Author: AIN Author

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಹಿಳೆ ಮೇಲಾದ ದೌರ್ಜನ್ಯ ಪ್ರಕರಣವನ್ನು ಯಾವ ತನಿಖೆಗೆ ಬೇಕಾದರೂ ವಹಿಸಲು ಸಿದ್ಧ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಮ್ಮ ಪೊಲೀಸರು ತನಿಖೆ ಮಾಡಲು ಸಮರ್ಥರಿದ್ದಾರೆ. ಹಾಗಾಗಿ, ಬೇರೆ ಪ್ರಶ್ನೆ ಉದ್ಭವಿಸದು ಎಂದು ತಿಳಿಸಿದ್ದಾರೆ. ಕ.ರಾ.ರ.ಸಾ ನಿಗಮದಲ್ಲಿ ಸಾಕಷ್ಟು ಬಸ್ ಕೆಟ್ಟು ನಿಂತಿದ್ದು ಚಾಲಕರಿಗೆ ಡ್ಯೂಟಿ ಸಿಗುತ್ತಿಲ್ಲ. ಡ್ಯೂಟಿ ಹಾಕಲು ಅಧಿಕಾರಿಗಳು ಹಣ ಕೇಳುತ್ತಾರೆ ಎಂದು ಕೆಲ ಚಾಲಕರಿಂದ ದೂರು ಕೇಳಿಬರುತ್ತಿದ್ದು, ಡ್ಯೂಟಿ ಹಾಕಲು ಲಂಚ ಕೇಳಿದ ಪ್ರಕರಣವನ್ನೂ ತನಿಖೆ ಮಾಡಿಸಲಾಗುವುದು. ಈಗಾಗಲೇ ನಾವು ಹಿಂದಿನ ಸರ್ಕಾರದ 40% ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ಮಾಡಿಸುತ್ತಿದ್ದೇವೆ. ಆರೋಪಗಳು ಸಾಬೀತಾದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಡೀ ದೇಶದಲ್ಲಿ ಕೊರೊನಾ ಹೊಸ ತಳಿ ಶುರುವಾಗಿದ್ದು, ಈ ಬಗ್ಗೆ ಆರೋಗ್ಯ…

Read More

ಬೆಳಗಾವಿ: ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡಬೇಕು. ಟಿಪ್ಪುವಿನ ಹೆಸರು ಶೌಚಾಲಯಗಳಿಗೆ ಇಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೇಳಿದರು. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು (Tipu Sultan) ಹೆಸರಿಡುವ ವಿಚಾರ ಕುರಿತು ಮಾತನಾಡಿದ ಯತ್ನಾಳ್‌, ಟಿಪ್ಪು ಒಬ್ಬ ಮತಾಂಧ. ನಾಲ್ಕು ಸಾವಿರ ದೇವಸ್ಥಾನ ಧ್ವಂಸ ಮಾಡಿದವ. ಅವನ ಖಡ್ಗದ ಮೇಲೆ ಕಾಫೀರರನ್ನು (ಮುಸ್ಲಿಮರಲ್ಲದವರು) ಕೊಲೆ ಮಾಡಿ ಎಂದು ಬರೆದಿತ್ತು. ಇಂತಹ ಒಬ್ಬ ಮತಾಂಧ ಟಿಪ್ಪು ಹೆಸರನ್ನ ಬೇಕಾದರೇ ಶೌಚಾಲಯಗಳಿಗೆ ಇಡಲಿ ಎಂದು ಕುಟುಕಿದರು. ವೀರ ಸಾವರ್ಕರ್‌ ಭಾವಚಿತ್ರ ತೆರವು ಮಾಡಬೇಕು ಎನ್ನುವ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, 10 ಖರ್ಗೆಗಳು ಬಂದರೂ ಸಾವರ್ಕರ್ ಫೋಟೋ ತೆಗೆಯಲು ಆಗುವುದಿಲ್ಲ. ಸಾವರ್ಕರ್‌ ಫೋಟೋ ತೆಗೆದು ನೆಹರೂ ಫೋಟೋ ಹಚ್ಚಿದರೆ ನಾವು ಅದನ್ನೂ ತೆಗೆಯುತ್ತೇವೆ ಎಂದು ಎಚ್ಚರಿಸಿದರು. ರಾಜ್ಯದ ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸರ್ವಾನುಮತದ ನಿರ್ಣಯ…

