ಬೆಂಗಳೂರು: ನಾಳೆಯಿಂದ ಬೆಂಗಳೂರು- ಮಂಗಳೂರು ರೈಲು ರದ್ದು ಡಿಸೆಂಬರ್ 14 ರಿಂದ ಡಿಸೆಂಬರ್ 22ರ ವರೆಗೆ ರೈಲು ಸಂಚಾರ ರದ್ದು ಹಾಸನ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಯಾರ್ಡ್ ಮರು ನಿರ್ಮಾಣ ಕಾಮಗಾರಿ ಹಿನ್ನೆಲೆ ಹೀಗಾಗಿ ನಾಳೆಯಿಂದಲೇ ಮಂಗಳೂರು- ಬೆಂಗಳೂರು ರೈಲು ಸಂಚಾರ ರದ್ದು ರೈಲು ಸಂಚಾರ ರದ್ದುಗೊಳಿಸುವುದರ ಬಗ್ಗೆ ನೈಋತ್ಯ ರೈಲ್ವೆಯಿಂದ ಮಾಹಿತಿ ಪ್ರಯಾಣಿಕರ ಗಮನಕ್ಕೆ ಡಿಸೆಂಬರ್ 14 ರಿಂದ 18 ರ ಅವಧಿಯಲ್ಲಿ ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಸಂಜೆ 6 ರಿಂದ ರಾತ್ರಿ 8 ರವರೆಗೆ ಲೈನ್ ಬ್ಲಾಕ್, ಸಿಗ್ನಲ್ ಮತ್ತು ದೂರಸಂಪರ್ಕ ಬ್ಲಾಕ್ ಜಾರಿಯಲ್ಲಿರಲಿದೆ ಈ ಸಮಯದಲ್ಲಿ ರೈಲು ಸಂಚಾರಕ್ಕೆ ಹಾಸನದಲ್ಲಿ ಯಾವುದೇ ರೈಲು ಮಾರ್ಗಗಳು ಲಭ್ಯವಿರುವುದಿಲ್ಲ ಡಿಸೆಂಬರ್ 19 ರಿಂದ ಡಿಸೆಂಬರ್ 22 ರವರೆಗೆ ಎಂಜಿನಿಯರಿಂಗ್ ಕೆಲಸಕ್ಕಾಗಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಟ್ರಾಫಿಕ್ ಬ್ಲಾಕ್ ಈ ಅವಧಿಯಲ್ಲಿ ಯಾವುದೇ ರೈಲುಗಳು ಕಾರ್ಯ ನಿರ್ವಹಿಸುವುದಿಲ್ಲ ಈ ಬಗ್ಗೆ ನೈರುತ್ಯ ರೈಲ್ವೆ…
Author: AIN Author
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ-20 ಪಂದ್ಯ ಇಲ್ಲಿನ ಗೆಬರ್ಹದಲ್ಲಿರುವ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ನಡೆಯಲಿದೆ. ಭಾನುವಾರ ನಡೆಯಬೇಕಿದ್ದ ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದರಿಂದ ಕ್ರಿಕೆಟ್ ಅಭಿಮಾನಿಗಳು ನಿರಾಸೆಗೊಂಡಿದ್ದರು. 3 ಪಂದ್ಯಗಳ ಸರಣಿ ಇದಾಗಿದ್ದು, ಭಾರತಕ್ಕೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇಂದಿನ ಪಂದ್ಯ ನಡೆಯುವ ಗೆಬರ್ಹಾದಲ್ಲಿಯೂ ಮೋಡ ಕವಿದ ವಾತಾವರಣವಿದೆ. ಹೀಗಿರುವಾಗ ಇಂದಿನ ಪಂದ್ಯವೂ ಮಳೆಯಿಂದಾಗಿ ರದ್ದಾಗುವ ಸಾಧ್ಯತೆಯಿದೆ. ಶೇ.60ತರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಆಫ್ರಿಕನ್ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗಬಾರದು ಎಂದು ಪ್ರಾರ್ಥಿಸುತ್ತಿದ್ದಾರೆ. ಪಂದ್ಯ ಆರಂಭ : ರಾತ್ರಿ 8.30 (ಭಾರತೀಯ ಕಾಲಮಾನ) ಸ್ಥಳ : ಸೇಂಟ್ ಜಾರ್ಜ್ ಪಾರ್ಕ್, ಗೆಬರ್ಹಾ, ದಕ್ಷಿಣ ಆಫ್ರಿಕಾ ಪ್ರಸಾರ ಹಕ್ಕು : ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್. (ಸ್ಟಾರ್ ಸ್ಪೋರ್ಟ್ಸ್ ಹಾಗೂ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಪಂದ್ಯ ವೀಕ್ಷಿಸಬಹುದು) ಭಾರತ ತಂಡ ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿ.ಕೀ.), ಜಿತೇಶ್ ಶರ್ಮಾ (ವಿ.ಕೀ.), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್,…
