Author: AIN Author

ಬೆಂಗಳೂರು:- ಕುಮಾರಸ್ವಾಮಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದಿರುವುದು ತಿಳಿದ ವಿಚಾರವಾಗಿದೆ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕುಮಾರಸ್ವಾಮಿ ತಮ್ಮ ದ್ವಂದ್ವ ನಿಲುವುಗಳ ಕಾರಣಕ್ಕಾಗಿಯೇ ತಮ್ಮ ನಾಯಕತ್ವದ ಮೌಲ್ಯವನ್ನು ದಿನೇ ದಿನೆ ಕಳೆದುಕೊಳ್ಳುತ್ತಿದ್ದಾರೆ. ಒಳಗೆ ಬಿಜೆಪಿಗೆ ಬೆಂಬಲ ನೀಡಿ, ಸದನದ ಹೊರಗೆ ಪ್ರತಿಭಟನೆ ಮಾಡುವ ನಾಟಕ ಆಡಿದ್ದ ಕುಮಾರಸ್ವಾಮಿ ಅವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಸಚಿವ ಹೆಚ್ ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ. ಉತ್ತಮ ಸಾರ್ವಜನಿಕ ಬದುಕಿನ ಭಾಗವಾಗಿ ಈ ಹಿಂದೆಯೇ ಸೈದ್ಧಾಂತಿಕ ಬದ್ಧತೆಯ ಪ್ರಾಮುಖ್ಯತೆ ಮತ್ತು ಅದು ನಾಯಕತ್ವದ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ಒಳ್ಳೆಯ ಮನಸ್ಸಿನಿಂದ ಹಿಂದೆಯೇ ಅವರಿಗೆ ನಾನು ಎಚ್ಚರಿಸಿದ್ದೆ. ಆದರೆ, ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಅವರು ಈಗ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿ ಸೈದ್ಧಾಂತಿಕವಾಗಿ ತಾವೆಷ್ಟು ಅಧಃಪತನಕ್ಕೆ ಜಾರಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ. ಒಂದು ಉತ್ತಮ ಪ್ರಾದೇಶಿಕ ಪಕ್ಷವಾಗಿ ಸಂಘಟನೆ ಮತ್ತು ವಿಷಯಾಧಾರಿತ ಹೋರಾಟಗಳ ಮೂಲಕ…

Read More

ಬೆಂಗಳೂರು:- ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಪರಿಷತ್ ಸದಸ್ಯ ಟಿಎ ಶರವಣ ಅವರು ಶುಭ ಕೋರಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ( ಈ ಹಿಂದೆ ಟ್ವಿಟ್ಟರ್) ಪೋಸ್ಟ್ ಮಾಡಿರುವ ಟಿಎ ಶರವಣ ಅವರು, 2023 ರ ವಿಶ್ವಕಪ್ ಫೈನಲ್‌ಗೆ ಟೀಮ್ ಇಂಡಿಯಾಗೆ ಶುಭಾಶಯಗಳು. ಒಂದೂವರೆ ಬಿಲಿಯನ್ ಭಾರತೀಯರ ಆಶೀರ್ವಾದ ನಿಮಗಿದ್ದು, ಆಲ್ ದಿ ಬೆಸ್ಟ್ ಟೀಮ್ ಇಂಡಿಯಾ ಎಂದು ಪೋಸ್ಟ್ ಮಾಡಿದ್ದಾರೆ. https://twitter.com/SharavanaTa/status/1725868761721586164 ಇನ್ನೂ ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್​ಗೆ ಕ್ಷಣಗಣನೆ ಶುರುವಾಗಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ರೋಹಿತ್ ಶರ್ಮಾ ನಾಯಕತ್ವ ಭಾರತ ಹಾಗೂ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ನಡುವೆ ಪ್ರಶಸ್ತಿಗಾಗಿ ಅಂತಿಮ ಕಾದಾಟ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಸಮಾರೋಪ ಸಮಾರಂಭ ಆಯೋಜನೆ ಮಾಡಲಿದೆ. ಇದರಲ್ಲಿ ಬಾಲಿವುಡ್ ತಾರೆಯರು ನೃತ್ಯ ಮಾಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಅಲ್ಲದೆ ಭಾರತೀಯ ವಾಯುಪಡೆಯ…

