ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗುಲೆ ಯಿಂದ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ. ಆರೋಪಿ ಪರ ವಕೀಲ ಕೆಎಸ್ಎನ್ ರಾಜೇಶ್ ಎಂಬುವವರಿಂದ ಅರ್ಜಿ ಸಲ್ಲಿಸಲಾಗಿದೆ. ಡಿಸೆಂಬರ್ 20ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿರುವ ಕೋರ್ಟ್, ಸದ್ಯ ಆರೋಪಿ ಪ್ರವೀಣ್ ಚೌಗುಲೆ ಪರಪ್ಪನ ಅಗ್ರಹಾರದಲ್ಲಿದ್ದಾರೆ. https://ainlivenews.com/what-did-dk-shivakumar-say-about-pratap-singh-being-trapped/ ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ಇದೇ ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ದಾರುಣ ಘಟನೆ ನಡೆದಿತ್ತು. ಆರೋಪಿ ಪ್ರವೀಣ್ ಚೌಗುಲೆ ಹತ್ಯೆ ಮಾಡಿ ಪರಾರಿಯಾಗಿದ್ದ. ಬಳಿಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
Author: AIN Author
ಹಾವೇರಿ: ಮಹಿಳೆ ಬೆತ್ತಲೆ ಆಗಿಲ್ಲ, ಇಡೀ ಕಾಂಗ್ರೆಸ್ ಸರ್ಕಾರವೇ ಬೆತ್ತಲೆ ಆಗಿದೆ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿದರು. ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ನಗರದಲ್ಲಿ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿಸಿ ಪಾಟೀಲ್ , ಮಹಿಳೆ ಬೆತ್ತಲೆ ಆಗಿಲ್ಲ, ಇಡೀ ಕಾಂಗ್ರೆಸ್ ಸರ್ಕಾರವೇ ಬೆತ್ತಲೆ ಆಗಿದೆ. ಕಾನೂನು ಸುವ್ಯವಸ್ಥೆ ಎಲ್ಲಿದೆ? ಪೊಲೀಸ್ ಇಲಾಖೆ ಏನು ಕೆಲಸ ಮಾಡುತ್ತಿದೆ? ಇಂದು ವಿಚಾರ ಮಾಡಬೇಕಿದೆ. ಕಾಂಗ್ರೆಸ್ ಭ್ರಷ್ಟ ಹಾಗೂ ಅದಕ್ಷ ಸರ್ಕಾರ ಎಂದು ವಾಗ್ದಾಳಿ ಮಾಡಿದ್ದಾರೆ. https://ainlivenews.com/what-did-dk-shivakumar-say-about-pratap-singh-being-trapped/ ಭ್ರೂಣ ಹತ್ಯೆ ಆದರೂ ಕ್ರಮ ತಗೊಳ್ಳುತ್ತಿಲ್ಲ. ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಆಗುತ್ತಿದೆ. ಆದರೂ ಈ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸಚಿವರು ಹಣ ಮಾಡುವುದರಲ್ಲಿ ಪೈಪೋಟಿಗಿಳಿದಿದ್ದಾರೆ. ಅವರವರಲ್ಲೇ ದುಡ್ಡು ಮಾಡುವುದರಲ್ಲಿ ಕಾಂಪಿಟೇಶನ್ ನಡೆದಿದೆ. ಅಭಿವೃದ್ಧಿಯಂತೂ ರಾಜ್ಯದಲ್ಲಿ ಶೂನ್ಯವಾಗಿದೆ. ಇಂಥ ಸರ್ಕಾರಕ್ಕೆ…