ಹರಿಣಗಳ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ರಿಂಕು ಸಿಂಗ್ ಬೆಂಕಿ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅದರಲ್ಲೂ ರಿಂಕು ಸಿಂಗ್ ಸಿಡಿಸಿದ ಸಿಕ್ಸರ್ ಕ್ರಿಡಾಂಗಣದ ಮೀಡಿಯಾ ಬಾಕ್ಸ್ನ ಗಾಜು ಪುಡಿಪುಡಿ ಆಯಿತು. ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಮ್ ಎಸೆತದಲ್ಲಿ ರಿಂಕು ಸಿಂಗ್ ಸಿಡಿಸಿದ ಭರ್ಜರಿ ಸಿಕ್ಸರ್ ಮೀಡಿಯಾ ಬಾಕ್ಸ್ಗೆ ಬಡಿಯಿತು. ಇರದಿಂದ ಅದರ ಗಾಜು ಒಡೆದು ಹೋಯಿತು. ಇನ್ನೂ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಡಿ-20 ಪಂದ್ಯಕ್ಕೂ ನಳೆ ಅಡ್ಡಿಯಾಯಿತು. 19.3 ಓವರ್ಗಳಲ್ಲಿ ಭಾರತ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದ್ದಾಗ ಗೆಬರ್ಹಾದಲ್ಲಿರುವ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ಜೋರು ಮಳೆಸುರಿಯತೊಡಗಿತು. ಹೀಗಾಗಿ, ಅಂಪೈರ್ಗಳು ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಭಾರತಕ್ಕೆ ರಿಂಕು, ಸೂರ್ಯ ಆಸರೆ ಆರಂಭಿಕ ಆಘಾತ ಕಂಡಿದ್ದ ಭಾರತಕ್ಕೆ ಆಸರೆಯಾಗಿದ್ದು ನಾಯಕ ಸೂರ್ಯಕುಮಾರ್ ಯಾದವ್ (56) ಹಾಗೂ ಗ್ರೇಟ್ ಫಿನಿಷರ್ ರಿಂಕು ಸಿಂಗ್ (68*) ಅವರ ಭರ್ಜರಿ ಆಟ. ಇವರಿಬ್ಬರ ಬೊಂಬಾಟ್ ಆಟದಿಂದ ಭಾರತ ತಂಡದ ಮೊತ್ತ 150 ರನ್ಗಳ ಗಡಿ ದಾಡಿತು.…
ಬೆಳಗಾವಿ: ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಸಿಎಂ ಸಿದ್ದರಾಮಯ್ಯ ಕೂಡಲೇ 500 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಅಂತ ಬಿಜೆಪಿ ಸದಸ್ಯ ರವಿಕುಮಾರ್ (Ravi Kumar) ಆಗ್ರಹಿಸಿದ್ದಾರೆ. ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ರವಿಕುಮಾರ್, ಬೆಂಗಳೂರಿನಲ್ಲಿ ಈಡಿಗ, ಬಿಲ್ಲವ ಸಮುದಾಯದ ಸಮಾವೇಶ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರು ನಾರಾಯಣಗುರು ನಿಗಮನಕ್ಕೆ 500 ಕೋಟಿ ಬಿಡುಗಡೆ ಮಾಡಿ ಅಂದರೆ ಅಧಿವೇಶನ ಇದೆ ಅಂತ ಹೇಳಿ ಘೋಷಣೆ ಮಾಡಿರಲಿಲ್ಲ. ಆದರೆ ಹುಬ್ಬಳ್ಳಿಯಲ್ಲಿ ನಡೆದ ಅಲ್ಪಸಂಖ್ಯಾತ ಸಮುದಾಯ ಸಮಾವೇಶದಲ್ಲಿ 10 