Read More

ಬೆಂಗಳೂರು: ಆ ಪುಟ್ಟ ಕಂದಮ್ಮ ತನ್ನ ಪಾಡಿದೆ ತಾನು ಆಟವಾಡ್ತಾಯಿತ್ತು.. ಆದ್ರೆ ಪಾಪ ಆ ಮಗುವಿಗೆ ಗೊತ್ತಿರಲಿಲ್ಲ, ಕಾರಿನ ರೂಪದಲ್ಲಿ ತನ್ನ ಸಾವು ಬರತ್ತೆ ಅಂತ.. ಒಂದೇ ಸಮನೆ ಮಗುವಿನ ಮೇಲೆ ಕಾರು ಹತ್ತಿದ್ದು, ಆ ಮಗು ಕೊನೆಯುಸಿರೆಳೆದಿದೆ.. ಈ ದೃಶ್ಯ ನೋಡೋದಕ್ಕೆ ತುಂಬಾನೆ ಭಯಾನಕವಾಗಿದೆ.. ಹೌದು..  ಆಟವಾಡುತ್ತಿದ್ದ ಬಾಲಕಿ ಮೇಲೆ ಕಾರು ಹರಿದು ಸಾವನ್ನಪ್ಪಿರುವ ದಾರುಣ ಘಟನೆ ಡಿಸೆಂಬರ್ 9ರ ಬೆಳಗ್ಗೆ ಏಳು ಘಂಟೆಗೆ  ಬೆಳ್ಳಂದೂರು ಠಾಣಾ ವ್ಯಾಪ್ತಿಯ ಕಸವನಹಳ್ಳಿಯ ಸಮೃದ್ಧಿ ಅಪಾರ್ಟ್ಮೆಂಟ್ ಬಳಿ ನಡೆದಿದೆ.  . ನೇಪಾಳ ಮೂಲದ ಜೋಗ್ ಜುತಾರ್ ಹಾಗೂ ಅನಿತಾ ದಂಪತಿಯ 3 ವರ್ಷದ ಮಗು ಅರ್ಬಿನಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದು, ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಸಮೃದ್ದಿ ಅಪಾರ್ಟ್ಮೆಂಟ್ ನಲ್ಲಿ ಮುಂಭಾಗದಲ್ಲಿ  ಆಟವಾಡುತ್ತಿದ್ದ ಮಗುವನ್ನ ಗಮನಿಸದ ಅದೇ ಅಪಾರ್ಟ್ಮೆಂಟ್ ನಿವಾಸಿ ಸುಮನ್ ಎಂಬ ಈತ  ಕಾರು ಹರಿಸಿಕೊಂಡು ಹೋಗಿದ್ದಾನೆ. ಘಟನೆಯ ಬಗ್ಗೆ ಅರಿವೇ ಇರದ ಪೋಷಕರು, ಅಪಾರ್ಟ್‌ಮೆಂಟ್ ಗೇಟಿಗೆ ಸಿಲುಕಿಹಾಕಿಕೊಂಡು ಮಗು…

