ಬೆಳಗಾವಿ:- ಜಿಲ್ಲೆಯ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ತಡರಾತ್ರಿ ಸಿಲಿಂಡರ್ ಸ್ಫೋಟಗೊಂಡು 9 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ 7 ಜನರು ಗಂಭೀರ ಗಾಯಗೊಂಡಿರುವ ಘಟನೆ ಜರುಗಿದೆ. ನಿರ್ವಾಣಿ, ಅಶೋಕ ನಿರ್ವಾಣ, ಸೋಮನಗೌಡ, ದೀಪಾ, ನವೀನ , ವಿದ್ಯಾ ,ಬಸನಗೌಡ ನಿರ್ವಾಣಿ ಗಾಯಗೊಂಡವರು. ಘಟನೆಯಲ್ಲಿ ಇಬ್ಬರಿಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಇನ್ನುಳಿದವರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ ಅಡುಗೆ ತಯಾರಿಸಿ ಊಟ ಮಾಡಿ ಲೈಟ್ ಆಫ್ ಮಾಡಿ ಮಲಗಿರುವ ಕುಟುಂಬ ಮಧ್ಯರಾತ್ರಿ ಗ್ಯಾಸ್ ಸೋರಿಕೆ ಆಗಿರೋ ವಾಸನೆ ಬಂದಿದೆ. ಹೀಗಾಗಿ ಅಡುಗೆ ಮನೆಯಲ್ಲಿ ಗ್ಯಾಸ್ ಇಟ್ಟಕ್ಕೆ ಜಾಗಕ್ಕೆ ತೆರಳಲು ಮೊಬೈಲ್ ಬ್ಯಾಟರಿ ಆನ್ ಮಾಡಿದ್ದಾರೆ ಗ್ಯಾಸ್ ಬಳಿ ಹೋದಾಗ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ.
Author: AIN Author
ನವದೆಹಲಿ:- ಪತಿಯೊಬ್ಬ ಸಿಟ್ಟಿಗೆದ್ದು ಒಂದು ವರ್ಷವಲ್ಲ, ಎರಡು ವರ್ಷವಲ್ಲ 20 ವರ್ಷಗಳಿಂದ ಪತ್ನಿಯೊಂದಿಗೆ ಮಾತನಾಡಿರಲಿಲ್ಲ. 20 ವರ್ಷಗಳ ಕಾಲ ಮಾತನಾಡದೇ ಸುಮ್ಮನಿದ್ದನೆ ಇರುವಷ್ಟು ಗಂಡನಿಗೆ ಯಾಕೆ ಇಷ್ಟೊಂದು ಕೋಪ ಬಂತು ಎಂದು ಆಶ್ಚರ್ಯ ಪಡುತ್ತೀರಾ?.. ಜಪಾನ್‌ನಲ್ಲಿ ಈ ವಿಚಿತ್ರ ಘಟನೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ… ಒಟೌ ಕಟಯಾಮ ಎನ್ನುವ ವ್ಯಕ್ತಿ ತಮ್ಮ ಪತ್ನಿ ಯುಮಿ ಮತ್ತು ಮೂವರು ಮಕ್ಕಳೊಂದಿಗೆ ದಕ್ಷಿಣ ಜಪಾನ್‌ನಲ್ಲಿ ವಾಸವಾಗಿದ್ದಾರೆ. ಒಟೌ ಅವರು 20 ವರ್ಷಗಳ ಹಿಂದೆ ಪತ್ನಿ ಯುಮಿ ಮೇಲೆ ಕೋಪಗೊಂಡಿದ್ದರು. ಅಂದಿನಿಂದ ಅಂದರೆ ಕಳೆದ 20 ವರ್ಷಗಳಿಂದ ಆತ ತನ್ನ ಪತ್ನಿಯೊಂದಿಗೆ ಮಾತನಾಡಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಓಟೌ ತನ್ನ ಮಕ್ಕಳೊಂದಿಗೆ ಮಾತನಾಡುತ್ತಾನೆ.. ತನ್ನ ಹೆಂಡತಿಯೊಂದಿಗೆ ಒಂದೇ ಒಂದು ಮಾತಿಲ್ಲ. ಇಂಗ್ಲಿಷ್ ವೆಬ್‌ಸೈಟ್ ಮಿರರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ತಮ್ಮ ಹೆಂಡತಿಯೊಂದಿಗೆ ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದಾಗ ಓಟೌ ಅವರು ಮೌನಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಅವನು ‘ಸಂಕಷ್ಟ’ ಎಂದು ಉತ್ತರಿಸಿದನು ಏಕೆಂದರೆ ಅವನ ಹೆಂಡತಿ ತಮ್ಮ ಮಕ್ಕಳ…
ವಿಷ್ಣುವರ್ಧನ್ ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಪುಣ್ಯಭೂಮಿ ಆಗಬೇಕು ಎಂದು ವಿಷ್ಣು ಅಭಿಮಾನಿಗಳು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ ವಿಷ್ಣುವರ್ಧನ್ ಅಭಿಮಾನಿಗಳೆಲ್ಲರೂ ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ವಿಷ್ಣು ಅಭಿಮಾನಿಗಳ ಹೋರಾಟಕ್ಕೆ ನಟ ಡಾಲಿ ಧನಂಜಯ ಬೆಂಬಲ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟರು, ಹಿರಿಯಣ್ಣರಲ್ಲಿ ಒಬ್ಬರಾದ ಡಾ.ವಿಷ್ಣು ಸರ್ ಪುಣ್ಯಭೂಮಿಗೆ ರಾಜಧಾನಿಯಲ್ಲಿ ಅಂಗೈಯಗಲ ಜಾಗವಿಲ್ಲವೆಂಬುದು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕೂಡಲೇ ಡಾ.ವಿಷ್ಣು ಸರ್ ಪುಣ್ಯಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುವೆ. ಅವರ ಅಭಿಮಾನಿಗಳ ಹೋರಾಟದಲ್ಲಿ ನಾನೂ ಇದ್ದೇನೆ. ಈ ವಿಷಯ ಬೇಗ ಸುಖಾಂತ್ಯ ಕಾಣಲಿ. ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ
ಇದೇ ಡಿಸೆಂಬರ್ 29 ರಂದು ತೆರೆಗೆ ಬರಲು ಸಜ್ಜಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಾಲಾಶ್ರೀ ಪುತ್ರಿ ಆರಾಧನಾ ಜೊತೆಯಾಗಿ ನಟಿಸಿರುವ ʻಕಾಟೇರʼ ಚಿತ್ರದ ಟ್ರೈಲರ್ ಶನಿವಾರ ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿದೆ. ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ರೈಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕರಾದ ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ ಸಾಥ್ ನೀಡಿದರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಚಿತ್ರ ತಂಡಕ್ಕೆ ಆಲ್ ದ ಬೆಸ್ಟ್ ಹೇಳಿದರು. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುದೀರ್ ನಿರ್ದೇಶನದ ಕಾಟೇರ ಚಿತ್ರ ಇದೇ ತಿಂಗಳು 29ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ನಟ ದರ್ಶನರ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರ ಭಾರೀ ಹೈಪ್ ಕ್ರಿಯೆಟ್ ಮಾಡಿದೆ. ಬಹಳ ದಿನಗಳ ಬಳಿಕ ಡಿ ಬಾಸ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಮತ್ತು ಸಾಂಗ್ ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ…
ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಈ ಬಾರಿ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ನೋವುಗಳು ಇದ್ದರೂ ಅದನ್ನು ಬದಿಗಿಟ್ಟು ಫ್ಯಾನ್ಸ್ ಭೇಟಿ ಮಾಡುತ್ತಿದ್ದಾರೆ. ಶ್ರೀ ಜನ್ಮದಿನ ಅಂಗವಾಗಿ ಸಖತ್ ಉಡುಗೊರೆಗಳು ಸಿಕ್ಕಿವೆ. ಬಂತು ಪರಾಕ್ ಟೈಟಲ್ ಪೋಸ್ಟರ್ ಶ್ರೀ ಮುರಳಿ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಯುವ ಪ್ರತಿಭೆಗಳ ಜೊತೆ ಬಘೀರ ಕೈ ಜೋಡಿಸಿದ್ದಾರೆ. ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನವ ನಿರ್ದೇಶಕ ಹಾಲೇಶ್ ಕೋಗುಂಡಿ ಸಾರಥ್ಯದ ಚಿತ್ರಕ್ಕೆ ಪರಾಕ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್ ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್ ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪರಾಕ್ ಸಿನಿಮಾವನ್ನು ಬ್ರ್ಯಾಂಡ್…
ಸ್ಮಾರ್ಟ್ ಫೋನ್ ದೈನಂದಿನ ದಿನಚರಿಯ ಅನೇಕ ಕಾರ್ಯಗಳನ್ನು ಸುಲಭಗೊಳಿಸಿದೆ. ಆದರೆ ಸ್ಮಾರ್ಟ್ ಫೋನ್ ಗಳಿಂದ ಸೈಬರ್ ಅಪರಾಧದಂತಹ ಪ್ರಕರಣಗಳ ಅಪಾಯವೂ ಇದೆ. ಸ್ಮಾರ್ಟ್ ಫೋನ್ ಹ್ಯಾಕ್ ಗಳ ಅನೇಕ ಪ್ರಕರಣಗಳು ನಡೆದಿವೆ, ಆದ್ದರಿಂದ ನಾವು ಜಾಗರೂಕರಾಗಿರುವುದು ಅವಶ್ಯಕವಾಗಿದೆ. ಸ್ಮಾರ್ಟ್ ಫೋನ್ ಹ್ಯಾಕಿಂಗ್ ತಪ್ಪಿಸಲು ನಾವು ಅತ್ಯಂತ ಜಾಗರೂಕರಾಗಿರಬೇಕು. ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಅರ್ಥಮಾಡಿಕೊಳ್ಳುವುದು ಸಾಮಾನ್ಯವಾಗಿ ತುಂಬಾ ಕಷ್ಟ. ಅಂದಹಾಗೆ, ಇದಕ್ಕಾಗಿ ನೀವು ಸೈಬರ್ ತಜ್ಞರ ಸಲಹೆಯನ್ನು ಸಹ ತೆಗೆದುಕೊಳ್ಳಬಹುದು, ಆದರೆ ಇಂದು ನಾವು ನಿಮಗೆ ಬಹಳ ಸುಲಭವಾದ ಮಾರ್ಗವನ್ನು ಹೇಳಲಿದ್ದೇವೆ, ಇದರಿಂದ ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೆಲವೇ ನಿಮಿಷಗಳಲ್ಲಿ ಕಂಡುಹಿಡಿಯಲು ನಿಮಗೆ ಸಾಧ್ಯವಾಗುತ್ತದೆ. ಫೋನ್ ಹ್ಯಾಕ್ ಆಗಿದ್ದರೆ ಅದನ್ನು ಹೇಗೆ ನಿಲ್ಲಿಸುವುದು ಎಂಬುದರ ಕುರಿತ ಮಾಹಿತಿಯೂ ಇದೆ. ಸ್ಮಾರ್ಟ್ ಫೋನ್ ಹ್ಯಾಕಿಂಗ್ ಪತ್ತೆಹಚ್ಚುವುದು ಹೇಗೆ? ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ನೀವು ನಿಮ್ಮ ಸ್ಮಾರ್ಟ್ ಫೋನ್ ನಿಂದ…
ಬೆಂಗಳೂರು:- ಸಂಕ್ರಾಂತಿ ವೇಳೆಗೆ ಪೀಣ್ಯ ಫ್ಲೈಓವರ್ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್ ನಡುವೆ ಹೊಸದಾಗಿ 240 ಕೇಬಲ್ ಅಳವಡಿಕೆ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದ್ದು, ಸಂಕ್ರಾಂತಿ ವೇಳೆಗೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಫ್ಲೈ ಓವರ್ ಮುಕ್ತವಾಗುವ ಸಾಧ್ಯತೆಯಿದೆ. ಮೇಲ್ಸೇತುವೆಯಲ್ಲಿ 120 ಪಿಲ್ಲರ್ ಇದ್ದು ಎರಡು ಪಿಲ್ಲರ್‌ಗಳ ನಡುವೆ ತಲಾ 10ರಂತೆ ಒಟ್ಟು 1200 ಕೇಬಲ್ ಇವೆ. ಮುಂಜಾಗ್ರತೆಯಾಗಿ ಎರಡು ಪಿಲ್ಲರ್ ನಡುವೆ ಹೊಸದಾಗಿ ಇನ್ನೂ ಎರಡು ಕೇಬಲ್ ಅಳವಡಿಸಲು ಅವಕಾಶವಿದೆ. ಆದ್ದರಿಂದ ಮೊದಲಿಗೆ 240 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಿ ಬಳಿಕ ಎಲ್ಲ ಬಗೆಯ ವಾಹನಗಳಿಗೆ ಮೇಲ್ಸೇತುವೆಯನ್ನು ಮುಕ್ತಗೊಳಿಸಲಾಗುವುದು. ಈ ಕಾರ್ಯ ಜ.14ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಮೂರು ತಂಡಗಳು ಹೊಸ ಕೇಬಲ್ ಅಳವಡಿಕೆ ಕಾರ್ಯದಲ್ಲಿ ತೊಡಗಿವೆ. ಸಂಕ್ರಾಂತಿ ಬಳಿಕ ಮೇಲ್ಸೇತುವೆ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. 240 ಹೊಸ ಕೇಬಲ್ ಅಳವಡಿಕೆ ಮುಗಿದ ಬಳಿಕ 1200 ಕೇಬಲ್ ಅನ್ನೂ ಹಂತಹಂತವಾಗಿ ಬದಲಾಯಿಸಿ ಹೊಸ ಕೇಬಲ್ ಅಳವಡಿಸಲಾಗುವುದು. ಈ…
ಬೆಂಗಳೂರು : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ 14 ವರ್ಷ ಉರುಳಿದೆ. ಆದರೆ, ಈವರೆಗೆ ಅವರ ಅಂತಿಮ ಸಂಸ್ಕಾರ ನಡೆದ ಪುಣ್ಯಭೂಮಿ ಜಾಗದ ವಿವಾದ ಮಾತ್ರ ಬಗೆಹರೆದಿಲ್ಲ. ಅದಕ್ಕೊಂದು ತಾತ್ವಿಕ ಅಂತ್ಯ ಕೊಡಬೇಕು ಅಂತಲೇ ಅಭಿಮಾನಿಗಳು ‘ವಿಷ್ಣು ಪುಣ್ಯಭೂಮಿ ಹೋರಾಟ’ಕ್ಕೆ ಮುಂದಾಗಿದ್ದಾರೆ. ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ ಇದೇ ಡಿಸೆಂಬರ್ 30ಕ್ಕೆ 14 ವರ್ಷಗಳು ತುಂಬುತ್ತೆ. ದುರಂತ ಅಂದ್ರೆ ಇಷ್ಟು ವರ್ಷಗಳ ಬಳಿಕವೂ ಅವರ ಪುಣ್ಯಭೂಮಿ ಉಳಿಸೋದಕ್ಕಾಗಿ ಅಭಿಮಾನಿಗಳು ಹೋರಾಟ ಮಾಡುವ ಸನ್ನಿವೇಶ ನಿರ್ಮಾಣ ಆಗಿದೆ. ಇಂದು ಫ್ರೀಡಂ ಪಾರ್ಕ್ನಲ್ಲಿ ವಿಷ್ಣು ಅಭಿಮಾನಿಗಳು ಪುಣ್ಯಭೂಮಿ ಹೋರಾಟ ನಡೆಸುವುದಕ್ಕೆ ಸಜ್ಜಾಗಿದ್ದಾರೆ. 2010 ಡಿಸೆಂಬರ್ 30ರಂದು ಡಾ.ವಿಷ್ಣು ಅಗಲಿಕೆಯ ಸುದ್ದಿ ಬಂದಾಗ ಇಡೀ ನಾಡೇ ಆಘಾತಕ್ಕೆ ಒಳಗಾಗಿತ್ತು. ಅಂದು ತರಾತುರಿಯಲ್ಲಿ ಅಂದಿನ ಸರ್ಕಾರ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತಿಮ ಸಂಸ್ಕಾರವನ್ನ ಮಾಡಿಬಿಟ್ಟಿತು. ಆದ್ರೆ, ನಂತರ ದಿನಗಳಲ್ಲಿ ಈ ಜಾಗದ ಸುತ್ತಲಿನ ವಿವಾದಗಳು ಹೊರಬಂದಿದ್ದು.
ಬೆಂಗಳೂರು:- ಪತ್ನಿಯನ್ನು ವಿವಸ್ತ್ರಗೊಳಿಸಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಚುನ್ನು ಹನ್ಸದ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚುನ್ನು ಹನ್ಸದ್ ತನ್ನ ಪತ್ನಿಯ ಶೀಲವನ್ನು ಶಂಕಿಸಿ ಹತ್ಯೆ ಮಾಡಿದ್ದ. ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಎಸ್. ಶ್ರೀಧರ್ ಅವರು ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ರಾಜ ಹಾಗೂ ಮಹಾದೇವ ಗಡದ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಚುನ್ನು ಹನ್ಸದ್ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ, ಸಾಕ್ಷಿದಾರರ ವಿಚಾರಣೆ ನಡೆಸಿತ್ತು. ಚುನ್ನು ಅಪರಾಧಿ ಎಂಬುದು ಸಾಬೀತಾಗಿದ್ದರಿಂದ, ಜೀವಾವಧಿ ಶಿಕ್ಷೆ ಹಾಗೂ ರೂ25 ಸಾವಿರ ದಂಡ ವಿಧಿಸಿದೆ. ಇನ್ನೂ ಚುನ್ನು ಹನ್ಸದ್, ತಮ್ಮ ಊರಿನಲ್ಲೇ 25 ವರ್ಷದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಮಹಿಳೆಗೂ ಅದು ಎರಡನೇ ಮದುವೆಯಾಗಿತ್ತು. ಕೆಲಸ ಹುಡುಕಿಕೊಂಡು ಇಬ್ಬರೂ ಬೆಂಗಳೂರಿಗೆ ಬಂದು…
ಬೆಂಗಳೂರು: ನಿತ್ಯ ಬೆಳಿಗ್ಗೆ 5 ಗಂಟೆಗೆ ‘ನಮ್ಮ ಮೆಟ್ರೊ’ ಸಂಚಾರ ಆರಂಭವಾಗುತ್ತಿದ್ದು, ಭಾನುವಾರ ಮಾತ್ರ 7 ಗಂಟೆಗೆ ಶುರುವಾಗುತ್ತದೆ. ಇದರಿಂದ ಭಾನುವಾರ ರಜೆ ಇಲ್ಲದ ಖಾಸಗಿ ಕಂಪನಿಗಳಲ್ಲಿ ಬೆಳಿಗಿನ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ತೊಂದರೆಯಾಗಿದೆ. 2ನೇ ಶನಿವಾರ, 4ನೇ ಶನಿವಾರ ಮುಂತಾದ ಸಾಮಾನ್ಯ ರಜೆಗಳ ದಿನಗಳಲ್ಲಿ ಬೆಳಿಗ್ಗೆ 6ಕ್ಕೆ ಮೆಟ್ರೊ ಸೇವೆ ಆರಂಭವಾಗುತ್ತದೆ. ಈ ಅವಧಿಯನ್ನೇ ಭಾನುವಾರಕ್ಕೂ ಅನ್ವಯಿಸಬೇಕು ಎಂಬುದು ಉದ್ಯೋಗಿಗಳ ಬೇಡಿಕೆ ಯಾಗಿದೆ. ನಾವು ಬೇರೆ ಬೇರೆ ಪಾಳಿಯಲ್ಲಿ ಕೆಲಸ ಮಾಡುತ್ತೇವೆ. ತಿಂಗಳಿಗೆ ಒಂದು ವಾರ ಬೆಳಿಗ್ಗೆ 7ಕ್ಕೆ ಕಚೇರಿಯಲ್ಲಿ ಇರಬೇಕು. ಆ ವಾರ 6 ದಿನ ಸಮಸ್ಯೆ ಇರುವುದಿಲ್ಲ. ಭಾನುವಾರ ಬೆಳಿಗ್ಗೆ ಕಚೇರಿಗೆ ತೆರಳುವುದೇ ಸಮಸ್ಯೆ. ಆ ದಿನ ಆಟೊ ಅಥವಾ ಕ್ಯಾಬ್‌ಗಳಲ್ಲಿ ತೆರಳಬೇಕಾಗುತ್ತದೆ. ಇದು ದುಬಾರಿ ಖರ್ಚು’ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲು ತೋಡಿಕೊಂಡರು.