ಪೀಣ್ಯ ದಾಸರಹಳ್ಳಿ: ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯ ಅಕಾಡೆಮಿ ಹಾಗೂ ಇಚ್ಚಾ ಫೌಂಡೇಶನ್ ಸಹಯೋಗದೊಂದಿಗೆ ತಮಿಳುನಾಡಿನ ಹೊಸೂರು ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಸಮಾರಂಭ ಜರುಗಿತು. ಮ್ಯೆಸೂರಿನ ಅರ್.ಭಾಗ್ಯ ಅವರ ಸಂಘಟನಾ ಕೌಶಲ್ಯ ಹಾಗೂ ಸಮಾಜ ಸೇವೆ ಮತ್ತು ವರ್ಷಿತಾ ಸೇವಾ ಪೌಂಡೇಶನ್ ಸಂಸ್ಥೆ ಕರುನಾಡ ರಕ್ಷಣಾ ಪರಿಷತ್ ಯಲ್ಲಿನ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಅವರು ‘ನನ್ನ ಸ್ನೇಹಿತರ ಹಾಗೂ ಹಿತೈಷಿಗಳ ಸಹಕಾರದಿಂದ ನಾನು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಈ ನನ್ನ ಸೇವೆ ಮುತ್ತು ಸಂಘಟನೆಯಲ್ಲಿನ ಕಾರ್ಯಗಳನ್ನು ಹಾಗೂ ಸೇವೆಯನ್ನು ಗುರುತಿಸಿ ವಿವಿಧ ಆಯಾಮಗಳನ್ನ ಮಾಡಿ ಸಮಾಜದಲ್ಲಿನ ಹೋರೆ ಕೋರೆಗಳನ್ನು ತಿದ್ದುವ ಕಾರ್ಯವನ್ನು ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿಯವರು ನನಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದ್ದು ತುಂಬಾ ಖುಷಿಯಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಡವರಿಗೆ ಹಾಗೂ ಕಾರ್ಮಿಕರಿಗೆ ಸಹಾಯ…
Author: AIN Author
ಚಿತ್ರದುರ್ಗ:- ರಾಜ್ಯದಲ್ಲಿ 15 ಸಾವಿರ ಹುದ್ದೆ ಖಾಲಿ ಇದ್ದು, ಭರ್ತಿ ಮಾಡುವ ಚಿಂತನೆ ನಡೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ ಚಿತ್ರದುರ್ಗದಲ್ಲಿ ಮಾತನಾಡಿದ ಅವರು, PSI ಹಗರಣದಿಂದ ಗೊಂದಲ ಉಂಟಾಗಿದ್ದು. ಮರು ಪರೀಕ್ಷೆಗೆ ಈಗಾಗಲೇ ಸಿದ್ದತೆ ನಡೆದಿದೆ. 1000 PSI ಹಂತ ಹಂತವಾಗಿ ನೇಮಕಕ್ಕೆ ಸರ್ಕಾರ ಸಿದ್ದವಿದೆ. 