Author: AIN Author

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದಿನಿಂದ ಎರಡು ದಿನ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ ವೃಷಭಾವತಿ ವಿದ್ಯುತ್‌ ಕೇಂದ್ರದವ್ಯಾಪ್ತಿಯ ಬಾಪೂಜಿನಗರ, ಗಂಗೊಂಡನಹಳ್ಳಿ, ದೀಪಾಂಜಲಿನಗರ, ಅತ್ತಿಗುಪ್ಪೆ, ಪಂತರ ಪಾಳ್ಯ, ಕೆಂಚೇನಹಳ್ಳಿ, ಆ‌ರ್.ಆ‌ರ್. ನಗರ, ಬೆಟ್ಟನಪಾಳ್ಯ, ಐಡಿಯಲ್ ಹೋಮ್ಸ್, ಬಿಎಚ್‌ ಇಎಲ್ ಲೇಔಟ್,ಜ್ಞಾನಭಾರತಿ,ವಿನಾಯಕಲೇಔಟ್, ಕೆಂಗೇರಿಉಪನಗರ, ಜ್ಞಾನಭಾರತಿ ಲೇಔಟ್, ಬಂಡೇಮಠ, ,ಮೈಲಸಂದ್ರ, ವಿಶ್ವೇಶ್ವರಯ್ಯ ಲೇಔಟ್‌, ಆರ್‌ಆರ್‌ಲೇಔಟ್, ಕೆಂಗುಂಟೆ, ಕೊಡಿಗೇಹಳ್ಳಿ, ಮುದ್ದಿನ ಪಾಳ್ಯ, ಮರಿಯಪ್ಪನಪಾಳ್ಯ, ಸುಭಾಷ್‌ನಗರ, ಗಿರಿನಗರ, ಬ್ಯಾಂಕ್ ಕಾಲೋನಿ, ಶ್ರೀನಗರ, ಹನುಮಂತನಗರ, ವಿದ್ಯಾಪೀಠ, ತ್ಯಾಗರಾಜ ನಗರ, ಹೊಸಕೆರೆ ಹಳ್ಳಿ, ನಾಗೇಂದ್ರ ಬ್ಲಾಕ್, ಅವಲಹಳ್ಳಿ ಹಾಗೂ ಮೈಸೂರು ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು. ಸರ್‌ಎಂವಿ ಲೇಔಟ್ ವಿದ್ಯುತ್ ಕೇಂದ್ರದ ವ್ಯಾಪ್ತಿಯ ಉಲ್ಲಾಳ ಮುಖ್ಯ ರಸ್ತೆ, ಪ್ರೆಸ್ ಲೇಔಟ್, ರೈಲ್ವೆಲೈ ಔಟ್, ಜ್ಞಾನಜ್ಯೋತಿನಗರ, ಮುನೇಶ್ವರನಗರ, ಎಂಪಿಎಂ ಲೇಔಟ್, ಐಟಿಐ ಲೇಔಟ್, ಕೆಂಗುಂಟೆ, ಮಲ್ಲತ್ತಹಳ್ಳಿ, ಡಿಗ್ರೂಪ್ ಲೇಔಟ್, ದೊಡ್ಡಬಸ್ತಿ, ಚಿಕ್ಕಬಸ್ತಿ, ರಾಮಸಂದ್ರ, ಗಾಯತ್ರಿ ಲೇಔಟ್, ಸೊನ್ನೇನಹಳ್ಳಿ, ಅಮ್ಮ ಆಶ್ರಮ, ಜ್ಞಾನಭಾರತಿ ಲೇಔಟ್, ಅಂಜನಾ ನಗರ, ರತ್ನಾನಗರ, ದೊಡ್ಡಗೊಲ್ಲರಹಟ್ಟಿ, ಸರ್…

Read More

ಬೆಂಗಳೂರು:- ಕರ್ನಾಟಕದ 18ಕ್ಕೂ ಅಧಿಕ ಜಿಲ್ಲೆಗಳಲ್ಲಿ ಡಿ.17ರಿಂದ ಎರಡು ದಿನಗಳ ಕಾಲ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರಾವಳಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ವಿಜಯಪುರದಲ್ಲಿ 9.6 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಎಚ್​ಎಎಲ್​ನಲ್ಲಿ 26.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 15.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 2.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 27.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ…

