Author: AIN Author

ಮಂಡ್ಯ: ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿ ಮಗನ ಜೊತೆ ಸೇರಿ ಗಂಡನನ್ನೇ ಪತ್ನಿ ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಚಾಪುರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಚಾಪುರದೊಡ್ಡಿ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿ ಉಮೇಶ್ (50) ಎನ್ನಲಾಗಿದೆ. ಪತ್ನಿ ಸವಿತಾ, ಮಗ ಶಶಾಂಕ್ ರಿಂದ ಕೃತ್ಯವೆಸಗಲಾಗಿದೆ. ಮೂರು ತಿಂಗಳ ಇದೆ ಗಂಡನನ್ನ ತೊರೆದು ಬೆಂಗಳೂರಿನಲ್ಲಿ ಮಗನ ಜೊತೆ ವಾಸವಾಗಿದ್ದ ಸವಿತಾ ರಾತ್ರಿ ಪಿತೃಪಕ್ಷ ಹಬ್ಬ ಮಾಡಲು ಊರಿಗೆ ಬಂದಿದ್ದ ಸವಿತಾ. ಚಾಪುರದೊಡ್ಡಿ ಗ್ರಾಮಕ್ಕೆ ಬಂದಿದ್ದಳು. ಈ ವೇಳೆ ಪತ್ನಿಯನ್ನ ಮನೆಯೊಳಗೆ ಸೇರಿಸದರು. ಈ ವೇಳೆ ಮತ್ತೆ ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಅವರುಗಳೊಂದಿಗೆ ಜಗಳ ನಡೆದು ದೊಣ್ಣೆ ಹಾಗೂ ಮಚ್ಚುಗಳಿಂದ ಇಬ್ಬರು ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಉಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಉಮೇಶ್ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ ಸವಿತಾ ಹಾಗೂ ಶಶಾಂಕ್ ಸ್ಥಳದಿಂದ…

Read More

ಬೆಂಗಳೂರು:- ಕನ್ನಡಪರ ಹೋರಾಟಗಾರ ಕರವೇ ನಾರಾಯಣಗೌಡ ವಿರುದ್ಧ ಸುಳ್ಳು ಕೇಸು ಹಾಕಬೇಡಿ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾರಾಯಣಗೌಡ ಅವರು ಹೋರಾಟಗಾರರು, ಹೋರಾಟ ಮಾಡುವುದು ಸಹಜ. ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆದೇಶ ಇದೆ. ಯಾರೋ ಅವರ ವಿರುದ್ಧ ದೂರು ನೀಡಿದ್ದಾರೆ. ಆ ಸಂಬಂಧ ಮಾತನಾಡಿದೆವು ಎಂದು ಹೇಳಿದರು. ಈ ಬಗ್ಗೆ ನಾನು ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ಹೋರಾಟಗಾರರಿಗೆ ನಾವು ಎಷ್ಟು ಗೌರವ ನೀಡಬೇಕೋ ಅದನ್ನು ನೀಡಲೇಬೇಕು. ಅವರ ಹೋರಾಟದಿಂದ ಕನ್ನಡ ಉಳಿಯುತ್ತಿದೆ. ಅವರಿಗೆ ರಾಜಕೀಯ ಬೇಡ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಬಾರದು ಎಂದು ಆಯುಕ್ತರಿಗೆ ಹೇಳಿದ್ದೇನೆ ಎಂದರು.