3000 ಸಾವಿರ ಪೊಲೀಸ್ ಪೇದೆ ಹುದ್ದೆಗೆ ನೇಮಕಾತಿಗೆ ತಯಾರಿ ನಡೆಸುತ್ತಿದ್ದೇವೆ. DCRE ಸೆಲ್ ಗಳಿಗೆ ನಾವು ದೂರು ಸ್ವೀಕರಿಸಲು ಅಧಿಕಾರ ನೀಡಿದ್ದೇವೆ ಎಂದರು. ಇನ್ನೂ ಮುರುಘಾ ಶ್ರೀ ಕೇಸ್ ವಿಚಾರವಾಗಿ ಮಾತನಾಡಿ, ಕೋರ್ಟ್ ಆದೇಶ ಏನೂ ಬಂದಿದೆ, ಚಾಚು ತಪ್ಪದೇ ಪಾಲಿಸುತ್ತೇವೆ. ಕೋರ್ಟ್ ನಲ್ಲಿ ವಿಷಯ ಇರುವುದರಿಂದ ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇವೆ ಎಂದರು. CM ಪಟಾಲಂ ನನ್ನ ಕಳ್ಳನಾಗಿ ಮಾಡುತ್ತಿದ್ದಾರೆ ಎಂಬ HDK ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಆಗಿ ಎರಡು ಬಾರಿ HDK ಕೆಲಸ ಮಾಡಿದ್ದಾರೆ. ಟೀಕೆ ಟಿಪ್ಪಣಿ ಮಾಡಲಿ ನಾವು ಬೇಡ ಎಂದು ಹೇಳಲ್ಲ. ಸಲಹೆ ಬೇಕು…
ಗದಗ: ಕುಡಿದ ಮತ್ತಿನಲ್ಲಿ ತಂದೆಯೇ ಹಸುಗೂಸನ್ನು ಹೊತ್ತು ತಂದು ಅಮಾನವೀಯವಾಗಿ ವರ್ತಿಸಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಕಳೆದ ಒಂದು ವಾರದ ಹಿಂದೆ ಗದುಗಿನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗುವಿನ ತಾಯಿ ಗದಗ ತಾಲೂಕಿನ ಡಂಬಳ ಗ್ರಾಮ ಮತ್ತು ತಂದೆ ಸವಣೂರ ತಾಲೂಕಿನ ಕೃಷ್ಣಾಪುರದವರಾಗಿದ್ದು ಇಬ್ಬರೂ ಪ್ರೇಮ ವಿವಾಹವಾಗಿದ್ದು. ಯಾವುದೋ ಕಾರಣಕ್ಕೆ ಗಂಡ ಹೆಂಡತಿಯ ನಡುವೆ ಮನಸ್ಥಾಪ ಆಗಿ ಗಂಡ ಹಸುಗೂಸನ್ನು ಎತ್ತಿಕೊಂಡು ಗದಗದಿಂದ ತನ್ನೂರಿಗೆ ಹೋಗುವಾಗ ಲಕ್ಷೇಶ್ವರ ಪಟ್ಟಣಕ್ಕೆ ಬಂದಿದ್ದಾನೆ. ಲಕ್ಷೇಶ್ವರ ಬಸ್ ನಿಲ್ದಾಣದಲ್ಲಿ ವೃದ್ಧೆಯೋರ್ವರ ಕೈಯಲ್ಲಿ ಕೂಸನ್ನು ಕೊಟ್ಟು ಮದ್ಯ ಕುಡಿಯಲು ಹೋಗಿದ್ದನಂತೆ. ಈ ವೇಳೆ ತಾನು ಹೋಗುವ ಬಸ್ ಬಂದ ಹಿನ್ನಲೆ ವೃದ್ಧೆ ಕೂಸನ್ನು ಅಲ್ಲಿಯೇ ಬಿಟ್ಟು ಬಸ್ ಹತ್ತಿದ್ದಾಳೆ. ವಾಪಸ್ ಬಂದ ಪಾಪಿ ತಂದೆ ಕೂಸನ್ನು ಎತ್ತಿಕೊಂಡು ಹಸುಗೂಸಿನ ಪ್ರಜ್ಞೆಯೂ ಇಲ್ಲದೇ ರಸ್ತೆಯುದ್ದಕ್ಕೂ ಜೋತಾಡಿಸಿದ್ದಾನೆ. ತಾಯಿಯಿಂದ ಬೇರ್ಪಟ್ಟ ಕೂಸು ಹಸಿವು, ನೋವಿನಿಂದ ಕಿರಚಾಡಿದೆ. ಇದನ್ನು ಕಂಡು ಮಕ್ಕಳ ಕಳ್ಳನೆಂದು ಭಾವಿಸಿದ ಸಾರ್ವಜನಿಕರು…