Read More

ಬಿಗ್ ಬಾಸ್’ ಬೆಡಗಿ ಸಾನ್ಯ ಅಯ್ಯರ್ (Saanya Iyer) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಪಡ್ಡೆಹುಡುಗರನ್ನ ಅಟ್ರ್ಯಾಕ್ಟ್ ಮಾಡುತ್ತಿರುತ್ತಾರೆ. ಇದೀಗ ಬಾತ್ ಟಬ್‌ನಲ್ಲಿ ಕುಳಿತು ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸಾನ್ಯ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಪ್ಪು ಬಣ್ಣದ ತುಂಡು ಬಟ್ಟೆ ಧರಿಸಿ ಹಿಂದೆ ಜರಿಯಂತೆ ಕಲರ್‌ಫುಲ್ ಡ್ರೆಸ್ ತೊಟ್ಟು ಸಾನ್ಯ ಮಿಂಚಿದ್ದಾರೆ. ತಲೆಗೆ ಕಡ್ಡಿಯ ಕಿರೀಟ ಧರಿಸಿ ಮುದ್ದು ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಬಾತ್ ಟಬ್‌ನಲ್ಲಿ ಮಲಗಿ ನಾನಾ ರೀತಿಯ ಪೋಸ್ ನೀಡಿದ್ದಾರೆ. ಕಳೆದ ವರ್ಷ ‘ಬಿಗ್ ಬಾಸ್’ ಸೀಸನ್ 9ರಲ್ಲಿ (Bigg Boss Kannada 9) ಸಾನ್ಯ ಅಯ್ಯರ್ ಸ್ಪರ್ಧಿಯಾಗಿದ್ದರು. 80ಕ್ಕೂ ಹೆಚ್ಚು ದಿನಗಳವರೆಗೂ ಸಾನ್ಯ ಆಟ ಆಡಿ ಎಲಿಮಿನೇಟ್ ಆಗಿದ್ದರು. ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹದ ವಿಚಾರವಾಗಿ ಸಖತ್ ಸುದ್ದಿಯಾಗಿದ್ದರು. ಇದೀಗ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಚಿತ್ರದಲ್ಲಿ ಸಾನ್ಯ ಅಯ್ಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ಪಾತ್ರಕ್ಕೆ…

Read More

ಲ್ಯಾಪ್​ಟಾಪ್​ಗಳು ಟೆಕ್​ಲೋಕವನ್ನು ಆವರಿಸಿಕೊಂಡಿದೆ. ಲ್ಯಾಪ್​ಟಾಪ್​ಗಳನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಟೆಕ್ನಾಲಜಿ ಪ್ರಪಂಚದಲ್ಲಿ ಲ್ಯಾಪ್​ಟಾಪ್​ಗಳ ಪಾತ್ರ ಬಹಳ ಮುಖ್ಯವಾಗಿದೆ. ಸುಲಭವಾಗಿ ಸಾಗಿಸಬಹುದಾದ ಈ ಕಂಪ್ಯೂಟರ್​ ಸಾಧನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಐಟಿ ಮತ್ತು ಸಾಫ್ಟ್​ವೇರ್​ ಕ್ಷೇತ್ರಕ್ಕೆ ಮಾತ್ರ ಲ್ಯಾಪ್​ಟಾಪ್​ ಸೀಮಿತವಾಗಿಲ್ಲ, ಇನ್ನಿತರ ವಲಯಗಳಿಗೂ ಈ ಲ್ಯಾಪ್​ಟಾಪ್​ನ ಅಗತ್ಯ ತುಂಬಾ ಇದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ವರ್ಕ್​ ಫ್ರಮ್​ ಹೋಮ್​ ಸಂಸ್ಕೃತಿ ಹೆಚ್ಚು ಪ್ರಚಲಿತದಲ್ಲಿದೆ. ಕರೊನಾ ನಂತರ ವರ್ಕ್​ ಫ್ರಮ್​ ಹೋಮ್​ ಆಯ್ಕೆ ಹೆಚ್ಚು ಮುನ್ನೆಲೆಗೆ ಬಂದಿತು. ಅನೇಕರು ಮನೆಯಲ್ಲಿ ಕೆಲಸ ಮಾಡುವಾಗ ತಮ್ಮ ತೊಡೆಯ ಮೇಲೆ ಲ್ಯಾಪ್​ಟಾಪ್​ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಹೆಚ್ಚು ಹೊತ್ತು ತೊಡೆಯ ಮೇಲೆ ಲ್ಯಾಪ್​ಟ್ಯಾಪ್​ ಇಟ್ಟು ಕೆಲಸ ಮಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಕ್ಯಾನ್ಸರ್ ಬರುವ ಸಾಧ್ಯತೆ ಚರ್ಮದ ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಸಂಶೋಧಕರ ಪ್ರಕಾರ ಲ್ಯಾಪ್‌ಟಾಪ್ ಖಾಸಗಿ ಭಾಗಗಳಿಗೆ ಹತ್ತಿರವಾಗಿದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗುತ್ತದೆಯಂತೆ.…