ಸಾವಿರ ಕೋಟಿ ಕೊಡೋದಾಗಿ ಘೋಷಣೆ ಮಾಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಘೋಷಣೆ ಮಾಡಿ ನಾರಾಯಣಗುರು ನಿಗಮಕ್ಕೆ 500 ಕೋಟಿ ಬಿಡುಗಡೆ ಮಾಡದೇ ಹೋದರೆ ಹೇಗೆ ಅಂತ ಪ್ರಶ್ನೆ ಮಾಡಿದರು. https://ainlivenews.com/see-how-hot-and-hot-this-cold-can-be/ ಸಿದ್ದರಾಮಯ್ಯ (Siddaramaiah) ಅವರ ಈ ನಡೆ ಹಿಂದುಳಿದ ವರ್ಗಕ್ಕೆ ಮಾಡಿದ ಅಪಮಾನ, ಅನ್ಯಾಯ. ಇಂದು ಅಥವಾ ನಾಳೆ ಒಳಗೆ ಸದನದಲ್ಲಿ ನಾರಾಯಣಗುರು ನಿಗಮಕ್ಕೆ 500 ಕೋಟಿ ಘೋಷಣೆ ಮಾಡಬೇಕು ಅಂತ…
ಬೆಂಗಳೂರು: “ನಾವು ಕೊಟ್ಟ ಮಾತಿನಂತೆ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಯುವನಿಧಿ ಯೋಜನೆ ಜಾರಿ ಪ್ರಕ್ರಿಯೆ ಆರಂಭಿಸುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸುವರ್ಣಸೌಧದಲ್ಲಿ ಮಾಧ್ಯಮಗಳು, ಡಿ. 21ರಿಂದ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ್ದು ಹೀಗೆ: “ಈ ಯೋಜನೆ ಜಾರಿಗೆ ತಾಂತ್ರಿಕ ವಿಚಾರವಾಗಿ ಚರ್ಚೆ ಮಾಡಿದ್ದು, ಅನುಷ್ಠಾನದ ಜವಾಬ್ದಾರಿಯನ್ನು ಕೌಶ್ಯಲ್ಯಾಭಿವೃದ್ಧಿ ಸಚಿವರಿಗೆ ನೀಡಿದ್ದೇವೆ. ಜನವರಿಯಲ್ಲಿ ಈ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಅಧಿಕೃತ ದಿನಾಂಕವನ್ನು ಸಚಿವರು ಪ್ರಕಟಿಸಲಿದ್ದಾರೆ.” ಬೆಳಗಾವಿ ಅಧಿವೇಶನ ಒಂದು ವಾರ ಮುಂದುವರಿಸಿ ಉತ್ತರ ಕರ್ನಾಟಕ ಸಮಸ್ಯೆ ಕುರಿತು ಚರ್ಚೆ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, “ನಾವು ಇಲ್ಲಿ ಅಧಿವೇಶನ ಕರೆದಿರುವುದು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು. ಆದರೆ ಬಿಜೆಪಿಯವರು ಏನು ಮಾಡುತ್ತಿದ್ದಾರೆ? ಕೇಂದ್ರ ಸರ್ಕಾರ ಒಂದು ರೂಪಾಯಿ ಬರ ಪರಿಹಾರ ನೀಡಿಲ್ಲ. ನರೇಗಾ ಯೋಜನೆಯಡಿ ಇರುವ 100 ಕೂಲಿ ದಿನಗಳನ್ನು 150ಕ್ಕೆ ಏರಿಸಲು…
ಬೆಂಗಳೂರು: ಹಿರಿಯ ನಟಿ ಲೀಲಾವತಿಯವರನ್ನ ನೋಡಿಕೋಳ್ಳುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.ಚಿಕ್ಕ ವಯಸ್ಸಿನಿಂದ ಲೀಲಾವತಿ ಜೊತೆಗೆ ಇದ್ದ ಬಂಗಾರಮ್ಮ 65 ಎಂಬುವರು ಸಾವನ್ನಪ್ಪಿದ್ದಾರೆ. ಚೆನೈನಲ್ಲಿ ಲೀಲಾವತಿಯವರ ಜೊತೆಗೆ ಇದ್ದ ಮಹಿಳೆ ಲೀಲಾವತಿಯವರು ಎಲ್ಲಿ ಹೋದರು ಜೊತೆಗೆ ಇರುತ್ತಿದ್ದ ಮಹಿಳೆ ಬಂಗಾರಮ್ಮಕ್ಯಾನ್ಸರ್ ನಿಂದ ಬಳಲುತ್ತಿದ್ದು ವಿನೋದ್ ರಾಜ್ ನೋಡಿಕೊಳ್ಳು ತಿದ್ದರು ಮೈಲನಹಳ್ಳಿ ತೋಟದಲ್ಲಿ ಸುಮಾರು 25 ವರ್ಷಗಳಿಂದ ಜೊತೆಯಲ್ಲಿದ್ದ ಬಂಗಾರಮ್ಮ ಕಳೆದ ರಾತ್ರಿ ನಾಗರಭಾವಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬಂಗಾರಮ್ಮ ಸೋಲದೇವನಹಳ್ಳಿ ತೋಟದಲ್ಲಿ ಅಂತಿಮ ದರ್ಶನ ಪಡೆದ ವಿನೋದ್ ರಾಜ್
ಉಡುಪಿ: ಸಮಾಜ ಸೇವೆ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಕಾಪು (Kapu) ತಾಲೂಕಿನಾದ್ಯಂತ ಭಾರೀ ಹೆಸರು ಗಳಿಸಿದ್ದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂದರಾ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಪುವಿನಲ್ಲಿರುವ ಅವರ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದು, ದಂಪತಿ ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಬಹಳ ಸಕ್ರೀಯರಾಗಿದ್ದರು. ಲೀಲಾಧರ ಶೆಟ್ಟಿಯವರು ರಂಗಕರ್ಮಿಯಾಗಿದ್ದು, ರಂಗತರಂಗ ನಾಟಕ ತಂಡದವನ್ನು ಬೆಳೆಸಿದ್ದರು. https://ainlivenews.com/see-how-hot-and-hot-this-cold-can-be/ ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸಹ ಸ್ಪರ್ಧಿಸಿದ್ದರು. ದಂಪತಿ ಕೌಟುಂಬಿಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕಾಪು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿರುವ “ಆಪರೇಶನ್ ಡಿ” ಚಿತ್ರದ ಟೀಸರ್ ಗೆ ಖ್ಯಾತ ನಟಿ ಸಂಗೀತ ಭಟ್ ಹಾಗೂ ಅವರ ಪತಿ ಸುದರ್ಶನ್ ರಂಗಪ್ರಸಾದ್ ಧ್ವನಿ ನೀಡಿದ್ದಾರೆ. ವಿಭಿನ್ನ ರೀತಿಯಲ್ಲಿ Mythology Concept ಇಟ್ಟುಕೊಂಡು Teaser ಸಿದ್ಧವಾಗುತ್ತಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟನಾಗಿದ್ದ ತಿರುಮಲೇಶ್ ವಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ತಿರುಮಲೇಶ್ ವಿ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸುರೇಶ್ ಬಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಹಾಗೂ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವೇದಿಕ ಹಾಗೂ ಸಂತೋಷ್ ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೆಂಪಗಿರಿ ಒಂದು ಹಾಡು ಹಾಗೂ ವೇದಿಕ ಉಳಿದ ಎಲ್ಲಾ ಹಾಡುಗಳನ್ನು ರಚಿಸಿದ್ದಾರೆ. ಅನಿರುದ್ ಶಾಸ್ತ್ರೀ, ವೇದಿಕ ಹಾಗೂ ಪೃಥ್ವಿ ಭಟ್ ಗಾಯನದಲ್ಲಿ ಈ ಚಿತ್ರದ ಹಾಡುಗಳು ಸುಮಧುರವಾಗಿ ಮೂಡಿಬಂದಿದೆ. ಕಾರ್ತಿಕ್ ಪ್ರಸಾದ್ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನ ಹಾಗೂ…