ಬಳ್ಳಾರಿ:- ದಸರಾ ಹಾಗೂ ದೀಪಾವಳಿ ನೆಪದಲ್ಲಿ ಇಲಾಖೆ ಹೆಸರಿನಲ್ಲಿ ಅಗ್ನಿಶಾಮಕ ದಳದ ನೌಕರ ಎಂ.ಪ್ರಭಾಕರ್ ಸ್ವಾಮಿ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಪ್ರತಿ ಅಂಗಡಿಗೆ ತೆರಳಿ ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಬ್ಬದ ನೆಪದಲ್ಲಿ ಪೆಟ್ರೋಲ್ ಬಂಕ್, ರಸಗೊಬ್ಬರ, ಮದ್ಯದಂಗಡಿ ಸೇರಿದಂತೆ ವಿವಿಧ ಕಡೆ 500 ರಿಂದ 1000 ರೂ.ವರೆಗೆ ಚಂದಾ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಕುರಿತು ಠಾಣೆಯ ಅಗ್ನಿಶಾಮಕ ವಾಹನ ಚಾಲಕ ಶಾಂತಪ್ಪ ಅವರು, ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ಶಾಂತಪ್ಪ ಸೇರಿದಂತೆ ಕೆಲ ಸಿಬ್ಬಂದಿಯು, ಪ್ರಭಾಕರ್ ಸ್ವಾಮಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು:- ವಿ.ಸೋಮಣ್ಣ ಕಾಂಗ್ರೆಸ್ ಸೇರಿದರೆ ನಮ್ಮದೇನು ತಕರಾರಿಲ್ಲ ಎಂದು ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮಾಜಿ ಸವಿವ ವಿ. ಸೋಮಣ್ಣ ಕಾಂಗ್ರೆಸ್ ಸೇರಿದರೆ ನಮ್ಮದೇನು ತಕರಾರು ಇಲ್ಲ. ಅವರು ಬಂದ್ರೆ ನಾವು ಸ್ವಾಗತ ಮಾಡುತ್ತೇವೆ. ಏನು ಬೆಳವಣಿಗೆ ಆಗುತ್ತಿದೆ ಎಂದು ಗೊತ್ತಿಲ್ಲ. ಸೋಮಣ್ಣ ಅವರು ಬಿಜೆಪಿ ಪ್ರಭಾವಿ ಮುಖಂಡರಾಗಿದ್ದಾರೆ. ಅವರು ಕಾಂಗ್ರೆಸ್ಗೆ ಬಂದರೆ ಸ್ವಾಗತ ಮಾಡುತ್ತೇವೆ. ರಾಜಕೀಯ ರಂಗದಲ್ಲಿ ಅವರದ್ದೇ ಆದ ಶಕ್ತಿ ಇರುತ್ತದೆ ಎಂದು ತಿಳಿಸಿದರು. ಪುತ್ತೂರಿನಲ್ಲಿ ಬಜರಂಗದಳದವರ ಗಡಿಪಾರು ಮಾಡಲು ನೋಟಿಸ್ ನೀಡಲಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಯಾರೂ ಸಹ ಕಾನೂನನ್ನು ಹೊರತು ಪಡಿಸಿ ಕೆಲಸ ಮಾಡಲಾಗಲ್ಲ. ಇಲಾಖೆಯಲ್ಲಿ ಬೇರೇನೂ ಕೆಲಸ ಮಾಡಲಾಗಲ್ಲ. ಬಜರಂಗದಳದವರಾಗಲಿ, ಬೇರೆಯವರೇ ಇರಲಿ, ಸಂಘ – ಸಂಸ್ಥೆಗಳಿರಲಿ ಹಾಗೂ ವೈಯಕ್ತಿಕವೇ ಇರಲಿ ಕಾನೂನಿನ ಚೌಕಟ್ಟಿನಲ್ಲಿ ಇದ್ದರೆ ನಮ್ಮ ಸಹಕಾರ ಇರುತ್ತದೆ. ಪೊಲೀಸ್ ಇಲಾಖೆ ಇರೋದು ಯಾಕೆ? ಎಂದು ಪ್ರಶ್ನಿಸಿದರು. ಪೊಲೀಸ್ ಇರುವುದು ಕಾನೂನು ವಿರುದ್ಧ ಇರುವವರ ಮೇಲೆ ಕ್ರಮ…
