ಬೆಂಗಳೂರು ಗ್ರಾಮಾಂತರ: ತೀವ್ರ ಸಂಚಲನ ಮೂಡಿಸಿದ ಸೂಲಿಬೆಲೆಯಲ್ಲಿ ನಡೆದ ಜೋಡಿ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು,ಜೋಡಿ ಕೊಲೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಸೈಲೆಂಟ್ ಆಗಿಯೇ ವಿಚಾರಣೆ ನಡೆಸಿ ಕೊಲೆ ಪ್ರಕರಣಕ್ಕೆ ರೋಚಕ ತಿರುವೊಂದನ್ನು ಕೊಟ್ಟಿದ್ದಾರೆ. ಸೂಲಿಬೆಲೆ ಗ್ರಾಮದಲ್ಲಿ ಕಳೆದ 10ರಂದು ರಾಮಕೃಷ್ಣಪ್ಪ ಮತ್ತು ಮುನಿರಾಮಕ್ಕ ಎಂಬ ವೃದ್ಧ ದಂಪತಿ ಬರ್ಬರವಾಗಿ ಕೊಲೆಯಾಗಿದ್ದರು. ಜತೆಗೆ ಕೊಲೆ ವಿಚಾರ ತಿಳಿದು ಬಂದಿದ್ದ ವೃದ್ಧರ ಹೆಣ್ಮಕ್ಕಳು ಆಸ್ತಿಗಾಗಿ ಅಣ್ಣನೇ ಕೊಲೆ ಮಾಡಿದ್ದಾನೆ ಎಂದು ನರಸಿಂಹಮೂರ್ತಿ ಮನೆ ಮೇಲೆ ದಾಳಿ ನಡೆಸಿ ಆಕ್ರೋಶ ಹೊರ ಹಾಕಿದ್ದರು. ಹೀಗಾಗಿ ಕೊಲೆಯಾದ ವೃದ್ಧ ದಂಪತಿಯ ಮಗ ನರಸಿಂಹಮೂರ್ತಿಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ ಪೊಲೀಸರಿಗೆ ಕೊಲೆ ಕೇಸ್‌ನಲ್ಲಿ ತಿರುವು ಸಿಕ್ಕಿದೆ. ಆ ವೃದ್ಧ ದಂಪತಿಯನ್ನು ಕೊಲೆ ಮಾಡಿದ್ದು ನರಸಿಂಹಮೂರ್ತಿ ಅಲ್ಲ ಬದಲಾಗಿ ಆತನ ಪತ್ನಿ ಭಾಗ್ಯಮ್ಮ, ಮಗಳು ವರ್ಷಾ ಹಾಗೂ ಅಪ್ರಾಪ್ತ ಮಗ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ನರಸಿಂಹಮೂರ್ತಿ ಟೂರರ್ಸ್ ಆ್ಯಂಡ್ ಟ್ರಾವೇಲ್ಸ್,…
Author: AIN Author
ಬಿಗ್ ಬಾಸ್ ಮನೆಯಿಂದ (Bigg Boss Kannada 10) 9ನೇ ವಾರ ಸ್ನೇಹಿತ್ ಔಟ್ ಆದರು. ಸ್ನೇಹಿತ್ (Snehith Gowda) ಎಲಿಮಿನೇಟ್ ಆದ್ಮೇಲೆ ನಮ್ರತಾ ಬಿಕ್ಕಿ ಬಿಕ್ಕಿ ಅತ್ತರು. ಸ್ನೇಹಿತ್‌ನ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಅಂತ್ಹೇಳಿ ನಮ್ರತಾ ಕಣ್ಣೀರು ಸುರಿಸಿದ್ದರು. ಇದೀಗ ಪರೋಕ್ಷವಾಗಿ ಸ್ನೇಹಿತ್‌ಗೆ ನಮ್ರತಾ (Namratha Gowda) ‘ಐ ಲವ್ ಯೂ’ ಎಂದಿದ್ದಾರೆ. ಈ ವಾರ ಸ್ಕೂಲ್ ಟಾಸ್ಕ್ ಚಾಲ್ತಿಯಲ್ಲಿದೆ. ಸ್ಪರ್ಧಿಗಳು ಶಿಕ್ಷಕರಾಗಿ, ವಿದ್ಯಾರ್ಥಿಗಳಾಗಿ ಬದಲಾಗಿದ್ದಾರೆ. ನಮ್ರತಾ ಶಾಲಾ ಪುಟ್ಟ ಬಾಲಕಿಯ ಪಾತ್ರ ನಿರ್ವಹಿಸುತ್ತಿದ್ದರು. ಈ ವೇಳೆ, ಸ್ಲೇಟ್ ಮೇಲೆ ಐ ಲವ್ ಯೂ ಎಂದು ನಮ್ರತಾ ಬರೆದಿದ್ದಾರೆ. ಆಗ, ಶಿಕ್ಷಕಿಯ ಪಾತ್ರ ನಿರ್ವಹಿಸುತ್ತಿದ್ದ ತನಿಷಾ (Tanisha Kuppanda) ಯಾರಿಗಾಗಿ ಬರೆದಿದ್ದು? ಅಂತ ಕೇಳಿದರು. ಅದಕ್ಕೆ, ಟ್ರಾನ್ಸ್ಫರ್ ಆಗಿ ಹೋದ ಹುಡುಗನಿಗಾಗಿ ಬರೆದಿದ್ದು ಎಂದು ಎಲಿಮಿನೇಟ್ ಆದ ಸ್ನೇಹಿತ್ ಕುರಿತಾಗಿ ಅಂತ ನಮ್ರತಾ ಹೇಳುತ್ತಾರೆ. ಅಲ್ಲಿಗೆ, ಸ್ನೇಹಿತ್‌ಗೆ ನಮ್ರತಾ ‘ಐ ಲವ್ ಯೂ’ ಎಂದು ಬರೆದಿದ್ದು ಅಂತ ಸ್ಪಷ್ಟವಾಯಿತು. ಬಿಗ್…
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಬಘೀರ (Bagheera) ಸಿನಿಮಾ ಟೀಮ್ ನಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡವು, ಅದರ ಮೊದಲ ನೋಟವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ. ಇದೇ ಡಿಸೆಂಬರ್ 17ಕ್ಕೆ ಸಿನಿಮಾದ ಟೀಸರ್ (Teaser) ರಿಲೀಸ್ ಮಾಡುವುದಾಗಿ ನಿರ್ಮಾಣ ಸಂಸ್ಥೆ ಘೋಷಿಸಿದೆ. ಉಗ್ರಂ, ಭರಾಟೆ, ಮದಗಜ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಬಘೀರನಾಗಿ ಮಿಂಚಲು ರೆಡಿಯಾಗಿದ್ದಾರೆ. ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಫರೆಂಟ್ ಸ್ಟೋರಿ ಮೂಲಕ ಮೋಡಿ ಮಾಡೋಕೆ ಶ್ರೀಮುರಳಿ ರೆಡಿಯಾಗಿದ್ದಾರೆ. ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು. ಈ ಚಿತ್ರದ ಮೇಲೆ…
ಬೆಳಗಾವಿ: ನಾನು ದೇಶೀಯ ಆಕಳಿನ ತುಪ್ಪವನ್ನು (Ghee) ಕೆಜಿಗೆ 5,000 ರೂ.ನಂತೆ ಮಾರುತ್ತಿದ್ದೇನೆ. ನನ್ನ ಬಳಿ ಗಿರ್ ತಳಿಯ 250 ಹಸುಗಳಿವೆ. ಅದರ ತುಪ್ಪವನ್ನು ಕೆಜಿಗೆ 2,500 ರೂ. ನಂತೆ ಮಾರುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ (Belagavi) ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಜೋಳ ಬೆಳೆದರೆ ಗೋ ಸಂಪತ್ತು ಉಳಿಯುತ್ತದೆ. ತೊಗರಿಯಿಂದ ಗೋ ಸಂಪತ್ತು ಉಳಿಯುವುದಿಲ್ಲ. ನನ್ನದೇ ಒಂದು ಗೋಶಾಲೆ ಇದೆ. ತುಪ್ಪ ಮಾರುವುದರೊಂದಿಗೆ ವಿಭೂತಿ, ಕರ್ಪೂರ ಹಾಗೂ ಕುಂಕುಮವನ್ನು ತಯಾರಿಸುತ್ತಿದ್ದೇನೆ. ಅಲ್ಲದೇ ಸಾಬೂನು ಕೂಡಾ ತಯಾರು ಮಾಡುತ್ತಿದ್ದೇನೆ. ಗೋಮೂತ್ರವನ್ನು ಸಹ 130 ರೂ.