ಬೆಂಗಳೂರು: ಕಾಂಗ್ರೆಸ್ ಶಾಸಕರಿಗೆ ಡಿ.ಕೆ.ಶಿವಕುಮಾರ್ ಭೋಜನ ಕೂಟ ಆಯೋಜನೆ ಮಾಡಿದ್ದಾರೆ. ನಾಳೆ ರಾತ್ರಿ ಬೆಳಗಾವಿ ಫಾರಂ ರೀಟ್ರಿಟ್ನಲ್ಲಿ ಭೋಜನ ಕೂಟಯನ್ನ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಭೋಜನ ಕೂಟ ಆಯೋಜನೆ ಮಾಡಲಾಗಿದ್ದು, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಾಳೆ ಅಥವಾ ನಾಡಿದ್ದು ಡಿಕೆಶಿ ಸಿಬಿಐ ಕೇಸ್ ವಾಪಾಸ್ ಪಡೆದ ವಿಚಾರದ ಬಗ್ಗೆ ಬಿಜೆಪಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಇನ್ನು ಈ ವೇಳೆ ಸರ್ಕಾರದ ನಿರ್ಧಾರ ಸಮರ್ಥನೆ ಮಾಡಿಕೊಳ್ಳಬೇಕು. ವಿಪಕ್ಷಗಳ ಆರೋಪಗಳಿಗೆ ತಿರುಗೇಟು ಕೊಡಬೇಕು. ಹೀಗಾಗಿ ಶಾಸಕರನ್ನ ವಿಶ್ವಾಸಕ್ಕೆ ಪಡೆಯಲು ಡಿಕೆಶಿವಕುಮಾರ್ ಮುಂದಾಗಿದ್ದಾರೆಂಬ ಪ್ರಶ್ನೆ ಮುಂದಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ಸೇರಿ ಸಚಿವರು, ಶಾಸಕರಿಗೆ ಈ ಭೋಜನ ಕೂಟ ಆಹ್ವಾನ ನೀಡಲಾಗಿದೆ.
ವಾಷಿಂಗ್ಟನ್: ಭಾರತ, ಅಮೆರಿಕ ಕಾರ್ಯತಂತ್ರದ ಪಾಲುದಾರ ಹಾಗೂ ಅಮೆರಿಕದ ಪ್ರಜೆಯಾಗಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನೂ (Gurpatwant Singh Pannun) ಹತ್ಯೆ ಮಾಡುವ ಸಂಚು ರೂಪಿಸಿದವರನ್ನು ನೇರ ಹೊಣೆಗಾರರನ್ನಾಗಿ ಮಾಡುವಂತೆ ಶ್ವೇತಭವನವು ನವದೆಹಲಿಯನ್ನು ಒತ್ತಾಯಿಸಿದೆ. ಈ ಸಂಬಂಧ ಶ್ವೇತಭವನದ (White House) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ (John Kirby), ಭಾರತವು ಒಂದು ಕಾರ್ಯತಂತ್ರದ ಪಾಲುದಾರ. ನಾವು ಆ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಳಗೊಳಿಸುತ್ತಿದ್ದೇವೆ. ಭಾರತ- ಅಮೆರಿಕ (India- America) ಕ್ವಾಡ್ ಸದಸ್ಯ ರಾಷ್ಟ್ರಗಳಾಗಿವೆ. ಈ ಎರಡೂ ರಾಷ್ಟ್ರಗಳು ಅನೇಕ ಸಮಸ್ಯೆಗಳ ಕುರಿತು ಮಾತುಕತೆ ನಡೆಸುತ್ತಿವೆ. ಅದು ನಿರಂತರವಾಗಿ ಮುಂದುವರಿಯುವುದನ್ನು ನಾವು ನೋಡಲು ಬಯಸುತ್ತೇವೆ. ಇದೇ ಸಮಯದಲ್ಲಿ ಈ ಆರೋಪಗಳ ಗಂಭೀರತೆಯನ್ನು ನಾವು ಖಂಡಿತವಾಗಿ ಗುರುತಿಸುತ್ತೇವೆ ಎಂದು ತಿಳಿಸಿದರು. https://ainlivenews.com/i-welcome-the-judgment-of-honble-supreme-court-amit-shah/ ಇದೇ ವೇಳೆ ಈ ಆರೋಪ ಎರಡೂ ರಾಷ್ಟ್ರಗಳ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಿರ್ಬಿ, ನಾವು ಅದನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕೆಂದು ಬಯಸುತ್ತೇವೆ. ಅಲ್ಲದೆ…