Read More

ಬೆಂಗಳೂರು: ಸಂಸತ್ (Parliament) ಮೇಲಿನ ದಾಳಿಗೆ ನಿರುದ್ಯೋಗ ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆ ಚೈಲ್ಡಿಶ್ ಹೇಳಿಕೆ ಅಂತ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹೇಳಿಕೆ ಚೈಲ್ಡಿಶ್ ಹೇಳಿಕೆ. ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚೆ ಆಗಲಿ ಬೇಡ ಅನ್ನೊಲ್ಲ. ನಿರುದ್ಯೋಗ ಇದೆ ಅಂತ ಹೇಳಿ ಕೊಲೆ ಮಾಡ್ತೀನಿ, ಎಂಪಿಯನ್ನ, ಕೊಲೆ ಮಾಡ್ತೀನಿ ಅಂದ್ರೆ. ಕರ್ನಾಟಕದಲ್ಲಿ ನಿರುದ್ಯೋಗ ಇಲ್ಲವಾ? ಛತ್ತೀಸ್ಗಢದಲ್ಲಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಇತ್ತು ಅಲ್ಲಿ ನಿರುದ್ಯೋಗ ಇಲ್ಲವಾ. ನಿರುದ್ಯೋಗ ಇದೆ ಅಂತ ದೇಶದ ವಿರೋಧಿ, ದೇಶದ್ರೋಹಿ, ಟೆರರಿಸ್ಟ್ ಜೊತೆ ಲಿಂಕ್ ಇಟ್ಟುಕೊಳ್ಳುವ ಸಂಘಟನೆ ಜೊತೆ ಹೀಗೆ ಮಾಡೋಕೆ ನಿಮ್ಮ ಬೆಂಬಲ ಇದೆಯಾ ರಾಹುಲ್ ಗಾಂಧಿ ಅಂತ ಪ್ರಶ್ನೆ ಮಾಡಿದ್ರು. ಮರ್ಡರ್ ಮಾಡಿದವನಿಗೂ ಅವನದ್ದೇ ಲಾಜಿಕ್ ಇರತ್ತೆ. ಆದರೆ ಇದನ್ನ ಸಮಾಜ ಒಪ್ಪುತ್ತಾ? ರಾಹುಲ್ ಗಾಂಧಿ ಎಷ್ಟು ಚೈಲ್ಡಿಶ್ ಆಗಿ ಮಾತಾಡ್ತಾ ಇದ್ದೀರಾ. ಮೋದಿ ವಿರೋಧ ಮಾಡೋ ಭರದಲ್ಲಿ…

Read More

ಹುಬ್ಬಳ್ಳಿ; ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ‘ಪಲ್ಲಕ್ಕಿ’ ಮಾದರಿಯ ನಾನ್ ಎಸಿ ಸ್ಲೀಪರ್ ಬಸ್‌ ಸೇವೆ ಜನಪ್ರಿಯವಾಗುತ್ತಿದ್ದು . ಹಲವಾರು ಮಾರ್ಗದಲ್ಲಿ ಈಗಾಗಲೇ ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸಲು ‘ಪಲ್ಲಕ್ಕಿ’ ಬಸ್ ಸೇವೆ ಆರಂಭವಾಗಿದೆ. ನೈರುತ್ಯ ಸಾರಿಗೆ ತಾಳಿಕೋಟೆ, ಗಂಗಾವತಿಗೆ ವಯಾ ಹುಬ್ಬಳ್ಳಿ ‘ಪಲ್ಲಕ್ಕಿ’ ಬಸ್ ಸೇವೆಯನ್ನು ಆರಂಭಿಸಿದೆ. ಅಕ್ಟೋಬರ್‌ನಲ್ಲಿ ‘ಪಲ್ಲಕ್ಕಿ’ ಹೆಸರಿನ ನೂತನ ಬಸ್‌ ಸೇವೆಯನ್ನು ಕೆಎಸ್ಆರ್‌ಟಿಸಿ ಆರಂಭಿಸಿದೆ. ರಾಜ್ಯದ ಹಲವಾರು ಮಾರ್ಗದಲ್ಲಿ ಈ ಬಸ್‌ಗಳು ಸಂಚಾರ ನಡೆಸುತ್ತಿವೆ. ಸಾಗರ-ಶಿವಮೊಗ್ಗ-ವಿಜಯಪುರ ಸ್ಲೀಪರ್ ಪಲ್ಲಕ್ಕಿ ಬಸ್, ವೇಳಾಪಟ್ಟಿ ಬಸ್ ವೇಳಾಪಟ್ಟಿ; ಮಂಗಳೂರು-ತಾಳಿಕೋಟೆ ನಡುವಿನ ‘ಪಲ್ಲಕ್ಕಿ’ ಬಸ್ ಸಂಜೆ 6.30ಕ್ಕೆ ಮಂಗಳೂರಿನಿಂದ ಹೊರಡಲಿದೆ. ಮುಂಜಾನೆ 2.45ಕ್ಕೆ ಹುಬ್ಬಳ್ಳಿ, ಬಳಿಕ 7 ಗಂಟೆಗೆ ತಾಳಿಕೋಟೆ ತಲುಪಲಿದೆ. ತಾಳಿಕೋಟೆ-ಮಂಗಳೂರು ನಡುವಿನ ಬಸ್ ಸಂಜೆ 5.01ಕ್ಕೆ ತಾಳಿಕೋಟೆಯಿಂದ ಹೊರಡಲಿದೆ. 10.45ಕ್ಕೆ ಹುಬ್ಬಳ್ಳಿ ಮತ್ತು ಮರುದಿನ ಬೆಳಗ್ಗೆ 6.45ಕ್ಕೆ ಮಂಗಳೂರು ತಲುಪಲಿದೆ. ಬಸ್‌ ವೇಳಾಪಟ್ಟಿ ದರ ಮಂಗಳೂರು-ಉಡುಪಿ-ಗಂಗಾವತಿ ಸ್ಲೀಪರ್‌ ಪಲ್ಲಕ್ಕಿ…

