ಬೆಂಗಳೂರು: ದೇಶದಲ್ಲಿ ಕೊರೋನಾ ಹೆಸರು ಕೇಳಿದ್ರೆ ಸಾಕು ಜನ ಬೆಚ್ಚಿಬೀಳ್ತಾರೆ. ಯಾಕೆಂದ್ರೆ ಅಲೆಗಳ ಮೇಲೆ ಅಲೆಗಳಾಗಿ ಬಂದು ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಕಳೆದ ಎರಡು ವರ್ಷದಿಂದ ಮರೆಯಾಗಿದ್ದ ಡೆಡ್ಲಿ ಕ್ರೂರಿ ಮತ್ತೆ ವಕ್ಕರಿಸಿದೆ.ಕಳೆದ ಕೆಲ ದಿನದಿಂದ ಕೇರಳ ತಮಿಳುನಾಡು ಸೇರಿ ಹಲವೆಡೆ ಕೊರೊನಾ ಕೇಸ್ ಗಳ ಸಂಖ್ಯೆ ಉಲ್ಬಣಗೊಂಡಿದೆ. ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೊನಾದ ಹೊಸ ಸಬ್ ವೇರಿಯಂಟ್ ಜೆಎನ್-1 ಇದೀಗ ಭಾರತದಲ್ಲೂ ಪತ್ತೆಯಾಗಿದ್ದು, ದೇಶದೆಲ್ಲೆಡೆ ಆತಂಕ ಮನೆ ಮಾಡಿದೆ. ಹೌದು..ಕೇರಳದಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿದ್ದು, ಕರ್ನಾಟಕದಲ್ಲೂ ಆತಂಕದ ಕಾರ್ಮೋಡ ಕವಿಯ ತೊಡಗಿದೆ. ಕೇರಳದಲ್ಲಿ ಕೇಸ್ ಹೆಚ್ಚಳದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು,ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ನಿನ್ನೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿರೋ ಆರೋಗ್ಯ ಸಚಿವರು ಮುಂದಿನ 3 ತಿಂಗಳಿಗೆ ಅವಶ್ಯಕತೆ ಇರುವಷ್ಟು ಟೆಸ್ಟಿಂಗ್ ಕಿಟ್ಟನ್ನ ಕರ್ನಾಟಕ ಮೆಡಿಕಲ್ ಕಾರ್ಪೋರೆಶನ್ನಿಂದ ಖರೀದಿ ಮಾಡಲು ಸಭೆಯಲ್ಲಿ…
Author: AIN Author
ಕಲಬುರಗಿ: ಟಿಪ್ಪರ್ ಗೆ ಕಾರ್ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಬೋಸ್ಗಾ ಗ್ರಾಮದ ಬಳಿ ಘಟನೆ ನಡೆದಿದ್ದು ಕಾರಿನಲ್ಲಿದ್ದ ವಿರಕ್ತ ಮಠದ ಶಿವಲಿಂಗದೇವರು ಸೇರಿ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಡ್ಡಾದಿಡ್ಡಿ ಚಲಿಸಿದ ಟಿಪ್ಪರ್ ಚಾಲಕನನ್ನು ಟ್ರಾಫಿಕ್ ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕಲಬುರಗಿ: ಮನೆಯ ಬುನಾದಿ ತೋಡುವ ವೇಳೆ ಸೂರ್ಯ ದೇವನ ಮೂರ್ತಿ ಪತ್ತೆಯಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಶಹಬಾದ್ ತಾಲೂಕಿನ ತೊನಸನಹಳ್ಳಿಯಲ್ಲಿ ಮೂರ್ತಿ ಪತ್ತೆಯಾಗಿದ್ದು ಬಸವರಾಜ ಹೂಗಾರ ಎಂಬುವವರು ಮನೆ ಕಟ್ಟಲು ಪಾಯ ತೋಡುವಾಗ ಮೂರ್ತಿ ದೊರೆತಿದೆ.. ಈ ಮೂರ್ತಿ12 ನೇ ಶತಮಾನದ ಕಾಲದ್ದು ಎನ್ನಲಾಗಿದೆ.27 ಇಂಚು ಎತ್ತರ 15 ಇಂಚು ಅಗಲ 3 ಇಂಚು ದಪ್ಪವಿದೆ. ಸಂಶೋಧಕ ಡಿ ಎನ್ ಅಕ್ಕಿಯವರ ಪ್ರಕಾರ ಮೂರ್ತಿ ಕಲ್ಯಾಣಿ ಚಾಲುಕ್ಯರ ಕಾಲದ್ದು ಅಂತ ಹೇಳಲಾಗ್ತಿದೆ.
