ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ರಾಜಕಾರಣಕ್ಕೆ ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಹಲವಾರು ನಟ ನಟಿಯರು ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಮಾಧುರಿ ರಾಜಕೀಯ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಾಧುರಿ ದೀಕ್ಷಿತ್ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಬಿಜೆಪಿಯಿಂದ ಟಿಕೆಟ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಜೆಪಿಯ ಮುಖಂಡರು ಮಾಧುರಿಯನ್ನು ಸಂಪರ್ಕಿಸಿದ್ದಾರಂತೆ. ಅಲ್ಲದೇ, ಪುಣೆಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಪುಣೆಯ ಲೋಕಸಭಾ ಕ್ಷೇತ್ರವು ಅತ್ಯಂತ ಪ್ರತಿಷ್ಠಿತ ಕಣವಾಗಿದ್ದು, ಇಲ್ಲಿಂದಲೇ ಮಾಧುರಿ ಅವರನ್ನು ಅಖಾಡಕ್ಕೆ ಇಳಿಸಲು ಚಿಂತನೆ ಮಾಡಲಾಗುತ್ತಿದೆ. ಬಿಜೆಪಿ ಮತ್ತು ಮಾಧುರಿ ನಡೆವೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ಮಾಡಲಾಗಿದೆ. ಬಹುತೇಕ ಬಿಜೆಪಿಯನ್ನು ಮಾಧುರಿ ಸೇರುವುದು ಪಕ್ಕಾ ಎನ್ನುವ ಮಾಹಿತಿ ಇದೆ.
Author: AIN Author
ಅಂಕಾರಾ: ಬ್ರಿಟನ್ (Britain) ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ 41 ಬಾರಿ ಸ್ಕ್ರೂಡ್ರೈವರ್‍ನಿಂದ ಇರಿದು ಹತ್ಯೆಗೈದ ಘಟನೆ ಟರ್ಕಿಯ (Turkey) ಇಸ್ತಾಂಬುಲ್‍ನ ಹೋಟೆಲ್‍ನಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಅಹ್ಮತ್ ಯಾಸಿನ್ (28) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಪತ್ನಿಗೆ ಸ್ಕ್ರೂಡ್ರೈವರ್ ಇರಿದು ಹತ್ಯೆಗೈದಿರುವುದು ದೃಢವಾಗಿದೆ. ಮಹಿಳೆಯ ಕಿರುಚಾಟ ಕೇಳಿ ಹೋಟೆಲ್ ಸಿಬ್ಬಂದಿ ಕೊಠಡಿಗೆ ಪ್ರವೇಶಿಸಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. https://ainlivenews.com/what-happens-if-tea-coffee-is-given-to-children/ ದಂಪತಿ ಇಂಗ್ಲೆಂಡ್‍ನಿಂದ ಬಂದು ಹೊಟೆಲ್‍ನಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ. ಡ್ರಗ್ಸ್ ಸೇವಿಸಿದ ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಹತ್ಯೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಮಹಿಳೆಯ ಹತ್ಯೆಯ ಬಳಿಕ ಆರೋಪಿ ಸ್ಕ್ರೂಡ್ರೈವರ್‍ನ್ನು ಎಸೆದಿದ್ದು, ಸಾಕ್ಷ ನಾಶಕ್ಕೆ ಯತ್ನಿಸಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ನಮಗೆ ರಾಜಕೀಯದಲ್ಲಿ ದ್ವೇಷ ಗೊತ್ತಿಲ್ಲ. ನಾವು ಯಾರಾದರೂ ತಪ್ಪು ಮಾಡಿದ್ದರೆ ಅದನ್ನು ಒಪ್ಪುವುದಿಲ್ಲ. ಹಾಗಂತ ನಾವು ದ್ವೇಷದ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮುಯ್ಯ (Siddaramaiah) ಹೇಳಿದ್ದಾರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳೆ ಕುಮಾರಸ್ವಾಮಿ (HD Kumaraswamy) ಮನೆ ದೇವರು. ಕುಮಾರಸ್ವಾಮಿ ಹೊಟ್ಟೆಕಿಚ್ಚಿನಿಂದ ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಹೇಳುವುದೆಲ್ಲ ಸುಳ್ಳು. ಕುಮಾರಸ್ವಾಮಿ ಇವತ್ತಿನವರೆಗೆ ಯಾವುದಾದರೂ ಸತ್ಯ ಹೇಳಿದ್ರೆ ತೋರಿಸಿ. ಒಂದೇ ಒಂದು ವಿಚಾರದಲ್ಲಿ ಸತ್ಯ ಹೇಳಿದ್ದಾರಾ ಹೇಳಿ. ಕುಮಾರಸ್ವಾಮಿ ಬರೀ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ನಮ್ಮ ಮಗನ ವಿಚಾರದಲ್ಲಿ ನಿನ್ನೆ ಸುಮ್ಮನೆ ಸುಳ್ಳು ಹಬ್ಬಿಸಿದ್ರು. ನನ್ನ ಮಗ ನನಗಾಗಿ ಕ್ಷೇತ್ರ ಬಿಟ್ಟು ಕೊಟ್ಟಿದ್ದಾನೆ. ಈಗ ನನ್ನ ಪರವಾಗಿ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತಿದ್ದಾನೆ. ಜನರ ಕೆಲಸ ಮಾಡುವುದು ತಪ್ಪಾ. ಕೆಡಿಪಿ ಸದಸ್ಯನಾಗಿರುವ ಕಾರಣ ಕೆಲವು ವಿಚಾರಗಳ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದಾನೆ. ಅದಕ್ಕೆ ಬೇರೆ ಬೇರೆ ಅರ್ಥ…
ಚೀನಾ: ತಂತ್ರಜ್ಞಾನ ವಲಯದಲ್ಲಿ ಜಗತ್ತಿನ ವೇಗಕ್ಕಿಂತ ಒಂದು ಹೆಜ್ಜೆ ಮುಂದಿರುವ ಚೀನಾ, ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಅನ್ನು ಅನಾವರಣಗೊಳಿಸಿದೆ. ಹೊಸ ತಲೆಮಾರಿನ ವೇಗದ ಇಂಟರ್ನೆಟ್ ಎಂದೇ ಬಣ್ಣಿಸಲಾಗಿರುವ ಇದರಲ್ಲಿ 1 ಸೆಕೆಂಡ್‌ಗೆ 1.2 ಟೆರಾಬೈಟ್ ವೇಗದಲ್ಲಿ ಮಾಹಿತಿ ರವಾನಿಸಬಹುದಾಗಿದೆ. ಅಂದರೆ ಒಂದು ಸೆಕೆಂಡ್‌ಗೆ ಎಚ್‌ಡಿ ಗುಣಮಟ್ಟದ 156 ಚಲನಚಿತ್ರಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸಬಲ್ಲದು. ಇಡೀ ವಿಶ್ವದ ಜೀವನಾಡಿಯಾಗಿರುವ ಇಂಟರ್ನೆಟ್ ಸೆಕೆಂಡ್‌ಗೆ 100 ಗಿಗಾಬೈಟ್ ವೇಗದಲ್ಲಿ ಮಾಹಿತಿ ರವಾನಿಸುತ್ತಿದೆ. ಇನ್ನು ಅಮೆರಿಕ ಇತ್ತೀಚೆಗಷ್ಟೇ ತನ್ನ 5ನೇ ತಲೆಮಾರಿನ ಅಂದರೆ ಸೆಕೆಂಡ್‌ಗೆ 400 ಗಿಗಾಬೈಟ್ ವೇಗದ ಇಂಟರ್ನೆಟ್ ಅನಾವರಣಗೊಳಿಸಿತ್ತು. ಆದರೆ ಚೀನಾ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ವೇಗಕ್ಕಿಂತ 12 ಪಟ್ಟು ವೇಗದ ಇಂಟರ್ನೆಟ್ ವೇಗ ಸಾಧಿಸುವ ಮೂಲಕ ಜಾಗತಿಕ ಕಂಪನಿಗಳಿಗೆ ಸವಾಲು ಎಸೆದಿದೆ.