Read More

ಜನಪ್ರಿಯ ಕಾಮಿಡಿ ಶೋಗಳಾದ ಗಿಚ್ಚಿ ಗಿಲಿಗಿಲಿ (Gichchi Giligili), ಮಜಾ ಭಾರತ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗಿಯಾಗಿದ್ದ ನಟಿ ಸುಷ್ಮಿತಾ (Sushmita) ಮತ್ತು ಜಗ್ಗಪ್ಪ (Jaggappa) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೊತೆಯಾಗಿಯೇ ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದು, ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ. ಹಲವು ದಿನಗಳಿಂದ ಜಗ್ಗಪ್ಪ ಮತ್ತು ಸುಷ್ಮಿತಾ ಲವ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಇತ್ತು. ಆದರೆ, ಈ ಜೋಡಿ ಅದನ್ನು ಅಲ್ಲಗಳೆಯುತ್ತಲೇ ಬಂದರು ಕಾಮಿಡಿ ಶೋಗಳಲ್ಲಿ ಅನೇಕ ಬಾರಿ ಗಂಡ ಹೆಂಡತಿ ಪಾತ್ರ ಮಾಡುತ್ತಾ ಬಂದಿರುವುದರಿಂದ ಜನರು ಆ ರೀತಿಯಲ್ಲಿ ತಿಳಿದುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಇದೀಗ ಜಗ್ಗಪ್ಪನ ಜೊತೆಯೇ ಸುಷ್ಮಿತಾ ಹಸೆ ಮಣೆ ಏರುತ್ತಿದ್ದಾರೆ. ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಫೋಟೋಗಳನ್ನು ಸುಷ್ಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮೆಹಂದಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಡೆದಿದ್ದಕ್ಕೆ ಸುಷ್ಮಿತಾ ಧನ್ಯವಾದಗಳನ್ನು ತಿಳಿಸಿದ್ದಾರೆ. ನಿನ್ನೆ…

Read More

ಬೆಂಗಳೂರು:- ಮಹಿಳಾ ಉದ್ಯಮಿಗಳಿಗೆ ಸಹಾಯ ಸೌಕರ್ಯ ಒದಗಿಸಲು ಸರಕಾರ ಬದ್ಧವಾಹಿದೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸರಕಾರವು ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ಸೇರಿದಂತೆ ಹಲವು ಸಾಂಸ್ಥಿಕ ವ್ಯವಸ್ಥೆಗಳಿಂದ ಉತ್ತೇಜನ ನೀಡುತ್ತಿದೆ. ಉದ್ಯಮಶೀಲ ಮಹಿಳೆಯರು ಬೆಂಗಳೂರಿನ ಆಚೆಯೂ ಉದ್ದಿಮೆಗಳನ್ನು ಸ್ಥಾಪಿಸಲು ಮನಸ್ಸು ಮಾಡಬೇಕು ಎಂದರು. ರಾಜ್ಯದ ಕೈಗಾರಿಕಾ ನೀತಿಯಲ್ಲಿ ಕೆಐಎಡಿಬಿಯಿಂದ ಹಂಚುತ್ತಿರುವ ನಿವೇಶನದಲ್ಲಿ ಮಹಿಳಾ ಉದ್ಯಮಿಗಳಿಗೆ ಶೇ 5ರಷ್ಟು ಮೀಸಲು ನೀಡಲಾಗಿದೆ. ಜೊತೆಗೆ ಕೆಎಸ್ಸೆಸೈಡಿಸಿಯಲ್ಲೂ ಜಮೀನು ಹಂಚಿಕೆಯಲ್ಲಿ ಇದೇ ಸೂತ್ರ ಅಳವಡಿಸಿಕೊಳ್ಳಲಾಗಿದೆ. ಹೂಡಿಕೆ ಸಬ್ಸಿಡಿಯಾಗಿ ಶೇ.5ರಷ್ಟು ಹೆಚ್ಚುವರಿ ಪ್ರೋತ್ಸಾಹ ಮತ್ತು ವಿದ್ಯುತ್‌ ಬಿಲ್‌ ಮೇಲೆ ಗರಿಷ್ಠ ನಾಲ್ಕು ವರ್ಷಗಳ ವಿನಾಯಿತಿ ನೀಡಲಾಗುತ್ತಿದೆ ಎಂದು ಸಚಿವರು ಇದೇ ವೇಳೆ ವಿವರಣೆ ನೀಡಿದರು. ರಾಜ್ಯವು ಮಹಿಳೆಯರನ್ನು ಕೈಗಾರಿಕಾ ರಂಗದಲ್ಲಿ ಮೊದಲಿನಿಂದಲೂ ಪ್ರೋತ್ಸಾಹಿಸುತ್ತಿದೆ. ತಂತ್ರಜ್ಞಾನ ಪರಿಪೋಷಣಾ ಕೇಂದ್ರ, ತಂತ್ರಜ್ಞಾನ ಅಳವಡಿಕೆ ಇವುಗಳಲ್ಲೂ ಅರ್ಧದಷ್ಟು ಮೊತ್ತವನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ.…