ಗೆ ಮಾರುತ್ತಿದ್ದೇನೆ. ಆಕಳಿನ ಮಜ್ಜಿಗೆಯನ್ನು 30 ರೂ.ಗೆ ಹಾಗೂ ದೇಶೀಯ ಆಕಳಿನ ಹಾಲನ್ನು 100 ರೂ.ಗೆ ಮಾರುತ್ತಿದ್ದೇನೆ. ನಮ್ಮಲ್ಲಿ ಗೋ ಸಂಪತ್ತು ಉಳಿಯ ಬೇಕಾದರೆ ಜೋಳಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಎಂದರು. https://ainlivenews.com/do-you-know-why-you-should-not-cut-your-nails-at-night-heres-why/ ನಮ್ಮ ಭಾಗದಲ್ಲಿ ಅಕ್ಕಿಯ ಬದಲಾಗಿ ಜೋಳ ಕೊಡಿ. 10…
ಬೆಂಗಳೂರು: ಖಾಸಗಿ ಶಾಲೆಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದ್ದು ಖಾಸಗಿ ಶಾಲೆಗಳ ಮೇಲೆ RTO ದಾಳಿ ನಡೆಸಿದೆ. ನಗರದ ವಿವಿಧ ಖಾಸಗಿ ಶಾಲಾ ವಾಹನಗಳ ಮೇಲೆ ದಾಳಿ ನಡೆಸಿದ್ದು ನಿಯಮ ಉಲ್ಲಂಘನೆ ಮಾಡುತ್ತಿರುವ ನೂರಾರು ಬಸ್ ಗಳ ವಿರುದ್ಧ ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶೋಭಾ ನೇತೃತ್ವದಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ಖಾಸಗಿ ಬಸ್ ಗಳ ನಿಯಮ ಉಲ್ಲಂಘನೆ ಖಾಸಗಿ ಶಾಲಾ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಪತ್ತೆ ಒಮ್ನಿ ವಾಹನಗಳಲ್ಲಿ ನಿಯಮಮೀರಿ ಮಕ್ಕಳನ್ನು ಪಿಕ್ ಡ್ರಾಪ್ ಮಾಡುತ್ತಿರುವ ಶಾಲೆಗಳು ನಿಯಮ ಉಲ್ಲಂಘನೆ ಮಾಡಿದ ಒಮ್ನಿ, ಬಸ್ ಗಳನ್ನು ಸೀಜ್ ಮಾಡಿದ ಅಧಿಕಾರಿಗಳು ಜಯನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಶಾಲೆಗಳ ಬಸ್ಗಳನ್ನ ತೀವ್ರ ತಪಾಸಣೆ ಮಾಡುತ್ತಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಬಸ್ ಒಮ್ಮಿ ವಾಹನಗಳಲ್ಲಿ ಸೇಫ್ಟಿ ಇಲ್ಲ ಅಂತ ಸಾಲು ಸಾಲು ಹೀಗಾಗಿ ವಿವಿಧ ಶಾಲೆಗಳ ಬಸ್ ಗಳನ್ನ ತಪಾಸಣೆ ಮಾಡ್ತಿರೋ ಸಾರಿಗೆ…
ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ (Malashree) ಅವರು ಪುತ್ರಿಯ ಜೊತೆ ಸಿದ್ಧಿವಿನಾಯಕ ದೇವರ ದರ್ಶನ ಪಡೆದಿದ್ದಾರೆ. ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಪಡ್ಡೆಹುಡುಗರ ಕನಸಿನ ರಾಣಿಯಾಗಿ ಮರೆದವರು. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಾ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಜ್ಯೂ.ಮಾಲಾಶ್ರೀ ಆರಾಧಾನಾ (Aradhana Ram) ಕೂಡ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ. ಈ ಬೆನ್ನಲ್ಲೇ ದೇವರ ಸನ್ನಿಧಿಗೆ ಮಾಲಾಶ್ರೀ-ಆರಾಧಾನಾ ಭೇಟಿ ನೀಡಿದ್ದಾರೆ. 5ಕ್ಕೂ ಹೆಚ್ಚು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿರುವ ಸಿದ್ಧಿ ವಿನಾಯಕನ ದೇವಸ್ಥಾನಕ್ಕೆ ಮಾಲಾಶ್ರೀ ಕುಟುಂಬವು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಬಾಲಿವುಡ್ ನಟಿ, ಹಾಗೂ ಡಾನ್ಸರ್ ಜರೀನ್ ಖಾನ್ ಅವರಿಗೆ ಷರತ್ತುಬದ್ಧ ಜಾಮೀನು (Bail) ಸಿಕ್ಕಿದೆ. ವಿದೇಶ ಪ್ರವಾಸ ಮಾಡದಂತೆ ನಿರ್ಬಂಧದ ಜೊತೆಗೆ ಮೂವತ್ತು ಸಾವಿರ ರೂಪಾಯಿಗಳ ಬಾಂಡ್ ಅನ್ನು ಭದ್ರತೆಗೆ ನೀಡುವಂತೆ ಆದೇಶಿಸಲಾಗಿದೆ. ನಟಿ ಜರೀನ್ ಖಾನ್‌ಗೆ (Zareen Khan) ಈ ಹಿಂದೆ ಸಂಕಷ್ಟ ಎದುರಾಗಿತ್ತು. ವಂಚನೆ ಪ್ರಕರಣದ ಸಂಬಂಧಿಸಿದಂತೆ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ವಂಚನೆ ಪ್ರಕರಣ ಸಂಬಂಧವಾಗಿ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು.. 2018ರಲ್ಲಿ ಕೋಲ್ಕತಾದಲ್ಲಿ (Kolkata) ಆಯೋಜಿಸಿದ್ದ ದುರ್ಗಾ ಪೂಜೆ ಕಾರ್ಯಕ್ರಮದಲ್ಲಿ ಜರೀನ್‌ಗೆ ಆಹ್ವಾನ ನೀಡಲಾಗಿತ್ತು. ಈ ಸಮಾರಂಭಕ್ಕಾಗಿ ಸಂಭಾವನೆ ಕೂಡ ನೀಡಲಾಗಿತ್ತು. ಆದರೆ ಅಂದು ನಟಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ವಿಚಾರವಾಗಿ ನಟಿಯ ವಿರುದ್ದ ಆಯೋಜಕರು ಎಫ್‌ಐಆರ್ ದಾಖಲಿಸಿದ್ದರು. 2018ರಿಂದ ದಾಖಲಾದ ಪ್ರಕರಣದ ಕುರಿತು ನಟಿ ಕೋರ್ಟ್ ವಿಚಾರಣೆಗೆ ಹಾಜರಾಗಲಿಲ್ಲ.
