ಮುಂಬೈ:- ಬಿಹಾರದಲ್ಲಿ 8,700 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಅದಾನಿ ಗ್ರೂಫ್ ಯೋಜನೆ ರೂಪಿಸುತ್ತಿದ್ದು, ಈ ಮೂಲಕ ಅಂದಾಜು 10,000 ಉದ್ಯೋಗ ಸೃಷ್ಟಿಯಾಗಲಿದೆ. ಹಾಗೂ ಇದು ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದಂತಾಗಿದೆ. ಈ ಬಗ್ಗೆ ಅದಾನಿ ಎಂಟರ್ ಪ್ರೈಸಸ್ ನಿರ್ದೇಶಕ ಪ್ರಣವ್ ಅದಾನಿ ಮಾಹಿತಿ ನೀಡಿದ್ದಾರೆ. ಬಿಹಾರ ಬ್ಯುಸಿನೆಸ್ ಕನೆಕ್ಟ್ 2023ರ ಯೋಜನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅದಾನಿ, ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಂಡವಾಳ ಹೂಡಲು ಉದ್ಯಮಿಗಳನ್ನು ಆಹ್ವಾನಿಸಿದ್ದು, ಈ ಮೂಲಕ ಹಿಂದುಳಿದ ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಭರವಸೆಯನ್ನು ಈಡೇರಿಸಲು ಮುಂದಾಗಿದ್ದಾರೆಂದು ಹೇಳಿದರು. ಬಿಹಾರ ಈಗ ಬಂಡವಾಳ ಹೂಡಿಕೆಯ ಆಕರ್ಷಣೆಯ ಸ್ಥಳವಾಗಿದೆ. ಬಿಹಾರದಲ್ಲಿನ ಬದಲಾವಣೆ ಕಾಣಿಸುತ್ತಿದೆ. ಸಾಮಾಜಿಕ ಬದಲಾವಣೆ, ಕಾನೂನು ಸುವ್ಯವಸ್ಥೆ, ಸಾಕ್ಷರತೆ ಮತ್ತು ಮಹಿಳಾ ಸಬಲೀಕರಣ ಪ್ರಮುಖವಾಗಿದೆ ಎಂದರು ಬಿಹಾರದ ಅಭಿವೃದ್ಧಿ ಪಥದ ನಿತೀಶ್ ಕುಮಾರ್ ಅವರ ಯೋಜನೆಗೆ ಅದಾನಿ ಗ್ರೂಪ್ ಕೈಜೋಡಿಸುತ್ತದೆ. ಈಗಾಗಲೇ ಬಿಹಾರದಲ್ಲಿ ಲಾಜಿಸ್ಟಿಕ್ಸ್ ಮತ್ತು ಗ್ಯಾಸ್ ವಿತರಣೆ ಸೆಕ್ಟರ್ ನಲ್ಲಿ 850…
Author: AIN Author
ಮೈಸೂರು:- ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆಯಾಗಲಿ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಅವಧಿ ಸಮೀಪಿಸುತ್ತಿದೆ. ಈ ವೇಳೆ ಭಾರಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದೆ. ಇದರಿಂದ ಲೋಕಸಭೆಯೊಳಗೆ ಆತಂಕ ಸೃಷ್ಟಿ ಆಗಿದ್ದು, ನಮ್ಮ ಮೈಸೂರಿನ ಸಂಸದರೇ ಆಗಂತುಕ ಆರೋಪಿಗೆ ಪಾಸ್ ನೀಡಿರುವುದು ಸ್ಪಷ್ಟವಾಗಿದೆ. ಒಂದು ವೇಳೆ ಅಲ್ಲಿ ಏನಾದರೂ ದೊಡ್ಡ ಅನಾಹುತ ಘಟಿಸಿದ್ದರೆ ಅದಕ್ಕೆ ಯಾರು ಜವಾಬ್ದಾರಿ?. ಭದ್ರತಾ ದೃಷ್ಟಿಯಿಂದ ಸಂಸದ ಪ್ರತಾಪ್ ಅವರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಇದರ ಹಿಂದಿನ ನೈಜ ಕಾರಣಗಳನ್ನು ಪತ್ತೆ ಹಚ್ಚಬೇಕೆಂದು ಈ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸಚಿವ ಡಾ. ಎಚ್ ಸಿ ಮಹದೇವಪ್ಪ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಬುಧವಾರ ಸದನಕ್ಕೆ ಹಾರಿದ್ದ ಆರೋಪಿಗೆ ಪಾಸ್ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡುವಂತೆ ಟಿಎಂಸಿ ಒತ್ತಾಯಿಸಿದೆ. ಅಲ್ಲದೇ, ಹಲವು…
ಬೆಂಗಳೂರು:- ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿದ ಕೇಸ್ ಗೆ ಸಂಬಂಧಿಸಿದಂತೆ ಮಹಿಳೆಯ ನೆರವಿಗೆ ಯಾರು ಬಂದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಘಟನೆ ಕುರಿತಂತೆ ಪ್ರಸ್ತಾಪಿಸಿದ ನ್ಯಾಯಪೀಠ, ದ್ರೌಪದಿಯನ್ನು ವಿವಸ್ತ್ರಗೊಳಿಸಿದಾಗ ರಕ್ಷಿಸಲು ಕೃಷ್ಣಾ ಇದ್ದ. ಇದು ದುಶ್ಯಾಸನರ ಕಾಲವಾಗಿದೆ. ಮಹಿಳೆ ನೆರವಿಗೆ ಯಾರೂ ಬಂದಿಲ್ಲ. ನಮ್ಮಲ್ಲಿ ಕಾನೂನಿನ ಭಯವಿಲ್ಲವೆಂಬ ಸಂದೇಶ ಹೋಗುತ್ತಿದೆ. ಸ್ವಾತಂತ್ರ್ಯ ಬಂದ 75 ವರ್ಷದ ನಂತರವೂ ಇಂತಹ ಘಟನೆ ನಡೆದಿದೆ. ಬಡ ಜನತೆಗೆ ರಕ್ಷಣೆ ಬೇಕಾಗಿದೆ. ಬದಲಾಗಿ ಇಂತಹ ಸಮಾಜದಲ್ಲಿ ಬದುಕುವುದಕಿಂತ ಸಾಯುವುದು ಮೇಲು ಎಂಬ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಪೀಠ ತಿಳಿಸಿತು. ಮಗ ಮಾಡಿದ ತಪ್ಪಿಗೆ ತಾಯಿಗೆ ಶಿಕ್ಷೆ ನೀಡಲಾಗಿದೆ. ಮಗನನ್ನು ಹೆತ್ತಿದ್ದೆ ಆ ತಾಯಿಯ ತಪ್ಪಾ?, ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ. ಅಂತಹ ವ್ಯಕ್ತಿಗಳು ಮನುಷ್ಯರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ. ಎರಡು ಗಂಟೆಗಳ ಕಾಲ ಮಹಿಳೆಯನ್ನು ಹಿಂಸಿಸಲಾಗಿದೆ. ವಿವಸ್ತ್ರಗೊಳಿಸಿ, ಕಂಬಕ್ಕೆ…
ಬೆಂಗಳೂರು:- ಮೇಕೆದಾಟು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಶಿವಕುಮಾರ್ ಭರವಸೆ ನೀಡಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯ ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಮೇಕೆದಾಟು ಯೋಜನೆಗೆ ಇದುವರೆಗೆ ಯಾವುದೇ ಭೂಮಿಯನ್ನು ವಶಪಡಿಸಿಕೊಂಡಿರುವುದಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಅಂತರ ರಾಜ್ಯ ಗಡಿಯಲ್ಲಿರುವ ಸಿಡಬ್ಲ್ಯುಸಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಜುಲೈ 2023 ರಿಂದ ನವೆಂಬರ್ 2023 ರ ವರೆಗೆ 10.658 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಸಂಕಷ್ಟ ಜಲ ವರ್ಷಗಳಲ್ಲಿ ನೀರಿನ ಹಂಚಿಕೆ ಕುರಿತು ಸೂತ್ರ ರೂಪಿಸುವ ಬಗ್ಗೆ ಕಾವೇರಿ ಜಲ ನಿಯಂತ್ರಣಾ ಸಮಿತಿಯ (CWRC)/ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ (CWMA) ಸಭೆಗಳಲ್ಲಿ ಚರ್ಚಿಸಲಾಗುತ್ತಿದ್ದು, ಸಂಕಷ್ಟ ಹಂಚಿಕೆ ಸೂತ್ರವು ಅಂತಿಮವಾಗಬೇಕಿದೆ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ, ಜಲವರ್ಷ 2023-24 ಆರಂಭದಿಂದಲೂ ಸಂಕಷ್ಟ ಜಲ ವರ್ಷವಾಗಿದೆ. CWRC ಹಾಗೂ CWMA ಸಭೆಗಳಲ್ಲಿ ಕಾವೇರಿ ಜಲಾನಯನಗಳ ಜಲಾಶಯಗಳಲ್ಲಿ ಕಳೆದ 30 ವರ್ಷಗಳ ಸರಾಸರಿ ಒಳಹರಿವು, ಕಾಲಕಾಲಕ್ಕೆ ಉಂಟಾದ ಮಳೆಯ ಪ್ರಮಾಣ/ಕೊರತೆ, ಕಣಿವೆಯಲ್ಲಿನ ಪ್ರಮುಖ ಜಲಾಶಯಗಳಲ್ಲಿನ…
ಅಡುಗೆ ಮನೆಯಲ್ಲಿರುವ ಕೆಲ ಸಾಮಗ್ರಿಯಿಂದ ಆರೋಗ್ಯಕರ ಅಡುಗೆ ಮಾಡಿಕೊಂಡು ತಿನ್ನುತ್ತೇವೆ. ಕೆಲವು ಬಾರಿ ಜ್ವರ, ನೆಗಡಿ, ಕೆಮ್ಮು, ಗಾಯ ಇವುಗಳಿಗೆಲ್ಲ ಅಡುಗೆ ಮನೆಯಲ್ಲೇ ಔಷದಿ ಇರುತ್ತದೆ. ಆದರೆ ಅಡುಗೆ ಕೋಣೆಯಲ್ಲಿರುವ ಕೆಲ ವಸ್ತುಗಳು ಮಾತ್ರ, ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಅದು ಯಾವ ವಸ್ತು ಅಂತಾ ತಿಳಿಯೋಣ ಬನ್ನಿ.. ಅಲ್ಯೂಮಿನಿಯಂ ಪಾತ್ರೆ ಮತ್ತು ಅಲ್ಯೂಮಿನಿಯಂ ಫಾಯ್ಲ್. ಅಲ್ಯೂಮಿನಿಯಂ ಪೇಪರ್‌ನಲ್ಲಿ ಕೆಲವರು ಕೆಲವು ಆಹಾರ ಪದಾರ್ಥಗಳನ್ನು ಸುತ್ತಿಡುತ್ತಾರೆ. ಆದೆರೆ ಇದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು, ಇದರಿಂದ ಕ್ಯಾನ್ಸರ್‌ನಂಥ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ. ಅದೇ ರೀತಿ ಅಲ್ಯೂಮಿನಿಯಂ ಪಾತ್ರೆ ಕೂಡ ಹಾಗೆ. ಆ ಪಾತ್ರೆ ಬಳಸಿ, ಅಡುಗೆ ಮಾಡಿ, ಊಟ ಮಾಡುವುದರಿಂದ, ರೋಗ ರುಜಿನಗಳು ಬರುತ್ತದೆ. ಹಾಗಾಗಿ ಇದನ್ನು ಬಳಸಬೇಡಿ. ಮೈಕ್ರೋವೇವ್ ಓವನ್. ಇಂದಿನ ಕಾಲದಲ್ಲಿ ಓವನ್ ಬಳಸುವುದು ಶೋಕಿಯಾಗಿದೆ. ಆದರೆ ಇದನ್ನು ಬಳಸಿ, ಆಹಾರವನ್ನು ತಯಾರಿಸುವುದರಿಂದ, ಅಥವಾ ಇದರಲ್ಲಿ ಆಹಾರವನ್ನು ಬಿಸಿ ಮಾಡುವುದರಿಂದ, ನಮ್ಮ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಹೃದಯ ಸಮಸ್ಯೆ…