ಹುಬ್ಬಳ್ಳಿ: ಸಹಕಾರ ಕ್ಷೆತ್ರದಲ್ಲಿಯ ಸುಬಿಕ್ಷಾ ಅರ್ಗಾನಿಕ್ ಬಹುರಾಜ್ಯ ಸಹಕಾರ ಸಂಘದ ಷೇರುದಾರ ಸದಸ್ಯರಾದ ನಾಗನಗೌಡ ಪಾಟೀಲ್ ಅವರನ್ನ ಕಲಘಟಗಿಯಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ 2023ರ ಸಮಾರಂಭದಲ್ಲಿ ಶ್ರೇಷ್ಠ ಸಹಕಾರಿ ಎಂದು ಗುರುತಿಸಿ ಸನ್ಮಾನಿಸಲಾಯಿತು. ರಾಜ್ಯಾದಲ್ಲಿಯ ಅನೇಕ ಸಹಕಾರ ಸಂಘಗಳ ಶೇರುದಾರ ಸದಸ್ಯನಾಗಿ ಕೆಲವು ಸಂಘಗಳಾದ ಟಿ. ಎ. ಪಿ. ಸಿ. ಎಂ. ಎಸ್. ಅಣ್ಣಿಗೇರಿ. ಯಜಮಾನ್ ದಿ. ಉಪನಾಳ. ಗೂಳಪ್ಪನವರು ಸ್ಥಾಪೀಸಲ್ಪಟ್ಟ್ ಶ್ರೀ ರೇಣುಕಾದೇವಿ ರೈತರ ಗೋವಿನಜೋಳದ ಸಂಸ್ಕರಣ ಸಹಕಾರಿ ಸಂಘ, ನವಲಗುಂದ ಆಡಳಿತ ಮಂಡಳಿ ಸದಸ್ಯನಾಗಿ ಅನನ್ಯವಾಗಿ ಸೇವೆ ಸಲ್ಲಿಸುತ್ತಿರುವದನ್ನ ಪರಿಗಣಿಸಿ ಸಹಕಾರ ಇಲಾಖೆ ಗೌರಸಿತು. ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದ ಹಿರಿಯ ಸಹಕಾರಿ ಮುಖಂಡರು ಧಾರವಾಡ ಕೆ. ಸಿ. ಸಿ. ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಪೂಗೌಡ. ಡಿ. ಪಾಟೀಲ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿಗೆ ಮತ್ತು ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ .
ಬೆಂಗಳೂರು : ವಿಧಾನಸಭಾ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಆರ್. ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ಬೆಂಕಿಯುಗುಳಿದ್ದಾರೆ. ನೂತನ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಅವರು, ನನ್ನ ನೇತೃತ್ವದಲ್ಲಿ ರಾಜ್ಯದ ಜನತೆ, ಬಡವರ ಧ್ವನಿಯಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಉತ್ತರ ನೀಡಲಿದ್ದೇವೆ ಎಂದು ಹೇಳಿದರು. ನಾವು (ಬಿಜೆಪಿ) 66 ಜನ ಹಾಗೂ ಜೆಡಿಎಸ್ನ 19 ಮಂದಿ ಸೇರಿ 85 ಶಾಸಕರು ಇದ್ದೇವೆ. ನಮ್ಮದು ದೊಡ್ಡ ವಿರೋಧ ಪಕ್ಷ. ನನ್ನದು ಒಂದೇ ಸಿದ್ಧಾಂತ. ಸಿದ್ದರಾಮಯ್ಯ ಅವರದು ಜೆಡಿಎಸ್ ಪಕ್ಷದಲ್ಲಿದ್ದಾಗ ಒಂದು ಸಿದ್ಧಾಂತ, ಕಾಂಗ್ರೆಸ್ನಲ್ಲಿದ್ದಾಗ ಒಂದು ಸಿದ್ಧಾಂತ ಹಾಗು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಒಂದು ಸಿದ್ಧಾಂತ. ಆದರೆ, ನಾನು ತರಗೆಲೆಯಲ್ಲ, ಗಟ್ಟಿ ಕಮಲ ಎಂದು ಸಿಎಂ ಸಿದ್ದರಾಮಯ್ಯಗೆ ಟಕ್ಕರ ಕೊಟ್ಟರು. ಕಾಂಗ್ರೆಸ್ ರೈತರಿಗೆ ಮೋಸ ಮಾಡ್ತಿದೆ ಸರ್ಕಾರದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ನಾವು ಬಯಲಿಗೆಳೆಯುತ್ತೇವೆ. ಕಾಂಗ್ರೆಸ್ ಕೊಟ್ಟ ಭರವಸೆಗಳನ್ನ ಈಡೇರಿಸಿಲ್ಲ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ.…
ಬೆಂಗಳೂರು: ಒಕ್ಕಲಿಗರ ಸಂಘ ಎನ್ನುವುದು ಭ್ರಷ್ಟರ ಪಾಲಿಗೆ ಕರೆಯುವ ಹಸುವಿದ್ದಂತೆ. ಸಮುದಾಯದ ಪೂರ್ವಿಕರು ಸಂಘದ ನಿರ್ವಹಣೆ, ಅಭಿವೃದ್ಧಿಗೆ ಸಂಪನ್ಮೂಲಕ್ಕಾಗಿ ಸಾಕಷ್ಟು ಲಾಭದಾಯಕವಾದ ಆಸ್ತಿಗಳನ್ನು ಬಿಟ್ಟು ಹೋಗಿದ್ದಾರೆ. ಅಧಿಕಾರ ಲಾಲಸೆ ಮತ್ತು ಧನದಾಹದಿಂದ ಸಂಘ ಪ್ರವೇಶಿಸಿದ ಹಲವರು ಕಾಮಧೇನುವಿನ ಕೆಚ್ಚಿಲನ್ನೇ ಕುಯ್ಯುವ ನಿಕೃಷ್ಟ ಮಟ್ಟಕ್ಕೆ ಇಳಿದಿದ್ದಾರೆ. ಹೌದು ಸಮುದಾಯದ ಹೆಸರಿನಲ್ಲಿ ಕೋಟಿ ಕೋಟಿ ಮೌಲ್ಯದ ಸ್ವತ್ತನ್ನ ಕಬಳಿಸೋ ಯತ್ನ ನಡೆಯುತ್ತಿರೋ ಆರೋಪ ಒಕ್ಕಲಿಗರ ಸಂಘ ಹೊತ್ತುಕೊಂಡಿದೆ. ಹಾಗಾದ್ರೆ ಏನಿದು ಒಕ್ಕಗರಿಗರ ಸಂಘದಲ್ಲಿ ನಡೆದಿರೋ ಕರ್ಮಕಾಂಡ ಬನ್ನಿ ತೋರಿಸ್ತೀವಿ ಒಕ್ಕಲಿಗ ಸಮಾಜದ ಮಹನೀಯರು ತಮ್ಮದೇ ಆದ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಸಂಘವನ್ನು ಸ್ಥಾಪನೆ ಮಾಡಿದ್ದರು. ಆಡಳಿತ ನಡೆಸಿದವರೆಲ್ಲರೂ ಭ್ರಷ್ಟರೆಂದೇನಲ್ಲ. ಆದರೆ, ಬಹುತೇಕರು ಭ್ರಷ್ಟಾಚಾರ ನಡೆಸಿ ಪಾಪದ ಮೂಟೆ ಹೊತ್ತಿದ್ದಾರೆ. ಹಣ ಕೊಳ್ಳೆಹೊಡೆದದ್ದನ್ನಾದರೂ ಕ್ಷಮಿಸಿಬಿಡಬಹುದೇನೋ. ಆದರೆ, ಸಂಘದ ಆಸ್ತಿಪಾಸ್ತಿಯನ್ನು ವಿವಾದಕ್ಕೆ ಸಿಲುಕಿಸಿ, ಸಂಘ ಮತ್ತು ಸಮುದಾಯದ ಗೌರವಕ್ಕೆ ಚ್ಯುತಿ ತಂದವರು ಕ್ಷಮೆಗೆ ಅರ್ಹರೇ ಅಲ್ಲ.ಒಕ್ಕಲಿಗರ ಸಂಘದ ಭ್ರಷ್ಟಾತಿಭ್ರಷ್ಟರಿಗೆ ಪಾಪಪ್ರಜ್ಞೆ ಎಂಬುದೇ ಇಲ್ಲ. ಕನಿಷ್ಠಪಕ್ಷ ಸಮಾಜಕ್ಕೆ ಅಂಜುವ ಜಾಯಮಾನವೂ ಅವರದ್ದಲ್ಲ…