Read More

ಲೂಸ್ ಮಾದ ಯೋಗಿ (Loose Mada Yogi)  ಅಭಿನಯದ 50ನೇ ಚಿತ್ರ ರೋಜಿ (Rosie). ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ‘ರೋಜಿ’ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಹಾಗೂ ಇಳಯದಳಪತಿ  ವಿಜಯ್ ಅಭಿನಯದ ‘ಲಿಯೊ’ ಚಿತ್ರದಲ್ಲಿ ಚಾಕೊಲೇಟ್ ಕಾಫಿ ಎಂಬ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಸ್ಯಾಂಡಿ ಮಾಸ್ಟರ್ ನಟಿಸುತ್ತಿದ್ದಾರೆ. ಈ ವಿಷಯ ತಿಳಿಸಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಿ ಮಾಸ್ಟರ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.  ಸ್ಯಾಂಡಿ ಮಾಸ್ಟರ್ ಅವರ ಪಾತ್ರ ಪರಿಚಯಿಸುವ ಪೋಸ್ಟರ್ ಸಹ ಬಿಡುಗಡೆ ಮಾಡಲಾಯಿತು. ನಾನು ನೃತ್ಯ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ‘ಲಿಯೊ’ ಚಿತ್ರದ ನನ್ನ ಪಾತ್ರಕ್ಕೆ ಈಗ ಎಲ್ಲ ಕಡೆ  ಮೆಚ್ಚುಗೆ ವ್ಯಕ್ತವಾಗಿದೆ. ನಿರ್ದೇಶಕ ಶೂನ್ಯ ಅವರು ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದರು. ಇಷ್ಟವಾಯಿತು. ಆಂಡಾಳ್ ಎಂಬುದು ನನ್ನ ಪಾತ್ರದ ಹೆಸರು ಎಂದು ಸ್ಯಾಂಡಿ ಮಾಸ್ಟರ್ (Sandy Master)…

Read More

ಪ್ರತಿಯೊಬ್ಬರ ರಕ್ತದೊತ್ತಡವನ್ನು ಸಾಮಾನ್ಯವಾಗಿ 120/80 ಎಂದು ಪರಿಗಣಿಸಲಾಗುತ್ತದೆ. ಇದು ರಕ್ತದೊತ್ತಡದ ಸಾಮಾನ್ಯ ಅಳತೆಯಾಗಿದೆ. ರಕ್ತದೊತ್ತಡದ ಶ್ರೇಣಿಗಳು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತವೆ. ಅದಕ್ಕಾಗಿಯೇ ನಿಖರವಾದ ರಕ್ತದೊತ್ತಡದ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯ. ಅನಿಯಮಿತ ರಕ್ತದೊತ್ತಡವು ಅನೇಕ ರೋಗಗಳ ಸೋಂಕಿನ ಲಕ್ಷಣವಾಗಿದೆ. ಸಾಮಾನ್ಯ ರಕ್ತದೊತ್ತಡ 120/80. ಆರೋಗ್ಯ ತಜ್ಞರ ಪ್ರಕಾರ. ವಯಸ್ಕರಲ್ಲಿ 95-145/60-90 ರ ನಡುವಿನ ರಕ್ತದೊತ್ತಡವನ್ನು ಸಹ ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ವ್ಯಕ್ತಿಯ ದೈಹಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ರೋಗಿಯ ಇತರ ಪರಿಸ್ಥಿತಿಗಳನ್ನು ಅವಲಂಬಿಸಿ ಕೆಲವು ಸಂದರ್ಭಗಳಲ್ಲಿ 145/90 ರಕ್ತದೊತ್ತಡವನ್ನು ಸಾಮಾನ್ಯವೆಂದು ವೈದ್ಯರು ಪರಿಗಣಿಸುತ್ತಾರೆ. ಉದಾಹರಣೆಗೆ.. 20 ವರ್ಷದ ವಯಸ್ಕ ವ್ಯಕ್ತಿಯಲ್ಲಿ ರೋಗದ ಯಾವುದೇ ಚಿಹ್ನೆಗಳಿಲ್ಲದಿದ್ದರೆ 90/50 ರಕ್ತದೊತ್ತಡವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ರಕ್ತದೊತ್ತಡದ ಮೇಲೆ ಪರಿಣಾಮ ಬೀರುವ ಅನೇಕ ಅಂಶಗಳಿವೆ. ಇದು ವಯಸ್ಸು, ಲಿಂಗ, ಜನಾಂಗ, ತೂಕ, ವ್ಯಾಯಾಮ, ಭಾವನೆಗಳು, ಒತ್ತಡ, ಗರ್ಭಧಾರಣೆ, ದಿನಚರಿ ಮುಂತಾದ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ. ಸಾಮಾನ್ಯವಾಗಿ, ರಕ್ತದೊತ್ತಡದ ವ್ಯಾಪ್ತಿಯು ವಯಸ್ಸಾದಂತೆ ಹೆಚ್ಚಾಗುತ್ತದೆ. ಪುರುಷರು ಮತ್ತು ಮಹಿಳೆಯರ ರಕ್ತದೊತ್ತಡ ಒಂದೇ ಆಗಿದೆಯೇ?…

Read More

ಅಹಮದಾಬಾದ್‌: ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯ ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಇಡೀ ಕ್ರಿಕೆಟ್‌ ಜಗತ್ತು ಎದುರು ನೋಡುತ್ತಿದೆ. ವಿಶ್ವದ ಎರಡು ದಿಗ್ಗಜ ತಂಡಗಳ ನಡುವಣ ವಿಶ್ವಕಪ್‌ ಫೈನಲ್‌ ಹೈವೋಲ್ಟೇಜ್‌ ಕದನ ಯಶಸ್ವಿಯಾಗಬೇಕೆಂದರೆ ಹವಾಮಾನ ಕೂಡ ಇಲ್ಲಿ ನಿರ್ಣಾಯಕವಾಗುತ್ತದೆ. ಪಂದ್ಯದ ದಿನ ಮಳೆ ಬಂದಿಲ್ಲವಾದರೆ ಯಾವುದೇ ಅಡೆತಡೆ ಇಲ್ಲದೆ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಯಶಸ್ವಿಯಾಗಿ ಮುಗಿಯಲಿದೆ. ಆ ಮೂಲಕ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಒಂದು ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಲಿದೆ. ಒಂದು ವೇಳೆ ಭಾನುವಾರ ಫೈನಲ್‌ಗೆ ಮಳೆ ಅಡ್ಡಿ ಉಂಟುಮಾಡಿದರೆ, ಮೀಸಲು ದಿನವಾದ ಸೋಮವಾರ ಪಂದ್ಯ ಮುಂದುವರಿಯಲಿದೆ. ಆದಾಗ್ಯೂ ಮೀಸಲು ದಿನವೂ ಮಳೆಯಿಂದ ಪಂದ್ಯ ರದ್ದಾದರೆ, ಯಾವ ತಂಡಕ್ಕೆ ಪ್ರಶಸ್ತಿ ನೀಡಲಾಗುತ್ತದೆ? ಐಸಿಸಿ ನಿಯಮಗಳು ಏನು ಹೇಳಲಿದೆ? ಎಂಬ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಮೀಸಲು ದಿನ ಹಾಗೂ…