ಸಾಮಾನ್ಯವಾಗಿ ಮಹಿಳೆಯರು ಯಾವುದೇ ಆಹಾರವಾಗಲಿ ಫ್ರಿಡ್ಜ್‌ನಲ್ಲಿಟ್ಟರೆ ಬೇಗನೆ ಹಾಳಾಗುವುದಿಲ್ಲ ಎಂದು ಹೆಚ್ಚು ಇಲ್ಲೇ ಇಡುತ್ತಾರೆ. ಟೊಮೆಟೊ, ಈರುಳ್ಳಿ, ಬಾಳೆಹಣ್ಣು ಎಲ್ಲವನ್ನೂ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇರುತ್ತದೆ. ಆದರೆ ಕೆಲವೊಂದು ಆಹಾರಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದು ವಿಶವಾಗುತ್ತದೆ, ಆದ್ದರಿಂದ ಅಂಥ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡದಿದ್ದರೆ ಒಳ್ಳೆಯದು, ಇನ್ನು ಕೆಲವೊಂದು ಆಹಾರಗಳನ್ನು ಇಟ್ಟರೆ ಅವುಗಳನ್ನ 24 ಗಂಟೆಗಳಿಗೊಮ್ಮೆ ಸೇವಿಸಬೇಕು. ಯಾವ ಆಹಶರಗಳು ಫ್ರಿಡ್ಜ್‌ನಲ್ಲಿಟ್ಟರೆ ಅದು ವಿಷಕಾರಿ ಇಲ್ಲಿದೆ ಮಾಹಿತಿ:- ಬೆಳ್ಳುಳ್ಳಿ ಈರುಳ್ಳಿ ಶುಂಠಿ ಅನ್ನ ಇವುಗಳನ್ನು ಫ್ರಿಡ್ಜ್ ನಲ್ಲಿಟ್ಟು ಬಳಸಬೇಡಿ. ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ, ಆದರೆ ಅಂಥ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡಲೇಬೇಡಿ ಅಥವಾ ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡಿಟ್ಟ ಸುಲಿದ ಬೆಳ್ಳುಳ್ಳಿ ಖರೀದಿಸಲೇಬೇಡಿ. ಏಕೆಂದರೆ ಇಂಥ ಬೆಳ್ಳುಳ್ಳಿ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ. ಆದ್ದರಿಂದ ಯಾವಾಗಲೂ ಸಿಪ್ಪೆ ಸಹಿತ ಬೆಳ್ಳುಳ್ಳಿ ಖರೀದಿಸಿ ಅಡುಗೆ ಮಾಡುವಾಗ ಅಷ್ಟೇ ಬೆಳ್ಳುಳ್ಳಿಯ ಸುಪ್ಪೆ ಸುಲಿದು ಬಳಸಿ. ಈರುಳ್ಳಿಯನ್ನು ಕೂಡ ಫ್ರಿಡ್ಜ್‌ನಲ್ಲಿ ಇಡಲೇಬಾರದು. ಅಲ್ಲದೆ ಈರುಳ್ಳಿಯನ್ನು ಅರ್ಧ ಕತ್ತರಿಸಿ ಫ್ರಿಡ್ಜ್‌ನಲ್ಲಿ…
ಬೆಂಗಳೂರು:- ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಆಗಿರುತ್ತದೆ. ಒಬ್ಬರಿಗೆ ಒಳ್ಳೆಯ ಅನುಭವವಾದರೆ, ಇನ್ನೂ ಕೆಲವರಿಗೆ ಕೆಟ್ಟ ಅನುಭವವಾಗಿರುತ್ತದೆ. ಅದೇ ರೀತಿ ಬೆಂಗಳೂರಿನ ವ್ಯಕ್ತಿಯೊಬ್ಬರು ಇತ್ತೀಚೆಗೆ ವಾಯು ವಜ್ರ ಬಸ್‌ನಲ್ಲಿ ತಮಗಾದ ವಿಶಿಷ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಎಂಟಿಸಿ ತನಗಾಗಿ ಹೇಗೆ ಸೇವೆ ನೀಡಿತು ಎಂದು ಬರೆದು ಬಸ್ ಚಾಲಕ ಮತ್ತು ಕಂಡಕ್ಟರ್‌ಗೆ ಧನ್ಯವಾದ ತಿಳಿಸಿದ್ದಾರೆ. ಹರಿಹರನ್ ಎನ್ನುವ ವ್ಯಕ್ತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ.” ನಾನು ಏರ್‌ಪೋರ್ಟ್‌ನಿಂದ ಹಿಂದಿರುಗುವಾಗ, ಬಸ್‌ನಲ್ಲಿ ನಾನೊಬ್ಬನೇ ಇದ್ದರೂ ಸಹ ಇವರಿಬ್ಬರು ಜಂಟಲ್‌ಮೆನ್‌ಗಳು ಸಮಯಕ್ಕೆ ಸರಿಯಾಗಿ ಬಸ್ ಚಲಾಯಿಸಿದರು. ಜೊತೆಗೆ ಈ ಪ್ರಯಾಣದಲ್ಲಿ ನನಗೆ ಒಳ್ಳೆಯ ಕಂಪನಿ ನೀಡಿದರು. ಹಾಗೂ ಸುರಕ್ಷಿತವಾಗಿ ನನ್ನನ್ನು ಕರೆತಂದರು” ಎಂದು ಬಿಎಂಟಿಸಿ ವಜ್ರ ಬಸ್‌ನ ಚಾಲಕ ಹಾಗೂ ನಿರ್ವಾಹಕರ ಫೋಟೋ ಹಂಚಿಕೊಂಡಿದ್ದಾರೆ. ಈ ಸಂಚಾರ ದಟ್ಟಣೆಯಲ್ಲಿ ತುಂಬಿರುವ ಬೆಂಗಳೂರು ನಗರದಲ್ಲಿ ಈ ಬಸ್‌ನಲ್ಲಿ ನಾನೊಬ್ಬನೆ ಪ್ರಯಾಣಿಕನಾಗಿದ್ದು ಅಚ್ಚರಿ ಎನಿಸಿತು. ಆದರೆ ಚಾಲಕ ಹಾಗೂ…
ಕಷ್ಟುಪಟ್ಟ ಬೆಳೆದ ರಾಶಿ ಮಾಡಲು ಹೊಲದಲ್ಲಿ ಕುಡಿಟ್ಟ ರೈತನ ಮೆಕ್ಕೆಜೋಳ ತೆನೆಗೆ ದುಷ್ಕರ್ಮಿಗಳು ಮಧ್ಯರಾತ್ರಿ ಬೆಂಕಿ ಹಚ್ಚಿ ವಿಕೃತಿ ಮರೆದ ಘಟನೆ ನವಲಗುಂದದ್ದ ಹನಸಿ ಗ್ರಾಮದಲ್ಲಿ ನಡೆದಲ್ಲಿ. ಸುಮಾರು 2 ಲಕ್ಷಕ್ಲೂ ಅಧಿಕ ಬೆಲೆ ಬಾಳುವ ಮೆಕ್ಕೆಜೋಳ ತೆನೆ ಸುಟ್ಟು ಹಾಳಾಗಿದ್ದು, ದುಷ್ಕರ್ಮಿಗಳ ಅಟಹಾಸಕ್ಕೆ ಚೆನ್ನಪ್ಪ ಹುಡ್ಕೇರಿ ಕುಟುಂಬ ಈಗ ಕಣ್ಣಿರಲ್ಲಿ ಕೈ ತೊಳೆಯುವಮತಾಗಿದೆ. ಇನ್ನೂ ಇಂದು ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಚೆನ್ನಪ್ಪ ಹೊಲಕ್ಲೆ ಹೋಗಿದ್ದಾನೆ. ಆಗ ಬೆಂಕಿ ವಿಷಯ ಹೊರ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಐದು ಎಕರೆಯಲ್ಲಿ ಬೆಳದಿದ್ದ ಮೇಕೆಜೋಳವನ್ನು ರೈತ ಚೆನ್ನಪ್ಪ ರಾಶಿ ಮಾಡುವ ಉದ್ದೇಶದಿಂದ ಹೊಲದಲ್ಲಿ ತೆನೆಗಳನ್ನು ಜಮೆ ಮಾಡಿದನ್ನು. ಹೊಲದಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡ ದುಷ್ಕರ್ಮಿ ಖದೀಮರು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ಕುರಿತು ಈಗ ರೈತ ಕುಟುಂಬ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ಜೊತೆಗೆ ಪರಿಹಾರಲ್ಕೆ ಆಗ್ರಹಿಸಿದ್ದಾರೆ. ಇನೂ ಘಟನೆಯ ಕುರಿತು ನವಲಗುಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ- ನಮಗೆ ಸ್ವಾತಂತ್ರ್ಯ ಸಿಕ್ಕು 7 ದಶಕ ಕಳೆದಿದೆ..