ಕಲಬುರಗಿ: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿಅವರ ತಾಯಿ ಹಿಟ್ ಆ್ಯಂಡ್ ರನ್ಗೆ ಬಲಿಯಾಗಿದ್ದಾರೆ. ಕಲಬುರಗಿಯ ಸೇಡಂ ರಿಂಗ್ ರಸ್ತೆಯಲ್ಲಿರುವ ಟೊಯೋಟಾ ಶೋರೂಂ ಬಳಿ ಅರವಿಂದ ಅರಳಿ ಅವರ ತಾಯಿ ಸುಮಿತ್ರಾಗೆ ಬೈಕ್ ಬಂದು ಗುದ್ದಿದೆ. ಪರಿಣಾಮ ಸುಮೀತ್ರಾಬಾಯಿ (75) ಮೃತಪಟ್ಟಿದ್ದಾರೆ. https://ainlivenews.com/do-you-know-why-you-should-not-cut-your-nails-at-night-heres-why/ ಬೀದರ್‌ನಿಂದ ಕಲಬುರಗಿಯಲ್ಲಿರುವ ಅಳಿಯನ ಮನೆಗೆ ಬಂದಿದ್ದ ಸುಮಿತ್ರಾ ಅವರು, ಟೊಯೋಟಾ ಶೋರೂಂ ಬಳಿ ರಸ್ತೆ ದಾಟುತ್ತಿದ್ದಾಗ ಅಪರಿಚಿತ ಬೈಕ್ ಬಂದು ಡಿಕ್ಕಿ ಹೊಡಿದೆ. ಬೈಕ್ ಗುದ್ದಿದ ರಭಸಕ್ಕೆ ಸುಮಿತ್ರಾ ಸ್ಥಳದಲ್ಲೇ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾಕಿಂಗ್ ಸ್ಟಾರ್ ಯಶ್ (Yash) ಅವರು ಅದೆಷ್ಟೇ ಬ್ಯುಸಿಯಾಗಿದ್ದರು. ಕುಟುಂಬದಲ್ಲಿ ವಿಚಾರದಲ್ಲಿ ರಾಜಿ ಆಗೋ ಮಾತೇಯಿಲ್ಲ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ಹೊಸ ಸಿನಿಮಾ ಕೆಲಸದ ಬ್ಯುಸಿ ಶೆಡ್ಯೂಲ್ ನಡುವೆಯೂ ಮುದ್ದು ಮಗಳು ಐರಾ (Ayra Yash) ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಯಶ್-ರಾಧಿಕಾ ಆಚರಿಸಿದ್ದಾರೆ ಯಶ್-ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಬರ್ತ್‌ಡೇಯನ್ನು ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಡಿಸೆಂಬರ್ 2ರಂದು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಯಿತು. ಐರಾಸ್ ವಿಂಟರ್ ಲ್ಯಾಂಡ್ ಥೀಮ್‌ನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಇದು ಐರಾಗೆ 5ನೇ ವರ್ಷದ ಹುಟ್ಟುಹಬ್ಬದ ಸ್ಪೆಷಲ್ ಆಗಿದೆ. 2.12.2028ರಂದು ನನ್ನ ಏಂಜಲ್ ನಮ್ಮ ಜೀವನಕ್ಕೆ ನಂದ ಸ್ಪೆಷಲ್ ಡೇ ಇದು. ಸಂತೋಷವನ್ನು ತಂದುಕೊಟ್ಟ ಮುದ್ದು ಮಗಳಿಗೆ 5 ವರ್ಷವಾಗಿದೆ ಅಂದರೆ ನಂಬಲು ಆಗ್ತಿಲ್ಲ. ಲವ್ ಯೂ ಮೈ ಲಿಟಲ್ ಗರ್ಲ್ ಎಂದು ನಟಿ ರಾಧಿಕಾ ಪಂಡಿತ್ (Radhika Pandit) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಐರಾ ಹುಟ್ಟುಹಬ್ಬದ ಸೆಲೆಬ್ರೇಶನ್‌ನ ಸ್ಪೆಷಲ್ ವಿಡಿಯೋ ಕೂಡ ನಟಿ ಶೇರ್…
ನವದೆಹಲಿ: ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಜಿಗಿದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಪ್ರಕರಣದ ಕುರಿತು ಭದ್ರತಾ ಲೋಪಕ್ಕೆ (Security Breach) ಸಂಬಂಧಿಸಿದಂತೆ ಕನಿಷ್ಠ ಎಂಟು ಲೋಕಸಭಾ ಸಿಬ್ಬಂದಿಯನ್ನು (Lok Sabha Personnel) ಅಮಾನತುಗೊಳಿಸಲಾಗಿದೆ. ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ ಒಟ್ಟು ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸತ್ (Parliament) ಭವನದಲ್ಲಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ಪಾಸ್ ಪಡೆದು ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಸಂದರ್ಶಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಇನ್ನಿಬ್ಬರು ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಐವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನೋರ್ವ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರಿದಿದೆ.ಬಂಧಿತ ಆರೋಪಿಗಳನ್ನು ಸಾಗರ್ ಶರ್ಮಾ, ಮನೋರಂಜನ್, ನೀಲಂ ಆಜಾದ್, ವಿಕ್ಕಿ ಶರ್ಮಾ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ.…