ಬೆಂಗಳೂರು: ರಾಜ್ಯದಲ್ಲಿ ಕೊವಿಡ್ ಟೆಸ್ಟ್ ಹೆಚ್ಚಳ ಮಾಡುತ್ತೇವೆ. ಕೊವಿಡ್ ಲಕ್ಷಣ ಕಂಡು ಬಂದರೆ ಪರೀಕ್ಷೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ ರಾಜ್ಯ ಆರೋಗ್ಯ ಇಲಾಖೆಯಿಂದ ತುರ್ತು ಸಭೆ ಬಳಿಕ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. https://ainlivenews.com/what-did-dk-shivakumar-say-about-pratap-singh-being-trapped/ ವೈರಲ್ ಫೀವರ್, ILI ಸಾರಿ ಕೇಸ್ ಕಂಡುಬಂದರೆ ಕೊವಿಡ್ ಟೆಸ್ಟ್ ಮಾಡಲಾಗುವುದು. ಕೊವಿಡ್ ಲಕ್ಷಣ ಕಂಡು ಬಂದರೆ ಕೊವಿಡ್ ಪ್ರಮಾಣ ಹೆಚ್ಚಿಸುತ್ತೇವೆ ಎಂದಿದ್ದಾರೆ. 3 ತಿಂಗಳಿಗೆ ಬೇಕಾಗುವಷ್ಟು ಕೊವಿಡ್ ಟೆಸ್ಟ್ ಕಿಟ್ ಖರೀದಿಗೆ ಸೂಚನೆ ನೀಡಲಾಗಿದೆ. 1 ತಿಂಗಳ ಟೆಸ್ಟ್ ಮಾಡಲು 3 ಲಕ್ಷ RTPCR ಟೆಸ್ಟಿಂಗ್ ಕಿಟ್ ಅಗತ್ಯವಿದೆ. ಔಷಧಿ, ಬೆಡ್ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲು ಸೂಚನೆ ನೀಡಲಾಗಿದೆ. ಡಿ.19ರಂದು ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ : ಒರಿಗಾಮಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ನಾಲ್ವರು ಮಹಿಳೆಯರು ಗಾಯಗೊಂಡಿದ್ದು, ಒರ್ವ ಮಹಿಳಾ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ, ಗಾಯಗೊಂಡಿರುವ ಮಹಿಳೆಯರಿಗೆ ಸೂಕ್ತ ಚಿಕಿತ್ಸೆಗೊಡಿಸದೆ ನಿರ್ಲಕ್ಷ್ಯತೆ ವಹಿಸಿದೆ ಎಂದು ಕನ್ನಡಪರ ಹೋರಾಟಗಾರರು ಅಕ್ರೋಶ ವ್ಯಕ್ತಪಡಿಸಿದರು. ದೊಡ್ಡಬಳ್ಳಾಪುರದ ಅಪೆರಲ್ಸ್ ಪಾರ್ಕ್ ನಲ್ಲಿರುವ ಒರಿಗಾಮಿ ಸೆಲ್ಯೂಲೋ ಪ್ರೈವಿಟ್ ಲಿಮಿಟೆಡ್ ಟಿಶ್ಯೂ ಪೆಪೇರ್ ತಯಾರಿಸುತ್ತದೆ, ಫ್ಯಾಕ್ಟರಿಯಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರಿದ್ದು ಹೆಚ್ಚಾಗಿ ಮಹಿಳಾ ಕಾರ್ಮಿಕರನೇ ಇದ್ದಾರೆ, ನಿನ್ನೆ ಮಧ್ಯಾಹ್ನ ಕೆಲಸ ಮಾಡುತ್ತಿದ್ದ ವೇಳೆ ಶೀಟ್ ಜಾರಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರ ಮೇಲೆ ಬಿದ್ದಿದೆ, ನಾಲ್ವರು ಮಹಿಳೆಯರು ಗಾಯಗೊಂಡಿದ್ದು, ಒರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. https://ainlivenews.com/what-did-dk-shivakumar-say-about-pratap-singh-being-trapped/ ಗಾಯಗೊಂಡ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆಯನ್ನ ಒರಿಗಾಮಿ ಫ್ಯಾಕ್ಟರಿಯ ಆಡಳಿತ ಮಂಡಳಿ ನೀಡಿಲ್ಲ, ಸೀಜ್ ಮಾಡಲಾಗಿರುವ ಆಸ್ಪತ್ರೆಯಲ್ಲಿ ದಾಖಲು ಮಾಡಿ ಕಾರ್ಮಿಕರನ್ನ ಕೀಳಾಗಿ ನೋಡಿದ್ದಾರೆ, ಗಾಯಗೊಂಡ ಕಾರ್ಮಿಕರಿಗೆ ವಾಹನ ಸೌಲಭ್ಯ ನೀಡದೆ ಉದಾಸೀನತೆ ತೋರಿದ್ದಾರೆ, ಪ್ರಕರಣವನ್ನ ಫ್ಯಾಕ್ಟರಿಯಲ್ಲೇ ಮುಚ್ಚಿ ಹಾಕಲು ಪೊಲೀಸರಿಗಾಗಲಿ, ಕಾರ್ಮಿಕ ಅಧಿಕಾರಿಗಾಗಲಿ ಯಾವುದೇ…
