Author: AIN Author

SBI ಅಧಿಕೃತ ಅಧಿಸೂಚನೆಯ ಮೂಲಕ ಅಪ್ರೆಂಟಿಸ್ ಪೋಸ್ಟ್ಗಳನ್ನು ಭರ್ತಿ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. SBI ಹುದ್ದೆಯ ಅಧಿಸೂಚನೆ • ಸಂಸ್ಥೆಯ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) • ಹುದ್ದೆಗಳ ಸಂಖ್ಯೆ: 5160 • ಉದ್ಯೋಗ ಸ್ಥಳ: ಭಾರತ • ಪೋಸ್ಟ್ ಹೆಸರು: ಅಪ್ರೆಂಟಿಸ್ • ವೇತನ: ರೂ. 15,000/- ಪ್ರತಿ ತಿಂಗಳು • SBI ಹುದ್ದೆಯ ವಿವರಗಳು: 175 SBI ನೇಮಕಾತಿ 2023 ಅರ್ಹತಾ ವಿವರಗಳು • ಶೈಕ್ಷಣಿಕ ಅರ್ಹತೆ: ಎಸ್ಬಿಐ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು. • ವಯಸ್ಸಿನ ಮಿತಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-08-2023 ರಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28…

Read More

ಜನ್ಮ ಕುಂಡಲಿಯಲ್ಲಿ ( ಜಾತಕ )ಯಾವ ಮನೆಯಲ್ಲಿ ಶನಿ ಸ್ವಾಮಿಇದ್ದರೆ ವಿವಾಹ ವಿಳಂಬಕ್ಕೆ ಕಾರಣ ವಾಗುತ್ತದೆ? ಸೋಮಶೇಖರ್B.Sc ಜಾತಕ ಬರೆಯುವುದು, ಜಾತಕವಿಶ್ಲೇಷಣೆಗಾರರು ರಾಶಿಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಜನ್ಮ ಜಾತಕ ಅಥವಾ ಕುಂಡಲಿ ಲಗ್ನದಿಂದ ಅಂದರೆ ಕೇಂದ್ರದಿಂದ ಸಪ್ತಮ ಸ್ಥಾನ ಶನಿ ಸ್ವಾಮಿ ಇದ್ದರೆ ಮದುವೆ ವಿಳಂಬಕ್ಕೆ ಶನಿಸ್ವಾಮಿಯೇ ಕಾರಣವಾಗುತ್ತಾನೆ. ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ತಮ್ಮ ಮದುವೆ ತಡವಾಗಿ ಅಂದರೆ ಮೂವತ್ತರ ಪ್ರಾಯದ ಮೇಲೆ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ. ಶನಿ ಸ್ವಾಮಿಯು ನಿಮಗೇನಾದರೂ ಒಲಿದರೆ ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುತ್ತಾನೆ, ಆದರೆ ಒಲಿಯದೆ ಹೋದರೆ ತಮಗೆ ದುಃಖ ನೀಡುತ್ತಾನೆ, ಕರ್ಮ ಕಾರನ್ನು ಆಗಿರುತ್ತಾನೆ , ಅಲ್ಪ ಆಯಸ್ಸು ಮತ್ತು ಕಂಟಕನಾಗಿರುತ್ತಾನೆ. ಶನಿ ಸ್ವಾಮಿಗೆ ತುಲಾ ರಾಶಿಯ ಉಚ್ಚ ಸ್ಥಾನವಾಗಿದ್ದು. ಮೇಷರಾಶಿ ನೀಚಸ್ಥಾನ ವಾಗಿರುತ್ತದೆ .ಇಲ್ಲಿ ಮೇಷ ರಾಶಿಗೆ ಅಧಿಪತಿ ಕುಜ. ಕುಜ ಮತ್ತು ಶನಿ ಶತ್ರು ಗ್ರಹಗಳು. ಜ್ಯೋತಿಷ್ಯಶಾಸ್ತ್ರದ…

