ಬೆಂಗಳೂರು : ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರ ಕುರಿತು ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಸಾಕಷ್ಟು ಅನ್ಯಾಯ ಮಾಡಿದ ಟಿಪ್ಪುವಿನ ಹೆಸರಿಡಬಾರದು ಎಂದು ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಈ ದೇಶದಲ್ಲಿದ್ದು, ಈ ದೇಶದವರಂತೆ ಬದುಕಲಿಲ್ಲ. ಆತ ಮತಾಂಧ. ಮತಾಂತರ ಮಾಡಿದ, ಸಾವಿರಾರು ಮಂದಿರಗಳನ್ನ ಕೊಳ್ಳೆ ಹೊಡೆದ. ಹಿಂದೂ ಸ್ತ್ರೀಯರ ಮಾನಭಂಗ ಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ. ಕೋಲಾರದ ವಸತಿ ಶಾಲೆಯಲ್ಲಿ ಮಲದ ಗುಂಡಿಗೆ ವಿದ್ಯಾರ್ಥಿಗಳನ್ನು ಇಳಿಸಿದ್ದಕ್ಕೆ ರವಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ತ್ರೇತಾಯುಗದಲ್ಲಿ ನಾವಿಲ್ಲ. ಇಷ್ಟೊಂದು ಟೆಕ್ನಾಲಜಿ ಬಂದಿದೆ. ಶೌಚಗುಂಡಿ ಸ್ವಚ್ಚತೆಗೆ ಮಶಿನ್ ಬಳಸಬೇಕು ಎಂಬ ನಿಯಮವಿದೆ. ಆದರೆ, ವಿದ್ಯಾರ್ಥಿಗಳನ್ನು ಇಳಿಸಿದ್ದು ನಾಚಿಕೆಗೇಡಿನ ಪರಮಾವಧಿ ಎಂದು ಬೇಸರಿಸಿದ್ದಾರೆ. ಇನ್ನು ಹಿಂದೂ ರಾಷ್ಟ್ರವಾಗೋದಕ್ಕೆ ನಾನು ಬಿಡೋದಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಯಾವುದೋ ಅಮಲಿನಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
Author: AIN Author
ಬೆಂಗಳೂರು: ಎತ್ತಿನ ಹೊಳೆ ಯೋಜನೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರವು ಅನುದಾನ ನೀಡಿಲ್ಲ. ಹೀಗಾಗಿ ಸ್ಥಗಿತಗೊಂಡಿದ್ದ ಯೋಜನೆಯ ಕೆಲಸವನ್ನು ಮತ್ತೆ ನಮ್ಮ ಸರ್ಕಾರ ಆರಂಭಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,ಎತ್ತಿನ ಹೊಳೆ ಯೋಜನೆಯು ಪ್ರಾರಂಭದಲ್ಲಿ ಅಂದಾಜು ವೆಚ್ಚ 13,500 ಸಾವಿರ ಕೋಟಿ ರೂ. ಮಾಡಲಾಗಿತ್ತು. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರವು ಅನುದಾನವನ್ನು ನೀಡಿಲ್ಲ. ಇದೇ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ನಮ್ಮ ಸರ್ಕಾರವು ಅನುದಾನ ಬಿಡುಗಡೆ ಮಾಡಲಾಗಿದೆ. ಯೋಜನೆಯ ಅಂದಾಜು ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ 22 ಸಾವಿರ ಕೋಟಿ ರೂ. ಆಗುತ್ತಿದೆ. ಎರಡು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ತಿಳಿಸಿದರು. ವಾಟರ್ ಸ್ಟೋರೆಜ್‌ಗಾಗಿ ಕೊರಟಗೆರೆ ರೈತರು ನೀಡಿರುವ ಭೂಮಿಗೆ ಎಕರೆಗೆ 8 ಲಕ್ಷ ರೂ. ಹಾಗೂ ದೊಡ್ಡಬಳ್ಳಾಪುರದಲ್ಲಿ ಎಕರೆ ಭೂಮಿಗೆ 32 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿದೆ. ಎಲ್ಲ ರೈತರಿಗೂ…