Read More

ಚಂಡೀಗಢ: ಮದುವೆಯಾದ ಮರುದಿನವೇ 1.5 ಲಕ್ಷ ಹಣ ಹಾಗೂ ಚಿನ್ನಾಭರಣಗಳೊಂದಿಗೆ ಅತ್ತೆ ಮನೆಯಿಂದ ವಧು ಪರಾರಿಯಾದ (Bride Escape With Gold And Jewellery) ಘಟನೆ ಗುರುಗ್ರಾಮದ ಬಿಲಾಸ್ಪುರ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ವರನ ತಂದೆ ಅಶೋಕ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ತನ್ನ ಕಿರಿಯ ಮಗನಿಗೆ ಮದುವೆಯಾಗಬೇಕು. ಹೀಗಾಗಿ ಹುಡುಗಿ ಹುಡುಕುವಂತೆ ಸಂಬಂಧಿಕರ ಬಳಿ ಹೇಳಿದ್ದೆ. ಅಂತೆಯೇ ಸಂಬಂಧಿಕ ಮನಿಶ್ ಎಂಬಾತ ಮಂಜುವನ್ನು ಪರಿಚಯ ಮಾಡಿಕೊಟ್ಟಿದ್ದು, ಆತ ಒಬ್ಬಳು ಹುಡುಗಿಯನ್ನು ತೋರಿಸಿದ್ದಾನೆ. ನಿಮ್ಮ ಮಗನಿಗೆ ಈಕೆ ಸರಿಯಾದ ಜೋಡಿಯಾಗುತ್ತಾಳೆ ಎಂದು ತಿಳಿಸಿದ್ದಾನೆ ಎಂದು ಹೇಳಿದರು. ಅಲ್ಲದೆ ಯುವತಿ ಕುಟುಂಬ ಬಡತನದಿಂದ ಕೂಡಿದ್ದು, ಅವರ ಬಳಿ ಹಣವಿಲ್ಲ ಎಂದು ಮಂಜು ಮತ್ತು ಆತನ ಸಹಚರರು ತಿಳಿಸಿದ್ದಾರೆ. ಇದಕ್ಕೆ ಅಶೋಕ್ ಕುಮಾರ್ ತನ್ನ ಕುಟುಂಬಕ್ಕೆ ವರದಕ್ಷಿಣೆ ಬೇಡ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಪ್ರೀತಿ ನನ್ನ ಮನೆಯವರಿಗೆ ಇಷ್ಟವಾದ ನಂತರ ನಾನು ಆಕೆಯ ಕುಟುಂಬಕ್ಕೆ 1 ಲಕ್ಷ ಮತ್ತು ಕೆಲವು ಬಟ್ಟೆಗಳನ್ನು…

Read More

ಬೆಳೆ, ಬೆಲೆ ಉತ್ತಮವಾಗಿದ್ದರೆ ಲಾಟ್ರಿಹೊಡೆದಂತೆ. ಇಲ್ಲದಿದ್ದರೆ ಬೆಳೆಗಾರನ ಬದುಕು ಬೀದಿಗೆ ಬಿದ್ದಂತೆ. ಈ ವರ್ಷದ ಮಟ್ಟಿಗೆ ಕಡಿಮೆ ಮಳೆ ಕಾರಣಕ್ಕೆ ರೋಗ ರಹಿತವಾಗಿ ತಕ್ಕಷ್ಟು ಬೆಳೆ ಬಂದಿದೆ. ಹಲವು ವರ್ಷಗಳ ಬಳಿಕ ಉತ್ತಮ ಬೆಲೆಯೂ ಲಭಿಸಿದೆ. ಈ ರೀತಿ ಬಂಪರ್‌ ಲಾಟರಿ ಅದೃಷ್ಟ ಪಡೆದವರಲ್ಲಿ ತಾಲೂಕಿನ ಉಳವಿ ಗ್ರಾಮದ ಸ್ನೇಹಜೀವಿಗಳಾದ ನವಿದ್‌ ಅಹಮದ್‌ ಉಳವಿ ಹಾಗೂ ಮಹಾಬಲೇಶ್ವರ ಭಟ್‌ ಹೊಡಬಟ್ಟೆ ಎದ್ದು ಕಾಣುವಂತಿದ್ದಾರೆ. ಬಹುಕಾಲದ ಈ ಸ್ನೇಹಿತರು ಕೆರೆಕೊಪ್ಪ ಗ್ರಾಮದ 1 ಎಕರೆ 5 ಗುಂಟೆ ಜಮೀನಿನಲ್ಲಿ ಬರೋಬ್ಬರಿ 350 ಕ್ವಿಂಟಾಲ್‌ ಹಿಮಾಚಲ ತಳಿಯ ಶುಂಠಿ ಬೆಳೆದಿದ್ದಾರೆ. 25 ಲಕ್ಷ ರೂಪಾಯಿ ಆದಾಯ ಸಂಪಾದನೆ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ಏಪ್ರಿಲ್‌ 10ರಂದು ಶುಂಠಿ ಬಿತ್ತನೆ ಮಾಡಿದ್ದು, ಉತ್ತಮ ಇಳುವರಿ, ಉತ್ತಮ ಬೆಲೆ ಇರುವ ಕಾರಣಕ್ಕೆ ಕೇವಲ 8 ತಿಂಗಳಲ್ಲಿ ಕಿತ್ತು ಮಾರಾಟ ಮಾಡಿದ್ದಾರೆ. ಸುದ್ದಿ ತಿಳಿದ ಅಕ್ಕಪಕ್ಕದ ಗ್ರಾಮಗಳ ರೈತರು ಹೊಲದಲ್ಲಿ ಶುಂಠಿಯ ದೊಡ್ಡ ರಾಶಿ ನೋಡಲೆಂದೇ ಭೇಟಿ…