Read More

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತನ್ನು ತಳ್ಳಿಹಾಕಿದರು. ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, ಪ್ರತಿ ಕ್ದೇತ್ರಕ್ಕೂ ಓರ್ವ ಸಚಿವರನ್ನು ನಿಯೋಜಿಸಲಾಗಿದೆ. ಸ್ಥಳೀಯವಾಗಿ ಸಭೆ ನಡೆಸಿ ಮೂವರ ವರದಿ ನೀಡುವಂತೆ ಹೇಳಿದ್ದೇವೆ. ಧಾರವಾಡ ಕ್ಷೇತ್ರದ ಅಭ್ಯರ್ಥಿಯ ಆಕಾಂಕ್ಷಿ ಶೆಟ್ಟರ ಇರಬಹುದು ಎಂದರು. ಪಕ್ಕದಲ್ಲಿದ್ದ ಶೆಟ್ಟರ ಅವರು ನಾನು ಆಕಾಂಕ್ಷಿಯಲ್ಲ ಎಂದು ಮುಖ್ಯಮಂತ್ರಿಗಳ ಹೇಳಿಕೆಯನ್ನು ತಳ್ಳಿಹಾಕಿದರು. ಜಗದೀಶ ಶೆಟ್ಟರ ಅವರು ಹಿಂದೆ ಬಿಜೆಪಿಯಲ್ಲಿದ್ದಾಗ ಇವರ ನಿವಾಸಕ್ಕೆ ಬಂದಿದ್ದೆ. ಇದು ಎರಡನೇ ಬಾರಿ, ಬಂದಿರುವುದರಲ್ಲಿ ಏನೂ ವಿಶೇಷತೆಯಿಲ್ಲ. ಅವರ ಜನ್ಮದಿನಕ್ಕೆ ಶುಭಾಶಯ ಕೋರಿ ಉಪಹಾರಕ್ಕೆ ಆಗಮಿಸಿರುವುದಾಗಿ ಸ್ಪಷ್ಟಪಡಿಸಿದರು. ಅಲ್ಪಸಖ್ಯಾತರಿಗೆ ಹಿಂದೆಯೂ ಟಿಕೆಟ್ ಕೊಟ್ಟಿದ್ದೆವು, ಈ ಬಾರಿಯೂ ಪರಿಗಣಿಸುತ್ತೇವೆ. ಆದರೆ ಬಿಜೆಪಿಯವರು ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುತ್ತಾರಾ ಎಂದು ಪ್ರಶ್ನಿಸಿದರು. ಯತ್ನಾಳ್ ಗಡ್ಡ ಬಿಟ್ಟವರು, ಬುರುಕ ಹಾಕಿದವರು ಬರಬೇಡಿ ಅಂತಾರೆ.…

Read More

ದಾವಣಗೆರೆ: ಯತ್ನಾಳ್‌ ಹುಚ್ಚು ನಾಯಿ ಇದ್ದಂತೆ ಎಂದು ಸ್ವಪಕ್ಷದ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧವೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಸರ್ವಜ್ಞರ ವಚನ ಹೇಳುವ ಮೂಲಕ ಯತ್ನಾಳ್  ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಆನೆ ಬೀದಿಗೆ ಇಳಿದಾಗ ಹುಚ್ಚು ನಾಯಿ ಬೊಗಳುತ್ತೆ. ಅದಕ್ಕೆ ಆನೆಗೆ ಇರುವ ಗೌರವ ಕಡಿಮೆಯಾಗುತ್ತಾ. ನಾಯಿಗೆ ಇರುವ ನಿಯತ್ತು ಆ ಮನುಷ್ಯನಿಗೆ ಇಲ್ಲ. ಜೆಡಿಎಸ್‌ಗೆ ಹೋದವರನ್ನು ಕರೆತಂದಿದ್ದು ಯಡಿಯೂರಪ್ಪ. ಆದರೆ ಆ ಮನುಷ್ಯನಿಗೆ ನಿಯತ್ತು ಅನ್ನೋದೇ ಇಲ್ಲ ಎಂದು ಗರಂ ಆದರು. ವಿಜಯೇಂದ್ರ, ಯಡಿಯೂರಪ್ಪ ಅವರನ್ನು ಟೀಕೆ ಮಾಡಿದ್ರೆ, ಮೋದಿ ಮತ್ತು ಕೇಂದ್ರ ವರಿಷ್ಠರನ್ನು ಟೀಕೆ ಮಾಡಿದಂತೆ‌. ಯಡಿಯೂರಪ್ಪ ಆನೆ ಇದ್ದಂತೆ, ಅವರ ಬಗ್ಗೆ ಮಾತನಾಡುವವರು ಹುಚ್ಚು ನಾಯಿ. ಹುಚ್ಚು ನಾಯಿ ಬಗ್ಗೆ ಮಾತನಾಡುವುದು ಕೂಡ ವೇಸ್ಟ್. ಆ ಹುಚ್ಚು ನಾಯಿ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೇನೆ ಎಂದು ಟೀಕಾಪ್ರಹಾರ ನಡೆಸಿದರು.

Read More

ಈ ವಾರ ದೊಡ್ಮನೆಯ ಪಯಣ ಮುಗಿಸೋರು ಯಾರು ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅಚ್ಚರಿಯನ್ನುವಂತೆ ಪವಿ ಪೂವಪ್ಪ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಪವಿ (Pavi Poovappa) ಈ ವಾರ ಬಿಗ್ ಬಾಸ್ (Bigg Boss Kannada) ಪಯಣ ಮುಗಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶ ಮಾಡಿದ್ದ ಪವಿ, ಇಷ್ಟು ಬೇಗ ಆಚೆ ಬರುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ ಇಬ್ಬರೂ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಆನೆಯನ್ನು ಪಳಗಿಸಲು ಅವಿನಾಶ್ ಬಂದಿದ್ದಾರೆ ಎಂದೇ ಹೇಳಲಾಗಿತ್ತು. ಪವಿ ಪೂವಪ್ಪ ಮನೆಯ ಮಹಿಳಾ ಸದಸ್ಯರಿಗೆ ಮತ್ತಷ್ಟು ಉತ್ತೇಜ ನೀಡಲಿದ್ದಾರೆ ಎನ್ನುವ ನಂಬಿಕೆ ಇತ್ತು. ಇವೆರಡೂ ಸುಳ್ಳಾಗಿವೆ. ಅವಿನಾಶ್ ತಾವು ಬಿಗ್ ಬಾಸ್ ಮನೆಗೆ ಯಾಕೆ ಬಂದಿದ್ದು ಎನ್ನುವುದನ್ನೇ ಮರೆತಿದ್ದಾರೆ. ಅತೀ ವೀಕ್ ಕಂಟೆಸ್ಟೆಂಟ್ ಆಗಿ ಬದಲಾಗಿದ್ದಾರೆ. ಪವಿ ಕಡಿಮೆ ಸಮಯದಲ್ಲೇ…

Read More

ನವದೆಹಲಿ: ಸಂಸತ್ತಿನ ಭದ್ರತಾ ಲೋಪಕ್ಕೆ (Parliament Security Breach) ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನೀತಿಗಳೇ ಕಾರಣ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ. ಪ್ರಧಾನಿ ಮೋದಿಯವರ ನೀತಿಗಳಿಂದ ದೇಶದ ನಾಗರಿಕರಿಗೆ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗವೇ ಭದ್ರತಾ ಲೋಪ ಸಂಭವಿಸಲು ಕಾರಣ ಎಂದು ದೂರಿದ್ದಾರೆ. ಭಾರತೀಯರು ಪ್ರಸ್ತುತ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ. ಭದ್ರತಾ ಉಲ್ಲಂಘನೆಯು ನಿಜವಾಗಿಯೂ ಆಗಿದೆ. ಆದರೆ ಇದು ಏಕೆ ಆಯಿತು? ಅದಕ್ಕೆ ಮುಖ್ಯ ಕಾರಣ ನಿರುದ್ಯೋಗ. ಮೋದಿ ಅವರ ನೀತಿಗಳಿಂದಾಗಿ ಭಾರತದ ಜನರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.  ಪ್ರಧಾನಿಯವರ ನೀತಿಗಳಿಂದಾಗಿ ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆ ತಲೆದೋರಿದೆ. https://ainlivenews.com/what-did-dk-shivakumar-say-about-pratap-singh-being-trapped/ ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಇವೇ ಮುಖ್ಯ ಕಾರಣ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಭದ್ರತಾ ಲೋಪ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಅವರು ಮಾಧ್ಯಮಗಳೊಂದಿಗೆ ಮಾತ್ರ ಮಾತನಾಡುತ್ತಾರೆ.…

Read More

ನವದೆಹಲಿ: ಸಂಸದ ಸಂಜಯ್ ಸಿಂಗ್ (Sanjay Singh) ಬದಲಿಗೆ ರಾಘವ್ ಛಡ್ಡಾ (Raghav Chadha) ಅವರನ್ನು ರಾಜ್ಯಸಭೆಯ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದೆ ಎಂದು ಆಮ್ ಅದ್ಮಿ ಪಕ್ಷ ತಿಳಿಸಿದೆ. ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿರುವ ಎಎಪಿ ಪಕ್ಷದ ನಾಯಕತ್ವವು ಸಂಜಯ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ರಾಘವ್ ಚಡ್ಡಾ ಅವರು ಇನ್ನು ಮುಂದೆ ಮೇಲ್ಮನೆಯಲ್ಲಿ ಪಕ್ಷದ ನಾಯಕರಾಗಿರುತ್ತಾರೆ ಎಂದು ಉಲ್ಲೇಖಿಸಿದೆ. ಸಂಜಯ್ ಸಿಂಗ್ ಹೊಸ ಮದ್ಯ ನೀತಿ ಪ್ರಕರಣದಲ್ಲಿ ಇಡಿ ಬಂಧನಕ್ಕೊಳಕ್ಕಾಗಿ ಸದ್ಯ ನ್ಯಾಯಂಗ ಬಂಧನದಲ್ಲಿದ್ದಾರೆ. ಅವರ ಜಾಮೀನು ಅರ್ಜಿಗಳು ವಜಾಗೊಂಡಿರುವ ಹಿನ್ನೆಲೆ ರಾಜ್ಯಸಭೆಯಲ್ಲಿ ಕಲಾಪಗಳಿಗೆ ಪೂರಕವಾಗುವಂತೆ ಹೊಸ ನಾಯಕತ್ವವನ್ನು ಆಯ್ಕೆ ಮಾಡಲಾಗಿದೆ. ಚಡ್ಡಾ ಅವರನ್ನು ಅದರ ಫ್ಲೋರ್ ಲೀಡರ್ ಆಗಿ ನೇಮಿಸುವ ಕುರಿತು ಎಎಪಿಯಿಂದ (AAP) ಪತ್ರವನ್ನು ಸ್ವೀಕರಿಸಲಾಗಿದೆ ಎಂದು ರಾಜ್ಯಸಭಾ ಸಚಿವಾಲಯದ ಮೂಲಗಳು ಖಚಿತಪಡಿಸಿವೆ. https://ainlivenews.com/what-did-dk-shivakumar-say-about-pratap-singh-being-trapped/  ಪತ್ರವು ಅನುಷ್ಠಾನಕ್ಕಾಗಿ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಬಳಿ ಇದೆ ಎಂದು ಹೇಳಲಾಗಿದೆ. ರಾಘವ್ ಚಡ್ಡಾ ಅವರು ರಾಜ್ಯಸಭೆಯ ಅತ್ಯಂತ ಕಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.…

Read More