Read More

ಅನಿಮಲ್’ (Animal) ಚಿತ್ರದ ಸಕ್ಸಸ್ ಅಲೆಯಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ತೇಲುತ್ತಿದ್ದಾರೆ. ಮತ್ತೆ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ರಶ್ಮಿಕಾ ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕಾಫಿ ಕಲರ್ ಬಣ್ಣದ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಮುದ್ದು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ರಶ್ಮಿಕಾ ನಯಾ ಲುಕ್‌ಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಸಾವಿರಾರು ಕಾಮೆಂಟ್ಸ್ ಬಂದಿದೆ. ಪುಷ್ಪ ಬೆಡಗಿಯ ಲುಕ್‌ ನೋಡಿ ಕಣ್ಣಲ್ಲೇ ಗುಂಡಿಟ್ಟು ಕೊಲ್ಲೋ ಹುಡುಗಿ ಎಂದು ಪಡ್ಡೆಹುಡುಗರು ಹಾಡಲು ಶುರು ಮಾಡಿದ್ದಾರೆ. ನಟಿಯ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ ರಣ್‌ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್- ರಶ್ಮಿಕಾ ಜೋಡಿ ಮೋಡಿ ಮಾಡಿದೆ. ಲಿಪ್‌ಲಾಕ್ ಸೇರಿದಂತೆ ಹಲವು ಹಸಿಬಿಸಿ ದೃಶ್ಯಗಳಲ್ಲಿ ಕೊಡಗಿನ ಬೆಡಗಿ ನಟಿಸಿದ್ದಾರೆ. ಅನಿಮಲ್ ಸಿನಿಮಾದ ಸಕ್ಸಸ್‌ನಿಂದ…

Read More

ಒಂದು ಮೊಟ್ಟೆಯನ್ನು ತಿನ್ನುವುದರಿಂದ ಸುಮಾರು 6ಗ್ರಾಂ ಪ್ರೊಟೀನ್‌ ಸಿಗುತ್ತದೆ ಹಾಗಾಗಿ ಮೊಟ್ಟೆಯನ್ನು ಎಲ್ಲದರ ಜೊತೆ ತಿನ್ನಲೇಬಾರದು . ಮೊಟ್ಟೆಯ ಜೊತೆ ಕೆಲವೊಂದು ವಸ್ತುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಮೊಟ್ಟೆ ಅಪಾಯ ತಂದೊಡ್ಡಬಹುದು .ಹೀಗಾಗಿ ಮೊಟ್ಟೆಯ ಜೊತೆ ಯಾವ ಆಹಾರ ಸೇವನೆ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.. ಮೊಟ್ಟೆ ಜೊತೆ ತಿನ್ನಲೇಬಾರದ ಆಹಾರ ಪದಾರ್ಥ 1.ಚಹಾ ಮತ್ತು ಮೊಟ್ಟೆ ಕಾಂಬೇನೇಷನ್‌ ಅಲ್ಲವೇ ಅಲ್ಲ. 2. ಮೊಟ್ಟೆ ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನಲೇಬಾರದು. 3. ಮೊಟ್ಟೆ ಮತ್ತು ಬಾಳೆಹಣ್ಣು ಕೂಡ ಒಟ್ಟಿಗೆ ತಿನ್ನಬಾರದು 4. ಸೋಯಾ ಹಾಲು ಮತ್ತು ಮೊಟ್ಟೆಗಳನ್ನು ತಿನ್ನಬಾರದು.