ಮುಂಬೈ: ಗೆಳತಿಯ ಕಾಲಿನ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧ ಥಾಣೆ (Thane) ವಿಭಾಗದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಧ್ಯಕ್ಷ (BJYM) ಅಶ್ವಜಿತ್ ಗಾಯಕ್ವಾಡ್ ವಿರುದ್ಧ ಕೇಸ್ ದಾಖಲಾಗಿದೆ. ಗಾಯಾಳು ಗೆಳತಿಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಸದ್ಯ ಪ್ರಿಯಾ ಆರೋಪಗಳನ್ನೆಲ್ಲಾ ಅಶ್ವಜಿತ್ ತಿರಸ್ಕರಿಸಿದ್ದು, ಹಣಕ್ಕಾಗಿ ಈ ರೀತಿ ಮಾಡುತ್ತಿದ್ದಾಳೆ. ಅಲ್ಲದೇ ಅವಳು ಬಿಂಬಿಸಿದ್ದೆಲ್ಲ ಸುಳ್ಳಾಗಿದೆ. ಪ್ರಿಯಾ ನನಗೆ ಜಸ್ಟ್ ಫ್ರೆಂಡ್ ಅಷ್ಟೇ ಎಂದು ಪೊಲೀಸರ ಮುಂದೆ ಅಶ್ವಜಿತ್ ಹೇಳಿದ್ದಾನೆ. ನಾನು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹೋಟೆಲ್‍ಗೆ ಕುಡಿದ ಅಮಲಿನಲ್ಲಿ ಬಂದಿದ್ದ ಪ್ರಿಯಾ, ತನ್ನೊಂದಿಗೆ ಮಾತನಾಡುವಂತೆ ಒತ್ತಾಯಿಸಿದಳು. ಈ ವೇಳೆ ನಾನು ನಿರಾಕರಿಸಿದಾಗ ಆಕೆ ನನ್ನ ಮೇಲೆ ದೌರ್ಜನ್ಯ ಎಸಗಿದಳು. ಅಲ್ಲದೆ ನನ್ನ ಸ್ನೇಹಿತರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾಳೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ನನ್ನ ಡ್ರೈವರ್ ಶೆಲ್ಕೆ, ಅವಳು ಪಕ್ಕಕ್ಕೆ ಹೋಗುವಂತೆ ನನ್ನ ಕಾರನ್ನು ಸ್ಟಾರ್ಟ್ ಮಾಡಿದರು. ಆದರೆ ಕಾರು ಸ್ವಲ್ಪ ತಾಗಿ ಕೆಳಗೆ ಬಿದ್ದಳು. ಈ…
ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಸೇರಿದಂತೆ ವಿಪಕ್ಷಗಳ 31 ಸಂಸದರನ್ನು ಲೋಕಸಭೆಯಿಂದ (Lok Sabha) ಅಮಾನತುಗೊಳಿಸಲಾಗಿದೆ. ಕಳೆದ ವಾರ ಆಗಿದ್ದ ಲೋಕಸಭಾ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ಪ್ರತಿಭಟಿಸಿದ್ದವು. ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಪ್ರತಿಪಕ್ಷಗಳ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಯಿತು. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿ ಕಳೆದ ವಾರ ವಿಪಕ್ಷಗಳ 13 ಸಂಸದರು ಅಮಾನತುಗೊಂಡಿದ್ದರು. ಈಗ ಮತ್ತೊಂದು ಸುತ್ತಿನಲ್ಲಿ 31 ಸಂಸದರು ಅಮಾನತುಗೊಂಡಿದ್ದಾರೆ. ಇದಲ್ಲದೇ ಇನ್ನೂ ಮೂವರು ಸಂಸದರನ್ನು ವಿಶೇಷಾಧಿಕಾರ ಸಮಿತಿ ವರದಿ ಬರುವವರೆಗೆ ಅಮಾನತುಗೊಳಿಸಲಾಗಿದೆ. ಇದರರ್ಥ ಒಟ್ಟು 46 ಸಂಸದರನ್ನು ಅಮಾನತುಗೊಳಿಸಲಾಗಿದೆ. ಅವರಲ್ಲಿ 43 ಮಂದಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿದ್ದಾರೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ರಾಶಿ ಹರಳು ಪರಿಣಿತರು. Mob.9353488403 ಸರ್ಕಾರಿ ಕೆಲಸ ಅವುಗಳಲ್ಲಿ ನೂರಾರು ಇಲಾಖೆಗಳಿವೆ. ತುಂಬಾ ಜನ ಪ್ರಯತ್ನ ಮಾಡುತ್ತಾರೆ ಆದರೆ ದುರ್ದೈವ ಯಶಸ್ವಿನಿ ದಾರಿ ದೊರೆಯುವುದಿಲ್ಲ.ಆದ್ದರಿಂದ ಅವನು ಜೀವನದಲ್ಲಿ ತುಂಬಾ ಹತಾಶನಾಗುತ್ತಾನೆ. ಅದಕ್ಕಾಗಿ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ ಬನ್ನಿ ತಿಳಿಯೋಣ. ಜಾತಕದ ಕುಂಡಲಿಯಲ್ಲಿ ಲಗ್ನ ಹಾಗೂ ದಶಮ ಸ್ಥಾನದಲ್ಲಿ ಮಂಗಳ, ರಾಹು ಹಾಗೂ ಶನಿ ಗ್ರಹಗಳು ಇದ್ದರೆ ಸರಕಾರಿ ಕೆಲಸ ಸಿಗುತ್ತದೆ. ಮೇಷ ಲಗ್ನವಾಗಿ ದಶಮ ಸ್ಥಾನದಲ್ಲಿ ಶನಿ ಮಂಗಳ ಗ್ರಹ ಇದ್ದರೆ ಸರಕಾರಿ ಇಲಾಖೆಯಲ್ಲಿ ಮೇಲಾಧಿಕಾರಿ ಆಗುತ್ತಾನೆ. ಮೇಷ ಲಗ್ನದಲ್ಲಿ ಶುಕ್ರ ಯೋಗ ಇದ್ದರೆ ನೌಕರಿ ಸಿಗಲು ಅವಕಾಶ ತುಂಬಾ ಇದೆ. ದಶಮ ಸ್ಥಾನ ಚರರಾಶಿ ಆಗಿ ಅಂದರೆ ಮೇಷ, ಕರ್ಕ ತುಲಾ ಹಾಗೂ ಮಕರವಾದರೆ ಜಾತಕ ಹೊಂದಿದವರಿಗೆ ಸರ್ಕಾರಿ ಯಾವುದಾದರೂ ಇಲಾಖೆಯಲ್ಲಿ ಕೆಲಸ ದೊರೆಯುತ್ತದೆ. ಸೋಮಶೇಖರ್B.Sc ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು,ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403
ಮಂಡ್ಯ: ಫೇಸ್ ಬುಕ್ ನಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ತನ್ನ ಸಮಸ್ಯೆಯ ಹೇಳಿ ಹಣ ದೋಚುತ್ತಿದ್ದ ಆಸಾಮಿಯನ್ನ ಮಂಡ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಂಜನ್ ಗೌಡ ಬಂಧಿತ ಆರೋಪಿಯಾಗಿದ್ದು,. ನೋಡುವುದಕ್ಕೆ ಅಂದವಾಗಿ ಕಂಡರು ಇತ ಮಾಡುತ್ತಿದ್ದದ್ದು ಮಾತ್ರ ಖತರ್ನಾಕ್ ಕೆಲಸ. ಈತನ ಬಣ್ಣದ ಮಾತಿಗೆ ಅದೆಷ್ಟೋ ಮಹಿಳೆಯರು ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಎಲ್ಲಿ ಗಂಡನಿಗೆ, ಕುಟುಂಬಸ್ಥರಿಗೆ ಗೊತ್ತಾಗಿ ಬಿಡುತ್ತೆ ಎಂದು ಎಷ್ಟೋ ಜನ ಮಹಿಳೆಯರು ದೂರು ಕೊಡಲು ಸಹಾ ಹಿಂದೇಟು ಹಾಕಿದ್ದಾರೆ. ಆದರೆ, ಇತ್ತೀಚೆಗೆ ಈತನಿಂದ ಮೋಸಹೋದ ಮಹಿಳೆಯೊಬ್ಬಳು, ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆರೋಪಿ ರಂಜನ್ನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಇದೇ ರೀತಿ ಹತ್ತಾರು ಮಹಿಳೆಯರಿಗೆ ಮೋಸ ಮಾಡಿರುವುದು ಕೂಡ ಗೊತ್ತಾಗಿದೆ. ಬಳಿಕ ಆರೋಪಿಯಿಂದ 182 ಗ್ರಾಂ ಚಿನ್ನಾಭರಣವನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ನಗರದ ಕೆಸಿ ಜನರಲ್ (KC General) ಅಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಜಗತ್ತಿಗೆ ಬರುವ ಮುಂಚೆಯೇ ಕಂದಮ್ಮ ಕಣ್ಣು ಮುಚ್ಚಿದ ಘಟನೆಯೊಂದು ನಡೆದಿದೆ. ಚೊಕ್ಕಸಂದ್ರದ ದೇವಿಕಾ ಎಂಬವರಿಗೆ 9 ತಿಂಗಳು ಭರ್ತಿಯಾಗಿ 12 ದಿನದ ಬಳಿಕ ಆಸ್ಪತ್ರೆ ವೈದ್ಯರು ಡೆಲಿವರಿಗೆ ಡೇಟ್ ಕೊಟ್ಟರು. ಆದರೆ ಡೇಟ್ ಮೀರಿದೆ ಸಿಜೇರಿಯನ್ ಮಾಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದರೂ ವೈದ್ಯರು ಒಪ್ಪದೇ ನಾರ್ಮಲ್ ಗೆ ರೆಡಿ ಮಾಡಿದ್ದಾರೆ. ಬಳಿಕ ನಾರ್ಮಲ್ ಆಗಲ್ಲ ಸಿಜೇರಿಯನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಕೊನೆಗೆ ಮಗು ಗಲೀಜು ನೀರು ಕುಡಿದಾಗಿದ್ದು, ಮಗು ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಗಲಾಟೆ ನಡೆಸಿದ್ದು, ಆಕ್ರೋಶ ಹೊರಹಾಕಿ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ಮಗು ಸತ್ತು ಹೋದ ಮೇಲೆಯೂ ದುಡ್ಡು ಕೊಡಿ ಎಂದು ಆಸ್ಪತ್ರೆಯವರು ಕೇಳಿದ್ದಾರೆ. ಭಾನುವಾರ 10 ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಸಂಜೆ 7 ಗಂಟೆಯವರೆಗೆ ಆಸ್ಪತ್ರೆಯವರು ಕಾಯಿಸಿದ್ದಾರೆ. ಒಂದು ವಾರದ ಹಿಂದೆ ನಾರ್ಮಲ್ ಆಗಲ್ಲ, ಸಿಜೇರಿಯನ್…
ಖ್ಯಾತ ನಟ ಕಿಚ್ಚ ಸುದೀಪ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ನಟ ವಿಷ್ಣುವರ್ಧನ್ ಅವರ ಪುಣ್ಯಭೂಮಿ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಿನ್ನೆ ಡಿಕೆಶಿಯನ್ನು ಭೇಟಿ ಮಾಡಿದ್ದ ಸುದೀಪ್, ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯ ಭೂಮಿಯನ್ನು ಅಭಿಮಾನಿಗಳ ಕೋರಿಕೆಯ ಮೇರೆಗೆ ಹಾಗೆಯೇ ಉಳಿಸಿಕೊಳ್ಳಬೇಕು ಮತ್ತು ಹತ್ತು ಗುಂಟೆ ಜಮೀನನ್ನು ನೀಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಕನ್ನಡ ಸಿನಿಮಾ ರಂಗದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆಗುತ್ತಾ? ಇಂತಹ ಆತಂಕದ ಮಾಹಿತಿಯನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೊರಹಾಕಿದ್ದಾರೆ.
ಚಿಕ್ಕೋಡಿ: ಮಕ್ಕಳನ್ನು ಶಾಲೆಗೆ ಕರೆ ತರುವಾಗ ಖಾಸಗಿ ಶಾಲಾ ಬಸ್‌ವೊಂದು ಪಲ್ಟಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ನಡೆದಿದೆ. ಓವರ್ ಟೆಕ್ ಮಾಡುವಾಗ ರಸ್ತೆ ಪಕ್ಕದ ತಗ್ಗಿಗೆ ಶಾಲಾ ಬಸ್ ವಾಲಿ ಪಲ್ಟಿಯಾಗಿದೆ. ಕೂಡಲೆ ಸ್ಥಳೀಯರು ಮಕ್ಕಳನ್ನು ಹಾಗೂ ಡ್ರೈವರ್‌ನನ್ನು ರಕ್ಷಣೆ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಸಣ್ಣ- ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಥಣಿ ತಾಲೂಕಿನ ಹಲವು ಬಾರಿ ಬಸ್ ಬಿದ್ದಿರುವ ಘಟನೆ ನಡೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. ಮಕ್ಕಳ ಸುರಕ್ಷತೆ ಆದ್ಯತೆ ಮರೆತು ನಿಯಮ ಪಾಲಿಸದೆ ಬೇಕಾಬಿಟ್ಟಿ ವಾಹನ ಚಲಾಯಿಸುವ ಚಾಲಕರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಳೆದ 5 ತಿಂಗಳಲ್ಲಿ ಮೂರನೇ ಪ್ರಕರಣ ಇದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರ: ಹೆಂಡತಿ ಸಮಾಧಿಗೆ ಪೂಜೆ ಮಾಡಿ ಹೆಂಡತಿ ಸಮಾಧಿ ಎದುರೇ ಗಂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರವಲಯದ ತೀಮಾಕಲಪಲ್ಲಿ ಸ್ಮಶಾನದಲ್ಲಿ ನಡೆದಿದೆ. ಬಾಗೇಪಲ್ಲಿ ನಗರದ 16 ನೇ ವಾರ್ಡ್ ನಿವಾಸಿ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಗುರುಮೂರ್ತಿ ಅಲಿಯಾಸ್ ಲೆಗ್ ಆತ್ಮಹತ್ಯೆಗೆ ಶರಣಾಗಿರವ ವ್ಯಕ್ತಿ. ಅಂದಹಾಗೆ ಕಳೆದ ವರ್ಷ ಡಿಸೆಂಬರ್ 20 ರಂದು ಪತ್ನಿ ಮೌನಿಕಾ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಳು. ಇನ್ನೂ ಹೆಂಡತಿ ಸಾವಿನ ನೋವಲ್ಲೇ ಮಾನಸಿಕ ಕಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ! ವ್ಯಕ್ತವಾಗಿದೆ. ಇಂದು ಬೆಳಿಗ್ಗೆ ವಾಕಿಂಗ್ ಹೋಗಿ ಬರೋದಾಗಿ ಹೇಳಿ ಹೋಗಿರೋ ಗುರುಮೂರ್ತಿ ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ತದನಂತರ ಅಲ್ಲೇ ಇದ್ದ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ಠಾಣೆ…