Read More

 2023ರ ವರ್ಷ ಅಂತ್ಯದಲ್ಲಿದೆ. ಪ್ರಸಕ್ತ ವರ್ಷದಲ್ಲಿ ಟೆಸ್ಟ್‌, ಟಿ20 ಹಾಗೂ ಒಡಿಐ ಕ್ರಿಕೆಟ್‌ನಲ್ಲಿ ಕೆಲ ಅತ್ಯುತ್ತಮ ಪ್ರದರ್ಶನಗಳನ್ನು ನಾವು ಕಣ್ತುಂಬಿಸಿಕೊಂಡಿದ್ದೇವೆ. ಇದರಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಾಗಿದೆ. ಈ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು. ಆ ಮೂಲಕ ಸತತ 10 ಪಂದ್ಯಗಳಲ್ಲಿ ಗೆದ್ದಿದ್ದ ಭಾರತ ತಂಡಕ್ಕೆ ಫೈನಲ್‌ ಸೋಲು ವಿಶ್ವಕಪ್‌ ಗೆಲ್ಲುವ ಕನಸುನ್ನು ಭಗ್ನಗೊಳಿಸಿತು. ಇದೀಗ 2023ರ ವರ್ಷ ಮುಗಿಯಲು ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 50 ಓವರ್‌ಗಳ ಸ್ವರೂಪದಲ್ಲಿ ಯಾವ ಬ್ಯಾಟ್ಸ್‌ಮನ್‌ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ ಎಂಬ ಬಗ್ಗೆ ಇದೀಗ ತಿಳಿಸಿಕೊಳ್ಳೋಣ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್‌ ಅಯ್ಯರ್ 10ನೇ ಸ್ಥಾನವನ್ನು ಅಲಂಕರಿಸಿದ್ದಾರೆ. 1. ರೋಹಿತ್‌ ಶರ್ಮಾ ಟೀಮ್‌…

Read More

ಹಬ್ಬ ಬಂದಾಗ ಮಕ್ಕಳು ಪ್ರತೀ ಸಲ ಬಯಸುವುದು ಏನು? ಇದರ ಬಗ್ಗೆ ಯೋಚನೆಯೇ ಬೇಡ. ಪ್ರತೀ ಮಕ್ಕಳು ಹಬ್ಬಗಳಲ್ಲಿ ಪೋಷಕರಿಂದ ನಿರೀಕ್ಷಿಸುವುದು ಮೊದಲಿಗೆ ಹೊಸ ಬಟ್ಟೆಗಳನ್ನು. ಇನ್ನೆನು ಕ್ರಿಸ್ಮಸ್ ಬಂದೇ ಬಿಟ್ಟಿತು. ಹೀಗಿರುವಾಗ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸುವ ಯೋಜನೆಯಂತೂ ನೀವು ಮಾಡೇ ಇರುತ್ತೀರಿ. ಆದರೆ ಮಕ್ಕಳಿಗೆ ಯಾವ ತರಹದ ಬಟ್ಟೆಯನ್ನು ಕೊಳ್ಳುವುದು ಎಂಬ ಗೊಂದಲ ನಿಮ್ಮಲ್ಲಿ ಇದ್ದರೆ, ಇಲ್ಲಿರುವ ಕೆಲವು ಟಿಪ್ಸ್ ಪುಟ್ಟ ಮಕ್ಕಳಿಗೆ ಹೊಸ ಬಟ್ಟೆ ಕೊಳ್ಳಲು ನಿಮಗೆ ಖಂಡಿತಾ ಸಹಾಯ ಮಾಡಬಲ್ಲದು. ಚಿಕ್ಕ ಚಿಕ್ಕ ಪ್ರಿಂಟ್ಗಳಿರುವ ಸ್ಲೀಪ್ ಸೂಟ್ ಸೆಟ್: ಹತ್ತಿಯ ಬಟ್ಟೆಯ ಸ್ಲೀಪ್ ಸೂಟ್ಗನ್ನು ಧರಿಸಲು ಕೇವಲ ಮಕ್ಕಳಿಗೆ ಮಾತ್ರವಲ್ಲದೇ ಎಲ್ಲಾ ವಯೋಮಾನದ ಜನರಿಗೂ ಸಜೆಸ್ಟ್ ಮಾಡಬಹುದು. ಮಕ್ಕಳಿಗೆ ಹತ್ತಿಯ ಬಟ್ಟೆಯ ಸ್ಲೀಪ್ ಸೂಟ್ನಲ್ಲಿ ಪುಟ್ಟ ಪುಟ್ಟ ಗಾತ್ರದ ಪ್ರಿಂಟ್ ಗಳಿದ್ದರೆ ಮಕ್ಕಳು ಎಷ್ಟು ಮುದ್ದಾಗಿ ಕಾಣಿಸುತ್ತಾರಲ್ಲಾ? ಕ್ರಿಸ್ಮಸ್ ಹಬ್ಬಕ್ಕಾದರೆ ಪ್ರಿಂಟ್ಗಳಲ್ಲಿ ಕ್ರಿಸ್ಮಸ್ ಟ್ರೀ, ಸಾಂತಾ, ಉಡುಗೊರೆ ಇಂತಹ ಹಲವು ಚಿತ್ರಗಳಿದ್ದರೆ ಮಕ್ಕಳೂ ಅದನ್ನು ಇಷ್ಟ…