Read More

ಬೆಂಗಳೂರು:- ಎಕ್ಸ್‌ನಲ್ಲಿ ಸಚಿವ ಜಾರ್ಜ್ ಬಗ್ಗೆ ಅವಹೇಳನ ಪೋಸ್ಟ್ ಮಾಡಿದ ಆರೋಪದಡಿ ಬಿಆರ್‌ಎಸ್ ಪಕ್ಷದ ಕಾರ್ಯಕರ್ತನನ್ನು ಅರೆಸ್ಟ್ ಮಾಡಲಾಗಿದೆ. ಕರೀಂ ನಗರದ ರವಿಕಾಂತಿ ಶರ್ಮಾ ಬಂಧಿತ ನಾಗಿದ್ದು, ಬಳಿಕ ಬಿಡುಗಡೆಗೊಳಿಸಿ ದ್ದಾರೆ. ಇತ್ತೀಚಿಗೆ ಮುಗಿದ ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಸಚಿವರ ಕುರಿತು ಆರೋಪಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ. ತೆಲಂಗಾಣದ ಬಿಆರ್‌ಎಸ್ ಪಕ್ಷದಲ್ಲಿ ರವಿಕಾಂತಿ ಸಕ್ರಿಯ ಕಾರ್ಯ ಕರ್ತನಾಗಿದ್ದು, ಪಕ್ಷದ ಐಟಿ ಸೆಲ್‌ನಲ್ಲಿ ಆತ ಕೆಲಸ ಮಾ ಡುತ್ತಿದ್ದ. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಹಾಗೂ ಗೃಹಜ್ಯೋತಿ ಯೋಜನೆ ಅನುಷ್ಠಾನದ ಕುರಿತು ‘ಎಕ್ಸ್ ‘ನಲ್ಲಿ ಇಂಧನ ಸಚಿವರ ನಕಲಿ ಆಡಿಯೋ ತುಣುಕನ್ನು ಆತ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ.

Read More

ಮುಖದ ಮೇಲೆ ಸಣ್ಣದೊಂದು ಗುಳ್ಳೆ ಆದ್ರೆ ಅದೆಷ್ಟೋ ಮಹಿಳೆಯರು ದೊಡ್ಡ ಘಟನೆ ನಡೆದಂತೆ ಶಾಕ್ ಆಗ್ತಾರೆ. ಆ ಒಂದು ಗುಳ್ಳೆ ಹೋಗುವುದಕ್ಕಾಗಿ ಹಲವು ಕ್ರೀಮ್, ಮೆಥಡ್ ಗಳನ್ನ ಫಾಲೋ ಮಾಡ್ತಾರೆ. ಆದ್ರೆ ಪುರುಷರು ಸಣ್ಣ ಪುಟ್ಟ ಗುಳ್ಳೆ, ಕಲೆಗಳಿಗೆ ಕೇರ್ ಮಾಡಲ್ಲ. ಆದರೂ ಪ್ರತಿನಿತ್ಯದ ಲೈಫ್ ಸ್ಟೈಲಿನಲ್ಲಿ ರೋಟಿನ್ ಕೆಲಸಗಳ ನಡುವೆ ಮುಖ ತೊಳೆಯುವಾಗ ಕೆಲವೊಂದು ರೂಲ್ಸ್ ಫಾಲೋ ಮಾಡೋದರಿಂದ ಸುಂದರ ಮತ್ತು ಸ್ವಚ್ಛ, ಕಲೆ ರಹಿತ ಮುಖ ನಿಮ್ಮದಾಗುತ್ತೆ. ಏನು ಮಾಡಬೇಕು? * ಮುಖ ತೊಳೆಯುವಾಗ ಉಗುರು ಬೆಚ್ಚಗಿನ ನೀರು ಬಳಸುವುದು ಉತ್ತಮ. ಹೊರಗಿನಿಂದ ಬಂದಾಗ ಮುಖದ ಮೇಲೆ ಧೂಳಿನ ಕಣಗಳು ಅಂಟಿಕೊಂಡಿರುತ್ತವೆ. ಹಾಗಾಗಿ ಬಿಸಿ ನೀರು ಬಳಸಿದ್ರೆ ನಿಮ್ಮ ಫೇಸ್ ಫ್ರೆಶ್ ಆಗುತ್ತೆ. ಹಾಗಂತ ನೀರು ಅತಿ ಬಿಸಿಯಾಗಿರದಂತೆ ನೋಡಿಕೊಳ್ಳಬೇಕು. ಅತಿ ಬಿಸಿ ನೀರು ಬಳಸಿದ್ರೆ ಮುಖದ ತ್ವಚೆ ಬೇಗನೆ ಸುಕ್ಕು ಗಟ್ಟುತ್ತೆ. * ನಿಮ್ಮದು ಆಯಿಲಿ ಸ್ಕಿನ್ ಆಗಿದ್ರೆ ಉತ್ತಮ ಬ್ರ್ಯಾಂಡ್ ನ ಫೇಸ್ವಾಶ್ ಕ್ರೀಂ ಅಥವಾ…