ಧಾರವಾಡ: ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದಲ್ಲಿ ಮಳೆ ಇಲ್ಲದೇ ಬೆಳೆಗಳೆಲ್ಲ ಒಣಗುತ್ತಿದ್ದು, ರೈತರು ಟ್ಯಾಂಕರ್ ಮುಖಾಂತರ ನೀರು ತಂದು ಹಾಯಿಸುತ್ತಿದ್ದಾರೆ. ಬಿತ್ತಿದ ಬೆಳೆ ಕೈ ತಪ್ಪುವ ಕಾರಣ ಕೆರೆ ಇರುವೆಡೆ ಹೋಗಿ ಟ್ಯಾಂಕರ್ ಭರ್ತಿ ಮಾಡಿಕೊಂಡು ತರುವುದು ಅನಿವಾರ್ಯವಾಗಿದೆ. ತಾಲೂಕಿನಲ್ಲಿ ಭೀಕರ ಬರ ಬಿದ್ದಿದ್ದು, ಬಿತ್ತಿದ ಅಲ್ಪ ಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಪ್ರತಿನಿತ್ಯ ನೀರಿಗಾಗಿ ಸಾವಿರಾರು ರೂ. ಖರ್ಚು ಮಾಡಬೇಕಾಗಿದೆ ಎಂದು ಗ್ರಾಮದ ರೈತ ಮಲ್ಲಪ್ಪ 2ಎಕರೆಯಲ್ಲಿ ಬೆಳೆದಿದ್ದ ಜೋಳಕ್ಕೆ ಟ್ಯಾಂಕರ್ ನೀರು ಹಾಯಿಸಿ ಮೇವಿನ ನಿರೀಕ್ಷೆಯಲ್ಲಿದ್ದಾರೆ. 6 ದನಕರುಗಳನ್ನು ಹೊಂದಿರುವ ಮಲ್ಲಪ್ಪ ಬರಗಾಲದಿಂದ ತತ್ತರಿಸುವ ಅನ್ನದಾತನಿಗೆ ದನಕರುಗಳ ಮೇವಿನ ಚಿಂತೆಯಾಗಿದೆ. ಈಗಾಗಲೇ ಬರಗಾಲದಿಂದ ಬೆಳೆ ಕಳೆದುಕೊಂಡುದ್ದೇವೆ. ಈಗಿರುವ ಬೆಳೆಯು ಹೋದ್ದರೆ ದನಕರುಗಳಿಗೆ ಮೇವು ಇಲ್ಲದಾಗುತ್ತದೆ. ಹಾಗಾಗಿ ಒಂದು ಟ್ಯಾಂಕರ್ ನೀರಿಗೆ 4,50ರೂಪಾಯಿ ನೀಡಿ ನೀರು ಬೀಡಿಸಿ ತನ್ನ ಕಷ್ಟದಲ್ಲೂ ದನಕರುಗಳ ಹಸಿವು ನಿಗಿಸೋ ಚಿಂತೆಯಲ್ಲಿ ಅನ್ನದಾತನಿದ್ದಾನೆ
ಸೂರತ್: ನನ್ನ 3ನೇ ಅವಧಿಯಲ್ಲಿ ಭಾರತ ದೇಶವು ವಿಶ್ವದ ಟಾಪ್-3 ಆರ್ಥಿಕತೆಗಳಲ್ಲಿ (Economies) ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನರಿಗೆ ಮತ್ತೊಂದು ಗ್ಯಾರಂಟಿ ನೀಡಿದ್ದಾರೆ. ಗುಜರಾತ್‌ನ ವಾಣಿಜ್ಯನಗರಿ ಸೂರತ್‌ನಲ್ಲಿ ಡೈಮಂಡ್ ಬೋರ್ಸ್ (Surat Diamond Bourse) ಕಚೇರಿ ಸಂಕೀರ್ಣ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಭಾರತವನ್ನು ವಿಶ್ವದ ಟಾಪ್-3 ಆರ್ಥಿಕತೆಗಳಲ್ಲಿ ಒಂದಾಗಲಿದೆ. ಅದಕ್ಕಾಗಿ ಸರ್ಕಾರವು ಮುಂಬರುವ 25 ವರ್ಷಗಳ ಗುರಿ ನಿಗದಿಪಡಿಸಿದೆ ಎಂದು ಹೇಳಿದ್ದಾರೆ. ಸೂರತ್ ಡೈಮಂಡ್ ಬೋರ್ಸ್ ʻನವ ಭಾರತದ ಶಕ್ತಿʼಯ ಸಂಕೇತ. ಈ ಸಂಕೀರ್ಣವು ರಾಷ್ಟ್ರದ ಪ್ರಗತಿಗಾಗಿ ನಮ್ಮ ಸರ್ಕಾರ ಕೈಗೊಂಡಿರುವ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ವಿಶ್ವದಾದ್ಯಂತ ಜನರು ಈ ಡೈಮಂಡ್ ಬೋರ್ಸ್ ಬಗ್ಗೆ ಮಾತನಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. https://ainlivenews.com/yatnal-is-like-a-mad-dog-mp-renukacharya-lashes-out/ ಬೋರ್ಸ್ ಭಾರತೀಯ ವಿನ್ಯಾಸ, ಭಾರತೀಯ ವಿನ್ಯಾಸಕಾರರು, ಭಾರತೀಯ ವಸ್ತು ಮತ್ತು ಭಾರತೀಯ ಪರಿಕಲ್ಪನೆಗಳ ಸಾಮರ್ಥ್ಯವನ್ನು ಇಲ್ಲಿ ಪ್ರದರ್ಶಿಸುತ್ತಿದೆ. ನಮ್ಮ ಈ ಕಚೇರಿ ಸಂಕೀರ್ಣದ ಎದುರು ಇತರ ಕಟ್ಟಡಗಳು ತಮ್ಮ ಹೊಳಪನ್ನೇ ಕಳೆದುಕೊಳ್ಳುತ್ತವೆ.…
ಬೆಳಗಾವಿ: ಜಿಲ್ಲೆಯ ವಂಟಮೂರಿ ಗ್ರಾಮದ ಮಹಿಳೆಯೊಬ್ಬರನ್ನು (Woman) ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಧಿಕೃತವಾಗಿ ಬೆಂಗಳೂರಿನ ಸಿಐಡಿ (Woman) ಕಚೇರಿಗೆ ತೆರಳಿ ಕೇಸ್‍ನ ಕಡತಗಳನ್ನು ತನಿಖಾಧಿಕಾರಿ ಹಾಗೂ ಎಸಿಪಿ ಗಿರೀಶ್ ಅವರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಗದಗದಲ್ಲಿ ಮಾತನಾಡಿದ್ದು, ತನಿಖೆಯನ್ನು ಎಲ್ಲಿಗೆ ಬೇಕಾದರೂ ವಹಿಸಲು ತಯಾರಾಗಿದ್ದೇನೆ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಪ್ರಕರಣದ ತನಿಖೆ ಮಾಡಲು ನಮ್ಮ ಪೊಲೀಸರು ಸಮರ್ಥರಿದ್ದಾರೆ. https://ainlivenews.com/yatnal-is-like-a-mad-dog-mp-renukacharya-lashes-out/ ಸಾಕ್ಷ್ಯ ಸಂಗ್ರಹಿಸಿ ಶಿಕ್ಷೆ ಕೊಡಿಸಲು ಪೊಲೀಸರೇ ತಯಾರಾಗಿದ್ದಾರೆ ಎಂದು ಹೇಳಿದ್ದರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡ ಬೆಳಗಾವಿಗೆ ಆಗಮಿಸಿದೆ. ಡಿಎಸ್ಪಿ ಮಟ್ಟದ ಅಧಿಕಾರಿಗಳ ತಂಡದಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಸೋಮವಾರ ಬೆಳಗಾವಿಗೆ ಡಿಐಜಿ ಸುನೀಲ್ ಕುಮಾರ್ ಮೀನಾ ಆಗಮಿಸಲಿದ್ದಾರೆ. ಪ್ರಕರಣದ ತನಿಖಾಧಿಕಾರಿ ಎಸಿಪಿ ಗಿರೀಶ್ ಅವರನ್ನು ಕರೆಸಿಕೊಂಡು ಘಟನೆ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆ ನಡೆದ ಬಳಿಕ ಪೊಲೀಸರು…