Read More

ಮಹಿಳೆಯರು ತುಟಿಗಳ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಕೆಲವೊಮ್ಮೆ ಒಣಗಿದ ತುಟಿ, ತುಟಿಯ ಚರ್ಮ ಕಿತ್ತು ಬರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತುಟಿ ಒಣಗಲು ಮತ್ತು ಚರ್ಮ ಕಿತ್ತುಬರಲು ಕಾರಣ ಮತ್ತು ಪರಿಹಾರವೇನು ಇಲ್ಲಿದೆ ಮಾಹಿತಿ. ತುಟಿಗಳು ಒಣಗುವುದು ಚಳಿಗಾಲದಲ್ಲಿ ಮಾತ್ರ ಎನ್ನುವ ಭಾವನೆ ತಪ್ಪು. ಬೇಸಿಗೆ ಕಾಲದಲ್ಲಿಯೂ ತುಟಿ ಡ್ರೈ ಆಗುತ್ತೆ. ತುಟಿಯ ಚರ್ಮವು ದೇಹದ ಇತರರ ಭಾಗಗಳ ಚರ್ಮಕ್ಕಿಂತ ತೆಳ್ಳಗೆ ಮತ್ತು ಮೃದುವಾಗಿರುತ್ತದೆ. ಹಾಗಾಗಿ ತುಟಿಯ ಚರ್ಮದ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ. ತುಟಿಗಳಲ್ಲಿ ಕಡಿಮೆ ಪ್ರಮಾದ ತೈಲ ಗ್ರಂಥಿಗಳಿರುತ್ತವೆ. ಶೀತ, ಶುಷ್ಕಗಾಳಿ, ತುಟಿಯುನ್ನು ಒಣಗುವಂತೆ ಮಾಡುತ್ತದೆ. ಇದರಿಂದ ತುಟಿಯ ಚರ್ಮ ಒಣಗಿ ಸಿಪ್ಪೆಯಂತಾಗಿ ಕಿತ್ತು ಬರುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ತುಟಿಗಳು ಬಿರುಕು ಬಿಡುವುದು, ಚಪ್ಪಟೆಯಂತಾಗುವುದು ಸಹಜವಾಗಿದೆ. ಚಳಿಗಾಲದಲ್ಲಿ ತುಟಿ ಒಣಗಿದಂತಾಗಿ ಚರ್ಮ ಕಿತ್ತು ಬರುವುದು ಮಹಿಳೆಯರಿಗರೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೊರಗೆ ಹೋಗುವಾಗ ಮಹಿಳಿಯರು ಟೈಟಾನಿಯಂ ಡೈ ಆಕ್ಸೈಡ್ ಮತ್ತು ಜೆನಿಕ್ ಆಕ್ಸೈಡ್ ಅಂಶವನ್ನು ಹೊಂದಿರುವ ಸನ್ಸ್ಕ್ರೀನ್ ಬಳಕೆಯನ್ನು…

Read More

ಹುಬ್ಬಳ್ಳಿ : ನನ್ನ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ವಿರೋಧಿಗಳಿಗೆ ವಾರ್ನ್ ಮಾಡಿದರು‌. ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ತಮ್ಮ 68 ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಗುಡುಗಿದ ಅವರು, ಕಳೆದ ವರ್ಷವೂ ನಾನು ಇದೇ ಮಾತು ಹೇಳಿದ್ದೆ ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರವನ್ನೂ ನೀಡಿದ್ದೇವೆ. ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು ಆದ್ರೆ ಆರು ಬಾರಿ ನನ್ನನ್ನು ಜನ ಗೆಲ್ಲಿಸೋದನ್ನ ಮರೆಯಲ್ಲ ನಾನು ಸೋತರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಗೆಲ್ಲಿಸಿದ್ದೇವೆ. ಆದರೆ ನನ್ನ ಉಸಾಬರಿಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ. ಮುಂದೆಯೂ ನನ್ನ ಉಸಾಬರಿಗೆ ಬಂದವರಿಗೆ ಸುಮ್ಮನೆ ಬಿಡಲ್ಲ ಎಂದು ಹೇಳುವ ಮೂಲಕ ಸವಾಯಿಗಂಧರ್ವ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಶೆಟ್ಟರ್ ಎಚ್ಚರಿಕೆ ನೀಡಿದರು‌

