ದಾರೆ. ನಾವು ನಮ್ಮ ಕೆಲಸ ಮಾಡಿದ್ದೇವೆ. ಯಾರು ಅಮಾಯಕರ ರಕ್ಷಣೆ ಮಾಡಬೇಕಿತ್ತೋ ಅವರು ಮಾಡಿಲ್ಲ ಎಂಬುದು ದೂರು ಎಂದು ಅಸಮಾಧಾನ ಹೊರಹಾಕಿದ್ದಾರೆ.

Read More