ಡಿಜಿಟಲ್ ಪಾವತಿ ಆ್ಯಪ್ಗಳ ವಿರುದ್ದ ಹೈದರಾಬ್ ಮೂಲದ ಹೋರಾಟಗಾರ್ತಿ ದೂರು ದಾಖಲಿಸಿದ್ದಾರೆ. ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ ಹಾಗೂ ಡಿಜಿಟಲ್ ಪಾವತಿ ಆ್ಯಪ್‌ಗಳಾದ ಪೇಟಿಎಂ ಮತ್ತು ಫೋನ್‌ಪೇಗಳು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಮಾರಾಟ ಮತ್ತು ಮಕ್ಕಳ ಮೇಲಿನ ಶೋಷಣೆಯನ್ನು ಅನುಮತಿಸುವ ಪರಿಸರವನ್ನು ನಿರ್ಮಿಸುತ್ತಿವೆ ಎಂದು ಆರೋಪಿಸಿ ಹೈದರಾಬಾದ್ ಮೂಲದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಸುನೀತಾ ಕೃಷ್ಣನ್ ಪ್ರಕರಣ ದಾಖಲಿಸಿದ್ದಾರೆ. ಟೆಲಿಗ್ರಾಂನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯಗಳು ಅತ್ಯಂತ ಸುಲಭವಾಗಿ ಮಾರಾಟ ಮಾಡಲಾಗುತ್ತಿದೆ. ಇಂಥ ವ್ಯವಹಾರಗಳಿಗೆ ಹಣ ಪಾವತಿಗೆ ಪೇಟಿಎಂ, ಫೋನ್‌ಪೇ ಅವಕಾಶ ಕಲ್ಪಿಸಿವೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಕ್ರಿಯೆಯ ವಿಡಿಯೋಗಳ ಮಾರಾಟ ಮತ್ತು ವಿತರಣೆ ತಡೆಗೆ ಈ ಸಂಸ್ಥೆಗಳು ಯಾವ ಕ್ರಮ ಕೈಗೊಂಡಿವೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸುನೀತಾ ಆಗ್ರಹಿಸಿದ್ದಾರೆ.
ನಿದ್ರೆಯ ಸಮಸ್ಯೆಗಳಿಗೆ ಪರಿಹಾರವನ್ನು ನಿಮ್ಮ ದಿನಚರಿಯಲ್ಲಿ ಹೆಚ್ಚಾಗಿ ಕಾಣಬಹುದು. ನಿದ್ರೆಯ ವೇಳಾಪಟ್ಟಿ, ಹಾಸಿಗೆಯ ಸಮಯದ ಅಭ್ಯಾಸಗಳು, ದಿನನಿತ್ಯದ ಜೀವನಶೈಲಿ ಆಯ್ಕೆ ನಿಮ್ಮ ರಾತ್ರಿಯ ವಿಶ್ರಾಂತಿಯ ಗುಣಮಟ್ಟಕ್ಕೆ ಅಗಾಧ ವ್ಯತ್ಯಾಸವನ್ನು ಉಂಟುಮಾಡುತ್ತವೆ. ನಿದ್ರೆಯ ಶತ್ರುಗಳನ್ನು ತಪ್ಪಿಸಲು ಹಾಗೂ ಯಾವ ಆರೋಗ್ಯಕರ ನಿದ್ರೆ ಉತ್ತೇಜಿಸುವ ತಂತ್ರಗಳು ನಿಮಗೆ ಸರಿಹೊಂದುತ್ತವೆ ಎಂಬುದರ ಮೇಲೆ ನೀವು ಗಮನಹರಿಸಬೇಕು. ಚೆರ್ರಿಗಳಲ್ಲಿ ಕಂಡುಬರುವ ಟ್ರಿಪ್ಟೋಫಾನ್ ಎಂಬ ಖನಿಜವನ್ನು ತಿನ್ನುವುದರಿಂದ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ತಾಜಾ ಚಹಾವನ್ನು ಕುಡಿಯುವುದು ಒಳ್ಳೆಯದು. ಮಲಬದ್ಧತೆ ಮುಂತಾದ ಜಠರಗರುಳಿನ ಪರಿಸ್ಥಿತಿಗಳನ್ನು ನಿಭಾಯಿಸಲು ಪುದೀನಾ ಉತ್ತಮವಾಗಿದೆ. ಸಮೃದ್ಧ ಆಹಾರದಿಂದ ದೂರವಿರಿ ಉತ್ತಮ ನಿದ್ರೆಗಾಗಿ ಶುದ್ಧ ಹಸುವಿನ ಹಾಲನ್ನು ಕುಡಿಯಬೇಕು. ಬೆಚ್ಚಗಿನ ಹಾಲಿನಲ್ಲಿ ಅರಿಶಿನವನ್ನು ಸೇರಿಸಿ ಕುಡಿಯುವುದು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಇನ್ನೂ, ಹಗಲಿನ ಆಹಾರ ಮತ್ತು ವ್ಯಾಯಾಮದ ಅಭ್ಯಾಸವು ನೀವು ಎಷ್ಟು ಚೆನ್ನಾಗಿ ನಿದ್ರಿಸುತ್ತೀರಿ ಎಂಬುದನ್ನು ಸಹ ನಿರ್ಧರಿಸುತ್ತದೆ. ಸಂಜೆ ಸಮೃದ್ಧ ಆಹಾರದಿಂದ ದೂರವಿರಿ. ಬೆಳಗ್ಗೆ ಅಥವಾ ಮಧ್ಯಾಹ್ನ ವ್ಯಾಯಾಮವು ರಾತ್ರಿಯಲ್ಲಿ ಹೆಚ್ಚು ಸುಲಭವಾಗಿ ನಿದ್ರಿಸಲು…
ನವದೆಹಲಿ: ಯೆಮೆನ್ ಪ್ರಜೆಯ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಎದುರಿಸುತ್ತಿರುವ ಕೇರಳ (Kerala) ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಅಲ್ಲಿನ ಸುಪ್ರೀಂಕೋರ್ಟ್‍ನಿಂದ ರಿಲೀಫ್ ಸಿಕ್ಕಿಲ್ಲ. ಇತ್ತ ತಮ್ಮ ಮಗಳನ್ನು ರಕ್ಷಿಸಿಕೊಳ್ಳಲು ಯೆಮೆನ್‍ಗೆ ತೆರಳಲು ಅನುಮತಿಸುವಂತೆ ಪ್ರಿಯಾ ತಾಯಿ ದೆಹಲಿ ಹೈಕೋರ್ಟ್ (Delhi Court) ಮೊರೆ ಹೋಗಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಈ ಬಗ್ಗೆ ವಾರದಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ 2017ರಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದೊ ಮಹ್ದಿ ಎಂಬ ವ್ಯಕ್ತಿಯನ್ನು ಹತ್ಯೆಗೈದು, ಆತನ ದೇಹವನ್ನು ಛಿದ್ರಗೊಳಿಸಿ, ಮೃತ ದೇಹದ ಅವಶೇಷಗಳನ್ನು ತನ್ನ ಯೆಮನ್ ನಲ್ಲಿನ ನಿವಾಸದ ನೀರಿನ ಕೊಳದಲ್ಲಿ ವಿಸರ್ಜಿಸಿದ ಆರೋಪದಲ್ಲಿ ನಿಮಿಷಾ ಪ್ರಿಯಾಳನ್ನು ಅಪರಾಧಿ ಎಂದು ಘೋಷಿಸಲಾಗಿತ್ತು. 2015ರಿಂದ ತಲಾಲ್ ರೊಂದಿಗೆ ಯೆಮನ್ ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಾನು, ಆತನಿಂದ ಎರಡು ವರ್ಷಗಳ ಕಾಲ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ನಿಮಿಷಾ ಪ್ರಿಯಾ ಪ್ರತಿಪಾದಿಸಿದ್ದರು. ಆತ ನನ್ನ ಪಾಸ್ ಪೋರ್ಟ್ ಅನ್ನು ಕಿತ್ತುಕೊಂಡು ನಾನು ಮನೆಗೆ ಮರಳಲು…