ಚಿಕ್ಕಬಳ್ಳಾಪುರ: ಗಂಡ ಹೆಂಡಿರ ಜಗಳ ವಿಚಾರದಲ್ಲಿ ಮದ್ಯಸ್ಥಿಕೆ ವಹಿಸಲು ಬಂದಿದ್ದ ಪೊಲೀಸರನ್ನೇ ಕೂಡಿಹಾಕಿದ ಪ್ರಸಂಗ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಅಮ್ಮಗಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಮ್ಮಗಾರಹಳ್ಳಿ ಗ್ರಾಮದಲ್ಲಿ ಶಿವಾನಂದ ಹಾಗೂ ಚಿಂತಾಮಣಿ ತಾಲ್ಲೂಕಿನ ನಾಯನಹಳ್ಳಿ ಗ್ರಾಮದ ಶಿವಾನಂದ ಪತ್ನಿ ಐಶ್ವರ್ಯ ನಡುವೆ ಕೌಟುಂಬಿಕ ಕಲಹದಿಂದ ದೂರ ಇದ್ದರಂತೆ ಇವರಿಗೆ ಒಂದು ಗಂಡು ಮಗೂ ಸಹ ಇದೆಯಂತೆ.. ಐಶ್ವರ್ಯ 112 ಹೋಯ್ಸಳ ಪೊಲೀಸರಿಗೆ ಕರೆ ಮಾಡಿ ತನ್ನ ಹಾಗೂ ಪತಿ ನಡುವೆ ಗಲಾಟೆಯಾಗಿದೆ ನ್ಯಾಯ ಕೊಡಿಸಿ ಅಂತ ಮನವಿ ಮಾಡಿದ್ದರಂತೆ.. ತಡರಾತ್ರಿ ಅಮ್ಮಗಾರಹಳ್ಳಿಗೆ ಬಂದ ಹೊಯ್ಸಳ ಪೊಲೀಸರು ಮಗುವನ್ನು ಕೊಡಿ ಠಾಣೆಗೆ ಬಂದು ತಂದೆ ತಾಯಿ ಇಬ್ಬರು ನ್ಯಾಯ ಪಂಚಾಯತಿ ಮಾಡಿಕೊಂಡು ಮಗುವನ್ನು ಕರೆದುಕೊಂಡೊಗಿ ಅಲ್ಲಿಯವರಿಗೆ, https://ainlivenews.com/what-did-dk-shivakumar-say-about-pratap-singh-being-trapped/ ಸಾಂತ್ವಾನ ಕೇಂದ್ರದಲ್ಲಿ ಇರುಸುತ್ತೇವೆ ಎಂದು ಮಗುವನ್ನು ಕರೆತಂದು ಗ್ರಾಮದ ಮುಂಭಾಗದ ಮುಖ್ಯ ರಸ್ತೆಗೆ ಬಂದು ಮಗುವಿನ ತಾಯಿ ಐಶ್ವರ್ಯ ಅವರ ತಾಯಿ ಯಶೊದಮ್ಮ ಯಂಬುವರಿಗೆ ಒಪ್ಪಿಸಲು ಮುಂದಾಗಿದ್ದಾರೆ.. ಇದರಿಂದ ಮಗುವಿನ ತಂದೆಯ ಕಡೆಯವರು ಸಿಡಿದೆದ್ದು…
ನವದೆಹಲಿ: ಪ್ರತಾಪ್ ಸಿಂಹ (Pratap Simha) ಅವರು ಯಾವ ಹಿನ್ನೆಲೆಯಲ್ಲಿ ಪಾಸ್ ಕೊಟ್ಟರು ಎಂಬುದೆಲ್ಲವೂ ತನಿಖೆ ಆಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಷಾದನೀಯ, ಖಂಡನೀಯ. ಘಟನೆಯ ಬಳಿಕ ಲೋಕಸಭಾ ಸ್ಪೀಕರ್ ಸಭಾ ನಾಯಕರ ಸಭೆ ನಡೆಸಿದರು. ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಘಟನೆಯಿಂದ ಪಾಠ ಕಲಿತು ಮುಂದೆ ತೆಗೆದುಕೊಳ್ಳುವ ಕ್ರಮದ ಬಗ್ಗೆ ಸಮಾಲೋಚನೆ ಮಾಡಲಾಯಿತು. ಎಲ್ಲರ ಸಲಹೆ ಪಡೆದು ಸಂಸತ್ ಸುರಕ್ಷತೆ ಮಾಡುವುದು ನಮ್ಮ ಉದ್ದೇಶ. 1971 ರಿಂದ ದಾಖಲೆಗಳ ಪ್ರಕಾರ ಇಂತಹ ಘಟನೆಯಲ್ಲಿ ಸ್ಪೀಕರ್ ಕೈಗೊಂಡಿರುವ ಕ್ರಮಗಳಂತೆ ಈ ಬಾರಿಯೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. https://ainlivenews.com/what-did-dk-shivakumar-say-about-pratap-singh-being-trapped/ ಆಯುಧ ಸೇರಿದಂತೆ ಇತ್ಯಾಧಿ ವಸ್ತು ಪಡೆದು ಗ್ಯಾಲರಿಗೆ ಬಂದಿರುವುದು ಇದೆ. ಇಂತಹ ಘಟನೆಯಲ್ಲಿ ಅಂದಿನ ಸ್ಪೀಕರ್ ತೆಗೆದುಕೊಂಡ ಪರಂಪರೆಯನ್ನು ಪರಿಶೀಲಿಸಿ ಅಂತೆಯೇ ಈ ಬಾರಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಗೃಹ ಸಚಿವಾಲಯಕ್ಕೆ ಪತ್ರ ಬರೆದು ಉನ್ನತ…
ಕಿವಿ ಹಣ್ಣು, ಹೆಸರೇ ಸೂಚಿಸುವಂತೆ, ಕಿವಿ ಪಕ್ಷಿಯ ದೇಶವಾದ ನ್ಯೂಜಿಲ್ಯಾಂಡ್ ಮೂಲದ್ದಾಗಿದೆ. ಇಂದು ಭಾರತದಲ್ಲಿಯೂ ಇದು ಸುಲಭವಾಗಿ ಲಭಿಸುತ್ತಿದೆ. ಮೊಟ್ಟೆಯೊಂದನ್ನು ಒತ್ತಿ ಚಪ್ಪಟೆಯಾಗಿಸಿದರೆ ಪಡೆಯುವ ಅಥವಾ ಕುಂಬಳಕಾಯಿಯನ್ನು ಗಜಲಿಂಬೆಯ ಗಾತ್ರಕ್ಕೆ ಇಳಿಸಿದಂತಹ ಆಹಾರ ಇರುವ ಇದರ ಸಿಪ್ಪೆಯಲ್ಲಿ ಅತಿ ಸೂಕ್ಷ್ಮವಾದ, ಆದರೆ ಚುಚ್ಚದ ಮೃದುವಾದ ರೋಮಗಳಿವೆ. ಸಿಪ್ಪೆ ಸುಲಿದಾಗ ತಿಳಿಹಸಿರು ಬಣ್ಣದ ತಿರುಳು ಹಾಗೂ ನಡುವೆ ಬಿಳಿ ಬಣ್ಣದ ಭಾಗ ಕಾಣಿಸುತ್ತದೆ. ಬಿಳಿ ಭಾಗ ಚಪ್ಪೆಯಾಗಿದ್ದರೂ ಹಸಿರು ಭಾಗ ಚಿಕ್ಕ ಬೀಜಗಳನ್ನು ಹೊಂದಿದ್ದು ಕೊಂಚ ಆಮ್ಲೀಯ ಹುಳಿಮಿಶ್ರಿತ ಸಿಹಿ ರುಚಿಯನ್ನು ಹೊಂದಿರುತ್ತದೆ. ಈ ರುಚಿಗೆ ಇದರಲ್ಲಿರುವ ಆಗಾಧ ಪ್ರಮಾಣದ ವಿಟಮಿನ್ ಸಿ ಕಾರಣ. ಉಳಿದಂತೆ ಈ ಹಣ್ಣಿನಲ್ಲಿ ವಿಟಮಿನ್ ಕೆ, ಫೋಲೇಟ್, ಪೊಟ್ಯಾಶಿಯಂ ಅಂಶಗಳೂ ಸಮೃದ್ಧವಾಗಿವೆ. ಅಲ್ಲದೇ ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ಕರಗುವ ಹಾಗೂ ಕರಗದ ನಾರಿನಂಶವೂ ಸಮೃದ್ಧವಾಗಿದೆ. ಕಿವಿ ಹಣ್ಣನ್ನು ‘ಸುಪರ್ ಫುಡ್’ ಎಂದು ಇನ್ನೂ ಕರೆಯಲಾಗಿಲ್ಲದಿದ್ದರೂ ಹೀಗೆ ಕರೆಯಬಹುದಾದ ಎಲ್ಲಾ ಗುಣಗಳನ್ನು ಹೊಂದಿದೆ. ಪ್ರಮುಖ ವಿಟಮಿನ್ನುಗಳು, ಖನಿಜಗಳು…
ಕಿರುತೆರೆಯ ಜನಪ್ರಿಯ ಸೀರಿಯಲ್ ‘ಗೀತಾ’ (Geetha) ಹೀರೋ ಧನುಷ್ ಗೌಡ್ (Dhanush Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಂಜನಾ ಜೊತೆ ಅದ್ದೂರಿಯಾಗಿ ಧನುಷ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಗೀತಾ’ ಸೀರಿಯಲ್ ಮೂಲಕ ಮನೆಮಾತಾದ ವಿಜಯ್ ಅಲಿಯಾಸ್ ಧನುಷ್ ಗೌಡ ಅವರು ಗ್ರ್ಯಾಂಡ್ ಆಗಿ ಸಂಜನಾ (Sanjana Prabhu) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ಬ್ರೇಕ್ ಹಾಕಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಧನುಷ್-ಸಂಜನಾ ಎಂಗೇಜ್‌ಮೆಂಟ್ ಕಾರ್ಯಕ್ರಮ ನಡೆದಿದೆ. ‘ಗೀತಾ’ ಸಹನಟಿ ಭವ್ಯಾ ಗೌಡ ಮತ್ತು ಕುಟುಂಬಸ್ಥರು, ಆಪ್ತರು ಅಷ್ಟೇ ಈ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್ಗಳು ಮಿಂಚಿನ ದಾಳಿ ನಡೆಸಿದರು.