ಆದ್ರೆ ಇನ್ನು ದೇಶದ ಬಹುತೇಕ ಕಡೆ ಅಸ್ಪ್ರಶ್ಯತೆ ಜೀವಂತವಾಗಿದೆ.ಕೆಳಜಾತಿ ಮೇಲ್ಜಾತಿ ಅನ್ನೋ ಪೆಂಡಭೂತ ನಮ್ಮ ಸಮಾಜದಲ್ಲಿದೆ.ದಲಿತರು ಸವರ್ಣೀಯರು ನಡುವಿನ ಕಂದಕ ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿದೆ.ಇದಕ್ಕೆ ತಾಜಾ ಉದಾಹರಣೆಗೆ ಮತ್ತೊಂದು ಜಿಲ್ಲೆ ಸೇರಿದೆ.ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯಲ್ಲೂ ಈ ಸಾಮಾಜಿಕ ಪಿಡುಗು ಜೀವಂತವಾಗಿದೆ.. ಧಾರವಾಡ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತರಿಗೆ ಅಘೋಷಿತ ಬಹಿಷ್ಕಾರ ಹಾಕಲಾಗಿದೆ. ಗ್ರಾಮದ ಹೊಟೆಲ್, ಕಟಿಂಗ್,ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇಲ್ಲ.ಇದು ಆ ಗ್ರಾಮದ ಯುವಕರನ್ನ ಕೆರಳಿಸಿದೆ.ನಮಗೂ ಸಮಾನತೆ ಬೇಕು ಎನ್ನುತ್ತಿದ್ದಾರೆ. ಒಂದು ಕಡೆ ಹೊಟೆಲ್ ನಲ್ಲಿ ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ಉಪಹಾರ. ಇನ್ನೊಂದು ಕಡೆ ಕಟಿಂಗ್ ಶಾಪ್ ನಲ್ಲಿ ಹೋದ್ರೆ ಪಂಚಾಯತ್ ಗೆ ಹೋಗಿ ಎನ್ನುತ್ತಿರೋ ಕಟಿಂಗ್ ಅಂಗಡಿ ಮಾಲೀಕರು..ಮತ್ತೊಂದು ಕಡೆ ತಮಗಾದ ಅನ್ಯಾಯ ತೋಡಿಕೊಳ್ತಿರೋ ದಲಿತ ಸಮುದಾಯದ ಜನ..ಎಸ್ ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ಜಿಲ್ಲೆಯಲ್ಲಿ.ಎಸ್ ಧಾರವಾಡ ಜಿಲ್ಲೆಯ ರೊಟ್ಟಿಗವಾಡ ಗ್ರಾಮದಲ್ಲಿ ಅಸ್ಪ್ರಶ್ಯತೆ ಅನ್ನೋ ಪೆಂಡಭೂತ ಇನ್ನು ಜೀವಂತವಾಗಿದೆ.ಅಂಬೇಡ್ಕರ್…
ಬೆಂಗಳೂರು: ಸಂಸತ್ತಿನ ಮೇಲೆ ದಾಳಿಯಾಗಲು ಸಹಕರಿಸಿದ ಸಂಸದ ಪ್ರತಾಪ್ ಸಿಂಹಾ ಅವರನ್ನು ಅಮಾನತು ಮಾಡುವುದಿರಲಿ ಕನಿಷ್ಠ ವಿಚಾರಣೆಗೂ ಒಳಪಡಿಸಲಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದೆ! ಭದ್ರತಾ ಲೋಪವನ್ನು ಚರ್ಚಿಸಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ನ 5 ಸಂಸದರನ್ನು ಕಲಾಪದಿಂದ ಅಮಾನಾತು ಮಾಡಲಾಗಿದೆ. ಭದ್ರತಾ ಲೋಪದ ಬಗ್ಗೆ ಮಾತನಾಡಲು ಬಿಜೆಪಿಗೆ, ಕೇಂದ್ರ ಸರ್ಕಾರಕ್ಕೆ ಹಾಗೂ ಲೋಕಸಭಾ ಸ್ಪೀಕರ್ ಗೆ ಯಾಕಿಷ್ಟು ಭಯ. ಇದು ಬಿಜೆಪಿ ಪ್ರಾಯೋಜಿತ ಘಟನೆಯೇ? ಎಂದು ಕಿಡಿಕಾರಿದ್ದಾರೆ.