ಫೀಡಂ ಪಾರ್ಕ್ ಅವರಣದಲ್ಲಿ ಅಭಿಮಾನ್ ಸ್ಟೂಡಿಯೊದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಸ್ಮಾರಕ ನಿರ್ಮಾಣ ಒತ್ತಾಯಿಸಿ ಬೃಹತ್ ಪ್ರತಿಭಟನೆ. ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಎನ್.ಮೂರ್ತಿ, ಬಿಜೆಪಿ ಮುಖಂಡರಾದ ಭಾಸ್ಕರ್ ರಾವ್, ಮತ್ತು ವಿಷ್ಣುವರ್ಧನ್ ಅಭಿಮಾನಿ ವೀರಕಪುತ್ರ ಶ್ರೀನಿವಾಸ್, ರವಿಕೃಷ್ಣರೆಡ್ಡಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮತ್ತು ರಾಜ್ಯದ್ಯಂತ ಇರುವ ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ಹಲವಾರು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಡಿನಲ್ಲಿ ಅ ಸಿಂಹ ನಾಡಿನಲ್ಲಿ ಸಾಹಸಿಸಿಂಹ ಇರಬೇಕು ಎಂದು ಅಭಿಮಾನ್ ಸ್ಟೂಡಿಯೊದಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಬೇಕು ಮತ್ತು ಕಳೆದ ಐದು ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಲಾಗಿದೆ. ದೇಶ,ವಿದೇಶ ಮತ್ತು ನಾಡಿನಲ್ಲಿ ಕೊಟ್ಯಂತರ ಅಭಿಮಾನಿಗಳ ಹೊಂದಿರುವ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ನಿರಾಶೆ ಮಾಡಬೇಡಿ, ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಜೋಹಾನ್ಸ್‌ಬರ್ಗ್: ಅರ್ಷ್‌ದೀಪ್ ಸಿಂಗ್ (Arshdeep Singh) ಮತ್ತು ಅವೇಶ್ ಖಾನ್ ಅವರ ಘಾತಕ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಯುವ ಆರಂಭಿಕ ಸಾಯಿ ಸುದರ್ಶನ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ ಭಾರತ (Team India) 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಸೂಪರ್ ಸಂಡೇ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ (South Africa) ತಂಡ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 16.4 ಓವರ್‌ಗಳಲ್ಲೇ 2 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಜಯ ಸಾಧಿಸಿತು. https://ainlivenews.com/what-did-dk-shivakumar-say-about-pratap-singh-being-trapped/ ಭಾರತದ ಪರ ತಾಳ್ಮೆಯ ಆಟವಾಡಿದ ಯುವ ಆರಂಭಿಕ ಸಾಯಿ ಸುದರ್ಶನ್ (Sai Sudharsan)…
