ಬಾಲಿವುಡ್ (Bollywood) ನಟ ಸಾಹಿಲ್ ಖಾನ್ (Sahil Khan) ಸೇರಿದಂತೆ ಇನ್ನೂ ಇಬ್ಬರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಮಹಾದೇವ್ ಬೆಟ್ಟಿಂಗ್ (Mahadev Betting) ಆಪ್ ಅ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮನ್ಸ್ (Summons) ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಟ್ಟಿಂಗ್ ಆಪ್ ನಲ್ಲಿ 15 ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದ್ದು, ಆಪ್ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಭೋಪಾಲ್, ಮುಂಬೈ, ಕೋಲ್ಕತ್ತಾ ನಗರಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ಸಮಯದಲ್ಲಿ ಹವಾಲಾ ನಡೆದಿರುವುದು ಪತ್ತೆ ಆಗಿದೆ ಎನ್ನಲಾಗಿತ್ತು. ರವಿ ಉಪ್ಪಾಲ್ ಮತ್ತು ಸೌರಭ್ ಚಂದ್ರಕಾರ್ ಎನ್ನುವವರು ಈ ಆಪ್ ಅನ್ನು ದುಬೈನಿಂದ ನಡೆಸುತ್ತಿದ್ದರು. ಬೇನಾಮಿ ಖಾತೆಗಳಿಂದ ಅಕ್ರ ಹಣ ವರ್ಗಾವಣೆ ಆಗುತ್ತಿದೆ ಎಂದು ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಶೋಧ ನಡೆಸಿದ್ದರು. ಈ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಇನ್ನೂ ಅನೇಕ…
Author: AIN Author
ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ ಎಂದು ಬಿಜೆಪಿ ಬೆಂಗಳೂರು ಮಹಾನಗರ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ಮಾಡಲಾಗಿದೆ. ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಬಿಜೆಪಿ ಮಹಿಳಾ ರಾಜ್ಯ ಅಧ್ಯಕ್ಷರಾದ ಶ್ರೀಮತಿ ಗೀತಾ, ಜಿಲ್ಲಾಧ್ಯಕ್ಷರಾದ ಶ್ರೀಮತಿ ಆಶಾ ರಾವ್ ಸೇರಿದಂತೆ ಭಾಗಿಯಾಗಿದ್ದರು. ಬೃಹತ್ ಪ್ರತಿಭಟನೆಗೆ ನೂರಾರು ಬಿಜೆಪಿ ಮಹಿಳೆಯರು ಭಾಗಿಯಾಗಿದ್ದರು. ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ಜೊತೆಗೆ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.
ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಡಿ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಭತ್ತದ ಬಿತ್ತನೆ ಪ್ರದೇಶವು ನಿಗದಿತ ಗುರಿಗಿಂತ ಶೇ 35ರಷ್ಟು ಕಡಿಮೆಯಾಗಿದ್ದು, ಉತ್ಪಾದನೆಯೂ ಕುಂಠಿತವಾಗಿದೆ. ಹಾಗಾಗಿ, ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಅಕ್ಕಿ ಧಾರಣೆಯು ಶೇ 10ರಿಂದ 20ರಷ್ಟು ಹೆಚ್ಚಳವಾಲಿದೆ. ಈಗಾಗಲೇ, ದರ ಹೆಚ್ಚಳದಿಂದ ತತ್ತರಿಸಿರುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಮತ್ತೊಂದೆಡೆ ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಯೋಜನೆಗೂ ಅಕ್ಕಿ ಪೂರೈಕೆ ಕೊರತೆಯಾಗುವ ಆತಂಕ ಎದುರಾಗಿದೆ. ಸದ್ಯ ಸಗಟು ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಸಾಮಾನ್ಯ ಸೋನಾ ಮಸೂರಿ ಅಕ್ಕಿ ದರ 6 ಸಾವಿರ ಇದ್ದರೆ, ಆರ್‌ಎನ್‌ಆರ್ ಸೋನಾ ತಳಿ ಅಕ್ಕಿ ಧಾರಣೆ 6,500 ಇದೆ. ರಾಜ್ಯದಲ್ಲಿ ಕಳೆದ ವರ್ಷ ಸುಮಾರು 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿತ್ತು. ಈ ಬಾರಿ ಸುಮಾರು 7-8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದೆ. ಇದು ಅಕ್ಕಿ ಉತ್ಪಾದನೆ ಕುಸಿತಕ್ಕೆ ಕಾರಣವಾಗಲಿದೆ ಎಂದು ಅಕ್ಕಿ ಗಿರಣಿ ಮಾಲೀಕರು ಹೇಳುತ್ತಾರೆ.
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಮುಸ್ಲಿಂರಿಗೆ ಟಿಕೆಟ್ ಕೇಳಿದ್ದೇವೆ ಎಂದು ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಂಗಳೂರು ಸೆಂಟ್ರಲ್, ಹಾವೇರಿ ಹಾಗೂ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದೇವೆ ಎಂದು ತಿಳಿಸಿದರು. ಎಲ್ಲ ಕ್ಷೇತ್ರಗಳಲ್ಲಿ ಲೋಕಸಭೆಗೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ನಮ್ಮ ಸರ್ಕಾರ ಬಂದ ಬಳಿಕ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಜನ ಈಗ ತೀರ್ಮಾನ ತೆಗೆದುಕೊಂಡು ಆಗಿದೆ. ರಾಜ್ಯದಲ್ಲಿ ಕನಿಷ್ಠ 25 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಮೂರು ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೆಟ್ ಕೇಳಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂತಸ್ ಭವನದಲ್ಲಿ ಗಲಾಟೆ ಕಾಂಗ್ರೆಸ್ ಕುತಂತ್ರ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಕಾಂಗ್ರೆಸ್ ಕುತಂತ್ರ ಹೇಗಿರುತ್ತೆ? ಅವರಿಗೆ ಪಾಸ್ ಕೊಟ್ಟವರು ಯಾರು? ಇದರಲ್ಲಿ ರಾಜಕೀಯ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಇದರಲ್ಲಿ ಭದ್ರತಾ ವೈಫಲ್ಯ ಆಗಿದೆ. ಆತ…
ಕಾಲಿವುಡ್ ಯುವ ನಿರ್ದೇಶಕ ಅಧಿಕ್ ರವಿಚಂದ್ರನ್ (Adhik Ravichandran) ಅವರು ಐಶ್ವರ್ಯ ಪ್ರಭು (Aishwarya Prabhu) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿರಿಯ ನಟ ಪ್ರಭು ಅವರ ಪುತ್ರಿ ಐಶ್ವರ್ಯ ಜೊತೆ ನಿರ್ದೇಶಕ ಅಧಿಕ್ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ತ್ರಿಶಾ ಇಲ್ಲ ನಯನತಾರಾ, ದಬಂಗ್ 3, ಮಾರ್ಕ್ ಆ್ಯಂಟನಿ ಸಿನಿಮಾಗಳ ನಿರ್ದೇಶಕ ಅಧಿಕ್ ರವಿಚಂದ್ರನ್ ಅವರು ಐಶ್ವರ್ಯ ಪ್ರಭು ಜೊತೆ ಇಂದು (ಡಿ.15) ಚೆನ್ನೈನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಕನ್ನಡದ ದೃಶ್ಯ, ಪವರ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಪ್ರಭು ಅವರ ಪುತ್ರಿ ಐಶ್ವರ್ಯಗೆ ಇದು ಎರಡನೇ ಮದುವೆಯಾಗಿದ್ದು, ಮೊದಲ ಮದುವೆ ತಂದೆ ಪ್ರಭು ಅವರ ತಂಗಿ ಮಗನ ಜೊತೆ ನೆರವೇರಿತ್ತು. ವೈಯಕ್ತಿಕ ಮನಸ್ತಾಪಗಳಿಂದ ಹೆಚ್ಚು ದಿನ ಆ ದಾಂಪತ್ಯ ಉಳಿಯಲಿಲ್ಲ. ಡಿವೋರ್ಸ್‌ನಲ್ಲಿ ಐಶ್ವರ್ಯ ಮೊದಲ ಮದುವೆ ಅಂತ್ಯವಾಗಿತ್ತು.
ಬಳ್ಳಾರಿ: ಸಂಕಷ್ಟದಲ್ಲಿದ್ದ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಮೆಣಸಿನಕಾಯಿ ಬೆಳೆಗಾರರಿಗೆ ನೀರು ಒದಗಿಸುವಲಿ ಸಚಿವ ನಾಗೇಂದ್ರ ಅವರು ಯಶಸ್ವಿಯಾಗಿದ್ದಾರೆ.ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಜೊತೆ ರೈತ ಮುಖಂಡರುಗಳ ಸಭೆ ನಡೆಸಿದರು. ಹೆಚ್ ಎಲ್ ಸಿ ಕಾಲುವೆ ನೀರು ಬಿಡುವ ಅವಧಿ ಮುಗಿದಿದ್ದರೂ ಸಹ, ಐದು ದಿನಗಳ ಕಾಲ ಕಾಲುವೆಗೆ ಹೆಚ್ಚುವರಿ ನೀರು ಬಿಡಿಸುವ ಮೂಲಕ ಜಿಲ್ಲೆಯ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡುವಲ್ಲಿ ಸಚಿವ ನಾಗೇಂದ್ರ ಅವರು ಯಶಸ್ವಿಯಾಗಿದ್ದಾರೆ. ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯ ಎತ್ತಿನಬುದಿಹಾಳ್ ಬಳಿಯ ೧೫,೧೬,೧೬ಎ ಡಿಸ್ಟ್ರಿಬ್ಯೂಟರ್ ಗೆ ರೈತರೊಂದಿಗೆ ಭೇಟಿ ನೀಡಿ ವೀಕ್ಷಿಸಿದರು. ರೈತರ ಹಿತ ಕಾಪಾಡುವ ಕೆಲಸ ಮಾಡಿ, ಜಮೀನುಗಳಿಗೆ ನೇರವಾಗಿ ನೀರು ಒದಗಿಸುವ ಕಾರ್ಯವನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿರುವ ಸಚಿವ ನಡೆಯನ್ನು ರೈತರು ಪ್ರಶಂಸಿದ್ದಾರೆ.
ಬೆಳಗಾವಿ: ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಯ ಆರೋಗ್ಯವನ್ನು ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ ವಿಚಾರಿಸಿತು. ಸಂಸದರಾದ ಅಪ್ರಜಿತಾ ಸಾರಂಗಿ, ಸುನಿತಾ ದುಗ್ಗಿ, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ಅವರನ್ನೊಳಗೊಂಡ ಐದು ಜನರ ಸಮಿತಿ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿದರು. ಘಟನೆಯಿಂದ ಧೃತಿಗೆಡಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದೆ ಅಪ್ರಜಿತಾ ಸಾರಂಗಿ ಮಾತನಾಡಿ, ಬೆಳಗಾವಿ ನಗರದಿಂದ 15 ಕಿ.ಮೀ. ದೂರದಲ್ಲಿರುವ ವಂಟಮೂರಿ ಗ್ರಾಮದಲ್ಲಿ ರಾತ್ರಿ 1.30ರ ಸುಮಾರಿಗೆ ಮನೆಗೆ ನುಗ್ಗಿ, ಮಹಿಳೆಯನ್ನು ಹೊರ ತಂದ ಪುರುಷರು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿ, ಬಳಿಕ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಘಟನೆ ಆದ ಎರಡು ಗಂಟೆ ಬಳಿಕ ಸ್ಥಳಕ್ಕೆ ಪೊಲೀಸರು ಬಂದರು. ಸಿಪಿಐಗೆ ವಿಷಯ ತಿಳಿಸಿದರೂ…
