ಸ್ಮಾರ್ಟ್ ಫೋನ್‌ಗಳು ಈಗ ಎಲ್ಲರ ಬದುಕಿನ ಭಾಗವಾಗಿದೆ. ದಿನದ ಸಾಕಷ್ಟು ಕೆಲಸ ಕಾರ್ಯಗಳಿಗೆ ಸ್ಮಾರ್ಟ್‌ಫೋನ್‌ಗಳೇ ಆಧಾರವಾಗಿವೆ. ನಮ್ಮ ಆಂಡ್ರಾಯ್ಡ್ ಫೋನ್‌ನನ್ನು ಫಾಸ್ಟ್ ಆಗಿಸಲು ಕೆಲವೊಂದು ಮಾರ್ಗೋಪಾಯಗಳಿವೆ. ಇವುಗಳನ್ನು ಪಾಲಿಸಿಕೊಂಡು ಹೋದರೆ ಫೋನ್ ಸ್ಲೋ ಆಗುವ ಕಷ್ಟದಿಂದ ಕೊಂಚ ಮುಕ್ತಿ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆ ಮಾರ್ಗೋಪಾಯಗಳೇನು…? ಇಲ್ಲಿದೆ ಕೆಲ ಸರಳ ಟಿಪ್ಸ್. ಕ್ಯಾಶೆ ಕ್ಲಿಯರ್ ಮಾಡಿ : ದಿನ ಕಳೆದಂತೆ ಕ್ಯಾಶೆ ಡೇಟಾ ಸಂಗ್ರಹವಾಗುತ್ತಾ ಹೋಗುತ್ತದೆ. ಇದು ನಿಮ್ಮ ಫೋನನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಕ್ಯಾಶೆ ಡೇಟಾ ಕ್ಲಿಯರ್ ಮಾಡುವುದು ಬಹಳ ಅಗತ್ಯ. ಅದಕ್ಕೆ ನೀವು ಸೆಟ್ಟಿಂಗ್‌ಗೆ > ಸ್ಟೋರೇಜ್ > ಕ್ಯಾಶೆಡ್ ಡೇಟಾಕ್ಕೆ ಹೋಗಿ ಕ್ಲಿಯರ್ ಮಾಡಬೇಕು. ಹೀಗೆ ಆಗಾಗ ಕ್ಯಾಶೆ ಡೇಟಾ ಕ್ಲಿಯರ್ ಮಾಡುತ್ತಿದ್ದರೆ ಮೆಮೋರಿ ಸ್ಪೇಸ್ ಫ್ರೀ ಆಗುತ್ತದೆ ಮತ್ತು ನಿಮ್ಮ ಡಿವೈಜ್‌ನ ಪರ್ಫಾರ್ಮೆನ್ಸ್ ಉತ್ತಮವಾಗುತ್ತದೆ. ಅನಗತ್ಯ ಆಪ್‌ಗಳು : ಸಾಕಷ್ಟು ಆಪ್‌ಗಳನ್ನು ನಾವು ಬಳಸುತ್ತೇವೆ. ಆದರೆ ಕೆಲವೊಂದು ಆಪ್‌ಗಳನ್ನು ಒಮ್ಮೆ ಬಳಸಿ ಮತ್ತೆ ಅವುಗಳತ್ತ ತಿರುಗಿಯೂ ನೋಡುವುದಿಲ್ಲ ಅಥವಾ ಅಪರೂಪಕ್ಕೊಮ್ಮೆ ಬಳಸುತ್ತೇವೆ. ಹೀಗೆ ನಿಮ್ಮ ಮೊಬೈಲ್‌ನಲ್ಲಿ…
Author: AIN Author
ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಬಹುದಿನದ ಬಳಿಕ ಹಿಂದೂ ಫೈರ್ ಬ್ರ್ಯಾಂಡ್ ನಾಯಕರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಯ ಜೊತೆಗೆ ತೀವ್ರ ಕುತೂಹಲ ಹುಟ್ಟಿಸಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗ್ಡೆ (Anantkumar Hegde) ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಬ್ಬರೂ ಜೊತೆಗೂಡಿ ದೆಹಲಿಗೆ ಪಯಣ ಬೆಳೆಸಿದ್ದಾರೆ. ಭಾನುವಾರ ರಾತ್ರಿ 8.30ರ ವಿಮಾನದಲ್ಲಿ ಇಬ್ಬರು ಹಿಂದೂ ಫೈರ್ ಬ್ರ್ಯಾಂಡ್‍ಗಳು ರಾಷ್ಟ್ರ ರಾಜಧಾನಿಗೆ ಹಾರಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಈ ಇಬ್ಬರು ನಾಯಕರ ಜೊತೆಗೆ ಸಂಸದ ಸಂಗಣ್ಣ ಕರಡಿ ಕೂಡ ಅದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಸದ್ಯ ಯತ್ನಾಳ್ ಹಾಗೂ ಅನಂತ್ ಕುಮಾರ್ ನಾಯಕರ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು: ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಲಯ ಕಚೇರಿ 18 ನೇ ಡಿಸೆಂಬರ್ 2023 ರ ಮುಂಜಾನೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆಯ ವರದಿಯನ್ನು ನೀಡಿದೆ ಮುಂದಿನ 24 ಘಂಟೆಗಳು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಭಾಗಗಳಲ್ಲಿ ಮಳೆ ಬರುವ ಬಹಳಷ್ಟು ಸಂಭವವಿದೆ ಇದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆಯ ಸಂಭವವಿದೆ ಇದೆ ಎಂದು ಇಲಾಖೆ ಅಂದಾಜಿಸಿದೆ. ಮುಂದಿನ 48 ಘಂಟೆಗಳು ರಾಜ್ಯದಾದ್ಯಂತ ಒಣಹವೆಯ ಸಂಭವವಿದೆ ಇದೆ. ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಭಾಗಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಂಭವವಿದೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಂಭವಗಳಿವೆ. ಮುಂದಿನ 48 ಗಂಟೆಗಳು: ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಭಾಗಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಂಭವವಿದೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ…
ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕು ಯಲವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ ಆರೋಪದ ಜೊತೆಗೆ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದೆ. ಪೊಷಕರೊಬ್ಬರು ಮತ್ತೊಂದು ಸ್ಟೋಟಕ ಹೇಳಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳು ಬಟ್ಟೆ ಬದಲಿಸುವ ಫೋಟೋ ಕೂಡ ತಗೆಯಲಾಗ್ತಿತ್ತು ಅಂತಾ ಆರೋಪಿಸಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಶಾಲೆಯಲ್ಲಿ ಹೆಣ್ಣು ಮಕ್ಕಳ ಬಟ್ಟೆ ಬದಲಿಸುವ ಫೋಟೋ ತೆಗೆದ ವಿಷಯ ಶುದ್ಧ ಸುಳ್ಳು. ಶಾಲೆಯಲ್ಲಿ ಮಾರೇಶ್, ಚಿತ್ರಕಲಾ ಶಿಕ್ಷಕರು ಮುನಿಯಪ್ಪರಿಂದ ಗುಂಪುಗಾರಿಕೆ ನಡೆದಿದೆ ಅಂತಾ ಪ್ರಾಂಶುಪಾಲೆ ಭಾರತಮ್ಮ ಆರೋಪಿಸಿದ್ದಾರೆ. ಬಟ್ಟೆ ಬದಲಾಯಿಸುವ ವೇಳೆ ನನ್ನ ಹಾಗೂ ಮತ್ತೊಬ್ಬ ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾಳೆ. ಶಾಲಾ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿನಿ, ಪೋಷಕರಿಂದ ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ 17 ( ಭಾನುವಾರ) ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಮೊದಲ ಟಿ20-ಐ ಪಂದ್ಯದಲ್ಲಿ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ (55* ರನ್) ಸಿಡಿಸಿದ ಸಾಯಿ ಸುದರ್ಶನ್ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯದಲ್ಲೇ ಫಿಫ್ಟಿ ಬಾರಿಸಿದ 17ನೇ ಹಾಗೂ 4ನೇ ಆರಂಭಿಕ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಭಾರತ ತಂಡದ ಪರ ಪದಾರ್ಪಣೆ ಮಾಡಿದ 400ನೇ ಆಟಗಾರರಾದ ಸಾಯಿ ಸುದರ್ಶನ್ ನಾಯಕ ಕೆ.ಎಲ್.ರಾಹುಲ್ ರಿಂದ ಕ್ಯಾಪ್ ಪಡೆದರು. ಋತುರಾಜ್ ಗಾಯಕ್ವಾಡ್ ರೊಂದಿಗೆ ಇನಿಂಗ್ಸ್ ಆರಂಭಿಸಿದ ಸಾಯಿ ಸುದರ್ಶನ್ , ದಕ್ಷಿಣ ಆಫ್ರಿಕಾದ ಯುವ ವೇಗಿ ನಂಡ್ರೆ ಬರ್ಗರ್ ಬೌಲಿಂಗ್ ನಲ್ಲಿ ಕವರ್ ಡ್ರೈವ್ ಮೂಲಕ ರನ್ ಗಳಿಸಿದ ಸಾಯಿಸುದರ್ಶನ್ ಅವರು ಬರ್ಗರ್ ಬೌಲಿಂಗ್ ನಲ್ಲಿ ಚೆಂಡನ್ನು ಪ್ಯಾಡ್ ಮೇಲೆ ಎಳೆದುಕೊಂಡಿದ್ದರಾದರೂ ಅಂಪೈರ್ ಕೃಪೆಯಿಂದ ಜೀವದಾನ ಪಡೆದಿದ್ದರು. ದಕ್ಷಿಣ ಆಫ್ರಿಕಾ ರಿವ್ಯೂ ಪಡೆಯದ ಕಾರಣ ತಮಿಳುನಾಡಿನ ಯುವ ಆಟಗಾರ ಮತ್ತೊಮ್ಮೆ ಪಾರಾದರು. ಋತುರಾಜ್ ಗಾಯಕ್ವಾಡ್ (5ರನ್)…
ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕು ಯಲವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ ನಡೆದಿತ್ತು. ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಲಾಗಿತ್ತು. ಸದ್ಯ ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪರನ್ನು ಮಾಸ್ತಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪ ಬಂಧಿತರು. ಹಾಸ್ಟೆಲ್ ವಾರ್ಡನ್ ಮಂಜುನಾಥ್ ಮತ್ತು ಅತಿಥಿ ಶಿಕ್ಷಕ ಅಭಿಷೇಕ್ ಪರಾರಿ ಆಗಿದ್ದು, https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಹುಡುಕಾಟ ನಡೆಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ದೂರು ಹಿನ್ನೆಲೆ ಮಲಹೊರುವ ಪದ್ಧತಿ ನಿಯಂತ್ರಣ ಕಾಯ್ದೆ, ಅಟ್ರಾಸಿಟಿ ಕಾಯ್ದೆಯಡಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕಳೆದ ಹಲವು ದಿನಗಳಿಂದ ಮಕ್ಕಳಿಗೆ ವಿವಿಧ ರೀತಿಯಲ್ಲಿ ಕಿರುಕುಳ ಕೂಡ ನೀಡಲಾಗುತ್ತಿದೆ ಅಂತಾ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರ ವಿರುದ್ಧ ಆರೋಪ ಕೇಳಿಬಂದಿತ್ತು.
ಜೋಹಾನ್ಸ್‌ಬರ್ಗ್: ಅರ್ಷ್‌ದೀಪ್ ಸಿಂಗ್ (Arshdeep Singh) ಮತ್ತು ಅವೇಶ್ ಖಾನ್ ಅವರ ಘಾತಕ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಯುವ ಆರಂಭಿಕ ಸಾಯಿ ಸುದರ್ಶನ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ ಭಾರತ (Team India) 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಸೂಪರ್ ಸಂಡೇ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ (South Africa) ತಂಡ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 16.4 ಓವರ್‌ಗಳಲ್ಲೇ 2 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಜಯ ಸಾಧಿಸಿತು. ಭಾರತದ ಪರ ತಾಳ್ಮೆಯ ಆಟವಾಡಿದ ಯುವ ಆರಂಭಿಕ ಸಾಯಿ ಸುದರ್ಶನ್ (Sai Sudharsan) ಹಾಗೂ…
ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಲೀಲಾವತಿ (Leelavati) ಅವರ ನಿಧನಾ ನಂತರ ಮನೆಯಲ್ಲಿ 11ನೇ ದಿನದ ಸ್ಮರಣೆ ಕಾರ್ಯ ನಡೆಯುತ್ತಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ 9Soladevanahalli) ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ (Vinod Raj) ಮತ್ತು ಕುಟುಂಬ 11ನೇ ದಿನದ ಕಾರ್ಯವನ್ನು ನೆರವೇರಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಪೂಜೆ ಕಾರ್ಯಗಳು ಶುರುವಾಗಿದ್ದು, ಸಿನಿಮಾ ರಂಗದ ಗಣ್ಯರು ಆಗಮಿಸುವ ಸಾಧ್ಯತೆಯಿದೆ. ಕನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಲೀಲಾವತಿ (Leelavati) ಅವರು, ಆನಂತರ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ನಟಿಸಿದವರು. ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸೇರಿದಂತೆ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 1949ರಲ್ಲಿ ತೆರೆ ಕಂಡ ಶಂಕರ್ ಸಿಂಗ್ ಅವರ ನಾಗಕನ್ನಿಕ ಇವರ ಮೊದಲ ಚಿತ್ರ. ಇದಕ್ಕೂ ಮೊದಲು ಲೀಲಾವತಿ ಅವರು ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಕಯಾದುವಿನ ಸಖಿ, ಭಕ್ತ ಪ್ರಹ್ಲಾದ ಸೇರಿದಂತೆ ಸಾಕಷ್ಟು ನಾಟಕಗಳಲ್ಲಿ ಇವರು ಅಭಿನಯಿಸಿದ್ದಾರೆ. ಸಿನಿಮಾ ರಂಗಕ್ಕೆ ಬಂದ ನಂತರ,…
ಇಸ್ಲಾಮಾಬಾದ್: ತಲೆಮರೆಸಿಕೊಂಡಿದ್ದ ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ (Karachi Hospital) ದಾಖಲಾಗಿರುವುದಾಗಿ ಮೂಲಗಳು ತಿಳಿಸಿವೆ. ಸದ್ಯ ಪ್ರಾಥಮಿಕ ಮೂಲಗಳ ಮಾಹಿತಿಯಿಂದ ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಎರಡು ದಿನಗಳಿಂದಲೂ ಇಬ್ರಾಹಿಂ ಆಸ್ಪತ್ರೆಯಲ್ಲಿರುವುದಾಗಿ ತಿಳಿದುಬಂದಿದೆ. ದಾವೂದ್ ಇಬ್ರಾಹಿಂ ದಾಖಲಾಗಿರುವ ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆಸ್ಪತ್ರೆಯ ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಮಾತ್ರವೇ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಇಬ್ರಾಹಿಂ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಮುಂಬೈ ಪೊಲೀಸರು (Mumbai Police) ಪಾತಕಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಯು ಪ್ರಯತ್ನಿಸುತ್ತಿದ್ದಾರೆ. https://ainlivenews.com/aishwarya-rai-left-her-husbands-house-mother-in-law-rift-in-big-bs-house/ ಈ ವರ್ಷದ ಜನವರಿ ತಿಂಗಳಲ್ಲಿ ದಾವೂದ್ ಸಹೋದರಿ ಹಸೀನಾ ಪಾರ್ಕರ್‌ನ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೇಳಿಕೆ ನೀಡಿದ್ದು, ಇಬ್ರಾಹಿಂ 2ನೇ ಮದುವೆಯಾಗಿ ಕರಾಚಿಯಲ್ಲೇ ನೆಲೆಸಿರುವುದಾಗಿ ತಿಳಿಸಿದ್ದ. ಭೂಗತ…
ಪುಣೆ:- ನನಗಿನ್ನೂ ವಯಸ್ಸಾಗಿಲ್ಲ ಇನ್ನೂ ಶಕ್ತಿ ಇದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಎತ್ತಿನ ಬಂಡಿ ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನಗೆ ನಿಮ್ಮ ಬಗ್ಗೆ ಒಂದು ದೂರು ಇದೆ. ನನಗೆ 83 ವರ್ಷವಾಗಿದೆ ಎಂದು ನೀವು ನಿಮ್ಮ ಭಾಷಣಗಳಲ್ಲಿ ಹೇಳುತ್ತೀರಿ. ನನಗೆ 84 ವರ್ಷವಾಗಿದೆ. ನೀವು ಗಮನಿಸಿದ್ದು ಏನು? ನನಗೆ ವಯಸ್ಸಾಗಿಲ್ಲ. ನನಗೆ ಕೆಲವರನ್ನು ಸರಿಪಡಿಸುವ ಶಕ್ತಿ ಇದೆ. ತಲೆಕೆಡಿಸಿಕೊಳ್ಳಬೇಡಿ’ ಎಂದು ಹೇಳಿದ್ದಾರೆ. ಶರದ್ ಪವಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಅಧಿಕಾರದಲ್ಲಿ ಇರುವವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಈರುಳ್ಳಿ ಸೇರಿ ಇನ್ನಿತರ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದ್ದೇ ಇದಕ್ಕೆ ಉದಾಹರಣೆ. ರೈತರಿಗೆ ಸಹಾಯ ಮಾಡುವ ಬದಲು. ಮತ್ತಷ್ಟು ಅಡೆತಡೆಗಳನ್ನು ಸೃಷ್ಠಿಸುತ್ತಿದೆ’ ಎಂದು ಪವಾರ್ ದೂರಿದರು.