ವಿಜಯಪುರ: ಒಬ್ಬ ಹಿರಿಯರನ್ನು ಹಂದಿ, ನಾಯಿ ಎಂದು ಕರೆಯುವ ಯತ್ನಾಳ್‍ಗೆ ನಾಚಿಕೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಜಾತಿಯ ಹಾಗೂ ತಮ್ಮ ಪಕ್ಷದ ನಿರಾಣಿಯಂತಹ ಒಬ್ಬ ಹಿರಿಯರನ್ನು ಹಂದಿ, ನಾಯಿ ಎಂದು ಕರೆಯುವ ಯತ್ನಾಳ್‍ಗೆ ನಾಚಿಕೆಯಾಗಬೇಕು. ಇವರೊಬ್ಬ ನಾಯಕನಾ? ಯಾರಾದ್ರೂ ಹೀಗೆ ಮಾತನಾಡುತ್ತಾರಾ? ಮುಂದೆ ಬರುವಂತಹ, https://ainlivenews.com/what-did-dk-shivakumar-say-about-pratap-singh-being-trapped/ ರಾಜಕಾರಣಿಗಳಿಗೆ ಇವರ ಸಂದೇಶ ಏನು? ಅಯೋಗ್ಯತನಕ್ಕೂ ಒಂದು ಮಿತಿ ಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಯಡ್ಡಿಯೂರಪ್ಪ ಮಗ ವಿಜಯೇಂದ್ರರಿಂದಲೇ ಜೈಲಿಗೆ ಹೋದರು. ಆರ್‌ಟಿಜಿಎಸ್‌ನಲ್ಲಿ 20 ಕೋಟಿ ಲಂಚಾ ಪಡೆದರು. ಯಾರದ್ರೂ ಆರ್‌ಟಿಜಿಎಸ್‌ನಲ್ಲಿ ಲಂಚ ಪಡಿಯುತ್ತಾರಾ? ಇಂತಹ ಒಬ್ಬ ಪೆದ್ದ ಹಾಗೂ ಲಂಚಕೋರ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ, ಯಾರಿಗಾದರೂ ಗೌರವ ಇದೆಯೇ? ಎಂದು ಅವರು ಕಿಡಿಕಾರಿದ್ದಾರೆ.
ಕಾರವಾರ: ಶಿರಸಿಯ ಸಹಸ್ರಲಿಂಗದಲ್ಲಿ ಈಜಲು ಹೋಗಿದ್ದ ಐವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರೋ ಘಟನೆ ನಡೆದಿದೆ. ರವಿವಾರ ರಜೆಯ ಸಲುವಾಗಿ ಈಜಲು ತೆರಳಿದ್ದ ವಿದ್ಯಾರ್ಥಿಗಳು ನೀರಲ್ಲಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಓರ್ವನ ಶವ ಪತ್ತೆಯಾಗಿದೆ. ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ರಾಮನಬೈಲಿನ ನಾದಿಯಾ ನೂರ್ ಅಹಮದ್ ಶೇಖ್ (20), https://ainlivenews.com/what-did-dk-shivakumar-say-about-pratap-singh-being-trapped/ ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಟಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್(22) ಹಾಗೂ ರಾಮನಬೈಲಿನ ವಿದ್ಯಾರ್ಥಿ ಉಮರ್ ಸಿದ್ದಿಕ್ ನಾಪತ್ತೆಯಾಗಿದ್ದಾರೆ. ಇದ್ರಲ್ಲಿ ಸಲೀಮ್ ಕಲೀಲ್ ರೆಹಮಾನ್ (44) ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ. ಉಳಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗ್ತಿದೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.