Read More

ಬೆಂಗಳೂರು: ಹುಟ್ಟಿದಾಗಿಂದಲೂ ಕಾಡುತ್ತಿರುವ ಕಿಡ್ನಿ ರೋಗದ ಸಮಸ್ಯೆ ಬಗ್ಗೆ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಇದೀಗ ಹೇಳಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ಟ್ರೇಡಿಂಗ್‌ ವಿಂಡೋ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಗ್ರೀನ್‌ ಸೇರ್ಪಡೆಯಾಗಿದ್ದರು. ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬರೋಬ್ಬರಿ 17.5 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಆರ್‌ಸಿಬಿ ತಂಡ ಯುವ ಆಲ್‌ರೌಂಡರ್‌ನ ಸೇವೆಯನ್ನು ತನ್ನದಾಗಿಸಿಕೊಂಡಿತು. ಇದಾದ ಬಳಿಕ ಇದೇ ಮೊದಲ ಬಾರಿ ಸಂದರ್ಶನ ನೀಡಿರುವ ಗ್ರೀನ್, ತಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಸೌಮ್ಯ ಸ್ವಭಾವದ ಆಟಗಾರ 24 ವರ್ಷದ ಕ್ಯಾಮೆರಾನ್‌ ಗ್ರೀನ್‌ ಯಾರೊಂದಿಗೂ ಹೆಚ್ಚು ಬೆರೆಯುವವರಲ್ಲ. ತಮ್ಮ ಈ ಸ್ವಭಾವಕ್ಕೆ ತಾವು ಎದುರಿಸಿರುವ ಆರೋಗ್ಯ ಸಮಸ್ಯೆಯೂ ಒಂದು ಕಾರಣ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿಕ್ಕಂದಿನಲ್ಲಿ ಹೆಚ್ಚು ವರ್ಷ ಬದುಕುಳಿಯುವ ಸಾಧ್ಯತೆ ಇರಲಿಲ್ಲ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. “ಆ ಸಮಯದಲ್ಲಿ ಏನು ಮಾಡಬೇಕು ಎಂಬುದೇ…

Read More

2023ರ ವರ್ಷವು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಮತ್ತು ಪ್ರತಿಯೊಬ್ಬರೂ 2024 ರ ವರ್ಷವನ್ನು ಉತ್ಸಾಹದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಈ ವರ್ಷದ ಭಾರತದಲ್ಲಿ ನಡೆದ ಪ್ರಮುಖ ಘಟನೆಗಳತ್ತ ಕಣ್ಣು ಹಾಯಿಸಿದರೆ ಸಾಕಷ್ಟು ಸಂಗತಿಗಳು ಕಾಣಿಸುತ್ತವೆ. ಇವುಗಳಲ್ಲಿ ದುರಂತವೇ ಹೆಚ್ಚು. ಆದರೆ ನಾವು ಪ್ರಮುಖ 10 ಪ್ರಮುಖ ಘಟನೆ ಬಗ್ಗೆ ಹೇಳುತ್ತೇವೆ ಕೇಳಿ! ಚಂದ್ರಯಾನ-3ರ ಯಶಸ್ಸು ಬಾಹ್ಯಾಕಾಶ ಲೋಕದಲ್ಲಿನ ಭಾರತದ ಸಾಧನೆ ಇಡೀ ಜಗತ್ತಿನ ಮೆಚ್ಚುಗೆಗೆ ವ್ಯಕ್ತವಾದ ವರ್ಷವಿದು. ಜುಲೈ 14ರಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಚಂದ್ರಯಾನ-3 ನೌಕೆಯು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿತ್ತು. ಈ ಮೂಲಕ ಚಂದ್ರನ ಮೇಲೆ ನೌಕೆ ಇಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಒಡಿಶಾ ರೈಲು ಅಪಘಾತ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲುಗಳ ಅಪಘಾತ, ಇತ್ತೀಚಿನ ವರ್ಷಗಳಲ್ಲಿಯೇ ದೇಶ ಕಂಡ ಘೋರ ರೈಲು ದುರಂತವಾಗುತ್ತು. ಮೂರು ರೈಲುಗಳು ಇಲ್ಲಿ ಡಿಕ್ಕಿಯಾಗಿ ಭೀಕರ ದುರಂತ ಸಂಭವಿಸಿತ್ತು.…

Read More