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 27.3 ಓವರ್ಗಳಲ್ಲಿ 116 ರನ್ಗಳಿಗೆ ಆಲೌಟ್ ಆಗಿದೆ. ದಕ್ಷಿಣ ಆಫ್ರಿಕಾ ಪರ ಆಂಡಿಲ್ ಫೆಹ್ಲುಕ್ವಾಯೊ 33, ಟೋನಿ ಡಿ ಜೋರ್ಜಿ 28, ನಾಯಕ ಏಡೆನ್ ಮಾರ್ಕ್ರಾಮ್ 12 ರನ್ ಗಳಿಸಿದರು. ಉಳಿದ ಬ್ಯಾಟರ್ಗಳು ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು. ಅರ್ಷದೀಪ್ ಸಿಂಗ್, ಅವೇಶ್ ಖಾನ್ ಮಾರಕ ದಾಳಿಗೆ ಹರಿಣಗಳು ಪೆವಿಲಿಯನ್ ಸೇರಿದ್ದಾರೆ ಬಿಗಿ ಬೌಲಿಂಗ್ ದಾಳಿ ನಡೆಸಿದ ಅರ್ಷದೀಪ್ ಸಿಂಗ್ 5, ಅವೇಶ್ ಖಾನ್ 4 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು. ಭಾರತ ಗೆಲ್ಲಲು 117 ರನ್ ಗಳಿಸಬೇಕಿದೆ. ಮೂವರು ಶೂನ್ಯ, ನಾಲ್ವರು ಒಂದಂಕಿಗೆ ಔಟ್. ಆರಂಭಿಕ ಬ್ಯಾಟರ್ ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ವಿಯಾನ್ ಮುಲ್ಡರ್ ಶೂನ್ಯಕ್ಕೆ (0) ಔಟಾದರು. ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್ ಒಂದಂಕಿಗೆ ವಿಕೆಟ್…
ಬೆಂಗಳೂರು: ರಾಜ್ಯದಲ್ಲಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ ಮಾಡಲಾಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿ ದಲಿತ ಶಾಲಾ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಚ ಮಾಡಲು ಬಳಕೆ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ. https://x.com/BSBommai/status/1736325672878957053?t=31NIjtLq3dye5Ju7BCTkJQ&s=08 ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರೀಯವಾಗಿದೆ. ಯಾರಿಗೂ ಭಯ ಇಲ್ಲ. ಸರ್ಕಾರ ಅಧಿಕಾರಿಗಳ ಮೇಲೆ ಸಂಪೂರ್ಣ ಹಿಡಿತ ಕಳೆದು ಕೊಂಡಿದೆ. ಇಲ್ಲಿ ಮಹಿಳೆಯರು, ಮಕ್ಕಳು, ದಲಿತರಿಗೆ ಸುರಕ್ಷತೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಇದ್ದೂ ಸತ್ತಂತಾಗಿದ್ದು, ನಿರ್ಜೀವ ಸರ್ಕಾರಕ್ಕೆ ರಾಜ್ಯದ ಜನತೆ ಹಿಡಿ ಶಾಪ ಹಾಕುವಂತಾಗಿದೆ.