ದೊಡ್ಮನೆ ಆಟಕ್ಕೆ ‘ನಮ್ಮನೆ ಯುವರಾಣಿ’ (Nammane Yuvarani) ಸೀರಿಯಲ್ ಹೀರೋ ಸ್ನೇಹಿತ್ ಗೌಡ (Snehith Gowda) 9ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿರೋ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಲೇಟೆಸ್ಟ್ ಅಪ್‌ಡೇಟ್ ಏನಂದರೆ, ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ್ಮೇಲೆ ಸ್ನೇಹಿತ್‌ಗೆ ಫಾಲೋವರ್ಸ್ ಹೆಚ್ಚಾಗಿದೆ. ‘ನಮ್ಮನೆ ಯುವರಾಣಿ’ ಹೀರೋ ಆಗಿ ಗಮನ ಸೆಳೆದಿದ್ದ ಸ್ನೇಹಿತ್, ನಮ್ರತಾ ದಿಲ್ ಕದಿಯೋಕೆ ಹರಸಾಹಸ ಮಾಡಿದ್ದರು. ವಿನಯ್ ಗೌಡ ಟೀಮ್‌ನಲ್ಲಿ ಒಬ್ಬರಾಗಿದ್ದರು. ಇನ್ನೂ ವಿಶೇಷ ಅಂದರೆ ಸ್ನೇಹಿತ್ ಎಲಿಮಿನೇಷನ್ ಮುನ್ನ ಅವರಿಗೆ 59 ಸಾವಿರ ಫಾಲೋವರ್ಸ್ ಹೊಂದಿದ್ದರು. ಈಗ 80 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇಲ್ಲಿ ಎಲ್ಲವೂ ರಿವರ್ಸ್ ಆಗಿದೆ. ಯಾವುದೇ ಸ್ಪರ್ಧಿ ಬಿಗ್ ಬಾಸ್ ಮನೆಗೆ (Bigg Boss Kannada 10) ಹೋದಾಗ ಫಾಲೋವರ್ಸ್ ಹೆಚ್ಚಾಗೋದು ಕಾಮನ್. ಆದರೆ ಸ್ನೇಹಿತ್ ವಿಚಾರದಲ್ಲಿ ಎಲ್ಲಾ ಉಲ್ಟಾ ಆಗಿದೆ. ದೊಡ್ಮನೆ ಆಟಕ್ಕೆ ಅಂತ್ಯ ಬಿದ್ದ ಮೇಲೆ ಫಾಲೋವರ್ಸ್ ಜಾಸ್ತಿ ಆಗಿದ್ದಾರೆ. 80 ಸಾವಿರಕ್ಕೂ ಹೆಚ್ಚಿನ…
ಬೆಂಗಳೂರು: ತನ್ನ ಪತ್ನಿಯನ್ನು ವಿಧವೆ ಎಂದು ಹೇಳಿ ನೋಡಿಕೊಳ್ಳುವಂತೆ ಉದ್ಯಮಿ ಜೊತೆ ಬಿಟ್ಟು ಹನಿಟ್ಯ್ರಾಪ್ ನಡೆಸಿದ ಪ್ರಕರಣ ಸಂಬಂಧ ದಂಪತಿ ಸಹಿತ ನಾಲ್ವರು ಆರೋಪಿಗಳನ್ನು CCB ಪೊಲೀಸರು ಬಂಧಿಸಿದ್ದಾರೆ. ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತ ಆರೋಪಿಗಳಾಗಿದ್ದು, ಈ ಪೈಕಿ ಖಲೀಮ್ ಮತ್ತು ಸಭಾ ದಂಪತಿಯಾಗಿದ್ದಾರೆ. ಈ ಗ್ಯಾಂಗ್ ಅತೀವುಲ್ಲಾ ಎಂಬ ಉದ್ಯಮಿಗೆ ಬಲೆಬೀಸಿ ಕೆಡ್ಡಕ್ಕೆ ಕೆಡವಿ ಹನಿಟ್ರ್ಯಾಪ್ ಮಾಡಿತ್ತು. ಅತೀವುಲ್ಲಾಗೆ ಪತ್ನಿ ಸಭಾಳನ್ನ ವಿಧವೆ ಅಂತಾ ಪರಿಚಯ ಮಾಡಿಸಿಕೊಟ್ಟು ಆಕೆಯನ್ನು ನೋಡಿಕೊಳ್ಳುವಂತೆ ಹೇಳಿದ್ದ. ನಂತರ ಸಭಾ ಮತ್ತು ಅತೀವುಲ್ಲಾ ನಡುವೆ ದೈಹಿಕ ಸಂಪರ್ಕ ನಡೆದಿತ್ತು. ಕೆಲ ದಿನಗಳ ನಂತರ ಆರ್.ಆರ್ ನಗರದಲ್ಲಿ ರೂಮ್ ಬುಕ್ ಮಾಡಲು ಆಧಾರ್ ಕಾರ್ಡ್ ಜೊತೆ ಬಾ ಎಂದು ಅತೀವುಲ್ಲಾನನ್ನು ಕರೆದಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಕಲಬುರಗಿ: ಬೆಳಗಾವಿಯಲ್ಲಿ ನಡೆದ ಮಹಿಳೆ ವಿರುದ್ಧ ಅಮಾನವೀಯ ಘಟನೆ ಖಂಡಿಸಿ ಕಲಬುರಗಿಯಲ್ಲಿ ಬಿಜೆಪಿ ಪ್ರೊಟೆಸ್ಟ್ ನಡೆಸಿತು ಸಂಸದ ಉಮೇಶ್ ಜಾಧವ್ ನೇತ್ರತ್ವದಲ್ಲಿ ಡಿಸಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆ. ಈ ಫ್ರತಿಭಟನೆಯಲ್ಲಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ರು.ರಾಜ್ಯ ಸರ್ಕಾರಕ್ಕೆ ಈ ಘಟನೆ ಬಗ್ಗೆ ಎಚ್ಚರಿಕೆ ಕೊಡ್ತಿದ್ದೀವಿ. ಕೂಡಲೇ ಮಹಿಳಾ ಮಕ್ಕಳ ಸಚಿವರು ರಾಜೀನಾಮೆ ಕೊಡ್ಬೇಕು ಅಂತ ಆಗ್ರಹಿಸಿದ್ರು..