ಬೆಂಗಳೂರು:- ಲುಲು ಮಾಲ್ ಜಮೀನಿನ ಕುರಿತು ಕುಮಾರಸ್ವಾಮಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏನೇನು ಪಟ್ಟಿ ಕೊಡ್ತಾರೆ, ಅದಕ್ಕೆ ಲೆಕ್ಕ ಕೊಡೋಣ. ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ ಎಂದರು. ಜನರೇ ಅವರಿಗೆ ಉತ್ತರ ಕೊಟ್ಟಿದ್ದಾರೆ. ಅವರ ಮಾತು, ಆಚಾರ, ವಿಚಾರಕ್ಕೆ ಉತ್ತರ ನೀಡಿದ್ದಾರೆ. ಇನ್ನೂ ಏನು ಬೇಕಾದರೂ ನಾನು ಉತ್ತರ ಕೊಡುತ್ತೇನೆ. ನಾನು ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರ ಒಂದು ಸಂಸ್ಥೆಯದ್ದು. ಅವರು ದಾಖಲೆ ಮಾಡಿ ಟೆಂಡರ್ ಹಾಕಿದ್ದಾರೆ. ಅದನ್ನು ನಮ್ಮ ಸ್ನೇಹಿತರು ತೆಗೆದುಕೊಂಡಿದ್ದರು. ಅದನ್ನು ನಾನು ಅವರ ಬಳಿ ತೆಗೆದುಕೊಂಡಿದ್ದೇನೆ. ಏನಾದರೂ ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ. ಅವರಿಗೆ ಇನ್ನೂ ಗೊತ್ತಿಲ್ಲ. ಅವರ ತಂದೆ 10-15 ವರ್ಷದ ಹಿಂದೆಯೇ ತನಿಖೆ ಮಾಡಿಸಿದ್ದಾರೆ” ಎಂದರು ಎಲ್ಲದಕ್ಕೂ ನಾನು ರೆಡಿ ಇದ್ದೇನೆ. ಈ ಬ್ಲಾಕ್ಮೇಲ್ಗೆ ನಾನು ಹೆದರಲ್ಲ. ಅವರಿಗೆ ಏನು ದಾಖಲೆ ಬೇಕೋ…
ಹಾಸನ: ಹಾಸನ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಇಂದು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿದ್ದು, ಕಂದಾಯ ಸಚಿವ ಕಷ್ಣ ಭೈರೇಗೌಡ ನೇತೃತ್ವದಲ್ಲಿ ನಡೆಯುತ್ತಿದೆ. https://ainlivenews.com/what-happens-if-tea-coffee-is-given-to-children/ ಫಾರಂ ನಂ.53 ಅರ್ಜಿಗಳು ವಿಲೇವಾರಿ ಮಾಡದ ಅರಕಲಗೂಡು ತಹಶೀಲ್ದಾರ್ ಬಸವರಾಜು ಹಾಗೂ ಬೇಲೂರು ತಹಶಿಲ್ದಾರ್ ಮಮತಾ ವಿರುದ್ದ ಸಚಿವ ಕೃಷ್ಣಭೈರೇಗೌಡ ಗರಂ ಆಗಿದ್ದಾರೆ. ಇಷ್ಟೊಂದು ಅರ್ಜಿಗಳು ಪೆಂಡಿಂಗ್ ಇರಲು ಕಾರಣ ಏನು ಎಂದು ಸಭೆಯಲ್ಲಿ ತಹಶಿಲ್ದಾರ್ಗೆ ಪ್ರಶ್ನಿಸಿದ್ದಾರೆ.