Read More

ಚಳಿಗಾಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲು 5 ಕಾರಣಗಳು ಇಲ್ಲಿವೆ : 1. ಕೀಲು ನೋವುಗಳನ್ನು ನಿವಾರಿಸುತ್ತದೆ: ಶುಂಠಿಯು ಉರಿಯೂತ ಶಮನ ಮಾಡುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಧೀವಾತ ರೋಗಲಕ್ಷಣಗಳನ್ನು ನಿರ್ವಹಿಸಲು ಇದು ಉಪಯುಕ್ತವಾಗಬಹುದು. ಶುಂಠಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನೋವು ಮತ್ತು ಊತವನ್ನು ಕಡಿಮೆ ಮಾಡಲು ಅದು ಸಹಾಯ ಮಾಡುತ್ತದೆ. ಆದರೆ ನಿಮ್ಮ ನೋವು ಇದರಿಂದ ಬೇಗನೆ ಕಮ್ಮಿಯಾಗುವುದಿಲ್ಲ ಆದರೆ ನೀವು ಅದನ್ನು ಚರ್ಮಕ್ಕೆ ನೇರವಾಗಿ ಅನ್ವಯಿಸಿದರೆ, ಅದು ಕ್ರಮೇಣ ನಿಮ್ಮ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. 2. ಶೀತ ಮತ್ತು ಜ್ವರದಂತಹ ರೋಗಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ: ತಾಪಮಾನ ಕಡಿಮೆಯಾದ ತಕ್ಷಣ, ಸೀನುವುದು ಮತ್ತು ಕೆಮ್ಮ ಬರುವಂತಹದ್ದು ಸಾಮಾನ್ಯವಾಗಿದೆ. ಏಕೆಂದರೆ ಚಳಿಗಾಲದ ತಿಂಗಳುಗಳು ಜ್ವರ ಮತ್ತು ನೆಗಡಿಯೊಂದಿಗೆ ಬರುವ ಸಾಧ್ಯತೆ ಹೆಚ್ಚು. ನೆಗಡಿ ಮತ್ತು ಜ್ವರಕ್ಕೆ ಶುಂಠಿಯನ್ನು ಬಹಳ ಹಿಂದಿನಿಂದಲೂ ಮನೆಮದ್ದಾಗಿ ಬಳಸಲಾಗುತ್ತಿದೆ. ತಾಜಾ ಶುಂಠಿ ರಸ ಅಥವಾ ತುರಿದ ತಾಜಾ ಶುಂಠಿಯನ್ನು ವಿವಿಧ ಭಕ್ಷ್ಯ…

Read More

ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‌ವೆಜ್‌ ಅಡುಗೆಯಲ್ಲಿ ಸೂಪ್‌ ಕೂಡ ವಿಶಿಷ್ಟ ಖಾದ್ಯ. ಇದನ್ನು ಮನೆಯಲ್ಲೇ ಮಾಡಿ ಸವಿಯುವುದು ಇನ್ನೂ ಚೆನ್ನಾಗಿರುತ್ತೆ. ಸೂಪ್‌ ಮಾಡುವುದು ಸುಲಭ. ಅದಕ್ಕೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್‌ವೆಜ್‌ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಸೂಪ್‌ ಮಾಡಿ, ಅದರ ರುಚಿ ಸವಿದು ಎಂಜಾಯ್‌ ಮಾಡಿ. ಬೇಕಾಗುವ ಸಾಮಗ್ರಿಗಳು: * ಬೆಣ್ಣೆ – ಅರ್ಧ ಕಪ್ * ಈರುಳ್ಳಿ-1 * ಬೆಳ್ಳುಳ್ಳಿ-4 * ಹಸಿಮೆಣಸು -4 * ಕ್ಯಾರೆಟ್ -ಅರ್ಧ ಕಪ್ * ಕೊತ್ತಂಬರಿ ಸೊಪ್ಪು -ಸ್ವಲ್ಪ * ಬೇಯಿಸಿದ ಚಿಕನ್- 2 ಕಪ್ * ರುಚಿಗೆ ತಕ್ಕಷ್ಟು ಉಪ್ಪು * ಕಾಳುಮೆಣಸಿನ ಪುಡಿ- 2 ಚಮಚ ಮಾಡುವ ವಿಧಾನ: * ದಪ್ಪ ತಳದ ಪಾತ್ರೆಯೊಂದಕ್ಕೆ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಕ್ಯಾರೆಟ್ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ…

Read More

ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಹುದೇ? ಎಂಬ ಗೊಂದಲ ಹಲವರಿಗಿದೆ. ಹಾಗಾದ್ರೆ ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಕೆಲವರು ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ. ಯಾಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾಗಳಿದ್ದು ಅದು ನಾಶವಾಗುತ್ತದೆ ಎಂದು ತಿಳಿದಿರುತ್ತಾರೆ. ಆದರೆ ತಜ್ಞರು ತಿಳಿಸಿದ ಪ್ರಕಾರ ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಯಾಕೆಂದರೆ ಜೇನುತುಪ್ಪವನ್ನು ಬಿಸಿ ಮಾಡಿದಾಗ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತದೆ. ಮತ್ತು ಅದು ವಿಷವಾಗಿ ಪರಿಣಮಿಸುತ್ತದೆ. ಇದರಿಂದ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ.

Read More