Read More

ಸೂರ್ಯೋದಯ: 06.35 AM, ಸೂರ್ಯಾಸ್ತ : 05.57 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಷಷ್ಠಿ 03:13 PM ತನಕ ನಂತರ ಸಪ್ತಮಿ ನಕ್ಷತ್ರ: ಇವತ್ತು ಧನಿಷ್ಠ 02:54 AM ತನಕ ನಂತರ ಶತಭಿಷ ಯೋಗ: ಇವತ್ತು ಹರ್ಷಣ12:36 AM ತನಕ ನಂತರ ವಜ್ರ 09:32 PM ತನಕ ನಂತರ ಸಿದ್ಧಿ ಕರಣ: ಇವತ್ತು ಕೌಲವ 04:22 AM ತನಕ ನಂತರ ತೈತಲೆ 03:13 PM ತನಕ ನಂತರ ಗರಜ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ: 01:30 ನಿಂದ 3:00 ವರೆಗೂ ಅಮೃತಕಾಲ: 06.37 PM to 08.07 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:50 ನಿಂದ ಮ.12:34 ವರೆಗೂ ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ…

Read More

ಬೆಂಗಳೂರು :- ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನದಡಿಯಲ್ಲಿ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಅಧಿಕಾರಿಗಳು ಅವುಗಳನ್ನು ಪಾಲನೆ ಮಾಡುತ್ತಿದ್ದಾರೆ’ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ. ನಮ್ಮ ಮನೆಯ ಬಳಿ ಇರುವ ಮರ ಯಾವುದೇ ಸಮಯದಲ್ಲಾದರೂ ಬೀಳುವಂತಹ ಸ್ಥಿತಿಯಲ್ಲಿದೆ. ಆದರೂ, ಅಧಿಕಾರಿಗಳು ಅದನ್ನು ತೆರವುಗೊಳಿಸುತ್ತಿಲ್ಲ’ ಎಂದು ಆಕ್ಷೇಪಿಸಿ ನಗರದ ಡಾ.ವಿ.ಎಲ್. ನಂದೀಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಎಲ್ಲಾ ವೃಕ್ಷ ಅಧಿಕಾರಿಗಳು ಮತ್ತು ಡಿಸಿಎಫ್‌ಗಳು ಈ ಮಾರ್ಗಸೂಚಿಯನ್ನು ಪಾಲನೆ ಮಾಡುತ್ತಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ, ಮರವನ್ನು ತೆರವುಗೊಳಿಸಲಾಗಿದೆ. https://ainlivenews.com/yatnal-is-like-a-mad-dog-mp-renukacharya-lashes-out/ ತೆರವು ಕಾರ್ಯಾಚರಣೆಗೆ ತಗುಲಿದ್ದ ವೆಚ್ಚವನ್ನು ಮರ ಇದ್ದ ನಿವೇಶನದ ಮಾಲೀಕರಿಂದ ವಸೂಲು ಮಾಡಲಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ‘ಈ ವ್ಯಾಜ್ಯದ ಮೂಲ ಕಾರಣ ಅಪಾಯಕಾರಿ ಮರ. ಈಗಾಗಲೇ ಪಾಲಿಕೆ ನ್ಯಾಯಾಲಯದ ಸೂಚನೆಯಂತೆ ಆ ಮರವನ್ನು ತೆರವುಗೊಳಿಸಿದೆ. ಆದ್ದರಿಂದ, ಅರ್ಜಿ ವಿಚಾರಣೆ…

Read More

ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಈ ಬಾರಿ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ನೋವುಗಳು ಇದ್ದರೂ ಅದನ್ನು ಬದಿಗಿಟ್ಟು ಫ್ಯಾನ್ಸ್ ಭೇಟಿ ಮಾಡುತ್ತಿದ್ದಾರೆ. ಶ್ರೀ ಜನ್ಮದಿನ ಅಂಗವಾಗಿ ಸಖತ್ ಉಡುಗೊರೆಗಳು ಸಿಕ್ಕಿವೆ. ಬಂತು ಪರಾಕ್ ಟೈಟಲ್ ಪೋಸ್ಟರ್ ಶ್ರೀ ಮುರಳಿ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಯುವ ಪ್ರತಿಭೆಗಳ ಜೊತೆ ಬಘೀರ ಕೈ ಜೋಡಿಸಿದ್ದಾರೆ. ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನವ ನಿರ್ದೇಶಕ ಹಾಲೇಶ್ ಕೋಗುಂಡಿ ಸಾರಥ್ಯದ ಚಿತ್ರಕ್ಕೆ ಪರಾಕ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್ ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್ ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪರಾಕ್ ಸಿನಿಮಾವನ್ನು ಬ್ರ್ಯಾಂಡ್…

Read More

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಬಾಲಿವುಡ್​ನ ಖ್ಯಾತ ನಟಿ. ಅವರ ಡಿವೋರ್ಸ್ ವಿಚಾರ ಕಳೆದ ಕೆಲವೊಂದು ದಿನಗಳಿಂದ ಭಾರೀ ಸುದ್ದಿಯಲ್ಲಿದೆ. ಹೌದು ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ನಡೆಯುತ್ತಿರುವ ಬಿರುಕಿನ ಸುದ್ದಿಯ ಗಾಸಿಪ್ ಇದೀಗ ನಿಜವಾಗುತ್ತಿದೆ ಎಂದು ಹೇಳಲಾಗಿದ್ದು.  ಬಚ್ಚನ್ ಮನೆಯಿಂದ ಐಶ್ವರ್ಯಾ ಬಚ್ಚನ್ ತಮ್ಮ ಮಗಳೊಂದಿಗೆ ಹೊರ ಬಂದಿದ್ದಾರೆ ಎಂದು ಸುದ್ದಿಯಾಗಿದೆ. ವರದಿ ಪ್ರಕಾರ ಐಶ್ವರ್ಯಾ ರೈ ತನ್ನ ಮಗಳು ಆರಾಧ್ಯ ಬಚ್ಚನ್ ನೊಂದಿಗೆ ಬಚ್ಚನ್ ಮನೆ ಜಲ್ಸಾದಿಂದ ಹೊರಗೆ ಬಂದಿದ್ದಾರೆ. ಇದೀಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ಐಶ್ವರ್ಯಾ ಮತ್ತು ಅವರ ಅತ್ತೆ ಜಯಾ ಬಚ್ಚನ್ ಕಳೆದ ಕೆಲವು ವರ್ಷಗಳಿಂದ ಯಾವುದೇ ರೀತಿಯ ಮಾತುಕತೆ ಇಲ್ಲದೆ ದೂರವಿದ್ದಾರೆ.ಆದರೆ ಅಭಿಷೇಕ್ ತನ್ನ ಹೆತ್ತವರಿಗೆ ನಿಷ್ಠೆ ಮತ್ತು ತನ್ನ ಹೆಂಡತಿ ಮತ್ತು ಮಗಳ ಬಗೆಗಿನ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಈ ನಡುವೆ ಅಮಿತಾಬ್ ಬಚ್ಚನ್ ಮಗಳು ಶ್ವೇತಾ…