ಬೆಂಗಳೂರು: ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ಪ್ರಾತಃಸ್ಮರಣೀಯರು. ಅವರ ಪ್ರಗತಿಪರ ಆಡಳಿತವನ್ನು ಕಂಡು ಮಹಾತ್ಮಾ ಗಾಂಧೀಜಿಯವರು ನಾಲ್ವಡಿ ಅವರನ್ನು ‘ರಾಜರ್ಷಿ’ ಎಂದು ಕರೆದರು. ಮೈಸೂರು ಸಂಸ್ಥಾನವನ್ನು ‘ರಾಮರಾಜ್ಯ’ ಎಂದಿದ್ದರು ಅವರ ಆಳ್ವಿಕೆಯ ಅವಧಿಯಲ್ಲಿಯೇ ಆಗಿರುವ ಸಮಾಜ ಮುಖಿ ಕಾರ್ಯಗಳು ಇಂದಿಗೂ ಪ್ರಾಶಸ್ತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ವಿಶ್ರಾಂತ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಿ. ಶಿವಲಿಂಗೇಗೌಡ ಅವರು ಅನುವಾದಿಸಿದ ಮೂಲ ʻಖಲ್ಹೀಲ್ ಗಿಬ್ರಾನ್ʼ ಅವರ ಕೃತಿ ʻಮುರಿದ ರೆಕ್ಕೆಗಳುʼ ಪುಸ್ತಕ ಬಿಡುಗೆಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. https://ainlivenews.com/what-happens-if-tea-coffee-is-given-to-children/ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆಯ ವಿಶ್ವಾಸಾರ್ಹ ಸಂಸ್ಥೆ. ಕನ್ನಡಿಗರ ವಿಶ್ವಾಸದ ಪ್ರತೀಕವಾಗಿ ನಮ್ಮಲ್ಲಿ ಇಂದು ೨೧೦೦ಕ್ಕೂ ಹೆಚ್ಚು ದತ್ತಿ…
ಹುಬ್ಬಳ್ಳಿ : ತಾಲೂಕಿನ ಬು. ಅರಳೀಕಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಗ್ರಾಮ ಆರೋಗ್ಯ ಕಾರ್ಯಕ್ರಮದಡಿ ವಿಕಲಚೇತನರಿಗೆ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಲಿಂಗರಾಜ ಮೆಣಸಿನಕಾಯಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಭಾರತಿ ಮುಧೋಳ, ಬೀಮರಾಜ ಭೈರಪ್ಪನವರ, ಆರೋಗ್ಯ ನಿರೀಕ್ಷಣಾ ಅಧಿಕಾರಿ ವಿದ್ಯಾರಾಣಿ ಹಿರೇಮಠ, ತಾಲೂಕಾ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ಮಾಂತೇಶ ಕುರ್ತಕೋಟಿ, ಆಶಾ ಕಾರ್ಯಕರ್ತೆಯರಾದ ಪುಷ್ಪಾ ಬಡಿಗೇರ ನಿರ್ಮಲಾ ಬಡಿಗೇರ ನಿಲವ್ವ ಹಡಪದ ಸೇರಿದಂತೆ ಅಂಗವಿಕಲರು, ಆರೋಗ್ಯ ಸಿಬ್ಬಂದಿ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.
ಹುಬ್ಬಳ್ಳಿ ನ.17: ಅಂಗವಿಕಲರು ರೋಗವನ್ನು ತಪಾಸಣೆ ಮಾಡಿಸಿಕೊಂಡು ಸೂಕ್ತ ವೈದ್ಯಕೀಯ ಸೌಲಭ್ಯ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಡಾ. ಹುಲಗಣ್ಣ ಇಂಜಗನವರ ಹೇಳಿದರು. ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ತಾಲೂಕ ಪಂಚಾಯತಿ ಹುಬ್ಬಳ್ಳಿ, ಗ್ರಾಮ ಪಂಚಾಯತಿ ಅದರಗುಂಚಿ ಇವರ ಸಹಯೋಗದಲ್ಲಿ ಗ್ರಾಮದ ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಶಿವರವನ್ನು ಆಯೋಜಿಸಿ ಅವರು, ಮಾತನಾಡಿದರು. ಖಾಯಿಲೆಗಳು ವಿಪರೀತವಾಗಿ ಹರಡುತ್ತಿರುವುದರಿಂದ ಅಂಗವಿಕಲರು ಅರೋಗ್ಯ ರಕ್ಷಿಸಿಕೊಳ್ಳುವುದು ಪ್ರಮುಖ ಅದ್ಯತೆಯಾಗಿರುತ್ತದೆ. ಆದ್ದರಿಂದ ಅಂಗವಿಕಲರು ಅರೋಗ್ಯ ತಪಾಸಣೆ ಮಾಡಿಕೊಂಡು ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದರು. ತಾಲೂಕ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ ಮಾತನಾಡಿ, ಗ್ರಾಮದ ಎಲ್ಲ ವಿಕಲಚೇತನರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಬಿಪಿ ಶುಗರ್ ರಕ್ತಹೀನತೆ ಟಿಬಿ ರೋಗಗಳ ಬಗ್ಗೆ ತಪಾಸಣೆಯನ್ನು ಮಾಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ 60 ವಿಕಲಚೇತನರು ಭಾಗವಹಿಸಿ ಸದರಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಮೆಹರುಬಿ…