ಮೈಸೂರು:- ಹೈಕಮಾಂಡ್‌ಗೆ ಎಲ್ಲ ಹೇಳ್ತೇನೆ, ಆಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸೋಮಣ್ಣ ಹೇಳಿದ್ದಾರೆ. ಕಾರ್ತಿಕ ಮಾಸ ಮುಗಿದು ಇದೀಗ ಧನುರ್ಮಾಸ ಆರಂಭವಾಗುತ್ತಿದೆ. ಸದ್ಯದಲ್ಲೇ ಮೂರ್ನಾಲ್ಕು ಮಂದಿ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ. ಹೈಕಮಾಂಡ್ ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು. ಹೈಕಮಾಂಡ್ ಭೇಟಿ ವೇಳೆ ವಿಧಾನಸಭೆ ಚುನಾವಣೆಯಲ್ಲಿ ಏನೆಲ್ಲಾ ಬೆಳವಣಿಗೆ ಆಯಿತು ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದು ವಿವರಿಸಿದರು. ಕೆಲವು ಬಿಜೆಪಿ ನಾಯಕರ ಸೋಲಿಗೆ ಹಿರಿಯ ನಾಯಕರೇ ನೇರ ಕಾರಣ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ವಿ. ಸೋಮಣ್ಣ ಅವರು, ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಏನು ಕಾರಣ ಎಂದು ಎಲ್ಲರಿಗೂ ಗೊತ್ತಿದೆ. ಪದೇಪದೆ ಅದೇ ವಿಚಾರ ಮಾತನಾಡುವುದು ಬೇಡ ಎಂದು ಹೇಳಿದರು. ʻʻನಾನು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಲ್ಲ. ಆದರೆ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುತ್ತೇನೆʼʼ ಎಂದು ವಿ. ಸೋಮಣ್ಣ ಹೇಳಿದರು.
Author: AIN Author
ಬೆಂಗಳೂರು:- ದೇಶದಲ್ಲಿಯೇ ಅತಿಹೆಚ್ಚು ದ್ವಿಚಕ್ರ ವಾಹನಗಳನ್ನು ಹೊಂದಿರುವ ನಗರವಾಗಿರುವ ಬೆಂಗಳೂರಿನಲ್ಲಿ ಬೈಕ್ ಸವಾರರು ಮಾಡುವ ಟ್ರಾಫಿಕ್ ಉಲ್ಲಂಘನೆಗಳು ಲೆಕ್ಕಕ್ಕಿಲ್ಲ. ಕೆಲಸಕ್ಕೆ ಹೋಗೋ ಅರ್ಜೆಂಟ್‌ನಲ್ಲಿ ಟ್ರಾಫಿಕ್ ನಿಯಮವನ್ನು ಉಲ್ಲಂಘನೆ ಮಾಡೋ ಅಭ್ಯಾಸ ನಿಮ್ಮದಾಗಿದ್ದರೆ, ಇನ್ನು ಮುಂದೆ ಅಂಥ ಕೆಲಸವೇ ನಿಮಗೆ ಇಲ್ಲದೇ ಹೋಗಬಹುದು. ಟ್ರಾಫಿಕ್ ನಿಯಮ ಉಲ್ಲಂಘನೆಗಗೂ ನೀವು ಕೆಲಸ ಕಳೆದುಕೊಳ್ಳೋದಕ್ಕೂ ಏನು ಲಿಂಕ್ ಅಂತಾ ಯೋಚನೆ ಮಾಡ್ತಿದ್ದೀರಾ? ಹಾಗಿದ್ದಲ್ಲಿ ನೀವು ಯೋಚನೆ ಮಾಡ್ತಿರೋದು ನಿಜ. ಇನ್ನು ಮುಂದೆ ಬೆಂಗಳೂರಿನಲ್ಲಿ ನೀವು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದಲ್ಲಿ, ನೀವು ಕೆಲಸ ಮಾಡುತ್ತಿರುವ ಕಂಪನಿಗೂ ಅದರ ವಿವರವನ್ನು ಬೆಂಗಳೂರಿನ ಟ್ರಾಫಿಕ್ ಪೊಲೀಸರು ಕಳಿಸಿಕೊಡಲಿದ್ದಾರೆ. ರಸ್ತೆಗಳಲ್ಲಿ ವೇಗದ ಮಿತಿ ಮೀರಿ ಯರ್ರಾಬಿರ್ರಿಯಾಗಿ ಬೈಕ್ ಅಥವಾ ಕಾರು ಓಡಿಸಿದಲ್ಲಿ, ಕೆಲಸಕ್ಕೆ ಹೋಗೋ ಅರ್ಜೆಂಟ್‌ಅಲ್ಲಿ ಸಿಗ್ನಲ್ ಬ್ರೇಕ್ ಮಾಡಿದಲ್ಲಿ, ಬೇಕಾಬಿಟ್ಟಿಯಾಗಿ ಕಾರ್ ಓಡಿಸುವ ಅಭ್ಯಾಸವಿದ್ದಲ್ಲಿ ಇನ್ನು ಮುಂದೆ ಯೋಚಿಸಲೇಬೇಕು. ಈ ರೂಲ್‌ಗಳನ್ನು ಬ್ರೇಕ್ ಮಾಡಿದಲ್ಲಿ ಟ್ರಾಫಿಕ್ ಪೊಲೀಸರು ದಂಡ ಹಾಕೋದು ಮಾತ್ರವಲ್ಲ, ನೀವು ಕೆಲಸ ಮಾಡುವ ಕಂಪನಿಗೆ ಇದರ…
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಹೊಟ್ಟೆಯಲ್ಲಿ ಆಮ್ಲ-ಕ್ಷಾರೀಯ ವಸ್ತುಗಳ ಅಸಮತೋಲನ ಉಂಟಾಗುತ್ತದೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಕಾಲಾನಂತರದಲ್ಲಿ ಹಲ್ಲಿನ ದಂತಕವಚಕ್ಕೆ ಹಾನಿಯಾಗಬಹುದು. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಅತಿಯಾದ ನಿರ್ಜಲೀಕರಣ ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ರಕ್ತಹೀನತೆ ಇರುವವರು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಾರದು. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಅಜೀರ್ಣ ಮತ್ತು ಎದೆಯುರಿಯಂತಹ ಸಮಸ್ಯೆಗಳು ಉಂಟಾಗಬಹುದು. ಚಹಾದಲ್ಲಿರುವ ಟ್ಯಾನಿನ್ ಜೀರ್ಣಾಂಗ ವ್ಯವಸ್ಥೆಯು ಆಹಾರದಿಂದ ಕಬ್ಬಿಣವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಚಹಾ ಕುಡಿಯಲು ಉತ್ತಮ ಸಮಯ ಮಧ್ಯಾಹ್ನ 3 ಗಂಟೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೆಂಗಳೂರು:- ರಾಜ್ಯದಲ್ಲಿ ಮೂರು ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಂಗಳೂರು, ಬೆಂ.ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿಯಲ್ಲಿ ಡಿ.17ರಿಂದ ಡಿ.19ರವರೆಗೆ ಮಳೆ ಸುರಿಯಲಿದೆ. ಬಾಗಲಕೋಟೆ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಡಿ.18ರಂದು ಸಾಧಾರಣ ವರ್ಷಧಾರೆಯಾಗಲಿದೆ. ವಾತಾವರಣದಲ್ಲಿ ದಿಢೀರ್ ಬದಲಾವಣೆಯಿಂದ ಭಾನುವಾರ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆ ಬಿದ್ದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯು ಮುಂದಿನ 2-3 ದಿನಗಳಲ್ಲಿ ಚಂಡಮಾರುತವಾಗಿ ಉಂಟಾಗಲಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
IPL 2024 IPL ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ನೇಮಿಸಿದ್ದು, ವ್ಯಾಪಕ ಆಕ್ರೋಶ ಹಾಗೂ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಇತ್ತ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಹಾರ್ದಿಕ್ ಪಾಂಡ್ಯರನ್ನು ನೂತನ ಕ್ಯಾಪ್ಟನ್ ಎಂದು ಘೋಷಿಸಿದ ಪರಿಣಾಮ ಸಾಮಾಜಿಕ ಜಾಲತಾಣದ ಮೇಲೆ ಬೀರಿದ್ದು, ಘೋಷಣೆಯಾದ ಒಂದು ಘಂಟೆಯೊಳಗೆ 400,000 ಅನುಯಾಯಿಗಳು ಅನ್ಫಾಲೋ ಮಾಡಿದ್ದಾರೆ. ಇತ್ತ ರೋಹಿತ್ ಶರ್ಮಾರನ್ನು ಫ್ರಾಂಚೈಸಿ ನಾಯಕತ್ವದಿಂದ ಕೆಳಗಿಳಿಸಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಂಡದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಿ. 360 ಖ್ಯಾತಿಯ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಗೆ ಮರಳಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಬೇಕೇ ಹೊರತು ಈ ರೀತಿ ಬಹಿರಂಗವಾಗಿ ಟೀಕಿಸುವುದು ಸರಿಯಲ್ಲ. ನ್ಯಾಯೋಚಿತವಾಗಿ ಹೇಳಬೇಕೆಂದರೆ ಹಾರ್ದಿಕ್ ಪಾಂಡ್ಯ ಅವರು ಹಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಮೂರು ಭಾರಿ ತಂಡ ಪ್ರಶಸ್ತಿ ಜಯಿಸಿದಾಗ ಅವರು…
ಚಿಕ್ಕಮಗಳೂರು:- ಲೋಕಸಭೆಯಲ್ಲಿ ಭದ್ರತಾ ಲೋಪ ಆಗಿರುವುದನ್ನು ಸಮರ್ಥನೆ ಮಾಡಿಕೊಳ್ಳಲ್ಲ ಎಂದು ಸಿಟಿ ರವಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪಾರ್ಲಿಮೆಂಟ್ ನೋಡ್ತಿವಿ ಪಾಸ್ ಕೊಡಿ ಅಂದ್ರೆ ಕೊಡ್ತಾರೆ. ಅವರ ಜಾಗದಲ್ಲಿ ನಾನೇ ಇದ್ದರೂ ಕೊಡಿಸುತ್ತಿದ್ದೇ, ಶಿಫಾರಸ್ಸು ಮಾಡುವಾಗ ಒಳ್ಳೇಯವನೋ ಕೆಟ್ಟವನೋ ಅಂತ ಗುರುತಿಸೋ ಐಸ್ಕ್ಯಾನರ್ ಯಾರ ಬಳಿಯೂ ಇರಲ್ಲ. ಭದ್ರತಾ ಲೋಪ ಆಗಿರುವುದನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಘೋಷಿತ ಅಪರಾಧಿಗೆ ಶಿಫಾರಸ್ಸು ಮಾಡಿದರೇ ಅಪರಾಧವಾಗುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಸಂಸತ್ ಘಟನೆ ಸಂಬಂಧ ನಗರದಲ್ಲಿ ಪ್ರತಿಕ್ರಿಯಿಸಿದರು. ಊರಿನವರು ಪಾರ್ಲಿಮೆಂಟ್ ನೋಡಬೇಕು, ವಿಧಾನಸಭೆ ನೋಡಬೇಕು ಅಂದ್ರೇ ನಾನು, ನೀವು, ಸಿದ್ದರಾಮಯ್ಯ ನವರು ಪಾಸ್ ಕೊಡಿಸ್ತಾರೆ. ಒಳ್ಳೇಯವನೋ, ಕೆಟ್ಟವನೋ ಎಂದು ಮುಂಚಿತವಾಗಿ ತಿಳಿದಿರುವುದಿಲ್ಲ, ಪಾರ್ಲಿಮೆಂಟ್ ಘಟನೆಯಲ್ಲಿ ಭದ್ರತಾ ಲೋಪವಾಗಿರುವುದು ನಿಜ ಎಂದರು. ಘಟನೆ ಸಂಬಂಧ ಕಾಂಗ್ರೆಸ್ ನ ಸಕ್ರೀಯತೆ ನೋಡಿದರೇ ಟೂಲ್ ಕಿಟ್ ರಾಜಕೀಯದ ಅನುಮಾನ ಇದೆ. ಕಾಂಗ್ರೆಸ್ ಸಂಸದನ ಮನೆಯಲ್ಲಿನ ನೋಟಿನ ಘಟನೆ ಮರೆತು ಹೋಯ್ತು, ಇದರ ಬಗ್ಗೆ ಒಂದೇ ಒಂದು ಶಬ್ದ…
ಹುಬ್ಬಳ್ಳಿ: ಬಿಜೆಪಿಯವರಿಗೆ ಸ್ವಲ್ಪ ಬುದ್ದಿ ಕಡಿಮೆ ಅನಿಸುತ್ತದೆ. ಲೇಹರ್ ಸಿಂಗ್ ಅವರೇನು ಆರೋಪ ಮಾಡೋದು. ಯತೀಂದ್ರ ಅವರನ್ನು ಲೋಕಸಭೆಗೆ ನಿಲ್ಲಸಲ್ಲ. ಆದ್ರೆ ಜನ ಬಯಸಿದ್ರೆ ಏನ್ ಮಾಡೋದು. ಜನ ಎಲ್ಲ ಬಂದು ನಿಂತುಕೊಳ್ಳಬಹುದು. ಇಲ್ಲ ಅಂದ್ರೆ ಬಿಡಬಹುದು ಎಂದು ಲೇಹರ್ ಸಿಂಗ್ ಆರೋಪದ ಬಗ್ಗೆ ಸಿಎಂ ಸಿದ್ಧರಾಮಯ್ಯ ಟೀಕೆ ಮಾಡಿದರು. ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸದನದಲ್ಲಿ ಭದ್ರತಾ ಲೋಪ ಆಗಿದೆ. ಇದು ರಾಜಕೀಯನಾ..? ಎಂದು ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದರು. ಜಾತಿ ಗಣತಿ ವರದಿನೇ ಬಂದಿಲ್ಲ. ಅದರಲ್ಲಿ ಏನಿದೆ ಅನ್ನೋದ ಗೊತ್ತಾ ನಿಮಗೆ. ನನಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ ಎಂದು ಜಾತಿಗಣತಿ ಬಗ್ಗೆ ಪ್ರತಿಕ್ರಿಯೆ ನೀಡಿದರು. ವಂಟಮೂರಿ ಘಟನೆಯಲ್ಲಿ ಬಿಜೆಪಿ ರಾಜಕೀಯ ಮಾಡ್ತೀದೆ. ಸರ್ಕಾರ ಎಲ್ಲ ಕಾನೂನು ಕ್ರಮ ಕೈಗೊಂಡಿದೆ. ಹೆಣ್ಣುಮಗಳ ಮೇಲೆ ದೌರ್ಜನ್ಯ ಆಗಿರೋದು ಖಂಡನೀಯ. ನಮ್ಮ ಗೃಹ ಸಚಿವರು ಕೂಡಲೇ ಅಲ್ಲಿ ಹೋಗಿದ್ರು. ಆರೋಪಿಗಳನ್ನು ಕೂಡಲೇ ಅರೆಸ್ಟ್ ಮಾಡಲಾಗಿದೆ. ನಡ್ಡಾ ಮತ್ತು ಬಿಜೆಪಿಯವರು ರಾಜಕೀಯ…
ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತ್ಯಂತ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಸಿನಿಮಾ ರಂಗದ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಐಷಾರಾಮಿ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚು ಇರುತ್ತದೆ. ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳ ನಡುವೆ ಒಂದು ಟ್ರೆಂಡ್ ಆಗಿದೆ. ಅದರಲ್ಲಿಯೂ ಬಾಲಿವುಡ್ ನಟಿಯರು ಆಗ್ಗಾಗ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವರ್ಷ ಬಾಲಿವುಡ್ ನಟಿಯರು ಖರೀದಿಸಿದ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ. ಶ್ರದ್ಧಾ ಕಪೂರ್: ಇತ್ತೀಚೆಗೆ ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ ಭಾರತದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೊಚ್ಚಹೊಸ ಲ್ಯಾಂಬೋರ್ಗಿನಿ ಹುರಾಕನ್ ಖರೀದಿಸಿದ್ದಾರೆ. ಶ್ರದ್ಧಾ ಕಪೂರ್ ಅವರು 4.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿ ಮಾದರಿಯನ್ನು ಖರೀದಿಸಿದ್ದಾರೆ. ಪೂಜಾ ಹೆಗ್ಡೆ: ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಸಿನಿರಂಗದಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಪೂಜಾ ಹೆಗ್ಡೆ (Pooja Hegde), ರೂ.4 ಕೋಟಿ…
ನಟಿ ಅಭಿರಾಮಿ ದರ್ಶನ್ ಅಭಿನಯದ ಲಾಲಿಹಾಡು, ಶಿವರಾಜ್ಕುಮಾರ್ ನಟನೆಯ ಶ್ರೀರಾಮ್, ಉಪೇಂದ್ರ ಅವರ ರಕ್ತ ಕಣ್ಣೀರು ಮತ್ತು ಸುದೀಪ್ ಅಭಿನಯದ ಕೋಟಿಗೊಬ್ಬ 3 ಸೇರಿದಂತೆ ಕನ್ನಡ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಕನ್ನಡ, ತಮಿಳು ಹಾಗೂ ಮಲಯಾಳ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಸ್ಟಾರ್ ನಟರೊಂದಿಗೆ ನಟಿಸಿರುವ ಅಭಿರಾಮಿ 1990-2000 ದಶಕದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದರು ಕುಟುಂಬದ ಜತೆಗೆ ಸಿನಿಮಾ ವೃತ್ತಿಯನ್ನು ಮುಂದುವರಿಸಿರುವ ಅಭಿರಾಮಿ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ 2.9 ಲಕ್ಷ ಫಾಲೋವರ್ಸ್ ಹೊಂದಿದ್ದು, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಆಗಾಗ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಂನಲ್ಲಿ ಪ್ರಶ್ನೋತ್ತರ ಚಟುವಟಿಕೆ ನಡೆಸುವುದನ್ನು ನೀವು ನೋಡಿರುತ್ತೀರಿ. ಅದೇ ರೀತಿ ಅಭಿರಾಮಿ ಕೂಡ ಇತ್ತೀಚೆಗೆ ನೆವರ್ ಹ್ಯಾವ್ ಐ ಎವರ್ ಆವೃತ್ತಿಯ ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಪ್ರಶ್ನೋತ್ತರ ಚಟುವಟಿಕೆ ನಡೆಸಿದರು. ಈ ವೇಳೆ ಆಸಕ್ತಿದಾಯಕ ಪ್ರಶ್ನೆಗಳಿಗೆ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ. ಟಾಯ್ಲೆಟ್ನಲ್ಲಿ ಎಂದಾದರೂ ಬಿದ್ದಿದ್ದೀರಾ? ಬ್ರೇಕಪ್…
ಟೊಮೆಟೊಗಳನ್ನು ತಾಜಾವಾಗಿಡಲು ಜನರು ಅವುಗಳನ್ನು ಫ್ರಿಜ್‌ನಲ್ಲಿ ಸಂಗ್ರಹಿಸುತ್ತಾರೆ. ಈ ರೀತಿಯಾಗಿ ಅವು ಹಲವಾರು ವಾರಗಳವರೆಗೆ ಹಾಳಾಗುವುದಿಲ್ಲ. ಆದರೆ ಹಾಗೆ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಟೊಮೆಟೊವನ್ನು ಫ್ರಿಜ್ ನಲ್ಲಿ ಇಡುವುದರಿಂದ ಅದರ ರೋಗಲಕ್ಷಣಗಳನ್ನು ಬದಲಾಯಿಸಬಹುದು. ಟೊಮೆಟೊಗಳನ್ನು ಫ್ರಿಜ್ ಇರಿಸಿ ತಿನ್ನಬಾರದು. ಟೊಮೆಟೊವನ್ನು ಫ್ರಿಜ್ ನಲ್ಲಿ ಇಡುವುದರಿಂದ ಅದರ ರುಚಿ ಮತ್ತು ವಾಸನೆ ಎರಡೂ ಬದಲಾಗುತ್ತದೆ. ಟೊಮೆಟೊವನ್ನು ಫ್ರಿಜ್ ನಲ್ಲಿ ಇಡುವುದರಿಂದ ಅದರಲ್ಲಿನ ಪದರಕ್ಕೆ ಹಾನಿಯಾಗುತ್ತದೆ. ಇದು ಟೊಮೆಟೊಗಳು ಬೇಗನೆ ಕೊಳೆಯಲು ಕಾರಣವಾಗುತ್ತದೆ. ಫ್ರಿಜ್ ನಲ್ಲಿ ಇಟ್ಟಿರುವ ಟೊಮೆಟೊ ಹಾನಿಕಾರಕ. ಟೊಮೆಟೊವನ್ನು ಫ್ರಿಜ್ನಲ್ಲಿ ಇಡುವುದರಿಂದ ದೇಹಕ್ಕೆ ಕೆಟ್ಟದಾದ ಟೊಮೆಟೊಯಿನ್ ಗ್ಲೈಕೋಲ್ಕಲಾಯ್ಡ್ಗಳು ಉತ್ಪತ್ತಿಯಾಗುತ್ತವೆ. ಅಂತಹ ಟೊಮೆಟೊಗಳನ್ನು ತಿನ್ನುವುದು ಕರುಳಿನ ಉರಿಯೂತ, ವಾಕರಿಕೆ, ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಇದು ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ತುಂಬಾ ಕೆಟ್ಟದು. ನೀವು ಟೊಮೆಟೊಗಳನ್ನು ಕೋಣೆಯ ತಾಪಮಾನದಲ್ಲಿ ಸಂಗ್ರಹಿಸಬಹುದು.