Read More

ಬೆಂಗಳೂರು: ಬೆಂಗಳೂರು ಜನರಿಗೆ ಒಂದಲ್ಲ ಒಂದು ಶಾಕ್ ಕಾಡ್ತಾನೆ ಇದೆ. ಶ್ರೀ ಸಾಮಾನ್ಯರು ಮಧ್ಯಮ ವರ್ಗದ ಜನರಿಗಂತೂ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಿಲ್ಲ. ಎಲ್ಲಾವೂ ತುಂಬನೇ ಕಾಸ್ಟ್ಲಿ . ಸರ್ಕಾರಿ ಇಲಾಖೆಗಳು ಅಂತೂ ನಷ್ಟದ ನೆಪವೊಡ್ಡಿ ಕರೆಂಟ್ ದರ ನಂದಿನಿ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡ್ತಾನೆ ಬಂದಿದೆ.ಆದ್ರೆ ಈಗ ಸರ್ಕಾರಿ ಇಲಾಖೆಗಳಂತೆ ನಮಗೂ ಪ್ರತಿ ವರ್ಷ ಆಟೋ ಪ್ರಯಾಣದ ಏರಿಸಿ ಅಂತ ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ. ಹೌದು.. ಒಂದು ಕಡೆ ಪೆಟ್ರೋಲ್ ರೇಟ್ ಇಳಿಕೆಯಾಗಿದೆ. ಸರ್ಕಾರ ವಾಹನ ಸವಾರರಿಗೆ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತೆ ರಿಲೀಫ್ ನೀಡಿದೆ. ಆದ್ರೆ, ಕರ್ಮಶಿಯಲ್ ಗ್ಯಾಸ್ ರೇಟ್ ಜಾಸ್ತಿ ಆಗಿದೆ. ತೈಲ ಬೆಲೆ ಇಳಿಕೆಯಾದ್ರೂ ಆಟೋ ಚಾಲಕರಿಗೆ ಗ್ಯಾಸ್ ರೇಟ್ ಹೊರೆಯಾಗ್ತಿವೆ. ಹೀಗಾಗಿ ಆಟೋ ಮೀಟರ್ ದರ ಏರಿಸುವಂತೆ ಸರ್ಕಾರದ ಕದ ತಟ್ಟಿದ್ದಾರೆ ಆಟೋ ಚಾಲಕರು ಹಾಗೂ ಮಾಲೀಕರು. ಈ ಸಂಬಂಧ ಆಟೋ ಯೂನಿಯನ್‌ಗಳು ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದು…

Read More

ಕೊಪ್ಪಳ: ನಾಡ ಪ್ರಸಿದ್ಧ ಹನುಮಮಾಲಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ರಚಿಸಿರುವ ಹತ್ತಾರು ಸಮಿತಿಗಳ ಅಧ್ಯಕ್ಷರು ಹಾಗೂ ಸಮತಿಯ ಸದಸ್ಯರಾದ ಅಧಿಕಾರಿಗಳೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಡಿಸೆಂಬರ್ 17ರಂದು ಸಭೆ ನಡೆಸಿ ಇದುವರೆಗಿನ ಸಿದ್ಧತೆಯನ್ನು ಪರಿಶೀಲಿಸಿದರು. ಆಯಾ ಸಮಿತಿಗಳು ಹನುಮಮಾಲಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡ ಬಗ್ಗೆ ಜಿಲ್ಲಾಡಳಿತದಿಂದ ಸಿದ್ಧಪಡಿಸಿದ್ದ ಪ್ರಾತ್ಯಕ್ಷಿಕೆಯ ಮೂಲಕ ವಿವಿಧ ಕಾರ್ಯಗಳ ಬಗ್ಗೆ ಸಚಿವರು ಖುದ್ದು ಮಾಹಿತಿ ಪಡೆದರು. ಪ್ರತಿಯೊಂದು ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿಯ ಅಧಿಕಾರಿಗಳೊಂದಿಗೆ ಮಾತನಾಡಿ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು.ಗಂಗಾವತಿ ನಗರದ ತಾಪಂ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಅಂಜನಾದ್ರಿ ಬೆಟ್ಟದ ಮೇಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 23ರಿಂದ ಡಿಸೆಂಬರ್ 24ರವರೆಗೆ ನಡೆಯಲಿರುವ ಹನುಮಮಾಲಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಬೇಕು.‌ ಪ್ರತಿಯೊಂದು ಸಮಿತಿಯ ಅಧಿಕಾರಿಗಳು ಅಂದು ಕಡ್ಡಾಯ ಕಾರ್ಯಕ್ರಮದ…

Read More

ಬೆಂಗಳೂರು:- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ 40% ಕಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಬೆಂಗಳೂರು ಹೈಕೋರ್ಟ್ ಪೀಠವು 45 ದಿನ ಡೆಡ್ಲೈನ್ ನೀಡಿದೆ. ಅಕ್ರಮವಿಲ್ಲದ ಕಾಮಗಾರಿಗಳಿಗೆ ಶೇ.75ರಷ್ಟು ಬಿಲ್ ಪಾವತಿಸಲಾಗುವುದು. ಆರೋಪಗಳಿರುವ ಗುತ್ತಿಗೆದಾರರಿಗೆ ಶೇ.50ರಷ್ಟು ಬಿಲ್ ಪಾವತಿಸಲಾಗುವುದು ಎಂದು ಹೈಕೋರ್ಟ್ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದು, https://ainlivenews.com/yatnal-is-like-a-mad-dog-mp-renukacharya-lashes-out/ ನ್ಯಾ.ನಾಗಮೋಹನದಾಸ್ ಆಯೋಗದ ತನಿಖೆಗೆ ಕಾಲಾವಕಾಶ ನೀಡಲು ಮನವಿ ಮಾಡಿದರು. ಆದ್ರೆ, 45 ದಿನಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ವರದಿ ನೀಡಲು ಸೂಚನೆ ನೀಡಿರುವ ಹೈಕೋರ್ಟ್, ಸಂಬಂಧಪಟ್ಟ ದಾಖಲೆ ಪರಿಶೀಲಿಸಿ, ಅಹವಾಲು ಆಲಿಸಬೇಕು ಎಂದು ತಿಳಿಸಿ. ಫೆಬ್ರವರಿ 6ಕ್ಕೆ ವಿಚಾರಣೆ ನಿಗದಿಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ.

Read More

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತದಲ್ಲಿ ಯಡವಟ್ಟು ಮಾಡುತ್ತಾ ಬಂದಿದೆ. 34 ವರ್ಷದಲ್ಲಿ ಎಂದೂ ಕಾಣದ ಬಹುಮತವನ್ನ ರಾಜ್ಯದ ಜನ ಕೊಟ್ಟಿದ್ದಾರೆ. ಆದರೆ ಜನ ಆಶೀರ್ವಾದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯವನ್ನ ಲೂಟಿ ಮಾಡಿವುದಲ್ಲಿ ಸರ್ಕಾರ ಮುಳುಗಿದೆ. https://ainlivenews.com/yatnal-is-like-a-mad-dog-mp-renukacharya-lashes-out/ ಅಧಿಕಾರ ದಾಹದಿಂದ ಇಡೀ ರಾಜ್ಯವನ್ನ ಲೂಟಿ ಮಾಡಲು ಹೊರಟಿದ್ದಾರೆ. ಎಲ್ಲ ಮಂತ್ರಿಗಳು ಈ ಲೂಟಿಯಲ್ಲಿ ತೊಡಗಿದ್ದಾರೆ. ನಾವು ಯಾವ್ದಕ್ಕೂ ಹೆದರೋದಿಲ್ಲ ಅಂದ ಬಂಡತನ ಪ್ರದರ್ಶಿಸುತ್ತಿದ್ದಾರೆ. ಹಣ ಕೊಟ್ಟರೆ ಸರ್ವೀಸ್ ಕೊಡ್ತೀವಿ ಅಂತ ಭಾಗ್ಯಗಳನ್ನ ಪಡೆಯಬೇಕಾಗಿದೆ ಎಂದು ಶಾಸಕ ಡಾ. ಸಿ.ಎನ್ ಅಶ್ವಥ್ ನಾರಾಯಣ ವಾಗ್ದಾಳಿ ಮಾಡಿದರು.

Read More