Read More

ಕೋಲಾರ : ಜಿಲ್ಲೆಯ ಮಾಲೂರು ತಾಲ್ಲೂಕು ಯಲವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ ನಡೆದಿತ್ತು. ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಲಾಗಿತ್ತು. ಸದ್ಯ ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪರನ್ನು ಮಾಸ್ತಿ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪ ಬಂಧಿತರು. ಹಾಸ್ಟೆಲ್ ವಾರ್ಡನ್ ಮಂಜುನಾಥ್ ಮತ್ತು ಅತಿಥಿ ಶಿಕ್ಷಕ ಅಭಿಷೇಕ್‌ ಪರಾರಿ ಆಗಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ದೂರು ಹಿನ್ನೆಲೆ ಮಲಹೊರುವ ಪದ್ಧತಿ ನಿಯಂತ್ರಣ ಕಾಯ್ದೆ, ಅಟ್ರಾಸಿಟಿ ಕಾಯ್ದೆಯಡಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕಳೆದ ಹಲವು ದಿನಗಳಿಂದ ಮಕ್ಕಳಿಗೆ ವಿವಿಧ ರೀತಿಯಲ್ಲಿ ಕಿರುಕುಳ ಕೂಡ ನೀಡಲಾಗುತ್ತಿದೆ ಅಂತಾ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರ ವಿರುದ್ಧ ಆರೋಪ ಕೇಳಿಬಂದಿತ್ತು. ಮಕ್ಕಳಿಗೆ ಥಳಿಸುತ್ತಿರೋ, ಶಿಕ್ಷೆ ಕೊಡುತ್ತಿರುವ ವಿಡಿಯೋಗಳು ಕೂಡ ಲಭ್ಯವಾಗಿದ್ದವು. ಈ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ…

Read More

ಕೆಲ ಗಂಟೆಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ ಹಿಂದಿ (Bollywood) ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಧನರಾಜ್ (Vaishnavi Dhanraj). ತೀವ್ರವಾಗಿ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ದಯವಿಟ್ಟು ನನ್ನ ಸಹಾಯಕ್ಕೆ ಬನ್ನಿ ಎಂದು ಹೇಳಲಾದ ಅವರ ವಿಡಿಯೋ ವೈರಲ್ ಕೂಡ ಆಗಿದೆ. ನಟಿಯ ಮುಖ ಮತ್ತು ಕೈಗಗಳಲ್ಲಿ ಗಾಯಗಳಾಗಿದ್ದು, ತನ್ನ ಮೇಲೆ ನಡೆದ ಹಲ್ಲೆಯ ಸಂಪೂರ್ಣ ವಿವರಣೆಯನ್ನು ಅವರು ಹೇಳಿಕೊಂಡಿದ್ದಾರೆ. ತಮಗೆ ಅತ್ತಿಗೆ, ಆಕೆಯ ತಾಯಿಯಿಂದ ನಿರಂತರ ಕಿರುಕುಳ ಆಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಜೊತೆಗೆ ಪತಿ ಕುಟುಂಬದಿಂದಲೂ ತಮಗೆ ಕಿರುಕುಳ ಆಗಿರುವುದಾಗಿ ತಿಳಿಸಿದ್ದಾರೆ. ಕೌಟುಂಬಿಕ ಹಿಂಸೆಯ ಕುರಿತಾಗಿ ಈ ಹಿಂದೆಯೂ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪತಿಯ ಹಿಂಸೆಯಿಂದಾಗಿ ಬೇಸತ್ತು ವಿಚ್ಛೇದನೆ ಕೂಡ ನೀಡಿದ್ದರು. ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ವೈಷ್ಣವಿ, ಸಿಐಡಿ ಪಾತ್ರದ ಮೂಲಕ ಫೇಮಸ್ ಆದವರು. ಕೌಟುಂಬಿಕ ಹಿಂಸೆಯ ಕುರಿತಾಗಿ ಈ ಹಿಂದೆಯೂ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪತಿಯ ಹಿಂಸೆಯಿಂದಾಗಿ ಬೇಸತ್ತು…

Read More